1. [QS]ಯೆಹೋವ ದೇವರೇ, ನೀವು ದೂರದಲ್ಲಿ ನಿಂತುಕೊಳ್ಳುವುದು ಏಕೆ? [QE][QS2]ಇಕ್ಕಟ್ಟಿನ ಕಾಲಗಳಲ್ಲಿ ನೀವು ಮರೆಯಾಗಿರುವುದೂ ಏಕೆ? [QE][PBR]
2. [QS]ದುಷ್ಟನು ಗರ್ವದಿಂದ ದೀನನನ್ನು ಬೇಟೆಯಾಡುತ್ತಾನೆ, [QE][QS2]ಅವನು ಕಲ್ಪಿಸಿದ ಕುಯುಕ್ತಿಗಳಲ್ಲಿ ಅವನೇ ಸಿಕ್ಕಿಬೀಳುತ್ತಾನೆ. [QE]
3. [QS]ದುಷ್ಟನು ತನ್ನ ಹೃದಯಭಿಲಾಷೆಯಲ್ಲಿ ಕೊಚ್ಚಿಕೊಳ್ಳುತ್ತಾನೆ; [QE][QS2]ಅವನು ದುರಾಶೆಯುಳ್ಳವರನ್ನು ಆಶೀರ್ವದಿಸುವವನೂ ಯೆಹೋವ ದೇವರನ್ನು ಶಪಿಸುವವನೂ ಆಗಿದ್ದಾನೆ. [QE]
4. [QS]ದುಷ್ಟನು ತನ್ನ ಗರ್ವದಲ್ಲಿ ದೇವರನ್ನು ಹುಡುಕುವುದಿಲ್ಲ; [QE][QS2]ಅವನ ಎಲ್ಲ ಯೋಚನೆಗಳಲ್ಲಿಯೂ ದೇವರಿಗೆ ಸ್ಥಳವೇ ಇಲ್ಲ. [QE]
5. [QS]ಅವನ ಮಾರ್ಗಗಳು ಯಾವಾಗಲೂ ಸಮೃದ್ಧಿಯಾಗಿರುತ್ತವೆ; [QE][QS2]ಆದರೆ ನಿಮ್ಮ ನಿಯಮಗಳು ಅವನ ದೃಷ್ಟಿಗೆ ಬಹು ದೂರವಾಗಿವೆ; [QE][QS2]ಅವನು ತನ್ನ ಎಲ್ಲಾ ವೈರಿಗಳನ್ನು ಹೀಯಾಳಿಸುತ್ತಾನೆ. [QE]
6. [QS]ಅವನು ತನ್ನ ಹೃದಯದಲ್ಲಿ ಹೀಗೆ ಹೇಳುವನು, “ಯಾವುದೂ ಎಂದೂ ನನ್ನನ್ನು ಕದಲಿಸುವುದಿಲ್ಲ.” [QE][QS2]ಅವನು ಹೀಗೆ ಶಪಥ ಮಾಡುವನು, “ಯಾರೂ ಎಂದಿಗೂ ನನಗೆ ಕೇಡುಮಾಡಲಾರರು.” [QE][PBR]
7. [QS]ಅವನ ಬಾಯಿ ಸುಳ್ಳಿನಿಂದಲೂ ಬೆದರಿಕೆಯಿಂದಲೂ ತುಂಬಿದೆ. [QE][QS2]ಕೇಡೂ ನಾಶನವೂ ಅವನ ನಾಲಿಗೆಯ ಕೆಳಗೆ ಇರುತ್ತವೆ. [QE]
8. [QS]ಅವನು ಗ್ರಾಮಗಳಲ್ಲಿ ಹೊಂಚಿಕೊಂಡು ಮರೆಯಾದ ಸ್ಥಳಗಳಲ್ಲಿ, [QE][QS2]ನಿರಪರಾಧಿಯನ್ನು ಕೊಲ್ಲುತ್ತಾನೆ. [QE][QS]ಅವನ ಕಣ್ಣುಗಳು ನಿರ್ಗತಿಕರನ್ನು ಹೊಂಚಿ ನೋಡುತ್ತವೆ; [QE]
2. [QS2]ಸಿಂಹದ ಹಾಗೆ, ಮರೆಯಲ್ಲಿ ಹೊಂಚುಹಾಕುತ್ತಾನೆ; [QE][QS]ಅಸಹಾಯಕರನ್ನು ಹಿಡಿಯಲು ಕಾಯುತ್ತಾನೆ [QE][QS2]ಕುಗ್ಗಿದವನನ್ನು ಹಿಡಿದೆಳೆದು ತನ್ನ ಬಲೆಯಲ್ಲಿ ಹಾಕುತ್ತಾನೆ. [QE]
10. [QS]ಅವನ ಕೈಯಲ್ಲಿ ಸಿಕ್ಕುವವರು ಜಜ್ಜಿಹೋಗುತ್ತಾರೆ, [QE][QS2]ಅವನ ಬಲದ ಎದುರು ಸೋತುಹೋಗುತ್ತಾರೆ. [QE]
11. [QS]“ದೇವರು ಮರೆತುಬಿಟ್ಟಿದ್ದಾರೆ; ತಮ್ಮ ಮುಖ ಮರೆ ಮಾಡಿಕೊಂಡಿದ್ದಾರೆ; [QE][QS2]ಇನ್ನೆಂದೂ ಕಾಣಲಾರರು,” ಎಂದು ತನಗೆ ತಾನೇ ಹೇಳಿಕೊಳ್ಳುತ್ತಾನೆ. [QE][PBR]
12. [QS]ಯೆಹೋವ ದೇವರೇ, ಎದ್ದೇಳಿರಿ! ದೇವರೇ, ನಿಮ್ಮ ಕೈ ಎತ್ತಿರಿ. [QE][QS2]ನಿಸ್ಸಹಾಯಕರನ್ನು ಮರೆಯಬೇಡಿರಿ. [QE]
13. [QS]ದುಷ್ಟರು ದೇವರನ್ನು ಅಲಕ್ಷ್ಯ ಮಾಡುವುದು ಏಕೆ? [QE][QS2]“ದೇವರು ನನ್ನನ್ನು ಲೆಕ್ಕ ಕೇಳುವುದಿಲ್ಲ,” ಎಂದು [QE][QS2]ಅವನು ತನಗೆ ತಾನೇ ಹೇಳಿಕೊಳ್ಳುವುದು ಏಕೆ? [QE]
14. [QS]ದೇವರೇ, ನೀವಾದರೋ ಬಾಧೆಪಡುವವರ ಕಷ್ಟಗಳನ್ನು ನೋಡಿದ್ದೀರಿ; [QE][QS2]ಅವರ ಸಂಕಟವನ್ನು ಪರಿಗಣಿಸಿ, ನೀವೇ ನೋಡಿಕೊಳ್ಳಿರಿ. [QE][QS]ಗತಿಯಿಲ್ಲದವರು ತಮ್ಮನ್ನು ನಿಮಗೇ ಒಪ್ಪಿಸಿಕೊಡುತ್ತಾರೆ; [QE][QS2]ನೀವೇ ದಿಕ್ಕಿಲ್ಲದವರಿಗೆ ಸಹಾಯ ಮಾಡುವವರು. [QE]
15. [QS]ದುಷ್ಟನ ಭುಜಬಲವನ್ನು ಮುರಿದುಬಿಡಿರಿ; [QE][QS2]ಕೆಟ್ಟದ್ದನ್ನು ಮಾಡುವವರಿಗೆ ಅವರ ಕೆಟ್ಟತನಕ್ಕೆ ಲೆಕ್ಕ ಕೇಳಿರಿ; [QE][QS2]ಇಲ್ಲದಿದ್ದರೆ ನೀವು ಅವನನ್ನು ಲೆಕ್ಕ ಕೇಳುವುದಿಲ್ಲ ಅಂದುಕೊಳ್ಳುವನು. [QE][PBR]
16. [QS]ಯೆಹೋವ ದೇವರು ಯುಗಯುಗಾಂತರಗಳಿಗೂ ಅರಸರಾಗಿದ್ದಾರೆ; [QE][QS2]ರಾಷ್ಟ್ರಗಳು ಅವರ ದೇಶದೊಳಗಿಂದ ಹೊರಹಾಕಲಾಯಿತು. [QE]
17. [QS]ಯೆಹೋವ ದೇವರೇ, ನೀವು ಬಾಧೆಪಡುವವರ ಬಯಕೆಯನ್ನು ಆಲಿಸುತ್ತೀರಿ; [QE][QS2]ಅವರನ್ನು ಪ್ರೋತ್ಸಾಹಿಸಿ, ಅವರ ಕೂಗನ್ನು ಲಾಲಿಸುತ್ತೀರಿ. [QE]
18. [QS]ಅನಾಥರಿಗೂ, ಕುಗ್ಗಿದವರಿಗೂ ನ್ಯಾಯವನ್ನು ನಡಿಸಿಕೊಡಿರಿ. [QE][QS2]ಹೀಗಾದರೆ ಕೇವಲ ಮಣ್ಣಿನ ಮಾನವರಿಂದ [QE][QS2]ಅವರಿಗೆ ಇನ್ನೆಂದಿಗೂ ಭಯ ಉಂಟಾಗುವುದಿಲ್ಲ. [QE]