1. [QS]“ಕನ್ನಿಕೆಯನ್ನು ಕಾಮದೃಷ್ಟಿಯಿಂದ ನೋಡುವುದಿಲ್ಲವೆಂದು [QE][QS2]ನನ್ನ ಕಣ್ಣುಗಳೊಂದಿಗೆ ನಾನು ಒಡಂಬಡಿಕೆಯನ್ನು ಮಾಡಿಕೊಂಡೆನು. [QE]
2. [QS]ದೇವರು ಮೇಲಣ ಲೋಕದಿಂದ ಯಾವ ಪಾಲನ್ನು ವಿಧಿಸುವರು? [QE][QS2]ಸರ್ವಶಕ್ತರು ಉನ್ನತಾಕಾಶದಿಂದ ಕೊಡುವ ಬಾಧ್ಯತೆ ಯಾವುದು? [QE]
3. [QS]ದುಷ್ಟರಿಗೆ ವಿಪತ್ತು ಇಲ್ಲವೋ? [QE][QS2]ಕೆಡುಕರಿಗೆ ವಿನಾಶ ಇಲ್ಲವೋ? [QE]
4. [QS]ದೇವರು ನನ್ನ ಮಾರ್ಗಗಳನ್ನು ನೋಡಿ, [QE][QS2]ನನ್ನ ಹೆಜ್ಜೆಗಳನ್ನೆಲ್ಲಾ ಎಣಿಸುತ್ತಾರಲ್ಲವೆ? [QE][PBR]
5. [QS]“ನಾನು ಕಪಟವಾಗಿ ನಡೆದುಕೊಂಡಿದ್ದರೆ, [QE][QS2]ಮೋಸಕ್ಕೆ ನನ್ನ ಕಾಲು ತ್ವರೆಪಟ್ಟಿದ್ದರೆ, [QE]
6. [QS]ದೇವರು ನ್ಯಾಯದ ತಕ್ಕಡಿಯಲ್ಲಿ ನನ್ನನ್ನು ತೂಗಿ ನೋಡಲಿ; [QE][QS2]ನಾನು ನಿರ್ದೋಷಿ ಎಂದು ದೇವರು ತಿಳಿದುಕೊಳ್ಳಲಿ. [QE]
7. [QS]ನಾನು ದಾರಿತಪ್ಪಿ ನಡೆದಿದ್ದರೆ, [QE][QS2]ನನ್ನ ಕಣ್ಣು ಕಂಡವುಗಳ ಹಿಂದೆ ನನ್ನ ಹೃದಯವು ಹೋಗಿದ್ದರೆ, [QE][QS2]ನನ್ನ ಅಂಗೈಗಳಲ್ಲಿ ದೋಷ ಅಂಟಿಕೊಂಡಿದ್ದರೆ, [QE]
8. [QS]ನಾನು ಬಿತ್ತುವುದನ್ನು ಬೇರೊಬ್ಬನು ಉಣ್ಣಲಿ; [QE][QS2]ನನ್ನ ಬೆಳೆಯು ಬುಡಮೇಲಾಗಲಿ. [QE][PBR]
9. [QS]“ನನ್ನ ಹೃದಯವು ಪರಸ್ತ್ರೀಗೆ ಮರುಳಾಗಿ, [QE][QS2]ನನ್ನ ನೆರೆಯವನ ಬಾಗಿಲ ಹತ್ತಿರ ನಾನು ಹೊಂಚುಹಾಕಿದ್ದರೆ, [QE]
10. [QS]ನನ್ನ ಹೆಂಡತಿ ಮತ್ತೊಬ್ಬನಿಗೋಸ್ಕರ ಧಾನ್ಯಬೀಸಲಿ, [QE][QS2]ಮತ್ತೊಬ್ಬರು ಅವಳ ಸಂಗಡ ಮಲಗಲಿ. [QE]
11. [QS]ಏಕೆಂದರೆ ನಾನು ಹಾಗೆಲ್ಲಾ ಮಾಡಿದ್ದರೆ, ಅಂಥ ನಡತೆ ದುಷ್ಕಾರ್ಯವಾಗುತ್ತಿತ್ತು, [QE][QS2]ಆ ಅಪರಾಧವು ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾಗುತ್ತಿತ್ತು. [QE]
12. [QS]ಅದು ನಾಶಲೋಕದವರೆಗೆ ದಹಿಸುವಂಥಾ ಅಗ್ನಿಯಾಗುತ್ತಿತ್ತು, [QE][QS2]ಅದು ನನ್ನ ಆದಾಯವನ್ನೆಲ್ಲಾ ನಿರ್ಮೂಲ ಮಾಡುತ್ತಿತ್ತು. [QE][PBR]
13. [QS]“ಒಂದು ವೇಳೆ ನನಗೂ [QE][QS2]ನನ್ನ ದಾಸದಾಸಿಯರಿಗೂ ನನ್ನ ಮೇಲೆ ವ್ಯಾಜ್ಯವಾದಾಗ, [QE][QS2]ನಾನು ಅವರ ನ್ಯಾಯವನ್ನು ತಿರಸ್ಕರಿಸಿದ್ದರೆ, [QE]
14. [QS]ದೇವರು ನ್ಯಾಯಸ್ಥಾಪನೆಗೆ ಏಳುವಾಗ ನಾನು ಏನು ಮಾಡುತ್ತಿದ್ದೆನು? [QE][QS2]ದೇವರು ವಿಚಾರಿಸುವಾಗ, ನಾನು ಅವರಿಗೆ ಏನು ಉತ್ತರಕೊಡುತ್ತಿದ್ದೆನು? [QE]
15. [QS]ಗರ್ಭದಲ್ಲಿ ನನ್ನನ್ನು ಉಂಟುಮಾಡಿದ ದೇವರೇ ಅವರನ್ನೂ ಉಂಟು ಮಾಡಿದ್ದಾರಲ್ಲವೇ? [QE][QS2]ಅವರನ್ನೂ, ನನ್ನನ್ನೂ ತಾಯಂದಿರ ಗರ್ಭದಲ್ಲಿ ರೂಪಿಸಿದ ದೇವರು ಒಬ್ಬರೇ ಅಲ್ಲವೇ? [QE][PBR]
16. [QS]“ನಾನು ಬಡವರ ಬಯಕೆಗಳನ್ನು ಭಂಗಪಡಿಸಿದೆನೋ? [QE][QS2]ವಿಧವೆಯ ಕಣ್ಣುಗಳನ್ನು ನಾನು ಮಂಕಾಗಿಸಿದೆನೋ? [QE]
17. [QS]ದಿಕ್ಕಿಲ್ಲದವರು ಊಟ ಉಣ್ಣದ ಹಾಗೆ, [QE][QS2]ನಾನು ಮಾತ್ರ ತುತ್ತನ್ನೆಲ್ಲಾ ಒಂಟಿಯಾಗಿ ತಿಂದೆನೋ? [QE]
18. [QS]ಇಲ್ಲಾ, ನನ್ನ ಯೌವನಕಾಲದಿಂದ ನಾನು ಅನಾಥರನ್ನು ತಂದೆಯಂತೆ ಬೆಳೆಸಿದೆನು. [QE][QS2]ಹುಟ್ಟಿದಂದಿನಿಂದ ವಿಧವೆಯರಿಗೆ ಮಾರ್ಗದರ್ಶಿಯಾಗಿದ್ದೆನು. [QE]
19. [QS]ಬಟ್ಟೆ ಇಲ್ಲದೆ ಕಷ್ಟಪಡುವವರನ್ನೂ, [QE][QS2]ಹೊದಿಕೆ ಇಲ್ಲದೆ ನಡುಗುವವರನ್ನೂ ನಾನು ನೋಡಿದಾಗೆಲ್ಲಾ, [QE]
20. [QS]ಆ ಬಡವರು ನನ್ನ ಕುರಿ ಉಣ್ಣೆಯಿಂದ ಬೆಚ್ಚಗಾಗಿ, [QE][QS2]ತಮ್ಮ ಅಂತರಾಳದಿಂದ ನನ್ನನ್ನು ಹರಸಲಿಲ್ಲವೋ? [QE]
21. [QS]ನ್ಯಾಯಸ್ಥಾನದಲ್ಲಿ ನನಗೆ ಬೆಂಬಲ ಉಂಟೆಂದು ಕಂಡು, [QE][QS2]ನಾನು ದಿಕ್ಕಿಲ್ಲದವರ ಮೇಲೆ ನನ್ನ ಕೈಮಾಡಿದ್ದರೆ, [QE]
22. [QS]ನನ್ನ ಹೆಗಲು, ಬೆನ್ನಿನ ಕೀಲು ತಪ್ಪಿಹೋಗಲಿ; [QE][QS2]ನನ್ನ ತೋಳು ಅದರ ಸಂದಿನಿಂದ ಕಳಚಿಬೀಳಲಿ. [QE]
23. [QS]ಏಕೆಂದರೆ ದೇವರಿಂದ ಬರುವ ವಿಪತ್ತಿನ ಬಗ್ಗೆ ನನಗೆ ಹೆದರಿಕೆಯಾಯಿತು; [QE][QS2]ದೇವರ ಪ್ರಭಾವದ ಭಯದ ನಿಮಿತ್ತ ನಾನು ಇಂಥ ಕೃತ್ಯವನ್ನು ಮಾಡುವುದಕ್ಕೆ ಸಾಧ್ಯವಾಗಲಿಲ್ಲ. [QE][PBR]
24. [QS]“ನಾನು ಬಂಗಾರದಲ್ಲಿ ನನ್ನ ನಿರೀಕ್ಷೆಯನ್ನು ಇಟ್ಟಿದ್ದರೆ, [QE][QS2]ಅಪರಂಜಿಗೆ, ‘ನೀನು ನನ್ನ ಭದ್ರತೆ,’ ಎಂದು ಹೇಳಿದ್ದರೆ, [QE]
25. [QS]ನನ್ನ ಐಶ್ವರ್ಯವು ಬಹಳ ಎಂದು ಕೊಚ್ಚಿಕೊಂಡಿದ್ದರೆ, [QE][QS2]ನನ್ನ ಕೈ ಬಹಳ ಸಂಪಾದಿಸಿದೆ ಎಂದು ನಾನು ಸಂತೋಷಪಟ್ಟಿದ್ದರೆ, [QE]
26. [QS]ನಾನು ಸೂರ್ಯನು ಹೊಳೆಯುವುದನ್ನು ಗಮನಿಸಿ, [QE][QS2]ಚಂದ್ರನು ಪ್ರಭೆಯಲ್ಲಿ ಚಲಿಸುವುದನ್ನು ನೋಡಿ, [QE]
27. [QS]ನನ್ನ ಹೃದಯವು ಮರುಳುಗೊಂಡು, [QE][QS2]ನನ್ನ ಕೈ ಅವುಗಳನ್ನು ನನ್ನ ಬಾಯಿಂದ ಗೌರವದಿಂದ ಮುಗಿದಿದ್ದರೆ, [QE]
28. [QS]ಇದು ಸಹ ನ್ಯಾಯಾಧಿಪತಿಯ ದಂಡನೆಗೆ ಯೋಗ್ಯವಾಗುತ್ತಿತ್ತು; [QE][QS2]ಏಕೆಂದರೆ, ಆಗ ನಾನು ಉನ್ನತದಲ್ಲಿರುವ ದೇವರಿಗೆ ದ್ರೋಹಿಯಾಗುತ್ತಿದ್ದೆನು. [QE][PBR]
29. [QS]“ವೈರಿಯ ನಾಶಕ್ಕೆ ನಾನು ಸಂತೋಷಪಟ್ಟು, [QE][QS2]ವೈರಿಗೆ ಕೇಡು ಬಂದಾಗ ಹಿಗ್ಗಿಕೊಂಡು ಗರ್ವಪಟ್ಟೆನೋ? [QE]
30. [QS]ಇಲ್ಲ, ಅವನ ಸಾಯಲಿ ಎಂದು ನಾನು ಶಾಪ ಕೊಡಲಿಲ್ಲ. [QE][QS2]ನಾನು ನನ್ನ ಬಾಯಿಂದ ಅಂಥ ಪಾಪಮಾಡಲಿಲ್ಲ. [QE]
31. [QS]ನನ್ನ ಮನೆಯ ಕೆಲಸದವರು, [QE][QS2]‘ಯೋಬನು ನೀಡಿದ ಭೋಜನದಿಂದ ತೃಪ್ತರಾಗದವರು ಯಾರು?’ ಎಂದು ಹೇಳಿಕೊಳ್ಳುತ್ತಿದ್ದರಲ್ಲವೆ? [QE]
32. [QS]ಆದರೆ ಯಾವ ಪರದೇಶಸ್ಥರೂ ಬೀದಿಯಲ್ಲಿ ತಂಗಬೇಕಾಗಿರಲಿಲ್ಲ; [QE][QS2]ಪ್ರಯಾಣಿಕರಿಗೆ ನನ್ನ ಬಾಗಿಲು ಸದಾ ತೆರೆದಿಟ್ಟಿದ್ದೆನು. [QE]
33. [QS]ನಾನು ಹೃದಯದಲ್ಲಿ ನನ್ನ ಅಪರಾಧ ಪ್ರಜ್ಞೆಯನ್ನು ಅಡಗಿಸಿ, [QE][QS2]ಮಾನವರಂತೆ ನನ್ನ ದ್ರೋಹವನ್ನು ಮುಚ್ಚಿಕೊಳ್ಳಲಿಲ್ಲ. [QE]
34. [QS]ನಾನು ದೊಡ್ಡ ಸಮೂಹಕ್ಕೆ ಹೆದರಿದೆನೋ? [QE][QS2]ಕುಲಗಳ ಅವಹೇಳನಕ್ಕೆ ಕಳವಳಗೊಂಡರೂ, [QE][QS2]ಬಾಗಿಲಿನಿಂದ ಹೊರಗೆ ಹೋಗದೆ ಮೌನವಾಗಿದ್ದೆನೋ? [QE][PBR]
35. [QS]“ನನ್ನ ಕರೆಗೆ ಕಿವಿಗೊಡತಕ್ಕವರು ಒಬ್ಬರು ಈಗ ಇದ್ದರೆ ಎಷ್ಟೋ ಲೇಸು! [QE][QS2]ಸರ್ವಶಕ್ತರು ನನಗೆ ಉತ್ತರಕೊಡಲಿ; [QE][QS2]ನನ್ನ ವಿರೋಧಿಯು ನನ್ನ ಆಪಾದನಾ ಪತ್ರವನ್ನು ಬರೆದು ಕೊಡಲಿ. [QE]
36. [QS]ನಾನು ನನ್ನ ಹೆಗಲಲ್ಲಿ ಆ ಲಿಖಿತವನ್ನು ನಿಶ್ಚಯವಾಗಿ ಹೊತ್ತು ನಡೆಯುತ್ತಿದ್ದೆ; [QE][QS2]ಅದನ್ನು ಕಿರೀಟವಾಗಿ ಧರಿಸಿಕೊಳ್ಳುತ್ತಿದ್ದೆನು. [QE]
37. [QS]ನನ್ನ ಹೆಜ್ಜೆಗಳ ಲೆಕ್ಕವನ್ನು ದೇವರಿಗೆ ಒಪ್ಪಿಸುತ್ತಿದ್ದೆನು; [QE][QS2]ಒಬ್ಬ ಅಧಿಪತಿಯಂತೆ ನಾನು ದೇವರನ್ನು ಸಮೀಪಿಸುತ್ತಿದ್ದೆನು. [QE][PBR]
38. [QS]“ನನ್ನ ಹೊಲ ನನಗೆ ವಿರೋಧವಾಗಿ ಪ್ರತಿಭಟಿಸಿದ್ದರೆ, [QE][QS2]ಅದರ ನೇಗಿಲ ಗೆರೆಗಳೆಲ್ಲಾ ದೂರಿ ಅಳುತ್ತಿದ್ದರೆ, [QE]
39. [QS]ಕೂಲಿಕೊಡದೆ ಭೂಮಿಯ ಫಲವನ್ನು ನಾನು ತಿಂದಿದ್ದರೆ, [QE][QS2]ಅದರ ಯಜಮಾನರ ಪ್ರಾಣಹಾನಿಗೆ ಕಾರಣನಾಗಿದ್ದರೆ, [QE]
40. [QS]ಗೋಧಿಗೆ ಬದಲಾಗಿ ಮುಳ್ಳುಗಳೂ, [QE][QS2]ಜವೆಗೋಧಿಗೆ ಬದಲಾಗಿ ಕಳೆಗಳೂ ಬೆಳೆಯಲಿ.” [QE][PS]ಹೀಗೆ ಯೋಬನ ಮಾತುಗಳು ಮುಗಿದವು. [PE]