ಪವಿತ್ರ ಬೈಬಲ್

ಓಪನ್ ಸಮಕಾಲೀನ ಆವೃತ್ತಿ (OCV)
ಮಲಾಕಿಯ
1. {#1ನ್ಯಾಯತೀರ್ಪು ಮತ್ತು ಒಡಂಬಡಿಕೆಯ ನವೀಕರಣ } [PS]“ಖಂಡಿತವಾಗಿ ಆ ದಿನ ಬರುತ್ತದೆ, ಅದು ಒಲೆಯಂತೆ ಉರಿಯುತ್ತದೆ. ಆಗ ಗರ್ವಿಷ್ಠರೆಲ್ಲರೂ ಕೆಟ್ಟದ್ದನ್ನು ಮಾಡುವವರೆಲ್ಲರೂ ಹುಲ್ಲಿನಂತಿರುವರು. ಬರುವ ಆ ದಿನವು ಅವರನ್ನು ಸುಟ್ಟುಬಿಡುವುದು. ಬೇರನ್ನಾದರೂ, ಕೊಂಬೆಯನ್ನಾದರೂ ಅವರಿಗೆ ಬಿಡದು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ.
2. ಆದರೆ ನನ್ನ ನಾಮದಲ್ಲಿ ಭಯಭಕ್ತಿಯಿಟ್ಟಿರುವ ನಿಮಗೆ, ನೀತಿ ಸೂರ್ಯನು ತಮ್ಮ ಕಿರಣಗಳಿಂದ ಸ್ವಸ್ಥತೆಯನ್ನುಂಟು ಮಾಡುವವನಾಗಿ ಉದಯಿಸುವನು. ನೀವು ಹೊರಟು ಕೊಟ್ಟಿಗೆಯಿಂದ ಹೊರಬಂದ ಕರುಗಳ ಹಾಗೆ ಕುಣಿದಾಡುವಿರಿ.
3. ಆಗ ದುಷ್ಟರನ್ನು ತುಳಿದುಬಿಡುವಿರಿ. ಏಕೆಂದರೆ ನಾನು ಕಾರ್ಯಸಾಧಿಸುವ ದಿವಸದಲ್ಲಿ ಅವರು ನಿಮ್ಮ ಪಾದಗಳ ಕೆಳಗೆ ಬೂದಿಯಾಗಿರುವರೆಂದು ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. [PE]
4.
5. [PS]“ನನ್ನ ಸೇವಕನಾದ ಮೋಶೆಯ ನಿಯಮವನ್ನು ನಾನು ಅವನಿಗೆ ಹೋರೇಬಿನಲ್ಲಿ ಸಮಸ್ತ ಇಸ್ರಾಯೇಲಿಗೋಸ್ಕರ ಆಜ್ಞಾಪಿಸಿದ್ದನ್ನೂ ವಿಧಿ ನಿಯಮಗಳನ್ನೂ ಜ್ಞಾಪಕಮಾಡಿಕೊಳ್ಳಿರಿ. [PE][PS]“ಇಗೋ, ಯೆಹೋವ ದೇವರ ಮಹಾ ಭಯಂಕರವಾದ ದಿವಸವು ಬರುವುದಕ್ಕಿಂತ ಮುಂಚೆ ನಿಮಗೆ ಪ್ರವಾದಿಯಾದ ಎಲೀಯನನ್ನು ಕಳುಹಿಸುವೆನು.
6. ನಾನು ಬಂದು ಭೂಮಿಯನ್ನು ಶಾಪದಿಂದ ಹೊಡೆಯದ ಹಾಗೆ ಅವನು ತಂದೆಯರ ಹೃದಯವನ್ನು ಮಕ್ಕಳ ಕಡೆಗೂ ಮಕ್ಕಳ ಹೃದಯವನ್ನು ತಮ್ಮ ತಂದೆಯರ ಕಡೆಗೂ ತಿರುಗಿಸುವನು.” [PE]
ಒಟ್ಟು 4 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 4 / 4
1 2 3 4
ನ್ಯಾಯತೀರ್ಪು ಮತ್ತು ಒಡಂಬಡಿಕೆಯ ನವೀಕರಣ 1 “ಖಂಡಿತವಾಗಿ ಆ ದಿನ ಬರುತ್ತದೆ, ಅದು ಒಲೆಯಂತೆ ಉರಿಯುತ್ತದೆ. ಆಗ ಗರ್ವಿಷ್ಠರೆಲ್ಲರೂ ಕೆಟ್ಟದ್ದನ್ನು ಮಾಡುವವರೆಲ್ಲರೂ ಹುಲ್ಲಿನಂತಿರುವರು. ಬರುವ ಆ ದಿನವು ಅವರನ್ನು ಸುಟ್ಟುಬಿಡುವುದು. ಬೇರನ್ನಾದರೂ, ಕೊಂಬೆಯನ್ನಾದರೂ ಅವರಿಗೆ ಬಿಡದು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. 2 ಆದರೆ ನನ್ನ ನಾಮದಲ್ಲಿ ಭಯಭಕ್ತಿಯಿಟ್ಟಿರುವ ನಿಮಗೆ, ನೀತಿ ಸೂರ್ಯನು ತಮ್ಮ ಕಿರಣಗಳಿಂದ ಸ್ವಸ್ಥತೆಯನ್ನುಂಟು ಮಾಡುವವನಾಗಿ ಉದಯಿಸುವನು. ನೀವು ಹೊರಟು ಕೊಟ್ಟಿಗೆಯಿಂದ ಹೊರಬಂದ ಕರುಗಳ ಹಾಗೆ ಕುಣಿದಾಡುವಿರಿ. 3 ಆಗ ದುಷ್ಟರನ್ನು ತುಳಿದುಬಿಡುವಿರಿ. ಏಕೆಂದರೆ ನಾನು ಕಾರ್ಯಸಾಧಿಸುವ ದಿವಸದಲ್ಲಿ ಅವರು ನಿಮ್ಮ ಪಾದಗಳ ಕೆಳಗೆ ಬೂದಿಯಾಗಿರುವರೆಂದು ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. 4 5 “ನನ್ನ ಸೇವಕನಾದ ಮೋಶೆಯ ನಿಯಮವನ್ನು ನಾನು ಅವನಿಗೆ ಹೋರೇಬಿನಲ್ಲಿ ಸಮಸ್ತ ಇಸ್ರಾಯೇಲಿಗೋಸ್ಕರ ಆಜ್ಞಾಪಿಸಿದ್ದನ್ನೂ ವಿಧಿ ನಿಯಮಗಳನ್ನೂ ಜ್ಞಾಪಕಮಾಡಿಕೊಳ್ಳಿರಿ. “ಇಗೋ, ಯೆಹೋವ ದೇವರ ಮಹಾ ಭಯಂಕರವಾದ ದಿವಸವು ಬರುವುದಕ್ಕಿಂತ ಮುಂಚೆ ನಿಮಗೆ ಪ್ರವಾದಿಯಾದ ಎಲೀಯನನ್ನು ಕಳುಹಿಸುವೆನು. 6 ನಾನು ಬಂದು ಭೂಮಿಯನ್ನು ಶಾಪದಿಂದ ಹೊಡೆಯದ ಹಾಗೆ ಅವನು ತಂದೆಯರ ಹೃದಯವನ್ನು ಮಕ್ಕಳ ಕಡೆಗೂ ಮಕ್ಕಳ ಹೃದಯವನ್ನು ತಮ್ಮ ತಂದೆಯರ ಕಡೆಗೂ ತಿರುಗಿಸುವನು.”
ಒಟ್ಟು 4 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 4 / 4
1 2 3 4
×

Alert

×

Kannada Letters Keypad References