ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಓಬದ್ಯ
1. {#1ಓಬದ್ಯನ ದರ್ಶನ } [PS]ಓಬದ್ಯನ ದರ್ಶನವು. [PE][PBR] [PBR] [PS]ಸಾರ್ವಭೌಮ ಯೆಹೋವ ದೇವರು ಎದೋಮನ್ನು ಕುರಿತು ಹೀಗೆ ಹೇಳುತ್ತಾರೆ: [PE][QS]ಯೆಹೋವ ದೇವರಿಂದ ಸುದ್ದಿಯನ್ನು ಕೇಳಿದ್ದೇವೆ. [QE][QS2]ಅವರು ದೂತನ ಮೂಲಕ ಜನಾಂಗಗಳಿಗೆ ಹೀಗೆ ಹೇಳಿ ಕಳುಹಿಸಿದ್ದಾರೆ: [QE][QS]“ಏಳಿರಿ, ಅದಕ್ಕೆ ವಿರೋಧವಾಗಿ ಯುದ್ಧಕ್ಕೆ ಹೋಗೋಣ!” [QE][PBR]
2. [QS]“ಇಗೋ, ನಿನ್ನನ್ನು ಜನಾಂಗಗಳಲ್ಲಿ ಅತ್ಯಲ್ಪನನ್ನಾಗಿ ಮಾಡಿದ್ದೇನೆ. [QE][QS2]ನೀನು ಬಹು ತಾತ್ಸಾರಕ್ಕೆ ಗುರಿಯಾಗುವೆ. [QE]
3. [QS]ಬಂಡೆಯ ಬಿರುಕುಗಳಲ್ಲಿ ವಾಸಮಾಡುವವನೇ, [QE][QS2]ಉನ್ನತದಲ್ಲಿ ನಿವಾಸಮಾಡಿಕೊಂಡವನೇ, [QE][QS2]‘ಯಾರು ನನ್ನನ್ನು ನೆಲಕ್ಕೆ ಇಳಿಸಬಲ್ಲವರು?’ [QE][QS]ಎಂದು ತನ್ನ ಹೃದಯದಲ್ಲಿ ಅನ್ನುವವನೇ, [QE][QS2]ನಿನ್ನ ಹೃದಯದ ಗರ್ವವು ನಿನ್ನನ್ನು ಮೋಸಗೊಳಿಸಿದೆ. [QE]
4. [QS]ನೀನು ಹದ್ದಿನಂತೆ ಏರಿಕೊಂಡು [QE][QS2]ನಿನ್ನ ಗೂಡನ್ನು ನಕ್ಷತ್ರಗಳಲ್ಲಿ ಇಟ್ಟರೂ [QE][QS2]ಅಲ್ಲಿಂದ ನಿನ್ನನ್ನು ಇಳಿಸುವೆನು,” [QE][QS2]ಎಂದು ಯೆಹೋವ ದೇವರು ಹೇಳುತ್ತಾರೆ. [QE]
5. [QS]“ನಿನ್ನಲ್ಲಿ ಕಳ್ಳರಾಗಲಿ, [QE][QS2]ರಾತ್ರಿಯಲ್ಲಿ ಪಂಜುಗಳ್ಳರಾಗಲಿ ಬಂದರೆ [QE][QS]ಅವರು ತಮಗೆ ಬೇಕಾದಷ್ಟನ್ನು ಮಾತ್ರ ದೋಚಿಕೊಂಡು ಹೋಗುತ್ತಿದ್ದರಲ್ಲವೆ? [QE][QS]ದ್ರಾಕ್ಷಿ ಕೀಳುವವರು ನಿಮ್ಮ ಬಳಿಗೆ ಬಂದರೆ [QE][QS2]ಸ್ವಲ್ಪ ದ್ರಾಕ್ಷಿಯನ್ನು ಬಿಡುವುದಿಲ್ಲವೇ? [QE]
6. [QS]ಆದರೆ ಏಸಾವಿನ ಆಸ್ತಿಯು ಸಂಪೂರ್ಣ ನಾಶವಾಗಿ [QE][QS2]ಅದರ ನಿಗೂಢ ನಿಕ್ಷೇಪಗಳು ಸೂರೆಯಾಗಿವೆ. [QE]
7. [QS]ನಿನ್ನ ಸಂಗಡ ಒಡಂಬಟ್ಟ ಮನುಷ್ಯರೆಲ್ಲರು ನಿನ್ನನ್ನು ಮೇರೆಯವರೆಗೂ ತಂದಿದ್ದಾರೆ. [QE][QS2]ನಿನ್ನ ಸಂಗಡ ಸಮಾಧಾನವಾಗಿದ್ದ ಮನುಷ್ಯರು [QE][QS2]ನಿನ್ನನ್ನು ಮೋಸಮಾಡಿ ನಿನ್ನ ಮೇಲೆ ಜಯ ಹೊಂದಿದ್ದಾರೆ. [QE][QS]ನಿನ್ನ ರೊಟ್ಟಿಯನ್ನು ತಿನ್ನುವವರು ನಿನ್ನ ಕೆಳಗೆ ಬೋನು ಇಟ್ಟಿದ್ದಾರೆ. [QE][QS2]ಆದರೆ ನೀನು ಅದನ್ನು ತಿಳಿದುಕೊಳ್ಳಲಾರೆ. [QE][PBR]
8. [QS]“ಯೆಹೋವ ದೇವರು ಹೀಗೆ ಹೇಳುತ್ತಾರೆ, [QE][QS2]‘ಆ ದಿವಸದಲ್ಲಿ,’ ಎದೋಮಿನೊಳಗಿಂದ ಜ್ಞಾನಿಗಳನ್ನೂ [QE][QS2]ಏಸಾವನ ಬೆಟ್ಟದೊಳಗಿಂದ ವಿವೇಕವನ್ನೂ ನಾಶಮಾಡದಿರುವೆನೇ? [QE]
9. [QS]ಸರ್ವರು ಸಂಹಾರದಿಂದ [QE][QS2]ಏಸಾವನ ಬೆಟ್ಟದೊಳಗಿಂದ ನಾಶವಾಗುವ ಹಾಗೆ ತೇಮಾನೇ, [QE][QS2]ನಿನ್ನ ಪರಾಕ್ರಮಶಾಲಿಗಳು ಗಾಬರಿಪಡುವರು. [QE]
10. [QS]ನಿನ್ನ ತಮ್ಮನಾದ ಯಾಕೋಬನಿಗೆ ವಿರೋಧವಾದ ನಿನ್ನ ಹಿಂಸಾಕೃತ್ಯಗಳ ನಿಮಿತ್ತ [QE][QS2]ನಾಚಿಕೆಯು ನಿನ್ನನ್ನು ಮುಚ್ಚುವುದು. [QE][QS2]ನೀನು ಎಂದೆಂದಿಗೂ ನಾಶವಾಗಿ ಹೋಗುವೆ. [QE]
11. [QS]ನೀನು ಪ್ರತ್ಯೇಕವಾಗಿ ಎದುರು ನಿಂತ ದಿವಸದಲ್ಲಿ [QE][QS2]ಪರರು ಅವನ ಸೊತ್ತನ್ನು ತೆಗೆದುಕೊಂಡು ಹೋದ ದಿವಸದಲ್ಲಿ [QE][QS]ಪರಕೀಯರು ಅವನ ಬಾಗಿಲುಗಳಲ್ಲಿ ಪ್ರವೇಶಿಸಿ, [QE][QS2]ಯೆರೂಸಲೇಮಿನ ಸೊತ್ತಿಗಾಗಿ ಚೀಟು ಹಾಕಿದಾಗ [QE][QS2]ನೀನೂ ಅವರಲ್ಲಿ ಒಬ್ಬನ ಹಾಗಿದ್ದೆ. [QE]
12. [QS]ನಿನ್ನ ಸಹೋದರನ ವಿಪತ್ತಿನ ದಿನದಲ್ಲಿ [QE][QS2]ನೀನು ಅವನನ್ನು ಕೀಳು ದೃಷ್ಟಿಯಿಂದ ನೋಡಬಾರದಾಗಿತ್ತು. [QE][QS]ಯೆಹೂದದ ಜನರು ನಾಶವಾದಾಗ [QE][QS2]ನೀನು ಸಂತೋಷಪಡಬಾರದಿತ್ತು. [QE][QS]ಅವರ ಕಷ್ಟದ ದಿವಸದಲ್ಲಿ [QE][QS2]ಅಹಂಕಾರವಾಗಿ ಮಾತನಾಡಬಾರದಾಗಿತ್ತು; [QE]
13. [QS]ನನ್ನ ಜನರ ಆಪತ್ತಿನ ದಿವಸದಲ್ಲಿ ಅವರ ದ್ವಾರಗಳ ಮೂಲಕ ಪ್ರವೇಶಿಸಬಾರದಿತ್ತು. [QE][QS2]ಹೌದು, ನೀನು ಅವರ ಆಪತ್ತಿನ ದಿವಸದಲ್ಲಿ [QE][QS]ಅವರನ್ನು ಕೀಳು ದೃಷ್ಟಿಯಿಂದ ನೋಡಬಾರದಾಗಿತ್ತು. [QE][QS2]ಅವರ ಆಪತ್ತಿನ ದಿವಸದಲ್ಲಿ [QE][QS2]ಅವರ ಆಸ್ತಿಯ ಮೇಲೆ ಕೈ ಹಾಕಬಾರದಾಗಿತ್ತು. [QE]
14. [QS]ಅವರಲ್ಲಿ ಓಡಿಹೋದವರನ್ನು ಕಡಿದುಬಿಡುವುದಕ್ಕೆ [QE][QS2]ನೀನು ಕೂಡುವ ದಾರಿಯಲ್ಲಿ ನಿಲ್ಲಬಾರದಾಗಿತ್ತು. [QE][QS]ಕಷ್ಟದ ದಿವಸದಲ್ಲಿ [QE][QS2]ಅವರಲ್ಲಿ ಉಳಿದುಕೊಂಡವರನ್ನು ಹಿಡಿದುಕೊಡಬಾರದಾಗಿತ್ತು. [QE][PBR]
15. [QS]“ಯೆಹೋವ ದೇವರ ದಿವಸವು [QE][QS2]ಎಲ್ಲಾ ಜನಾಂಗಗಳ ಮೇಲೆ ಸಮೀಪವಾಗಿದೆ. [QE][QS]ನೀನು ಮಾಡಿದ ಹಾಗೆಯೇ ನಿನಗೂ ಮಾಡಲಾಗುವುದು. [QE][QS2]ನಿನ್ನ ಕಾರ್ಯಗಳು ನಿನ್ನ ತಲೆಯ ಮೇಲೆ ತಿರುಗುವುವು. [QE]
16. [QS]ನೀವು ನನ್ನ ಪರಿಶುದ್ಧ ಪರ್ವತದ ಮೇಲೆ ಕುಡಿದ ಹಾಗೆಯೇ, [QE][QS2]ಜನಾಂಗಗಳೆಲ್ಲಾ ನಿತ್ಯವಾಗಿ ಕುಡಿಯುವುವು. [QE][QS]ಹೌದು, ಕುಡಿದು ಎಂದೂ ಇಲ್ಲದವರ ಹಾಗೆ ಆಗುವುದು. [QE]
17. [QS]ಆದರೆ ಚೀಯೋನ್ ಪರ್ವತದಲ್ಲಿ ಬಿಡುಗಡೆ ಇರುವುದು. [QE][QS2]ಅದು ಪರಿಶುದ್ಧವಾಗಿರುವುದು. [QE][QS2]ಯಾಕೋಬನ ಮನೆತನದವರು ತಮ್ಮ ಸೊತ್ತನ್ನು ಮರಳಿ ಅನುಭವಿಸುವರು. [QE]
18. [QS]ಯಾಕೋಬನ ಮನೆತನದವರು ಬೆಂಕಿಯಾಗಿಯೂ [QE][QS2]ಯೋಸೇಫನ ಮನೆತನದವರು ಜ್ವಾಲೆಯಾಗಿಯೂ ಇರುವರು; [QE][QS]ಏಸಾವನ ಮನೆತನದವರು ಕೂಳೆಯಂತೆ ಧಗಧಗನೆ ದಹಿಸಿ ನಾಶವಾಗುವರು. [QE][QS2]ಏಸಾವನ ಮನೆತನದವರಲ್ಲಿ ಯಾರೂ ಉಳಿಯರು.” [QE][QS2]ಯೆಹೋವ ದೇವರೇ ಇದನ್ನು ನುಡಿದಿದ್ದಾರೆ. [QE][PBR]
19. [QS]ದಕ್ಷಿಣದವರು ಏಸಾವನ ಬೆಟ್ಟವನ್ನೂ ಬಯಲಿನವರು [QE][QS2]ಫಿಲಿಷ್ಟಿಯರ ದೇಶವನ್ನೂ ಸ್ವತಂತ್ರಿಸಿಕೊಳ್ಳುವರು. [QE][QS]ಎಫ್ರಾಯೀಮಿನ ಹೊಲಗಳನ್ನು ಸಮಾರ್ಯದ ಹೊಲಗಳನ್ನು ಸಹ ಸ್ವಾಧೀನಮಾಡಿಕೊಳ್ಳುವರು [QE][QS2]ಬೆನ್ಯಾಮೀನನು ಗಿಲ್ಯಾದನ್ನು ವಶಪಡಿಸಿಕೊಳ್ಳುವನು. [QE]
20. [QS]ಚಾರೆಪತಿನವರೆಗೂ ಇರುವ ಪ್ರದೇಶವನ್ನು [QE][QS2]ಕಾನಾನ್ಯರಲ್ಲಿರುವ ಇಸ್ರಾಯೇಲ್ ಸೆರೆವಾಸಿಗಳು ವಶಪಡಿಸಿಕೊಳ್ಳುವರು. [QE][QS]ಸೆಫಾರದಿನಲ್ಲಿರುವ ಯೆರೂಸಲೇಮಿನ ಸೆರೆಯವರು [QE][QS2]ದಕ್ಷಿಣದ ಪಟ್ಟಣಗಳನ್ನು ಸ್ವಾಧೀನಮಾಡಿಕೊಳ್ಳುವರು. [QE]
21. [QS]ರಕ್ಷಕನು ಏಸಾವಿನ ಪರ್ವತವನ್ನು [QE][QS2]ಆಳಲು ಚೀಯೋನ್ ಪರ್ವತವನ್ನು ಏರುವನು. [QE][QS2]ಆಗ ರಾಜ್ಯವು ಯೆಹೋವ ದೇವರದಾಗಿರುವುದು. [QE]
ಒಟ್ಟು 1 ಅಧ್ಯಾಯಗಳು
ಓಬದ್ಯನ ದರ್ಶನ 1 ಓಬದ್ಯನ ದರ್ಶನವು. ಸಾರ್ವಭೌಮ ಯೆಹೋವ ದೇವರು ಎದೋಮನ್ನು ಕುರಿತು ಹೀಗೆ ಹೇಳುತ್ತಾರೆ: ಯೆಹೋವ ದೇವರಿಂದ ಸುದ್ದಿಯನ್ನು ಕೇಳಿದ್ದೇವೆ. ಅವರು ದೂತನ ಮೂಲಕ ಜನಾಂಗಗಳಿಗೆ ಹೀಗೆ ಹೇಳಿ ಕಳುಹಿಸಿದ್ದಾರೆ: “ಏಳಿರಿ, ಅದಕ್ಕೆ ವಿರೋಧವಾಗಿ ಯುದ್ಧಕ್ಕೆ ಹೋಗೋಣ!” 2 “ಇಗೋ, ನಿನ್ನನ್ನು ಜನಾಂಗಗಳಲ್ಲಿ ಅತ್ಯಲ್ಪನನ್ನಾಗಿ ಮಾಡಿದ್ದೇನೆ. ನೀನು ಬಹು ತಾತ್ಸಾರಕ್ಕೆ ಗುರಿಯಾಗುವೆ. 3 ಬಂಡೆಯ ಬಿರುಕುಗಳಲ್ಲಿ ವಾಸಮಾಡುವವನೇ, ಉನ್ನತದಲ್ಲಿ ನಿವಾಸಮಾಡಿಕೊಂಡವನೇ, ‘ಯಾರು ನನ್ನನ್ನು ನೆಲಕ್ಕೆ ಇಳಿಸಬಲ್ಲವರು?’ ಎಂದು ತನ್ನ ಹೃದಯದಲ್ಲಿ ಅನ್ನುವವನೇ, ನಿನ್ನ ಹೃದಯದ ಗರ್ವವು ನಿನ್ನನ್ನು ಮೋಸಗೊಳಿಸಿದೆ. 4 ನೀನು ಹದ್ದಿನಂತೆ ಏರಿಕೊಂಡು ನಿನ್ನ ಗೂಡನ್ನು ನಕ್ಷತ್ರಗಳಲ್ಲಿ ಇಟ್ಟರೂ ಅಲ್ಲಿಂದ ನಿನ್ನನ್ನು ಇಳಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. 5 “ನಿನ್ನಲ್ಲಿ ಕಳ್ಳರಾಗಲಿ, ರಾತ್ರಿಯಲ್ಲಿ ಪಂಜುಗಳ್ಳರಾಗಲಿ ಬಂದರೆ ಅವರು ತಮಗೆ ಬೇಕಾದಷ್ಟನ್ನು ಮಾತ್ರ ದೋಚಿಕೊಂಡು ಹೋಗುತ್ತಿದ್ದರಲ್ಲವೆ? ದ್ರಾಕ್ಷಿ ಕೀಳುವವರು ನಿಮ್ಮ ಬಳಿಗೆ ಬಂದರೆ ಸ್ವಲ್ಪ ದ್ರಾಕ್ಷಿಯನ್ನು ಬಿಡುವುದಿಲ್ಲವೇ? 6 ಆದರೆ ಏಸಾವಿನ ಆಸ್ತಿಯು ಸಂಪೂರ್ಣ ನಾಶವಾಗಿ ಅದರ ನಿಗೂಢ ನಿಕ್ಷೇಪಗಳು ಸೂರೆಯಾಗಿವೆ. 7 ನಿನ್ನ ಸಂಗಡ ಒಡಂಬಟ್ಟ ಮನುಷ್ಯರೆಲ್ಲರು ನಿನ್ನನ್ನು ಮೇರೆಯವರೆಗೂ ತಂದಿದ್ದಾರೆ. ನಿನ್ನ ಸಂಗಡ ಸಮಾಧಾನವಾಗಿದ್ದ ಮನುಷ್ಯರು ನಿನ್ನನ್ನು ಮೋಸಮಾಡಿ ನಿನ್ನ ಮೇಲೆ ಜಯ ಹೊಂದಿದ್ದಾರೆ. ನಿನ್ನ ರೊಟ್ಟಿಯನ್ನು ತಿನ್ನುವವರು ನಿನ್ನ ಕೆಳಗೆ ಬೋನು ಇಟ್ಟಿದ್ದಾರೆ. ಆದರೆ ನೀನು ಅದನ್ನು ತಿಳಿದುಕೊಳ್ಳಲಾರೆ. 8 “ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ಆ ದಿವಸದಲ್ಲಿ,’ ಎದೋಮಿನೊಳಗಿಂದ ಜ್ಞಾನಿಗಳನ್ನೂ ಏಸಾವನ ಬೆಟ್ಟದೊಳಗಿಂದ ವಿವೇಕವನ್ನೂ ನಾಶಮಾಡದಿರುವೆನೇ? 9 ಸರ್ವರು ಸಂಹಾರದಿಂದ ಏಸಾವನ ಬೆಟ್ಟದೊಳಗಿಂದ ನಾಶವಾಗುವ ಹಾಗೆ ತೇಮಾನೇ, ನಿನ್ನ ಪರಾಕ್ರಮಶಾಲಿಗಳು ಗಾಬರಿಪಡುವರು. 10 ನಿನ್ನ ತಮ್ಮನಾದ ಯಾಕೋಬನಿಗೆ ವಿರೋಧವಾದ ನಿನ್ನ ಹಿಂಸಾಕೃತ್ಯಗಳ ನಿಮಿತ್ತ ನಾಚಿಕೆಯು ನಿನ್ನನ್ನು ಮುಚ್ಚುವುದು. ನೀನು ಎಂದೆಂದಿಗೂ ನಾಶವಾಗಿ ಹೋಗುವೆ. 11 ನೀನು ಪ್ರತ್ಯೇಕವಾಗಿ ಎದುರು ನಿಂತ ದಿವಸದಲ್ಲಿ ಪರರು ಅವನ ಸೊತ್ತನ್ನು ತೆಗೆದುಕೊಂಡು ಹೋದ ದಿವಸದಲ್ಲಿ ಪರಕೀಯರು ಅವನ ಬಾಗಿಲುಗಳಲ್ಲಿ ಪ್ರವೇಶಿಸಿ, ಯೆರೂಸಲೇಮಿನ ಸೊತ್ತಿಗಾಗಿ ಚೀಟು ಹಾಕಿದಾಗ ನೀನೂ ಅವರಲ್ಲಿ ಒಬ್ಬನ ಹಾಗಿದ್ದೆ. 12 ನಿನ್ನ ಸಹೋದರನ ವಿಪತ್ತಿನ ದಿನದಲ್ಲಿ ನೀನು ಅವನನ್ನು ಕೀಳು ದೃಷ್ಟಿಯಿಂದ ನೋಡಬಾರದಾಗಿತ್ತು. ಯೆಹೂದದ ಜನರು ನಾಶವಾದಾಗ ನೀನು ಸಂತೋಷಪಡಬಾರದಿತ್ತು. ಅವರ ಕಷ್ಟದ ದಿವಸದಲ್ಲಿ ಅಹಂಕಾರವಾಗಿ ಮಾತನಾಡಬಾರದಾಗಿತ್ತು; 13 ನನ್ನ ಜನರ ಆಪತ್ತಿನ ದಿವಸದಲ್ಲಿ ಅವರ ದ್ವಾರಗಳ ಮೂಲಕ ಪ್ರವೇಶಿಸಬಾರದಿತ್ತು. ಹೌದು, ನೀನು ಅವರ ಆಪತ್ತಿನ ದಿವಸದಲ್ಲಿ ಅವರನ್ನು ಕೀಳು ದೃಷ್ಟಿಯಿಂದ ನೋಡಬಾರದಾಗಿತ್ತು. ಅವರ ಆಪತ್ತಿನ ದಿವಸದಲ್ಲಿ ಅವರ ಆಸ್ತಿಯ ಮೇಲೆ ಕೈ ಹಾಕಬಾರದಾಗಿತ್ತು. 14 ಅವರಲ್ಲಿ ಓಡಿಹೋದವರನ್ನು ಕಡಿದುಬಿಡುವುದಕ್ಕೆ ನೀನು ಕೂಡುವ ದಾರಿಯಲ್ಲಿ ನಿಲ್ಲಬಾರದಾಗಿತ್ತು. ಕಷ್ಟದ ದಿವಸದಲ್ಲಿ ಅವರಲ್ಲಿ ಉಳಿದುಕೊಂಡವರನ್ನು ಹಿಡಿದುಕೊಡಬಾರದಾಗಿತ್ತು. 15 “ಯೆಹೋವ ದೇವರ ದಿವಸವು ಎಲ್ಲಾ ಜನಾಂಗಗಳ ಮೇಲೆ ಸಮೀಪವಾಗಿದೆ. ನೀನು ಮಾಡಿದ ಹಾಗೆಯೇ ನಿನಗೂ ಮಾಡಲಾಗುವುದು. ನಿನ್ನ ಕಾರ್ಯಗಳು ನಿನ್ನ ತಲೆಯ ಮೇಲೆ ತಿರುಗುವುವು. 16 ನೀವು ನನ್ನ ಪರಿಶುದ್ಧ ಪರ್ವತದ ಮೇಲೆ ಕುಡಿದ ಹಾಗೆಯೇ, ಜನಾಂಗಗಳೆಲ್ಲಾ ನಿತ್ಯವಾಗಿ ಕುಡಿಯುವುವು. ಹೌದು, ಕುಡಿದು ಎಂದೂ ಇಲ್ಲದವರ ಹಾಗೆ ಆಗುವುದು. 17 ಆದರೆ ಚೀಯೋನ್ ಪರ್ವತದಲ್ಲಿ ಬಿಡುಗಡೆ ಇರುವುದು. ಅದು ಪರಿಶುದ್ಧವಾಗಿರುವುದು. ಯಾಕೋಬನ ಮನೆತನದವರು ತಮ್ಮ ಸೊತ್ತನ್ನು ಮರಳಿ ಅನುಭವಿಸುವರು. 18 ಯಾಕೋಬನ ಮನೆತನದವರು ಬೆಂಕಿಯಾಗಿಯೂ ಯೋಸೇಫನ ಮನೆತನದವರು ಜ್ವಾಲೆಯಾಗಿಯೂ ಇರುವರು; ಏಸಾವನ ಮನೆತನದವರು ಕೂಳೆಯಂತೆ ಧಗಧಗನೆ ದಹಿಸಿ ನಾಶವಾಗುವರು. ಏಸಾವನ ಮನೆತನದವರಲ್ಲಿ ಯಾರೂ ಉಳಿಯರು.” ಯೆಹೋವ ದೇವರೇ ಇದನ್ನು ನುಡಿದಿದ್ದಾರೆ. 19 ದಕ್ಷಿಣದವರು ಏಸಾವನ ಬೆಟ್ಟವನ್ನೂ ಬಯಲಿನವರು ಫಿಲಿಷ್ಟಿಯರ ದೇಶವನ್ನೂ ಸ್ವತಂತ್ರಿಸಿಕೊಳ್ಳುವರು. ಎಫ್ರಾಯೀಮಿನ ಹೊಲಗಳನ್ನು ಸಮಾರ್ಯದ ಹೊಲಗಳನ್ನು ಸಹ ಸ್ವಾಧೀನಮಾಡಿಕೊಳ್ಳುವರು ಬೆನ್ಯಾಮೀನನು ಗಿಲ್ಯಾದನ್ನು ವಶಪಡಿಸಿಕೊಳ್ಳುವನು. 20 ಚಾರೆಪತಿನವರೆಗೂ ಇರುವ ಪ್ರದೇಶವನ್ನು ಕಾನಾನ್ಯರಲ್ಲಿರುವ ಇಸ್ರಾಯೇಲ್ ಸೆರೆವಾಸಿಗಳು ವಶಪಡಿಸಿಕೊಳ್ಳುವರು. ಸೆಫಾರದಿನಲ್ಲಿರುವ ಯೆರೂಸಲೇಮಿನ ಸೆರೆಯವರು ದಕ್ಷಿಣದ ಪಟ್ಟಣಗಳನ್ನು ಸ್ವಾಧೀನಮಾಡಿಕೊಳ್ಳುವರು. 21 ರಕ್ಷಕನು ಏಸಾವಿನ ಪರ್ವತವನ್ನು ಆಳಲು ಚೀಯೋನ್ ಪರ್ವತವನ್ನು ಏರುವನು. ಆಗ ರಾಜ್ಯವು ಯೆಹೋವ ದೇವರದಾಗಿರುವುದು.
ಒಟ್ಟು 1 ಅಧ್ಯಾಯಗಳು
Common Bible Languages
West Indian Languages
×

Alert

×

Kannada Letters Keypad References