1. {#3ಅರಸ ಲೆಮೂವೇಲನ ಹೇಳಿಕೆಗಳು }
2. [PS]ಅರಸನಾದ ಲೆಮೂವೇಲನ ಮಾತುಗಳು, ಅಂದರೆ ಅವನ ತಾಯಿಯು ಅವನಿಗೆ ಉಪದೇಶಿಸಿದ ದೈವಿಕ ಬುದ್ಧಿಮಾತುಗಳು: [PE][QS]ನನ್ನ ಮಗನೇ ಕೇಳು, ನನ್ನ ಗರ್ಭಪುತ್ರನೇ ಕೇಳು! [QE][QS2]ನನ್ನ ಪ್ರಾರ್ಥನೆಗೆ ಉತ್ತರವಾದ ನನ್ನ ಮಗನೇ ಕೇಳು! [QE]
3. [QS]ನಿನ್ನ ತ್ರಾಣವನ್ನು ಸ್ತ್ರೀಯರಿಗೆ ಒಪ್ಪಿಸದಿರು. [QE][QS2]ರಾಜರನ್ನೇ ಹಾಳುಮಾಡಬಲ್ಲ ಸ್ತ್ರೀಯರಿಗೆ ನಿನ್ನ ಹಣ ಸಮಯವನ್ನು ವ್ಯಯಮಾಡದಿರು. [QE][PBR]
4. [QS]ಲೆಮೂವೇಲನೇ, ಕುಡುಕತನವು ರಾಜರಿಗಾಗಿ ಅಲ್ಲ, [QE][QS2]ದ್ರಾಕ್ಷಾರಸ ಕುಡಿಯುವದು ರಾಜರಿಗೆ ಯೋಗ್ಯವಲ್ಲ. [QE][QS2]ಮದ್ಯಪಾನ ಅಧಿಕಾರಿಗಳಿಗೆ ಯೋಗ್ಯವಲ್ಲ; [QE]
5. [QS]ಕುಡಿದರೆ ಅವರು ನಿಯಮವನ್ನು ಮರೆತು, [QE][QS2]ಬಾಧಿತರಿಗೆ ನ್ಯಾಯವನ್ನು ನೀಡುವುದಿಲ್ಲ. [QE]
6. [QS]ನಾಶವಾಗುವವರಿಗೆ ಮದ್ಯಪಾನವಿರಲಿ. [QE][QS2]ಮನೋವ್ಯಥೆಪಡುವವರಿಗೆ ಮದ್ಯವಿರಲಿ. [QE]
7. [QS]ಅವರು ಕುಡಿದು ಬಡತನವನ್ನು ಮರೆಯಲಿ. [QE][QS2]ತಮ್ಮ ಯಾತನೆಯನ್ನು ಜ್ಞಾಪಕಕ್ಕೆ ತಾರದಿರಲಿ. [QE][PBR]
8. [QS]ತಮಗಾಗಿ ಮಾತನಾಡಲು ಸಾಧ್ಯವಾಗದವರಿಗಾಗಿ ಮಾತನಾಡು, [QE][QS2]ಅನಾಥರ ಪರವಾಗಿ ನ್ಯಾಯ ದೊರಕುವಂತೆ ಬಾಯಿಬಿಟ್ಟು ಮಾತನಾಡು. [QE]
9. [QS]ಅವರ ಪರವಾಗಿ ಮಾತನಾಡಿ, ನೀತಿನ್ಯಾಯವನ್ನು ಸ್ಥಾಪಿಸು. [QE][QS2]ಬಡವರಿಗಾಗಿಯೂ ದಿಕ್ಕಿಲ್ಲದವರಿಗಾಗಿಯೂ ಹಕ್ಕುಬಾಧ್ಯತೆಯನ್ನು ಕಾಪಾಡು. [QE]
10. {#3ಉಪಸಂಹಾರ: ಗುಣವತಿಯಾದ ಹೆಂಡತಿ } [QS]ಗುಣವತಿಯಾದ ಹೆಂಡತಿ ಎಲ್ಲಿ ಸಿಕ್ಕಾಳು? [QE][QS2]ಅವಳು ಹವಳಕ್ಕಿಂತಲೂ ಬಹು ಅಮೂಲ್ಯಳು. [QE]
11. [QS]ಅವಳ ಪತಿಯ ಹೃದಯವು ಅವಳಲ್ಲಿ ಭರವಸೆ ಇಡುತ್ತದೆ, [QE][QS2]ಅವನಿಗೆ ಯಾವ ಆದಾಯದ ಕೊರತೆಯೂ ಇರುವುದಿಲ್ಲ. [QE]
12. [QS]ತನ್ನ ಜೀವಮಾನದಲ್ಲೆಲ್ಲಾ ಆಕೆಯು ಅವನಿಗೆ ಕೆಟ್ಟದ್ದನ್ನಲ್ಲ, [QE][QS2]ಒಳ್ಳೆಯದನ್ನೇ ಮಾಡುವಳು. [QE]
13. [QS]ಆಕೆಯು ಉಣ್ಣೆಯನ್ನೂ ಸೆಣಬನ್ನೂ ತಂದು, [QE][QS2]ತನ್ನ ಚಟುವಟಿಕೆಯ ಕೈಗಳಿಂದ ಕೆಲಸ ಮಾಡುವಳು. [QE]
14. [QS]ಆಕೆಯು ವರ್ತಕರ ಹಡಗುಗಳಂತೆ ಇರುವಳು; [QE][QS2]ದೂರದಿಂದ ಆಹಾರವನ್ನು ಆಕೆಯು ತರುವಳು. [QE]
15. [QS]ಇನ್ನೂ ಕತ್ತಲಿರುವಾಗಲೇ ಆಕೆಯು ಏಳುವಳು; [QE][QS2]ತನ್ನ ಮನೆಯವರಿಗೆ ಆಹಾರವನ್ನು ಕೊಟ್ಟು, [QE][QS2]ತನ್ನ ದಾಸಿಯರಿಗೆ ದಿನದ ಕೆಲಸವನ್ನು ಹಂಚುವಳು. [QE]
16. [QS]ಆಕೆಯು ಹೊಲವನ್ನು ನೋಡಿ, ಅದನ್ನು ಕೊಂಡುಕೊಳ್ಳುತ್ತಾಳೆ. [QE][QS2]ತನ್ನ ಕೈಕೆಲಸದ ಆದಾಯದಿಂದ ದ್ರಾಕ್ಷಾಲತೆಗಳನ್ನು ನೆಡುತ್ತಾಳೆ. [QE]
17. [QS]ಆಕೆಯು ನಡುಕಟ್ಟಿ ಆಸಕ್ತಿಯಿಂದ ಕೆಲಸ ಮಾಡುತ್ತಾಳೆ. [QE][QS2]ತನ್ನ ಶಕ್ತಿಯುತ ತೋಳುಗಳಿಂದ ಕೆಲಸ ಮಾಡುತ್ತಾಳೆ. [QE]
18. [QS]ತನ್ನ ವ್ಯಾಪಾರವು ಲಾಭದಾಯಕವೆಂದು ಅವಳು ನೋಡುತ್ತಾಳೆ. [QE][QS2]ಆಕೆಯ ದೀಪವು ರಾತ್ರಿಯಲ್ಲೆಲ್ಲಾ ಆರದು. [QE]
19. [QS]ಅವಳು ರಾಟೆಯ ಮೇಲೆ ಕೈಹಾಕಿ, [QE][QS2]ಕದಿರನ್ನು ಹಿಡಿಯುತ್ತಾಳೆ. [QE]
20. [QS]ಆಕೆಯು ಬಡವರಿಗಾಗಿ ಕೈ ಬಿಚ್ಚಿ ಕೊಡುತ್ತಾಳೆ. [QE][QS2]ಹೌದು, ದಿಕ್ಕಿಲ್ಲದವರಿಗೆ ದಾನ ಮಾಡುತ್ತಾಳೆ. [QE]
21. [QS]ಚಳಿಗಾಲದಲ್ಲಿ ತನ್ನ ಮನೆಯವರ ಬಗ್ಗೆ ಆಕೆಯು ಚಿಂತಿಸಬೇಕಾಗಿಲ್ಲ. [QE][QS2]ಏಕೆಂದರೆ ಆಕೆಯ ಮನೆಯವರೆಲ್ಲರಿಗೂ ಬೆಚ್ಚನೆಯ ಕಂಬಳಿಗಳಿವೆ. [QE]
22. [QS]ಆಕೆಯು ತಾನೇ ಕಂಬಳಿಗಳನ್ನು ನೇಯುತ್ತಾಳೆ. [QE][QS2]ಆಕೆಯ ಉಡುಪೋ ನಾರುಮಡಿ, ರಕ್ತಾಂಬರ. [QE]
23. [QS]ಆಕೆಯ ಪತಿಯು ಪಟ್ಟಣದಲ್ಲಿ ಸನ್ಮಾನಿತ. [QE][QS2]ದೇಶದ ಹಿರಿಯರ ಮಧ್ಯದಲ್ಲಿ ಪ್ರಸಿದ್ಧನಾಗಿ ಕುಳಿತಿರುವನು. [QE]
24. [QS]ಆಕೆಯು ನಯವಾದ ನಾರುಮಡಿಯನ್ನು ನೇಯ್ದು ಮಾರಾಟ ಮಾಡುತ್ತಾಳೆ. [QE][QS2]ಆಕೆಯು ನಡುಕಟ್ಟುಗಳನ್ನು ತಯಾರಿಸಿ ವರ್ತಕರಿಗೆ ಒದಗಿಸುತ್ತಾಳೆ. [QE]
25. [QS]ಆಕೆಯ ಉಡುಪು ಬಲವೂ ಘನತೆಯೂ ಆಗಿವೆ. [QE][QS2]ಭವಿಷ್ಯತ್ತಿನ ಭಯವಿಲ್ಲದೆ ಆಕೆಯು ನಗುವಳು. [QE]
26. [QS]ಆಕೆಯು ಜ್ಞಾನದಿಂದ ಮಾತನಾಡುತ್ತಾಳೆ. [QE][QS2]ಆಕೆಯ ನಾಲಿಗೆಯ ಮೇಲೆ ನಂಬಿಗಸ್ತ ಶಿಕ್ಷಣ ಇದೆ. [QE]
27. [QS]ಆಕೆಯು ತನ್ನ ಗೃಹಕೃತ್ಯಗಳನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ. [QE][QS2]ಸೋಮಾರಿಯಾಗಿ ಕೆಲಸಮಾಡದೆ ಆಹಾರವನ್ನು ತಿನ್ನುವುದಿಲ್ಲ. [QE]
28. [QS]ಆಕೆಯ ಮಕ್ಕಳು ಎದ್ದು, ಆಕೆಯನ್ನು ಧನ್ಯಳೆಂದು ಕರೆಯುವರು. [QE][QS2]ಆಕೆಯ ಪತಿಯು ಸಹ ಆಕೆಯನ್ನು, [QE]
29. [QS]“ಬಹುಮಂದಿ ಸ್ತ್ರೀಯರು ಗುಣವತಿಯರಾಗಿದ್ದಾರೆ. [QE][QS2]ಆದರೆ ನೀನು ಅವರೆಲ್ಲರಿಗಿಂತಲೂ ಶ್ರೇಷ್ಠಳು,” ಎಂದು ಹೊಗಳುವನು. [QE]
30. [QS]ಸೌಂದರ್ಯವು ಮೋಸಕರವಾದದ್ದು, ಸೌಂದರ್ಯವು ಶಾಶ್ವತವಲ್ಲ. [QE][QS2]ಆದರೆ ಯೆಹೋವ ದೇವರಿಗೆ ಭಯಪಡುವವಳೇ ಪ್ರಶಂಸನೀಯಳು. [QE]
31. [QS]ಆಕೆಯ ಕೈಕೆಲಸಕ್ಕೆ ತಕ್ಕ ಪ್ರತಿಫಲವನ್ನು ಸಲ್ಲಿಸಿ ಗೌರವಿಸಿರಿ. [QE][QS2]ಪಟ್ಟಣದ ದ್ವಾರಗಳಲ್ಲಿ ಆಕೆಯ ಕಾರ್ಯಗಳು ಆಕೆಯನ್ನು ಹೊಗಳಲಿ. [QE]