1. {#3ಆಗೂರನ ಹೇಳಿಕೆಗಳು } [PS]ಜಾಕೆ ಎಂಬುವನ ಮಗನಾದ ಆಗೂರನ ದೈವಿಕ ಬುದ್ಧಿಮಾತುಗಳು. [PE][QS]ಇವನು ಇಥಿಯೇಲನಿಗೂ ಉಕ್ಕಾಲನಿಗೂ ಹೀಗೆ ಹೇಳಿದನು:[* ದೈವ ಪ್ರೇರಿತ ಪ್ರಕಟನೆಗಳು ಇಥಿಯೇಲನಿಗೆ ಆಗೂರನ ಬುದ್ಧಿಮಾತುಗಳು ] [QE][PBR] [QS]“ದೇವರೇ, ನಾನು ದಣಿದಿದ್ದೇನೆ, [QE][QS2]ಆದರೆ ನಾನು ಜಯಶಾಲಿಯಾಗುವೆನು. [QE]
2. [QS]ಖಂಡಿತವಾಗಿಯೂ ನಾನು ಮನುಷ್ಯನಲ್ಲ, ಮೃಗ. [QE][QS2]ನನಗೆ ಮನುಷ್ಯನ ಗ್ರಹಿಕೆ ಇಲ್ಲ. [QE]
3. [QS]ನಾನು ಜ್ಞಾನವನ್ನು ಕಲಿತುಕೊಂಡಿಲ್ಲ; [QE][QS2]ಅಲ್ಲದೆ ಪರಿಶುದ್ಧ ದೇವರ ಅರಿವು ನನಗಿಲ್ಲ. [QE]
4. [QS]ಯಾರು ಸ್ವರ್ಗಕ್ಕೆ ಹೋಗಿ ಕೆಳಗಿಳಿದು ಬಂದಿದ್ದಾರೆ? [QE][QS2]ಯಾರ ಕೈಗಳು ಗಾಳಿಯನ್ನು ಒಟ್ಟುಗೂಡಿಸಿವೆ? [QE][QS]ಯಾರು ತಮ್ಮ ವಸ್ತ್ರದಲ್ಲಿ ಸಾಗರಗಳನ್ನು ಮೂಟೆಕಟ್ಟಿಕೊಂಡಿದ್ದಾರೆ? [QE][QS2]ಭೂಮಿಯ ಎಲ್ಲೆಗಳನ್ನೆಲ್ಲಾ ಸ್ಥಾಪಿಸಿದವರು ಯಾರು? [QE][QS]ಅವರ ಹೆಸರೇನು? ಅವರ ಮಗನ ಹೆಸರೇನು? [QE][QS2]ಖಂಡಿತವಾಗಿಯೂ ನಿಮಗೆ ಗೊತ್ತಿರಬೇಕು! [QE][PBR] [PBR]
5. [QS]“ದೇವರ ಪ್ರತಿಯೊಂದು ಮಾತು ದೋಷವಿಲ್ಲದ್ದು; [QE][QS2]ದೇವರಲ್ಲಿ ಭರವಸವಿಡುವವನಿಗೆ ಅವರು ಗುರಾಣಿಯಾಗಿದ್ದಾರೆ. [QE]
6. [QS]ದೇವರ ಮಾತುಗಳಿಗೆ ಯಾವುದನ್ನೂ ಸೇರಿಸಬೇಡ. [QE][QS2]ಇಲ್ಲವಾದರೆ ದೇವರು ನಿನ್ನನ್ನು ಗದರಿಸಿ ನಿನ್ನನ್ನು ಸುಳ್ಳುಗಾರನೆಂದು ಸಾಬೀತುಪಡಿಸುವರು. [QE][PBR]
7. [QS]“ಯೆಹೋವ ದೇವರೇ, ನಾನು ನಿಮ್ಮನ್ನು ಎರಡು ವಿಷಯಗಳನ್ನು ಕೇಳುತ್ತೇನೆ. [QE][QS2]ನಿರಾಕರಿಸಬೇಡಿ ನಾನು ಸಾಯುವ ಮೊದಲು ಅವೆರಡನ್ನು ಅನುಗ್ರಹಿಸಿರಿ. [QE]
8. [QS]ವಂಚನೆ ಸುಳ್ಳನ್ನು ನನ್ನಿಂದ ದೂರಮಾಡಿರಿ. [QE][QS2]ಬಡತನವನ್ನಾಗಲಿ, ಐಶ್ವರ್ಯವನ್ನಾಗಲಿ ನನಗೆ ಕೊಡಬೇಡಿರಿ. [QE][QS2]ನನಗೆ ಅನುದಿನದ ಆಹಾರವನ್ನು ದಯಪಾಲಿಸಿರಿ. [QE]
9. [QS]ನಾನು ಐಶ್ವರ್ಯವಂತನಾದರೆ ನಿನ್ನನ್ನು ನಿರಾಕರಿಸಿ, [QE][QS2]‘ಯೆಹೋವ ದೇವರು ಯಾರು?’ ಎಂದು ಹೇಳೇನು. [QE][QS]ನಾನು ಬಡವನಾದರೆ ಕಳ್ಳತನಮಾಡಿ [QE][QS2]ನನ್ನ ದೇವರಾದ ನಿಮ್ಮ ಹೆಸರಿಗೆ ಅಪಕೀರ್ತಿ ತಂದೇನು. [QE][PBR]
10. [QS]“ಕೆಲಸಗಾರರ ವಿಷಯವಾಗಿ ಅವನ ಯಜಮಾನನಿಗೆ ದೂರು ಹೇಳಬೇಡ; [QE][QS2]ಇದರಿಂದ ಆ ಕೆಲಸಗಾರ ನಿನ್ನನ್ನು ಶಪಿಸಾನು, ಆಗ ನೀನು ದೋಷಿಯಾಗುವೆ. [QE][PBR]
11. [QS]“ತಮ್ಮ ತಂದೆಯನ್ನು ಶಪಿಸಿ, [QE][QS2]ತಮ್ಮ ತಾಯಿಗೆ ಶುಭವನ್ನು ಕೋರದೆ ಇರುವವರು ಇದ್ದಾರೆ. [QE]
12. [QS]ತಮ್ಮ ದೃಷ್ಟಿಯಲ್ಲಿ ಶುದ್ಧವಾಗಿರುವವರು ಇದ್ದಾರೆ; [QE][QS2]ಆದರೆ ಅವರು ತಮ್ಮ ಕೊಳೆಯನ್ನು ತೊಳೆದುಕೊಂಡಿರುವುದಿಲ್ಲ. [QE]
13. [QS]ಅವರ ಕಣ್ಣುಗಳು ಯಾವಾಗಲೂ ಅಹಂಕಾರದಿಂದ ಕೂಡಿರುತ್ತವೆ. [QE][QS2]ಅವರ ದೃಷ್ಟಿ ಅಸಹ್ಯವಾಗಿದೆ. [QE]
14. [QS]ಖಡ್ಗಗಳಂತೆ ಹಲ್ಲುಗಳುಳ್ಳವರೂ [QE][QS2]ಚೂರಿಗಳಂತೆ ದವಡೆಗಳುಳ್ಳವರೂ [QE][QS]ಬಡವರನ್ನು ಭೂಮಿಯಿಂದಲೂ [QE][QS2]ದಿಕ್ಕಿಲ್ಲದವರನ್ನು ಮಾನವಕುಲದಿಂದಲೂ ಕಬಳಿಸುವವರೂ ಆಗಿದ್ದಾರೆ. [QE][PBR]
15. [QS]“ಜಿಗಣೆಗೆ, ‘ಕೊಡು! ಕೊಡು!’ ಎಂದು ಕೂಗುವ [QE][QS2]ಇಬ್ಬರು ಹೆಣ್ಣುಮಕ್ಕಳುಂಟು. [QE][PBR] [LS]“ಎಂದಿಗೂ ತೃಪ್ತಿಪಡದ ಮೂರು ಸಂಗತಿಗಳು ಇವೆ, [LE][LS2]ಹೌದು, ‘ಸಾಕು!’ ಎಂದು ಹೇಳದಿರುವ ನಾಲ್ಕು ಸಂಗತಿಗಳಿವೆ: [LE]
16. [LS3] ಸಮಾಧಿ, [LE][LS3]ಬಂಜೆಯಾದ ಗರ್ಭ, [LE][LS3]ನೀರಿನಿಂದ ಎಂದೂ ತೃಪ್ತಿ ಹೊಂದದ ಭೂಮಿ, [LE][LS3]‘ಸಾಕು!’ ಎಂದು ಹೇಳದಿರುವ ಬೆಂಕಿ. [LE][PBR]
17. [QS]“ತನ್ನ ತಂದೆಯನ್ನು ಹಾಸ್ಯಮಾಡಿ, [QE][QS2]ತನ್ನ ತಾಯಿಯನ್ನು ಧಿಕ್ಕರಿಸುವ ಕಣ್ಣನ್ನು, [QE][QS]ಕಣಿವೆಯ ಕಾಗೆಗಳು ಕಿತ್ತು ಕಕ್ಕುವವು. [QE][QS2]ರಣಹದ್ದುಗಳು ಅದನ್ನು ತಿಂದುಬಿಡುವವು. [QE][PBR]
18. [LS] “ನನಗೆ ಆಶ್ಚರ್ಯವಾದ ಮೂರು ಸಂಗತಿಗಳಿವೆ, [LE][LS2]ಹೌದು, ನನಗೆ ಅರ್ಥವಾಗದಿರುವ ನಾಲ್ಕು ಸಂಗತಿಗಳಿವೆ: [LE]
19. [LS3] ಆಕಾಶದಲ್ಲಿ ಹದ್ದಿನ ಮಾರ್ಗ, [LE][LS3]ಬಂಡೆಯ ಮೇಲೆ ಸರ್ಪದ ಮಾರ್ಗ, [LE][LS3]ಸಮುದ್ರ ನಡುವೆ ಹಡಗಿನ ಮಾರ್ಗ, [LE][LS3]ಯುವಕ ಯುವತಿಯರ ಪ್ರೀತಿ ಮಾರ್ಗ. [LE][PBR]
20. [QS]“ಜಾರಸ್ತ್ರೀಯ ನಡತೆಯು ಹೀಗಿದೆ: [QE][QS2]ಅವಳು ತಿಂದು, ತನ್ನ ಬಾಯನ್ನು ಒರೆಸಿಕೊಂಡು [QE][QS2]‘ನಾನು ಯಾವುದೇ ತಪ್ಪು ಮಾಡಿಲ್ಲ,’ ಎಂದು ಹೇಳುತ್ತಾಳೆ. [QE][PBR]
21. [LS] “ಭೂಮಿಯು ಮೂರು ವಿಷಯಗಳಿಂದ ಕಳವಳಗೊಳ್ಳುತ್ತದೆ, [LE][LS2]ನಾಲ್ವರನ್ನು ಅದು ತಾಳಲಾರದು: [LE]
22. [LS3] ಅರಸನಾಗುವ ದಾಸನು, [LE][LS3]ತಿನ್ನಲು ಸಾಕಷ್ಟು ಪಡೆಯುವ ಮೂರ್ಖನು, [LE]
23. [LS3] ತಿರಸ್ಕಾರಕ್ಕೆ ಅರ್ಹಳಾದ ಮಹಿಳೆ, ಮದುವೆಯಾಗುವುದು. [LE][LS3]ಪತ್ನಿಯ ಸ್ಥಾನವನ್ನು ಕಸಿದುಕೊಂಡ ದಾಸಿ. [LE][PBR]
24. [LS] “ಭೂಮಿಯ ಮೇಲೆ ಅಧಿಕ ಜ್ಞಾನವುಳ್ಳವುಗಳಾದ [LE][LS2]ನಾಲ್ಕು ಸಣ್ಣ ಪ್ರಾಣಿಗಳು ಇವೆ: [LE]
25. [LS2] ಇರುವೆಗಳು ಬಲಹೀನ ಜೀವಿಗಳು, [LE][LS3]ಆದರೂ ಅವು ಬೇಸಿಗೆಯಲ್ಲಿ ತಮ್ಮ ಆಹಾರವನ್ನು ಸಿದ್ಧಮಾಡಿಕೊಳ್ಳುತ್ತವೆ. [LE]
26. [LS2] ಬೆಟ್ಟದ ಮೊಲಗಳು ಬಲಹೀನ ಪ್ರಾಣಿಗಳಾಗಿದ್ದರೂ [LE][LS3]ಅವು ಬಂಡೆಗಳಲ್ಲಿ ತಮ್ಮ ಮನೆಗಳನ್ನು ಮಾಡಿಕೊಳ್ಳುತ್ತವೆ. [LE]
27. [LS2] ಮಿಡತೆಗಳಿಗೆ ಅರಸನಿಲ್ಲ; [LE][LS3]ಆದರೂ ಅವೆಲ್ಲಾ ದಂಡುದಂಡಾಗಿ ಹೋಗುತ್ತವೆ. [LE]
28. [LS2] ಹಲ್ಲಿಯನ್ನು ಅಂಗೈಯಿಂದ ಹಿಡಿಯಬಹುದಾದರೂ [LE][LS3]ಅರಸನ ಅರಮನೆಗಳಲ್ಲಿ ಕಂಡುಬರುತ್ತವೆ. [LE][PBR]
29. [LS] “ಗಂಭೀರ ಗಮನದ ಮೂರು ಪ್ರಾಣಿಗಳಿವೆ, [LE][LS2]ಹೌದು, ಗಂಭೀರ ಗತಿಯ ನಾಲ್ಕಿವೆ: [LE]
30. [LS3] ಮೃಗಗಳಲ್ಲಿ ಬಲಿಷ್ಠವಾಗಿರುವ ಸಿಂಹವು, ಯಾವುದಕ್ಕೂ ಹಿಮ್ಮೆಟ್ಟದು. [LE]
31. [LS3] ಕತ್ತೆತ್ತಿ ನಡೆಯುವ ಹುಂಜ, [LE][LS3]ಹೋತವು, [LE][LS3]ತನ್ನ ಸುತ್ತಲೂ ಸೈನಿಕರಿರುವ ಅರಸನು. [LE][PBR]
32. [QS]“ನೀನು ಹೆಮ್ಮೆಪಟ್ಟು ಮೂರ್ಖನಾಗಿ ನಡೆದಿದ್ದರೆ, [QE][QS2]ಇಲ್ಲವೆ ಕೆಟ್ಟದ್ದಾಗಿ ಆಲೋಚಿಸಿದ್ದರೆ, [QE][QS2]ನಿನ್ನ ಬಾಯಿಯ ಮೇಲೆ ಕೈಯಿಟ್ಟುಕೊ. [QE]
33. [QS]ಹಾಲನ್ನು ಕಡೆಯುವುದರಿಂದ ಬೆಣ್ಣೆ, [QE][QS2]ಮೂಗನ್ನು ಹಿಂಡುವುದರಿಂದ ರಕ್ತ, [QE][QS2]ಹಾಗೆಯೇ ಕೋಪವನ್ನೆಬ್ಬಿಸುವುದರಿಂದ ಜಗಳ.” [QE]