1. {#1ಮಿಡತೆಗಳ ಒಂದು ಸೈನ್ಯ } [QS]ನೀವು ಚೀಯೋನಿನಲ್ಲಿ ಕೊಂಬು ಊದಿರಿ. [QE][QS2]ನನ್ನ ಪರಿಶುದ್ಧ ಪರ್ವತದಲ್ಲಿ ಆರ್ಭಟಿಸಿರಿ. [QE][PBR] [QS]ದೇಶದ ನಿವಾಸಿಗಳೆಲ್ಲರು ನಡುಗಲಿ. [QE][QS2]ಏಕೆಂದರೆ ಯೆಹೋವ ದೇವರ ದಿವಸವು ಬರುತ್ತದೆ. [QE][QS]ಅದು ಸಮೀಪವಾಗಿದೆ. [QE]
2. [QS2]ಅದು ಕತ್ತಲೆಯೂ ಮಬ್ಬೂ ಉಳ್ಳ ದಿವಸವೂ, [QE][QS2]ಮೇಘವೂ ಕಾರ್ಗತ್ತಲು ಉಳ್ಳ ದಿವಸವೂ ಆಗಿದೆ. [QE][QS]ಬೆಟ್ಟಗಳ ಮೇಲೆ ಹರಡುವ ಉದಯದ ಹಾಗೆ [QE][QS2]ದೊಡ್ಡ ಬಲವಾದ ಸ್ಯೆನ್ಯವು ಬರುತ್ತದೆ. [QE][QS]ಅದು ಪ್ರಾಚೀನ ಕಾಲದಲ್ಲಿ ಮತ್ತು [QE][QS2]ಮುಂದಿನ ಯುಗಗಳಲ್ಲಿ ಎಂದಿಗೂ ಇರುವುದಿಲ್ಲ. [QE][PBR]
3. [QS]ಅವುಗಳ ಮುಂದೆ ಬೆಂಕಿ ದಹಿಸುತ್ತದೆ. [QE][QS2]ಅವುಗಳ ಹಿಂದೆ ಜ್ವಾಲೆ ಧಗಧಗಿಸುತ್ತದೆ. [QE][QS]ಅವುಗಳ ಮುಂದೆ ದೇಶವು ಏದೆನ್ ತೋಟದ ಹಾಗಿದೆ. [QE][QS2]ಅವುಗಳ ಹಿಂದೆ ಕಾಡು ಹಾಳಾಗಿದೆ. [QE][QS2]ಯಾವುದೂ ಅವುಗಳಿಂದ ತಪ್ಪಿಸಿಕೊಳ್ಳುವುದಿಲ್ಲ. [QE]
4. [QS]ಅವುಗಳ ಆಕಾರವು ಕುದುರೆಗಳ ಆಕಾರದ ಹಾಗಿದೆ. [QE][QS2]ಸವಾರರ ಹಾಗೆಯೇ ಓಡುತ್ತವೆ. [QE]
5. [QS]ರಥಗಳ ಶಬ್ದದಂತೆ ಅವು ಪರ್ವತಗಳ ತುದಿಗಳಲ್ಲಿ ಹಾರುತ್ತವೆ. [QE][QS2]ಸಿಡಿಯುವ ಬೆಂಕಿಯು ದಹಿಸುವ ಕೋಲಿನಂತೆ, [QE][QS]ಯುದ್ಧಕ್ಕೆ ಸಿದ್ಧವಾದ ಬಲವುಳ್ಳ ಸೈನ್ಯದ ಹಾಗೆಯೂ ಇವೆ. [QE][PBR]
6. [QS]ಅವುಗಳ ಮುಂದೆ ಜನಾಂಗಗಳು ಬಹಳವಾಗಿ ನೊಂದುಕೊಳ್ಳುತ್ತವೆ. [QE][QS2]ಎಲ್ಲಾ ಮುಖಗಳು ಕಳೆಗುಂದುತ್ತವೆ. [QE]
7. [QS]ಶೂರರ ಹಾಗೆ ಓಡುತ್ತವೆ. [QE][QS2]ಯುದ್ಧಶಾಲಿಗಳ ಹಾಗೆ ಗೋಡೆ ಏರುತ್ತವೆ. [QE][QS]ಅವೆಲ್ಲಾ ಸಾಲಾಗಿ ಮುನ್ನಡೆಯುತ್ತವೆ. [QE][QS2]ತಮ್ಮ ಹಾದಿಗಳನ್ನು ಬದಲು ಮಾಡುವುದಿಲ್ಲ. [QE]
8. [QS]ಒಂದು ಇನ್ನೊಂದನ್ನು ನೂಕುವುದಿಲ್ಲ. [QE][QS2]ಅವುಗಳಲ್ಲಿ ಪ್ರತಿಯೊಂದು [QE][QS]ತನ್ನ ತನ್ನ ದಾರಿಯಲ್ಲಿ ಮುನ್ನಡೆಯುತ್ತವೆ. [QE][QS2]ತಮ್ಮ ಸ್ಥಾನಗಳನ್ನು ಬಿಟ್ಟುಕೊಡದೆ ಯುದ್ಧ ಮಾಡುತ್ತವೆ. [QE]
9. [QS]ಪಟ್ಟಣದಲ್ಲಿ ಅತ್ತಿತ್ತ ತಿರುಗಾಡುತ್ತವೆ. [QE][QS2]ಗೋಡೆಯ ಮೇಲೆ ಓಡುತ್ತವೆ. [QE][QS]ಅವು ಮನೆಗಳನ್ನು ಹತ್ತಿ, [QE][QS2]ಕಳ್ಳನ ಹಾಗೆ ಕಿಟಿಕಿಗಳಿಂದ ಪ್ರವೇಶಿಸುತ್ತವೆ. [QE][PBR]
10. [QS]ಅವುಗಳ ಮುಂದೆ ಭೂಮಿಯು ನಡುಗುತ್ತದೆ. [QE][QS2]ಆಕಾಶಗಳು ಅದರುತ್ತವೆ. [QE][QS]ಸೂರ್ಯ ಚಂದ್ರರು ಕಪ್ಪಾಗುತ್ತವೆ. [QE][QS2]ನಕ್ಷತ್ರಗಳು ಇನ್ನು ಮುಂದೆ ಹೊಳೆಯುವುದಿಲ್ಲ. [QE]
11. [QS]ಯೆಹೋವ ದೇವರು ತಮ್ಮ ಸೈನ್ಯಕ್ಕೆ [QE][QS2]ಗುಡುಗಿನಂತೆ ಆಜ್ಞಾಪಿಸುತ್ತಾರೆ. [QE][QS]ಅವರ ಸೈನ್ಯ ಬಹು ದೊಡ್ಡದಾಗಿದೆ. [QE][QS2]ಅವರ ಆಜ್ಞೆಯನ್ನು ಪಾಲಿಸುವವನು ಪರಾಕ್ರಮಿಯು. [QE][QS]ಯೆಹೋವ ದೇವರ ದಿವಸವು ದೊಡ್ಡದು, [QE][QS2]ಮಹಾ ಭಯಂಕರವಾದದ್ದು. [QE][QS2]ಅದನ್ನು ಸಹಿಸಿಕೊಳ್ಳುವವರು ಯಾರು? [QE]
12. {#1ನಿಮ್ಮ ಹೃದಯಗಳನ್ನು ಹರಿದುಕೊಳ್ಳಿರಿ } [QS]ಯೆಹೋವ ದೇವರು ಹೀಗೆ ಘೋಷಿಸುತ್ತಾರೆ, “ಈಗಲಾದರೂ [QE][QS2]ಉಪವಾಸದಿಂದಲೂ ಅಳುವಿಕೆಯಿಂದಲೂ ಗೋಳಾಟದಿಂದಲೂ [QE][QS2]ನಿಮ್ಮ ಪೂರ್ಣಹೃದಯದಿಂದ ನನ್ನ ಕಡೆಗೆ ತಿರುಗಿಕೊಳ್ಳಿರಿ.” [QE][PBR]
13. [QS]ನಿಮ್ಮ ಬಟ್ಟೆಗಳನ್ನಲ್ಲ, [QE][QS2]ನಿಮ್ಮ ಹೃದಯಗಳನ್ನು ಹರಿದುಕೊಂಡು, [QE][QS]ನಿಮ್ಮ ದೇವರಾದ ಯೆಹೋವ ದೇವರ ಕಡೆಗೆ ತಿರುಗಿಕೊಳ್ಳಿರಿ. [QE][QS2]ಅವರು ದಯೆಯೂ ಕರುಣೆಯೂ, [QE][QS]ದೀರ್ಘಶಾಂತಿಯೂ ಮಹಾ ಪ್ರೀತಿಯೂ [QE][QS2]ಉಳ್ಳವರಾಗಿ ಮಾಡಬೇಕೆಂದಿರುವ ಕೇಡಿಗೆ ಮನಮರುಗುತ್ತಾರೆ. [QE]
14. [QS]ದೇವರು ಒಂದು ವೇಳೆ ತಮ್ಮ ಮನಸ್ಸನ್ನು ಬದಲಾಯಿಸಬಹುದು. [QE][QS2]ನಿಮ್ಮ ಕಡೆಗೆ ತಿರುಗಿಕೊಂಡು ನಿಮ್ಮನ್ನು ಆಶೀರ್ವದಿಸಬಹುದು. [QE][QS]ನಿಮ್ಮ ಯೆಹೋವ ದೇವರಿಗೆ ಅರ್ಪಿಸಲು ಬೇಕಾದ ಧಾನ್ಯ ಸಮರ್ಪಣೆ ಹಾಗು ಪಾನಾರ್ಪಣೆಯನ್ನು [QE][QS2]ನಿಮಗೆ ಧಾರಾಳವಾಗಿ ಉಳಿಸಬಹುದು, ಯಾರಿಗೆ ಗೊತ್ತು? [QE][PBR]
15. [QS]ಚೀಯೋನಿನಲ್ಲಿ ಕೊಂಬು ಊದಿರಿ; [QE][QS2]ಪವಿತ್ರ ಉಪವಾಸವನ್ನು ಸಾರಿರಿ; [QE][QS2]ಪವಿತ್ರ ಸಭೆಯನ್ನು ಕರೆಯಿರಿ. [QE]
16. [QS]ಜನರನ್ನು ಕೂಡಿಸಿರಿ; [QE][QS2]ಸಭೆಯನ್ನು ಪವಿತ್ರಗೊಳಿಸಿರಿ; [QE][QS]ಹಿರಿಯರನ್ನು ಒಟ್ಟುಗೂಡಿಸಿರಿ, [QE][QS2]ಮಕ್ಕಳನ್ನೂ ಹಸುಗೂಸುಗಳನ್ನೂ ಕೂಡಿಸಿರಿ; [QE][QS]ಮದುಮಗನು ತನ್ನ ಕೊಠಡಿಯೊಳಗಿಂದಲೂ [QE][QS2]ಮದುಮಗಳು ತನ್ನ ಕೊಠಡಿಯೊಳಗಿಂದಲೂ ಹೊರಡಲಿ. [QE]
17. [QS]ಯೆಹೋವ ದೇವರ ಸಮ್ಮುಖ ಸೇವಕರಾದ ಯಾಜಕರು, [QE][QS2]ಅಂಗಳಕ್ಕೂ, ಬಲಿಪೀಠಕ್ಕೂ ನಡುವೆ ಅತ್ತು ಹೀಗೆ ಹೇಳಲಿ, [QE][QS]“ಯೆಹೋವ ದೇವರೇ, ನಿನ್ನ ಜನರನ್ನು ಕನಿಕರಿಸು, [QE][QS2]ಜನಾಂಗಗಳು ನಿಂದಿಸುವುದಕ್ಕೆ ನಿನ್ನ ಬಾಧ್ಯತೆಯನ್ನು [QE][QS2]ದೂಷಣೆಗೆ ಗುರಿಮಾಡಬೇಡಿರಿ. [QE][QS]‘ಅವರ ದೇವರು ಎಲ್ಲಿ?’ [QE][QS2]ಎಂದು ಅವರು ಏಕೆ ನಿಂದಿಸಬೇಕು?” [QE]
18. {#1ಯೆಹೋವ ದೇವರ ಉತ್ತರ } [QS]ಆಗ ಯೆಹೋವ ದೇವರು ತಮ್ಮ ದೇಶಕ್ಕೋಸ್ಕರ ಅಭಿಮಾನಗೊಂಡು, [QE][QS2]ತಮ್ಮ ಜನರನ್ನು ಕನಿಕರಿಸುವರು. [QE]
19. [PS]ಯೆಹೋವ ದೇವರು ತನ್ನ ಜನರಿಗೆ ಉತ್ತರಕೊಟ್ಟು, [PE][QS]ನಾನು ನಿಮಗೆ ಧಾನ್ಯವನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ [QE][QS2]ನಿಮಗೆ ಸಾಕಾಗುವಷ್ಟು ಕಳುಹಿಸಿ, [QE][QS]ನಿಮ್ಮನ್ನು ಇನ್ನು ಮೇಲೆ [QE][QS2]ಜನಾಂಗಗಳಲ್ಲಿ ನಿಂದಿತರಾಗಿ ಇಡುವುದಿಲ್ಲ. [QE][PBR]
20. [QS]“ಉತ್ತರ ದಿಕ್ಕಿನ ಸೈನ್ಯವನ್ನು ನಿಮ್ಮಿಂದ ದೂರಮಾಡಿ, [QE][QS2]ಅದನ್ನು ಹಾಳುಬಿದ್ದ ಬಂಜರು ಭೂಮಿಗೂ, [QE][QS]ಅದರ ಮುಂಭಾಗವನ್ನು ಪೂರ್ವದ ಉಪ್ಪು ಸಮುದ್ರಕ್ಕೂ [QE][QS2]ಅದರ ಹಿಂಭಾಗವನ್ನು ಪಶ್ಚಿಮದ ಮೆಡಿಟರೇನಿಯನ್ ಸಮುದ್ರಕ್ಕೂ ಓಡಿಸಿಬಿಡುವೆನು. [QE][QS]ಅದರ ದುರ್ವಾಸನೆಯು ಏರುವುದು. [QE][QS2]ಅದು ಗಬ್ಬು ನಾರುವುದು.” [QE][PBR] [QS]ಏಕೆಂದರೆ, ಆತನು ಮಹಾಕಾರ್ಯಗಳನ್ನು ಮಾಡಿದ್ದಾರೆ. [QE]
2. [QS2]ಯಹೂದ ದೇಶವೇ, ಭಯಪಡಬೇಡ; [QE][QS2]ಉಲ್ಲಾಸಿಸಿ, ಸಂತೋಷವಾಗಿರು. [QE][QS]ಏಕೆಂದರೆ, ಯೆಹೋವ ದೇವರು ಮಹತ್ತಾದವುಗಳನ್ನು ಮಾಡಿದ್ದಾರೆ. [QE]
2. [QS2]ಕಾಡುಮೃಗಗಳೇ, ಭಯಪಡಬೇಡಿರಿ. [QE][QS2]ಏಕೆಂದರೆ, ಅಡವಿಯ ಮೇವಿನ ಸ್ಥಳಗಳು ಮೊಳೆಯುತ್ತವೆ. [QE][QS]ಮರಗಳು ತಮ್ಮ ಫಲವನ್ನು ಫಲಿಸುತ್ತವೆ. [QE][QS2]ಅಂಜೂರದ ಗಿಡವೂ ದ್ರಾಕ್ಷಿ ಬಳ್ಳಿಯೂ ತಮ್ಮ ಫಲವನ್ನು ಕೊಡುತ್ತವೆ. [QE]
23. [QS]ಚೀಯೋನಿನ ಜನರೇ, [QE][QS2]ನಿಮ್ಮ ದೇವರಾದ ಯೆಹೋವ ದೇವರಲ್ಲಿ ಉಲ್ಲಾಸಿಸಿರಿ, ಸಂತೋಷವಾಗಿರಿ. [QE][QS]ಏಕೆಂದರೆ ನಿಮಗೆ ಮುಂಗಾರು ಮಳೆಯನ್ನು [QE][QS2]ಸಾಕಷ್ಟು ಕೊಡುವರು. [QE][QS]ಮುಂಗಾರು, ಹಿಂಗಾರು ಮಳೆಗಳನ್ನು ಮೊದಲಿನ ಹಾಗೆ [QE][QS2]ನಿಮಗೆ ಸುರಿಸುವರು. [QE]
24. [QS]ಕಣಗಳು ಧಾನ್ಯದಿಂದ ತುಂಬುವುವು. [QE][QS2]ತೊಟ್ಟಿಗಳು ದ್ರಾಕ್ಷಾರಸದಿಂದಲೂ ಎಣ್ಣೆಯಿಂದಲೂ ತುಂಬಿ ತುಳುಕುವುವು. [QE][PBR]
25. [QS]“ನಾನು ನಿಮ್ಮಲ್ಲಿ ಕಳುಹಿಸಿದಂಥ ನನ್ನ ದೊಡ್ಡ ಸೈನ್ಯವಾದ ಮಿಡತೆಗಳು, [QE][QS2]ಗುಂಪು ಮಿಡತೆಗಳು, ಕಂಬಳಿ ಮಿಡತೆಗಳು, [QE][QS2]ಚೂರಿ ಮಿಡತೆಗಳು ತಿಂದು ಬಿಟ್ಟ ವರ್ಷಗಳನ್ನು [QE][QS]ನಿಮಗೆ ಪುನಃಸ್ಥಾಪಿಸಿ ಕೊಡುವೆನು. [QE]
26. [QS]ಸಮೃದ್ಧಿಯಾಗಿ ಉಂಡು, ತೃಪ್ತಿಪಟ್ಟು, [QE][QS2]ನಿಮ್ಮನ್ನು ಅದ್ಭುತವಾಗಿ ನಡೆಸಿದ [QE][QS2]ನಿಮ್ಮ ದೇವರಾದ ಯೆಹೋವ ದೇವರ ಹೆಸರನ್ನು ಸ್ತುತಿಸುವಿರಿ. [QE][QS]ನನ್ನ ಜನರು ಎಂದೆಂದಿಗೂ ನಾಚಿಕೆಪಡರು. [QE]
27. [QS]ನಾನೇ ಇಸ್ರಾಯೇಲಿನ ಮಧ್ಯೆ ನೆಲೆಯಾಗಿ ಇರುವವನು. [QE][QS2]ನಾನೇ ನಿಮ್ಮ ಯೆಹೋವ ದೇವರು, [QE][QS2]ನಾನಲ್ಲದೆ ಬೇರೆ ದೇವರು ನಿಮಗಿಲ್ಲ. [QE][QS]ನನ್ನ ಜನರು ಎಂದಿಗೂ ನಾಚಿಕೆಪಡರು. [QE]
28. {#1ಯೆಹೋವ ದೇವರ ದಿನ } [QS]“ಆಮೇಲೆ ನಾನು, [QE][QS2]ನನ್ನ ಆತ್ಮನನ್ನು ಎಲ್ಲಾ ಮನುಷ್ಯರ ಮೇಲೆ ಸುರಿಸುವೆನು, [QE][QS]ನಿಮ್ಮ ಗಂಡು ಹೆಣ್ಣುಮಕ್ಕಳು ಪ್ರವಾದಿಸುವರು. [QE][QS2]ನಿಮ್ಮ ಹಿರಿಯರಿಗೆ ಕನಸುಗಳು ಬೀಳುವುವು. [QE][QS2]ನಿಮ್ಮ ಯುವಜನರಿಗೆ ದರ್ಶನಗಳಾಗುವವು. [QE]
29. [QS]ಆ ದಿನಗಳಲ್ಲಿ, ನನ್ನ ದಾಸ ದಾಸಿಯರ ಮೇಲೆ, [QE][QS2]ನನ್ನ ಆತ್ಮವನ್ನು ಸುರಿಸುವೆನು. [QE]
30. [QS]ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಅದ್ಭುತಗಳನ್ನು, [QE][QS2]ರಕ್ತ, ಬೆಂಕಿ, ಹಬೆಯನ್ನು ತೋರಿಸುವೆನು. [QE]
31. [QS]ಯೆಹೋವ ದೇವರ ಭಯಂಕರವಾದ ಮಹಾದಿನವು ಬರುವುದಕ್ಕಿಂತ ಮೊದಲು, [QE][QS2]ಸೂರ್ಯನು ಕತ್ತಲಾಗುವನು, [QE][QS2]ಚಂದ್ರನು ರಕ್ತವಾಗುವನು. [QE]
32. [QS]ಯೆಹೋವ ದೇವರ ಹೆಸರನ್ನು [QE][QS2]ಕರೆಯುವವರೆಲ್ಲರಿಗೆ ರಕ್ಷಣೆ ಆಗುವುದು. [QE][QS]ಏಕೆಂದರೆ ಚೀಯೋನ್ ಪರ್ವತದಲ್ಲಿಯೂ ಯೆರೂಸಲೇಮಿನಲ್ಲಿಯೂ [QE][QS2]ಅನೇಕರಿಗೆ ಮುಕ್ತಿ ದೊರಕುವುದು. [QE][QS]ಯೆಹೋವ ದೇವರು ಹೇಳಿದ ಪ್ರಕಾರ [QE][QS2]ಯೆಹೋವ ದೇವರ ಕರೆಹೊಂದಿ ಉಳಿದವರಲ್ಲಿಯೂ ಬಿಡುಗಡೆ ಇರುವುದು. [QE]