1. [QS]ಬೇಸಿಗೆಯಲ್ಲಿ ಹಿಮದಂತೆಯೂ, [QE][QS2]ಸುಗ್ಗಿಯಲ್ಲಿ ಮಳೆಯಂತೆಯೂ ಬುದ್ಧಿಹೀನನಿಗೆ ಮಾನವು ಸರಿಯಲ್ಲ. [QE]
2. [QS]ಅಲೆದಾಡುವ ಪಕ್ಷಿಯಂತೆಯೂ, [QE][QS2]ಹಾರಾಡುವ ಬಾನಕ್ಕಿಯಂತೆಯೂ ಕಾರಣವಿಲ್ಲದೆ ಕೊಡುವ ಶಾಪವು ತಗಲದು. [QE]
3. [QS]ಕುದುರೆಗೆ ಬಾರುಗೋಲು, ಕತ್ತೆಗೆ ಕಡಿವಾಣವು, [QE][QS2]ಮೂಢನ ಬೆನ್ನಿಗೆ ಬೆತ್ತ. [QE]
4. [QS]ಮೂಢನ ಮೂರ್ಖತನಕ್ಕೆ ತಕ್ಕಂತೆ ಉತ್ತರಿಸಬೇಡ; [QE][QS2]ಇಲ್ಲವಾದರೆ ನೀನೂ ಅವನಿಗೆ ಸಮಾನನಾದೀಯೆ. [QE]
5. [QS]ಮೂಢನ ಮೂರ್ಖತನಕ್ಕೆ ತಕ್ಕಂತೆ ಉತ್ತರಕೊಡು; [QE][QS2]ಇಲ್ಲವಾದರೆ ತನ್ನನ್ನು ಜ್ಞಾನಿಯೆಂದು ಎಣಿಸಿಕೊಂಡಾನು. [QE]
6. [QS]ಬುದ್ಧಿಹೀನನ ಮೂಲಕ ವರ್ತಮಾನ ಕಳುಹಿಸುವವನು [QE][QS2]ತನ್ನ ಪಾದಗಳನ್ನು ತಾನೇ ಕಡಿದುಕೊಂಡು ಇಲ್ಲವೆ ಕೇಡನ್ನು ಕುಡಿಯುತ್ತಾನೆ. [QE]
7. [QS]ಕುಂಟನ ಕಾಲುಗಳು ಜೋಲಾಡುವ ಹಾಗೆಯೇ, [QE][QS2]ಬುದ್ಧಿಹೀನರ ಬಾಯಲ್ಲಿ ಜ್ಞಾನೋಕ್ತಿಯು ಇರುತ್ತದೆ. [QE]
8. [QS]ಮೂಢನಿಗೆ ಕೊಡುವ ಮಾನವು [QE][QS2]ಕವಣಿಯಲ್ಲಿಟ್ಟ ಕಲ್ಲಿನ ಹಾಗೆ. [QE]
9. [QS]ಕುಡುಕನ ಕೈಯಲ್ಲಿ ಮುಳ್ಳು ಕೋಲಿನಂತೆ [QE][QS2]ಬುದ್ಧಿಹೀನರ ಬಾಯಲ್ಲಿ ಜ್ಞಾನೋಕ್ತಿಯು ಇರುವುದು. [QE]
10. [QS]ಮೂಢರನ್ನೂ ದಾರಿಹೋಕರನ್ನೂ ಕೂಲಿಗೆ ಕರೆಯುವವನು [QE][QS2]ಯಾರಿಗಾದರೂ ತಗಲಲಿ ಎಂದು ಬಾಣ ಎಸೆಯುವ ಬಿಲ್ಲುಗಾರನಂತೆ. [QE]
11. [QS]ತಾನು ಕಕ್ಕಿದ್ದಕ್ಕೆ ನಾಯಿಯು ತಿರುಗುವಂತೆ ಮೂಢನು [QE][QS2]ತನ್ನ ಮೂಢತನಕ್ಕೆ ಹಿಂದಿರುಗುತ್ತಾನೆ. [QE]
12. [QS]ತನ್ನ ಸ್ವಂತ ಅಭಿಪ್ರಾಯದಲ್ಲಿ ಜ್ಞಾನಿಯಾದವನನ್ನು ನೀನು ಕಾಣುತ್ತಿದ್ದೀಯೋ? [QE][QS2]ಅವನಿಗಿಂತ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯು ಇರುತ್ತದೆ. [QE][PBR]
13. [QS]ಸೋಮಾರಿಯು, “ದಾರಿಯಲ್ಲಿ ಸಿಂಹವಿದೆ, [QE][QS2]ಬೀದಿಗಳಲ್ಲಿ ಭೀಕರ ಸಿಂಹ ಇದೆ,” ಎಂದು ಹೇಳುತ್ತಾನೆ. [QE]
14. [QS]ಬಾಗಿಲು ತಿರುಗುಣಿಗಳ ಮೇಲೆ ಹೇಗೆ ತಿರುಗುತ್ತದೋ, [QE][QS2]ಹಾಗೆಯೇ ಸೋಮಾರಿಯು ತನ್ನ ಹಾಸಿಗೆಯ ಮೇಲೆ ಹೊರಳಾಡುತ್ತಾನೆ. [QE]
15. [QS]ಸೋಮಾರಿಯು ತಟ್ಟೆಯಲ್ಲಿ ತನ್ನ ಕೈಯನ್ನು ಹಾಕಿ, [QE][QS2]ತಿರುಗಿ ಅದನ್ನು ತನ್ನ ಬಾಯಿಗೆ ತರಲಾರದಷ್ಟು ಆಯಾಸಪಡುತ್ತಾನೆ. [QE]
16. [QS]ಜ್ಞಾನದಿಂದ ಉತ್ತರಿಸಬಲ್ಲ ಏಳು ಜನರಿಗಿಂತ, [QE][QS2]ತಾನೇ ಜ್ಞಾನಿ ಎಂದು ಸೋಮಾರಿಯು ಭಾವಿಸುತ್ತಾನೆ. [QE][PBR]
17. [QS]ಒಬ್ಬನು ಹಾದುಹೋಗುತ್ತಾ ತನಗೆ ಸಂಬಂಧಿಸದೇ ಇರುವ ವ್ಯಾಜ್ಯದಲ್ಲಿ [QE][QS2]ತಲೆಹಾಕುವವನು ನಾಯಿಯ ಕಿವಿ ಹಿಡಿದವನಂತೆ ಇದ್ದಾನೆ. [QE][PBR]
18. [QS](18-19)ತನ್ನ ನೆರೆಯವನನ್ನು ಮೋಸಗೊಳಿಸಿ, [QE][QS2]“ಇದು ತಮಾಷೆಗೋಸ್ಕರ ಮಾಡುತ್ತೇನೆ,” ಎಂದು ಹೇಳುವವನು, [QE][QS]ಕೊಳ್ಳಿಗಳನ್ನೂ, ಬಾಣಗಳನ್ನೂ, [QE][QS2]ಸಾವನ್ನೂ ಬೀರುವ ಹುಚ್ಚನಂತೆಯೇ. [QE][PBR]
19.
20. [QS]ಕಟ್ಟಿಗೆ ಇಲ್ಲದಿರುವಲ್ಲಿ ಬೆಂಕಿಯು ಆರಿಹೋಗುತ್ತದೆ; [QE][QS2]ಹಾಗೆಯೇ ಚಾಡಿಕೋರನು ಇಲ್ಲದಿರುವಲ್ಲಿ ಜಗಳ ಶಮನವಾಗುವುದು. [QE]
21. [QS]ಕೆಂಡಗಳಿಗೆ ಇದ್ದಲು, ಬೆಂಕಿಗೆ ಕಟ್ಟಿಗೆ; [QE][QS2]ಹಾಗೆಯೇ ಜಗಳವನ್ನು ಕೆರಳಿಸುವಂತೆ ಕಲಹ ಮಾಡುವವನು ಇರುವನು. [QE]
22. [QS]ಚಾಡಿಕೋರನ ಮಾತುಗಳು ರುಚಿಕರ ಭಕ್ಷ್ಯದ [QE][QS2]ಹಾಗೆ ಹೊಟ್ಟೆಯ ಅಂತರ್ಭಾಗಗಳಿಗೆ ಇಳಿಯುತ್ತವೆ. [QE][PBR]
23. [QS]ಕೆಟ್ಟ ಹೃದಯದಿಂದ ಸವಿನುಡಿಯುವ ತುಟಿಯು, [QE][QS2]ಬೆಳ್ಳಿಯ ಹೊದಿಕೆಯಿಂದ ಮುಚ್ಚಲ್ಪಟ್ಟ ಬೋಕಿಯಂತೆ ಇದೆ. [QE]
24. [QS]ಶತ್ರುಗಳು ತಮ್ಮ ತುಟಿಗಳಿಂದ ವೇಷ ಧರಿಸುತ್ತಾರೆ, [QE][QS2]ತನ್ನ ಅಂತರಂಗದಲ್ಲಿ ಮೋಸವನ್ನು ಇಟ್ಟುಕೊಳ್ಳುತ್ತಾರೆ. [QE]
25. [QS]ಸವಿಮಾತನ್ನಾಡಿದರೆ ಅವನನ್ನು ನಂಬಬೇಡ; [QE][QS2]ಏಕೆಂದರೆ ಅವನ ಹೃದಯದಲ್ಲಿ ಏಳು ಅಸಹ್ಯ ಕಾರ್ಯಗಳಿವೆ. [QE]
26. [QS]ಅವನ ಹಗೆತನವು ಮೋಸದಿಂದ ಮುಚ್ಚಲ್ಪಟ್ಟಿದ್ದರೂ, [QE][QS2]ಅವನ ಕೆಟ್ಟತನವು ಸಭೆಯಲ್ಲಿ ಬಯಲಾಗುವುದು. [QE]
27. [QS]ಗುಂಡಿಯನ್ನು ತೋಡುವವನು ತಾನೇ ಅದರಲ್ಲಿ ಬೀಳುತ್ತಾನೆ; [QE][QS2]ಕಲ್ಲು ಹೊರಳಿಸುವವನ ಮೇಲೆಯೇ ಅದು ತಿರುಗಿ ಹೊರಳುವುದು. [QE]
28. [QS]ಸುಳ್ಳು ನಾಲಿಗೆಯವನು ತಾನು ಬಾಧಿಸಿದವರನ್ನೇ ಹಗೆ ಮಾಡುವನು; [QE][QS2]ಮುಖಸ್ತುತಿ ಮಾಡುವ ಬಾಯಿಯು ನಾಶವನ್ನುಂಟುಮಾಡುತ್ತದೆ. [QE][PBR]