1. {#1ಎಲೀಫಜನ ವಾದ }
2. [PS]ತೇಮಾನ್ಯನಾದ ಎಲೀಫಜನು ಉತ್ತರಕೊಟ್ಟನು: [PE][QS]“ಒಬ್ಬನು ನಿನ್ನ ಸಂಗಡ ಮಾತಾಡ ತೊಡಗಿದರೆ, ನಿನಗೆ ಬೇಸರಿಕೆ ಉಂಟಾಗುವುದೋ? [QE][QS2]ಮಾತಾಡದೆ ಸುಮ್ಮನೆ ಇರುವುದಕ್ಕೆ ಯಾರಿಂದಾದೀತು? [QE]
3. [QS]ಅನೇಕರಿಗೆ ನೀನು ಶಿಕ್ಷಣ ಕೊಟ್ಟದ್ದನ್ನೂ [QE][QS2]ಬಲಹೀನ ಕೈಗಳನ್ನು ಬಲಪಡಿಸಿದ್ದನ್ನೂ ಯೋಚಿಸು. [QE]
4. [QS]ಎಡವಿ ಬೀಳುವವನನ್ನು ನಿನ್ನ ನುಡಿಗಳು ಎದ್ದು ನಿಲ್ಲಿಸಿದವು. [QE][QS2]ಬಲಹೀನವಾದ ಮೊಣಕಾಲುಗಳನ್ನು ಬಲಪಡಿಸಿದೆ. [QE]
5. [QS]ಈಗ ಆಪತ್ತು ನಿನ್ನ ಮೇಲೆ ಬಂದದ್ದರಿಂದ ನೀನು ದಣಿಯುತ್ತಿರುವೆ; [QE][QS2]ನಿನಗೂ ಕಡುಕಷ್ಟ ತಟ್ಟಿದ್ದರಿಂದ ಕಳವಳಪಡುತ್ತಿರುವೆ. [QE]
6. [QS]ನಿನ್ನ ಭಯಭಕ್ತಿಯೇ ನಿನಗೆ ಭರವಸೆಯೂ [QE][QS2]ನಿನ್ನ ಸನ್ಮಾಮಾರ್ಗಗಳು ನಿನ್ನ ನಿರೀಕ್ಷೆಯೂ ಆಗಿರಬೇಕಲ್ಲವೇ? [QE][PBR]
7. [QS]“ನೆನಪುಮಾಡಿಕೋ, ನಿರಪರಾಧಿಯಾಗಿ ನಾಶವಾದವನು ಯಾವನು? [QE][QS2]ನೀತಿವಂತರು ಅಳಿದು ಹೋದದ್ದು ಎಲ್ಲಿ? [QE]
8. [QS]ನಾನು ಕಂಡ ಹಾಗೆ ಕೆಟ್ಟತನವನ್ನು ಊಳುವವರೂ [QE][QS2]ದುಷ್ಟತನವನ್ನು ಬಿತ್ತುವವರೂ ಅದನ್ನೇ ಕೊಯ್ಯುವರು. [QE]
9. [QS]ದೇವರ ಉಸಿರಿನಿಂದ ಅವರು ಕ್ಷಯಿಸಿ ಹೋಗುತ್ತಾರೆ. [QE][QS2]ದೇವರ ದಂಡನೆಯಿಂದ ಅಂಥವರು ನಾಶವಾಗುತ್ತಾರೆ; [QE]
10. [QS]ಸಿಂಹಗಳು ಗರ್ಜಿಸಬಹುದು ಮತ್ತು ಕೂಗಬಹುದು, [QE][QS2]ಆದರೂ ಪ್ರಾಯದ ಸಿಂಹಗಳ ಹಲ್ಲುಗಳು ಮುರಿದುಹೋಗಿವೆ. [QE]
11. [QS]ಸಿಂಹವು ಬೇಟೆ ಇಲ್ಲದ್ದರಿಂದ ನಾಶವಾಗುತ್ತದೆ; [QE][QS2]ಸಿಂಹದ ಮರಿಗಳು ಚದರಿಹೋಗುವವು. [QE][PBR]
12. [QS]“ಒಂದು ಮಾತು ನನಗೆ ಗುಟ್ಟಾಗಿ ತಿಳಿದುಬಂತು, [QE][QS2]ಅದರ ಪಿಸುಮಾತು ನನ್ನ ಕಿವಿಗೆ ಬಿತ್ತು. [QE]
13. [QS]ರಾತ್ರಿ ಕನಸಿನ ಆಲೋಚನೆಗಳಲ್ಲಿಯೂ [QE][QS2]ಗಾಢನಿದ್ರೆಯು ಜನರಿಗೆ ಹತ್ತುವಾಗಲೂ [QE]
14. [QS]ಭಯವೂ ನಡುಕವೂ ನನ್ನನ್ನು ಹಿಡಿದು, [QE][QS2]ನನ್ನ ಎಲ್ಲಾ ಎಲುಬುಗಳನ್ನು ನಡುಗಿಸಿತು. [QE]
15. [QS]ಒಂದು ಆತ್ಮವು ನನ್ನ ಮುಂದೆ ಹಾದುಹೋಯಿತು, [QE][QS2]ಆಗ ನನ್ನ ಮೈ ರೋಮವೆಲ್ಲಾ ನಿಮಿರಿ ನಿಂತವು. [QE]
16. [QS]ಆ ಆತ್ಮ ನಿಂತಿದ್ದರೂ [QE][QS2]ಅದು ಏನೆಂದು ನನಗೆ ತಿಳಿಯಲಿಲ್ಲ. [QE][QS]ಅದರ ರೂಪವು ನನ್ನ ಕಣ್ಣು ಮುಂದೆ ನಿಂತಿತ್ತು, [QE][QS2]ಆಗ ಒಂದು ಸೂಕ್ಷ್ಮ ಸ್ವರವು ಕೇಳಿಸಿತು: [QE]
17. [QS]‘ಮನುಷ್ಯನು ದೇವರಿಗಿಂತ ಹೆಚ್ಚು ನೀತಿವಂತನಾಗಿರಲು ಸಾಧ್ಯವೇ? [QE][QS2]ಮಾನವನು ಸೃಷ್ಟಿಕರ್ತ ದೇವರಿಗಿಂತಲೂ ಶುದ್ಧನಾಗಿರಲು ಸಾಧ್ಯವೇ? [QE]
18. [QS]ತಮ್ಮ ಸೇವಕರಲ್ಲಿ ದೇವರು ನಂಬದೆ, [QE][QS2]ತಮ್ಮ ದೂತರಲ್ಲಿಯೇ ತಪ್ಪು ಕಂಡಿರಲು, [QE]
19. [QS]ಧೂಳಿನಲ್ಲಿರುವ ಅಸ್ತಿವಾರದ ಮೇಲೆ ಮಣ್ಣಿನ ಮನೆಗಳ ನಿವಾಸಿಗಳು, [QE][QS2]ನುಸಿಗಿಂತಲೂ ಹೆಚ್ಚಾಗಿ ಜಜ್ಜಿಹೋದವರು, [QE][QS2]ಇನ್ನೂ ಹೆಚ್ಚಾಗಿ ದಂಡನೆಗೆ ಒಳಪಡುವರಲ್ಲವೇ? [QE]
20. [QS]ಬೆಳಿಗ್ಗೆಯಿಂದ ಸಂಜೆಯವರೆಗೆ ಜೀವಿಸಿದ ಅವರು ನಾಶವಾಗುತ್ತಾರೆ; [QE][QS2]ಯಾರ ಗಮನಕ್ಕೂ ಬಾರದೇ ನಿತ್ಯ ನಾಶವಾಗುತ್ತಾರೆ. [QE]
21. [QS]ಅವರ ಗುಡಾರದ ಹಗ್ಗವು ಬಿಚ್ಚಿಹೋಗುವುದು, [QE][QS2]ಅವರು ಜ್ಞಾನವಿಲ್ಲದೆ ಸಾಯುವರು.’ [QE][PBR]