1. {#1ಈಜಿಪ್ಟ್ ದೇಶದಿಂದ ಇಸ್ರಾಯೇಲರ ಪ್ರಯಾಣದ ಹಂತಗಳು } [PS]ಮೋಶೆ ಆರೋನರ ನಾಯಕತ್ವದಲ್ಲಿ ಈಜಿಪ್ಟ್ ದೇಶದೊಳಗಿಂದ ತಮ್ಮ ಸೈನ್ಯಗಳ ಪ್ರಕಾರ ಹೊರಟ ಇಸ್ರಾಯೇಲರ ಪ್ರಯಾಣದ ಹಂತಗಳ ವಿವರ ಇಲ್ಲಿವೆ.
2. ಮೋಶೆಯು ಯೆಹೋವ ದೇವರ ಆಜ್ಞೆಯ ಪ್ರಕಾರ ಅವರ ಪ್ರಯಾಣದಲ್ಲಿ ತಂಗಿದ್ದ ಸ್ಥಳಗಳ ವಿವರಗಳನ್ನು ಬರೆದನು. [PE][PBR]
3. [PIS] ಅವರ ಪ್ರಯಾಣಗಳ ವಿವರಗಳು ಯಾವುವೆಂದರೆ: ಅವರು ಮೊದಲನೆಯ ತಿಂಗಳಿನ ಹದಿನೈದನೆಯ ದಿವಸದಲ್ಲಿ ಪಸ್ಕಹಬ್ಬದ ಮರುದಿನ ಇಸ್ರಾಯೇಲರು ಸಮಸ್ತ ಈಜಿಪ್ಟನವರ ಎದುರಿನಲ್ಲೇ ಅಟ್ಟಹಾಸದಿಂದ ರಮ್ಸೇಸಿನಿಂದ ಹೊರಟು ಹೋದರು.
4. ಹೇಗೆಂದರೆ ಆ ಕಾಲದಲ್ಲಿ ಯೆಹೋವ ದೇವರು ಈಜಿಪ್ಟಿನವರ ಸಮಸ್ತ ಚೊಚ್ಚಲಿನವರನ್ನು ಹೊಡೆದು ಆ ಮಕ್ಕಳ ಶವಗಳನ್ನು ಹೂಣಿಟ್ಟರು, ಯೆಹೋವ ದೇವರು ಅವರ ದೇವರುಗಳಿಗೂ ಶಿಕ್ಷೆ ಮಾಡಿದರು. [PIE]
5. [PIS] ಇಸ್ರಾಯೇಲರು ರಮ್ಸೇಸಿನಿಂದ ಹೊರಟು ಸುಕ್ಕೋತಿನಲ್ಲಿ ಇಳಿದರು. [PIE]
6. [PIS] ಸುಕ್ಕೋತಿನಿಂದ ಹೊರಟು ಮರುಭೂಮಿಯ ಮೇರೆಯಲ್ಲಿರುವ ಏತಾಮಿನಲ್ಲಿ ಇಳಿದುಕೊಂಡರು. [PIE]
7. [PIS] ಏತಾಮಿನಿಂದ ಹೊರಟು ಬಾಲ್ಜೆಫೋನಿಗೆ ಎದುರಾಗಿರುವ ಪೀಹಹೀರೋತಿಗೆ ತಿರುಗಿಕೊಂಡು, ಮಿಗ್ದೋಲಿಗೆ ಎದುರಾಗಿ ಇಳಿದುಕೊಂಡರು. [PIE]
8. [PIS] ಪೀಹಹೀರೋತಿನಿಂದ ಹೊರಟು ಸಮುದ್ರದೊಳಗಿಂದ ಮರುಭೂಮಿಗೆ ದಾಟಿದರು. ಆಗ ಅವರು ಮೂರು ದಿವಸದ ಪ್ರಯಾಣಮಾಡಿ ಏತಾಮೆಂಬ ಮರುಭೂಮಿಯಲ್ಲಿ ನಡೆದು ಮಾರಾದಲ್ಲಿ ಇಳಿದರು. [PIE]
9. [PIS] ಮಾರಾದಿಂದ ಹೊರಟು ಏಲೀಮಿಗೆ ಬಂದರು. ಎಲೀಮಿನಲ್ಲಿ ಹನ್ನೆರಡು ನೀರಿನ ಒರತೆಗಳೂ, ಎಪ್ಪತ್ತು ಖರ್ಜೂರ ಮರಗಳೂ ಇದ್ದುದರಿಂದ ಅಲ್ಲಿ ಇಳಿದುಕೊಂಡರು. [PIE]
10. [PIS] ಏಲೀಮಿನಿಂದ ಹೊರಟು ಕೆಂಪುಸಮುದ್ರದ ಬಳಿಯಲ್ಲಿ ಇಳಿದುಕೊಂಡರು. [PIE]
11. [PIS] ಕೆಂಪು ಸಮುದ್ರದಿಂದ ಹೊರಟು ಸೀನೆಂಬ ಮರುಭೂಮಿಯಲ್ಲಿ ಇಳಿದುಕೊಂಡು, [PIE]
12. [PIS] ಸೀನೆಂಬ ಮರುಭೂಮಿಯಿಂದ ಹೊರಟು ದೊಫ್ಕದಲ್ಲಿ ಇಳಿದುಕೊಂಡರು. [PIE]
13. [PIS] ದೊಫ್ಕದಿಂದ ಹೊರಟು ಆಲೂಷದಲ್ಲಿ ಇಳಿದುಕೊಂಡರು. [PIE]
14. [PIS] ಆಲೂಷದಿಂದ ಹೊರಟು ರೆಫೀದೀಮಿನಲ್ಲಿ ಇಳಿದುಕೊಂಡರು. ಆದರೆ ಅಲ್ಲಿ ಜನರಿಗೆ ಕುಡಿಯುವುದಕ್ಕೆ ನೀರು ಇರಲಿಲ್ಲ. [PIE]
15. [PIS] ರೆಫೀದೀಮಿನಿಂದ ಹೊರಟು ಸೀನಾಯಿ ಮರುಭೂಮಿಯಲ್ಲಿ ಇಳಿದುಕೊಂಡರು. [PIE]
16. [PIS] ಸೀನಾಯಿ ಮರುಭೂಮಿಯಿಂದ ಹೊರಟು ಕಿಬ್ರೋತ್ ಹತಾವದಲ್ಲಿ ಇಳಿದುಕೊಂಡರು. [PIE]
17. [PIS] ಕಿಬ್ರೋತ್ ಹತಾವದಿಂದ ಹೊರಟು ಹಚೇರೋತಿನಲ್ಲಿ ಇಳಿದುಕೊಂಡರು. [PIE]
18. [PIS] ಹಚೇರೋತಿನಿಂದ ಹೊರಟು ರಿತ್ಮದಲ್ಲಿ ಇಳಿದುಕೊಂಡರು. [PIE]
19. [PIS] ರಿತ್ಮದಿಂದ ಹೊರಟು ರಿಮ್ಮೋನ್ ಪೆರೆಚಿನಲ್ಲಿ ಇಳಿದುಕೊಂಡರು. [PIE]
20. [PIS] ರಿಮ್ಮೋನ್ ಪೆರೆಚಿನಿಂದ ಹೊರಟು ಲಿಬ್ನದಲ್ಲಿ ಇಳಿದುಕೊಂಡರು. [PIE]
21. [PIS] ಲಿಬ್ನದಿಂದ ಹೊರಟು ರಿಸ್ಸದಲ್ಲಿ ಇಳಿದುಕೊಂಡರು. [PIE]
22. [PIS] ರಿಸ್ಸದಿಂದ ಹೊರಟು ಕೆಹೇಲಾತಾನಲ್ಲಿ ಇಳಿದುಕೊಂಡರು. [PIE]
23. [PIS] ಕೆಹೇಲಾತಾನಿಂದ ಹೊರಟು ಶೆಫೆರ್ ಪರ್ವತದಲ್ಲಿ ಇಳಿದುಕೊಂಡರು. [PIE]
24. [PIS] ಶೆಫೆರ್ ಪರ್ವತದಿಂದ ಹೊರಟು ಹರಾದಾದಲ್ಲಿ ಇಳಿದುಕೊಂಡರು. [PIE]
25. [PIS] ಹರಾದಾದಿಂದ ಹೊರಟು ಮಖೇಲೋತಿನಲ್ಲಿ ಇಳಿದುಕೊಂಡರು. [PIE]
26. [PIS] ಮಖೇಲೋತಿನಿಂದ ಹೊರಟು ತಹತಿನಲ್ಲಿ ಇಳಿದುಕೊಂಡರು. [PIE]
27. [PIS] ತಹತಿನಿಂದ ಹೊರಟು ತೆರಹದಲ್ಲಿ ಇಳಿದುಕೊಂಡರು. [PIE]
28. [PIS] ತೆರಹದಿಂದ ಹೊರಟು ಮಿತ್ಕಾದಲ್ಲಿ ಇಳಿದುಕೊಂಡರು. [PIE]
29. [PIS] ಮಿತ್ಕಾದಿಂದ ಹೊರಟು ಹಷ್ಮೋನಾದಲ್ಲಿ ಇಳಿದುಕೊಂಡರು. [PIE]
30. [PIS] ಹಷ್ಮೋನಾದಿಂದ ಹೊರಟು ಮೋಸೇರೋತಿನಲ್ಲಿ ಇಳಿದುಕೊಂಡರು. [PIE]
31. [PIS] ಮೋಸೇರೋತಿನಿಂದ ಹೊರಟು ಬೆನೇಯಾಕಾನಿನಲ್ಲಿ ಇಳಿದುಕೊಂಡರು. [PIE]
32. [PIS] ಬೆನೇಯಾಕಾನಿನಿಂದ ಹೊರಟು ಹೋರ್ಹಗಿದ್ಗಾದಿನಲ್ಲಿ ಇಳಿದುಕೊಂಡರು. [PIE]
33. [PIS] ಹೋರ್ಹಗಿದ್ಗಾದಿನಿಂದ ಹೊರಟು ಯೊಟ್ಬಾತದಲ್ಲಿ ಇಳಿದುಕೊಂಡರು. [PIE]
34. [PIS] ಯೊಟ್ಬಾತದಿಂದ ಹೊರಟು ಅಬ್ರೋನಾದಲ್ಲಿ ಇಳಿದುಕೊಂಡರು. [PIE]
35. [PIS] ಅಬ್ರೋನಾದಿಂದ ಹೊರಟು ಎಚ್ಯೋನ್ ಗೆಬೆರಿನಲ್ಲಿ ಇಳಿದುಕೊಂಡರು. [PIE]
36. [PIS] ಎಚ್ಯೋನ್ ಗೆಬೆರಿನಿಂದ ಹೊರಟು ಕಾದೇಶೆಂಬ ಚಿನ್ ಮರುಭೂಮಿಯಲ್ಲಿ ಇಳಿದುಕೊಂಡರು. [PIE]
37. [PIS] ಕಾದೇಶಿನಿಂದ ಹೊರಟು ಎದೋಮ್ ದೇಶದ ಅಂತ್ಯದಲ್ಲಿರುವ ಹೋರ್ ಗುಡ್ಡದಲ್ಲಿ ಇಳಿದುಕೊಂಡರು.
38. ಆಗ ಯಾಜಕನಾದ ಆರೋನನು ಯೆಹೋವ ದೇವರ ಆಜ್ಞೆಯ ಪ್ರಕಾರ ಹೋರ್ ಗುಡ್ಡದ ಮೇಲೆ ಏರಿ, ಅಲ್ಲಿ ಇಸ್ರಾಯೇಲರು ಈಜಿಪ್ಟ್ ದೇಶದಿಂದ ಹೊರಟ ನಾಲ್ವತ್ತನೆಯ ವರ್ಷದ ಐದನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ನಿಧನ ಹೊಂದಿದನು.
39. ಆರೋನನು ಹೋರ್ ಗುಡ್ಡದಲ್ಲಿ ಮರಣಹೊಂದಿದಾಗ ಅವನು ನೂರ ಇಪ್ಪತ್ತಮೂರು ವರ್ಷದವನಾಗಿದ್ದನು. [PIE]
40. [PIS] ಆಗ ಕಾನಾನ್ ದೇಶದ ನೆಗೆವನಲ್ಲಿ ವಾಸವಾಗಿದ್ದ ಕಾನಾನ್ಯನಾದ ಅರಾದ್ ಪಟ್ಟಣದ ಅರಸನು ಇಸ್ರಾಯೇಲರು ಬರುವುದನ್ನು ಕೇಳಿದನು. [PIE]
41. [PIS] ಹೋರ್ ಗುಡ್ಡದಿಂದ ಅವರು ಹೊರಟು ಚಲ್ಮೋನದಲ್ಲಿ ಇಳಿದುಕೊಂಡರು. [PIE]
42. [PIS] ಚಲ್ಮೋನದಿಂದ ಹೊರಟು ಪೂನೋನಿನಲ್ಲಿ ಇಳಿದುಕೊಂಡರು. [PIE]
43. [PIS] ಪೂನೋನಿನಿಂದ ಹೊರಟು ಓಬೋತಿನಲ್ಲಿ ಇಳಿದುಕೊಂಡರು. [PIE]
44. [PIS] ಓಬೋತಿನಿಂದ ಹೊರಟು ಮೋವಾಬಿನ ಮೇರೆಯಲ್ಲಿರುವ ಇಯ್ಯೇ ಅಬಾರೀಮಿನಲ್ಲಿ ಇಳಿದುಕೊಂಡರು. [PIE]
45. [PIS] ಇಯೀಮಿನಿಂದ ಹೊರಟು ದೀಬೋನ್ ಗಾದಿನಲ್ಲಿ ಇಳಿದುಕೊಂಡರು. [PIE]
46. [PIS] ದೀಬೋನ್ ಗಾದಿನಿಂದ ಹೊರಟು ಅಲ್ಮೋನ್ ದಿಬ್ಲಾತಯಿಮಿನಲ್ಲಿ ಇಳಿದುಕೊಂಡರು. [PIE]
47. [PIS] ಅಲ್ಮೋನ್ ದಿಬ್ಲಾತಯಿಮಿನಿಂದ ಹೊರಟು ನೆಬೋವಿನ ಪೂರ್ವದಲ್ಲಿರುವ ಅಬಾರೀಮ್ ಬೆಟ್ಟಗಳಲ್ಲಿ ಇಳಿದುಕೊಂಡರು. [PIE]
48. [PIS] ಅಬಾರೀಮ್ ಬೆಟ್ಟಗಳಿಂದ ಹೊರಟು ಯೆರಿಕೋವಿಗೆ ಎದುರಾಗಿ ಯೊರ್ದನ್ ನದಿಯ ತೀರದಲ್ಲಿರುವ ಮೋವಾಬಿನ ಬಯಲುಗಳಲ್ಲಿ ಇಳಿದುಕೊಂಡರು.
49. ಅವರು ಯೊರ್ದನ್ ನದಿಯ ಬಳಿಯಲ್ಲಿರುವ ಬೇತ್ ಯೆಷೀಮೋತಿನಿಂದ ಮೋವಾಬಿನ ಬಯಲುಗಳಲ್ಲಿರುವ ಆಬೇಲ್ ಶಿಟ್ಟೀಮಿನ ಪರ್ಯಂತರದವರೆಗೂ ಇಳಿದುಕೊಂಡರು. [PIE][PBR]
50. [PS]ಯೆಹೋವ ದೇವರು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬಯಲುಗಳಲ್ಲಿ ಮೋಶೆಯ ಸಂಗಡ ಮಾತನಾಡಿ,
51. “ಇಸ್ರಾಯೇಲರ ಸಂಗಡ ಮಾತನಾಡಿ ಅವರಿಗೆ ಹೇಳಬೇಕಾದದ್ದೇನೆಂದರೆ: ‘ನೀವು ಯೊರ್ದನನ್ನು ದಾಟಿ, ಕಾನಾನ್ ದೇಶಕ್ಕೆ ಬರುವಾಗ,
52. ನಿಮ್ಮ ಮುಂದೆ ಆ ದೇಶದ ಸಮಸ್ತ ನಿವಾಸಿಗಳನ್ನು ಹೊರಡಿಸಿ, ಅವರ ಚಿತ್ರಗಳನ್ನೂ ಅವರು ಕೆತ್ತಿದ ವಿಗ್ರಹಗಳನ್ನೂ ನಾಶಮಾಡಿ, ಅವರ ಸಮಸ್ತ ಪವಿತ್ರ ಸ್ಥಳಗಳನ್ನೂ ಹಾಳುಮಾಡಬೇಕು.
53. ನೀವು ಆ ದೇಶವನ್ನು ತೆಗೆದುಕೊಂಡು ಅದರಲ್ಲಿ ವಾಸಮಾಡಿರಿ. ಏಕೆಂದರೆ ಅದನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಆ ದೇಶವನ್ನು ನಿಮಗೆ ಕೊಟ್ಟಿದ್ದೇನೆ.
54. ನೀವು ದೇಶವನ್ನು ನಿಮ್ಮ ಗೋತ್ರಗಳ ಪ್ರಕಾರ ಚೀಟುಹಾಕಿ, ಸ್ವಾಧೀನಮಾಡಿ ಹಂಚಿಕೊಳ್ಳಬೇಕು. ಹೆಚ್ಚಾದವರಿಗೆ ಸೊತ್ತನ್ನು ಹೆಚ್ಚಿಸಿ, ಕಡಿಮೆಯಾದವರಿಗೆ ಸೊತ್ತನ್ನು ಕಡಿಮೆ ಮಾಡಬೇಕು. ಒಬ್ಬೊಬ್ಬನಿಗೆ ಚೀಟು ಎಲ್ಲಿ ಬೀಳುವುದೋ, ಅದೇ ಅವನಿಗಾಗಬೇಕು. ನಿಮ್ಮ ಪಿತೃಗಳ ಗೋತ್ರದ ಪ್ರಕಾರ ನೀವು ಸ್ವಾಧೀನಮಾಡಿಕೊಳ್ಳಬೇಕು. [PE]
55. [PS]“ ‘ಆದರೆ ನೀವು ನಿಮ್ಮ ಮುಂದೆ ದೇಶದ ನಿವಾಸಿಗಳನ್ನು ಹೊರಡಿಸದಿದ್ದರೆ, ನೀವು ಉಳಿಸಿದವರು ನಿಮ್ಮ ಕಣ್ಣುಗಳಲ್ಲಿ ಮುಳ್ಳುಗಳಾಗಿಯೂ, ನಿಮ್ಮ ಪಕ್ಕೆಗಳಲ್ಲಿ ಕಂಟಕಗಳಾಗಿಯೂ ಇರುವರು. ನೀವು ವಾಸಿಸುವ ದೇಶದಲ್ಲಿ ಅವರು ನಿಮ್ಮನ್ನು ಶ್ರಮೆಪಡಿಸುವರು.
56. ಇದಲ್ಲದೆ ನಾನು ಅವರಿಗೆ ಮಾಡಬೇಕೆಂದಿದ್ದ ಹಾಗೆ ನಿಮಗೆ ಮಾಡುವೆನು.’ ” [PE]