ಪವಿತ್ರ ಬೈಬಲ್

ಓಪನ್ ಸಮಕಾಲೀನ ಆವೃತ್ತಿ (OCV)
ನ್ಯಾಯಸ್ಥಾಪಕರು
1. {#1ತೋಲ } [PS]ಅಬೀಮೆಲೆಕನ ತರುವಾಯ ಇಸ್ಸಾಕಾರನ ಕುಲದ ದೋದೋವಿನ ಮಗನಾದ ಪೂವನ ಮಗನಾದ ತೋಲನು ಇಸ್ರಾಯೇಲರನ್ನು ರಕ್ಷಿಸುವುದಕ್ಕೆ ಎದ್ದನು. ಅವನು ಎಫ್ರಾಯೀಮ್ ಬೆಟ್ಟದ ಸೀಮೆಯ ಶಾಮೀರೆಂಬ ಊರಲ್ಲಿ ವಾಸಮಾಡಿದನು.
2. ಇಸ್ರಾಯೇಲಿಗೆ ಇಪ್ಪತ್ಮೂರು ವರುಷ ನ್ಯಾಯ ತೀರಿಸಿದ ತರುವಾಯ, ಅವನು ಮರಣಹೊಂದಿ ಶಾಮೀರಲ್ಲಿ ಸಮಾಧಿಯಾದನು. [PE]
3. {#1ಯಾಯೀರ್ } [PS]ಅವನ ತರುವಾಯ ಗಿಲ್ಯಾದ್ಯನಾದ ಯಾಯೀರನು ಎದ್ದು ಇಸ್ರಾಯೇಲರನ್ನು ಇಪ್ಪತ್ತೆರಡು ವರುಷ ನ್ಯಾಯತೀರಿಸಿದನು.
4. ಅವನಿಗೆ ಮೂವತ್ತು ಕತ್ತೆಗಳ ಮೇಲೆ ಸವಾರಿ ಮಾಡುವ ಮೂವತ್ತು ಮಂದಿ ಪುತ್ರರು ಇದ್ದರು. ಗಿಲ್ಯಾದ್ ದೇಶದಲ್ಲಿ ಮೂವತ್ತು ಪಟ್ಟಣಗಳು ಅವರ ಅಧಿಕಾರದಲ್ಲಿದ್ದವು. ಅವುಗಳಿಗೆ ಈ ದಿನದವರೆಗೂ ಹವೋತ್ ಯಾಯೀರ್ ಎಂಬ ಹೆಸರಿದೆ.
5. ಯಾಯೀರನು ಮರಣಹೊಂದಿ, ಕಾಮೋನಿನಲ್ಲಿ ಸಮಾಧಿಯಾದನು. [PE]
6. {#1ಯೆಫ್ತಾಹ } [PS]ಇಸ್ರಾಯೇಲರು ಪುನಃ ಯೆಹೋವ ದೇವರ ಮುಂದೆ ಕೆಟ್ಟತನವನ್ನು ಮಾಡಿ, ಬಾಳನನ್ನೂ, ಅಷ್ಟೋರೆತನ್ನೂ, ಅರಾಮ್ ದೇಶದ ದೇವರುಗಳನ್ನೂ, ಸೀದೋನಿನ ದೇವರುಗಳನ್ನೂ, ಮೋವಾಬಿನ ದೇವರುಗಳನ್ನೂ, ಅಮ್ಮೋನಿಯರ ದೇವರುಗಳನ್ನೂ ಫಿಲಿಷ್ಟಿಯರ ದೇವರುಗಳನ್ನೂ ಸೇವಿಸಿದರು.
7. ಅವರು ಯೆಹೋವ ದೇವರನ್ನು ಬಿಟ್ಟುಬಿಟ್ಟದ್ದರಿಂದ, ಯೆಹೋವ ದೇವರು ಇಸ್ರಾಯೇಲ್ಯರ ಮೇಲೆ ಕೋಪವುಳ್ಳವರಾಗಿ ಅವರನ್ನು ಫಿಲಿಷ್ಟಿಯರ ಮತ್ತು ಅಮ್ಮೋನಿಯರ ಕೈಗೆ ಮಾರಿಬಿಟ್ಟರು.
8. ಇವರು ಆ ವರ್ಷ ಮೊದಲುಗೊಂಡು ಹದಿನೆಂಟು ವರ್ಷ ಯೊರ್ದನಿಗೆ ಆಚೆ ಗಿಲ್ಯಾದಿನಲ್ಲಿ ಅಮೋರಿಯರ ದೇಶದಲ್ಲಿರುವ ಇಸ್ರಾಯೇಲರನ್ನೆಲ್ಲಾ ಬಾಧಿಸಿ ಕುಂದಿಸಿದರು.
9. ಇದಲ್ಲದೆ ಅಮ್ಮೋನನ ಮಕ್ಕಳು ಯೆಹೂದ ಹಾಗೂ ಬೆನ್ಯಾಮೀನರಿಗೆ ವಿರೋಧವಾಗಿಯೂ, ಎಫ್ರಾಯೀಮರ ಮನೆಗೆ ವಿರೋಧವಾಗಿಯೂ ಯುದ್ಧಮಾಡುವುದಕ್ಕೆ ಯೊರ್ದನನ್ನು ದಾಟಿ ಬಂದರು. ಹೀಗೆ ಇಸ್ರಾಯೇಲಿಗೆ ಬಹು ಸಂಕಟವಾಯಿತು.
10. ಆಗ ಇಸ್ರಾಯೇಲರು ಯೆಹೋವ ದೇವರಿಗೆ ಕೂಗಿ, “ನಮ್ಮ ದೇವರನ್ನು ಬಿಟ್ಟು, ಬಾಳನನ್ನು ಸೇವಿಸಿದ್ದರಿಂದ, ನಾವು ನಿಮಗೆ ವಿರೋಧವಾಗಿ ಪಾಪಮಾಡಿದೆವು,” ಎಂದರು. [PE]
11. [PS]ಯೆಹೋವ ದೇವರು ಇಸ್ರಾಯೇಲರಿಗೆ, “ನಾನು ನಿಮ್ಮನ್ನು ಈಜಿಪ್ಟ್, ಅಮೋರಿಯ, ಅಮ್ಮೋನಿಯ, ಫಿಲಿಷ್ಟಿಯ,
12. ಸೀದೋನ್ಯ, ಅಮಾಲೇಕ್ಯ, ಮಾವೋನ್ಯ ಈ ಜನಾಂಗಗಳು ನಿಮ್ಮನ್ನು ಪೀಡಿಸಿದಾಗ ನೀವು ನನಗೆ ಮೊರೆಯಿಟ್ಟಿರಿ; ನಾನು ಅವುಗಳಿಂದ ನಿಮ್ಮನ್ನು ತಪ್ಪಿಸಿಬಿಡಲಿಲ್ಲವೋ?
13. ಆದರೂ ನೀವು ನನ್ನನ್ನು ಬಿಟ್ಟು ಅನ್ಯದೇವರುಗಳನ್ನು ಸೇವಿಸುತ್ತಾ ಬಂದಿರಿ; ಆದ್ದರಿಂದ ಇನ್ನು ನಾನು ನಿಮ್ಮನ್ನು ರಕ್ಷಿಸುವುದಿಲ್ಲ.
14. ನೀವು ಹೋಗಿ ನಿಮಗೆ ನೀವೇ ಆಯ್ದುಕೊಂಡ ದೇವರುಗಳಿಗೆ ಕೂಗಿರಿ, ಅವರು ನಿಮ್ಮ ಸಂಕಟದ ಕಾಲದಲ್ಲಿ ನಿಮ್ಮನ್ನು ರಕ್ಷಿಸಲಿ,” ಎಂದರು. [PE]
15. [PS]ಇಸ್ರಾಯೇಲರು ಯೆಹೋವ ದೇವರಿಗೆ, “ನಾವು ಪಾಪಮಾಡಿದೆವು. ನೀವು ನಿಮಗೆ ಒಳ್ಳೆಯದಾಗಿ ತೋರುವುದನ್ನೆಲ್ಲಾ ನಮಗೆ ಮಾಡಿರಿ. ಆದರೆ ಈ ಹೊತ್ತು ನಮ್ಮನ್ನು ರಕ್ಷಿಸಿರಿ,” ಎಂದು ಬೇಡಿಕೊಂಡರು.
16. ಅವರು ಅನ್ಯದೇವರುಗಳನ್ನು ತಮ್ಮ ಮಧ್ಯದಲ್ಲಿಂದ ತೊರೆದುಬಿಟ್ಟು, ಯೆಹೋವ ದೇವರನ್ನು ಸೇವಿಸಿದರು. ಆಗ ಯೆಹೋವ ದೇವರು ಇಸ್ರಾಯೇಲಿನ ಕಷ್ಟಕ್ಕೋಸ್ಕರ ಮನಸ್ಸಿನಲ್ಲಿ ಬಹಳ ನೊಂದುಕೊಂಡರು. [PE]
17. [PS]ಅಮ್ಮೋನಿಯರು ಏಕವಾಗಿ ಕೂಡಿಕೊಂಡು, ಗಿಲ್ಯಾದಿನಲ್ಲಿ ಪಾಳೆಯಮಾಡಿಕೊಂಡರು. ಆದರೆ ಇಸ್ರಾಯೇಲರು ಏಕವಾಗಿ ಕೂಡಿ, ಮಿಚ್ಪೆಯಲ್ಲಿ ಪಾಳೆಯಮಾಡಿಕೊಂಡರು.
18. ಆಗ ಗಿಲ್ಯಾದಿನ ಜನರೂ, ಪ್ರಧಾನರೂ ಒಬ್ಬರಿಗೊಬ್ಬರು, “ಯಾವನು ಅಮ್ಮೋನಿಯರ ಮೇಲೆ ಯುದ್ಧಮಾಡಲಾರಂಭಿಸುವನೋ, ಅವನು ಗಿಲ್ಯಾದಿನ ನಿವಾಸಿಗಳಿಗೆಲ್ಲಾ ತಲೆಯಾಗಿರುವನು,” ಎಂದು ಮಾತನಾಡಿಕೊಂಡರು. [PE]
ಒಟ್ಟು 21 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 10 / 21
1
2 3 4 5 6 7 8 9 10 11 12 13 14 15 16 17 18
19 20 21
ತೋಲ 1 ಅಬೀಮೆಲೆಕನ ತರುವಾಯ ಇಸ್ಸಾಕಾರನ ಕುಲದ ದೋದೋವಿನ ಮಗನಾದ ಪೂವನ ಮಗನಾದ ತೋಲನು ಇಸ್ರಾಯೇಲರನ್ನು ರಕ್ಷಿಸುವುದಕ್ಕೆ ಎದ್ದನು. ಅವನು ಎಫ್ರಾಯೀಮ್ ಬೆಟ್ಟದ ಸೀಮೆಯ ಶಾಮೀರೆಂಬ ಊರಲ್ಲಿ ವಾಸಮಾಡಿದನು. 2 ಇಸ್ರಾಯೇಲಿಗೆ ಇಪ್ಪತ್ಮೂರು ವರುಷ ನ್ಯಾಯ ತೀರಿಸಿದ ತರುವಾಯ, ಅವನು ಮರಣಹೊಂದಿ ಶಾಮೀರಲ್ಲಿ ಸಮಾಧಿಯಾದನು. ಯಾಯೀರ್ 3 ಅವನ ತರುವಾಯ ಗಿಲ್ಯಾದ್ಯನಾದ ಯಾಯೀರನು ಎದ್ದು ಇಸ್ರಾಯೇಲರನ್ನು ಇಪ್ಪತ್ತೆರಡು ವರುಷ ನ್ಯಾಯತೀರಿಸಿದನು. 4 ಅವನಿಗೆ ಮೂವತ್ತು ಕತ್ತೆಗಳ ಮೇಲೆ ಸವಾರಿ ಮಾಡುವ ಮೂವತ್ತು ಮಂದಿ ಪುತ್ರರು ಇದ್ದರು. ಗಿಲ್ಯಾದ್ ದೇಶದಲ್ಲಿ ಮೂವತ್ತು ಪಟ್ಟಣಗಳು ಅವರ ಅಧಿಕಾರದಲ್ಲಿದ್ದವು. ಅವುಗಳಿಗೆ ಈ ದಿನದವರೆಗೂ ಹವೋತ್ ಯಾಯೀರ್ ಎಂಬ ಹೆಸರಿದೆ. 5 ಯಾಯೀರನು ಮರಣಹೊಂದಿ, ಕಾಮೋನಿನಲ್ಲಿ ಸಮಾಧಿಯಾದನು. ಯೆಫ್ತಾಹ 6 ಇಸ್ರಾಯೇಲರು ಪುನಃ ಯೆಹೋವ ದೇವರ ಮುಂದೆ ಕೆಟ್ಟತನವನ್ನು ಮಾಡಿ, ಬಾಳನನ್ನೂ, ಅಷ್ಟೋರೆತನ್ನೂ, ಅರಾಮ್ ದೇಶದ ದೇವರುಗಳನ್ನೂ, ಸೀದೋನಿನ ದೇವರುಗಳನ್ನೂ, ಮೋವಾಬಿನ ದೇವರುಗಳನ್ನೂ, ಅಮ್ಮೋನಿಯರ ದೇವರುಗಳನ್ನೂ ಫಿಲಿಷ್ಟಿಯರ ದೇವರುಗಳನ್ನೂ ಸೇವಿಸಿದರು. 7 ಅವರು ಯೆಹೋವ ದೇವರನ್ನು ಬಿಟ್ಟುಬಿಟ್ಟದ್ದರಿಂದ, ಯೆಹೋವ ದೇವರು ಇಸ್ರಾಯೇಲ್ಯರ ಮೇಲೆ ಕೋಪವುಳ್ಳವರಾಗಿ ಅವರನ್ನು ಫಿಲಿಷ್ಟಿಯರ ಮತ್ತು ಅಮ್ಮೋನಿಯರ ಕೈಗೆ ಮಾರಿಬಿಟ್ಟರು. 8 ಇವರು ಆ ವರ್ಷ ಮೊದಲುಗೊಂಡು ಹದಿನೆಂಟು ವರ್ಷ ಯೊರ್ದನಿಗೆ ಆಚೆ ಗಿಲ್ಯಾದಿನಲ್ಲಿ ಅಮೋರಿಯರ ದೇಶದಲ್ಲಿರುವ ಇಸ್ರಾಯೇಲರನ್ನೆಲ್ಲಾ ಬಾಧಿಸಿ ಕುಂದಿಸಿದರು. 9 ಇದಲ್ಲದೆ ಅಮ್ಮೋನನ ಮಕ್ಕಳು ಯೆಹೂದ ಹಾಗೂ ಬೆನ್ಯಾಮೀನರಿಗೆ ವಿರೋಧವಾಗಿಯೂ, ಎಫ್ರಾಯೀಮರ ಮನೆಗೆ ವಿರೋಧವಾಗಿಯೂ ಯುದ್ಧಮಾಡುವುದಕ್ಕೆ ಯೊರ್ದನನ್ನು ದಾಟಿ ಬಂದರು. ಹೀಗೆ ಇಸ್ರಾಯೇಲಿಗೆ ಬಹು ಸಂಕಟವಾಯಿತು. 10 ಆಗ ಇಸ್ರಾಯೇಲರು ಯೆಹೋವ ದೇವರಿಗೆ ಕೂಗಿ, “ನಮ್ಮ ದೇವರನ್ನು ಬಿಟ್ಟು, ಬಾಳನನ್ನು ಸೇವಿಸಿದ್ದರಿಂದ, ನಾವು ನಿಮಗೆ ವಿರೋಧವಾಗಿ ಪಾಪಮಾಡಿದೆವು,” ಎಂದರು. 11 ಯೆಹೋವ ದೇವರು ಇಸ್ರಾಯೇಲರಿಗೆ, “ನಾನು ನಿಮ್ಮನ್ನು ಈಜಿಪ್ಟ್, ಅಮೋರಿಯ, ಅಮ್ಮೋನಿಯ, ಫಿಲಿಷ್ಟಿಯ, 12 ಸೀದೋನ್ಯ, ಅಮಾಲೇಕ್ಯ, ಮಾವೋನ್ಯ ಈ ಜನಾಂಗಗಳು ನಿಮ್ಮನ್ನು ಪೀಡಿಸಿದಾಗ ನೀವು ನನಗೆ ಮೊರೆಯಿಟ್ಟಿರಿ; ನಾನು ಅವುಗಳಿಂದ ನಿಮ್ಮನ್ನು ತಪ್ಪಿಸಿಬಿಡಲಿಲ್ಲವೋ? 13 ಆದರೂ ನೀವು ನನ್ನನ್ನು ಬಿಟ್ಟು ಅನ್ಯದೇವರುಗಳನ್ನು ಸೇವಿಸುತ್ತಾ ಬಂದಿರಿ; ಆದ್ದರಿಂದ ಇನ್ನು ನಾನು ನಿಮ್ಮನ್ನು ರಕ್ಷಿಸುವುದಿಲ್ಲ. 14 ನೀವು ಹೋಗಿ ನಿಮಗೆ ನೀವೇ ಆಯ್ದುಕೊಂಡ ದೇವರುಗಳಿಗೆ ಕೂಗಿರಿ, ಅವರು ನಿಮ್ಮ ಸಂಕಟದ ಕಾಲದಲ್ಲಿ ನಿಮ್ಮನ್ನು ರಕ್ಷಿಸಲಿ,” ಎಂದರು. 15 ಇಸ್ರಾಯೇಲರು ಯೆಹೋವ ದೇವರಿಗೆ, “ನಾವು ಪಾಪಮಾಡಿದೆವು. ನೀವು ನಿಮಗೆ ಒಳ್ಳೆಯದಾಗಿ ತೋರುವುದನ್ನೆಲ್ಲಾ ನಮಗೆ ಮಾಡಿರಿ. ಆದರೆ ಈ ಹೊತ್ತು ನಮ್ಮನ್ನು ರಕ್ಷಿಸಿರಿ,” ಎಂದು ಬೇಡಿಕೊಂಡರು. 16 ಅವರು ಅನ್ಯದೇವರುಗಳನ್ನು ತಮ್ಮ ಮಧ್ಯದಲ್ಲಿಂದ ತೊರೆದುಬಿಟ್ಟು, ಯೆಹೋವ ದೇವರನ್ನು ಸೇವಿಸಿದರು. ಆಗ ಯೆಹೋವ ದೇವರು ಇಸ್ರಾಯೇಲಿನ ಕಷ್ಟಕ್ಕೋಸ್ಕರ ಮನಸ್ಸಿನಲ್ಲಿ ಬಹಳ ನೊಂದುಕೊಂಡರು. 17 ಅಮ್ಮೋನಿಯರು ಏಕವಾಗಿ ಕೂಡಿಕೊಂಡು, ಗಿಲ್ಯಾದಿನಲ್ಲಿ ಪಾಳೆಯಮಾಡಿಕೊಂಡರು. ಆದರೆ ಇಸ್ರಾಯೇಲರು ಏಕವಾಗಿ ಕೂಡಿ, ಮಿಚ್ಪೆಯಲ್ಲಿ ಪಾಳೆಯಮಾಡಿಕೊಂಡರು. 18 ಆಗ ಗಿಲ್ಯಾದಿನ ಜನರೂ, ಪ್ರಧಾನರೂ ಒಬ್ಬರಿಗೊಬ್ಬರು, “ಯಾವನು ಅಮ್ಮೋನಿಯರ ಮೇಲೆ ಯುದ್ಧಮಾಡಲಾರಂಭಿಸುವನೋ, ಅವನು ಗಿಲ್ಯಾದಿನ ನಿವಾಸಿಗಳಿಗೆಲ್ಲಾ ತಲೆಯಾಗಿರುವನು,” ಎಂದು ಮಾತನಾಡಿಕೊಂಡರು.
ಒಟ್ಟು 21 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 10 / 21
1
2 3 4 5 6 7 8 9 10 11 12 13 14 15 16 17 18
19 20 21
×

Alert

×

Kannada Letters Keypad References