ಪವಿತ್ರ ಬೈಬಲ್

ಓಪನ್ ಸಮಕಾಲೀನ ಆವೃತ್ತಿ (OCV)
ಪ್ರಲಾಪಗಳು
1. [QS]ಕರ್ತದೇವರು ಹೇಗೆ ತಮ್ಮ ಕೋಪದ ಮೇಘದಿಂದ ಚೀಯೋನಿನ ಮಗಳನ್ನು ಮುಚ್ಚಿ [QE][QS2]ಇಸ್ರಾಯೇಲಿನ ಸೌಂದರ್ಯವನ್ನು ಆಕಾಶದಿಂದ ಭೂಮಿಗೆ ಎಸೆದರು. [QE][QS]ತನ್ನ ಕೋಪದ ದಿನದಲ್ಲಿ, [QE][QS2]ತನ್ನ ಪಾದಪೀಠವನ್ನು ಜ್ಞಾಪಕ ಮಾಡಿಕೊಳ್ಳಲಿಲ್ಲ. [QE][PBR]
2. [QS]ಕರ್ತದೇವರು ಯಾಕೋಬಿನ ಎಲ್ಲಾ ನಿವಾಸಿಗಳನ್ನು [QE][QS2]ಕನಿಕರಿಸದೆ ನುಂಗಿದ್ದಾರೆ. [QE][QS]ಯೆಹೂದದ ಪುತ್ರಿಯ ಭದ್ರವಾದ ಸ್ಥಾನಗಳನ್ನು [QE][QS2]ತನ್ನ ರೋಷದಲ್ಲಿ ಕೆಡವಿ ಹಾಕಿದ್ದಾರೆ. [QE][QS]ಅವರು ಅವುಗಳನ್ನು ನೆಲಸಮ ಮಾಡಿದ್ದಾರೆ. [QE][QS2]ಅವರು ಆಕೆಯ ರಾಜ್ಯವನ್ನೂ, ಪ್ರಭುಗಳನ್ನೂ ಅಗೌರವಿಸಿ ನೆಲಕ್ಕೆ ದಬ್ಬಿದ್ದಾರೆ. [QE][PBR]
3. [QS]ಅವರು ತನ್ನ ತೀಕ್ಷ್ಣ ಕೋಪದಲ್ಲಿ [QE][QS2]ಇಸ್ರಾಯೇಲಿನ ಕೊಂಬುಗಳನ್ನೆಲ್ಲಾ ಮುರಿದು ಹಾಕಿದ್ದಾರೆ. [QE][QS]ಅವರು ಶತ್ರುವಿನ ಎದುರಿನಿಂದ [QE][QS2]ತನ್ನ ಬಲಗೈಯನ್ನು ಹಿಂತೆಗೆದುಕೊಂಡಿದ್ದಾರೆ. [QE][QS]ತನ್ನ ಸುತ್ತಲೂ ಇರುವವರನ್ನು ದಹಿಸುವ ಬೆಂಕಿಯಂತೆ, [QE][QS2]ಅವರು ಯಾಕೋಬನಿಗೆ ವಿರುದ್ಧವಾಗಿ ದಹಿಸಿಬಿಟ್ಟಿದ್ದಾರೆ. [QE][PBR]
4. [QS]ಅವರು ಶತ್ರುವಿನ ಹಾಗೆಯೇ ತನ್ನ ಬಿಲ್ಲನ್ನು ಬಗ್ಗಿಸಿದ್ದಾರೆ. [QE][QS2]ವೈರಿಯ ಹಾಗೆ ತನ್ನ ಬಲಗೈ ಎತ್ತಿ ನಿಂತುಕೊಂಡು, [QE][QS]ಕಣ್ಣಿಗೆ ರಮ್ಯವಾಗಿ ಕಾಣುವ ಎಲ್ಲವುಗಳನ್ನು ಕೊಂದುಹಾಕಿದ್ದಾರೆ. [QE][QS2]ಅವರು ತನ್ನ ರೋಷವೆಂಬ ಅಗ್ನಿಯನ್ನು ಚೀಯೋನ್ ಪುತ್ರಿಯ ಡೇರೆಯಲ್ಲಿ ಸುರಿದಿದ್ದಾರೆ. [QE][PBR]
5. [QS]ಕರ್ತದೇವರು ಶತ್ರುವಿನಂತೆ ಆಗಿ, [QE][QS2]ಇಸ್ರಾಯೇಲನ್ನು ನುಂಗಿಬಿಟ್ಟಿದ್ದಾರೆ. [QE][QS]ಕರ್ತದೇವರು ಅವನ ಭದ್ರವಾದ ಸ್ಥಾನಗಳನ್ನೆಲ್ಲಾ ನಾಶಮಾಡಿದ್ದಾರೆ. [QE][QS2]ಯೆಹೂದದ ದುಃಖವನ್ನೂ, [QE][QS2]ಪ್ರಲಾಪವನ್ನೂ ಹೆಚ್ಚಿಸಿದ್ದಾರೆ. [QE][PBR]
6. [QS]ಅವರು ತನ್ನ ಗುಡಾರವನ್ನು ತೋಟದಂತೆ ಬಲಾತ್ಕಾರವಾಗಿ ತೆಗೆದುಹಾಕಿದ್ದಾರೆ. [QE][QS2]ಅವರು ತನ್ನ ಸಭಾ ಸ್ಥಾನಗಳನ್ನು ನಾಶಮಾಡಿದ್ದಾರೆ. [QE][QS]ಯೆಹೋವ ದೇವರು ಚೀಯೋನಿಗೆ ಪವಿತ್ರ ಹಬ್ಬಗಳನ್ನೂ, [QE][QS2]ಸಬ್ಬತ್ ದಿನಗಳನ್ನೂ ಮರೆತುಬಿಡುವಂತೆ ಮಾಡಿದ್ದಾರೆ. [QE][QS]ತನ್ನ ಕೋಪದ ಉರಿಯಲ್ಲಿ ಅರಸನನ್ನೂ, [QE][QS2]ಯಾಜಕನನ್ನೂ ತುಚ್ಛೀಕರಿಸಿದ್ದಾರೆ. [QE][PBR]
7. [QS]ಕರ್ತದೇವರು ತನ್ನ ಬಲಿಪೀಠವನ್ನು ತಳ್ಳಿಬಿಟ್ಟಿದ್ದಾರೆ. [QE][QS2]ತನ್ನ ಪರಿಶುದ್ಧ ಸ್ಥಳವನ್ನು ಅಸಹ್ಯ ಪಡಿಸಿದ್ದಾನೆ. [QE][QS]ಆತನು ಅವಳ ಅರಮನೆಗಳ ಗೋಡೆಗಳನ್ನು [QE][QS2]ಶತ್ರುವಿನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದಾನೆ. [QE][QS]ಪರಿಶುದ್ಧ ಹಬ್ಬದ ದಿನದಲ್ಲಿ ಮಾಡಿದ ಹಾಗೆ, [QE][QS2]ಅವರು ಯೆಹೋವ ದೇವರು ಆಲಯದಲ್ಲಿ ಶಬ್ದ ಮಾಡಿದ್ದಾರೆ. [QE][PBR]
8. [QS]ಯೆಹೋವ ದೇವರು ಚೀಯೋನಿನ ಗೋಡೆಯನ್ನು ನಾಶಮಾಡಬೇಕೆಂದು ಉದ್ದೇಶಿಸಿದ್ದಾರೆ. [QE][QS2]ಅಳತೆಯ ಗೆರೆಯನ್ನು ಎಳೆದಿದ್ದಾರೆ. [QE][QS]ತನ್ನ ಕೈಯನ್ನು ಕೆಡಿಸುವುದರಿಂದ ಹಿಂದೆಗೆಯಲಿಲ್ಲ. [QE][QS2]ಆದ್ದರಿಂದ ಕಲ್ಲಿನ ಪ್ರಾಕಾರವನ್ನು ಮತ್ತು [QE][QS]ಗೋಡೆಯನ್ನು ಗೋಳಾಡುವಂತೆ ಆತನು ಮಾಡಿದ್ದಾನೆ. [QE][QS2]ಅವೆರಡೂ ಜೊತೆಯಾಗಿ ಕುಸಿದು ಹೋಗಿವೆ. [QE][PBR]
9. [QS]ಅವಳ ಬಾಗಿಲುಗಳು ನೆಲದೊಳಗೆ ಹೂತುಕೊಂಡಿವೆ. [QE][QS2]ಆತನು ಆಕೆಯ ಅಗುಳಿಗಳನ್ನು ಮುರಿದು ಹಾಳು ಮಾಡಿದ್ದಾನೆ. [QE][QS]ಅವಳ ಅರಸನು ಮತ್ತು ಅವಳ ಪ್ರಭುಗಳು ಇತರ ಜನಾಂಗಗಳ ಮಧ್ಯೆ ಇರುವರು. [QE][QS2]ಇನ್ನು ದೈವನಿಯಮವು ನಿಂತುಹೋಗಿವೆ. [QE][QS]ಆಕೆಯ ಪ್ರವಾದಿಗಳು ಸಹ [QE][QS2]ಯೆಹೋವ ದೇವರಿಂದ ದರ್ಶನವನ್ನು ಕಂಡುಕೊಳ್ಳುವುದಿಲ್ಲ. [QE][PBR]
10. [QS]ಚೀಯೋನಿನ ಹಿರಿಯರು [QE][QS2]ನೆಲದ ಮೇಲೆ ಕುಳಿತುಕೊಂಡು ನಿಶ್ಶಬ್ದವಾಗಿದ್ದಾರೆ. [QE][QS]ಅವರು ತಮ್ಮ ತಲೆಗಳ ಮೇಲೆ ಧೂಳು ಹಾಕಿಕೊಂಡಿದ್ದಾರೆ. [QE][QS2]ಅವರು ಗೋಣಿತಟ್ಟನ್ನು ಸುತ್ತಿಕೊಂಡಿದ್ದಾರೆ. [QE][QS]ಯೆರೂಸಲೇಮಿನ ಕನ್ಯೆಯರು [QE][QS2]ತಮ್ಮ ತಲೆಯನ್ನು ನೆಲದ ಕಡೆಗೆ ಬಗ್ಗಿಸಿಕೊಂಡಿದ್ದಾರೆ. [QE][PBR]
11. [QS]ನನ್ನ ಕಣ್ಣುಗಳು ಕಣ್ಣೀರಿನಿಂದ ಕುಂದಿ ಹೋಗುತ್ತವೆ. [QE][QS2]ನನ್ನ ಆತ್ಮವು ಕಳವಳಗೊಂಡಿದೆ. [QE][QS]ನನ್ನ ಹೃದಯವು ನೆಲದ ಮೇಲೆ ಹರಡಿದೆ. [QE][QS2]ಏಕೆಂದರೆ ನನ್ನ ಜನರು ನಾಶವಾಗಿದ್ದಾರೆ. [QE][QS]ಮಕ್ಕಳೂ ಶಿಶುಗಳೂ [QE][QS2]ನಗರದ ಬೀದಿಗಳಲ್ಲಿ ಮೂರ್ಛೆ ಹೋಗಿದ್ದಾರೆ. [QE][PBR]
12. [QS]ಅವರು ನಗರದ ಬೀದಿಗಳಲ್ಲಿ [QE][QS2]ಗಾಯಪಟ್ಟವರ ಹಾಗೆ ಮೂರ್ಛೆ ಹೋದಾಗ, [QE][QS]ತಮ್ಮ ತಾಯಂದಿರ ಎದೆಯಲ್ಲಿ ಪ್ರಾಣ ಸುರಿದಾಗ, [QE][QS2]“ತಿನ್ನಲಿಕ್ಕೆ ರೊಟ್ಟಿಯೂ ದ್ರಾಕ್ಷಾರಸವೂ ಎಲ್ಲಿ?” [QE][QS2]ಎಂದು ತಮ್ಮ ತಾಯಂದಿರಿಗೆ ಕೇಳುತ್ತಾರೆ. [QE][PBR]
13. [QS]ಯೆರೂಸಲೇಮಿನ ಪುತ್ರಿಯೇ, [QE][QS2]ನಾನು ಯಾವುದನ್ನು ನಿನಗೆ ಸಾಕ್ಷಿಯನ್ನಾಗಿಡಲಿ? [QE][QS]ಯಾವುದನ್ನು ನಿನಗೆ ಸಮಾನ ಮಾಡಲಿ? [QE][QS2]ಚೀಯೋನಿನ ಕನ್ಯೆಯೇ, [QE][QS2]ನಿನ್ನನ್ನು ಆದರಿಸುವವರು ಯಾರು? [QE][PBR]
14. [QS]ನಿನ್ನ ಪ್ರವಾದಿಗಳು [QE][QS2]ನಿನಗಾಗಿ ವ್ಯರ್ಥವಾದ ಮತ್ತು [QE][QS]ಮೂರ್ಖತನದ ದರ್ಶನಗಳನ್ನು ನೋಡಿದ್ದಾರೆ. [QE][QS2]ಅವರು ನಿನ್ನ ಬಂಧನವನ್ನು ನೀಗಿಸುವುದಕ್ಕಾಗಿ ನಿನ್ನ ಪಾಪವನ್ನು ಬಯಲಿಗೆ ತರಲಿಲ್ಲ. [QE][QS]ಆದರೆ ನಿನಗಾಗಿ ಸುಳ್ಳಿನ ಪ್ರವಾದನೆಗಳನ್ನು ಕೊಟ್ಟು [QE][QS2]ಗಡಿಪಾರು ಮಾಡುವುದಕ್ಕೆ ಕಾರಣರಾಗಿದ್ದಾರೆ. [QE][PBR]
15. [QS]ದಾರಿಯಲ್ಲಿ ಹೋಗುವವರೆಲ್ಲರೂ [QE][QS2]ನಿನ್ನ ವಿಷಯದಲ್ಲಿ ತಮ್ಮ ಕೈಗಳನ್ನು ತಟ್ಟುತ್ತಾರೆ. [QE][QS]ಅವರು ಯೆರೂಸಲೇಮಿನ ಪುತ್ರಿಯ ವಿಷಯದಲ್ಲಿ [QE][QS2]ಸಿಳ್ಳುಹಾಕಿ, ತಲೆಯಾಡಿಸಿ [QE][QS]ಆ ಮನುಷ್ಯರು ಕರೆಯುತ್ತಿದ್ದ [QE][QS2]ಸೌಂದರ್ಯದ ಸಂಪೂರ್ಣತೆಯೂ, [QE][QS2]ಸರ್ವಭೂಮಿಯ ಸಂತೋಷವೂ ಆಗಿರುವ ನಗರಿಯು ಇದೆಯೋ? [QE][PBR]
16. [QS]ನಿನ್ನ ಎಲ್ಲಾ ಶತ್ರುಗಳು [QE][QS2]ನಿನಗೆ ವಿರೋಧವಾಗಿ ತಮ್ಮ ಬಾಯಿತೆರೆದಿದ್ದಾರೆ. [QE][QS]“ನಾವು ಆಕೆಯನ್ನು ನುಂಗಿಬಿಟ್ಟೆವು. [QE][QS2]ನಿಶ್ಚಯವಾಗಿ ನಾವು ನಿರೀಕ್ಷಿಸಿದ ದಿನವು ಇದೇ. [QE][QS]ಅದನ್ನು ನಾವು ಕಣ್ಣಾರೆ ಕಂಡಿದ್ದೇವೆ,” [QE][QS2]ಎಂದು ಅವರು ಕೊಚ್ಚಿಕೊಳ್ಳುತ್ತಾರೆ. [QE][PBR]
17. [QS]ಯೆಹೋವ ದೇವರು ತಾವು ಸಂಕಲ್ಪಿಸಿದ್ದನ್ನು ಮಾಡಿದ್ದಾರೆ. [QE][QS2]ಅವರು ಪುರಾತನ ಕಾಲದ ದಿನಗಳಲ್ಲಿ [QE][QS2]ಆಜ್ಞಾಪಿಸಿದ ತಮ್ಮ ವಾಕ್ಯವನ್ನು ಪೂರೈಸಿದ್ದಾರೆ. [QE][QS]ಅವರು ಕೆಡವಿ ಕನಿಕರಿಸಲಿಲ್ಲ. [QE][QS2]ಅವರು ನಿನ್ನ ಶತ್ರುವನ್ನು ನಿನ್ನ ವಿಷಯವಾಗಿ ಸಂತೋಷಪಡುವ ಹಾಗೆ ಮಾಡಿದ್ದಾರೆ. [QE][QS2]ಆತನು ನಿನ್ನ ವೈರಿಗಳ ಕೊಂಬನ್ನು ಎತ್ತಿದ್ದಾರೆ. [QE][PBR]
18. [QS]ಅವರ ಹೃದಯವು [QE][QS2]ಕರ್ತದೇವರ ಕಡೆಗೆ ಕೂಗಿ, [QE][QS]ಚೀಯೋನಿನ ಗೋಡೆಯೇ, [QE][QS2]ರಾತ್ರಿ ಹಗಲೂ [QE][QS2]ನಿನ್ನ ಕಣ್ಣೀರು ನದಿಯಂತೆ ಹರಿದು ಹೋಗಲಿ, [QE][QS]ನಿನಗೆ ವಿಶ್ರಾಂತಿ ಬೇಡ, [QE][QS2]ನಿನ್ನ ಕಣ್ಣ ರೆಪ್ಪೆಯನ್ನು ಮುಚ್ಚಬೇಡ. [QE][PBR]
19. [QS]ಎದ್ದೇಳು, ರಾತ್ರಿಯಲ್ಲಿ ಕೂಗು. [QE][QS2]ನಿನ್ನ ಹೃದಯವನ್ನು ಕರ್ತದೇವರ ಸಮ್ಮುಖದಲ್ಲಿ [QE][QS]ಆರಂಭದ ಜಾವಗಳಲ್ಲಿ [QE][QS2]ನೀರಿನಂತೆ ಹೊಯ್ದುಬಿಡಿರಿ; [QE][QS]ನಿನ್ನ ಕೈಗಳನ್ನು ಆತನ ಕಡೆಗೆ ಎತ್ತು, [QE][QS2]ಏಕೆಂದರೆ ನಿನ್ನ ಚಿಕ್ಕ ಮಕ್ಕಳ ಪ್ರಾಣವು [QE][QS]ಪ್ರತಿಯೊಂದು ಬೀದಿಯ ಬದಿಯಲ್ಲಿ [QE][QS2]ಹಸಿವೆಯಿಂದ ದುರ್ಬಲವಾಗಿದೆ. [QE][PBR]
20. [QS]ಯೆಹೋವ ದೇವರೇ, ಕಟಾಕ್ಷಿಸಿ: [QE][QS2]ನೀವು ಇದನ್ನು ಯಾರಿಗೆ ಮಾಡಿದಿರೋ ಯೋಚಿಸಿರಿ. [QE][QS]ಸ್ತ್ರೀಯರು ತಮ್ಮ ಫಲವಾದ [QE][QS2]ಕೂಸುಗಳನ್ನು ತಿನ್ನಬೇಕೇ? [QE][QS]ಯಾಜಕನು ಮತ್ತು ಪ್ರವಾದಿಯು [QE][QS2]ಕರ್ತದೇವರ ಪರಿಶುದ್ಧ ಸ್ಥಳದಲ್ಲಿ ಹತರಾಗಬೇಕೋ? [QE][PBR]
21. [QS]ಯುವಕರು ಮತ್ತು ವೃದ್ಧರು [QE][QS2]ಬೀದಿಗಳ ನೆಲದ ಮೇಲೆ ಮಲಗಿದ್ದಾರೆ. [QE][QS]ನನ್ನ ಯುವಕರು, ಯುವತಿಯರು [QE][QS2]ಖಡ್ಗದಿಂದ ಹತರಾಗಿದ್ದಾರೆ. [QE][QS]ನಿನ್ನ ಕೋಪದ ದಿನದಲ್ಲಿ ನೀನು ಅವರನ್ನು ಸಾಯಿಸಿರುವಿರಿ, [QE][QS2]ಕೊಂದುಹಾಕಿದಿರಿ, ಕನಿಕರಿಸಲಿಲ್ಲ. [QE][PBR]
22. [QS]ಹಬ್ಬದ ದಿನಕ್ಕೆ ಕರೆಯುವಂತೆಯೇ [QE][QS2]ನನ್ನ ವಿರುದ್ಧವಾಗಿ ಪ್ರತಿಯೊಂದು ದಿಕ್ಕಿನಲ್ಲಿಯ ವಿರೋಧಿಗಳನ್ನು ಕರೆದಿದ್ದೀರಿ. [QE][QS]ಯೆಹೋವ ದೇವರ ಕೋಪದ ದಿನದಲ್ಲಿ [QE][QS2]ಯಾರೂ ತಪ್ಪಿಸಿಕೊಳ್ಳಲಾರರು, ಉಳಿದುಕೊಳ್ಳಲಾರರು. [QE][QS]ನಾನು ಬೆಳೆಸಿ ಸಾಕಿದವರನ್ನು [QE][QS2]ವೈರಿಯು ನಾಶಮಾಡಿದ್ದಾನೆ. [QE][PBR] [PBR]
ಒಟ್ಟು 5 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 2 / 5
1 2 3 4 5
1 ಕರ್ತದೇವರು ಹೇಗೆ ತಮ್ಮ ಕೋಪದ ಮೇಘದಿಂದ ಚೀಯೋನಿನ ಮಗಳನ್ನು ಮುಚ್ಚಿ ಇಸ್ರಾಯೇಲಿನ ಸೌಂದರ್ಯವನ್ನು ಆಕಾಶದಿಂದ ಭೂಮಿಗೆ ಎಸೆದರು. ತನ್ನ ಕೋಪದ ದಿನದಲ್ಲಿ, ತನ್ನ ಪಾದಪೀಠವನ್ನು ಜ್ಞಾಪಕ ಮಾಡಿಕೊಳ್ಳಲಿಲ್ಲ. 2 ಕರ್ತದೇವರು ಯಾಕೋಬಿನ ಎಲ್ಲಾ ನಿವಾಸಿಗಳನ್ನು ಕನಿಕರಿಸದೆ ನುಂಗಿದ್ದಾರೆ. ಯೆಹೂದದ ಪುತ್ರಿಯ ಭದ್ರವಾದ ಸ್ಥಾನಗಳನ್ನು ತನ್ನ ರೋಷದಲ್ಲಿ ಕೆಡವಿ ಹಾಕಿದ್ದಾರೆ. ಅವರು ಅವುಗಳನ್ನು ನೆಲಸಮ ಮಾಡಿದ್ದಾರೆ. ಅವರು ಆಕೆಯ ರಾಜ್ಯವನ್ನೂ, ಪ್ರಭುಗಳನ್ನೂ ಅಗೌರವಿಸಿ ನೆಲಕ್ಕೆ ದಬ್ಬಿದ್ದಾರೆ. 3 ಅವರು ತನ್ನ ತೀಕ್ಷ್ಣ ಕೋಪದಲ್ಲಿ ಇಸ್ರಾಯೇಲಿನ ಕೊಂಬುಗಳನ್ನೆಲ್ಲಾ ಮುರಿದು ಹಾಕಿದ್ದಾರೆ. ಅವರು ಶತ್ರುವಿನ ಎದುರಿನಿಂದ ತನ್ನ ಬಲಗೈಯನ್ನು ಹಿಂತೆಗೆದುಕೊಂಡಿದ್ದಾರೆ. ತನ್ನ ಸುತ್ತಲೂ ಇರುವವರನ್ನು ದಹಿಸುವ ಬೆಂಕಿಯಂತೆ, ಅವರು ಯಾಕೋಬನಿಗೆ ವಿರುದ್ಧವಾಗಿ ದಹಿಸಿಬಿಟ್ಟಿದ್ದಾರೆ. 4 ಅವರು ಶತ್ರುವಿನ ಹಾಗೆಯೇ ತನ್ನ ಬಿಲ್ಲನ್ನು ಬಗ್ಗಿಸಿದ್ದಾರೆ. ವೈರಿಯ ಹಾಗೆ ತನ್ನ ಬಲಗೈ ಎತ್ತಿ ನಿಂತುಕೊಂಡು, ಕಣ್ಣಿಗೆ ರಮ್ಯವಾಗಿ ಕಾಣುವ ಎಲ್ಲವುಗಳನ್ನು ಕೊಂದುಹಾಕಿದ್ದಾರೆ. ಅವರು ತನ್ನ ರೋಷವೆಂಬ ಅಗ್ನಿಯನ್ನು ಚೀಯೋನ್ ಪುತ್ರಿಯ ಡೇರೆಯಲ್ಲಿ ಸುರಿದಿದ್ದಾರೆ. 5 ಕರ್ತದೇವರು ಶತ್ರುವಿನಂತೆ ಆಗಿ, ಇಸ್ರಾಯೇಲನ್ನು ನುಂಗಿಬಿಟ್ಟಿದ್ದಾರೆ. ಕರ್ತದೇವರು ಅವನ ಭದ್ರವಾದ ಸ್ಥಾನಗಳನ್ನೆಲ್ಲಾ ನಾಶಮಾಡಿದ್ದಾರೆ. ಯೆಹೂದದ ದುಃಖವನ್ನೂ, ಪ್ರಲಾಪವನ್ನೂ ಹೆಚ್ಚಿಸಿದ್ದಾರೆ. 6 ಅವರು ತನ್ನ ಗುಡಾರವನ್ನು ತೋಟದಂತೆ ಬಲಾತ್ಕಾರವಾಗಿ ತೆಗೆದುಹಾಕಿದ್ದಾರೆ. ಅವರು ತನ್ನ ಸಭಾ ಸ್ಥಾನಗಳನ್ನು ನಾಶಮಾಡಿದ್ದಾರೆ. ಯೆಹೋವ ದೇವರು ಚೀಯೋನಿಗೆ ಪವಿತ್ರ ಹಬ್ಬಗಳನ್ನೂ, ಸಬ್ಬತ್ ದಿನಗಳನ್ನೂ ಮರೆತುಬಿಡುವಂತೆ ಮಾಡಿದ್ದಾರೆ. ತನ್ನ ಕೋಪದ ಉರಿಯಲ್ಲಿ ಅರಸನನ್ನೂ, ಯಾಜಕನನ್ನೂ ತುಚ್ಛೀಕರಿಸಿದ್ದಾರೆ. 7 ಕರ್ತದೇವರು ತನ್ನ ಬಲಿಪೀಠವನ್ನು ತಳ್ಳಿಬಿಟ್ಟಿದ್ದಾರೆ. ತನ್ನ ಪರಿಶುದ್ಧ ಸ್ಥಳವನ್ನು ಅಸಹ್ಯ ಪಡಿಸಿದ್ದಾನೆ. ಆತನು ಅವಳ ಅರಮನೆಗಳ ಗೋಡೆಗಳನ್ನು ಶತ್ರುವಿನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದಾನೆ. ಪರಿಶುದ್ಧ ಹಬ್ಬದ ದಿನದಲ್ಲಿ ಮಾಡಿದ ಹಾಗೆ, ಅವರು ಯೆಹೋವ ದೇವರು ಆಲಯದಲ್ಲಿ ಶಬ್ದ ಮಾಡಿದ್ದಾರೆ. 8 ಯೆಹೋವ ದೇವರು ಚೀಯೋನಿನ ಗೋಡೆಯನ್ನು ನಾಶಮಾಡಬೇಕೆಂದು ಉದ್ದೇಶಿಸಿದ್ದಾರೆ. ಅಳತೆಯ ಗೆರೆಯನ್ನು ಎಳೆದಿದ್ದಾರೆ. ತನ್ನ ಕೈಯನ್ನು ಕೆಡಿಸುವುದರಿಂದ ಹಿಂದೆಗೆಯಲಿಲ್ಲ. ಆದ್ದರಿಂದ ಕಲ್ಲಿನ ಪ್ರಾಕಾರವನ್ನು ಮತ್ತು ಗೋಡೆಯನ್ನು ಗೋಳಾಡುವಂತೆ ಆತನು ಮಾಡಿದ್ದಾನೆ. ಅವೆರಡೂ ಜೊತೆಯಾಗಿ ಕುಸಿದು ಹೋಗಿವೆ. 9 ಅವಳ ಬಾಗಿಲುಗಳು ನೆಲದೊಳಗೆ ಹೂತುಕೊಂಡಿವೆ. ಆತನು ಆಕೆಯ ಅಗುಳಿಗಳನ್ನು ಮುರಿದು ಹಾಳು ಮಾಡಿದ್ದಾನೆ. ಅವಳ ಅರಸನು ಮತ್ತು ಅವಳ ಪ್ರಭುಗಳು ಇತರ ಜನಾಂಗಗಳ ಮಧ್ಯೆ ಇರುವರು. ಇನ್ನು ದೈವನಿಯಮವು ನಿಂತುಹೋಗಿವೆ. ಆಕೆಯ ಪ್ರವಾದಿಗಳು ಸಹ ಯೆಹೋವ ದೇವರಿಂದ ದರ್ಶನವನ್ನು ಕಂಡುಕೊಳ್ಳುವುದಿಲ್ಲ. 10 ಚೀಯೋನಿನ ಹಿರಿಯರು ನೆಲದ ಮೇಲೆ ಕುಳಿತುಕೊಂಡು ನಿಶ್ಶಬ್ದವಾಗಿದ್ದಾರೆ. ಅವರು ತಮ್ಮ ತಲೆಗಳ ಮೇಲೆ ಧೂಳು ಹಾಕಿಕೊಂಡಿದ್ದಾರೆ. ಅವರು ಗೋಣಿತಟ್ಟನ್ನು ಸುತ್ತಿಕೊಂಡಿದ್ದಾರೆ. ಯೆರೂಸಲೇಮಿನ ಕನ್ಯೆಯರು ತಮ್ಮ ತಲೆಯನ್ನು ನೆಲದ ಕಡೆಗೆ ಬಗ್ಗಿಸಿಕೊಂಡಿದ್ದಾರೆ. 11 ನನ್ನ ಕಣ್ಣುಗಳು ಕಣ್ಣೀರಿನಿಂದ ಕುಂದಿ ಹೋಗುತ್ತವೆ. ನನ್ನ ಆತ್ಮವು ಕಳವಳಗೊಂಡಿದೆ. ನನ್ನ ಹೃದಯವು ನೆಲದ ಮೇಲೆ ಹರಡಿದೆ. ಏಕೆಂದರೆ ನನ್ನ ಜನರು ನಾಶವಾಗಿದ್ದಾರೆ. ಮಕ್ಕಳೂ ಶಿಶುಗಳೂ ನಗರದ ಬೀದಿಗಳಲ್ಲಿ ಮೂರ್ಛೆ ಹೋಗಿದ್ದಾರೆ. 12 ಅವರು ನಗರದ ಬೀದಿಗಳಲ್ಲಿ ಗಾಯಪಟ್ಟವರ ಹಾಗೆ ಮೂರ್ಛೆ ಹೋದಾಗ, ತಮ್ಮ ತಾಯಂದಿರ ಎದೆಯಲ್ಲಿ ಪ್ರಾಣ ಸುರಿದಾಗ, “ತಿನ್ನಲಿಕ್ಕೆ ರೊಟ್ಟಿಯೂ ದ್ರಾಕ್ಷಾರಸವೂ ಎಲ್ಲಿ?” ಎಂದು ತಮ್ಮ ತಾಯಂದಿರಿಗೆ ಕೇಳುತ್ತಾರೆ. 13 ಯೆರೂಸಲೇಮಿನ ಪುತ್ರಿಯೇ, ನಾನು ಯಾವುದನ್ನು ನಿನಗೆ ಸಾಕ್ಷಿಯನ್ನಾಗಿಡಲಿ? ಯಾವುದನ್ನು ನಿನಗೆ ಸಮಾನ ಮಾಡಲಿ? ಚೀಯೋನಿನ ಕನ್ಯೆಯೇ, ನಿನ್ನನ್ನು ಆದರಿಸುವವರು ಯಾರು? 14 ನಿನ್ನ ಪ್ರವಾದಿಗಳು ನಿನಗಾಗಿ ವ್ಯರ್ಥವಾದ ಮತ್ತು ಮೂರ್ಖತನದ ದರ್ಶನಗಳನ್ನು ನೋಡಿದ್ದಾರೆ. ಅವರು ನಿನ್ನ ಬಂಧನವನ್ನು ನೀಗಿಸುವುದಕ್ಕಾಗಿ ನಿನ್ನ ಪಾಪವನ್ನು ಬಯಲಿಗೆ ತರಲಿಲ್ಲ. ಆದರೆ ನಿನಗಾಗಿ ಸುಳ್ಳಿನ ಪ್ರವಾದನೆಗಳನ್ನು ಕೊಟ್ಟು ಗಡಿಪಾರು ಮಾಡುವುದಕ್ಕೆ ಕಾರಣರಾಗಿದ್ದಾರೆ. 15 ದಾರಿಯಲ್ಲಿ ಹೋಗುವವರೆಲ್ಲರೂ ನಿನ್ನ ವಿಷಯದಲ್ಲಿ ತಮ್ಮ ಕೈಗಳನ್ನು ತಟ್ಟುತ್ತಾರೆ. ಅವರು ಯೆರೂಸಲೇಮಿನ ಪುತ್ರಿಯ ವಿಷಯದಲ್ಲಿ ಸಿಳ್ಳುಹಾಕಿ, ತಲೆಯಾಡಿಸಿ ಆ ಮನುಷ್ಯರು ಕರೆಯುತ್ತಿದ್ದ ಸೌಂದರ್ಯದ ಸಂಪೂರ್ಣತೆಯೂ, ಸರ್ವಭೂಮಿಯ ಸಂತೋಷವೂ ಆಗಿರುವ ನಗರಿಯು ಇದೆಯೋ? 16 ನಿನ್ನ ಎಲ್ಲಾ ಶತ್ರುಗಳು ನಿನಗೆ ವಿರೋಧವಾಗಿ ತಮ್ಮ ಬಾಯಿತೆರೆದಿದ್ದಾರೆ. “ನಾವು ಆಕೆಯನ್ನು ನುಂಗಿಬಿಟ್ಟೆವು. ನಿಶ್ಚಯವಾಗಿ ನಾವು ನಿರೀಕ್ಷಿಸಿದ ದಿನವು ಇದೇ. ಅದನ್ನು ನಾವು ಕಣ್ಣಾರೆ ಕಂಡಿದ್ದೇವೆ,” ಎಂದು ಅವರು ಕೊಚ್ಚಿಕೊಳ್ಳುತ್ತಾರೆ. 17 ಯೆಹೋವ ದೇವರು ತಾವು ಸಂಕಲ್ಪಿಸಿದ್ದನ್ನು ಮಾಡಿದ್ದಾರೆ. ಅವರು ಪುರಾತನ ಕಾಲದ ದಿನಗಳಲ್ಲಿ ಆಜ್ಞಾಪಿಸಿದ ತಮ್ಮ ವಾಕ್ಯವನ್ನು ಪೂರೈಸಿದ್ದಾರೆ. ಅವರು ಕೆಡವಿ ಕನಿಕರಿಸಲಿಲ್ಲ. ಅವರು ನಿನ್ನ ಶತ್ರುವನ್ನು ನಿನ್ನ ವಿಷಯವಾಗಿ ಸಂತೋಷಪಡುವ ಹಾಗೆ ಮಾಡಿದ್ದಾರೆ. ಆತನು ನಿನ್ನ ವೈರಿಗಳ ಕೊಂಬನ್ನು ಎತ್ತಿದ್ದಾರೆ. 18 ಅವರ ಹೃದಯವು ಕರ್ತದೇವರ ಕಡೆಗೆ ಕೂಗಿ, ಚೀಯೋನಿನ ಗೋಡೆಯೇ, ರಾತ್ರಿ ಹಗಲೂ ನಿನ್ನ ಕಣ್ಣೀರು ನದಿಯಂತೆ ಹರಿದು ಹೋಗಲಿ, ನಿನಗೆ ವಿಶ್ರಾಂತಿ ಬೇಡ, ನಿನ್ನ ಕಣ್ಣ ರೆಪ್ಪೆಯನ್ನು ಮುಚ್ಚಬೇಡ. 19 ಎದ್ದೇಳು, ರಾತ್ರಿಯಲ್ಲಿ ಕೂಗು. ನಿನ್ನ ಹೃದಯವನ್ನು ಕರ್ತದೇವರ ಸಮ್ಮುಖದಲ್ಲಿ ಆರಂಭದ ಜಾವಗಳಲ್ಲಿ ನೀರಿನಂತೆ ಹೊಯ್ದುಬಿಡಿರಿ; ನಿನ್ನ ಕೈಗಳನ್ನು ಆತನ ಕಡೆಗೆ ಎತ್ತು, ಏಕೆಂದರೆ ನಿನ್ನ ಚಿಕ್ಕ ಮಕ್ಕಳ ಪ್ರಾಣವು ಪ್ರತಿಯೊಂದು ಬೀದಿಯ ಬದಿಯಲ್ಲಿ ಹಸಿವೆಯಿಂದ ದುರ್ಬಲವಾಗಿದೆ. 20 ಯೆಹೋವ ದೇವರೇ, ಕಟಾಕ್ಷಿಸಿ: ನೀವು ಇದನ್ನು ಯಾರಿಗೆ ಮಾಡಿದಿರೋ ಯೋಚಿಸಿರಿ. ಸ್ತ್ರೀಯರು ತಮ್ಮ ಫಲವಾದ ಕೂಸುಗಳನ್ನು ತಿನ್ನಬೇಕೇ? ಯಾಜಕನು ಮತ್ತು ಪ್ರವಾದಿಯು ಕರ್ತದೇವರ ಪರಿಶುದ್ಧ ಸ್ಥಳದಲ್ಲಿ ಹತರಾಗಬೇಕೋ? 21 ಯುವಕರು ಮತ್ತು ವೃದ್ಧರು ಬೀದಿಗಳ ನೆಲದ ಮೇಲೆ ಮಲಗಿದ್ದಾರೆ. ನನ್ನ ಯುವಕರು, ಯುವತಿಯರು ಖಡ್ಗದಿಂದ ಹತರಾಗಿದ್ದಾರೆ. ನಿನ್ನ ಕೋಪದ ದಿನದಲ್ಲಿ ನೀನು ಅವರನ್ನು ಸಾಯಿಸಿರುವಿರಿ, ಕೊಂದುಹಾಕಿದಿರಿ, ಕನಿಕರಿಸಲಿಲ್ಲ. 22 ಹಬ್ಬದ ದಿನಕ್ಕೆ ಕರೆಯುವಂತೆಯೇ ನನ್ನ ವಿರುದ್ಧವಾಗಿ ಪ್ರತಿಯೊಂದು ದಿಕ್ಕಿನಲ್ಲಿಯ ವಿರೋಧಿಗಳನ್ನು ಕರೆದಿದ್ದೀರಿ. ಯೆಹೋವ ದೇವರ ಕೋಪದ ದಿನದಲ್ಲಿ ಯಾರೂ ತಪ್ಪಿಸಿಕೊಳ್ಳಲಾರರು, ಉಳಿದುಕೊಳ್ಳಲಾರರು. ನಾನು ಬೆಳೆಸಿ ಸಾಕಿದವರನ್ನು ವೈರಿಯು ನಾಶಮಾಡಿದ್ದಾನೆ.
ಒಟ್ಟು 5 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 2 / 5
1 2 3 4 5
×

Alert

×

Kannada Letters Keypad References