1. [QS]ಜ್ಞಾನಿಯಾದ ಸ್ತ್ರೀಯು ತನ್ನ ಮನೆಯನ್ನು ಕಟ್ಟುತ್ತಾಳೆ; [QE][QS2]ಬುದ್ಧಿಹೀನಳೋ ತನ್ನ ಕೈಗಳಿಂದಲೇ ಅದನ್ನು ಕಿತ್ತುಹಾಕುತ್ತಾಳೆ. [QE][PBR]
2. [QS]ತನ್ನ ಯಥಾರ್ಥತೆಯಲ್ಲಿ ನಡೆಯುವವನು ಯೆಹೋವ ದೇವರಿಗೆ ಭಯಪಡುತ್ತಾನೆ, [QE][QS2]ಆದರೆ ಅವರನ್ನು ತಿರಸ್ಕರಿಸುವವರು ತಮ್ಮ ಮಾರ್ಗಗಳಲ್ಲಿ ಮೋಸ ಹೋಗುತ್ತಾರೆ. [QE][PBR]
3. [QS]ಬುದ್ಧಿಹೀನನ ಬಾಯಿಯಲ್ಲಿ ಗರ್ವದ ಅಂಕುರವಿದೆ, [QE][QS2]ಆದರೆ ಜ್ಞಾನವಂತರ ತುಟಿಗಳು ಅವರನ್ನು ಕಾಪಾಡುವುವು. [QE][PBR]
4. [QS]ಎತ್ತುಗಳು ಇಲ್ಲದೆ ಇರುವಲ್ಲಿ ಗೋದಲಿಯು ಶುಚಿಯಾಗಿರುತ್ತದೆ, [QE][QS2]ಆದರೆ ಎತ್ತಿನ ಬಲದಿಂದಲೇ ಬೆಳೆಯು ಹೇರಳವಾಗಿ ವೃದ್ಧಿಯಾಗುತ್ತದೆ. [QE][PBR]
5. [QS]ಪ್ರಾಮಾಣಿಕ ಸಾಕ್ಷಿಯು ಸುಳ್ಳಾಡನು, [QE][QS2]ಆದರೆ ಸುಳ್ಳುಸಾಕ್ಷಿಯು ಅಸತ್ಯವನ್ನೇ ಆಡುವನು. [QE][PBR]
6. [QS]ಅಪಹಾಸ್ಯ ಮಾಡುವವನು ಜ್ಞಾನವನ್ನು ಹುಡುಕಿದರೂ ಅದನ್ನು ಕಂಡುಕೊಳ್ಳುವುದಿಲ್ಲ, [QE][QS2]ಆದರೆ ವಿವೇಚಿಸುವವನಿಗೆ ಜ್ಞಾನವು ಸುಲಭವಾಗಿದೆ. [QE][PBR]
7. [QS]ನೀನು ಬುದ್ಧಿಹೀನನ ತುಟಿಗಳಲ್ಲಿ ಪರಿಜ್ಞಾನವನ್ನು ಕಾಣದೆ ಹೋದರೆ, [QE][QS2]ಅವನ ಬಳಿಯಿಂದ ಹೊರಟು ಹೋಗು. [QE][PBR]
8. [QS]ಜಾಣನ ಜ್ಞಾನವು ತನ್ನ ಮಾರ್ಗಗಳಿಗೆ ಆಲೋಚನೆ ನೀಡುತ್ತದೆ. [QE][QS2]ಮೂಢರ ಬುದ್ಧಿಹೀನತೆಯು ಮೋಸಕರ. [QE][PBR]
9. [QS]ಬುದ್ಧಿಹೀನರು ಪಾಪಪರಿಹಾರವನ್ನು ಅಪಹಾಸ್ಯ ಮಾಡುವರು, [QE][QS2]ಆದರೆ ನೀತಿವಂತರಿಗೆ ದಯೆಯಿದೆ. [QE][PBR]
10. [QS]ಹೃದಯಕ್ಕೆ ತನ್ನ ವ್ಯಥೆಯು ಗೊತ್ತು; [QE][QS2]ಪರನು ಅದರ ಸಂತೋಷದಲ್ಲಿ ಪಾಲಾಗುವುದಿಲ್ಲ. [QE][PBR]
11. [QS]ದುಷ್ಟರ ಮನೆಯು ನಾಶವಾಗುವುದು, [QE][QS2]ಆದರೆ ಯಥಾರ್ಥವಂತರ ಗುಡಾರವು ಏಳಿಗೆಯಾಗುವುದು. [QE][PBR]
12. [QS]ಮನುಷ್ಯ ದೃಷ್ಟಿಗೆ ಸರಿ ತೋರುವ ಒಂದು ಮಾರ್ಗವಿದೆ, [QE][QS2]ಆದರೆ ಅದರ ಅಂತ್ಯವು ಮರಣದ ಮಾರ್ಗಗಳೇ. [QE][PBR]
13. [QS]ನಗೆಯಲ್ಲಿಯೂ ಹೃದಯವು ದುಃಖದಿಂದ ಇರುವುದು, [QE][QS2]ಅದರ ಉಲ್ಲಾಸದ ಅಂತ್ಯವು ಸಂತಾಪವೇ. [QE][PBR]
14. [QS]ಭ್ರಷ್ಟನು ತನ್ನ ದುಷ್ಕರ್ಮಗಳಿಂದ ದಣಿಯನು, [QE][QS2]ಒಳ್ಳೆಯವನು ತನ್ನಲ್ಲಿ ತಾನೇ ತೃಪ್ತಿಹೊಂದುವನು. [QE][PBR]
15. [QS]ಅರಿವಿಲ್ಲದವರು ಯಾವ ಮಾತನ್ನಾದರೂ ನಂಬುತ್ತಾರೆ, [QE][QS2]ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು. [QE][PBR]
16. [QS]ಜ್ಞಾನಿಯು ಯೆಹೋವ ದೇವರಿಗೆ ಭಯಪಟ್ಟು ಕೆಟ್ಟತನದಿಂದ ದೂರ ಹೋಗುವನು, [QE][QS2]ಆದರೆ ಬುದ್ಧಿಹೀನನು ಯೋಚಿಸದೆ ಆತ್ಮವಿಶ್ವಾಸದಿಂದ ನಡೆಯುವನು. [QE][PBR]
17. [QS]ಮುಂಗೋಪಿಯು ಬುದ್ಧಿಹೀನನಾಗಿ ವರ್ತಿಸುತ್ತಾನೆ, [QE][QS2]ಜನರು ಕುಯುಕ್ತಿಯುಳ್ಳವನನ್ನು ಹಗೆ ಮಾಡುತ್ತಾರೆ. [QE][PBR]
18. [QS]ಅರಿವಿಲ್ಲದವರು ಮೂರ್ಖತನಕ್ಕೆ ಬಾಧ್ಯರಾಗುತ್ತಾರೆ, [QE][QS2]ಆದರೆ ಜಾಣರು ಪರಿಜ್ಞಾನದಿಂದ ಆವರಿಸುತ್ತಾರೆ. [QE][PBR]
19. [QS]ದುಷ್ಟರು ಒಳ್ಳೆಯವರಿಗೆ ಬಾಗುತ್ತಾರೆ, [QE][QS2]ದುಷ್ಟರು ನೀತಿವಂತರ ದ್ವಾರಗಳಲ್ಲಿ ಅಡ್ಡ ಬೀಳುತ್ತಾರೆ. [QE][PBR]
20. [QS]ಬಡವನು ಅವನ ನೆರೆಯವನಿಂದಲೇ ಕಡೆಗಣಿಸಲಾಗುವನು; [QE][QS2]ಆದರೆ ಐಶ್ವರ್ಯವಂತನಿಗೆ ಬಹುಜನ ಮಿತ್ರರು. [QE][PBR]
21. [QS]ತನ್ನ ನೆರೆಯವನನ್ನು ಅವಮಾನ ಮಾಡುವವನು ಪಾಪಮಾಡುತ್ತಾನೆ, [QE][QS2]ಬಡವರ ಮೇಲೆ ಕನಿಕರ ತೋರಿಸುವವನು ಧನ್ಯನು. [QE][PBR]
22. [QS]ಕೆಟ್ಟದ್ದನ್ನು ಕಲ್ಪಿಸುವವರು ದಾರಿ ತಪ್ಪುವುದಿಲ್ಲವೇ? [QE][QS2]ಆದರೆ ಒಳ್ಳೆಯದನ್ನು ಕಲ್ಪಿಸುವವರಿಗೆ ಪ್ರೀತಿ ಸತ್ಯತೆಯು ಇರುವುವು. [QE][PBR]
23. [QS]ಎಲ್ಲಾ ಪ್ರಯಾಸದಲ್ಲಿ ಲಾಭವಿದೆ, [QE][QS2]ಹರಟೆ ಮಾತು ಬಡತನಕ್ಕೆ ಮಾತ್ರ ದಾರಿ. [QE][PBR]
24. [QS]ಜ್ಞಾನವಂತರ ಕಿರೀಟವೇ ಅವರ ಸಂಪತ್ತು, [QE][QS2]ಆದರೆ ಬುದ್ಧಿಹೀನರ ಬುದ್ಧಿಹೀನತೆಯು ಅವರ ಮೂರ್ಖತನವನ್ನು ನೀಡುತ್ತದೆ. [QE][PBR]
25. [QS]ಸತ್ಯಸಾಕ್ಷಿಯು ಪ್ರಾಣಗಳನ್ನು ರಕ್ಷಿಸುತ್ತಾನೆ, [QE][QS2]ಸುಳ್ಳುಸಾಕ್ಷಿಯು ಮೋಸಗಾರನು. [QE][PBR]
26. [QS]ಯೆಹೋವ ದೇವರಿಗೆ ಭಯಪಡುವವನು ಭದ್ರಕೋಟೆಯನ್ನು ಹೊಂದಿದ್ದಾನೆ. [QE][QS2]ಆತನ ಮಕ್ಕಳಿಗೆ ಆಶ್ರಯವು ಇರುವುದು. [QE][PBR]
27. [QS]ಯೆಹೋವ ದೇವರ ಭಯವು ಜೀವದ ಬುಗ್ಗೆಯಾಗಿದೆ. [QE][QS2]ಅದು ಮನುಷ್ಯನನ್ನು ಮರಣದ ಪಾಶಗಳಿಂದ ತಿರುಗಿಸುತ್ತದೆ. [QE][PBR]
28. [QS]ಜನಸಮೂಹದಲ್ಲಿ ಅರಸನ ಘನತೆ ಇದೆ. [QE][QS2]ಆದರೆ ಜನರ ಕೊರತೆಯಲ್ಲಿ ರಾಜಪುತ್ರನ ನಾಶ. [QE][PBR]
29. [QS]ತಾಳ್ಮೆಯುಳ್ಳವನು ಬಹು ವಿವೇಕಿ, [QE][QS2]ಮುಂಗೋಪಿಯು ಮೂರ್ಖತನವನ್ನು ಎತ್ತಿಹಿಡಿಯುವನು. [QE][PBR]
30. [QS]ಶಾಂತ ಹೃದಯವು ದೇಹಕ್ಕೆ ಜೀವ; [QE][QS2]ಆದರೆ ಮತ್ಸರವು ಎಲುಬುಗಳಿಗೆ ಕ್ಷಯ. [QE][PBR]
31. [QS]ಬಡವರನ್ನು ಹಿಂಸಿಸುವವನು, ತನ್ನ ಸೃಷ್ಟಿಕರ್ತನನ್ನು ಹೀನೈಸುವನು, [QE][QS2]ಆದರೆ ಬಡವರನ್ನು ಕನಿಕರಿಸುವವನು ದೇವರನ್ನು ಸನ್ಮಾನಿಸುವನು. [QE][PBR]
32. [QS]ದುಷ್ಟನು ತನ್ನ ಆಪತ್ಕಾಲದಲ್ಲಿ ಹಾಳಾಗುತ್ತಾನೆ, [QE][QS2]ಆದರೆ ನೀತಿವಂತನಿಗೆ ಮರಣದಲ್ಲಿಯೂ ಆಶ್ರಯ ಇದೆ. [QE][PBR]
33. [QS]ತಿಳುವಳಿಕೆಯುಳ್ಳವನ ಹೃದಯದಲ್ಲಿ ಜ್ಞಾನವು ನೆಲೆಯಾಗಿದೆ, [QE][QS2]ಆದರೆ ಮೂರ್ಖರಲ್ಲಿ ಜ್ಞಾನವು ಕಂಡುಬರುವುದಿಲ್ಲ. [QE][PBR]
34. [QS]ನೀತಿಯು ಜನಾಂಗವನ್ನು ವೃದ್ಧಿಮಾಡುತ್ತದೆ; [QE][QS2]ಆದರೆ ಯಾವ ಪ್ರಜೆಗಾದರೂ ಪಾಪವು ಅವಮಾನವಾಗಿದೆ. [QE][PBR]
35. [QS]ಜ್ಞಾನವುಳ್ಳ ಸೇವಕನ ಕಡೆಗೆ ಅರಸನ ದಯೆ ಇದೆ; [QE][QS2]ಆದರೆ ಮಾನಗೇಡಿ ಸೇವಕನ ಮೇಲೆ ಅರಸನ ಕೋಪ ಎರಗುತ್ತದೆ. [QE][PBR]