1. [QS]“ಆದರೆ ಈ ದಿವಸಗಳಲ್ಲಿ ನನಗಿಂತ ಚಿಕ್ಕವರು, [QE][QS2]ನನ್ನನ್ನು ನೋಡಿ ಪರಿಹಾಸ್ಯ ಮಾಡುತ್ತಾರೆ. [QE][QS]ಇವರ ಪಿತೃಗಳನ್ನು ನನ್ನ ಕುರಿಮಂದೆಯ [QE][QS2]ನಾಯಿಗಳೊಡನೆ ಇರಲೂ ಅಯೋಗ್ಯರು ಎಂದೆಣಿಸಿದ್ದೆನು. [QE]
2. [QS]ಇವರ ಕೈಗಳ ಬಲದಿಂದ ನನಗೇನಾಗುತ್ತಿತ್ತು? [QE][QS2]ಆಗ ಅವರ ಚೈತನ್ಯವು ಕುಗ್ಗಿಹೋಗಿತ್ತು! [QE]
3. [QS]ಅವರು ಬಡತನದಿಂದಲೂ ಹಸಿವಿನಿಂದಲೂ ಬಳಲಿಹೋಗಿದ್ದರು. [QE][QS2]ನಿರ್ಜನ ಮತ್ತು ಕತ್ತಲೆಯಾದ [QE][QS2]ಮರುಭೂಮಿಗಳ ಕಡೆಗೆ ಆಹಾರಕ್ಕಾಗಿ ಓಡಾಡುತ್ತಿದ್ದರು. [QE]
4. [QS]ಪೊದೆಗಳಲ್ಲಿನ ಉಪ್ಪಿನ ಸೊಪ್ಪು ಸಂಗ್ರಹಿಸುತ್ತಿದ್ದರು. [QE][QS2]ಜಾಲಿಯ ಬೇರುಗಳೇ ಅವರ ಆಹಾರವಾಗಿತ್ತು. [QE]
5. [QS]ಜನರು ಅವರನ್ನು ಹೊರಗೆ ಹಾಕುತ್ತಿದ್ದರು; [QE][QS2]ಕಳ್ಳರು ಎಂಬಂತೆ ಅವರನ್ನು ಓಡಿಸುತ್ತಿದ್ದರು. [QE]
6. [QS]ಆಗ ಅವರು ಭಯಂಕರ ತಗ್ಗುಗಳ ಸಂದುಗಳಲ್ಲಿಯೂ, [QE][QS2]ಗುಹೆಗಳಲ್ಲಿಯೂ ಬಂಡೆಗಳಲ್ಲಿಯೂ ವಾಸಿಸುತ್ತಿದ್ದರು. [QE]
7. [QS]ಪೊದೆಗಳ ನಡುವೆ ಇದ್ದುಕೊಂಡು ಅರಚುತ್ತಿದ್ದರು. [QE][QS2]ಮುಳ್ಳುಗಿಡಗಳ ಕೆಳಗೆ ಕೂಡಿಕೊಳ್ಳುತ್ತಿದ್ದರು. [QE]
8. [QS]ಆಗ ಅವರು ಹುಚ್ಚರಂತೆಯೂ ಹೆಸರಿಲ್ಲದ ಮಕ್ಕಳಂತೆಯೂ [QE][QS2]ನಾಡಿನಿಂದ ಹೊರಗೆ ಅಲೆದಾಡುತ್ತಿದ್ದರು. [QE][PBR]
9. [QS]“ಆದರೆ ಈಗ ನಾನು ಅವರ ಹಾಸ್ಯದ ಹಾಡೂ, [QE][QS2]ಅವರಿಗೆ ಗಾದೆಯೂ ಆಗಿದ್ದೇನೆ. [QE]
10. [QS]ಈಗ ನನ್ನನ್ನು ಕಂಡು ಅಸಹ್ಯಪಟ್ಟು, ನನ್ನಿಂದ ದೂರಸರಿಯುತ್ತಿದ್ದಾರೆ. [QE][QS2]ನನ್ನ ಮುಖದ ಮೇಲೆ ಉಗುಳಲೂ ಹಿಂಜರಿಯುವದಿಲ್ಲ. [QE]
11. [QS]ಏಕೆಂದರೆ, ದೇವರು ನನ್ನ ಬಿಲ್ಲಿನ ಹಗ್ಗವನ್ನು ಸಡಲಿಸಿ, [QE][QS2]ಅವರಿಂದ ನನ್ನನ್ನು ಬಾಧಿಸಿದ್ದಾರೆ. [QE][QS2]ಆದ್ದರಿಂದ ಈಗ ಅವರು ಯಾವುದೇ ನಿರ್ಬಂಧವಿಲ್ಲದಂತೆ ನನ್ನ ಮೇಲೆ ಹೀಗೆಲ್ಲಾ ವರ್ತಿಸುತ್ತಿದ್ದಾರೆ. [QE]
12. [QS]ಬಲಗಡೆಯಲ್ಲಿ ಯುವಕರು ಎದ್ದಿದ್ದಾರೆ; [QE][QS2]ಅವರು ನನ್ನ ಕಾಲುಗಳಿಗೆ ಬಲೆ ಹಾಕಿದ್ದಾರೆ. [QE][QS2]ನನ್ನನ್ನು ನಾಶಮಾಡಲು ತಮ್ಮ ಹಾದಿಗಳನ್ನು ನನಗೆ ವಿರೋಧವಾಗಿ ಕಟ್ಟುತ್ತಿದ್ದಾರೆ. [QE]
13. [QS]ನನ್ನ ದಾರಿಯನ್ನೂ ಕಡಿದುಹಾಕಿದ್ದಾರೆ; [QE][QS2]ಅವರು ನನ್ನನ್ನು ನಾಶಮಾಡಲು ಯಶಸ್ವಿಯಾಗುತ್ತಿದ್ದಾರೆ; [QE][QS2]‘ಅವನಿಗೆ ಸಹಾಯಕನಿಲ್ಲ,’ ಎಂದು ಹೇಳುತ್ತಿದ್ದಾರೆ. [QE]
14. [QS]ಆ ಯುವಕರು ಅಗಲವಾದ ಬಿರುಕಿನಲ್ಲಿ ನೀರು ಬರುವಂತೆ ಬರುತ್ತಿದ್ದಾರೆ; [QE][QS2]ನಾಶನದಲ್ಲಿರುವ ನನ್ನ ಮೇಲೆ ಅವರು ಉರುಳಿಬೀಳಲಿದ್ದಾರೆ. [QE]
15. [QS]ವಿಪತ್ತುಗಳು ನನ್ನ ಮೇಲೆ ತಿರುಗಿಬಿದ್ದು, [QE][QS2]ನನ್ನ ಮಾನಮರ್ಯಾದೆ ಗಾಳಿಯಂತೆ ಹೊಡೆದುಕೊಂಡು ಹೋಗುತ್ತಿದೆ; [QE][QS2]ನನ್ನ ಕ್ಷೇಮವು ಮೇಘದ ಹಾಗೆ ಹರಿದು ಹೋಗುತ್ತಿದೆ. [QE][PBR]
16. [QS]“ಆದರೆ ಈಗ ನನ್ನ ಪ್ರಾಣವು ನನ್ನಲ್ಲಿಯೇ ಕರಗಿಹೋಗಿದೆ; [QE][QS2]ಸಂಕಟದ ದಿವಸಗಳು ನನ್ನನ್ನು ಬಿಗಿಹಿಡಿದಿವೆ. [QE]
17. [QS]ರಾತ್ರಿಯಲ್ಲಿ ನನ್ನ ಎಲುಬುಗಳು ನನ್ನಲ್ಲಿ ಕೊರೆಯುತ್ತಿವೆ; [QE][QS2]ನನ್ನ ಸಂಕಟಗಳು ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ. [QE]
18. [QS]ದೇವರ ಅಧಿಕ ಬಲದಲ್ಲಿ ನನ್ನ ಬಟ್ಟೆಯು ರೋಗದಿಂದ ಬಿಗಿಯಾಗಿ, [QE][QS2]ಅಂಗಿಯ ಕೊರಳ ಪಟ್ಟಿಯಂತೆ ನನ್ನನ್ನು ಸುತ್ತಿಕೊಂಡಿದೆ. [QE]
19. [QS]ದೇವರು ನನ್ನನ್ನು ಕೆಸರಿನಲ್ಲಿ ಕೆಡವಿದ್ದಾರೆ; [QE][QS2]ನಾನು ಧೂಳಿಗೂ ಬೂದಿಗೂ ಸಮಾನನಾಗಿದ್ದೇನೆ. [QE][PBR]
20. [QS]“ದೇವರೇ, ನಿಮಗೆ ಮೊರೆಯಿಡುತ್ತೇನೆ ಆದರೆ ನೀವು ನನಗೆ ಉತ್ತರ ಕೊಡುವುದಿಲ್ಲ, [QE][QS2]ನಾನು ಎದ್ದುನಿಂತರೂ ನನ್ನನ್ನು ಸುಮ್ಮನೆ ನೋಡುತ್ತಿರುವಿರಿ. [QE]
21. [QS]ನೀವು ನನಗೆ ಕ್ರೂರರಾಗಿದ್ದೀರಿ, [QE][QS2]ನಿಮ್ಮ ಹಸ್ತ ಶಕ್ತಿಯಿಂದ ನನಗೆ ಹಿಂಸೆಕೊಡುತ್ತೀರಿ. [QE]
22. [QS]ನನ್ನನ್ನು ಗಾಳಿಗೆ ಎತ್ತಿ ತೂರಿಬಿಟ್ಟಿರುವಿರಿ, [QE][QS2]ನನ್ನನ್ನು ಬಿರುಗಾಳಿಗೆ ತೊಳಲಾಡುವಂತೆ ಮಾಡಿದ್ದೀರಿ. [QE]
23. [QS]ದೇವರೇ, ನೀವು ನನ್ನನ್ನು ಎಲ್ಲಾ ಜೀವಿಗಳಿಗೆ ನೇಮಕವಾದ ಮನೆಯೆಂಬ ಮರಣಕ್ಕೆ, [QE][QS2]ಸೇರಿಸುವಿರಿ ಎಂದು ನನಗೆ ಗೊತ್ತಿದೆ. [QE][PBR]
24. [QS]“ಆದರೂ ಮುರಿದ ಮನುಷ್ಯನಾಗಿರುವ ನಾನು ಸಹಾಯಕ್ಕಾಗಿ ಕೈಚಾಚಬಾರದೆ? [QE][QS2]ಆಪತ್ತಿಗೆ ಒಳಪಟ್ಟವನಾದ ನಾನು ಕೂಗಿಕೊಳ್ಳಬಾರದೆ? [QE]
25. [QS]ಕಷ್ಟದಲ್ಲಿ ಇದ್ದವರಿಗೋಸ್ಕರ ನಾನು ಕಣ್ಣೀರಿಡಲಿಲ್ಲವೆ? [QE][QS2]ದರಿದ್ರನಿಗೋಸ್ಕರ ನನ್ನ ಪ್ರಾಣವು ದುಃಖಪಡಲಿಲ್ಲವೆ? [QE]
26. [QS]ನಾನು ಒಳ್ಳೆಯದನ್ನು ನಿರೀಕ್ಷಿಸುತ್ತಿರಲು ಕೇಡು ಬಂದೊದಗಿತು; [QE][QS2]ನಾನು ಬೆಳಕನ್ನು ಎದುರು ನೋಡಲು, ಅಂಧಕಾರ ಬಂದು ಕವಿಯಿತು. [QE]
27. [QS]ನನ್ನ ಹೃದಯವು ಯಾವಾಗಲೂ ಅಶಾಂತಿಯಿಂದ ಕುದಿಯುತ್ತಿದೆ; [QE][QS2]ಸಂಕಟಗಳ ದಿವಸಗಳು ನನ್ನನ್ನು ಎದುರಿಸುತ್ತಿವೆ. [QE]
28. [QS]ಬಿಸಿಲು ನನ್ನ ಮೇಲೆ ಬೀಳದಿದ್ದರೂ ನಾನು ಕಪ್ಪಾಗಿ ಹೋದೆನು; [QE][QS2]ನಾನು ಸಭೆಯಲ್ಲಿ ಎದ್ದು ನಿಂತು ಸಹಾಯಕ್ಕಾಗಿ ಕೂಗಿದೆನು. [QE]
29. [QS]ನಾನು ನರಿಗಳಿಗೆ ಸಹೋದರನಾದೆನು; [QE][QS2]ಗೂಬೆಗಳಿಗೆ ನಾನು ಜೊತೆಯವನಾದೆನು. [QE]
30. [QS]ನನ್ನ ಮೇಲಿನ ಚರ್ಮವು ಕಪ್ಪಾಗಿ ಉದುರುತ್ತಿದೆ; [QE][QS2]ನನ್ನ ಶರೀರ ಜ್ವರದಿಂದ ಬಿಸಿಯಾಗಿದೆ. [QE]
31. [QS]ನನ್ನ ಕಿನ್ನರಿಯಲ್ಲಿ ಗೋಳಾಟದ ಧ್ವನಿಯು ಕೇಳಿಸುತ್ತಿದೆ. [QE][QS2]ನನ್ನ ಕೊಳಲಿನಲ್ಲಿ ಅಳುವವರ ಸ್ವರವೇ ಕೇಳಿಬರುತ್ತಿದೆ. [QE][PBR]