ಪವಿತ್ರ ಬೈಬಲ್

ಓಪನ್ ಸಮಕಾಲೀನ ಆವೃತ್ತಿ (OCV)
ಮಾರ್ಕನು
1. {#1ಯುಗದ ಸಮಾಪ್ತಿಯ ಸೂಚನೆಗಳು }
2. [PS]ಯೇಸು ದೇವಾಲಯದೊಳಗಿಂದ ಹೊರಗೆ ಹೋಗುತ್ತಿದ್ದಾಗ ಅವರ ಶಿಷ್ಯರಲ್ಲಿ ಒಬ್ಬನು ಯೇಸುವಿಗೆ, “ಬೋಧಕರೇ, ಇಲ್ಲಿ ಎಂಥಾ ಭಾರಿ ಕಲ್ಲುಗಳು ಮತ್ತು ಎಂಥಾ ಮಹಾ ಕಟ್ಟಡಗಳು ಇವೆ ನೋಡಿರಿ!” ಎಂದನು. [PE]
3. [PS]ಯೇಸು ಅವನಿಗೆ ಉತ್ತರವಾಗಿ, “ನೀನು ಈ ದೊಡ್ಡ ಕಟ್ಟಡಗಳನ್ನು ನೋಡುತ್ತೀಯೋ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವುದಿಲ್ಲ; ಎಲ್ಲವೂ ಕೆಡವಲಾಗುವವು,” ಎಂದರು. [PE][PS]ಯೇಸು ಓಲಿವ್ ಗುಡ್ಡದ ಮೇಲೆ ದೇವಾಲಯಕ್ಕೆ ಎದುರಾಗಿ ಕುಳಿತುಕೊಂಡಿದ್ದಾಗ ಪೇತ್ರ, ಯಾಕೋಬ, ಯೋಹಾನ, ಅಂದ್ರೆಯ ಇವರು ಪ್ರತ್ಯೇಕವಾಗಿ ಯೇಸುವಿಗೆ,
4. “ಇವೆಲ್ಲಾ ಯಾವಾಗ ಆಗುವವು? ಇವೆಲ್ಲವೂ ನೆರವೇರುವುದಕ್ಕೆ ಸೂಚನೆ ಏನು? ನಮಗೆ ಹೇಳು,” ಎಂದು ಕೇಳಿದರು. [PE]
5. [PS]ಯೇಸು ಅವರಿಗೆ ಹೀಗೆಂದನು, “ಯಾರೂ ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರಿಕೆಯಾಗಿರಿ.
6. ಅನೇಕರು ನನ್ನ ಹೆಸರಿನಲ್ಲಿ ಬಂದು, ‘ನಾನೇ ಕ್ರಿಸ್ತನು’ ಎಂದು ಹೇಳಿ ಅನೇಕರನ್ನು ಮೋಸಗೊಳಿಸುವರು.
7. ಇದಲ್ಲದೆ ಯುದ್ಧಗಳನ್ನೂ, ಯುದ್ಧಗಳ ಸುದ್ದಿಗಳನ್ನೂ ನೀವು ಕೇಳುವಾಗ ಕಳವಳಪಡಬೇಡಿರಿ. ಏಕೆಂದರೆ ಇವೆಲ್ಲವು ಸಂಭವಿಸುವುದು ಅಗತ್ಯ. ಆದರೆ ಇದು ಇನ್ನೂ ಅಂತ್ಯವಲ್ಲ.
8. ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು. ನಾನಾ ಕಡೆಗಳಲ್ಲಿ ಭೂಕಂಪಗಳಾಗುವವು. ಬರಗಾಲಗಳು ಉಂಟಾಗುವವು, ಇವು ಪ್ರಸವವೇದನೆಯ ಪ್ರಾರಂಭ ಮಾತ್ರ. [PE]
9. [PS]“ನೀವು ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಜನರು ನಿಮ್ಮನ್ನು ನ್ಯಾಯಸ್ಥಾನಗಳಿಗೆ ಒಪ್ಪಿಸುವರು, ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು. ನನ್ನ ನಿಮಿತ್ತವಾಗಿ ಅಧಿಕಾರಿಗಳ ಮತ್ತು ಅರಸರ ಮುಂದೆ ನಿಲ್ಲಿಸುವರು. ಹೀಗೆ ಇದು ಅವರಿಗೆ ಸಾಕ್ಷಿಯಾಗಿರುವುದು.
10. ಸುವಾರ್ತೆಯು ಮೊದಲು ಎಲ್ಲಾ ಜನಾಂಗಗಳಲ್ಲಿ ಸಾರುವುದು ಅಗತ್ಯವಾಗಿದೆ.
11. ಅವರು ನಿಮ್ಮನ್ನು ಬಂಧಿಸಿ ಒಪ್ಪಿಸುವುದಕ್ಕಾಗಿ ತೆಗೆದುಕೊಂಡು ಹೋಗುವಾಗ ನೀವು ಏನು ಮಾತನಾಡಬೇಕೆಂಬುದನ್ನು ಮುಂಚಿತವಾಗಿಯೇ ಚಿಂತಿಸಬೇಡಿರಿ. ಆ ಗಳಿಗೆಯಲ್ಲಿ ನಿಮ್ಮ ಮನಸ್ಸಿನಲ್ಲಿ ನಿಮಗೆ ಯಾವುದು ಕೊಡಲಾಗುವುದೋ ಅದನ್ನೇ ಮಾತನಾಡಿರಿ. ಏಕೆಂದರೆ ಮಾತನಾಡುವವರು ನೀವಲ್ಲ, ಪವಿತ್ರಾತ್ಮನೇ. [PE]
12. [PS]“ಸಹೋದರನು ತನ್ನ ಸಹೋದರನನ್ನೂ, ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು. ಮಕ್ಕಳು ತಮ್ಮ ತಂದೆತಾಯಿಗಳಿಗೆ ವಿರೋಧವಾಗಿ ಎದ್ದು ಅವರನ್ನು ಕೊಲ್ಲಿಸುವರು.
13. ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ದ್ವೇಷಮಾಡುವರು. ಆದರೆ ಕೊನೆಯವರೆಗೂ ತಾಳುವವನೇ ರಕ್ಷಣೆಹೊಂದುವನು. [PE]
14. [PS]“ಆದರೆ ‘ಅಸಹ್ಯ ವಸ್ತು’[* ದಾನಿ 9:27; 11:31; 12:11 ] ನಿಲ್ಲಬಾರದ ಸ್ಥಳದಲ್ಲಿ ನಿಂತಿರುವುದನ್ನು ನೀವು ಕಾಣುವಾಗ ಓದುವವನು ತಿಳಿದುಕೊಳ್ಳಲಿ. ಆಗ ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಲಿ.
15. ಮಾಳಿಗೆಯ ಮೇಲಿದ್ದವರು ಕೆಳಗೆ ಇಳಿದು ಮನೆಯೊಳಕ್ಕೆ ಹೋಗದಿರಲಿ; ತಮ್ಮ ಮನೆಯೊಳಗೆ ಪ್ರವೇಶಿಸಿ ಅದರೊಳಗಿಂದ ಏನನ್ನೂ ತೆಗೆದುಕೊಳ್ಳದಿರಲಿ.
16. ಹೊಲದಲ್ಲಿರುವವರು ಬಟ್ಟೆಗಳನ್ನು ತೆಗೆದುಕೊಳ್ಳುವುದಕ್ಕೆ ಹಿಂದಿರುಗದಿರಲಿ.
17. ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಹಾಲುಣಿಸುವ ತಾಯಂದಿರಿಗೂ ಕಷ್ಟ!
18. ಈ ಸಂಕಟ ಚಳಿಗಾಲದಲ್ಲಿ ಆಗದಂತೆ ನೀವು ಪ್ರಾರ್ಥಿಸಿರಿ.
19. ಆ ದಿವಸಗಳಲ್ಲಿ ಮಹಾ ಸಂಕಟವಿರುವುದು, ದೇವರು ಜಗತ್ತನ್ನು ಸೃಷ್ಟಿಸಿದ ದಿನದಿಂದ ಮೊದಲುಗೊಂಡು ಈ ಸಮಯದವರೆಗೂ ಅಂಥ ಸಂಕಟವು ಆಗಲಿಲ್ಲ. ಇನ್ನು ಮುಂದೆಯೂ ಆಗುವುದಿಲ್ಲ. [PE]
20. [PS]“ಕರ್ತನು ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಯಾರೂ ತಪ್ಪಿಹೋಗುವುದಿಲ್ಲ. ಆದರೆ ತಾನು ಆಯ್ಕೆಯಾದವರಿಗಾಗಿ ಆ ದಿನಗಳನ್ನು ಕಡಿಮೆ ಮಾಡಿದ್ದಾರೆ.
21. ಆಗ ಯಾರಾದರೂ ನಿಮಗೆ, ‘ಇಗೋ, ಕ್ರಿಸ್ತನು ಇಲ್ಲಿದ್ದಾನೆ, ಅಗೋ, ಆತನು ಅಲ್ಲಿದ್ದಾನೆ,’ ಎಂದು ಹೇಳಿದರೆ ನಂಬಬೇಡಿರಿ.
22. ಏಕೆಂದರೆ ಸುಳ್ಳು ಕ್ರಿಸ್ತರು ಮತ್ತು ಸುಳ್ಳು ಪ್ರವಾದಿಗಳು ಎದ್ದು, ಸಾಧ್ಯವಾದರೆ ಆಯ್ಕೆಯಾದವರನ್ನು ಸಹ ಮೋಸಗೊಳಿಸುವಂತೆ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು.
23. ಆದರೆ ನೀವು ಜಾಗರೂಕರಾಗಿರಿ, ನಾನು ನಿಮಗೆ ಎಲ್ಲವುಗಳನ್ನು ಮುಂದಾಗಿಯೆ ಹೇಳಿದ್ದೇನೆ. [PE]
24. [PS]“ಇದಲ್ಲದೆ ಆ ದಿವಸಗಳಲ್ಲಿ ಸಂಕಟವು ತೀರಿದ ನಂತರ, [PE][QS]“ ‘ಸೂರ್ಯನಿಗೆ ಕತ್ತಲು ಮುಸುಕುವುದು; [QE][QS2]ಚಂದ್ರನು ಕಾಂತಿಹೀನನಾಗುವನು. [QE]
25. [QS]ಆಕಾಶದಿಂದ ನಕ್ಷತ್ರಗಳು ಬೀಳುವವು [QE][QS2]ಮತ್ತು ಆಕಾಶದ ಶಕ್ತಿಗಳು ಕದಲುವವು.’[† ಯೆಶಾಯ 13:10; 34:4 ] [QE]
26. [PS]“ಆಗ ಮನುಷ್ಯಪುತ್ರನಾದ ನಾನು ಬಹು ಶಕ್ತಿಯಿಂದಲೂ ಮಹಿಮೆಯಿಂದಲೂ ಮೇಘಗಳಲ್ಲಿ ಬರುವುದನ್ನು ಅವರು ಕಾಣುವರು.
27. ನಾನು ನನ್ನ ದೂತರನ್ನು ಕಳುಹಿಸಿ ಭೂಮಿಯ ಕಟ್ಟಕಡೆಯಿಂದ ಆಕಾಶದ ಕಟ್ಟಕಡೆಯವರೆಗೆ ನಾನು ಆರಿಸಿಕೊಂಡವರನ್ನು ನಾಲ್ಕು ದಿಕ್ಕುಗಳಿಂದಲೂ ಒಟ್ಟುಗೂಡಿಸುವೆನು. [PE]
28. [PS]“ಅಂಜೂರದ ಮರದ ಸಾಮ್ಯದಿಂದ ಈ ಪಾಠವನ್ನು ಕಲಿತುಕೊಳ್ಳಿರಿ: ಅದರ ರೆಂಬೆ ಇನ್ನೂ ಎಳೆಯದಾಗಿದ್ದು ಎಲೆಗಳನ್ನು ಬಿಡುವಾಗ ಬೇಸಿಗೆಯು ಹತ್ತಿರವಾಯಿತೆಂದು ನೀವು ತಿಳಿದುಕೊಳ್ಳುತ್ತೀರಿ.
29. ಅದೇ ಪ್ರಕಾರ ಇವೆಲ್ಲವೂ ಸಂಭವಿಸುವುದನ್ನು ನೀವು ಕಾಣುವಾಗ, ಮನುಷ್ಯಪುತ್ರನಾದ ನಾನು ಬಾಗಿಲ ಹತ್ತಿರದಲ್ಲಿಯೇ ಇದ್ದೇನೆ ಎಂದು ತಿಳಿದುಕೊಳ್ಳಿರಿ.
30. ಇವೆಲ್ಲವೂ ನೆರವೇರುವವರೆಗೆ ಈ ಸಂತತಿಯು ಅಳಿದುಹೋಗುವುದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
31. ಭೂಮ್ಯಾಕಾಶಗಳು ಅಳಿದುಹೋಗುವುವು, ಆದರೆ ನನ್ನ ಮಾತುಗಳು ಅಳಿದುಹೋಗುವುದೇ ಇಲ್ಲ. [PE]
32. {#1ಆ ದಿನವು ಮತ್ತು ಆ ಗಳಿಗೆಯು ಯಾರಿಗೂ ತಿಳಿಯದು } [PS]“ಆ ದಿನದ ಮತ್ತು ಆ ಗಳಿಗೆಯ ವಿಷಯವಾಗಿ ತಂದೆಗೆ ಹೊರತು ಯಾವ ಮನುಷ್ಯನಿಗಾಗಲಿ, ಪರಲೋಕದಲ್ಲಿರುವ ದೂತರಿಗಾಗಲಿ, ಪುತ್ರನಿಗಾಗಲಿ ತಿಳಿಯದು.
33. ನೀವು ಎಚ್ಚರವಾಗಿರಿ, ಜಾಗರೂಕರಾಗಿರಿ. ಏಕೆಂದರೆ ಆ ಕಾಲವು ಬರುವುದು ಯಾವಾಗ ಎಂದು ನಿಮಗೆ ತಿಳಿಯದು.
34. ಅದು ಒಬ್ಬ ಮನುಷ್ಯನು ದೂರ ಪ್ರಯಾಣಕ್ಕಾಗಿ ತನ್ನ ಮನೆಯನ್ನು ಬಿಟ್ಟು, ತನ್ನ ಸೇವಕರಿಗೆ ಅಧಿಕಾರವನ್ನೂ ಪ್ರತಿಯೊಬ್ಬನಿಗೆ ಅವನವನ ಕೆಲಸವನ್ನು ಕೊಟ್ಟು ಬಾಗಿಲು ಕಾಯುವವನಿಗೆ ಜಾಗರೂಕನಾಗಿರಬೇಕೆಂದು ಆಜ್ಞಾಪಿಸಿದವನ ಹಾಗೆ ಇರುತ್ತದೆ ಎಂದು ನಾನು ನಿಮಗೆ ಹೇಳುತ್ತಿದ್ದೇನೆ. [PE]
35. [PS]“ಆದ್ದರಿಂದ ಜಾಗರೂಕರಾಗಿರಿ. ಮನೆಯಜಮಾನನು ಸಂಜೆಯಲ್ಲಿಯೋ ಮಧ್ಯರಾತ್ರಿಯಲ್ಲಿಯೋ ಹುಂಜ ಕೂಗುವಾಗಲೋ ಬೆಳಕಾಗುವಾಗಲೋ, ಯಾವಾಗ ಬರುತ್ತಾನೋ ನಿಮಗೆ ಗೊತ್ತಿಲ್ಲ.
36. ಆತನು ಫಕ್ಕನೆ ಬಂದು ನೀವು ನಿದ್ರೆ ಮಾಡುವುದನ್ನು ಕಂಡಾನು.
37. ನಿಮಗೆ ಹೇಳುವುದನ್ನು ನಾನು ಎಲ್ಲರಿಗೂ ಹೇಳುತ್ತೇನೆ: ‘ಎಚ್ಚರವಾಗಿರಿ,’ ” ಎಂದರು. [PE]
ಒಟ್ಟು 16 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 13 / 16
1 2 3 4
5 6 7 8 9 10 11 12 13 14 15 16
ಯುಗದ ಸಮಾಪ್ತಿಯ ಸೂಚನೆಗಳು 1 2 ಯೇಸು ದೇವಾಲಯದೊಳಗಿಂದ ಹೊರಗೆ ಹೋಗುತ್ತಿದ್ದಾಗ ಅವರ ಶಿಷ್ಯರಲ್ಲಿ ಒಬ್ಬನು ಯೇಸುವಿಗೆ, “ಬೋಧಕರೇ, ಇಲ್ಲಿ ಎಂಥಾ ಭಾರಿ ಕಲ್ಲುಗಳು ಮತ್ತು ಎಂಥಾ ಮಹಾ ಕಟ್ಟಡಗಳು ಇವೆ ನೋಡಿರಿ!” ಎಂದನು. 3 ಯೇಸು ಅವನಿಗೆ ಉತ್ತರವಾಗಿ, “ನೀನು ಈ ದೊಡ್ಡ ಕಟ್ಟಡಗಳನ್ನು ನೋಡುತ್ತೀಯೋ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವುದಿಲ್ಲ; ಎಲ್ಲವೂ ಕೆಡವಲಾಗುವವು,” ಎಂದರು. ಯೇಸು ಓಲಿವ್ ಗುಡ್ಡದ ಮೇಲೆ ದೇವಾಲಯಕ್ಕೆ ಎದುರಾಗಿ ಕುಳಿತುಕೊಂಡಿದ್ದಾಗ ಪೇತ್ರ, ಯಾಕೋಬ, ಯೋಹಾನ, ಅಂದ್ರೆಯ ಇವರು ಪ್ರತ್ಯೇಕವಾಗಿ ಯೇಸುವಿಗೆ, 4 “ಇವೆಲ್ಲಾ ಯಾವಾಗ ಆಗುವವು? ಇವೆಲ್ಲವೂ ನೆರವೇರುವುದಕ್ಕೆ ಸೂಚನೆ ಏನು? ನಮಗೆ ಹೇಳು,” ಎಂದು ಕೇಳಿದರು. 5 ಯೇಸು ಅವರಿಗೆ ಹೀಗೆಂದನು, “ಯಾರೂ ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರಿಕೆಯಾಗಿರಿ. 6 ಅನೇಕರು ನನ್ನ ಹೆಸರಿನಲ್ಲಿ ಬಂದು, ‘ನಾನೇ ಕ್ರಿಸ್ತನು’ ಎಂದು ಹೇಳಿ ಅನೇಕರನ್ನು ಮೋಸಗೊಳಿಸುವರು. 7 ಇದಲ್ಲದೆ ಯುದ್ಧಗಳನ್ನೂ, ಯುದ್ಧಗಳ ಸುದ್ದಿಗಳನ್ನೂ ನೀವು ಕೇಳುವಾಗ ಕಳವಳಪಡಬೇಡಿರಿ. ಏಕೆಂದರೆ ಇವೆಲ್ಲವು ಸಂಭವಿಸುವುದು ಅಗತ್ಯ. ಆದರೆ ಇದು ಇನ್ನೂ ಅಂತ್ಯವಲ್ಲ. 8 ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು. ನಾನಾ ಕಡೆಗಳಲ್ಲಿ ಭೂಕಂಪಗಳಾಗುವವು. ಬರಗಾಲಗಳು ಉಂಟಾಗುವವು, ಇವು ಪ್ರಸವವೇದನೆಯ ಪ್ರಾರಂಭ ಮಾತ್ರ. 9 “ನೀವು ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಜನರು ನಿಮ್ಮನ್ನು ನ್ಯಾಯಸ್ಥಾನಗಳಿಗೆ ಒಪ್ಪಿಸುವರು, ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು. ನನ್ನ ನಿಮಿತ್ತವಾಗಿ ಅಧಿಕಾರಿಗಳ ಮತ್ತು ಅರಸರ ಮುಂದೆ ನಿಲ್ಲಿಸುವರು. ಹೀಗೆ ಇದು ಅವರಿಗೆ ಸಾಕ್ಷಿಯಾಗಿರುವುದು. 10 ಸುವಾರ್ತೆಯು ಮೊದಲು ಎಲ್ಲಾ ಜನಾಂಗಗಳಲ್ಲಿ ಸಾರುವುದು ಅಗತ್ಯವಾಗಿದೆ. 11 ಅವರು ನಿಮ್ಮನ್ನು ಬಂಧಿಸಿ ಒಪ್ಪಿಸುವುದಕ್ಕಾಗಿ ತೆಗೆದುಕೊಂಡು ಹೋಗುವಾಗ ನೀವು ಏನು ಮಾತನಾಡಬೇಕೆಂಬುದನ್ನು ಮುಂಚಿತವಾಗಿಯೇ ಚಿಂತಿಸಬೇಡಿರಿ. ಆ ಗಳಿಗೆಯಲ್ಲಿ ನಿಮ್ಮ ಮನಸ್ಸಿನಲ್ಲಿ ನಿಮಗೆ ಯಾವುದು ಕೊಡಲಾಗುವುದೋ ಅದನ್ನೇ ಮಾತನಾಡಿರಿ. ಏಕೆಂದರೆ ಮಾತನಾಡುವವರು ನೀವಲ್ಲ, ಪವಿತ್ರಾತ್ಮನೇ. 12 “ಸಹೋದರನು ತನ್ನ ಸಹೋದರನನ್ನೂ, ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು. ಮಕ್ಕಳು ತಮ್ಮ ತಂದೆತಾಯಿಗಳಿಗೆ ವಿರೋಧವಾಗಿ ಎದ್ದು ಅವರನ್ನು ಕೊಲ್ಲಿಸುವರು. 13 ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ದ್ವೇಷಮಾಡುವರು. ಆದರೆ ಕೊನೆಯವರೆಗೂ ತಾಳುವವನೇ ರಕ್ಷಣೆಹೊಂದುವನು. 14 “ಆದರೆ ‘ಅಸಹ್ಯ ವಸ್ತು’* ದಾನಿ 9:27; 11:31; 12:11 ನಿಲ್ಲಬಾರದ ಸ್ಥಳದಲ್ಲಿ ನಿಂತಿರುವುದನ್ನು ನೀವು ಕಾಣುವಾಗ ಓದುವವನು ತಿಳಿದುಕೊಳ್ಳಲಿ. ಆಗ ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಲಿ. 15 ಮಾಳಿಗೆಯ ಮೇಲಿದ್ದವರು ಕೆಳಗೆ ಇಳಿದು ಮನೆಯೊಳಕ್ಕೆ ಹೋಗದಿರಲಿ; ತಮ್ಮ ಮನೆಯೊಳಗೆ ಪ್ರವೇಶಿಸಿ ಅದರೊಳಗಿಂದ ಏನನ್ನೂ ತೆಗೆದುಕೊಳ್ಳದಿರಲಿ. 16 ಹೊಲದಲ್ಲಿರುವವರು ಬಟ್ಟೆಗಳನ್ನು ತೆಗೆದುಕೊಳ್ಳುವುದಕ್ಕೆ ಹಿಂದಿರುಗದಿರಲಿ. 17 ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಹಾಲುಣಿಸುವ ತಾಯಂದಿರಿಗೂ ಕಷ್ಟ! 18 ಈ ಸಂಕಟ ಚಳಿಗಾಲದಲ್ಲಿ ಆಗದಂತೆ ನೀವು ಪ್ರಾರ್ಥಿಸಿರಿ. 19 ಆ ದಿವಸಗಳಲ್ಲಿ ಮಹಾ ಸಂಕಟವಿರುವುದು, ದೇವರು ಜಗತ್ತನ್ನು ಸೃಷ್ಟಿಸಿದ ದಿನದಿಂದ ಮೊದಲುಗೊಂಡು ಈ ಸಮಯದವರೆಗೂ ಅಂಥ ಸಂಕಟವು ಆಗಲಿಲ್ಲ. ಇನ್ನು ಮುಂದೆಯೂ ಆಗುವುದಿಲ್ಲ. 20 “ಕರ್ತನು ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಯಾರೂ ತಪ್ಪಿಹೋಗುವುದಿಲ್ಲ. ಆದರೆ ತಾನು ಆಯ್ಕೆಯಾದವರಿಗಾಗಿ ಆ ದಿನಗಳನ್ನು ಕಡಿಮೆ ಮಾಡಿದ್ದಾರೆ. 21 ಆಗ ಯಾರಾದರೂ ನಿಮಗೆ, ‘ಇಗೋ, ಕ್ರಿಸ್ತನು ಇಲ್ಲಿದ್ದಾನೆ, ಅಗೋ, ಆತನು ಅಲ್ಲಿದ್ದಾನೆ,’ ಎಂದು ಹೇಳಿದರೆ ನಂಬಬೇಡಿರಿ. 22 ಏಕೆಂದರೆ ಸುಳ್ಳು ಕ್ರಿಸ್ತರು ಮತ್ತು ಸುಳ್ಳು ಪ್ರವಾದಿಗಳು ಎದ್ದು, ಸಾಧ್ಯವಾದರೆ ಆಯ್ಕೆಯಾದವರನ್ನು ಸಹ ಮೋಸಗೊಳಿಸುವಂತೆ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು. 23 ಆದರೆ ನೀವು ಜಾಗರೂಕರಾಗಿರಿ, ನಾನು ನಿಮಗೆ ಎಲ್ಲವುಗಳನ್ನು ಮುಂದಾಗಿಯೆ ಹೇಳಿದ್ದೇನೆ. 24 “ಇದಲ್ಲದೆ ಆ ದಿವಸಗಳಲ್ಲಿ ಸಂಕಟವು ತೀರಿದ ನಂತರ, “ ‘ಸೂರ್ಯನಿಗೆ ಕತ್ತಲು ಮುಸುಕುವುದು; ಚಂದ್ರನು ಕಾಂತಿಹೀನನಾಗುವನು. 25 ಆಕಾಶದಿಂದ ನಕ್ಷತ್ರಗಳು ಬೀಳುವವು ಮತ್ತು ಆಕಾಶದ ಶಕ್ತಿಗಳು ಕದಲುವವು.’ ಯೆಶಾಯ 13:10; 34:4 26 “ಆಗ ಮನುಷ್ಯಪುತ್ರನಾದ ನಾನು ಬಹು ಶಕ್ತಿಯಿಂದಲೂ ಮಹಿಮೆಯಿಂದಲೂ ಮೇಘಗಳಲ್ಲಿ ಬರುವುದನ್ನು ಅವರು ಕಾಣುವರು. 27 ನಾನು ನನ್ನ ದೂತರನ್ನು ಕಳುಹಿಸಿ ಭೂಮಿಯ ಕಟ್ಟಕಡೆಯಿಂದ ಆಕಾಶದ ಕಟ್ಟಕಡೆಯವರೆಗೆ ನಾನು ಆರಿಸಿಕೊಂಡವರನ್ನು ನಾಲ್ಕು ದಿಕ್ಕುಗಳಿಂದಲೂ ಒಟ್ಟುಗೂಡಿಸುವೆನು. 28 “ಅಂಜೂರದ ಮರದ ಸಾಮ್ಯದಿಂದ ಈ ಪಾಠವನ್ನು ಕಲಿತುಕೊಳ್ಳಿರಿ: ಅದರ ರೆಂಬೆ ಇನ್ನೂ ಎಳೆಯದಾಗಿದ್ದು ಎಲೆಗಳನ್ನು ಬಿಡುವಾಗ ಬೇಸಿಗೆಯು ಹತ್ತಿರವಾಯಿತೆಂದು ನೀವು ತಿಳಿದುಕೊಳ್ಳುತ್ತೀರಿ. 29 ಅದೇ ಪ್ರಕಾರ ಇವೆಲ್ಲವೂ ಸಂಭವಿಸುವುದನ್ನು ನೀವು ಕಾಣುವಾಗ, ಮನುಷ್ಯಪುತ್ರನಾದ ನಾನು ಬಾಗಿಲ ಹತ್ತಿರದಲ್ಲಿಯೇ ಇದ್ದೇನೆ ಎಂದು ತಿಳಿದುಕೊಳ್ಳಿರಿ. 30 ಇವೆಲ್ಲವೂ ನೆರವೇರುವವರೆಗೆ ಈ ಸಂತತಿಯು ಅಳಿದುಹೋಗುವುದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. 31 ಭೂಮ್ಯಾಕಾಶಗಳು ಅಳಿದುಹೋಗುವುವು, ಆದರೆ ನನ್ನ ಮಾತುಗಳು ಅಳಿದುಹೋಗುವುದೇ ಇಲ್ಲ. ಆ ದಿನವು ಮತ್ತು ಆ ಗಳಿಗೆಯು ಯಾರಿಗೂ ತಿಳಿಯದು 32 “ಆ ದಿನದ ಮತ್ತು ಆ ಗಳಿಗೆಯ ವಿಷಯವಾಗಿ ತಂದೆಗೆ ಹೊರತು ಯಾವ ಮನುಷ್ಯನಿಗಾಗಲಿ, ಪರಲೋಕದಲ್ಲಿರುವ ದೂತರಿಗಾಗಲಿ, ಪುತ್ರನಿಗಾಗಲಿ ತಿಳಿಯದು. 33 ನೀವು ಎಚ್ಚರವಾಗಿರಿ, ಜಾಗರೂಕರಾಗಿರಿ. ಏಕೆಂದರೆ ಆ ಕಾಲವು ಬರುವುದು ಯಾವಾಗ ಎಂದು ನಿಮಗೆ ತಿಳಿಯದು. 34 ಅದು ಒಬ್ಬ ಮನುಷ್ಯನು ದೂರ ಪ್ರಯಾಣಕ್ಕಾಗಿ ತನ್ನ ಮನೆಯನ್ನು ಬಿಟ್ಟು, ತನ್ನ ಸೇವಕರಿಗೆ ಅಧಿಕಾರವನ್ನೂ ಪ್ರತಿಯೊಬ್ಬನಿಗೆ ಅವನವನ ಕೆಲಸವನ್ನು ಕೊಟ್ಟು ಬಾಗಿಲು ಕಾಯುವವನಿಗೆ ಜಾಗರೂಕನಾಗಿರಬೇಕೆಂದು ಆಜ್ಞಾಪಿಸಿದವನ ಹಾಗೆ ಇರುತ್ತದೆ ಎಂದು ನಾನು ನಿಮಗೆ ಹೇಳುತ್ತಿದ್ದೇನೆ. 35 “ಆದ್ದರಿಂದ ಜಾಗರೂಕರಾಗಿರಿ. ಮನೆಯಜಮಾನನು ಸಂಜೆಯಲ್ಲಿಯೋ ಮಧ್ಯರಾತ್ರಿಯಲ್ಲಿಯೋ ಹುಂಜ ಕೂಗುವಾಗಲೋ ಬೆಳಕಾಗುವಾಗಲೋ, ಯಾವಾಗ ಬರುತ್ತಾನೋ ನಿಮಗೆ ಗೊತ್ತಿಲ್ಲ. 36 ಆತನು ಫಕ್ಕನೆ ಬಂದು ನೀವು ನಿದ್ರೆ ಮಾಡುವುದನ್ನು ಕಂಡಾನು. 37 ನಿಮಗೆ ಹೇಳುವುದನ್ನು ನಾನು ಎಲ್ಲರಿಗೂ ಹೇಳುತ್ತೇನೆ: ‘ಎಚ್ಚರವಾಗಿರಿ,’ ” ಎಂದರು.
ಒಟ್ಟು 16 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 13 / 16
1 2 3 4
5 6 7 8 9 10 11 12 13 14 15 16
×

Alert

×

Kannada Letters Keypad References