1. {#2ಏಳನೆಯ ಹೇಳಿಕೆ } [QS]ಆಳುವವನ ಸಂಗಡ ನೀನು ಊಟಕ್ಕೆ ಕುಳಿತಿರುವಾಗ, [QE][QS2]ನಿನ್ನ ಎದುರಿನಲ್ಲಿ ಏನಿದೆ ಎಂದು ಶ್ರದ್ಧೆಯಿಂದ ಗಮನಿಸು. [QE]
2. [QS]ನೀನು ಹೊಟ್ಟೆಬಾಕನಾಗಿದ್ದರೆ, [QE][QS2]ನಿನ್ನ ಕುತ್ತಿಗೆಗೆ ಖಡ್ಗವನ್ನು ಇಟ್ಟುಕೋ. [QE]
3. [QS]ಅವನ ರುಚಿ ಪದಾರ್ಥಗಳನ್ನು ಅಪೇಕ್ಷಿಸಬೇಡ; [QE][QS2]ಏಕೆಂದರೆ ಅದು ಮೋಸದ ಆಹಾರವು. [QE]
4. {#2ಎಂಟನೆಯ ಹೇಳಿಕೆ } [QS]ಐಶ್ವರ್ಯವಂತನಾಗುವುದಕ್ಕೆ ಪ್ರಯಾಸಪಡಬೇಡ; [QE][QS2]ಅದಕ್ಕಾಗಿ ಸ್ವಬುದ್ಧಿಯನ್ನೇ ಆಶ್ರಯಿಸಬೇಡ. [QE]
5. [QS]ಕಣ್ಣು ಮಿಟುಕಿಸುವುದರಲ್ಲಿ ಐಶ್ವರ್ಯ ಕಣ್ಮರೆಯಾಗುತ್ತದೆ. [QE][QS2]ಅದು ನಿಸ್ಸಂದೇಹವಾಗಿ ರೆಕ್ಕೆಗಳನ್ನು ಕಟ್ಟಿಕೊಂಡು [QE][QS2]ಹದ್ದಿನಂತೆ ಆಕಾಶದ ಕಡೆಗೆ ಹಾರಿಹೋಗುವುದು. [QE]
6. {#2ಒಂಬತ್ತನೆಯ ಹೇಳಿಕೆ } [QS]ಜಿಪುಣನ ಆಹಾರವನ್ನು ತಿನ್ನಬೇಡ; [QE][QS2]ಅವನ ರುಚಿ ಪದಾರ್ಥಗಳನ್ನು ಆಶಿಸಬೇಡ. [QE]
7. [QS]ಏಕೆಂದರೆ, ಅವನು ಎಲ್ಲದಕ್ಕೂ ಬೆಲೆ ಕಟ್ಟುವ [QE][QS2]ಯೋಚನೆಯುಳ್ಳವನಂತೆ ಇದ್ದಾನೆ; [QE][QS]ಅವನು, “ತಿನ್ನು, ಕುಡಿ,” ಎಂದು ಹೇಳುತ್ತಾನೆ; [QE][QS2]ಆದರೆ ಅವನ ಹೃದಯವು ನಿನ್ನೊಂದಿಗಿಲ್ಲ. [QE]
8. [QS]ನೀನು ತಿಂದ ಸ್ವಲ್ಪ ತುತ್ತನ್ನು ಕಕ್ಕಿಬಿಡುವೆ; [QE][QS2]ನಿನ್ನ ಸವಿಮಾತುಗಳೆಲ್ಲಾ ವ್ಯರ್ಥವೇ. [QE]
9. {#2ಹತ್ತನೆಯ ಹೇಳಿಕೆ } [QS]ಬುದ್ಧಿಹೀನರ ಸಂಗಡ ಮಾತಾಡಬೇಡ; [QE][QS2]ಏಕೆಂದರೆ ನಿನ್ನ ಜ್ಞಾನದ ಮಾತುಗಳನ್ನು ಅವರು ತಿರಸ್ಕರಿಸುವನು. [QE]
10. {#2ಹನ್ನೊಂದನೆಯ ಹೇಳಿಕೆ } [QS]ಪೂರ್ವಕಾಲದ ಮೇರೆಯನ್ನು ತೆಗೆಯಬೇಡ; [QE][QS2]ಅನಾಥರ ಹೊಲಗಳನ್ನು ಅತಿಕ್ರಮಿಸಬೇಡ. [QE]
11. [QS]ಏಕೆಂದರೆ ಅವನ ವಿಮೋಚಕನು ಬಲಶಾಲಿಯಾಗಿದ್ದಾನೆ; [QE][QS2]ಅವರ ವ್ಯಾಜ್ಯಕ್ಕಾಗಿ ಆತನು ವಾದಿಸುವನು. [QE]
12. {#2ಹನ್ನೆರಡನೆಯ ಹೇಳಿಕೆ } [QS]ಶಿಸ್ತಿಗೆ ನಿನ್ನ ಹೃದಯವನ್ನೂ [QE][QS2]ತಿಳುವಳಿಕೆಯ ಮಾತುಗಳಿಗೆ ನಿನ್ನ ಕಿವಿಗಳನ್ನೂ ಕೊಡು. [QE]
13. {#2ಹದಿಮೂರನೆಯ ಹೇಳಿಕೆ } [QS]ಮಕ್ಕಳನ್ನು ಶಿಕ್ಷಿಸಲು ಹಿಂದೆಗೆಯಬೇಡ; [QE][QS2]ಬೆತ್ತದಿಂದ ಹೊಡೆದರೆ, ಅವರು ಸಾಯುವುದಿಲ್ಲ. [QE]
14. [QS]ಅವರನ್ನು ಬೆತ್ತದಿಂದ ಹೊಡೆದು, [QE][QS2]ಪಾತಾಳದಿಂದ ಅವರ ಮರಣವನ್ನು ತಪ್ಪಿಸುವೆ. [QE]
15. {#2ಹದಿನಾಲ್ಕನೆಯ ಹೇಳಿಕೆ } [QS]ಮಗನೇ, ನಿನ್ನ ಹೃದಯವು ಜ್ಞಾನವುಳ್ಳದ್ದಾಗಿದ್ದರೆ, [QE][QS2]ನನ್ನ ಹೃದಯವು ಹರ್ಷಿಸುವುದು. [QE]
16. [QS]ನಿನ್ನ ತುಟಿಗಳು ಯಥಾರ್ಥವಾದವುಗಳನ್ನು ಮಾತಾಡಿದರೆ, [QE][QS2]ನನ್ನ ಅಂತರಾತ್ಮವು ಸಂತೋಷಿಸುವುದು. [QE]
17. {#2ಹದಿನೈದನೆಯ ಹೇಳಿಕೆ } [QS]ಪಾಪಿಗಳನ್ನು ನೋಡಿ ನಿನ್ನ ಹೃದಯವು ಅಸೂಯೆಪಡದಿರಲಿ; [QE][QS2]ಆದರೆ ಯೆಹೋವ ದೇವರ ಭಯದಲ್ಲಿರಲು ಯಾವಾಗಲೂ ಆಸಕ್ತನಾಗಿರು. [QE]
18. [QS]ಖಂಡಿತವಾಗಿಯೂ ನಿನಗೆ ಮುಂದಿನ ನಿರೀಕ್ಷೆಯಿದೆ; [QE][QS2]ನಿನ್ನ ನಿರೀಕ್ಷೆಯು ನಿರರ್ಥಕವಾಗದು. [QE]
19. {#2ಹದಿನಾರನೆಯ ಹೇಳಿಕೆ } [QS]ಮಗನೇ, ಕೇಳಿ ಜ್ಞಾನವಂತನಾಗು; [QE][QS2]ನೀತಿ ಮಾರ್ಗದಲ್ಲಿ ನಿನ್ನ ಹೃದಯವನ್ನು ನಡೆಸು. [QE]
20. [QS]ಅತಿ ಮದ್ಯಪಾನ ಮಾಡುವವರಲ್ಲಿ [QE][QS2]ಅತಿ ಮಾಂಸಭಕ್ಷರಲ್ಲಿಯೂ ಸೇರಬೇಡ. [QE]
21. [QS]ಏಕೆಂದರೆ ಕುಡುಕರೂ ಹೊಟ್ಟೆಬಾಕರೂ ದುರ್ಗತಿಗೆ ಬರುವರು; [QE][QS2]ತೂಕಡಿಕೆಯು ಹರಕು ಬಟ್ಟೆಗಳನ್ನು ಹೊದಿಸುವದು. [QE]
22. {#2ಹದಿನೇಳನೆಯ ಹೇಳಿಕೆ } [QS]ನಿನ್ನನ್ನು ಹೆತ್ತ ತಂದೆಯ ಮಾತಿಗೆ ಕಿವಿಗೊಡು, [QE][QS2]ನಿನ್ನ ತಾಯಿ ಮುಪ್ಪಿನವಳಾದಾಗ ಆಕೆಯನ್ನು ಅಸಡ್ಡೆ ಮಾಡಬೇಡ. [QE]
23. [QS]ಸತ್ಯವನ್ನೂ ಜ್ಞಾನವನ್ನೂ ಶಿಕ್ಷಣವನ್ನೂ ವಿವೇಕವನ್ನೂ ಕೊಂಡುಕೋ; [QE][QS2]ಆದರೆ ಅವುಗಳನ್ನು ಮಾರಬೇಡ. [QE]
24. [QS]ನೀತಿವಂತನ ತಂದೆಯು ಬಹಳವಾಗಿ ಸಂತೋಷಪಡುವನು; [QE][QS2]ಜ್ಞಾನಿಯಾದ ಮಗುವನ್ನು ಪಡೆದವನಿಗೆ ಅವನಿಂದ ಆನಂದವಾಗುವುದು. [QE]
25. [QS]ನಿನ್ನ ತಂದೆತಾಯಿಗಳು ಸಂತೋಷಿಸುವರು; [QE][QS2]ನಿನ್ನ ಹೆತ್ತ ತಾಯಿ ಆನಂದಿಸುವಳು. [QE]
26. {#2ಹದಿನೆಂಟನೆಯ ಹೇಳಿಕೆ } [QS]ಮಗನೇ, ನಿನ್ನ ಮನಸ್ಸನ್ನು ನನಗೆ ಕೊಡು; [QE][QS2]ನನ್ನ ಮಾರ್ಗಗಳನ್ನು ಅನುಸರಿಸುವಲ್ಲಿ ನಿಮ್ಮ ಕಣ್ಣುಗಳು ಆನಂದಿಸಲಿ. [QE]
27. [QS]ವೇಶ್ಯೆಯು ಆಳವಾದ ಕುಣಿ; [QE][QS2]ವ್ಯಭಿಚಾರಿಣಿಯು ಇಕ್ಕಟ್ಟಾದ ಗುಂಡಿ. [QE]
28. [QS]ಕಳ್ಳನಂತೆ ಅವಳು ಹೊಂಚು ಹಾಕಿ [QE][QS2]ಮನುಷ್ಯರಲ್ಲಿ ದ್ರೋಹಿಗಳನ್ನು ಹೆಚ್ಚಿಸುತ್ತಾಳೆ. [QE]
29. {#2ಹತ್ತೊಂಬತ್ತನೆಯ ಹೇಳಿಕೆ } [QS]ಯಾರಿಗೆ ಕಷ್ಟ? ಯಾರಿಗೆ ದುಃಖ? [QE][QS2]ಯಾರಿಗೆ ಕಲಹಗಳು? ಯಾರು ಗೊಣಗುಟ್ಟುತ್ತಾರೆ? [QE][QS2]ಯಾರು ಸುಮ್ಮಸುಮ್ಮನೆ ಗಾಯಪಡುತ್ತಾರೆ? ಯಾರಿಗೆ ಕೆಂಪೇರಿದ ಕಣ್ಣುಗಳು? [QE]
30. [QS]ಮದ್ಯಪಾನದಲ್ಲಿ ಆಸಕ್ತರಾಗಿ, [QE][QS2]ಮಿಶ್ರ ಮದ್ಯಪಾನವನ್ನು ಕುಡಿಯ ಬಯಸುವವರೇ ಅಲ್ಲವೇ! [QE]
31. [QS]ದ್ರಾಕ್ಷಾರಸವು ಕೆಂಪಾಗಿದ್ದು, [QE][QS2]ಪಾತ್ರೆಯಲ್ಲಿ ಥಳಥಳಿಸುತ್ತಾ ಚಲಿಸಿದರೆ, [QE][QS2]ಅದನ್ನು ನೋಡಬೇಡ. [QE]
32. [QS]ಕೊನೆಗೆ ಅದು ಹಾವಿನಂತೆ ಕಚ್ಚುವುದು [QE][QS2]ಮತ್ತು ಸರ್ಪದಂತೆ ವಿಷವುಕ್ಕಿಸುವುದು. [QE]
33. [QS]ನಿಮ್ಮ ಕಣ್ಣುಗಳು ವಿಚಿತ್ರ ದೃಶ್ಯಗಳನ್ನು ನೋಡುತ್ತವೆ. [QE][QS2]ನಿಮ್ಮ ಮನಸ್ಸು ಗೊಂದಲಮಯ ವಿಷಯಗಳನ್ನು ಕಲ್ಪಿಸುತ್ತದೆ. [QE]
34. [QS]ನೀನು ಸಮುದ್ರದ ಮಧ್ಯದಲ್ಲಿ ಮಲಗಿರುವವನಂತೆ [QE][QS2]ಇಲ್ಲವೆ ಹಡಗಿನ ಕಂಬದ ತುದಿಯಲ್ಲಿ ಇರುವಿ. [QE]
35. [QS]“ಜನರು ನನ್ನನ್ನು ಹೊಡೆದರೂ [QE][QS2]ನನಗೆ ನೋವಾಗಲಿಲ್ಲ; [QE][QS]ನಾನು ಎಚ್ಚರವಾಗುವುದು ಯಾವಾಗ? [QE][QS2]ಪುನಃ ನಾನು ಅದನ್ನು ಕುಡಿದೇನು?” ಎಂದುಕೊಳ್ಳುವೆ. [QE]