ಪವಿತ್ರ ಬೈಬಲ್

ಓಪನ್ ಸಮಕಾಲೀನ ಆವೃತ್ತಿ (OCV)
ನ್ಯಾಯಸ್ಥಾಪಕರು
1. {#1ಯೆಫ್ತಾಹ ಮತ್ತು ಎಫ್ರಾಯೀಮ್ }
2. [PS]ಎಫ್ರಾಯೀಮನ ಜನರು ಕೂಡಿಕೊಂಡು ಉತ್ತರದ ಜಪೋನಿಗೆ ಹೋಗಿ, ಯೆಫ್ತಾಹನಿಗೆ, “ನೀನು ಅಮ್ಮೋನಿಯರ ಮೇಲೆ ಯುದ್ಧಮಾಡುವುದಕ್ಕೆ ಹೋದಾಗ, ನಮ್ಮನ್ನು ಏಕೆ ನಿನ್ನ ಸಂಗಡ ಹೋಗಲು ಕರೆಕಳುಹಿಸಲಿಲ್ಲ? ನಾವು ನಿನ್ನ ಮನೆಯನ್ನು ನಿನ್ನನ್ನು ಸಹಿತವಾಗಿ ಬೆಂಕಿಯಿಂದ ಸುಟ್ಟುಬಿಡುತ್ತೇವೆ,” ಎಂದರು. [PE][PS]ಯೆಫ್ತಾಹನು ಅವರಿಗೆ, “ನನಗೂ, ನಮ್ಮ ಜನರಿಗೂ ಅಮ್ಮೋನಿಯರ ಸಂಗಡ ದೊಡ್ಡ ವ್ಯಾಜ್ಯವಿರುವಾಗ, ನಾನು ನಿಮ್ಮನ್ನು ಕರೆದೆನು. ಆದರೆ ನೀವು ನನ್ನನ್ನು ಅವರ ಕೈಯಿಂದ ಬಿಡಿಸಿ ರಕ್ಷಿಸಲಿಲ್ಲ.
3. ನೀವು ನನ್ನನ್ನು ರಕ್ಷಿಸುವುದಿಲ್ಲವೆಂದು ನಾನು ಕಂಡು ನನ್ನ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು, ಅಮ್ಮೋನಿಯರಿಗೆ ವಿರೋಧವಾಗಿ ಹೋದೆನು. ಯೆಹೋವ ದೇವರು ಅವರನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟರು. ನೀವು ನನ್ನ ಸಂಗಡ ಯುದ್ಧಮಾಡುವುದಕ್ಕೆ ಈ ಹೊತ್ತು ನನಗೆ ವಿರೋಧವಾಗಿ ಏಕೆ ಬಂದಿರಿ?” ಎಂದನು. [PE]
4. [PS]ಆಗ ಯೆಫ್ತಾಹನು ಗಿಲ್ಯಾದ್ ಜನರೆಲ್ಲರನ್ನು ಕೂಡಿಸಿ, ಎಫ್ರಾಯೀಮ್ಯರ ಸಂಗಡ ಯುದ್ಧಮಾಡಿದನು. ಏಕೆಂದರೆ, “ಎಫ್ರಾಯೀಮ್ಯರನ್ನು ಮನಸ್ಸೆಯವರ ಮಧ್ಯದಲ್ಲಿದ್ದ ಗಿಲ್ಯಾದ್ಯರಾದ ನೀವು ಸ್ವಕುಲವನ್ನು ಬಿಟ್ಟು ತಪ್ಪಿಸಿಕೊಂಡವರಾಗಿದ್ದೀರಿ,” ಎಂದು ಎಫ್ರಾಯೀಮ್ಯರು ಹೇಳಿದ್ದರಿಂದ ಗಿಲ್ಯಾದ್ಯರು ಎಫ್ರಾಯೀಮ್ಯರನ್ನು ಹೊಡೆದರು.
5. ಗಿಲ್ಯಾದ್ಯರು ಎಫ್ರಾಯೀಮ್ಯರಿಗೆ ಮುಂದುಗಡೆ ಯೊರ್ದನ್ ನದಿ ರೇವುಗಳನ್ನು ಹಿಡಿದರು. ಆಗ ಏನಾಯಿತೆಂದರೆ, ಎಫ್ರಾಯೀಮ್ಯರಲ್ಲಿ ತಪ್ಪಿಸಿಕೊಂಡ ಯಾವನಾದರೂ ಬಂದು, “ದಾಟುತ್ತೇನೆ,” ಎಂದು ಹೇಳಿದರೆ, ಗಿಲ್ಯಾದ್ಯರು, “ನೀನು ಎಫ್ರಾಯೀಮ್ಯನೋ?” ಎಂದು ಅವನನ್ನು ಕೇಳುತ್ತಿದ್ದರು. ಅವನು, “ಇಲ್ಲ,” ಎಂದರೆ, ಅವನಿಗೆ, “ನೀನು ಷಿಬ್ಬೋಲೆತ್ ಅನ್ನು,” ಎಂದು ಹೇಳುತ್ತಿದ್ದರು.
6. ಆಗ ಅವನು ಹಾಗೆ ಹೇಳಲಾರದೆ, “ಸಿಬ್ಬೋಲೆತ್,” ಎಂದು ಉಚ್ಛರಿಸುವವನನ್ನು ಹಿಡಿದು ಯೊರ್ದನ್ ನದಿ ರೇವುಗಳ ಬಳಿಯಲ್ಲಿ ಕೊಂದುಹಾಕುತ್ತಿದ್ದರು. ಹೀಗೆ ಆ ಕಾಲದಲ್ಲಿ ಎಫ್ರಾಯೀಮ್ಯರೊಳಗೆ ನಾಲ್ವತ್ತೆರಡು ಸಾವಿರ ಜನರು ನಾಶವಾದರು. [PE]
7.
8. [PS]ಯೆಫ್ತಾಹನು ಇಸ್ರಾಯೇಲರಿಗೆ ಆರು ವರ್ಷ ನ್ಯಾಯತೀರಿಸಿದನು. ಅನಂತರ ಗಿಲ್ಯಾದ್ಯನಾದ ಯೆಫ್ತಾಹನು ಮರಣಹೊಂದಿದನು. ಅವನ ಶವವನ್ನು ಗಿಲ್ಯಾದ್ ಪಟ್ಟಣಗಳ ಒಂದರಲ್ಲಿ ಸಮಾಧಿಮಾಡಿದರು. [PE]{#1ಇಬ್ಚಾನನು, ಏಲೋನನು ಹಾಗೂ ಅಬ್ದೋನನು } [PS]ಅವನ ತರುವಾಯ ಬೇತ್ಲೆಹೇಮಿನವನಾದ ಇಬ್ಚಾನನು ಇಸ್ರಾಯೇಲಿಗೆ ನ್ಯಾಯತೀರಿಸಿದನು.
9. ಅವನಿಗೆ ಮೂವತ್ತು ಮಂದಿ ಪುತ್ರರು, ಮೂವತ್ತು ಮಂದಿ ಪುತ್ರಿಯರು ಇದ್ದರು. ಪುತ್ರಿಯರನ್ನು ಹೊರಗೆ ಮದುವೆ ಮಾಡಿಕೊಟ್ಟನು; ಹೊರಗಿನಿಂದ ಮೂವತ್ತು ಮಂದಿ ಕನ್ಯೆಯರನ್ನು ತನ್ನ ಪುತ್ರರಿಗೆ ತೆಗೆದುಕೊಂಡನು. ಅವನು ಇಸ್ರಾಯೇಲಿಗೆ ಏಳು ವರ್ಷ ನ್ಯಾಯತೀರಿಸಿದನು.
10. ನಂತರ ಇಬ್ಚಾನನು ಮರಣಹೊಂದಿ ಬೇತ್ಲೆಹೇಮಿನಲ್ಲಿ ಸಮಾಧಿಯಾದನು. [PE]
11. [PS]ಅವನ ತರುವಾಯ ಜೆಬುಲೂನಿನವನಾದ ಏಲೋನನು ಇಸ್ರಾಯೇಲರಿಗೆ ನ್ಯಾಯತೀರಿಸಿದನು. ಅವನು ಹತ್ತು ವರ್ಷಗಳು ಇಸ್ರಾಯೇಲಿಗೆ ನ್ಯಾಯತೀರಿಸಿದನು.
12. ಜೆಬುಲೂನಿನವನಾದ ಏಲೋನನು ಮರಣಹೊಂದಿ, ಜೆಬುಲೂನ್ ದೇಶವಾದ ಅಯ್ಯಾಲೋನಿನಲ್ಲಿ ಅವನ ಶವವನ್ನು ಸಮಾಧಿಮಾಡಿದರು. [PE]
13. [PS]ಅವನ ತರುವಾಯ ಪಿರಾತೋನ್ಯನಾದ ಹಿಲ್ಲೇಲನ ಮಗನಾದ ಅಬ್ದೋನನು ಇಸ್ರಾಯೇಲಿಗೆ ನ್ಯಾಯತೀರಿಸಿದನು.
14. ಅವನಿಗೆ ಎಪ್ಪತ್ತು ಕತ್ತೆಗಳ ಮೇಲೆ ಏರುವ ನಾಲ್ವತ್ತು ಮಂದಿ ಮಕ್ಕಳೂ, ಮೂವತ್ತು ಮಂದಿ ಮೊಮ್ಮಕ್ಕಳೂ ಇದ್ದರು. ಅವನು ಇಸ್ರಾಯೇಲಿಗೆ ಎಂಟು ವರ್ಷ ನ್ಯಾಯತೀರಿಸಿದನು.
15. ಪಿರಾತೋನ್ಯನಾದ ಹಿಲ್ಲೇಲನ ಮಗನಾದ ಅಬ್ದೋನನು ಮರಣಹೊಂದಿ, ಎಫ್ರಾಯೀಮ್ ದೇಶದಲ್ಲಿ ಅಮಾಲೇಕ್ಯರ ಬೆಟ್ಟದಲ್ಲಿರುವ ಪಿರಾತೋನಿನಲ್ಲಿ ಅವನ ಶವವನ್ನು ಸಮಾಧಿಮಾಡಿದರು. [PE]
ಒಟ್ಟು 21 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 12 / 21
1 2 3
4 5 6 7 8 9 10 11 12 13 14 15 16 17 18 19 20
21
ಯೆಫ್ತಾಹ ಮತ್ತು ಎಫ್ರಾಯೀಮ್ 1 2 ಎಫ್ರಾಯೀಮನ ಜನರು ಕೂಡಿಕೊಂಡು ಉತ್ತರದ ಜಪೋನಿಗೆ ಹೋಗಿ, ಯೆಫ್ತಾಹನಿಗೆ, “ನೀನು ಅಮ್ಮೋನಿಯರ ಮೇಲೆ ಯುದ್ಧಮಾಡುವುದಕ್ಕೆ ಹೋದಾಗ, ನಮ್ಮನ್ನು ಏಕೆ ನಿನ್ನ ಸಂಗಡ ಹೋಗಲು ಕರೆಕಳುಹಿಸಲಿಲ್ಲ? ನಾವು ನಿನ್ನ ಮನೆಯನ್ನು ನಿನ್ನನ್ನು ಸಹಿತವಾಗಿ ಬೆಂಕಿಯಿಂದ ಸುಟ್ಟುಬಿಡುತ್ತೇವೆ,” ಎಂದರು. ಯೆಫ್ತಾಹನು ಅವರಿಗೆ, “ನನಗೂ, ನಮ್ಮ ಜನರಿಗೂ ಅಮ್ಮೋನಿಯರ ಸಂಗಡ ದೊಡ್ಡ ವ್ಯಾಜ್ಯವಿರುವಾಗ, ನಾನು ನಿಮ್ಮನ್ನು ಕರೆದೆನು. ಆದರೆ ನೀವು ನನ್ನನ್ನು ಅವರ ಕೈಯಿಂದ ಬಿಡಿಸಿ ರಕ್ಷಿಸಲಿಲ್ಲ. 3 ನೀವು ನನ್ನನ್ನು ರಕ್ಷಿಸುವುದಿಲ್ಲವೆಂದು ನಾನು ಕಂಡು ನನ್ನ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು, ಅಮ್ಮೋನಿಯರಿಗೆ ವಿರೋಧವಾಗಿ ಹೋದೆನು. ಯೆಹೋವ ದೇವರು ಅವರನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟರು. ನೀವು ನನ್ನ ಸಂಗಡ ಯುದ್ಧಮಾಡುವುದಕ್ಕೆ ಈ ಹೊತ್ತು ನನಗೆ ವಿರೋಧವಾಗಿ ಏಕೆ ಬಂದಿರಿ?” ಎಂದನು. 4 ಆಗ ಯೆಫ್ತಾಹನು ಗಿಲ್ಯಾದ್ ಜನರೆಲ್ಲರನ್ನು ಕೂಡಿಸಿ, ಎಫ್ರಾಯೀಮ್ಯರ ಸಂಗಡ ಯುದ್ಧಮಾಡಿದನು. ಏಕೆಂದರೆ, “ಎಫ್ರಾಯೀಮ್ಯರನ್ನು ಮನಸ್ಸೆಯವರ ಮಧ್ಯದಲ್ಲಿದ್ದ ಗಿಲ್ಯಾದ್ಯರಾದ ನೀವು ಸ್ವಕುಲವನ್ನು ಬಿಟ್ಟು ತಪ್ಪಿಸಿಕೊಂಡವರಾಗಿದ್ದೀರಿ,” ಎಂದು ಎಫ್ರಾಯೀಮ್ಯರು ಹೇಳಿದ್ದರಿಂದ ಗಿಲ್ಯಾದ್ಯರು ಎಫ್ರಾಯೀಮ್ಯರನ್ನು ಹೊಡೆದರು. 5 ಗಿಲ್ಯಾದ್ಯರು ಎಫ್ರಾಯೀಮ್ಯರಿಗೆ ಮುಂದುಗಡೆ ಯೊರ್ದನ್ ನದಿ ರೇವುಗಳನ್ನು ಹಿಡಿದರು. ಆಗ ಏನಾಯಿತೆಂದರೆ, ಎಫ್ರಾಯೀಮ್ಯರಲ್ಲಿ ತಪ್ಪಿಸಿಕೊಂಡ ಯಾವನಾದರೂ ಬಂದು, “ದಾಟುತ್ತೇನೆ,” ಎಂದು ಹೇಳಿದರೆ, ಗಿಲ್ಯಾದ್ಯರು, “ನೀನು ಎಫ್ರಾಯೀಮ್ಯನೋ?” ಎಂದು ಅವನನ್ನು ಕೇಳುತ್ತಿದ್ದರು. ಅವನು, “ಇಲ್ಲ,” ಎಂದರೆ, ಅವನಿಗೆ, “ನೀನು ಷಿಬ್ಬೋಲೆತ್ ಅನ್ನು,” ಎಂದು ಹೇಳುತ್ತಿದ್ದರು. 6 ಆಗ ಅವನು ಹಾಗೆ ಹೇಳಲಾರದೆ, “ಸಿಬ್ಬೋಲೆತ್,” ಎಂದು ಉಚ್ಛರಿಸುವವನನ್ನು ಹಿಡಿದು ಯೊರ್ದನ್ ನದಿ ರೇವುಗಳ ಬಳಿಯಲ್ಲಿ ಕೊಂದುಹಾಕುತ್ತಿದ್ದರು. ಹೀಗೆ ಆ ಕಾಲದಲ್ಲಿ ಎಫ್ರಾಯೀಮ್ಯರೊಳಗೆ ನಾಲ್ವತ್ತೆರಡು ಸಾವಿರ ಜನರು ನಾಶವಾದರು. 7 8 ಯೆಫ್ತಾಹನು ಇಸ್ರಾಯೇಲರಿಗೆ ಆರು ವರ್ಷ ನ್ಯಾಯತೀರಿಸಿದನು. ಅನಂತರ ಗಿಲ್ಯಾದ್ಯನಾದ ಯೆಫ್ತಾಹನು ಮರಣಹೊಂದಿದನು. ಅವನ ಶವವನ್ನು ಗಿಲ್ಯಾದ್ ಪಟ್ಟಣಗಳ ಒಂದರಲ್ಲಿ ಸಮಾಧಿಮಾಡಿದರು. ಇಬ್ಚಾನನು, ಏಲೋನನು ಹಾಗೂ ಅಬ್ದೋನನು ಅವನ ತರುವಾಯ ಬೇತ್ಲೆಹೇಮಿನವನಾದ ಇಬ್ಚಾನನು ಇಸ್ರಾಯೇಲಿಗೆ ನ್ಯಾಯತೀರಿಸಿದನು. 9 ಅವನಿಗೆ ಮೂವತ್ತು ಮಂದಿ ಪುತ್ರರು, ಮೂವತ್ತು ಮಂದಿ ಪುತ್ರಿಯರು ಇದ್ದರು. ಪುತ್ರಿಯರನ್ನು ಹೊರಗೆ ಮದುವೆ ಮಾಡಿಕೊಟ್ಟನು; ಹೊರಗಿನಿಂದ ಮೂವತ್ತು ಮಂದಿ ಕನ್ಯೆಯರನ್ನು ತನ್ನ ಪುತ್ರರಿಗೆ ತೆಗೆದುಕೊಂಡನು. ಅವನು ಇಸ್ರಾಯೇಲಿಗೆ ಏಳು ವರ್ಷ ನ್ಯಾಯತೀರಿಸಿದನು. 10 ನಂತರ ಇಬ್ಚಾನನು ಮರಣಹೊಂದಿ ಬೇತ್ಲೆಹೇಮಿನಲ್ಲಿ ಸಮಾಧಿಯಾದನು. 11 ಅವನ ತರುವಾಯ ಜೆಬುಲೂನಿನವನಾದ ಏಲೋನನು ಇಸ್ರಾಯೇಲರಿಗೆ ನ್ಯಾಯತೀರಿಸಿದನು. ಅವನು ಹತ್ತು ವರ್ಷಗಳು ಇಸ್ರಾಯೇಲಿಗೆ ನ್ಯಾಯತೀರಿಸಿದನು. 12 ಜೆಬುಲೂನಿನವನಾದ ಏಲೋನನು ಮರಣಹೊಂದಿ, ಜೆಬುಲೂನ್ ದೇಶವಾದ ಅಯ್ಯಾಲೋನಿನಲ್ಲಿ ಅವನ ಶವವನ್ನು ಸಮಾಧಿಮಾಡಿದರು. 13 ಅವನ ತರುವಾಯ ಪಿರಾತೋನ್ಯನಾದ ಹಿಲ್ಲೇಲನ ಮಗನಾದ ಅಬ್ದೋನನು ಇಸ್ರಾಯೇಲಿಗೆ ನ್ಯಾಯತೀರಿಸಿದನು. 14 ಅವನಿಗೆ ಎಪ್ಪತ್ತು ಕತ್ತೆಗಳ ಮೇಲೆ ಏರುವ ನಾಲ್ವತ್ತು ಮಂದಿ ಮಕ್ಕಳೂ, ಮೂವತ್ತು ಮಂದಿ ಮೊಮ್ಮಕ್ಕಳೂ ಇದ್ದರು. ಅವನು ಇಸ್ರಾಯೇಲಿಗೆ ಎಂಟು ವರ್ಷ ನ್ಯಾಯತೀರಿಸಿದನು. 15 ಪಿರಾತೋನ್ಯನಾದ ಹಿಲ್ಲೇಲನ ಮಗನಾದ ಅಬ್ದೋನನು ಮರಣಹೊಂದಿ, ಎಫ್ರಾಯೀಮ್ ದೇಶದಲ್ಲಿ ಅಮಾಲೇಕ್ಯರ ಬೆಟ್ಟದಲ್ಲಿರುವ ಪಿರಾತೋನಿನಲ್ಲಿ ಅವನ ಶವವನ್ನು ಸಮಾಧಿಮಾಡಿದರು.
ಒಟ್ಟು 21 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 12 / 21
1 2 3
4 5 6 7 8 9 10 11 12 13 14 15 16 17 18 19 20
21
×

Alert

×

Kannada Letters Keypad References