1. [PS]ಯೆಹೂದದ ಅರಸರಾದ ಯೋತಾಮನ ಆಹಾಜನ, ಹಿಜ್ಕೀಯನ, ದಿವಸಗಳಲ್ಲಿ ಮೊರೇಷೆತಿನವನಾದ ಮೀಕನಿಗೆ ಬಂದ ಯೆಹೋವ ದೇವರ ವಾಕ್ಯವು. ಅವನು ಸಮಾರ್ಯ ಮತ್ತು ಯೆರೂಸಲೇಮಿನ ವಿಷಯವಾಗಿ ಕಂಡ ದರ್ಶನ. [PE][PBR] [PBR]
2. [QS]ಎಲ್ಲಾ ಜನಗಳೇ ಕೇಳಿರಿ, [QE][QS2]ಭೂಮಿಯೇ, ಅದರಲ್ಲಿರುವವರೆಲ್ಲರೇ, ಕಿವಿಗೊಡಿರಿ. [QE][QS]ಸಾರ್ವಭೌಮ ಯೆಹೋವ ದೇವರು ತಮ್ಮ ಪರಿಶುದ್ಧ ಮಂದಿರದೊಳಗಿಂದ ನಿಮಗೆ [QE][QS2]ವಿರೋಧವಾಗಿ ಸಾಕ್ಷಿ ಹೇಳುವರು. [QE]
3. {#1ಸಮಾರ್ಯಕ್ಕೂ ಯೆರೂಸಲೇಮಿಗೂ ದಂಡನೆ } [QS]ಯೆಹೋವ ದೇವರು ತಮ್ಮ ವಾಸಸ್ಥಾನದಿಂದ ಇಳಿದು ಬರುತ್ತಾರೆ. [QE][QS2]ಅವರು ಇಳಿದು ಭೂಮಿಯ ಉನ್ನತವಾದ ಸ್ಥಳಗಳ ಮೇಲೆ ಸಂಚರಿಸುತ್ತಾರೆ. [QE]
4. [QS]ಬೆಂಕಿಯ ಮುಂದೆ ಮೇಣದ ಹಾಗೆಯೂ [QE][QS2]ಇಳಿಜಾರಿನ ಸ್ಥಳದಲ್ಲಿ ರಭಸವಾಗಿ ಹರಿಯುವ ನೀರಿನ ಹಾಗೆಯೂ [QE][QS]ಬೆಟ್ಟಗಳು ಆತನ ಕೆಳಗೆ ಕರಗುವುವು; [QE][QS2]ತಗ್ಗುಗಳು ಸೀಳುವುವು. [QE]
5. [QS]ಇದೆಲ್ಲಾ ಯಾಕೋಬಿನ ಅಪರಾಧದ ನಿಮಿತ್ತವೇ [QE][QS2]ಇಸ್ರಾಯೇಲಿನ ಮನೆತನದವರ ಪಾಪದಿಂದಲೇ, [QE][QS]ಯಾಕೋಬನ ಅಪರಾಧವೇನು? ಅದು ಸಮಾರ್ಯವಲ್ಲವೇ? [QE][QS]ಯೆಹೂದದ ಉನ್ನತ ಪೂಜಾಸ್ಥಳ ಯಾವುದು? [QE][QS2]ಅದು ಯೆರೂಸಲೇಮು ಅಲ್ಲವೋ? [QE][PBR]
6. [QS]ಹೀಗಿರುವುದರಿಂದ ನಾನು ಸಮಾರ್ಯವನ್ನು ಹೊಲದ ದಿಬ್ಬವನ್ನಾಗಿಯೂ [QE][QS2]ದ್ರಾಕ್ಷಿಬಳ್ಳಿ ನೆಡುವ ಸ್ಥಳವನ್ನಾಗಿಯೂ ಮಾಡುವೆನು. [QE][QS]ಅದರ ಕಲ್ಲುಗಳನ್ನು ತಗ್ಗಿನಲ್ಲಿ ಸುರಿದುಬಿಟ್ಟು, [QE][QS2]ಅದರ ಅಸ್ತಿವಾರಗಳನ್ನು ಹೊರಗೆಡಹುವೆನು. [QE]
7. [QS]ಅದರ ವಿಗ್ರಹಗಳೆಲ್ಲಾ ತುಂಡುಗಳಾಗುವಂತೆ ಮಾಡುವೆನು. [QE][QS2]ಅದರ ಆಲಯದ ಕಾಣಿಕೆಗಳೆಲ್ಲಾ ಬೆಂಕಿಯಿಂದ ಸುಟ್ಟುಹೋಗುವುದು. [QE][QS2]ಅದರ ವಿಗ್ರಹಗಳನ್ನೆಲ್ಲಾ ಹಾಳುಮಾಡುವೆನು. [QE][QS]ಅದು ವೇಶ್ಯಾವೃತ್ತಿಯ ಕೂಲಿಯಿಂದ ಕೂಡಿಸಿಕೊಂಡವು. [QE][QS2]ವೇಶ್ಯಾವೃತ್ತಿಯ ಕೂಲಿಯನ್ನಾಗಿಯೇ ಅವುಗಳನ್ನು ಉಪಯೋಗಿಸಬೇಕಾಗುತ್ತದೆ. [QE]
8. {#1ಗೋಳಾಟ ಮತ್ತು ಕೂಗಾಟ } [QS]ಆದ್ದರಿಂದ ನಾನು ಗೋಳಾಡಿ ಅರಚುವೆನು. [QE][QS2]ಬರಿಗಾಲಿನಲ್ಲಿಯೂ ಬೆತ್ತಲೆಯಾಗಿಯೂ ಹೋಗುವೆನು. [QE][QS]ನರಿಗಳ ಹಾಗೆ ಕೂಗುವೆನು, [QE][QS2]ಉಷ್ಟ್ರಪಕ್ಷಿಯಂತೆ ನರಳುವೆನು. [QE]
9. [QS]ಸಮಾರ್ಯದ ಗಾಯವು ಗುಣವಾಗದಂಥದ್ದು, [QE][QS2]ಅದು ಯೆಹೂದಕ್ಕೆ ಬಂತು; [QE][QS]ನನ್ನ ಜನರ ಬಾಗಿಲಿಗೂ [QE][QS2]ಯೆರೂಸಲೇಮಿನವರೆಗೂ ಅದು ತಲುಪಿತು. [QE]
10. [QS]ಗತ್ ಊರಿನಲ್ಲಿ ಅದನ್ನು ತಿಳಿಸಬೇಡ; [QE][QS2]ಸ್ವಲ್ಪವಾದರೂ ಅಳಬೇಡ; [QE][QS]ಬೇತ್ ಒಫ್‌ರಾಹದಲ್ಲಿ[* ಬೇತ್ ಒಫ್ ಅಂದರೆ ಧೂಳಿನ ಮನೆ ] [QE][QS2]ಧೂಳಿನಲ್ಲಿ ಹೊರಳಾಡು. [QE]
11. [QS]ಶಾಫೀರಿನ ನಿವಾಸಿಯೇ, [QE][QS2]ನಗ್ನತೆಯಿಂದಲೂ ನಾಚಿಕೆಯಿಂದಲೂ ಹಾದುಹೋಗಿರಿ, [QE][QS]ಚಾನಾನಿನಲ್ಲಿ ವಾಸಿಸುವವರು [QE][QS2]ಹೊರಗೆ ಬರುವುದಿಲ್ಲ, [QE][QS]ಬೇತ್ ಎಚೆಲು ನರಳುತ್ತಿದೆ. [QE][QS2]ಅದು ಇನ್ನು ಮುಂದೆ ನಿಮ್ಮನ್ನು ರಕ್ಷಿಸುವುದಿಲ್ಲ. [QE]
12. [QS]ಕೇಡು ಯೆಹೋವ ದೇವರಿಂದ ಇಳಿದು [QE][QS2]ಯೆರೂಸಲೇಮಿನ ಪುರದ್ವಾರಕ್ಕೆ ತಗಲಿದ ಕಾರಣ [QE][QS]ಮಾರೋತಿನವರು ಮೇಲುಂಟಾಗುವುದಿಲ್ಲವೋ ಎಂದು [QE][QS2]ವೇದನೆ ಪಡುತ್ತಾರೆ. [QE]
13. [QS]ಲಾಕೀಷಿನ ನಿವಾಸಿಗಳೇ, [QE][QS2]ಕುದುರೆಗಳನ್ನು ರಥಕ್ಕೆ ಕಟ್ಟಿರಿ, [QE][QS]ಚೀಯೋನ್ ಮಗಳ ಪಾಪವು ನಿನ್ನಿಂದ ಪ್ರಾರಂಭವಾಯಿತು [QE][QS2]ಇಸ್ರಾಯೇಲಿನ ದ್ರೋಹಗಳು ನಿಮ್ಮಲ್ಲಿಯೇ ಹುಟ್ಟಿ ಬಂದವು. [QE]
14. [QS]ಹೀಗಿರುವುದರಿಂದ ಮೋರೆಶತ್ ಗತ್ [QE][QS2]ಊರಿಗೆ ಅಗಲಿ ಹೋಗುವ ಕಾಣಿಕೆಗಳನ್ನು ಕೊಡುವೆ. [QE][QS]ಅಕ್ಜೀಬಿನ ಮನೆತನಗಳು [QE][QS2]ಇಸ್ರಾಯೇಲಿನ ಅರಸರಿಗೆ ಮೋಸಮಾಡುವುವು. [QE]
15. [QS]ಮಾರೇಷದ ನಿವಾಸಿಯೇ, [QE][QS2]ನಿನಗೆ ವಿರೋಧವಾಗಿ ಜಯಶಾಲಿಗಳನ್ನು ನಾನು ತರುವೆನು. [QE][QS]ಇಸ್ರಾಯೇಲಿನ ಮಹಿಮೆಯಾದಾತನು [QE][QS2]ಅದುಲ್ಲಾಮಿನ ಮಟ್ಟಿಗೂ ಬರುವನು. [QE]
16. [QS]ನಿನ್ನ ಮುದ್ದುಮಕ್ಕಳಿಗೋಸ್ಕರ [QE][QS2]ತಲೆ ಬೋಳಿಸಿಕೊಂಡು ಕ್ಷೌರಮಾಡಿಸಿಕೋ. [QE][QS]ನಿನ್ನ ಬೋಳುತನವನ್ನು ಹದ್ದಿನಂತೆ ಮಾಡಿಕೋ. [QE][QS2]ಏಕೆಂದರೆ ಅವರು ನಿನ್ನನ್ನು ಬಿಟ್ಟು ಸೆರೆಯಾಗಿ ಹೋಗುವರು. [QE]