1. {#1ನಿನೆವೆಯು ಬೀಳುವುದು } [QS]ನಿನೆವೆಯೇ, ಮುತ್ತಿಗೆ ಹಾಕುವವನು ನಿನಗೆ ವಿರೋಧವಾಗಿ ಹೊರಟಿದ್ದಾನೆ, [QE][QS2]ಕೋಟೆಯನ್ನು ಭದ್ರಪಡಿಸು; [QE][QS2]ದಾರಿಯನ್ನು ಕಾಯಿ; [QE][QS2]ನಡುವನ್ನು ಬಲಪಡಿಸಿಕೋ; [QE][QS2]ನಿನ್ನ ಶಕ್ತಿಯನ್ನು ಬಲವಾಗಿ ಗಟ್ಟಿಮಾಡಿಕೋ. [QE][PBR]
2. [QS]ಯೆಹೋವ ದೇವರು ಯಾಕೋಬಿನ ಹೆಚ್ಚಳವನ್ನು [QE][QS2]ಇಸ್ರಾಯೇಲಿನ ಹೆಚ್ಚಳದ ಹಾಗೆಯೇ ಪುನಃ ಸ್ಥಾಪಿಸುತ್ತಾರೆ. [QE][QS]ನಾಶಕರು ಅವುಗಳನ್ನು ನಾಶಮಾಡಿದರೂ [QE][QS2]ಅವರ ದ್ರಾಕ್ಷಿಬಳ್ಳಿಗಳನ್ನು ಕೆಡಿಸಿದ್ದಾರೆ. [QE][PBR]
3. [QS]ಸೈನಿಕರ ಗುರಾಣಿಗಳು ಕೆಂಪಾಗಿವೆ; [QE][QS2]ಯುದ್ಧವೀರರು ರಕ್ತವರ್ಣದ ಬಟ್ಟೆ ಧರಿಸಿದ್ದಾರೆ; [QE][QS]ಆತನು ಸಿದ್ಧಮಾಡುವ ದಿವಸದಲ್ಲಿ, [QE][QS2]ರಥಗಳ ಉಕ್ಕು ಥಳಥಳಿಸುವುದು, [QE][QS2]ತುರಾಯಿ ಮರದಿಂದ ಮಾಡಿದ ಈಟಿಗಳು ಝಳಪಿಸುವುವು; [QE]
4. [QS]ರಥಗಳು ಬೀದಿಗಳಲ್ಲಿ ಬಿರುಗಾಳಿಯಂತೆ ಓಡಾಡುತ್ತವೆ, [QE][QS2]ಅವು ಚೌಕಗಳಲ್ಲಿ ವೇಗವಾಗಿ ಹಿಂದಕ್ಕೆ ಮತ್ತು ಮುಂದಕ್ಕೆ ನುಗ್ಗುತ್ತವೆ. [QE][QS]ಅವು ಉರಿಯುವ ಪಂಜುಗಳಂತೆ ಕಾಣುತ್ತವೆ; [QE][QS2]ಅವರು ಮಿಂಚಿನಂತೆ ಸುತ್ತಾಡುತ್ತಾರೆ. [QE][PBR]
5. [QS]ನಿನೆವೆಯು ತನ್ನ ಸೇನಾಪತಿಗಳನ್ನು ಕರೆಕಳುಹಿಸಿದ್ದಾನೆ. [QE][QS2]ಅವರು ತಮ್ಮ ನಡೆಯಲ್ಲಿ ಎಡವುವರು. [QE][QS]ಅವರು ಸುಣ್ಣದ ಗೋಡೆಯ ಬಳಿಗೆ ತ್ವರೆಯಾಗಿ ಬರುವರು. [QE][QS2]ರಕ್ಷಣಾತ್ಮಕ ಗುರಾಣಿಯನ್ನು ಸಿದ್ಧ ಮಾಡಲಾಗಿದೆ. [QE]
6. [QS]ನದಿಗಳ ಬಾಗಿಲುಗಳು ತೆರೆಯಲಾಗಿವೆ; [QE][QS2]ಅರಮನೆ ಬಿದ್ದುಹೋಗುವುದು. [QE]
7. [QS]ನಿನೆವೆಯು ಸೆರೆಯಾಗಿ [QE][QS2]ಹೋಗಬೇಕೆಂಬ ಆಜ್ಞೆಯಾಗಿದೆ. [QE][QS]ಅವಳ ದಾಸಿಯರು ಪಾರಿವಾಳಗಳಂತೆ ರೋದಿಸುವರು, [QE][QS2]ತಮ್ಮ ಎದೆಗಳನ್ನು ಬಡಿದುಕೊಳ್ಳುವರು. [QE]
8. [QS]ನಿನೆವೆ ಹುಟ್ಟಿದಂದಿನಿಂದ ನೀರಿನ ಕೆರೆಯ ಹಾಗಿತ್ತು. [QE][QS2]ಅದರ ನೀರು ಹರಿದು ಖಾಲಿಯಾಗುತ್ತಲಿದೆ. [QE][QS]“ನಿಲ್ಲಿರಿ! ನಿಲ್ಲಿರಿ!” ಎಂದು ಅವರು ಕೂಗಿದರೂ, [QE][QS2]ಒಬ್ಬನೂ ಹಿಂದಕ್ಕೆ ನೋಡುವುದಿಲ್ಲ. [QE]
9. [QS]ಬೆಳ್ಳಿಯನ್ನು ಸುಲಿದುಕೊಳ್ಳಿರಿ; [QE][QS2]ಬಂಗಾರವನ್ನು ಸುಲಿದುಕೊಳ್ಳಿರಿ. [QE][QS]ಕೂಡಿಸಿಟ್ಟ ಧನಕ್ಕೂ, [QE][QS2]ಸಕಲ ವಿಧವಾದ ಶ್ರೇಷ್ಠ ವಸ್ತುಗಳ ನಿಧಿಗೂ ಪಾರವೇ ಇಲ್ಲ. [QE]
10. [QS]ನಿನೆವೆ ಬರಿದಾಗಿದೆ, ಸುಲಿಗೆಯಾಗಿದೆ, ಹಾಳುಬಿದ್ದಿದೆ, [QE][QS2]ಹೃದಯಗಳು ಕರಗುತ್ತವೆ; ಮೊಣಕಾಲುಗಳು ಒಟ್ಟಾಗಿ ಬಡಿದುಕೊಳ್ಳುತ್ತವೆ. [QE][QS2]ಎಲ್ಲರ ಸೊಂಟಗಳಲ್ಲಿ ಸಂಕಟವಿದೆ; ಎಲ್ಲಾ ಮುಖಗಳು ಕಳೆಗುಂದುತ್ತವೆ. [QE][PBR]
11. [QS]ಸಿಂಹದ ಗವಿಯೂ, [QE][QS2]ಎಳೆಯ ಸಿಂಹಗಳು ಮೇಯುವ ಸ್ಥಳವೂ ಎಲ್ಲಿ? [QE][QS]ಸಿಂಹವೂ, ಸಿಂಹಿಣಿಯೂ, [QE][QS2]ಸಿಂಹದ ಮರಿಗಳೂ ಭಯವಿಲ್ಲದೆ ನಡೆದಾಡುವ ಸ್ಥಳಗಳೆಲ್ಲಿ? [QE]
12. [QS]ಸಿಂಹವು, ತನ್ನ ಮರಿಗಳಿಗೆ, [QE][QS2]ಸಿಂಹಿಣಿಗಳಿಗೆ, ಕೊರಳು ಹಿಸುಕಿ ಕೊಂದ ಪ್ರಾಣಿಗಳಿಂದ [QE][QS2]ತನ್ನ ಗುಹೆಯನ್ನು ತುಂಬಿಸುತ್ತಿತ್ತು. [QE][PBR]
13. [QS]ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: [QE][QS2]“ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ. [QE][QS]ನಿನ್ನ ರಥಗಳನ್ನು ಹೊಗೆಯಾಗಲು ಸುಡುತ್ತೇನೆ. [QE][QS2]ಖಡ್ಗವು ನಿನ್ನ ಎಳೆಯ ಸಿಂಹಗಳನ್ನು ನುಂಗಿಬಿಡುವುದು. [QE][QS2]ನಿನಗೆ ಸಿಕ್ಕಿದ ಬೇಟೆಯನ್ನು ಭೂಮಿಯ ಮೇಲಿನಿಂದ ತೆಗೆದುಬಿಡುತ್ತೇನೆ. [QE][QS]ನಿನ್ನ ರಾಯಭಾರಿಗಳ ಧ್ವನಿಯು [QE][QS2]ಇನ್ನು ಕೇಳಿಸದು.” [QE]