1. [QS]“ಮನುಷ್ಯರಿಗೆ ಭೂಮಿಯಲ್ಲಿ ಕಠಿಣ ದುಡಿತ ಇಲ್ಲವೇ? [QE][QS2]ಮಾನವನ ದಿನಗಳು ಜೀತದಾಳಿನ ದಿನಗಳ ಹಾಗಲ್ಲವೋ? [QE]
2. [QS]ಗುಲಾಮನು ಸಾಯಂಕಾಲದ ನೆರಳನ್ನು ಅಪೇಕ್ಷಿಸುವ ಪ್ರಕಾರವೂ, [QE][QS2]ನಾನು ಕೂಲಿಯವನು ತನ್ನ ಕೂಲಿಯನ್ನು ಕೋರುವ ಪ್ರಕಾರವೂ ಇದ್ದೇನೆ. [QE]
3. [QS]ನನಗೆ ನಿರರ್ಥಕತೆಯ ತಿಂಗಳುಗಳನ್ನು ನೀಡಲಾಗಿದೆ; [QE][QS2]ಬೇಸರಿಕೆಯ ರಾತ್ರಿಗಳು ನನಗೆ ನೇಮಕವಾಗಿವೆ. [QE]
4. [QS]ಮಲಗುವ ವೇಳೆಯಲ್ಲಿ, ‘ಯಾವಾಗ ಏಳುವೆನೋ?’ ಅಂದುಕೊಳ್ಳುವೆನು, [QE][QS2]ರಾತ್ರಿ ಬೆಳೆಯುತ್ತಾ ಹೋಗುತ್ತದೆ; ಉದಯದವರೆಗೂ ಹೊರಳಿ ಹೊರಳಿ ಸಾಕಾಗುತ್ತದೆ. [QE]
5. [QS]ನನ್ನ ದೇಹವು ಹುಳಹಕ್ಕಳೆಗಳನ್ನೂ ಧರಿಸಿಕೊಂಡಿದೆ; [QE][QS2]ನನ್ನ ಚರ್ಮವು ಕಜ್ಜಿಯಿಂದ ಬಿರಿದು ಹೋಗಿದೆ. [QE][PBR]
6. [QS]“ನನ್ನ ದಿನಗಳು ಮಗ್ಗದ ಲಾಳಿಗಿಂತ ತ್ವರೆಯಾಗಿವೆ; [QE][QS2]ದಿನಗಳು ನಿರೀಕ್ಷೆ ಇಲ್ಲದೆ ಮುಗಿಯುತ್ತವೆ. [QE]
7. [QS]ಓ ದೇವರೇ, ನನ್ನ ಜೀವವು ಕೇವಲ ಉಸಿರೆಂದು ನೆನಪುಮಾಡಿಕೊಳ್ಳಿರಿ. [QE][QS2]ನನ್ನ ಕಣ್ಣು ತಿರುಗಿ ಸಂತೋಷವನ್ನು ಕಾಣುವುದಿಲ್ಲ. [QE]
8. [QS]ನನ್ನನ್ನು ನೋಡುವವನ ಕಣ್ಣು, ಇನ್ನು ಮೇಲೆ ನನ್ನನ್ನು ನೋಡದು; [QE][QS2]ನೀವು ನನ್ನನ್ನು ನೋಡಿದರೂ, ನಾನು ಬದುಕಿರುವುದಿಲ್ಲ. [QE]
9. [QS]ಮೋಡವು ಕರಗಿ ಹೋಗುವ ಹಾಗೆಯೇ, [QE][QS2]ಪಾತಾಳಕ್ಕೆ ಇಳಿದವನು ಹಿಂತಿರುಗಿ ಬರಲಾರನು. [QE]
10. [QS]ಇನ್ನು ಅವನು ತನ್ನ ಮನೆಗೆ ತಿರುಗಿಕೊಳ್ಳುವುದಿಲ್ಲ; [QE][QS2]ಅವನ ಸ್ಥಳವು ಇನ್ನು ಅವನ ಗುರುತನ್ನು ಅರಿಯದು. [QE][PBR]
11. [QS]“ಆದ್ದರಿಂದ ನಾನು ನನ್ನ ಬಾಯಿ ಮುಚ್ಚುವುದಿಲ್ಲ; [QE][QS2]ಆತ್ಮವೇದನೆಯಿಂದ ಮಾತಾಡುವೆನು, [QE][QS2]ನನ್ನ ಆತ್ಮದ ಕಹಿಯಲ್ಲಿ ನಾನು ವಾದಿಸುವೆನು. [QE]
12. [QS]ನೀವು ನನಗೆ ಕಾವಲಿಡುವುದಕ್ಕೆ ನಾನೇನು ಸಮುದ್ರವೋ? [QE][QS2]ಇಲ್ಲವೆ ತಿಮಿಂಗಿಲವೋ? [QE]
13. [QS]ನನ್ನ ಹಾಸಿಗೆಯು ನನ್ನನ್ನು ಸಂತೈಸುವುದು; [QE][QS2]ನನ್ನ ಮಂಚವು ನನ್ನ ಚಿಂತೆಯನ್ನು ಶಮನ ಮಾಡಲಿ ಎಂದುಕೊಳ್ಳುವಾಗ, [QE]
14. [QS]ನೀವು ಸ್ವಪ್ನಗಳಿಂದ ನನ್ನನ್ನು ಹೆದರಿಸುತ್ತೀರಿ; [QE][QS2]ದರ್ಶನಗಳಿಂದ ನನ್ನನ್ನು ಭಯಪಡಿಸುತ್ತೀರಿ. [QE]
15. [QS]ಆದ್ದರಿಂದ ನನ್ನ ದೇಹದಲ್ಲಿ ಸಂಕಟಪಡುವುದಕ್ಕಿಂತಲೂ ಉಸಿರುಕಟ್ಟಿ, [QE][QS2]ನಾನು ನನ್ನ ಪ್ರಾಣಬಿಡುವುದು ಲೇಸು. [QE]
16. [QS]ನಾನು ನನ್ನ ಜೀವನವನ್ನು ದ್ವೇಷಿಸುತ್ತೇನೆ; ನಿರಂತರ ನಾನು ಬದುಕಲೊಲ್ಲೆನು; [QE][QS2]ನನ್ನನ್ನು ಬಿಟ್ಟುಬಿಡಿರಿ; ನನ್ನ ಬಾಳಿನ ದಿನಗಳಿಗೆ ಅರ್ಥವಿಲ್ಲ. [QE][PBR]
17. [QS]“ದೇವರೇ, ಮಾನವನು ಎಷ್ಟರವನು? [QE][QS2]ನೀವು ಮಾನವನಿಗೆ ಬಹು ಗೌರವ ಕೊಡುತ್ತೀರಿ, ಅವನ ಕಡೆಗೆ ಗಮನಹರಿಸುತ್ತೀರಿ. [QE]
18. [QS]ಮನುಷ್ಯನನ್ನು ಪ್ರತಿ ಉದಯದಲ್ಲಿ ವಿಚಾರಿಸುತ್ತೀರಿ, [QE][QS2]ನೀವು ಕ್ಷಣಕ್ಷಣಕ್ಕೆ ಅವನನ್ನು ಪರೀಕ್ಷಿಸುವುದೇಕೆ? [QE]
19. [QS]ನೀವು ನನ್ನ ಕಡೆಯಿಂದ ದೃಷ್ಟಿಯನ್ನು ತೊಲಗಿಸುವುದಿಲ್ಲವೋ? [QE][QS2]ನಾನು ಒಂದು ಕ್ಷಣ ಉಗುಳು ನುಂಗುವುದಕ್ಕೂ ನನ್ನನ್ನು ಬಿಡುವುದಿಲ್ಲ? [QE]
20. [QS]ಮನುಷ್ಯರನ್ನು ಕಾಯುವವರೇ, ನಾನು ಪಾಪಮಾಡಿದ್ದರೆ, [QE][QS2]ನಾವು ಮಾಡುವ ಪ್ರತಿಯೊಂದನ್ನೂ ನೋಡುವವರೇ, ನಾನು ನಿಮಗೆ ಏನು ಮಾಡಿದೆ? [QE][QS]ನಾನು ನಿಮಗೆ ಭಾರವಾಗಿದ್ದೇನೋ? [QE][QS2]ನನ್ನನ್ನು ನಿಮ್ಮ ಗುರಿಯಾಗಿ ಇಟ್ಟುಕೊಳ್ಳುವುದು ಏಕೆ? [QE]
21. [QS]ನೀವು ನನ್ನ ಅಪರಾಧವನ್ನು ಪರಿಹರಿಸಬಾರದೇ? [QE][QS2]ನನ್ನ ಪಾಪವನ್ನು ಕ್ಷಮಿಸಬಾರದೇ? [QE][QS]ನಾನು ಬೇಗ ಮಣ್ಣಿಗೆ ಸೇರಿಬಿಡುವೆನು; [QE][QS2]ನೀವು ನನ್ನನ್ನು ಹುಡುಕಿದರೆ ನಾನು ಇರುವುದಿಲ್ಲ.” [QE]