1. [QS]ಯೆಹೋವ ದೇವರ ಕೋಪದ ಕೋಲಿನಿಂದ ಕಷ್ಟವನ್ನು ನೋಡಿದ [QE][QS2]ಮನುಷ್ಯನು ನಾನೇ. [QE]
2. [QS]ಅವರು ನನ್ನನ್ನು ಕರೆತಂದು ನಡೆಸಿದ್ದು [QE][QS2]ಕತ್ತಲೆಗೇ ಹೊರತು ಬೆಳಕಿಗಲ್ಲ. [QE]
3. [QS]ನಿಶ್ಚಯವಾಗಿ ಅವರು ನನಗೆ ವಿರೋಧವಾಗಿ ತಿರುಗಿದ್ದಾರೆ. [QE][QS2]ಅವರು ದಿನವೆಲ್ಲಾ ತಮ್ಮ ಕೈಯನ್ನು ನನಗೆ ವಿರೋಧವಾಗಿ ತಿರುಗಿಸಿದ್ದಾರೆ. [QE][PBR]
4. [QS]ನನ್ನ ಮಾಂಸ, ಚರ್ಮವನ್ನು ಆತನು ಹಳೆಯದನ್ನಾಗಿ ಮಾಡಿದ್ದಾರೆ. [QE][QS2]ಅವರು ನನ್ನ ಎಲುಬುಗಳನ್ನು ಮುರಿದಿದ್ದಾರೆ. [QE]
5. [QS]ಅವರು ನನಗೆ ವಿರೋಧವಾಗಿ ಕಟ್ಟಿದ್ದಾರೆ ಮತ್ತು ನನ್ನನ್ನು ವಿಷದಿಂದಲೂ, [QE][QS2]ಸಂಕಟದಿಂದಲೂ ಸುತ್ತಿಕೊಂಡಿದ್ದಾರೆ. [QE]
6. [QS]ಅವರು ನನ್ನನ್ನು ಬಹುಕಾಲದ ಹಿಂದೆ ಸತ್ತವರ ಹಾಗೆ, [QE][QS2]ಕತ್ತಲೆಯ ಸ್ಥಳಗಳಲ್ಲಿ ಇರಿಸಿದ್ದಾರೆ. [QE][PBR]
7. [QS]ನಾನು ಹೊರಗೆ ಬಾರದ ಹಾಗೆ, ಅವರು ನನ್ನ ಸುತ್ತಲೂ ಗೋಡೆಯನ್ನು ಕಟ್ಟಿದ್ದಾರೆ. [QE][QS2]ಅವರು ನನ್ನ ಸಂಕೋಲೆಯ ಭಾರವನ್ನು ಹೆಚ್ಚಿಸಿದ್ದಾರೆ. [QE]
8. [QS]ನಾನು ಕರೆದು ಕೂಗಿದರೂ [QE][QS2]ಅವರು ನನ್ನ ಪ್ರಾರ್ಥನೆಯನ್ನು ಲಾಲಿಸುವುದಿಲ್ಲ. [QE]
9. [QS]ಕೆತ್ತಿದ ಕಲ್ಲಿನಿಂದ ನನ್ನ ಮಾರ್ಗಗಳನ್ನು ಮುಚ್ಚಿ, [QE][QS2]ಆ ನನ್ನ ದಾರಿಗಳನ್ನು ಡೊಂಕು ಮಾಡಿದ್ದಾನೆ. [QE][PBR]
10. [QS]ಅವರು ನನಗೆ ಹೊಂಚು ಹಾಕುವ ಕರಡಿಯ ಹಾಗೆಯೂ, [QE][QS2]ಗುಪ್ತ ಸ್ಥಳಗಳಲ್ಲಿರುವ ಸಿಂಹದ ಹಾಗೆಯೂ ಇದ್ದಾರೆ. [QE]
11. [QS]ಅವರು ನನ್ನ ಮಾರ್ಗಗಳನ್ನು ತಪ್ಪಿಸಿ, ನನ್ನನ್ನು ತುಂಡುಗಳನ್ನಾಗಿ ಕತ್ತರಿಸಿ, [QE][QS2]ನನ್ನನ್ನು ಹಾಳು ಮಾಡಿದ್ದಾರೆ. [QE]
12. [QS]ಅವರು ತನ್ನ ಬಿಲ್ಲನ್ನು ಬಗ್ಗಿಸಿದ್ದಾರೆ, [QE][QS2]ನನ್ನನ್ನು ಬಾಣಕ್ಕೆ ಗುರಿಮಾಡಿದ್ದಾರೆ. [QE][PBR]
13. [QS]ಅವರು ತನ್ನ ಬತ್ತಳಿಕೆಯಲ್ಲಿನ ಬಾಣಗಳನ್ನು [QE][QS2]ನನ್ನ ಅಂತರಂಗಗಳಲ್ಲಿ ತೂರಿ ಹೋಗುವಹಾಗೆ ಮಾಡಿದ್ದಾರೆ. [QE]
14. [QS]ನಾನು ನನ್ನ ಎಲ್ಲಾ ಜನರಿಗೆ ಹಾಸ್ಯವೂ, [QE][QS2]ದಿನವೆಲ್ಲವೂ ಅವರ ಗೇಲಿಯ ಹಾಡಾಗಿಯೂ ಇದ್ದೇನೆ. [QE]
15. [QS]ಅವರು ನನ್ನನ್ನು ಕಹಿಯಿಂದ ತುಂಬಿಸಿ, [QE][QS2]ವಿಷ ಸಸ್ಯಗಳಿಂದ ನನ್ನನ್ನು ತಣಿಸಿದ್ದಾರೆ. [QE][PBR]
16. [QS]ಅವರು ನುರುಜು ಕಲ್ಲುಗಳಿಂದ ನನ್ನ ಹಲ್ಲುಗಳನ್ನು ಮುರಿದು, [QE][QS2]ಅವರು ನನ್ನನ್ನು ಧೂಳಿನಲ್ಲಿ ತುಳಿದಿದ್ದಾರೆ. [QE]
17. [QS]ನನ್ನ ಪ್ರಾಣವನ್ನು ಸಮಾಧಾನದಿಂದ ದೂರ ಮಾಡಿದ್ದಾರೆ, [QE][QS2]ನಾನು ಸಮೃದ್ಧಿಯನ್ನು ಮರೆತುಬಿಟ್ಟೆನು. [QE]
18. [QS]“ಅಯ್ಯೋ, ನನ್ನ ಬಲವು ಮತ್ತು [QE][QS2]ನನ್ನ ನಿರೀಕ್ಷೆಯು ಯೆಹೋವ ದೇವರಿಂದ ನಾಶವಾದವು,” [QE][QS2]ಎಂದು ನಾನು ಹೇಳಿದೆನು. [QE][PBR]
19. [QS]ನನ್ನ ಸಂಕಟವನ್ನು, ನನ್ನ ಅಲೆದಾಡುವಿಕೆಯನ್ನು, [QE][QS2]ನನ್ನ ಕಹಿಯನ್ನು, ನನ್ನ ವಿಷತನವನ್ನು ನಾನು ಜ್ಞಾಪಕಮಾಡಿಕೊಂಡಿದ್ದೇನೆ. [QE]
20. [QS]ನನ್ನ ಪ್ರಾಣವು ಇನ್ನೂ ಅವುಗಳನ್ನು ಜ್ಞಾಪಿಸಿಕೊಳ್ಳುತ್ತಾ [QE][QS2]ನನ್ನೊಳಗೆ ಕುಂದಿಹೋಗಿದೆ. [QE]
21. [QS]ಇದನ್ನು ನಾನು ನನ್ನ ಮನಸ್ಸಿಗೆ ತಂದುಕೊಳ್ಳುತ್ತೇನೆ. [QE][QS2]ಆದ್ದರಿಂದ ನನಗೆ ನಿರೀಕ್ಷೆ ಇದೆ. [QE][PBR]
22. [QS]ನಾವು ನಾಶವಾಗದೇ ಉಳಿದಿರುವುದು ಯೆಹೋವ ದೇವರ ಮಹಾ ಪ್ರೀತಿಯಿಂದಲೇ. [QE][QS2]ಏಕೆಂದರೆ ಅವರ ಅನುಕಂಪಗಳು ಮುಗಿಯುವುದಿಲ್ಲ. [QE]
23. [QS]ಅವು ಪ್ರತಿ ಮುಂಜಾನೆಯೂ ಹೊಸದಾಗಿರುವುವು. [QE][QS2]ನಿನ್ನ ನಂಬಿಗಸ್ತಿಕೆಯು ಮಹತ್ತಾದದ್ದು. [QE]
24. [QS]“ಯೆಹೋವ ದೇವರೇ ನನ್ನ ಪಾಲು, [QE][QS2]ಆದ್ದರಿಂದ ನಾನು ಅವರಿಗಾಗಿ ಕಾದಿರುತ್ತೇನೆ,” [QE][QS2]ಎಂದು ನಾನು ನನ್ನೊಳಗೆ ಎಂದುಕೊಳ್ಳುವೆನು. [QE][PBR]
25. [QS]ಆತನನ್ನು ನಿರೀಕ್ಷಿಸುವವರಿಗೂ, [QE][QS2]ಆತನನ್ನು ಹುಡಕುವವರಿಗೂ ಯೆಹೋವ ದೇವರು ಒಳ್ಳೆಯವರಾಗಿದ್ದಾರೆ. [QE]
26. [QS]ಮನುಷ್ಯನು ಮೌನವಾಗಿ [QE][QS2]ಯೆಹೋವ ದೇವರ ರಕ್ಷಣೆಗೆ ಕಾಯುವುದು ಒಳ್ಳೆಯದು. [QE]
27. [QS]ತನ್ನ ಯೌವನದಲ್ಲಿ [QE][QS2]ನೊಗವನ್ನು ಹೊಂದಿರುವುದು ಮಾನವನಿಗೆ ಒಳ್ಳೆಯದು. [QE][PBR]
28. [QS]ಅವನು ಒಂಟಿಯಾಗಿ ಕುಳಿತು ಮೌನವಾಗಿರಲಿ. [QE][QS2]ಏಕೆಂದರೆ ಯೆಹೋವ ದೇವರೇ ಅದನ್ನು ಅವನ ಮೇಲೆ ಹೊರಿಸಿದ್ದಾರೆ. [QE]
29. [QS]ಒಂದು ವೇಳೆ ನಿರೀಕ್ಷೆ ಇರಬಹುದೇನೋ ಎಂದು [QE][QS2]ಅವನು ತನ್ನ ಮುಖವನ್ನು ಧೂಳಿನಲ್ಲಿ ಇಟ್ಟುಕೊಳ್ಳಲಿ. [QE]
30. [QS]ಅವನು ತನ್ನನ್ನು ಹೊಡೆಯುವವನಿಗೆ ಕೆನ್ನೆ ಕೊಡಲಿ. [QE][QS2]ಅವನು ನಿಂದೆಯಿಂದಲೇ ತುಂಬಿರಲಿ. [QE][PBR]
31. [QS]ಏಕೆಂದರೆ ಕರ್ತದೇವರು [QE][QS2]ಜನರನ್ನು ಎಂದೆಂದಿಗೂ ತಳ್ಳಿಬಿಡುವುದಿಲ್ಲ. [QE]
32. [QS]ಆತನು ದುಃಖಪಡಿಸಿದರೂ, [QE][QS2]ತನ್ನ ಒಡಂಬಡಿಕೆಯ ಮಹಾಪ್ರೀತಿಯಿಂದ ಅನುಕಂಪ ತೋರಿಸುವರು. [QE]
33. [QS]ಏಕೆಂದರೆ ಆತನು ಬೇಕೆಂದು ಮನುಷ್ಯರ ಮಕ್ಕಳಿಗೆ ಬಾಧೆಯನ್ನೂ, [QE][QS2]ದುಃಖವನ್ನೂ ಕೊಡುವುದಿಲ್ಲ. [QE][PBR]
34. [QS]ಭೂಲೋಕದ ಸೆರೆಯವರನ್ನೆಲ್ಲಾ [QE][QS2]ಕಾಲುಗಳ ಕೆಳಗೆ ತುಳಿಯುವುದನ್ನೂ, [QE]
35. [QS]ಮಹೋನ್ನತನ ಸನ್ನಿಧಿಯಲ್ಲಿ [QE][QS2]ಮನುಷ್ಯನ ನ್ಯಾಯವನ್ನು ನಿರಾಕರಿಸುವುದನ್ನೂ, [QE]
36. [QS]ಮನುಷ್ಯನನ್ನು ಅವನ ಜಗಳದಲ್ಲಿ [QE][QS2]ಅನ್ಯಾಯವಾಗಿ ತೀರಿಸುವುದು ಕರ್ತದೇವರು ಮೆಚ್ಚುವುದಿಲ್ಲ. [QE][PBR]
37. [QS]ಕರ್ತದೇವರು ಆಜ್ಞಾಪಿಸದೆ ಇರುವಾಗ, [QE][QS2]ಸಂಭವಿಸಿ ನಡೆಯುವ ಹಾಗೆ ಹೇಳುವವನು ಯಾರು? [QE]
38. [QS]ಮಹೋನ್ನತರ ಬಾಯಿಂದ ಕೇಡೂ, [QE][QS2]ಒಳ್ಳೆಯ ಸಂಗತಿಗಳೂ ಹೊರಡುವುದಿಲ್ಲವೇ? [QE]
39. [QS]ಬದುಕುವ ಮನುಷ್ಯನು [QE][QS2]ತನ್ನ ಪಾಪಗಳ ಶಿಕ್ಷೆಗಾಗಿ ಗೊಣಗುಟ್ಟುವುದೇಕೆ? [QE][PBR]
40. [QS]ನಾವು ನಮ್ಮ ಮಾರ್ಗಗಳನ್ನು ಪರಿಶೋಧಿಸಿ, [QE][QS2]ಪರೀಕ್ಷಿಸಿಕೊಂಡು ಆಮೇಲೆ ಯೆಹೋವ ದೇವರ ಬಳಿಗೆ ತಿರುಗಿಕೊಳ್ಳೋಣ. [QE]
41. [QS]ನಮ್ಮ ಹೃದಯಗಳನ್ನು ನಮ್ಮ ಕೈಗಳೊಂದಿಗೆ [QE][QS2]ಪರಲೋಕದ ದೇವರ ಕಡೆಗೆ ಎತ್ತಿಕೊಳ್ಳೋಣ. [QE]
42. [QS]ನಾವು ದ್ರೋಹಮಾಡಿದ್ದೇವೆ ಮತ್ತು ಎದುರು ಬಿದ್ದಿದ್ದೇವೆ, [QE][QS2]ನೀವು ಮನ್ನಿಸಲಿಲ್ಲ. [QE][PBR]
43. [QS]ಕೋಪದಲ್ಲಿ ನಮ್ಮನ್ನು ಮುಚ್ಚಿ ಹಿಂಸಿಸಿದ್ದೀರಿ. [QE][QS2]ಕನಿಕರಿಸದೆ ಕೊಂದು ಹಾಕಿರುವಿರಿ. [QE]
44. [QS]ನಮ್ಮ ಪ್ರಾರ್ಥನೆಯು ನಿನ್ನ ಸನ್ನಿಧಿಗೆ ಸೇರದಂತೆ [QE][QS2]ನಿನ್ನನ್ನು ಮೇಘದಿಂದ ಮುಚ್ಚಿಕೊಂಡಿದ್ದೀರಿ. [QE]
45. [QS]ನೀನು ನಮ್ಮನ್ನು ಜನರ ಮಧ್ಯದಲ್ಲಿ ಕಲ್ಮಷವನ್ನಾಗಿಯೂ, [QE][QS2]ಕಸವನ್ನಾಗಿಯೂ ಮಾಡಿದ್ದೀಯೆ. [QE][PBR]
46. [QS]ನಮ್ಮ ಎಲ್ಲಾ ಶತ್ರುಗಳು [QE][QS2]ನಮಗೆ ವಿರುದ್ಧವಾಗಿ ಅವರ ಬಾಯಿಗಳನ್ನು ತೆರೆದಿದ್ದಾರೆ. [QE]
47. [QS]ಭಯವನ್ನೂ, ನಾಶವನ್ನೂ [QE][QS2]ನಾವು ಅನುಭವಿಸಿದ್ದೇವೆ. [QE]
48. [QS]ನನ್ನ ಜನರ ನಾಶದ ನಿಮಿತ್ತವಾಗಿ, [QE][QS2]ನನ್ನ ಕಣ್ಣಿನಿಂದ ನೀರು ನದಿಯಾಗಿ ಹರಿದು ಹೋಗುತ್ತದೆ. [QE][PBR]
49. [QS]ಯೆಹೋವ ದೇವರು ಕಟಾಕ್ಷಿಸಿ, [QE][QS2]ಪರಲೋಕದಿಂದ ನೋಡುವ ತನಕ [QE][QS]ನೇತ್ರವು ನಿರಂತರ ಕಣ್ಣೀರು ಸುರಿಸುತ್ತದೆ. [QE]
2. [QS2]ವಿಶ್ರಮಿಸಿಕೊಳ್ಳುವುದೂ ಇಲ್ಲ. [QE]
51. [QS]ನನ್ನ ನಗರದ ಪುತ್ರಿಯರೆಲ್ಲರ ನಿಮಿತ್ತವಾಗಿ [QE][QS2]ನನ್ನ ಕಣ್ಣುಗಳು ನನ್ನ ಹೃದಯವನ್ನು ಪೀಡಿಸಿದೆ. [QE][PBR]
52. [QS]ನನ್ನ ಶತ್ರುಗಳು ಕಾರಣವಿಲ್ಲದೆ [QE][QS2]ಪಕ್ಷಿಯಂತೆ ನನ್ನನ್ನು ಕಠೋರವಾಗಿ ಹಿಂದಟ್ಟಿ ಬೇಟೆಯಾಡಿದರು. [QE]
53. [QS]ಅವರು ಕಾರಾಗೃಹದಲ್ಲಿ ನನ್ನ ಜೀವವನ್ನು ತೆಗೆದುಹಾಕಿ, [QE][QS2]ನನ್ನ ಮೇಲೆ ಕಲ್ಲನ್ನು ಹಾಕಿದ್ದಾರೆ. [QE]
54. [QS]ನನ್ನ ತಲೆಯ ಮೇಲೆ ನೀರು ಹರಿಯಿತು. [QE][QS2]ಆಗ ನಾನು ನಾಶವಾದೆನು ಅಂದುಕೊಂಡೆನು. [QE][PBR]
55. [QS]ಯೆಹೋವ ದೇವರೇ, ನಾನು ಆಳವಾದ ಕಾರಾಗೃಹದಿಂದ [QE][QS2]ನಿಮ್ಮ ಹೆಸರನ್ನು ಎತ್ತಿ ಬೇಡಿಕೊಂಡೆನು. [QE]
56. [QS]ನೀನು ನನ್ನ ಸ್ವರವನ್ನು ಕೇಳಿದ್ದೀ. [QE][QS2]“ನನ್ನ ಶ್ವಾಸಕ್ಕೂ, ನನ್ನ ಕೂಗಿಗೂ ನಿನ್ನ ಕಿವಿಯನ್ನು ಮರೆಮಾಡಬೇಡಿರಿ.” [QE]
57. [QS]ನಾನು ನಿನ್ನನ್ನು ಕರೆದ ದಿನದಲ್ಲಿ ನೀನು ಸಮೀಪಕ್ಕೆ ಬಂದು, [QE][QS2]“ಭಯಪಡಬೇಡ,” ಎಂದು ಹೇಳಿದಿರಿ. [QE][PBR]
58. [QS]ಕರ್ತದೇವರೇ, ನೀನು ನನ್ನ ಪ್ರಾಣದ ವ್ಯಾಜ್ಯಗಳನ್ನು ನಡೆಸಿ, [QE][QS2]ನನ್ನ ಜೀವವನ್ನು ವಿಮೋಚಿಸಿದ್ದೀರಿ. [QE]
59. [QS]ಯೆಹೋವ ದೇವರೇ, ನೀವು ನನ್ನ ಅನ್ಯಾಯವನ್ನು ನೋಡಿದ್ದೀರಿ, [QE][QS2]ನೀವು ನನ್ನ ನ್ಯಾಯವನ್ನು ತೀರಿಸಿರಿ. [QE]
60. [QS]ನನಗೆ ವಿರುದ್ಧವಾಗಿ [QE][QS2]ಅವರ ಎಲ್ಲಾ ಪ್ರತೀಕಾರವನ್ನೂ ನೋಡಿದ್ದೀರಲ್ಲಾ. [QE][PBR]
61. [QS]ಯೆಹೋವ ದೇವರೇ, ಅವರ ಎಲ್ಲಾ ಕಲ್ಪನೆಗಳನ್ನೂ ಮತ್ತು [QE][QS2]ನನಗೆ ವಿರುದ್ಧವಾಗಿ ಹೇಳುವವರ ತುಟಿಗಳನ್ನೂ, [QE]
62. [QS]ದಿನವಿಡೀ ನನಗೆ ವಿರುದ್ಧವಾದ [QE][QS2]ಅವರ ದುರಾಲೋಚನೆಯನ್ನೂ ಕೇಳಿರುವಿರಿ. [QE]
63. [QS]ಅವರನ್ನು ನೋಡು! ಕುಳಿತು ಅಥವಾ ನಿಂತಾಗ, [QE][QS2]ಅವರು ತಮ್ಮ ಹಾಡುಗಳಲ್ಲಿ ನನ್ನನ್ನು ಅಣಕಿಸುತ್ತಾರೆ. [QE][PBR]
64. [QS]ಯೆಹೋವ ದೇವರೇ, ಅವರ ಕೈಕೆಲಸಗಳ ಪ್ರಕಾರ ಅವರಿಗೆ [QE][QS2]ಪ್ರತಿಫಲವನ್ನು ಕೊಡಿ. [QE]
65. [QS]ಅವರಿಗೆ ದುಃಖಕರವಾದ ಹೃದಯವನ್ನೂ, [QE][QS2]ನಿಮ್ಮ ಶಾಪವನ್ನೂ ಕೊಡಿ. [QE]
66. [QS]ಯೆಹೋವ ದೇವರೇ, ಆಕಾಶದ ಕೆಳಗಿನಿಂದ ಕೋಪದಿಂದ [QE][QS2]ಅವರನ್ನು ಹಿಂಸಿಸಿ ಹಾಳುಮಾಡಿರಿ. [QE][PBR] [PBR]