1. [PS]ಪೆತುಯೇಲನ ಮಗನಾದ ಯೋಯೇಲನಿಗೆ ಬಂದ ಯೆಹೋವ ದೇವರು ವಾಕ್ಯವು: [PE][PBR]
2. {#1ಮಿಡತೆಗಳಿಂದಾದ ಹಾನಿ } [QS]ಹಿರಿಯರೇ, ಇದನ್ನು ಕೇಳಿರಿ: [QE][QS2]ದೇಶದ ನಿವಾಸಿಗಳೇ, ಕಿವಿಗೊಡಿರಿ. [QE][QS]ಇಂಥ ದುರ್ಘಟನೆಯು ನಿಮ್ಮ ದಿವಸಗಳಲ್ಲಾದರೂ [QE][QS2]ನಿಮ್ಮ ಪೂರ್ವಿಕರ ದಿವಸಗಳಲ್ಲಾದರೂ ಉಂಟಾಯಿತೋ? [QE]
3. [QS]ಇದರ ವಿಷಯವನ್ನು ನಿಮ್ಮ ಮಕ್ಕಳಿಗೆ ತಿಳಿಸಿರಿ, [QE][QS2]ಅವರು ತಮ್ಮ ಮಕ್ಕಳಿಗೆ ತಿಳಿಸಲಿ, [QE][QS2]ಅವರ ಮಕ್ಕಳೂ ಮತ್ತೊಂದು ತಲಾಂತರಕ್ಕೂ ತಿಳಿಸಲಿ. [QE]
4. [QS]ಚೂರಿಮಿಡತೆ ತಿಂದು, ಉಳಿದಿದ್ದ ಬೆಳೆಯನ್ನು [QE][QS2]ಗುಂಪುಮಿಡತೆ ತಿಂದುಬಿಟ್ಟಿತು. [QE][QS]ಗುಂಪುಮಿಡತೆ ತಿಂದು ಬಿಟ್ಟಿದ್ದನ್ನು, [QE][QS2]ಕುದುರೆಮಿಡತೆ ತಿಂದುಬಿಟ್ಟಿತು. [QE][QS]ಕುದುರೆಮಿಡತೆ ಬಿಟ್ಟಿದ್ದನ್ನು [QE][QS2]ಕಂಬಳಿಮಿಡತೆ ತಿಂದುಬಿಟ್ಟಿತು. [QE][PBR]
5. [QS]ಅಮಲೇರಿದವರೇ, ಎಚ್ಚೆತ್ತು ಅಳಿರಿ; [QE][QS2]ದ್ರಾಕ್ಷಾರಸ ಕುಡಿಯುವವರೆಲ್ಲರೇ, [QE][QS]ಹೊಸ ದ್ರಾಕ್ಷಾರಸದ ನಿಮಿತ್ತ ಗೋಳಾಡಿರಿ; [QE][QS2]ಏಕೆಂದರೆ, ಅದು ನಿಮ್ಮ ಬಾಯಿಗೆ ಇನ್ನು ದೊರಕುವುದಿಲ್ಲ. [QE]
6. [QS]ನನ್ನ ದೇಶದ ಮೇಲೆ ಒಂದು ಜನಾಂಗವು ಏರಿ ಬಂತು. [QE][QS2]ಅದು ಬಲವಾದದ್ದೂ, ಲೆಕ್ಕವಿಲ್ಲದ್ದೂ; [QE][QS]ಅದರ ಕೋರೆಗಳು ಸಿಂಹದ ಹಲ್ಲುಗಳು, [QE][QS2]ಸಿಂಹಿಣಿಯ ಹಲ್ಲುಗಳು ಅದಕ್ಕೆ ಇವೆ. [QE]
7. [QS]ಅದು ನನ್ನ ದ್ರಾಕ್ಷಿಬಳ್ಳಿಯನ್ನು ಹಾಳು ಮಾಡಿ, [QE][QS2]ನನ್ನ ಅಂಜೂರದ ಗಿಡವನ್ನು ಮುರಿದು ಹಾಕಿದೆ. [QE][QS]ಅದನ್ನು ಸಂಪೂರ್ಣ ಸುಲಿದು ಬಿಸಾಡಿಬಿಟ್ಟಿದೆ. [QE][QS2]ಅದರ ಕೊಂಬೆಗಳು ಬಿಳುಪಾದವು. [QE][PBR]
8. [QS]ಯೌವನದ ಗಂಡನಿಗೋಸ್ಕರ ಗೋಣಿತಟ್ಟು ಧರಿಸಿ, [QE][QS2]ಕನ್ಯೆಯ ಹಾಗೆ ಪ್ರಲಾಪಿಸು. [QE]
9. [QS]ಧಾನ್ಯ ಸಮರ್ಪಣೆಯನ್ನಾಗಲಿ ಪಾನಾರ್ಪಣೆಯನ್ನಾಗಲಿ [QE][QS2]ಯೆಹೋವ ದೇವರ ಆಲಯದಲ್ಲಿ ಅರ್ಪಿಸುವುದಿಲ್ಲ. [QE][QS]ಯೆಹೋವ ದೇವರ ಸೇವಕರಾದ ಯಾಜಕರು ಗೋಳಾಡುತ್ತಾರೆ. [QE]
10. [QS]ಹೊಲವು ಹಾಳಾಗಿದೆ; [QE][QS2]ಭೂಮಿಯು ಒಣಗಿದೆ, [QE][QS]ಧಾನ್ಯವು ನಾಶವಾಗಿದೆ; [QE][QS2]ಹೊಸ ದ್ರಾಕ್ಷಾರಸವು ಒಣಗಿದೆ; [QE][QS2]ಎಣ್ಣೆ ತೀರಿಹೋಗಿದೆ. [QE][PBR]
11. [QS]ರೈತರೇ, ರೋದಿಸಿರಿ, [QE][QS2]ತೋಟಗಾರರೇ, ಪರಿತಪಿಸಿರಿ; [QE][QS]ಗೋಧಿ ಮತ್ತು ಜವೆಗೋಧಿಗಾಗಿ ದುಃಖಿಸಿ; [QE][QS2]ಏಕೆಂದರೆ ಹೊಲದ ಬೆಳೆ ನಾಶವಾಗಿದೆ. [QE]
12. [QS]ದ್ರಾಕ್ಷಾಲತೆ ಒಣಗಿದೆ; [QE][QS2]ಅಂಜೂರದ ಗಿಡ ಬಾಡಿ ಹೋಗಿದೆ; [QE][QS]ದಾಳಿಂಬೆ, ಖರ್ಜೂರ, ಸೇಬು ಮುಂತಾದ ಫಲವೃಕ್ಷಗಳು ಒಣಗಿ ಬೆಂಡಾಗಿವೆ. [QE][QS2]ನರಮಾನವರು ಸೊರಗಿ ಸಂತೋಷವಿಲ್ಲದೆ ಸಪ್ಪೆಯಾಗಿದ್ದಾರೆ. [QE]
13. {#1ಪ್ರಲಾಪಕ್ಕೆ ಕರೆ } [QS]ಯಾಜಕರೇ, ಗೋಣಿತಟ್ಟು ಕಟ್ಟಿಕೊಂಡು ಗೋಳಾಡಿರಿ. [QE][QS2]ಬಲಿಪೀಠದ ಸೇವಕರೇ, ಗೋಳಾಡಿರಿ. [QE][QS]ನನ್ನ ದೇವರ ಸೇವಕರೇ, [QE][QS2]ಬಂದು ಗೋಣಿತಟ್ಟಿನಲ್ಲಿ ರಾತ್ರಿಯೆಲ್ಲಾ ಕಳೆಯಿರಿ. [QE][QS]ಏಕೆಂದರೆ, ಧಾನ್ಯ ಸಮರ್ಪಣೆಯೂ ಪಾನಾರ್ಪಣೆಯೂ [QE][QS2]ನಿಮ್ಮ ದೇವರ ಆಲಯದಿಂದ ನಿಂತುಹೋಗಿವೆ. [QE]
14. [QS]ಪವಿತ್ರ ಉಪವಾಸವನ್ನು ಘೋಷಿಸಿರಿ. [QE][QS2]ಪವಿತ್ರ ಸಭೆಯನ್ನು ಕರೆಯಿರಿ. [QE][QS]ಹಿರಿಯರನ್ನೂ ದೇಶದ ನಿವಾಸಿಗಳೆಲ್ಲರನ್ನೂ [QE][QS2]ನಿಮ್ಮ ಯೆಹೋವ ದೇವರ ಆಲಯದಲ್ಲಿ ಕೂಡಿಸಿ, [QE][QS2]ಯೆಹೋವ ದೇವರಿಗೆ ಮೊರೆಯಿಡಿರಿ. [QE][PBR]
15. [QS]ಆ ದಿನ ಭಯಂಕರವಾದದ್ದು! [QE][QS2]ಏಕೆಂದರೆ ಯೆಹೋವ ದೇವರ ದಿವಸವು ಸಮೀಪವಾಗಿದೆ. [QE][QS2]ಸರ್ವಶಕ್ತರ ಕಡೆಯಿಂದ ಇದು ನಾಶವಾದಂತೆ ಬರುವುದು. [QE][PBR]
16. [QS]ನಮ್ಮ ಕಣ್ಣೆದುರೇ [QE][QS2]ಆಹಾರವು ಹಾಳಾಯಿತಲ್ಲಾ. [QE][QS]ಸಂತೋಷವೂ ಉಲ್ಲಾಸವೂ [QE][QS2]ನಮ್ಮ ದೇವರ ಆಲಯವನ್ನು ಬಿಟ್ಟುಹೋಯಿತಲ್ಲವೇ? [QE]
17. [QS]ಬೀಜಗಳು ಹೆಂಟೆಗಳ ಕೆಳಗೆ ಕೆಟ್ಟು ಹೋಗಿವೆ. [QE][QS2]ಉಗ್ರಾಣಗಳು ನಾಶವಾಗಿವೆ. [QE][QS]ಕಣಜಗಳು ಕುಸಿದುಬಿದ್ದಿವೆ. [QE][QS2]ಏಕೆಂದರೆ ಧಾನ್ಯವು ಒಣಗಿದೆ. [QE]
18. [QS]ಪಶುಗಳು ನರಳುತ್ತವೆ. [QE][QS2]ದನದ ಹಿಂಡುಗಳು ಕಳವಳಗೊಂಡಿವೆ. [QE][QS]ಏಕೆಂದರೆ ಅವುಗಳಿಗೆ ಮೇವು ಇಲ್ಲ; [QE][QS2]ಕುರಿಮಂದೆಗಳು ಸಹ ಕಷ್ಟಪಡುತ್ತಲಿವೆ. [QE][PBR]
19. [QS]ಯೆಹೋವ ದೇವರೇ, ನಿಮಗೆ ಮೊರೆಯಿಡುತ್ತೇನೆ. [QE][QS2]ಬೆಂಕಿಯು ಹುಲ್ಲುಗಾವಲನ್ನು ದಹಿಸಿಬಿಟ್ಟಿದೆ; [QE][QS2]ಜ್ವಾಲೆಯು ಅಡವಿಯ ಮರಗಳನ್ನೆಲ್ಲಾ ಸುಟ್ಟುಬಿಟ್ಟಿವೆ. [QE]
20. [QS]ಕಾಡುಮೃಗಗಳು ಸಹ ನಿನ್ನ ಕಡೆಗೆ ತಲೆಯೆತ್ತಿವೆ. [QE][QS2]ನೀರಿನ ಹೊಳೆಗಳು ಬತ್ತಿ ಹೋಗಿವೆ. [QE][QS2]ಹುಲ್ಲುಗಾವಲನ್ನು ಬೆಂಕಿಯು ದಹಿಸಿಬಿಟ್ಟಿದೆ. [QE]