ಪವಿತ್ರ ಬೈಬಲ್

ಓಪನ್ ಸಮಕಾಲೀನ ಆವೃತ್ತಿ (OCV)
ಯೋಬನು
1. {#1ಎಲೀಹುವಿನ ವಾದ } [PS]ಯೋಬನು ತಾನು ನೀತಿವಂತನೆಂದು ಸಾಧಿಸಿದ್ದನು. ಆದ್ದರಿಂದ ಆ ಮೂರು ಸ್ನೇಹಿತರು ಯೋಬನಿಗೆ ಉತ್ತರ ಕೊಡುವುದನ್ನು ನಿಲ್ಲಸಿಬಿಟ್ಟರು.
2. ಆಗ ರಾಮ ಗೋತ್ರದ ಬೂಜ್ಯನಾದ ಬರಕೇಲನ ಮಗ ಎಲೀಹು, ಯೋಬನ ಮೇಲೆ ಬಹು ಕೋಪಗೊಂಡನು. ಯೋಬನು ದೇವರಿಗಿಂತ ತನ್ನನ್ನು ನ್ಯಾಯವಂತನೆಂದು ಸ್ಥಾಪಿಸಿದ್ದರಿಂದ, ಎಲೀಹು ಅವನ ಮೇಲೆ ಕೋಪಗೊಂಡನು.
3. ಯೋಬನ ಮೂವರು ಸ್ನೇಹಿತರ ಮೇಲೆಯೂ ಎಲೀಹು ಕೋಪಗೊಂಡನು. ಅವರು ಉತ್ತರ ಕಂಡುಕೊಳ್ಳದೆ, ಯೋಬನನ್ನು ಖಂಡಿಸಿದ್ದರಿಂದ ಎಲೀಹುವಿನ ಕೋಪ ಉರಿಯಿತು.
4. ಎಲೀಹು, ಯೋಬನ ಮಾತುಗಳು ಮುಗಿಯುವವರೆಗೂ ಕಾದಿದ್ದನು. ಏಕೆಂದರೆ ಅವನಿಗಿಂತ ಅವರೆಲ್ಲರೂ ಹಿರಿಯರಾಗಿದ್ದರು.
5. ಆ ಮೂವರ ಮಾತಿನಲ್ಲಿ ಏನೂ ಉತ್ತರವಿಲ್ಲವೆಂದು ಎಲೀಹು ನೋಡಿದಾಗ, ಅವನ ಕೋಪ ಮತ್ತಷ್ಟು ಉರಿಯಿತು. [PE]
6. [PS]ಆಗ ಬೂಜ್ಯನಾದ ಬರಕೇಲನ ಮಗ ಎಲೀಹು ಹೇಳಿದ್ದೇನೆಂದರೆ: [PE][QS]“ನಾನು ಪ್ರಾಯದಲ್ಲಿ ಯುವಕನು, [QE][QS2]ನೀವು ಪ್ರಾಯಸ್ಥರು. [QE][QS]ಆದ್ದರಿಂದ ನಾನು ಸಂಕೋಚಗೊಂಡು [QE][QS2]ನನ್ನ ಅಭಿಪ್ರಾಯವನ್ನು ನಿಮಗೆ ತಿಳಿಸುವುದಕ್ಕೆ ಭಯಪಟ್ಟೆನು. [QE]
7. [QS]‘ದಿನ ಗತಿಸಿದವರು ಮಾತನಾಡಲಿ, [QE][QS2]ಬಹಳ ವರ್ಷದವರು ಜ್ಞಾನವನ್ನು ಬೋಧಿಸಲಿ,’ ಎಂದುಕೊಂಡೆನು. [QE]
8. [QS]ಆದರೆ ಮನುಷ್ಯನಲ್ಲಿ ಒಂದು ಆತ್ಮ ಉಂಟು; [QE][QS2]ಸರ್ವಶಕ್ತರ ಶ್ವಾಸವು ಅವನಿಗೆ ತಿಳುವಳಿಕೆಯನ್ನು ಕೊಡುತ್ತದೆ. [QE]
9. [QS]ದೊಡ್ಡ ಮನುಷ್ಯರೇ ಬುದ್ಧಿವಂತರಲ್ಲ; [QE][QS2]ಮುದುಕರೇ ನ್ಯಾಯವನ್ನು ಬಲ್ಲವರಲ್ಲ. [QE][PBR]
10. [QS]“ಆದಕಾರಣ, ನಾನು ಹೇಳುತ್ತಿದ್ದೇನೆ: ನನ್ನ ಮಾತನ್ನು ಕೇಳಿಸಿಕೊಳ್ಳಿರಿ, [QE][QS2]ನನಗೆ ಗೊತ್ತಿದ್ದನ್ನು ನಾನು ತಿಳಿಸುತ್ತೇನೆ. [QE]
11. [QS]ನೀವು ಮಾತಾಡಿ ಮುಗಿಸುವ ತನಕ ನಾನು ಕಾದಿದ್ದೆ. [QE][QS2]ನೀವು ಹೇಳುತ್ತಿದ್ದ ಕಾರಣಗಳನ್ನೂ, [QE][QS]ಏನು ಹೇಳಬೇಕೆಂದು ಹುಡುಕುತ್ತಿದ್ದ ಪದಗಳನ್ನೂ ನಾನು ಕೇಳುತ್ತಿದ್ದೆನು. [QE]
2. [QS2]ನಾನು ನಿಮ್ಮ ಮಾತಿಗೆ ಪೂರ್ಣ ಲಕ್ಷ್ಯವಿಟ್ಟಿದ್ದೆನು. [QE][QS]ಆದರೆ, ನಿಮ್ಮಲ್ಲಿ ಯೋಬನ ತಪ್ಪನ್ನು ರುಜುಪಡಿಸುವವರೂ, [QE][QS2]ಯೋಬನ ವಾದಗಳಿಗೆ ಸರಿಯಾಗಿ ಉತ್ತರ ಕೊಡುವವರೂ ನಿಮ್ಮಲ್ಲಿ ಯಾರೂ ಇಲ್ಲ. [QE]
13. [QS]‘ನಾವು ಯೋಬನಲ್ಲಿ ಜ್ಞಾನವನ್ನು ಕಂಡುಕೊಂಡಿದ್ದೇವೆ ದೇವರೇ ಅವನನ್ನು ಖಂಡಿಸಿಬಿಡಲಿ, [QE][QS2]ಇದು ಮನುಷ್ಯನಿಂದಾಗುವುದಿಲ್ಲ,’ ಎಂಬುದಾಗಿ ಅಂದುಕೊಳ್ಳಬೇಡಿರಿ. [QE]
14. [QS]ಯೋಬನು ನನಗೆ ವಿರೋಧವಾಗಿ ನುಡಿಗಳನ್ನು ಪ್ರಯೋಗ ಮಾಡಲಿಲ್ಲ; [QE][QS2]ನಿಮ್ಮ ವಾದಗಳಿಂದ ನಾನು ಅವನಿಗೆ ಉತ್ತರ ಕೊಡುವುದಿಲ್ಲ. [QE][PBR]
15. [QS]“ಯೋಬನೇ, ಇವರು ವಿಸ್ಮಯಗೊಂಡು ಇನ್ನು ಉತ್ತರ ಕೊಡದವರಾಗಿದ್ದಾರೆ; [QE][QS2]ಇವರಿಗೆ ಮಾತನಾಡಲು ಪದಗಳೇ ಸಿಕ್ಕುತ್ತಾಯಿಲ್ಲ. [QE]
16. [QS]ಇವರು ಇನ್ನು ಉತ್ತರ ಕೊಡದೆ ಮೌನವಾಗಿ ಸುಮ್ಮನೆ ನಿಂತಿದ್ದರೆ, [QE][QS2]ನಾನೂ ಕಾದುಕೊಂಡಿರಬೇಕೋ? [QE]
17. [QS]ನಾನು ನನ್ನ ಪಾಲಿನ ಉತ್ತರವನ್ನು ಹೇಳುವೆನು, [QE][QS2]ನಾನೇ ನನ್ನ ಅಭಿಪ್ರಾಯವನ್ನು ತಿಳಿಸುವೆನು. [QE]
18. [QS]ಏಕೆಂದರೆ ಅನೇಕ ವಿಷಯಗಳಿಂದ ನಾನು ತುಂಬಿದ್ದೇನೆ; [QE][QS2]ನನ್ನೊಳಗಿನ ಆತ್ಮವು ನನ್ನನ್ನು ಒತ್ತಾಯಪಡಿಸುತ್ತಿದೆ. [QE]
19. [QS]ನನ್ನ ಅಂತರಾತ್ಮವು ತೆರೆಯದ ದ್ರಾಕ್ಷಾರಸದ ಹಾಗೆ ಇದೆ; [QE][QS2]ಒಡೆದು ಹೋಗುವ ಹೊಸ ಬುದ್ದಲಿಗಳ ಹಾಗೆಯೂ ಇದೆ. [QE]
20. [QS]ನೆಮ್ಮದಿಯಿಂದಿರಲು ನಾನು ಮಾತಾಡಲೇಬೇಕು; [QE][QS2]ನನ್ನ ತುಟಿಗಳನ್ನು ತೆರೆದು ಉತ್ತರಕೊಡುವೆನು. [QE]
21. [QS]ನಾನು ಯಾವ ಮನುಷ್ಯನ ಮುಖದಾಕ್ಷಿಣ್ಯ ನೋಡೆನು; [QE][QS2]ನಾನು ಯಾವ ಮನುಷ್ಯನನ್ನು ಹೊಗಳೆನು. [QE]
22. [QS]ಹೊಗಳುವುದರಲ್ಲಿ ನಾನು ಪ್ರವೀಣನಾಗಿದ್ದರೆ, [QE][QS2]ನನ್ನ ಸೃಷ್ಟಿಕರ್ತ ಆಗಿರುವವರು ನನ್ನನ್ನು ಬೇಗ ತೆಗೆದುಕೊಂಡು ಹೋಗಲಿ. [QE][PBR]
ಒಟ್ಟು 42 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 32 / 42
ಎಲೀಹುವಿನ ವಾದ 1 ಯೋಬನು ತಾನು ನೀತಿವಂತನೆಂದು ಸಾಧಿಸಿದ್ದನು. ಆದ್ದರಿಂದ ಆ ಮೂರು ಸ್ನೇಹಿತರು ಯೋಬನಿಗೆ ಉತ್ತರ ಕೊಡುವುದನ್ನು ನಿಲ್ಲಸಿಬಿಟ್ಟರು. 2 ಆಗ ರಾಮ ಗೋತ್ರದ ಬೂಜ್ಯನಾದ ಬರಕೇಲನ ಮಗ ಎಲೀಹು, ಯೋಬನ ಮೇಲೆ ಬಹು ಕೋಪಗೊಂಡನು. ಯೋಬನು ದೇವರಿಗಿಂತ ತನ್ನನ್ನು ನ್ಯಾಯವಂತನೆಂದು ಸ್ಥಾಪಿಸಿದ್ದರಿಂದ, ಎಲೀಹು ಅವನ ಮೇಲೆ ಕೋಪಗೊಂಡನು. 3 ಯೋಬನ ಮೂವರು ಸ್ನೇಹಿತರ ಮೇಲೆಯೂ ಎಲೀಹು ಕೋಪಗೊಂಡನು. ಅವರು ಉತ್ತರ ಕಂಡುಕೊಳ್ಳದೆ, ಯೋಬನನ್ನು ಖಂಡಿಸಿದ್ದರಿಂದ ಎಲೀಹುವಿನ ಕೋಪ ಉರಿಯಿತು. 4 ಎಲೀಹು, ಯೋಬನ ಮಾತುಗಳು ಮುಗಿಯುವವರೆಗೂ ಕಾದಿದ್ದನು. ಏಕೆಂದರೆ ಅವನಿಗಿಂತ ಅವರೆಲ್ಲರೂ ಹಿರಿಯರಾಗಿದ್ದರು. 5 ಆ ಮೂವರ ಮಾತಿನಲ್ಲಿ ಏನೂ ಉತ್ತರವಿಲ್ಲವೆಂದು ಎಲೀಹು ನೋಡಿದಾಗ, ಅವನ ಕೋಪ ಮತ್ತಷ್ಟು ಉರಿಯಿತು. 6 ಆಗ ಬೂಜ್ಯನಾದ ಬರಕೇಲನ ಮಗ ಎಲೀಹು ಹೇಳಿದ್ದೇನೆಂದರೆ: “ನಾನು ಪ್ರಾಯದಲ್ಲಿ ಯುವಕನು, ನೀವು ಪ್ರಾಯಸ್ಥರು. ಆದ್ದರಿಂದ ನಾನು ಸಂಕೋಚಗೊಂಡು ನನ್ನ ಅಭಿಪ್ರಾಯವನ್ನು ನಿಮಗೆ ತಿಳಿಸುವುದಕ್ಕೆ ಭಯಪಟ್ಟೆನು. 7 ‘ದಿನ ಗತಿಸಿದವರು ಮಾತನಾಡಲಿ, ಬಹಳ ವರ್ಷದವರು ಜ್ಞಾನವನ್ನು ಬೋಧಿಸಲಿ,’ ಎಂದುಕೊಂಡೆನು. 8 ಆದರೆ ಮನುಷ್ಯನಲ್ಲಿ ಒಂದು ಆತ್ಮ ಉಂಟು; ಸರ್ವಶಕ್ತರ ಶ್ವಾಸವು ಅವನಿಗೆ ತಿಳುವಳಿಕೆಯನ್ನು ಕೊಡುತ್ತದೆ. 9 ದೊಡ್ಡ ಮನುಷ್ಯರೇ ಬುದ್ಧಿವಂತರಲ್ಲ; ಮುದುಕರೇ ನ್ಯಾಯವನ್ನು ಬಲ್ಲವರಲ್ಲ. 10 “ಆದಕಾರಣ, ನಾನು ಹೇಳುತ್ತಿದ್ದೇನೆ: ನನ್ನ ಮಾತನ್ನು ಕೇಳಿಸಿಕೊಳ್ಳಿರಿ, ನನಗೆ ಗೊತ್ತಿದ್ದನ್ನು ನಾನು ತಿಳಿಸುತ್ತೇನೆ. 11 ನೀವು ಮಾತಾಡಿ ಮುಗಿಸುವ ತನಕ ನಾನು ಕಾದಿದ್ದೆ. ನೀವು ಹೇಳುತ್ತಿದ್ದ ಕಾರಣಗಳನ್ನೂ, ಏನು ಹೇಳಬೇಕೆಂದು ಹುಡುಕುತ್ತಿದ್ದ ಪದಗಳನ್ನೂ ನಾನು ಕೇಳುತ್ತಿದ್ದೆನು. 2 ನಾನು ನಿಮ್ಮ ಮಾತಿಗೆ ಪೂರ್ಣ ಲಕ್ಷ್ಯವಿಟ್ಟಿದ್ದೆನು. ಆದರೆ, ನಿಮ್ಮಲ್ಲಿ ಯೋಬನ ತಪ್ಪನ್ನು ರುಜುಪಡಿಸುವವರೂ, ಯೋಬನ ವಾದಗಳಿಗೆ ಸರಿಯಾಗಿ ಉತ್ತರ ಕೊಡುವವರೂ ನಿಮ್ಮಲ್ಲಿ ಯಾರೂ ಇಲ್ಲ. 13 ‘ನಾವು ಯೋಬನಲ್ಲಿ ಜ್ಞಾನವನ್ನು ಕಂಡುಕೊಂಡಿದ್ದೇವೆ ದೇವರೇ ಅವನನ್ನು ಖಂಡಿಸಿಬಿಡಲಿ, ಇದು ಮನುಷ್ಯನಿಂದಾಗುವುದಿಲ್ಲ,’ ಎಂಬುದಾಗಿ ಅಂದುಕೊಳ್ಳಬೇಡಿರಿ. 14 ಯೋಬನು ನನಗೆ ವಿರೋಧವಾಗಿ ನುಡಿಗಳನ್ನು ಪ್ರಯೋಗ ಮಾಡಲಿಲ್ಲ; ನಿಮ್ಮ ವಾದಗಳಿಂದ ನಾನು ಅವನಿಗೆ ಉತ್ತರ ಕೊಡುವುದಿಲ್ಲ. 15 “ಯೋಬನೇ, ಇವರು ವಿಸ್ಮಯಗೊಂಡು ಇನ್ನು ಉತ್ತರ ಕೊಡದವರಾಗಿದ್ದಾರೆ; ಇವರಿಗೆ ಮಾತನಾಡಲು ಪದಗಳೇ ಸಿಕ್ಕುತ್ತಾಯಿಲ್ಲ. 16 ಇವರು ಇನ್ನು ಉತ್ತರ ಕೊಡದೆ ಮೌನವಾಗಿ ಸುಮ್ಮನೆ ನಿಂತಿದ್ದರೆ, ನಾನೂ ಕಾದುಕೊಂಡಿರಬೇಕೋ? 17 ನಾನು ನನ್ನ ಪಾಲಿನ ಉತ್ತರವನ್ನು ಹೇಳುವೆನು, ನಾನೇ ನನ್ನ ಅಭಿಪ್ರಾಯವನ್ನು ತಿಳಿಸುವೆನು. 18 ಏಕೆಂದರೆ ಅನೇಕ ವಿಷಯಗಳಿಂದ ನಾನು ತುಂಬಿದ್ದೇನೆ; ನನ್ನೊಳಗಿನ ಆತ್ಮವು ನನ್ನನ್ನು ಒತ್ತಾಯಪಡಿಸುತ್ತಿದೆ. 19 ನನ್ನ ಅಂತರಾತ್ಮವು ತೆರೆಯದ ದ್ರಾಕ್ಷಾರಸದ ಹಾಗೆ ಇದೆ; ಒಡೆದು ಹೋಗುವ ಹೊಸ ಬುದ್ದಲಿಗಳ ಹಾಗೆಯೂ ಇದೆ. 20 ನೆಮ್ಮದಿಯಿಂದಿರಲು ನಾನು ಮಾತಾಡಲೇಬೇಕು; ನನ್ನ ತುಟಿಗಳನ್ನು ತೆರೆದು ಉತ್ತರಕೊಡುವೆನು. 21 ನಾನು ಯಾವ ಮನುಷ್ಯನ ಮುಖದಾಕ್ಷಿಣ್ಯ ನೋಡೆನು; ನಾನು ಯಾವ ಮನುಷ್ಯನನ್ನು ಹೊಗಳೆನು. 22 ಹೊಗಳುವುದರಲ್ಲಿ ನಾನು ಪ್ರವೀಣನಾಗಿದ್ದರೆ, ನನ್ನ ಸೃಷ್ಟಿಕರ್ತ ಆಗಿರುವವರು ನನ್ನನ್ನು ಬೇಗ ತೆಗೆದುಕೊಂಡು ಹೋಗಲಿ.
ಒಟ್ಟು 42 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 32 / 42
×

Alert

×

Kannada Letters Keypad References