1. {#1ಚೋಫರನ ವಾದ }
2. [PS]ನಾಮಾಥ್ಯನಾದ ಚೋಫರನು ಉತ್ತರಕೊಟ್ಟು ಹೇಳಿದ್ದೇನೆಂದರೆ: [PE][QS]“ನಾನು ತುಂಬಾ ಕಳವಳಗೊಂಡದ್ದರಿಂದ, [QE][QS2]ನನ್ನ ಆಲೋಚನೆಗಳು ನನ್ನನ್ನು ಉತ್ತರಿಸಲು ಪ್ರೇರೇಪಿಸಿದವು. [QE]
3. [QS]ನನ್ನನ್ನು ಅವಮಾನಿಸುವ ಖಂಡನೆಯನ್ನು ನಾನು ಕೇಳಿದ್ದೇನೆ; [QE][QS2]ಆದ್ದರಿಂದ ನನ್ನ ತಿಳುವಳಿಕೆಯು ನನ್ನನ್ನು ಉತ್ತರಿಸಲು ಪ್ರೇರೇಪಿಸುತ್ತದೆ. [QE][PBR]
4. [QS]“ದೇವರು ಮನುಷ್ಯನನ್ನು[* ಅಥವಾ ಆದಾಮ ] [QE][QS2]ಭೂಮಿಯಲ್ಲಿ ಇರಿಸಿದ ಕಾಲದಿಂದ ವಿಷಯ ಹೇಗಿದೆ ಎಂಬುದು ನಿನಗೆ ನಿಶ್ಚಯವಾಗಿ ಗೊತ್ತಿದೆ. [QE]
5. [QS]ದುಷ್ಟರ ಜಯವು ಅಲ್ಪ ಕಾಲ, [QE][QS2]ಭಕ್ತಿಹೀನರ ಸಂತೋಷವು ಕ್ಷಣ ಮಾತ್ರ. [QE]
6. [QS]ಹೆಮ್ಮೆಯು ಆಕಾಶಕ್ಕೆ ಏರಿದರೂ, [QE][QS2]ಅವನ ತಲೆ ಮೇಘಕ್ಕೆ ಮುಟ್ಟಿದರೂ, [QE]
7. [QS]ಗೊಬ್ಬರದ ಹಾಗೆ ಶಾಶ್ವತವಾಗಿ ಅವನು ನಾಶವಾಗುವನು; [QE][QS2]ಅವನನ್ನು ನೋಡಿದವರು, ‘ಅವನೆಲ್ಲಿ?’ ಎಂದು ಕೇಳುವರು. [QE]
8. [QS]ಭಕ್ತಿಹೀನನು ಕನಸಿನ ಹಾಗೆ ಹಾರಿಹೋಗುವನು, ಇನ್ನೆಂದಿಗೂ ಸಿಗಲಾರನು; [QE][QS2]ಅವನು ಕತ್ತಲೆಯ ಹಾಗೆ ಕಾಣದೆ ಹೋಗುವನು. [QE]
9. [QS]ಅವನನ್ನು ನೋಡಿದವರು ಇನ್ನು ಮುಂದೆ ನೋಡರು; [QE][QS2]ಅವನ ಸ್ಥಳವು ಇನ್ನು ಅವನನ್ನು ಕಾಣದು. [QE]
10. [QS]ಅವನ ಮಕ್ಕಳು ಬಡವರ ದಯೆಯನ್ನು ಬೇಡುವರು; [QE][QS2]ಅವನ ಮಕ್ಕಳ ಕೈಗಳು ಅವನ ಸಂಪತ್ತನ್ನು ಹಿಂತಿರುಗಿಸಬೇಕಾಗುವುದು. [QE]
11. [QS]ಅವನ ಎಲುಬುಗಳು ಯೌವನದ ಶಕ್ತಿಯಿಂದ ತುಂಬಿತ್ತು, [QE][QS2]ಅದು ಅವನ ಸಂಗಡ ಧೂಳಿನಲ್ಲಿ ಮಲಗುವುದು. [QE][PBR]
12. [QS]“ಅವನ ಕೆಟ್ಟತನವು ಬಾಯಿಗೆ ಸಿಹಿಯಾಗಿತ್ತು, [QE][QS2]ಅವನು ನಾಲಿಗೆಯ ಕೆಳಗೆ ಅದನ್ನು ಬಚ್ಚಿಟ್ಟುಕೊಂಡಿದ್ದನು. [QE]
13. [QS]ಅದನ್ನು ಬಿಟ್ಟುಕೊಡಲು ಇಷ್ಟಪಡದೆ, [QE][QS2]ತನ್ನ ಬಾಯಿಯೊಳಗೆ ದೀರ್ಘಸಮಯ ಇಟ್ಟುಕೊಂಡರೂ, [QE]
14. [QS]ಅವನ ಆಹಾರವು ಅವನ ಕರುಳಲ್ಲಿ ಹುಳಿಯಾಗಿ, [QE][QS2]ಅದು ಅವನೊಳಗಿನ ಸರ್ಪಗಳ ವಿಷವಾಗುವುದು. [QE]
15. [QS]ಅವನು ನುಂಗಿದ ಐಶ್ವರ್ಯವನ್ನು ಕಾರಿಬಿಡುವನು; [QE][QS2]ಅವನ ಹೊಟ್ಟೆಯೊಳಗಿಂದ ದೇವರು ಅದನ್ನು ಹೊರಡಿಸಿ ಬಿಡುವನು. [QE]
16. [QS]ಅವನು ಸರ್ಪಗಳ ವಿಷವನ್ನು ಹೀರುವನು; [QE][QS2]ಹಾವಿನ ನಾಲಿಗೆ ಅವನನ್ನು ಕೊಲ್ಲುವುದು. [QE]
17. [QS]ಅವನು ಜೇನು, ಮೊಸರೂ ಹರಿಯುವ ಹಳ್ಳಗಳನ್ನೂ, [QE][QS2]ಸಮೃದ್ಧಿಯಾಗಿ ಹರಿಯುವ ನದಿಗಳನ್ನೂ ನೋಡನು. [QE]
18. [QS]ಅವನು ತನ್ನ ಪ್ರಯಾಸದ ಫಲವನ್ನು ಸವಿಯದೆ ಪರರಿಗೆ ಕೊಡಬೇಕಾಗುವುದು; [QE][QS2]ಅವನು ತಾನು ಪಡೆದ ಲಾಭದ ಆನಂದವನ್ನು ಅನುಭವಿಸುವುದಿಲ್ಲ. [QE]
19. [QS]ಏಕೆಂದರೆ ಅವನು ಬಡವರನ್ನು ಜಜ್ಜಿ ಅವರನ್ನು ನಿರ್ಗತಿಕರನ್ನಾಗಿ ಮಾಡಿದನು; [QE][QS2]ತಾನು ನಿರ್ಮಿಸದ ಮನೆಗಳನ್ನು ವಶಪಡಿಸಿಕೊಂಡಿದ್ದಾನೆ. [QE][PBR]
20. [QS]“ಖಂಡಿತವಾಗಿ ಅವನ ಆಕಾಂಕ್ಷೆಗೆ ತೃಪ್ತಿ ಇರುವುದಿಲ್ಲ; [QE][QS2]ಅವನು ತನ್ನ ಇಷ್ಟ ಸಂಪತ್ತಿನಲ್ಲಿ ಏನೂ ಉಳಿಸಿಕೊಳ್ಳುವುದಿಲ್ಲ. [QE]
21. [QS]ಅವನಿಗೆ ಆಹಾರವು ಉಳಿಯದು; [QE][QS2]ಆದ್ದರಿಂದ ಅವನ ಸಮೃದ್ಧಿಯು ಅಸ್ಥಿರವಾಗಿರುವುದು. [QE]
22. [QS]ಅವನ ಸಮೃದ್ಧಿಯಿಂದ ತುಂಬಿರುವಾಗಲೇ ಅವನಿಗೆ ಇಕ್ಕಟ್ಟಾಗುವುದು; [QE][QS2]ಘೋರ ದುಃಖವು ಅವನ ಮೇಲೆ ಬರುವುದು. [QE]
23. [QS]ಅವನ ಹೊಟ್ಟೆ ತುಂಬುವಾಗ, [QE][QS2]ದೇವದಂಡನೆ ಅವನ ಮೇಲೆ ಬರುವುದು; [QE][QS2]ಹೌದು, ದೇವದಂಡನೆಯು ಅವನ ಮೇಲೆ ಸುರಿಯುವುದು. [QE]
24. [QS]ಅವನು ಕಬ್ಬಿಣದ ಆಯುಧಕ್ಕೆ ತಪ್ಪಿಸಿಕೊಂಡು ಓಡಿಹೋದರೆ, [QE][QS2]ಕಂಚಿನ ಬಾಣ ಅವನನ್ನು ತಿವಿಯುವುದು. [QE]
25. [QS]ಅವನು ಆ ಬಾಣವನ್ನು ಎಳೆದರೆ, ಅದು ಬೆನ್ನಿನಿಂದ ಹೊರಡುವುದು; [QE][QS2]ಅವನ ಪಿತ್ತಕೋಶದಿಂದ ಅದರ ಮಿಂಚುವ ಮೊನೆ ಬರುವುದು; [QE][QS]ಸಾವಿನ ಭಯವು ಅವನನ್ನೂ ಆವರಿಸುವುದು. [QE]
2. [QS2]ಅವನ ನಿಕ್ಷೇಪಗಳಲ್ಲಿ ಅಂಧಕಾರವು ಪೂರ್ಣವಾಗಿ ಕವಿಯುವುದು; [QE][QS]ಯಾರೂ ಹೊತ್ತಿಸದ ಬೆಂಕಿ ಅವನನ್ನು ದಹಿಸುವುದು; [QE][QS2]ಅವನ ಗುಡಾರದಲ್ಲಿ ಉಳಿದದ್ದೆಲ್ಲ ನಾಶವಾಗುವುದು. [QE]
27. [QS]ಆಕಾಶವು ಅವನ ಅಪರಾಧವನ್ನು ಪ್ರಕಟಿಸುವುದು; [QE][QS2]ಭೂಮಿಯು ಅವನಿಗೆ ವಿರೋಧವಾಗಿ ಏಳುವುದು. [QE]
28. [QS]ಅವನ ಮನೆಯ ಧನಧಾನ್ಯವು ತೊಲಗಿ ಹೋಗುವುದು; [QE][QS2]ದೇವದಂಡನೆಯ ದಿನದಲ್ಲಿ ಅದು ಪ್ರವಾಹದಿಂದ ಕೊಚ್ಚಿಕೊಂಡು ಹೋಗುವುದು. [QE]
29. [QS]ದುಷ್ಟನಿಗೆ ದೇವರಿಂದ ಬರುವ ಪಾಲೂ, [QE][QS2]ಅವನಿಗೆ ನೇಮವಾಗಿರುವ ಬಾಧ್ಯತೆಯೂ ಇವೇ.” [QE]