1. [QS]ನನ್ನ ಮನವೇ, ಯೆಹೋವ ದೇವರನ್ನು ಕೊಂಡಾಡು; [QE][QS2]ನನ್ನ ಅಂತರಾತ್ಮವೇ ಅವರ ಪರಿಶುದ್ಧ ನಾಮವನ್ನು ಸ್ತುತಿಸು. [QE]
2. [QS]ನನ್ನ ಮನವೇ, ಯೆಹೋವ ದೇವರನ್ನು ಕೊಂಡಾಡು; [QE][QS2]ಅವರ ಉಪಕಾರಗಳಲ್ಲಿ ಒಂದನ್ನೂ ಮರೆತುಬಿಡಬೇಡ. [QE]
3. [QS]ದೇವರು ನಿಮ್ಮ ಪಾಪಗಳನ್ನೆಲ್ಲಾ ಕ್ಷಮಿಸುತ್ತಾರೆ. [QE][QS2]ನಿಮ್ಮ ರೋಗಗಳನ್ನೆಲ್ಲಾ ವಾಸಿಮಾಡುತ್ತಾರೆ. [QE]
4. [QS]ದೇವರು ನಿಮ್ಮ ಜೀವವನ್ನು ಪಾತಾಳದಿಂದ ವಿಮೋಚಿಸುವರು; [QE][QS2]ಪ್ರೀತಿ ಅನುಕಂಪವನ್ನು ನಿನಗೆ ಕಿರೀಟವಾಗಿ ಶೃಂಗರಿಸುವರು. [QE]
5. [QS]ನಿಮ್ಮ ಯೌವನವು ಹದ್ದಿನ ಹಾಗೆ ನವೀಕರಿಸುವಂತೆ ಮಾಡುವರು. [QE][QS2]ಅವರು ನಿಮ್ಮ ಆಶೆಗಳನ್ನು ಒಳ್ಳೆಯವುಗಳಿಂದ ತೃಪ್ತಿಪಡಿಸುವರು. [QE][PBR]
6. [QS]ಯೆಹೋವ ದೇವರು ಕುಗ್ಗಿದವರೆಲ್ಲರಿಗೂ ನೀತಿಯನ್ನೂ, [QE][QS2]ನ್ಯಾಯವನ್ನೂ ಕಾರ್ಯರೂಪಕ್ಕೆ ತರುವರು. [QE][PBR]
7. [QS]ಅವರು ತಮ್ಮ ಮಾರ್ಗಗಳನ್ನು ಮೋಶೆಗೂ, [QE][QS2]ತಮ್ಮ ಕ್ರಿಯೆಗಳನ್ನು ಇಸ್ರಾಯೇಲರಿಗೂ ಪ್ರಕಟಿಸಿದರು: [QE]
8. [QS]ಯೆಹೋವ ದೇವರು, ಅನುಕಂಪವೂ ದಯೆಯೂ [QE][QS2]ದೀರ್ಘಶಾಂತಿಯೂ ಪೂರ್ಣ ಪ್ರೀತಿಯೂ ಉಳ್ಳವರಾಗಿದ್ದಾರೆ. [QE]
9. [QS]ಅವರು ಯಾವಾಗಲೂ ತಪ್ಪುಹುಡುಕುವವರಲ್ಲ; [QE][QS2]ದೇವರು ತಮ್ಮ ಕೋಪವನ್ನು ಎಂದೆಂದಿಗೂ ಕೂಡಿಟ್ಟುಕೊಳ್ಳುವವರು ಅಲ್ಲ; [QE]
10. [QS]ದೇವರು ನಮ್ಮ ಪಾಪಗಳಿಗೆ ಸರಿಯಾಗಿ ನಮ್ಮನ್ನು ಶಿಕ್ಷಿಸಲಿಲ್ಲ; [QE][QS2]ನಮ್ಮ ಅಧರ್ಮಗಳ ಪ್ರಕಾರ ನಮಗೆ ಮುಯ್ಯಿತೀರಿಸಲಿಲ್ಲ. [QE]
11. [QS]ಏಕೆಂದರೆ, ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ, [QE][QS2]ದೇವರ ಪ್ರೀತಿಯು ತಮಗೆ ಭಯಪಡುವವರ ಮೇಲೆ ಅಷ್ಟು ಮಹೋನ್ನತವಾಗಿದೆ; [QE]
12. [QS]ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ, [QE][QS2]ಅವರು ನಮ್ಮ ಅತಿಕ್ರಮಗಳನ್ನು ನಮ್ಮಿಂದ ಅಷ್ಟು ದೂರ ಮಾಡಿದ್ದಾರೆ. [QE][PBR]
13. [QS]ಒಬ್ಬ ತಂದೆಯು ತಮ್ಮ ಮಕ್ಕಳ ಮೇಲೆ ಅನುಕಂಪಗೊಳ್ಳುವಂತೆ, [QE][QS2]ಯೆಹೋವ ದೇವರು ತಮಗೆ ಭಯಪಡುವವರ ಮೇಲೆ ಅನುಕಂಪ ತೋರಿಸುವವರಾಗಿದ್ದಾರೆ. [QE]
14. [QS]ದೇವರು ನಮ್ಮ ಪ್ರಕೃತಿಯನ್ನು ಬಲ್ಲವರಾಗಿದ್ದಾರೆ; [QE][QS2]ನಾವು ಧೂಳಾಗಿದ್ದೇವೆಂದು ಅವರು ನೆನಪುಮಾಡಿ ಕೊಳ್ಳುತ್ತಾರೆ. [QE]
15. [QS]ಮನುಷ್ಯನ ಆಯುಷ್ಕಾಲವು ಹುಲ್ಲಿನಂತಿದೆ, [QE][QS2]ಅವನು ಹೊಲದ ಹೂವಿನ ಹಾಗೆಯೇ ಶೋಭಿಸುತ್ತಾನೆ; [QE]
16. [QS]ಗಾಳಿಯು ಅದರ ಮೇಲೆ ಬೀಸುತ್ತಲೇ ಹೂವು ಇಲ್ಲದೆ ಹೋಗುತ್ತದೆ; [QE][QS2]ಅದು ಇದ್ದ ಸ್ಥಳವನ್ನು ಪುನಃ ಕಾಣುವುದಿಲ್ಲ. [QE]
17. [QS]ಆದರೆ ಯೆಹೋವ ದೇವರ ಪ್ರೀತಿಯು [QE][QS2]ಅವರಿಗೆ ಭಯಪಡುವವರ ಮೇಲೆ ಯುಗಯುಗಾಂತರಕ್ಕೂ ಇರುವುದು, [QE][QS2]ಅವರ ನೀತಿಯು ಮಕ್ಕಳ ಮಕ್ಕಳಿಗೂ ನೆಲೆಸಿರುವುದು. [QE]
18. [QS]ದೇವರ ಒಡಂಬಡಿಕೆಯನ್ನು ಕೈಕೊಂಡು, ಅವರ ಸೂತ್ರಗಳನ್ನು ಪಾಲಿಸಲು [QE][QS2]ನೆನಸುವವರಿಗೂ ಅವರ ನೀತಿಯು ನೆಲೆಸಿರುವುದು. [QE][PBR]
19. [QS]ಯೆಹೋವ ದೇವರು ಪರಲೋಕದಲ್ಲಿ ತಮ್ಮ ಸಿಂಹಾಸನವನ್ನು ಸ್ಥಾಪಿಸಿದ್ದಾರೆ, [QE][QS2]ಅವರ ಸಾಮ್ರಾಜ್ಯದ ಆಳಿಕೆಯು ಎಲ್ಲರ ಮೇಲೆ ಇರುವುದು. [QE][PBR]
20. [QS]ದೇವರ ದೂತರೇ, ಅವರ ಮಾತನ್ನು ಕೇಳಿ, [QE][QS2]ಅವರಿಗೆ ವಿಧೇಯರಾಗುವ ಪರಾಕ್ರಮಿಗಳೇ, [QE][QS2]ಯೆಹೋವ ದೇವರನ್ನು ಸ್ತುತಿಸಿರಿ. [QE]
21. [QS]ದೇವರ ಇಷ್ಟವನ್ನು ನಡೆಸುವ ಸೇವಕರೇ, [QE][QS2]ಅವರ ಎಲ್ಲಾ ಸೈನ್ಯಗಳೇ, ಯೆಹೋವ ದೇವರನ್ನು ಸ್ತುತಿಸಿರಿ. [QE]
22. [QS]ದೇವರ ಆಳಿಕೆಯ ಎಲ್ಲಾ ಕಡೆಗಳಲ್ಲಿಯೂ ಇರುವುದು. [QE][QS2]ಅವರ ಎಲ್ಲಾ ಸೃಷ್ಟಿಗಳೇ, ಯೆಹೋವ ದೇವರನ್ನು ಸ್ತುತಿಸಿರಿ. [QE][PBR] [QS]ನನ್ನ ಮನವೇ, ಯೆಹೋವ ದೇವರನ್ನು ಕೊಂಡಾಡು. [QE]