ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ನಹೂಮ
1. {#1ನಿನೆವೆಗೆ ಕಷ್ಟ } [QS]ರಕ್ತಮಯ ಪಟ್ಟಣಕ್ಕೆ ಕಷ್ಟ, [QE][QS2]ಅದೆಲ್ಲಾ ಸುಳ್ಳಿನಿಂದಲೂ, [QE][QS]ಕಳ್ಳತನದಿಂದಲೂ ತುಂಬಿದೆ, [QE][QS2]ಕೊಳ್ಳೆಯನ್ನೂ ಬಿಡುವುದಿಲ್ಲ. [QE]
2. [QS]ಚಾವಟಿಗೆ, ಚಬುಕಿನ ಶಬ್ದವೂ, [QE][QS2]ಚಕ್ರಗಳ ಧಡಧಡನೆಯ ಶಬ್ದವೂ, [QE][QS]ಕುದುರೆಗಳ ಕುಣಿದಾಟವೂ, [QE][QS2]ರಥಗಳ ಹಾರಾಟವೂ ಇದೆ. [QE]
3. [QS]ಸವಾರರು ಹತ್ತುತ್ತಾರೆ, [QE][QS2]ಈಟಿಗಳು ಥಳಥಳಿಸುತ್ತವೆ, [QE][QS2]ಖಡ್ಗಗಳು ಮಿಂಚುತ್ತವೆ, [QE][QS]ಹತರಾದವರು ಬಹಳ; [QE][QS2]ಹೆಣಗಳ ರಾಶಿ; [QE][QS]ಅಸಂಖ್ಯಾತ ಮೃತ ದೇಹಗಳು, [QE][QS2]ಶವಗಳ ಮೇಲೆ ತತ್ತರಿಸುತ್ತಿರುವ ಜನರು, [QE]
4. [QS]ಇದೆಲ್ಲವೂ ಆ ಒಬ್ಬ ವೇಶ್ಯೆಯ ಕಾಮತೃಷೆಯಿಂದಾಗಿ, [QE][QS2]ವೇಶ್ಯೆಯು ಲೆಕ್ಕವಿಲ್ಲದ ವೇಶ್ಯಾವಾಟಿಕೆಯ ಬಹಳ. [QE][QS]ಅವಳು ತನ್ನ ಸೂಳೆತನಗಳಿಂದ ಜನಾಂಗಗಳನ್ನೂ, [QE][QS2]ತನ್ನ ಮಾಟಗಳಿಂದ ಗೋತ್ರಗಳನ್ನೂ ಗುಲಾಮರನ್ನಾಗಿ ಮಾಡಿಕೊಂಡಳಲ್ಲವೇ? [QE][PBR]
5. [QS]ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ, [QE][QS2]“ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ. [QE][QS2]ನಿನ್ನ ಸೆರಗುಗಳನ್ನು ನಿನ್ನ ಮುಖದ ಮೇಲಿಂದ ಎತ್ತಿ, [QE][QS]ಜನಾಂಗಗಳಿಗೆ ನಿನ್ನ ನಾಚಿಕೆಯನ್ನೂ, [QE][QS2]ರಾಜ್ಯಗಳಿಗೆ ನಿನ್ನ ನಿಂದೆಯ ಬೆತ್ತಲೆತನವನ್ನೂ ತೋರಿಸುತ್ತೇನೆ. [QE]
6. [QS]ಅಸಹ್ಯವಾದವುಗಳನ್ನು ನಿನ್ನ ಮೇಲೆ ಹಾಕಿ, [QE][QS2]ನಿನ್ನನ್ನು ನೀಚಳನ್ನಾಗಿ ಮಾಡಿ, [QE][QS2]ನಿನ್ನನ್ನು ಪರಿಹಾಸ್ಯಕ್ಕೀಡುಮಾಡುವೆನು. [QE]
7. [QS]ನಿನ್ನನ್ನು ನೋಡುವವರೆಲ್ಲರೂ ನಿನ್ನಿಂದ ಓಡಿಹೋಗಿ ಹೀಗೆ ಹೇಳುವರು, [QE][QS2]‘ನಿನೆವೆ ಹಾಳಾಯಿತು, ಅದಕ್ಕೆ ಯಾರು ಚಿಂತೆಪಡುವರು?’ [QE][QS2]ನಿನ್ನನ್ನು ಆದರಿಸುವವರನ್ನು ನಾನು ಎಲ್ಲಿಂದ ಹುಡುಕಲಿ.” [QE][PBR]
8. [QS]ನೈಲ್ ನದಿಯ ಬಳಿ ನೆಲೆಯಾಗಿದ್ದ ತೆಬೆಸ್ಸಿಗಿಂತ [QE][QS2]ನೀನು ಒಳ್ಳೆಯವಳೋ? [QE][QS2]ಅವಳ ಸುತ್ತಲೂ ನೀರಿತ್ತು. [QE][QS]ನದಿ ಅವಳ ರಕ್ಷಣೆ, [QE][QS2]ನೀರು ಅವಳ ಗೋಡೆ. [QE]
9. [QS]ಕೂಷ್ ಮತ್ತು ಈಜಿಪ್ಟ್ ಅವಳ ಅಪಾರ ಬಲವಾಗಿದ್ದವು. [QE][QS2]ಪೂಟರೂ, ಲಿಬಿಯದವರೂ ಅವಳ ಸಹಾಯಕರಾಗಿದ್ದರು. [QE]
10. [QS]ಆದರೆ ಅವಳು ಸೆರೆಯಾಗಿ [QE][QS2]ದೇಶಾಂತರಕ್ಕೆ ಹೋದಳು. [QE][QS]ಅವಳ ಕೂಸುಗಳು ಸಹ [QE][QS2]ಎಲ್ಲಾ ಬೀದಿಗಳ ಮುಖ್ಯ ಸ್ಥಳಗಳಲ್ಲಿ ಅಪ್ಪಳಿಸಲಾಯಿತು. [QE][QS]ಅವಳ ಪ್ರಧಾನರಿಗೋಸ್ಕರ ಚೀಟುಹಾಕಿದರು. [QE][QS2]ಅವಳ ಮಹನೀಯರೆಲ್ಲರನ್ನು ಸಂಕೋಲೆಗಳಿಂದ ಕಟ್ಟಿದರು. [QE]
11. [QS]ನೀನೂ ಸಹ ಅಮಲೇರಿ ಅಡಗಿಕೊಳ್ಳುವೆ; [QE][QS2]ನೀನೂ ಸಹ ಶತ್ರುವಿನ ನಿಮಿತ್ತ [QE][QS2]ಅಡಗಿಕೊಳ್ಳಲು ಆಶ್ರಯ ಸ್ಥಾನವನ್ನು ಹುಡುಕುವೆ. [QE][PBR]
12. [QS]ನಿನ್ನ ಕೋಟೆಗಳೆಲ್ಲಾ ಮೊದಲನೆಯ ಮಾಗಿದ ಹಣ್ಣುಳ್ಳ [QE][QS2]ಅಂಜೂರದ ಗಿಡಗಳ ಹಾಗಿರುವುವು. [QE][QS]ಅಲ್ಲಾಡಿಸಿದರೆ ಹಣ್ಣು [QE][QS2]ತಿನ್ನುವವನ ಬಾಯಿಗೆ ಬೀಳುವುದು. [QE]
13. [QS]ಇಗೋ, ನಿನ್ನ ಸೈನ್ಯಗಳನ್ನು ನೋಡು. [QE][QS2]ಅವರೆಲ್ಲರೂ ಮಹಿಳೆಯರೇ. [QE][QS]ನಿನ್ನ ದೇಶದ ಬಾಗಿಲುಗಳು [QE][QS2]ನಿನ್ನ ಶತ್ರುಗಳಿಗೆ ವಿಶಾಲವಾಗಿ ತೆರೆದಿವೆ. [QE][QS2]ಬೆಂಕಿ ನಿನ್ನ ಅಗುಳಿಗಳನ್ನು ತಿಂದುಬಿಟ್ಟಿದೆ. [QE][PBR]
14. [QS]ಮುತ್ತಿಗೆಗೋಸ್ಕರ ನೀರನ್ನು ಸೇದು; [QE][QS2]ನಿನ್ನ ಬಲವಾದ ಕೋಟೆಗಳನ್ನು ಭದ್ರಮಾಡು; ಕೆಸರಿನಲ್ಲಿ ಸೇರು; [QE][QS]ಮಣ್ಣನ್ನು ತುಳಿ; [QE][QS2]ಇಟ್ಟಿಗೆ ಅಚ್ಚನ್ನು ಹಿಡಿ. [QE]
15. [QS]ಅಲ್ಲೇ ಬೆಂಕಿ ನಿನ್ನನ್ನು ತಿನ್ನುವುದು; [QE][QS2]ಖಡ್ಗವು ನಿನ್ನನ್ನು ಕಡಿದುಬಿಡುವುದು; [QE][QS2]ಹುಲ್ಲು ಮೇಯುವ ಹುಳ ನಿನ್ನನ್ನು ತಿಂದುಬಿಡುವುದು; [QE][QS]ಬಹುಮಂದಿಯಾಗು, ಮಿಡತೆಗಳಂತೆ [QE][QS2]ಬಹುಮಂದಿಯಾಗು, ಗುಂಪು ಮಿಡತೆಗಳಂತೆ [QE]
16. [QS]ನಿನ್ನ ವರ್ತಕರನ್ನು ಆಕಾಶದ ನಕ್ಷತ್ರಗಳಿಗಿಂತ [QE][QS2]ಹೆಚ್ಚಾಗಿ ಸಂಖ್ಯೆಯಲ್ಲಿ ಬೆಳೆಸಿದ್ದೀ. [QE][QS]ಆದರೆ ಅವರು ಮಿಡತೆಗಳಂತೆ ದೇಶವನ್ನು [QE][QS2]ಸುಲಿದುಕೊಂಡು ಹಾರಿಹೋಗುವರು. [QE]
17. [QS]ನಿನ್ನ ಕಾವಲುಗಾರರು ಮಿಡತೆಗಳ ಹಾಗೆಯೂ, [QE][QS2]ನಿನ್ನ ಅಧಿಪತಿಗಳು ತಂಪಾದ ದಿವಸದಲ್ಲಿ ಬೇಲಿಗಳೊಳಗೆ [QE][QS2]ಇಳಿದುಕೊಳ್ಳುವ ದೊಡ್ಡ ಮಿಡತೆಗಳ ಹಾಗೆಯೂ ಇದ್ದಾರೆ. [QE][QS]ಸೂರ್ಯೋದಯವಾಗುವಾಗ ಹಾರಿ ಹೋಗುತ್ತವೆ. [QE][QS2]ಆಗ ಅವು ಎಲ್ಲಿದ್ದಾವೆಂದು ಅವುಗಳ ಸ್ಥಳವು ತಿಳಿಯುವುದಿಲ್ಲ. [QE][PBR]
18. [QS]ಅಸ್ಸೀರಿಯದ ಅರಸನೇ, ನಿನ್ನ ಕುರುಬರು ತೂಕಡಿಸುತ್ತಾರೆ. [QE][QS2]ನಿನ್ನ ಪ್ರಧಾನರು ವಿಶ್ರಾಂತಿಗೈಯುತ್ತಿದ್ದಾರೆ. [QE][QS]ಕೂಡಿಸುವವರು ಯಾರೂ ಇಲ್ಲದಂತೆ [QE][QS2]ನಿನ್ನ ಜನರೆಲ್ಲರೂ ಬೆಟ್ಟಗಳಲ್ಲಿ ಚದರಿಹೋಗಿದ್ದಾರೆ. [QE]
19. [QS]ನಿನ್ನ ಗಾಯಕ್ಕೆ ಮದ್ದಿಲ್ಲ, [QE][QS2]ನಿನ್ನ ಗಾಯ ಪ್ರಾಣನಾಶಕ. [QE][QS]ನಿನ್ನ ಸುದ್ದಿಯನ್ನು ಕೇಳುವವರೆಲ್ಲರೂ [QE][QS2]ನಿನ್ನ ಪತನಕ್ಕಾಗಿ ಕೈ ತಟ್ಟುವರು. [QE][QS]ಏಕೆಂದರೆ ನಿನ್ನ ಕೆಡುಕಿಗೆ [QE][QS2]ನಿತ್ಯವೂ ಗುರಿಯಾಗದವರು ಯಾರಿದ್ದಾರೆ? [QE]
ಒಟ್ಟು 3 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 3 / 3
1 2 3
ನಿನೆವೆಗೆ ಕಷ್ಟ 1 ರಕ್ತಮಯ ಪಟ್ಟಣಕ್ಕೆ ಕಷ್ಟ, ಅದೆಲ್ಲಾ ಸುಳ್ಳಿನಿಂದಲೂ, ಕಳ್ಳತನದಿಂದಲೂ ತುಂಬಿದೆ, ಕೊಳ್ಳೆಯನ್ನೂ ಬಿಡುವುದಿಲ್ಲ. 2 ಚಾವಟಿಗೆ, ಚಬುಕಿನ ಶಬ್ದವೂ, ಚಕ್ರಗಳ ಧಡಧಡನೆಯ ಶಬ್ದವೂ, ಕುದುರೆಗಳ ಕುಣಿದಾಟವೂ, ರಥಗಳ ಹಾರಾಟವೂ ಇದೆ. 3 ಸವಾರರು ಹತ್ತುತ್ತಾರೆ, ಈಟಿಗಳು ಥಳಥಳಿಸುತ್ತವೆ, ಖಡ್ಗಗಳು ಮಿಂಚುತ್ತವೆ, ಹತರಾದವರು ಬಹಳ; ಹೆಣಗಳ ರಾಶಿ; ಅಸಂಖ್ಯಾತ ಮೃತ ದೇಹಗಳು, ಶವಗಳ ಮೇಲೆ ತತ್ತರಿಸುತ್ತಿರುವ ಜನರು, 4 ಇದೆಲ್ಲವೂ ಆ ಒಬ್ಬ ವೇಶ್ಯೆಯ ಕಾಮತೃಷೆಯಿಂದಾಗಿ, ವೇಶ್ಯೆಯು ಲೆಕ್ಕವಿಲ್ಲದ ವೇಶ್ಯಾವಾಟಿಕೆಯ ಬಹಳ. ಅವಳು ತನ್ನ ಸೂಳೆತನಗಳಿಂದ ಜನಾಂಗಗಳನ್ನೂ, ತನ್ನ ಮಾಟಗಳಿಂದ ಗೋತ್ರಗಳನ್ನೂ ಗುಲಾಮರನ್ನಾಗಿ ಮಾಡಿಕೊಂಡಳಲ್ಲವೇ? 5 ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ, “ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ. ನಿನ್ನ ಸೆರಗುಗಳನ್ನು ನಿನ್ನ ಮುಖದ ಮೇಲಿಂದ ಎತ್ತಿ, ಜನಾಂಗಗಳಿಗೆ ನಿನ್ನ ನಾಚಿಕೆಯನ್ನೂ, ರಾಜ್ಯಗಳಿಗೆ ನಿನ್ನ ನಿಂದೆಯ ಬೆತ್ತಲೆತನವನ್ನೂ ತೋರಿಸುತ್ತೇನೆ. 6 ಅಸಹ್ಯವಾದವುಗಳನ್ನು ನಿನ್ನ ಮೇಲೆ ಹಾಕಿ, ನಿನ್ನನ್ನು ನೀಚಳನ್ನಾಗಿ ಮಾಡಿ, ನಿನ್ನನ್ನು ಪರಿಹಾಸ್ಯಕ್ಕೀಡುಮಾಡುವೆನು. 7 ನಿನ್ನನ್ನು ನೋಡುವವರೆಲ್ಲರೂ ನಿನ್ನಿಂದ ಓಡಿಹೋಗಿ ಹೀಗೆ ಹೇಳುವರು, ‘ನಿನೆವೆ ಹಾಳಾಯಿತು, ಅದಕ್ಕೆ ಯಾರು ಚಿಂತೆಪಡುವರು?’ ನಿನ್ನನ್ನು ಆದರಿಸುವವರನ್ನು ನಾನು ಎಲ್ಲಿಂದ ಹುಡುಕಲಿ.” 8 ನೈಲ್ ನದಿಯ ಬಳಿ ನೆಲೆಯಾಗಿದ್ದ ತೆಬೆಸ್ಸಿಗಿಂತ ನೀನು ಒಳ್ಳೆಯವಳೋ? ಅವಳ ಸುತ್ತಲೂ ನೀರಿತ್ತು. ನದಿ ಅವಳ ರಕ್ಷಣೆ, ನೀರು ಅವಳ ಗೋಡೆ. 9 ಕೂಷ್ ಮತ್ತು ಈಜಿಪ್ಟ್ ಅವಳ ಅಪಾರ ಬಲವಾಗಿದ್ದವು. ಪೂಟರೂ, ಲಿಬಿಯದವರೂ ಅವಳ ಸಹಾಯಕರಾಗಿದ್ದರು. 10 ಆದರೆ ಅವಳು ಸೆರೆಯಾಗಿ ದೇಶಾಂತರಕ್ಕೆ ಹೋದಳು. ಅವಳ ಕೂಸುಗಳು ಸಹ ಎಲ್ಲಾ ಬೀದಿಗಳ ಮುಖ್ಯ ಸ್ಥಳಗಳಲ್ಲಿ ಅಪ್ಪಳಿಸಲಾಯಿತು. ಅವಳ ಪ್ರಧಾನರಿಗೋಸ್ಕರ ಚೀಟುಹಾಕಿದರು. ಅವಳ ಮಹನೀಯರೆಲ್ಲರನ್ನು ಸಂಕೋಲೆಗಳಿಂದ ಕಟ್ಟಿದರು. 11 ನೀನೂ ಸಹ ಅಮಲೇರಿ ಅಡಗಿಕೊಳ್ಳುವೆ; ನೀನೂ ಸಹ ಶತ್ರುವಿನ ನಿಮಿತ್ತ ಅಡಗಿಕೊಳ್ಳಲು ಆಶ್ರಯ ಸ್ಥಾನವನ್ನು ಹುಡುಕುವೆ. 12 ನಿನ್ನ ಕೋಟೆಗಳೆಲ್ಲಾ ಮೊದಲನೆಯ ಮಾಗಿದ ಹಣ್ಣುಳ್ಳ ಅಂಜೂರದ ಗಿಡಗಳ ಹಾಗಿರುವುವು. ಅಲ್ಲಾಡಿಸಿದರೆ ಹಣ್ಣು ತಿನ್ನುವವನ ಬಾಯಿಗೆ ಬೀಳುವುದು. 13 ಇಗೋ, ನಿನ್ನ ಸೈನ್ಯಗಳನ್ನು ನೋಡು. ಅವರೆಲ್ಲರೂ ಮಹಿಳೆಯರೇ. ನಿನ್ನ ದೇಶದ ಬಾಗಿಲುಗಳು ನಿನ್ನ ಶತ್ರುಗಳಿಗೆ ವಿಶಾಲವಾಗಿ ತೆರೆದಿವೆ. ಬೆಂಕಿ ನಿನ್ನ ಅಗುಳಿಗಳನ್ನು ತಿಂದುಬಿಟ್ಟಿದೆ. 14 ಮುತ್ತಿಗೆಗೋಸ್ಕರ ನೀರನ್ನು ಸೇದು; ನಿನ್ನ ಬಲವಾದ ಕೋಟೆಗಳನ್ನು ಭದ್ರಮಾಡು; ಕೆಸರಿನಲ್ಲಿ ಸೇರು; ಮಣ್ಣನ್ನು ತುಳಿ; ಇಟ್ಟಿಗೆ ಅಚ್ಚನ್ನು ಹಿಡಿ. 15 ಅಲ್ಲೇ ಬೆಂಕಿ ನಿನ್ನನ್ನು ತಿನ್ನುವುದು; ಖಡ್ಗವು ನಿನ್ನನ್ನು ಕಡಿದುಬಿಡುವುದು; ಹುಲ್ಲು ಮೇಯುವ ಹುಳ ನಿನ್ನನ್ನು ತಿಂದುಬಿಡುವುದು; ಬಹುಮಂದಿಯಾಗು, ಮಿಡತೆಗಳಂತೆ ಬಹುಮಂದಿಯಾಗು, ಗುಂಪು ಮಿಡತೆಗಳಂತೆ 16 ನಿನ್ನ ವರ್ತಕರನ್ನು ಆಕಾಶದ ನಕ್ಷತ್ರಗಳಿಗಿಂತ ಹೆಚ್ಚಾಗಿ ಸಂಖ್ಯೆಯಲ್ಲಿ ಬೆಳೆಸಿದ್ದೀ. ಆದರೆ ಅವರು ಮಿಡತೆಗಳಂತೆ ದೇಶವನ್ನು ಸುಲಿದುಕೊಂಡು ಹಾರಿಹೋಗುವರು. 17 ನಿನ್ನ ಕಾವಲುಗಾರರು ಮಿಡತೆಗಳ ಹಾಗೆಯೂ, ನಿನ್ನ ಅಧಿಪತಿಗಳು ತಂಪಾದ ದಿವಸದಲ್ಲಿ ಬೇಲಿಗಳೊಳಗೆ ಇಳಿದುಕೊಳ್ಳುವ ದೊಡ್ಡ ಮಿಡತೆಗಳ ಹಾಗೆಯೂ ಇದ್ದಾರೆ. ಸೂರ್ಯೋದಯವಾಗುವಾಗ ಹಾರಿ ಹೋಗುತ್ತವೆ. ಆಗ ಅವು ಎಲ್ಲಿದ್ದಾವೆಂದು ಅವುಗಳ ಸ್ಥಳವು ತಿಳಿಯುವುದಿಲ್ಲ. 18 ಅಸ್ಸೀರಿಯದ ಅರಸನೇ, ನಿನ್ನ ಕುರುಬರು ತೂಕಡಿಸುತ್ತಾರೆ. ನಿನ್ನ ಪ್ರಧಾನರು ವಿಶ್ರಾಂತಿಗೈಯುತ್ತಿದ್ದಾರೆ. ಕೂಡಿಸುವವರು ಯಾರೂ ಇಲ್ಲದಂತೆ ನಿನ್ನ ಜನರೆಲ್ಲರೂ ಬೆಟ್ಟಗಳಲ್ಲಿ ಚದರಿಹೋಗಿದ್ದಾರೆ. 19 ನಿನ್ನ ಗಾಯಕ್ಕೆ ಮದ್ದಿಲ್ಲ, ನಿನ್ನ ಗಾಯ ಪ್ರಾಣನಾಶಕ. ನಿನ್ನ ಸುದ್ದಿಯನ್ನು ಕೇಳುವವರೆಲ್ಲರೂ ನಿನ್ನ ಪತನಕ್ಕಾಗಿ ಕೈ ತಟ್ಟುವರು. ಏಕೆಂದರೆ ನಿನ್ನ ಕೆಡುಕಿಗೆ ನಿತ್ಯವೂ ಗುರಿಯಾಗದವರು ಯಾರಿದ್ದಾರೆ?
ಒಟ್ಟು 3 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 3 / 3
1 2 3
×

Alert

×

Kannada Letters Keypad References