ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಅರಣ್ಯಕಾಂಡ
1. {#1ನಾಜೀರ ವ್ರತ } [PS]ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ,
2. “ನೀನು ಇಸ್ರಾಯೇಲರ ಸಂಗಡ ಮಾತನಾಡಿ ಹೇಳಬೇಕಾದದ್ದೇನೆಂದರೆ: ‘ಪುರುಷನಾದರೂ, ಸ್ತ್ರೀಯಾದರೂ ಯೆಹೋವ ದೇವರಿಗೆ ಪ್ರತ್ಯೇಕಿಸಿಕೊಳ್ಳುವ ಹಾಗೆ ನಾಜೀರ ವ್ರತ ಕೈಗೊಂಡರೆ,
3. ದ್ರಾಕ್ಷಾರಸಕ್ಕೂ ಮದ್ಯಪಾನಕ್ಕೂ ದೂರವಾಗಿದ್ದು, ದ್ರಾಕ್ಷಾರಸದ ಹುಳಿಯನ್ನೂ ಮದ್ಯಪಾನದ ಹುಳಿಯನ್ನೂ ಕುಡಿಯದೆ, ದ್ರಾಕ್ಷಿಯಿಂದ ಮಾಡಿದ ಯಾವ ಪಾನವನ್ನಾದರೂ ಕುಡಿಯದೆ ಹಸಿಯದಾಗಲಿ, ಒಣಗಿದ್ದಾಗಲಿ ದ್ರಾಕ್ಷಿಹಣ್ಣನ್ನು ತಿನ್ನದೆ ಇರಬೇಕು.
4. ತಮ್ಮ ನಾಜೀರತನದ ದಿವಸಗಳಲ್ಲೆಲ್ಲಾ ದ್ರಾಕ್ಷಿ ಬೀಜ ಮೊದಲುಗೊಂಡು ಸಿಪ್ಪೆಯವರೆಗೂ, ದ್ರಾಕ್ಷಿಬಳ್ಳಿಯಲ್ಲಿ ಬೆಳೆದದ್ದು ಯಾವುದನ್ನಾದರೂ ತಿನ್ನಬಾರದು. [PE]
5.
6. [PS]“ ‘ಅವರ ನಾಜೀರ ವ್ರತದ ದಿನಗಳಲ್ಲೆಲ್ಲಾ ಕ್ಷೌರಮಾಡಿಸಿಕೊಳ್ಳಬಾರದು. ಅವರು ಯೆಹೋವ ದೇವರಿಗೆ ತಮ್ಮನ್ನು ಪ್ರತ್ಯೇಕಿಸಿಕೊಂಡ ದಿವಸಗಳು ಪೂರ್ತಿಯಾಗುವವರೆಗೆ ಅವರು ಪರಿಶುದ್ಧರಾಗಿರುವರು, ಅವರು ತಮ್ಮ ತಲೆಗೂದಲನ್ನು ಕತ್ತರಿಸದೇ ಬೆಳೆಯಬಿಡಬೇಕು. [PE][PS]“ ‘ಅವರು ಯೆಹೋವ ದೇವರಿಗೆ ತಮ್ಮನ್ನು ಪ್ರತ್ಯೇಕಿಸಿಕೊಂಡ ದಿವಸಗಳಲ್ಲೆಲ್ಲಾ ಸತ್ತವರ ಬಳಿಗೆ ಬರಬಾರದು.
7. ಅವರು ತಂದೆತಾಯಿ, ಸಹೋದರ ಸಹೋದರಿ ಸತ್ತರೂ ಅವರು ಅವರಿಗೋಸ್ಕರ ಅಪವಿತ್ರರಾಗಬಾರದು. ಏಕೆಂದರೆ ದೇವರಿಗೆ ಅವರ ಸಮರ್ಪಣೆಯ ಸಂಕೇತವು ಅವರ ತಲೆಯ ಮೇಲೆ ಇದೆ.
8. ಅವರ ಸಮರ್ಪಣೆಯ ದಿವಸಗಳಲ್ಲೆಲ್ಲಾ ಅವರು ಯೆಹೋವ ದೇವರಿಗೆ ಮೀಸಲಾಗಿರಬೇಕು. [PE]
9. [PS]“ ‘ಅವರ ಬಳಿಯಲ್ಲಿ ಯಾರಾದರೂ ಆಕಸ್ಮಿಕವಾಗಿ ಸತ್ತದ್ದರಿಂದ ಅವರ ತಲೆಯ ಕೂದಲು ಅಶುದ್ಧವಾದರೆ, ಅವರು ಶುದ್ಧರಾಗುವ ದಿವಸದಲ್ಲಿ ಅಂದರೆ ಏಳನೆಯ ದಿವಸದಲ್ಲಿ ತಮ್ಮ ತಲೆಯನ್ನು ಬೋಳಿಸಬೇಕು.
10. ಎಂಟನೆಯ ದಿವಸದಲ್ಲಿ ಅವರು ಯಾಜಕನ ಬಳಿಗೆ ಸಭೆಯ ಗುಡಾರದ ಬಾಗಿಲಿಗೆ ಎರಡು ಬೆಳವಕ್ಕಿಗಳನ್ನು ಇಲ್ಲವೆ ಎರಡು ಪಾರಿವಾಳದ ಮರಿಗಳನ್ನು ತರಬೇಕು.
11. ಯಾಜಕನು ಒಂದನ್ನು ದೋಷಪರಿಹಾರಕ ಬಲಿಯಾಗಿಯೂ, ಇನ್ನೊಂದನ್ನು ದಹನಬಲಿಯಾಗಿ ಅರ್ಪಿಸಿ, ಅವರು ಶವದ ಹತ್ತಿರವಿದ್ದು ಪಾಪಮಾಡಿದ್ದರಿಂದ, ಅವರಿಗೋಸ್ಕರ ಆ ದಿವಸದಲ್ಲಿ ಅವರ ತಲೆಯನ್ನು ಪ್ರತಿಷ್ಠಿಸಬೇಕು.
12. ಎಷ್ಟು ದಿನಗಳವರೆಗೆ ತಮ್ಮನ್ನು ಪ್ರತಿಷ್ಠಿಸಿಕೊಂಡಿದ್ದಾರೋ, ಅಷ್ಟು ದಿನಗಳವರೆಗೆ ಹೊಸದಾಗಿ ತಮ್ಮನ್ನು ಯೆಹೋವ ದೇವರಿಗೆ ಪ್ರತಿಷ್ಠಿಸಿಕೊಳ್ಳಬೇಕು ಮತ್ತು ಪ್ರಾಯಶ್ಚಿತ್ತ ಬಲಿಯಾಗಿ ಒಂದು ವರ್ಷದ ಕುರಿಮರಿಯನ್ನು ಸಮರ್ಪಿಸಬೇಕು. ಅವರ ಸಮರ್ಪಣೆಯ ಅವಧಿಯಲ್ಲಿ ಅವರು ಅಶುದ್ಧವಾದುದರಿಂದ ಮೊದಲಿನ ದಿವಸಗಳು ವ್ಯರ್ಥವಾದುವೆಂದು ಪರಿಗಣಿಸಬೇಕು. [PE]
13. [PS]“ ‘ಇದು ನಾಜೀರ ವ್ರತವು. ಅವರ ಸಮರ್ಪಣೆಯ ದಿವಸಗಳು ಪೂರ್ಣವಾದ ಮೇಲೆ ಅವರನ್ನು ದೇವದರ್ಶನ ಗುಡಾರದ ಬಾಗಿಲಿನ ಬಳಿಗೆ ತರಬೇಕು.
14. ಅವರು ಯೆಹೋವ ದೇವರಿಗೆ ತಮ್ಮ ಅರ್ಪಣೆಗಳನ್ನು ಅರ್ಪಿಸಬೇಕು. ಅದೇನೆಂದರೆ, ದಹನಬಲಿಗಾಗಿ ಒಂದು ವರ್ಷದ ಕಳಂಕವಿಲ್ಲದ ಒಂದು ಟಗರಿನ ಮರಿಯನ್ನೂ, ಪಾಪ ಪರಿಹಾರದ ಬಲಿಗಾಗಿ ಒಂದು ವರ್ಷದ ಕಳಂಕವಿಲ್ಲದ ಒಂದು ಹೆಣ್ಣು ಕುರಿಮರಿಯನ್ನೂ, ಸಮಾಧಾನದ ಬಲಿಗಾಗಿ ಒಂದು ಕಳಂಕವಿಲ್ಲದ ಟಗರನ್ನೂ ತರಬೇಕು.
15. ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ಮಾಡಿದ ಹುಳಿಯಿಲ್ಲದ ರೊಟ್ಟಿಗಳ ಒಂದು ಬುಟ್ಟಿಯನ್ನೂ, ಎಣ್ಣೆ ಹಚ್ಚಿದ ಹುಳಿಯಿಲ್ಲದ ರೊಟ್ಟಿಯ ದೋಸೆಗಳನ್ನೂ, ಧಾನ್ಯದ್ರವ್ಯ ಪಾನದ್ರವ್ಯ ಇವುಗಳನ್ನೆಲ್ಲಾ ಅರ್ಪಣೆಯಾಗಿ ತರಬೇಕು. [PE]
16. [PS]“ ‘ಇವುಗಳನ್ನು ಯಾಜಕನು ಯೆಹೋವ ದೇವರ ಎದುರಿನಲ್ಲಿ ತಂದು, ಅವರ ದೋಷಪರಿಹಾರಕ ಬಲಿಯನ್ನೂ ಅವರ ದಹನಬಲಿಯನ್ನೂ ಅರ್ಪಿಸಬೇಕು.
17. ಆ ಟಗರನ್ನು ಹುಳಿಯಿಲ್ಲದ ರೊಟ್ಟಿಯ ಬುಟ್ಟಿಯ ಸಂಗಡ ಯೆಹೋವ ದೇವರಿಗೆ ಸಮಾಧಾನದ ಬಲಿಯಾಗಿ ಅರ್ಪಿಸಬೇಕು. ಇದಲ್ಲದೆ ಯಾಜಕನು ಅವರ ಧಾನ್ಯವನ್ನೂ, ಪಾನದ್ರವ್ಯವನ್ನೂ ಅರ್ಪಿಸಬೇಕು. [PE]
18.
19. [PS]“ ‘ಇದಲ್ಲದೆ ನಾಜೀರರು ತಮ್ಮ ಸಮರ್ಪಣೆಯನ್ನು ಸಂಕೇತಿಸುವ ಕೂದಲನ್ನು ದೇವದರ್ಶನದ ಗುಡಾರದ ಬಾಗಿಲಿನ ಬಳಿಯಲ್ಲಿ ಕ್ಷೌರಮಾಡಿಸಿಕೊಂಡು, ಪ್ರತ್ಯೇಕಿಸಿದ ತಮ್ಮ ತಲೆಗೂದಲನ್ನು ತೆಗೆದುಕೊಂಡು, ಸಮಾಧಾನದ ಬಲಿಗಳ ಬಲಿಯ ಕೆಳಗಿರುವ ಬೆಂಕಿಯಲ್ಲಿ ಹಾಕಬೇಕು. [PE][PS]“ ‘ಯಾಜಕನು ಬೇಯಿಸಿದ ಆ ಟಗರಿನ ಮುಂದೊಡೆಯನ್ನೂ, ಆ ಪುಟ್ಟಿಯೊಳಗಿಂದ ಹುಳಿಯಿಲ್ಲದ ಒಂದು ರೊಟ್ಟಿಯನ್ನೂ, ಹುಳಿಯಿಲ್ಲದ ಒಂದು ದೋಸೆಯನ್ನೂ, ಆ ನಾಜೀರರ ಪ್ರತ್ಯೇಕಿಸಿದ ಕೂದಲನ್ನು ಕ್ಷೌರಮಾಡಿಸಿದ ತರುವಾಯ ಅವರ ಕೈಗಳಲ್ಲಿ ಕೊಡಬೇಕು.
20. ಯಾಜಕನು ಅವುಗಳನ್ನು ನೈವೇದ್ಯವಾಗಿ ನಿವಾಳಿಸುವ ಅರ್ಪಣೆಗಾಗಿ ಯೆಹೋವ ದೇವರ ಎದುರಿನಲ್ಲಿ ಸಮರ್ಪಿಸಬೇಕು. ನೈವೇದ್ಯ ಮಾಡುವ ಎದೆಯ ಸಂಗಡ ಅದು ಯಾಜಕನಿಗೆ ಪರಿಶುದ್ಧವಾಗಿದೆ. ಆಮೇಲೆ ನಾಜೀರರು ದ್ರಾಕ್ಷಾರಸವನ್ನು ಕುಡಿಯಬಹುದು. [PE]
21.
22. [PS]“ ‘ಪ್ರಮಾಣ ಮಾಡಿಕೊಂಡ ನಾಜೀರರ ನಿಯಮವು ಇದೇ. ಸಂಬಂಧಪಟ್ಟದ್ದರೊಂದಿಗೆ ತಮ್ಮ ಕೈಲಾದ ಮಟ್ಟಿಗೆ ಅವರು ತಮ್ಮ ಪ್ರತ್ಯೇಕಿಸುವಿಕೆಗಾಗಿ ಯೆಹೋವ ದೇವರಿಗೆ ಕಾಣಿಕೆ ಅರ್ಪಿಸತಕ್ಕದ್ದು. ನಾಜೀರ ವ್ರತದ ಕ್ರಮದ ಪ್ರಕಾರ, ನೀವು ಮಾಡಿದ ಪ್ರಮಾಣಕ್ಕನುಸಾರವಾಗಿ ತಮ್ಮ ವ್ರತದ ಕ್ರಮಗಳನ್ನು ನೆರವೇರಿಸಬೇಕು.’ ” [PE]{#1ಯಾಜಕರ ಆಶೀರ್ವಚನ } [PS]ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
23. “ನೀನು ಆರೋನನಿಗೆ ಮತ್ತು ಅವನ ಪುತ್ರರಿಗೆ ಹೀಗೆ ಆಜ್ಞಾಪಿಸು, ‘ನೀವು ಇಸ್ರಾಯೇಲರನ್ನು ಆಶೀರ್ವದಿಸುವಾಗ ಈ ಪ್ರಕಾರ ಅವರಿಗೆ ಹೇಳಬೇಕು: [PE]
24. [QS]“ ‘ “ಯೆಹೋವ ದೇವರು ನಿಮ್ಮನ್ನು ಆಶೀರ್ವದಿಸಲಿ, [QE][QS2]ನಿಮ್ಮನ್ನು ಕಾಪಾಡಲಿ. [QE]
25. [QS]ಯೆಹೋವ ದೇವರು ತಮ್ಮ ಮುಖವನ್ನು ನಿಮ್ಮ ಕಡೆಗೆ ಪ್ರಕಾಶಿಸುವಂತೆ ಮಾಡಿ, [QE][QS2]ನಿಮಗೆ ಕೃಪೆ ತೋರಿಸಲಿ. [QE]
26. [QS]ಯೆಹೋವ ದೇವರು ತಮ್ಮ ಮುಖವನ್ನು ನಿಮ್ಮ ಕಡೆಗೆ ಎತ್ತಿ, [QE][QS2]ನಿಮಗೆ ಸಮಾಧಾನ ಅನುಗ್ರಹಿಸಲಿ.” ’ [QE]
27. [PS]“ಹೀಗೆ ಅವರು ನನ್ನ ಹೆಸರನ್ನು ಇಸ್ರಾಯೇಲರ ಮೇಲೆ ಉಚ್ಛರಿಸುವರು. ನಾನೇ ಅವರನ್ನು ಆಶೀರ್ವದಿಸುವೆನು.” [PE]
ಒಟ್ಟು 36 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 6 / 36
ನಾಜೀರ ವ್ರತ 1 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ, 2 “ನೀನು ಇಸ್ರಾಯೇಲರ ಸಂಗಡ ಮಾತನಾಡಿ ಹೇಳಬೇಕಾದದ್ದೇನೆಂದರೆ: ‘ಪುರುಷನಾದರೂ, ಸ್ತ್ರೀಯಾದರೂ ಯೆಹೋವ ದೇವರಿಗೆ ಪ್ರತ್ಯೇಕಿಸಿಕೊಳ್ಳುವ ಹಾಗೆ ನಾಜೀರ ವ್ರತ ಕೈಗೊಂಡರೆ, 3 ದ್ರಾಕ್ಷಾರಸಕ್ಕೂ ಮದ್ಯಪಾನಕ್ಕೂ ದೂರವಾಗಿದ್ದು, ದ್ರಾಕ್ಷಾರಸದ ಹುಳಿಯನ್ನೂ ಮದ್ಯಪಾನದ ಹುಳಿಯನ್ನೂ ಕುಡಿಯದೆ, ದ್ರಾಕ್ಷಿಯಿಂದ ಮಾಡಿದ ಯಾವ ಪಾನವನ್ನಾದರೂ ಕುಡಿಯದೆ ಹಸಿಯದಾಗಲಿ, ಒಣಗಿದ್ದಾಗಲಿ ದ್ರಾಕ್ಷಿಹಣ್ಣನ್ನು ತಿನ್ನದೆ ಇರಬೇಕು. 4 ತಮ್ಮ ನಾಜೀರತನದ ದಿವಸಗಳಲ್ಲೆಲ್ಲಾ ದ್ರಾಕ್ಷಿ ಬೀಜ ಮೊದಲುಗೊಂಡು ಸಿಪ್ಪೆಯವರೆಗೂ, ದ್ರಾಕ್ಷಿಬಳ್ಳಿಯಲ್ಲಿ ಬೆಳೆದದ್ದು ಯಾವುದನ್ನಾದರೂ ತಿನ್ನಬಾರದು. 5 6 “ ‘ಅವರ ನಾಜೀರ ವ್ರತದ ದಿನಗಳಲ್ಲೆಲ್ಲಾ ಕ್ಷೌರಮಾಡಿಸಿಕೊಳ್ಳಬಾರದು. ಅವರು ಯೆಹೋವ ದೇವರಿಗೆ ತಮ್ಮನ್ನು ಪ್ರತ್ಯೇಕಿಸಿಕೊಂಡ ದಿವಸಗಳು ಪೂರ್ತಿಯಾಗುವವರೆಗೆ ಅವರು ಪರಿಶುದ್ಧರಾಗಿರುವರು, ಅವರು ತಮ್ಮ ತಲೆಗೂದಲನ್ನು ಕತ್ತರಿಸದೇ ಬೆಳೆಯಬಿಡಬೇಕು. “ ‘ಅವರು ಯೆಹೋವ ದೇವರಿಗೆ ತಮ್ಮನ್ನು ಪ್ರತ್ಯೇಕಿಸಿಕೊಂಡ ದಿವಸಗಳಲ್ಲೆಲ್ಲಾ ಸತ್ತವರ ಬಳಿಗೆ ಬರಬಾರದು. 7 ಅವರು ತಂದೆತಾಯಿ, ಸಹೋದರ ಸಹೋದರಿ ಸತ್ತರೂ ಅವರು ಅವರಿಗೋಸ್ಕರ ಅಪವಿತ್ರರಾಗಬಾರದು. ಏಕೆಂದರೆ ದೇವರಿಗೆ ಅವರ ಸಮರ್ಪಣೆಯ ಸಂಕೇತವು ಅವರ ತಲೆಯ ಮೇಲೆ ಇದೆ. 8 ಅವರ ಸಮರ್ಪಣೆಯ ದಿವಸಗಳಲ್ಲೆಲ್ಲಾ ಅವರು ಯೆಹೋವ ದೇವರಿಗೆ ಮೀಸಲಾಗಿರಬೇಕು. 9 “ ‘ಅವರ ಬಳಿಯಲ್ಲಿ ಯಾರಾದರೂ ಆಕಸ್ಮಿಕವಾಗಿ ಸತ್ತದ್ದರಿಂದ ಅವರ ತಲೆಯ ಕೂದಲು ಅಶುದ್ಧವಾದರೆ, ಅವರು ಶುದ್ಧರಾಗುವ ದಿವಸದಲ್ಲಿ ಅಂದರೆ ಏಳನೆಯ ದಿವಸದಲ್ಲಿ ತಮ್ಮ ತಲೆಯನ್ನು ಬೋಳಿಸಬೇಕು. 10 ಎಂಟನೆಯ ದಿವಸದಲ್ಲಿ ಅವರು ಯಾಜಕನ ಬಳಿಗೆ ಸಭೆಯ ಗುಡಾರದ ಬಾಗಿಲಿಗೆ ಎರಡು ಬೆಳವಕ್ಕಿಗಳನ್ನು ಇಲ್ಲವೆ ಎರಡು ಪಾರಿವಾಳದ ಮರಿಗಳನ್ನು ತರಬೇಕು. 11 ಯಾಜಕನು ಒಂದನ್ನು ದೋಷಪರಿಹಾರಕ ಬಲಿಯಾಗಿಯೂ, ಇನ್ನೊಂದನ್ನು ದಹನಬಲಿಯಾಗಿ ಅರ್ಪಿಸಿ, ಅವರು ಶವದ ಹತ್ತಿರವಿದ್ದು ಪಾಪಮಾಡಿದ್ದರಿಂದ, ಅವರಿಗೋಸ್ಕರ ಆ ದಿವಸದಲ್ಲಿ ಅವರ ತಲೆಯನ್ನು ಪ್ರತಿಷ್ಠಿಸಬೇಕು. 12 ಎಷ್ಟು ದಿನಗಳವರೆಗೆ ತಮ್ಮನ್ನು ಪ್ರತಿಷ್ಠಿಸಿಕೊಂಡಿದ್ದಾರೋ, ಅಷ್ಟು ದಿನಗಳವರೆಗೆ ಹೊಸದಾಗಿ ತಮ್ಮನ್ನು ಯೆಹೋವ ದೇವರಿಗೆ ಪ್ರತಿಷ್ಠಿಸಿಕೊಳ್ಳಬೇಕು ಮತ್ತು ಪ್ರಾಯಶ್ಚಿತ್ತ ಬಲಿಯಾಗಿ ಒಂದು ವರ್ಷದ ಕುರಿಮರಿಯನ್ನು ಸಮರ್ಪಿಸಬೇಕು. ಅವರ ಸಮರ್ಪಣೆಯ ಅವಧಿಯಲ್ಲಿ ಅವರು ಅಶುದ್ಧವಾದುದರಿಂದ ಮೊದಲಿನ ದಿವಸಗಳು ವ್ಯರ್ಥವಾದುವೆಂದು ಪರಿಗಣಿಸಬೇಕು. 13 “ ‘ಇದು ನಾಜೀರ ವ್ರತವು. ಅವರ ಸಮರ್ಪಣೆಯ ದಿವಸಗಳು ಪೂರ್ಣವಾದ ಮೇಲೆ ಅವರನ್ನು ದೇವದರ್ಶನ ಗುಡಾರದ ಬಾಗಿಲಿನ ಬಳಿಗೆ ತರಬೇಕು. 14 ಅವರು ಯೆಹೋವ ದೇವರಿಗೆ ತಮ್ಮ ಅರ್ಪಣೆಗಳನ್ನು ಅರ್ಪಿಸಬೇಕು. ಅದೇನೆಂದರೆ, ದಹನಬಲಿಗಾಗಿ ಒಂದು ವರ್ಷದ ಕಳಂಕವಿಲ್ಲದ ಒಂದು ಟಗರಿನ ಮರಿಯನ್ನೂ, ಪಾಪ ಪರಿಹಾರದ ಬಲಿಗಾಗಿ ಒಂದು ವರ್ಷದ ಕಳಂಕವಿಲ್ಲದ ಒಂದು ಹೆಣ್ಣು ಕುರಿಮರಿಯನ್ನೂ, ಸಮಾಧಾನದ ಬಲಿಗಾಗಿ ಒಂದು ಕಳಂಕವಿಲ್ಲದ ಟಗರನ್ನೂ ತರಬೇಕು. 15 ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ಮಾಡಿದ ಹುಳಿಯಿಲ್ಲದ ರೊಟ್ಟಿಗಳ ಒಂದು ಬುಟ್ಟಿಯನ್ನೂ, ಎಣ್ಣೆ ಹಚ್ಚಿದ ಹುಳಿಯಿಲ್ಲದ ರೊಟ್ಟಿಯ ದೋಸೆಗಳನ್ನೂ, ಧಾನ್ಯದ್ರವ್ಯ ಪಾನದ್ರವ್ಯ ಇವುಗಳನ್ನೆಲ್ಲಾ ಅರ್ಪಣೆಯಾಗಿ ತರಬೇಕು. 16 “ ‘ಇವುಗಳನ್ನು ಯಾಜಕನು ಯೆಹೋವ ದೇವರ ಎದುರಿನಲ್ಲಿ ತಂದು, ಅವರ ದೋಷಪರಿಹಾರಕ ಬಲಿಯನ್ನೂ ಅವರ ದಹನಬಲಿಯನ್ನೂ ಅರ್ಪಿಸಬೇಕು. 17 ಆ ಟಗರನ್ನು ಹುಳಿಯಿಲ್ಲದ ರೊಟ್ಟಿಯ ಬುಟ್ಟಿಯ ಸಂಗಡ ಯೆಹೋವ ದೇವರಿಗೆ ಸಮಾಧಾನದ ಬಲಿಯಾಗಿ ಅರ್ಪಿಸಬೇಕು. ಇದಲ್ಲದೆ ಯಾಜಕನು ಅವರ ಧಾನ್ಯವನ್ನೂ, ಪಾನದ್ರವ್ಯವನ್ನೂ ಅರ್ಪಿಸಬೇಕು. 18 19 “ ‘ಇದಲ್ಲದೆ ನಾಜೀರರು ತಮ್ಮ ಸಮರ್ಪಣೆಯನ್ನು ಸಂಕೇತಿಸುವ ಕೂದಲನ್ನು ದೇವದರ್ಶನದ ಗುಡಾರದ ಬಾಗಿಲಿನ ಬಳಿಯಲ್ಲಿ ಕ್ಷೌರಮಾಡಿಸಿಕೊಂಡು, ಪ್ರತ್ಯೇಕಿಸಿದ ತಮ್ಮ ತಲೆಗೂದಲನ್ನು ತೆಗೆದುಕೊಂಡು, ಸಮಾಧಾನದ ಬಲಿಗಳ ಬಲಿಯ ಕೆಳಗಿರುವ ಬೆಂಕಿಯಲ್ಲಿ ಹಾಕಬೇಕು. “ ‘ಯಾಜಕನು ಬೇಯಿಸಿದ ಆ ಟಗರಿನ ಮುಂದೊಡೆಯನ್ನೂ, ಆ ಪುಟ್ಟಿಯೊಳಗಿಂದ ಹುಳಿಯಿಲ್ಲದ ಒಂದು ರೊಟ್ಟಿಯನ್ನೂ, ಹುಳಿಯಿಲ್ಲದ ಒಂದು ದೋಸೆಯನ್ನೂ, ಆ ನಾಜೀರರ ಪ್ರತ್ಯೇಕಿಸಿದ ಕೂದಲನ್ನು ಕ್ಷೌರಮಾಡಿಸಿದ ತರುವಾಯ ಅವರ ಕೈಗಳಲ್ಲಿ ಕೊಡಬೇಕು. 20 ಯಾಜಕನು ಅವುಗಳನ್ನು ನೈವೇದ್ಯವಾಗಿ ನಿವಾಳಿಸುವ ಅರ್ಪಣೆಗಾಗಿ ಯೆಹೋವ ದೇವರ ಎದುರಿನಲ್ಲಿ ಸಮರ್ಪಿಸಬೇಕು. ನೈವೇದ್ಯ ಮಾಡುವ ಎದೆಯ ಸಂಗಡ ಅದು ಯಾಜಕನಿಗೆ ಪರಿಶುದ್ಧವಾಗಿದೆ. ಆಮೇಲೆ ನಾಜೀರರು ದ್ರಾಕ್ಷಾರಸವನ್ನು ಕುಡಿಯಬಹುದು. 21 22 “ ‘ಪ್ರಮಾಣ ಮಾಡಿಕೊಂಡ ನಾಜೀರರ ನಿಯಮವು ಇದೇ. ಸಂಬಂಧಪಟ್ಟದ್ದರೊಂದಿಗೆ ತಮ್ಮ ಕೈಲಾದ ಮಟ್ಟಿಗೆ ಅವರು ತಮ್ಮ ಪ್ರತ್ಯೇಕಿಸುವಿಕೆಗಾಗಿ ಯೆಹೋವ ದೇವರಿಗೆ ಕಾಣಿಕೆ ಅರ್ಪಿಸತಕ್ಕದ್ದು. ನಾಜೀರ ವ್ರತದ ಕ್ರಮದ ಪ್ರಕಾರ, ನೀವು ಮಾಡಿದ ಪ್ರಮಾಣಕ್ಕನುಸಾರವಾಗಿ ತಮ್ಮ ವ್ರತದ ಕ್ರಮಗಳನ್ನು ನೆರವೇರಿಸಬೇಕು.’ ” ಯಾಜಕರ ಆಶೀರ್ವಚನ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ, 23 “ನೀನು ಆರೋನನಿಗೆ ಮತ್ತು ಅವನ ಪುತ್ರರಿಗೆ ಹೀಗೆ ಆಜ್ಞಾಪಿಸು, ‘ನೀವು ಇಸ್ರಾಯೇಲರನ್ನು ಆಶೀರ್ವದಿಸುವಾಗ ಈ ಪ್ರಕಾರ ಅವರಿಗೆ ಹೇಳಬೇಕು: 24 “ ‘ “ಯೆಹೋವ ದೇವರು ನಿಮ್ಮನ್ನು ಆಶೀರ್ವದಿಸಲಿ, ನಿಮ್ಮನ್ನು ಕಾಪಾಡಲಿ. 25 ಯೆಹೋವ ದೇವರು ತಮ್ಮ ಮುಖವನ್ನು ನಿಮ್ಮ ಕಡೆಗೆ ಪ್ರಕಾಶಿಸುವಂತೆ ಮಾಡಿ, ನಿಮಗೆ ಕೃಪೆ ತೋರಿಸಲಿ. 26 ಯೆಹೋವ ದೇವರು ತಮ್ಮ ಮುಖವನ್ನು ನಿಮ್ಮ ಕಡೆಗೆ ಎತ್ತಿ, ನಿಮಗೆ ಸಮಾಧಾನ ಅನುಗ್ರಹಿಸಲಿ.” ’ 27 “ಹೀಗೆ ಅವರು ನನ್ನ ಹೆಸರನ್ನು ಇಸ್ರಾಯೇಲರ ಮೇಲೆ ಉಚ್ಛರಿಸುವರು. ನಾನೇ ಅವರನ್ನು ಆಶೀರ್ವದಿಸುವೆನು.”
ಒಟ್ಟು 36 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 6 / 36
×

Alert

×

Kannada Letters Keypad References