1. [QS]ಹಿಂದಟ್ಟುವವನು ಇಲ್ಲದಿದ್ದರೂ ದುಷ್ಟನು ಓಡಿಹೋಗುತ್ತಾನೆ. [QE][QS2]ಆದರೆ ಸಿಂಹದ ಹಾಗೆ ನೀತಿವಂತರು ಧೈರ್ಯದಿಂದ ಇರುತ್ತಾರೆ. [QE][PBR]
2. [QS]ದೇಶದ ದಂಗೆಯಿಂದ ಅನೇಕರು ನಾಯಕರಾಗುತ್ತಾರೆ. [QE][QS2]ಆದರೆ ಒಳನೋಟ ಹಾಗು ತಿಳುವಳಿಕೆಯ ನಾಯಕನಿಂದಲೇ ದೇಶವು ಸುಸ್ಥಿರವಾಗುವುದು. [QE][PBR]
3. [QS]ಬಡವರನ್ನು ಹಿಂಸಿಸುವ ಅಧಿಕಾರಿಯು [QE][QS2]ಆಹಾರವನ್ನು ಉಳಿಸದಂತೆ ಸುರಿಯುವ ಮಳೆಯಂತಿದ್ದಾನೆ. [QE][PBR]
4. [QS]ಬೋಧನೆಯನ್ನು ತ್ಯಜಿಸುವವರು ದುಷ್ಟರನ್ನು ಹೊಗಳುತ್ತಾರೆ; [QE][QS2]ಆದರೆ ಬೋಧನೆಯನ್ನು ಕೈಗೊಳ್ಳುವವರು ಅವರೊಂದಿಗೆ ಹೋರಾಡುತ್ತಾರೆ. [QE][PBR]
5. [QS]ನ್ಯಾಯವನ್ನು ದುಷ್ಟರು ಗ್ರಹಿಸುವುದಿಲ್ಲ; [QE][QS2]ಆದರೆ ಯೆಹೋವ ದೇವರನ್ನು ಹುಡುಕುವವರು ಎಲ್ಲವುಗಳನ್ನು ಗ್ರಹಿಸುತ್ತಾರೆ. [QE][PBR]
6. [QS]ಐಶ್ವರ್ಯವಂತನಾಗಿದ್ದರೂ ತನ್ನ ಮಾರ್ಗದಲ್ಲಿ ವಕ್ರವಾಗಿರುವವನಿಗಿಂತ [QE][QS2]ನಿರ್ದೋಷಿಯಾಗಿ ನಡೆಯುವ ದರಿದ್ರನು ಶ್ರೇಷ್ಠನು. [QE][PBR]
7. [QS]ವಿವೇಚನೆಯ ಮಗನು ದೇವರ ಶಿಕ್ಷಣವನ್ನು ಕೈಗೊಳ್ಳುವನು. [QE][QS2]ಆದರೆ ಹೊಟ್ಟೆಬಾಕರ ಸಂಗಡಿಗನು ತನ್ನ ತಂದೆಯನ್ನು ಅವಮಾನಪಡಿಸುತ್ತಾನೆ. [QE][PBR]
8. [QS]ಬಡ್ಡಿಯಿಂದಲೂ ಅನ್ಯಾಯದ ಲಾಭದಿಂದಲೂ ತನ್ನ ಆಸ್ತಿಯನ್ನು ವೃದ್ಧಿಗೊಳಿಸುವವನು, [QE][QS2]ಬಡವರ ಮೇಲೆ ದಯೆ ತೋರಿಸುವವನಿಗೆ ಅದನ್ನು ಕೂಡಿಸುವನು. [QE][PBR]
9. [QS]ಶಿಕ್ಷಣವನ್ನು ಕೇಳದಂತೆ ತನ್ನ ಕಿವಿ ಮುಚ್ಚಿಕೊಳ್ಳುವವನ [QE][QS2]ಪ್ರಾರ್ಥನೆಯು ದೇವರಿಗೆ ಅಸಹ್ಯ. [QE][PBR]
10. [QS]ಪ್ರಾಮಾಣಿಕರನ್ನು ದುರ್ಮಾರ್ಗದಲ್ಲಿ ದಾರಿತಪ್ಪಿಸುವವನು, [QE][QS2]ತಾನೇ ತೋಡಿದ ಗುಂಡಿಯಲ್ಲಿ ಬೀಳುವನು. [QE][QS2]ನಿರ್ದೋಷಿಗಳಾದರೋ ಒಳ್ಳೆಯ ಸೊತ್ತನ್ನು ಪಡೆಯುವರು. [QE][PBR]
11. [QS]ಐಶ್ವರ್ಯವಂತನು ತನ್ನ ಸ್ವಂತ ಅಭಿಪ್ರಾಯದಲ್ಲಿ ಜ್ಞಾನಿಯಾಗಿದ್ದಾನೆ. [QE][QS2]ಆದರೆ ವಿವೇಚನೆಯುಳ್ಳ ಬಡವನು ಅವನ ವಂಚನೆಯನ್ನು ನೋಡಬಲ್ಲನು. [QE][PBR]
12. [QS]ನೀತಿವಂತರಿಗೆ ಜಯವಾದರೆ, ದೊಡ್ಡ ಘನತೆ ಇರುವುದು. [QE][QS2]ಆದರೆ ದುಷ್ಟರಿಗೆ ಏಳಿಗೆಯಾದರೆ, ಮನುಷ್ಯರು ಅಡಗಿಕೊಳ್ಳುತ್ತಾರೆ. [QE][PBR]
13. [QS]ತನ್ನ ಪಾಪಗಳನ್ನು ಮುಚ್ಚಿಕೊಳ್ಳುವವನಿಗೆ ಏಳಿಗೆ ಆಗುವುದಿಲ್ಲ. [QE][QS2]ಆದರೆ ಪಾಪಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರಕುವುದು. [QE][PBR]
14. [QS]ಯಾವಾಗಲೂ ಯೆಹೋವ ದೇವರ ಭಯಭಕ್ತಿಯಲ್ಲಿ ನಡೆದುಕೊಳ್ಳುವವನು ಧನ್ಯನು. [QE][QS2]ಆದರೆ ಹೃದಯವನ್ನು ಕಠಿಣಪಡಿಸಿಕೊಳ್ಳುವವನು ಕೇಡಿಗೆ ಸಿಕ್ಕಿಬೀಳುವನು. [QE][PBR]
15. [QS]ಗರ್ಜಿಸುವ ಸಿಂಹದಂತೆಯೂ ಅಲೆದಾಡುವ ಕರಡಿಯಂತೆಯೂ, [QE][QS2]ಬಡವರನ್ನು ದುಷ್ಟನು ಆಳುವನು. [QE][PBR]
16. [QS]ಗ್ರಹಿಕೆಯಿಲ್ಲದ ಅಧಿಕಾರಿಯು ಮಹಾ ಸುಲಿಗೆಗಾರನು. [QE][QS2]ಆದರೆ ಲೋಭವನ್ನು ಹಗೆಮಾಡುವವನು ದೀರ್ಘಾಯುಷ್ಯನು. [QE][PBR]
17. [QS]ನರಹತ್ಯದ ಅಪರಾಧ ಭಾವನೆಯಿಂದ ಇರುವವನು, [QE][QS2]ಮರಣದೆಡೆಗೆ ಓಡುತ್ತಿರುವನು, [QE][QS2]ಅವನನ್ನು ಯಾರೂ ತಡೆಯದಿರಲಿ. [QE][PBR]
18. [QS]ನಿರ್ದೋಷಿಯಾಗಿ ನಡೆಯುವವನು ಸಂರಕ್ಷಣೆ ಹೊಂದುವನು. [QE][QS2]ವಕ್ರಮಾರ್ಗಿಯು ತಟ್ಟನೆ ಬೀಳುವನು. [QE][PBR]
19. [QS]ತನ್ನ ಹೊಲವನ್ನು ವ್ಯವಸಾಯ ಮಾಡುವವನು ಆಹಾರದಿಂದ ತೃಪ್ತಿಹೊಂದುವನು. [QE][QS2]ಆದರೆ ವ್ಯರ್ಥ ಕಾರ್ಯವನ್ನು ಹಿಂಬಾಲಿಸುವವನಿಗೆ ಸಾಕಾದಷ್ಟು ಬಡತನವು ಇರುವುದು. [QE][PBR]
20. [QS]ನಂಬಿಗಸ್ತನಾದ ಮನುಷ್ಯನು ಆಶೀರ್ವಾದಗಳಲ್ಲಿ ತುಂಬಿತುಳುಕುವನು; [QE][QS2]ಆದರೆ ಧನವಂತನಾಗಲು ಆತುರಪಡುವವನು, ನಿರ್ದೋಷಿಯಾಗಿರುವುದಿಲ್ಲ. [QE][PBR]
21. [QS]ಪಕ್ಷಪಾತವು ಸರಿಯಲ್ಲ; [QE][QS2]ತುತ್ತು ರೊಟ್ಟಿಗಾಗಿ ಒಬ್ಬನು ದ್ರೋಹ ಮಾಡುವನು. [QE][PBR]
22. [QS]ಧನವಂತನಾಗಲು ಆತುರಪಡುವವನು ಕೆಟ್ಟ ಕಣ್ಣುಳ್ಳವನಾಗಿದ್ದಾನೆ; [QE][QS2]ತನಗೆ ಬಡತನವು ಬರುವುದನ್ನು ಅವನು ಯೋಚಿಸುವುದಿಲ್ಲ. [QE][PBR]
23. [QS]ತನ್ನ ನಾಲಿಗೆಯಿಂದ ಮುಖಸ್ತುತಿ ಮಾಡುವವನಿಗಿಂತ, [QE][QS2]ಒಬ್ಬನನ್ನು ಗದರಿಸುವವನು ತರುವಾಯ ಹೆಚ್ಚು ದಯಾಪಾತ್ರನಾಗುವನು. [QE][PBR]
24. [QS]ತನ್ನ ತಂದೆಯಾನ್ನಾಗಲಿ, [QE][QS2]ತಾಯಿಯನ್ನಾಗಲಿ ದೋಚಿಕೊಂಡು, [QE][QS2]“ಇದು ದೋಷವಲ್ಲ,” ಎಂದು ಹೇಳುವವನು ಕೆಡುಕನಿಗೆ ಜೊತೆಗಾರನು. [QE][PBR]
25. [QS]ದುರಾಶೆಯುಳ್ಳವನು ಕಲಹವನ್ನೆಬ್ಬಿಸುವನು; [QE][QS2]ಯೆಹೋವ ದೇವರಲ್ಲಿ ಭರವಸವಿಡುವವನು ಪುಷ್ಟನಾಗುವನು. [QE][PBR]
26. [QS]ತನ್ನ ಬುದ್ಧಿಯಲ್ಲಿಯೇ ಭರವಸವಿಡುವವನು ಬುದ್ಧಿಹೀನನು; [QE][QS2]ಆದರೆ ಜ್ಞಾನದಿಂದ ನಡೆಯುವವನು ಉದ್ಧಾರ ಹೊಂದುವನು. [QE][PBR]
27. [QS]ಬಡವರಿಗೆ ದಾನ ಮಾಡುವವನು, ಕೊರತೆ ಪಡುವುದಿಲ್ಲ; [QE][QS2]ಆದರೆ ತನ್ನ ಕಣ್ಣುಗಳನ್ನು ಮುಚ್ಚಿಕೊಳ್ಳುವವನಿಗೆ ಅನೇಕ ಶಾಪಗಳು. [QE][PBR]
28. [QS]ದುಷ್ಟರು ಎದ್ದರೆ ಜನರು ಅಡಗಿಕೊಳ್ಳುತ್ತಾರೆ, [QE][QS2]ಆದರೆ ಅವರು ನಾಶವಾದಾಗ ನೀತಿವಂತರು ವೃದ್ಧಿಯಾಗುತ್ತಾರೆ. [QE][PBR]