1. [QS]ಓ, ನನ್ನ ತಲೆ ಚಿಲುಮೆಯೂ, [QE][QS2]ನನ್ನ ಕಣ್ಣುಗಳು ಕಣ್ಣೀರಿನ ಬುಗ್ಗೆಯಾಗಿಯೂ ಇದ್ದರೆ ಒಳ್ಳೆಯದು, [QE][QS]ಆಗ ನನ್ನ ಜನರಲ್ಲಿ ಹತರಾದವರ ನಿಮಿತ್ತ [QE][QS2]ಹಗಲುರಾತ್ರಿ ಅಳುವೆನು. [QE]
2. [QS]ಆಹಾ, ಮರುಭೂಮಿಯಲ್ಲಿ [QE][QS2]ನನಗೆ ಪ್ರಯಾಣಸ್ಥರ ಛತ್ರವು ಇದ್ದರೆ ಒಳ್ಳೆಯದು, [QE][QS]ಆಗ ನನ್ನ ಜನರನ್ನು ಬಿಟ್ಟು [QE][QS2]ಹೊರಟು ಹೋಗುತ್ತಿದ್ದೆನು. [QE][QS]ಏಕೆಂದರೆ ಅವರೆಲ್ಲರು ವ್ಯಭಿಚಾರಿಗಳೇ, [QE][QS2]ವಂಚಕರ ಕೂಟವೇ. [QE][PBR]
3. [QS]“ಅವರು ತಮ್ಮ ನಾಲಿಗೆಗಳನ್ನು [QE][QS2]ಬಿಲ್ಲಿನಂತೆ ಸುಳ್ಳುಗಳಿಗಾಗಿ ಬಗ್ಗಿಸುತ್ತಾರೆ. [QE][QS]ಆದರೆ ಭೂಮಿಯಲ್ಲಿ ಸತ್ಯಕ್ಕಾಗಿ ಬಲಿಷ್ಠರಾಗುವುದಿಲ್ಲ. [QE][QS2]ಏಕೆಂದರೆ ಅವರು ಒಂದು ಪಾಪದಿಂದ ಇನ್ನೊಂದು ಪಾಪಕ್ಕೆ ಹೋಗುತ್ತಾ, [QE][QS]ನನ್ನನ್ನು ಅರಿಯದೆ ಇದ್ದಾರೆ,” [QE][QS2]ಎಂದು ಯೆಹೋವ ದೇವರು ಹೇಳುತ್ತಾರೆ. [QE]
4. [QS]“ನಿಮ್ಮ ನಿಮ್ಮ ನೆರೆಯವರಿಗೆ ಎಚ್ಚರಿಕೆಯಾಗಿರಿ. [QE][QS2]ಯಾವ ಸಹೋದರನಲ್ಲಾದರೂ ನಂಬಿಕೆ ಇಡಬೇಡಿರಿ. [QE][QS]ಏಕೆಂದರೆ ಸಹೋದರರೆಲ್ಲರೂ ಸಂಪೂರ್ಣವಾಗಿ ಮೋಸ ಮಾಡುವರು; [QE][QS2]ನೆರೆಯವರೆಲ್ಲರೂ ಚಾಡಿ ಹೇಳುತ್ತಾ ತಿರುಗಾಡುವರು. [QE]
5. [QS]ತಮ್ಮ ತಮ್ಮ ನೆರೆಯವರಿಗೆ ವಂಚನೆಮಾಡಿ [QE][QS2]ಸತ್ಯವನ್ನು ಮಾತನಾಡರು. [QE][QS]ಸುಳ್ಳುಗಳನ್ನು ಹೇಳುವುದಕ್ಕೆ ಅವರು ತಮ್ಮ ನಾಲಿಗೆಗೆ ಬೋಧಿಸಿದ್ದಾರೆ. [QE][QS2]ಪಾಪದಿಂದ ತಮ್ಮನ್ನು ಸುಸ್ತಾಗಿಸಿಕೊಳ್ಳುತ್ತಾರೆ. [QE]
6. [QS]ನಿನ್ನ ನಿವಾಸವು ಮೋಸದ ಮಧ್ಯದಲ್ಲಿ ಇದೆ. [QE][QS2]ಮೋಸದಿಂದಲೇ ನನ್ನನ್ನು ನಿರಾಕರಿಸುತ್ತಾರೆ,” [QE][QS2]ಎಂದು ಯೆಹೋವ ದೇವರು ಹೇಳುತ್ತಾರೆ. [QE]
7. [PS]ಆದ್ದರಿಂದ ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ: [PE][QS]“ಇಗೋ, ನಾನು ಅವರನ್ನು ಕರಗಿಸಿ ಪರಿಶೋಧಿಸುತ್ತೇನೆ. [QE][QS2]ಏಕೆಂದರೆ ನನ್ನ ಜನರ ಪಾಪಗಳಿಗೋಸ್ಕರ [QE][QS2]ನಾನು ಇನ್ನೇನು ಮಾಡಲಿ? [QE]
8. [QS]ಅವರ ನಾಲಿಗೆ ಎಸೆದ ಬಾಣದಂತಿದೆ. [QE][QS2]ಅದು ಮೋಸವನ್ನಾಡುತ್ತದೆ. [QE][QS]ತನ್ನ ಬಾಯಿಂದ ತನ್ನ ನೆರೆಯವರ ಸಂಗಡ ಸಮಾಧಾನವಾಗಿ ಮಾತನಾಡಿ, [QE][QS2]ಹೃದಯದಲ್ಲಿ ಅವನಿಗೆ ಹೊಂಚುಹಾಕುತ್ತಾರೆ. [QE]
9. [QS]ಇವುಗಳ ನಿಮಿತ್ತ ನಾನು ಅವರನ್ನು ದಂಡಿಸಬಾರದೋ?” [QE][QS2]ಎಂದು ಯೆಹೋವ ದೇವರು ಹೇಳುತ್ತಾರೆ. [QE][QS]“ಇಂಥಾ ಜನಾಂಗಕ್ಕೆ ನನ್ನ ಪ್ರಾಣವು [QE][QS2]ಮುಯ್ಯಿಗೆ ಮುಯ್ಯಿ ತೀರಿಸುವುದಿಲ್ಲವೋ?” [QE][PBR]
10. [QS]ಬೆಟ್ಟಗಳಿಗೋಸ್ಕರ ನಾನು ಅಳುವಿಕೆಯನ್ನೂ, ದುಃಖವನ್ನೂ, [QE][QS2]ಮರುಭೂಮಿಯ ಸ್ಥಳಗಳಿಗೋಸ್ಕರ ಗೋಳಾಟವನ್ನೂ ಎತ್ತುವೆನು. [QE][QS]ಅವುಗಳ ಮೂಲಕ ಹಾದುಹೋಗದಂತೆ ಅವು ಸುಟ್ಟುಹೋಗಿದೆ. [QE][QS2]ದನಗಳ ಕೂಗು ಕಿವಿಗೆ ಬೀಳುವುದಿಲ್ಲ. [QE][QS]ಆಕಾಶದ ಪಕ್ಷಿಗಳೂ, [QE][QS2]ಮೃಗಗಳೂ ಸಹ ಓಡಿ ಹೋಗಿವೆ. [QE][PBR]
11. [QS]ಯೆರೂಸಲೇಮನ್ನು ದಿಬ್ಬಗಳಾಗಿಯೂ, [QE][QS2]ನರಿಗಳ ಸ್ಥಾನವಾಗಿಯೂ ಮಾಡುತ್ತೇನೆ. [QE][QS]ಯೆಹೂದದ ಪಟ್ಟಣಗಳನ್ನು [QE][QS2]ನಿವಾಸವಿಲ್ಲದೆ ಹಾಳು ಮಾಡುತ್ತೇನೆ. [QE]
12.
13. [PS]ಇದನ್ನು ಗ್ರಹಿಸುವ ಜ್ಞಾನಿಯಾದ ಮನುಷ್ಯನು ಯಾರು? ಇದನ್ನು ತಿಳಿಸುವ ಹಾಗೆ ಯೆಹೋವ ದೇವರ ಬಾಯಿ ಯಾರ ಸಂಗಡ ಮಾತನಾಡಿತು? ದೇಶವು ಯಾವುದಕ್ಕಾಗಿ ನಾಶವಾಗಿ ಹಾದು ಹೋಗುವವನಿಲ್ಲದೆ ಮರುಭೂಮಿಯ ಹಾಗೆ ಹಾಳಾಯಿತು? [PE][PS]ಯೆಹೋವ ದೇವರು ಹೇಳುವುದೇನೆಂದರೆ, “ನಾನು ಅವರ ಮುಂದೆ ಇಟ್ಟ ನನ್ನ ನಿಯಮವನ್ನು ಅವರು ಬಿಟ್ಟು ನನ್ನ ಶಬ್ದಕ್ಕೆ ಕಿವಿಗೊಡದೆ ಅದರಲ್ಲಿ ನಡೆಯದೆ,
14. ತಮ್ಮ ಹೃದಯದ ಕಾಠಿಣ್ಯದ ಪ್ರಕಾರವಾಗಿಯೂ, ತಮ್ಮ ಪಿತೃಗಳು ಅವರಿಗೆ ಬೋಧಿಸಿದ ಬಾಳ್ ದೇವತೆಗಳನ್ನು ಹಿಂಬಾಲಿಸಿದರು.”
15. ಈ ಕಾರಣದಿಂದ ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ನಾನು ಅವರಿಗೆ ಹೌದು, ಈ ಜನರಿಗೆ ಮಾಚಿಪತ್ರೆಯನ್ನು ತಿನ್ನುವುದಕ್ಕೆ ಕೊಡುತ್ತೇನೆ. ವಿಷದ ನೀರನ್ನು ಅವರಿಗೆ ಕುಡಿಯಲು ಕೊಡುತ್ತೇನೆ.
16. ಅವರಿಗೂ, ಅವರ ತಂದೆಗಳಿಗೂ ತಿಳಿಯದ ಇತರ ಜನಾಂಗಗಳಲ್ಲಿ ಅವರನ್ನು ಚದರಿಸುವೆನು. ಅವರನ್ನು ತೀರಿಸುವವರೆಗೆ ಖಡ್ಗವನ್ನು ಅವರ ಹಿಂದೆ ಕಳುಹಿಸುವೆನು.” [PE][PBR]
17. [PS]ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ, [PE][QS]“ಆಲೋಚನೆ ಮಾಡಿರಿ; ದುಃಖಿಸುವ ಸ್ತ್ರೀಯರನ್ನು ಕರೆಯಿರಿ, ಅವರು ಬರಲಿ; [QE][QS2]ಜಾಣೆಯರನ್ನು ಕರೆಕಳುಹಿಸಿರಿ, ಅವರು ಬರಲಿ. [QE]
18. [QS]ಅವರು ತ್ವರೆಪಟ್ಟು [QE][QS2]ನಮಗೋಸ್ಕರ ಗೋಳಾಟವನ್ನು ಎತ್ತಲಿ; [QE][QS]ನಮ್ಮ ಕಣ್ಣುಗಳು ಕಣ್ಣೀರು ಸುರಿಸಲಿ; [QE][QS2]ನಮ್ಮ ರೆಪ್ಪೆಗಳು ನೀರು ಎರೆಯಲಿ. [QE]
19. [QS]‘ನಾವು ಹೇಗೆ ಹಾಳಾದೆವು, [QE][QS2]ನಾವು ದೇಶವನ್ನು ಬಿಟ್ಟದ್ದರಿಂದಲೂ, [QE][QS2]ನಮ್ಮ ನಿವಾಸಗಳು ನಮ್ಮನ್ನು ಹೊರಗೆ ಹಾಕಿದ್ದರಿಂದಲೂ [QE][QS]ಬಹಳವಾಗಿ ನಾಚಿಕೆ ಪಡುತ್ತೇವೆ, [QE][QS2]ಎಂಬ ಗೋಳಾಟದ ಶಬ್ದವು ಚೀಯೋನಿನಿಂದ ಕೇಳಿಬಂತು.’ ” [QE][PBR]
20. [QS]ಆದ್ದರಿಂದ ಓ ಸ್ತ್ರೀಯರೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ. [QE][QS2]ನಿಮ್ಮ ಕಿವಿಯು ಆತನ ಬಾಯಿಯ ವಾಕ್ಯವನ್ನು ಅಂಗೀಕರಿಸಲಿ. [QE][QS]ನಿಮ್ಮ ಪುತ್ರಿಯರಿಗೆ ಗೋಳಾಟವನ್ನೂ, [QE][QS2]ನಿಮ್ಮ ನಿಮ್ಮ ನೆರೆಯವರಿಗೆ ಪ್ರಲಾಪವನ್ನೂ ಕಲಿಸಿರಿ. [QE]
21. [QS]ಏಕೆಂದರೆ, ಮರಣವು ನಮ್ಮ ಕಿಟಕಿಗಳೊಳಗೆ ಏರಿ ಬಂತು. [QE][QS2]ನಮ್ಮ ಕೋಟೆಗಳಲ್ಲಿ ಸೇರಿತು. [QE][QS]ಹೊರಗಡೆ ಮಕ್ಕಳನ್ನೂ, [QE][QS2]ಬೀದಿಗಳಲ್ಲಿ ಯೌವನಸ್ಥರನ್ನೂ ಕಡಿದು ಹಾಕುತ್ತದೆ. [QE]
22. [PS]ಯೆಹೋವ ದೇವರು ನನಗೆ ಹೀಗೆಂದರು: [PE][QS]“ ‘ಮನುಷ್ಯರ ಹೆಣಗಳು [QE][QS2]ಗೊಬ್ಬರದಂತೆ ಬಯಲಿನಲ್ಲಿ ಬೀಳುವುವು. [QE][QS]ಧಾನ್ಯ ಕೊಯ್ಯುವವನು ಉಳಿಸಿದ ಕೈಹಿಡಿಯಂತೆ [QE][QS2]ಕೂಡಿಸುವವನಿಲ್ಲದೆ ಬೀಳುವುವು.’ ” [QE]
23. [PS]ಯೆಹೋವ ದೇವರು ಹೀಗೆ ಹೇಳುತ್ತಾರೆ: [PE][QS]“ಜ್ಞಾನಿಯು ತನ್ನ ಜ್ಞಾನದಲ್ಲಿ ಹೆಚ್ಚಳ ಪಡದಿರಲಿ. [QE][QS2]ಬಲಿಷ್ಠನು ತನ್ನ ಬಲದಲ್ಲಿ ಹೆಚ್ಚಳ ಪಡದಿರಲಿ. [QE][QS2]ಐಶ್ವರ್ಯವಂತನು ತನ್ನ ಐಶ್ವರ್ಯದಲ್ಲಿ ಹೆಚ್ಚಳ ಪಡದಿರಲಿ. [QE]
24. [QS]ಆದರೆ ಹೆಚ್ಚಳ ಪಡುವವನು, [QE][QS2]ಯೆಹೋವ ದೇವರಾದ ನಾನು ಭೂಮಿಯಲ್ಲಿ ದಯೆಯನ್ನೂ, [QE][QS]ನ್ಯಾಯವನ್ನೂ, ನೀತಿಯನ್ನೂ ನಡೆಸುವವನಾಗಿದ್ದೇನೆಂದು [QE][QS2]ಗ್ರಹಿಸಿ ತಿಳಿದುಕೊಳ್ಳುವುದರಲ್ಲಿಯೇ ಹೆಚ್ಚಳ ಪಡಲಿ. [QE][QS2]ಇವುಗಳಲ್ಲಿ ನಾನು ಸಂತೋಷಪಡುತ್ತೇನೆ,” [QE][QS2]ಎಂದು ಯೆಹೋವ ದೇವರು ಹೇಳುತ್ತಾರೆ. [QE]
25.
25. [PS](25-26)“ಇಗೋ, ನಾನು ಸುನ್ನತಿ ಇಲ್ಲದವರ ಸಂಗಡ ಸುನ್ನತಿ ಉಳ್ಳವರೆಲ್ಲರನ್ನೂ, ಈಜಿಪ್ಟನ್ನೂ, ಯೆಹೂದವನ್ನೂ, ಎದೋಮನ್ನೂ, ಅಮ್ಮೋನನ ಮಕ್ಕಳನ್ನೂ, ಮೋವಾಬನ್ನೂ, ಮರುಭೂಮಿಯ ನಿವಾಸಿಗಳಾಗಿರುವ ಕಟ್ಟಕಡೆಯ ಮೂಲೆಯಲ್ಲಿ ಇರುವವರನ್ನೂ ನಾನು ಶಿಕ್ಷಿಸುವ ದಿವಸಗಳು ಬರುತ್ತವೆ. ಏಕೆಂದರೆ ಈ ಜನಾಂಗಗಳವರು ಸುನ್ನತಿಯಿಲ್ಲದವರು. ಇಸ್ರಾಯೇಲಿನ ಮನೆತನದವರೆಲ್ಲರೂ ಹೃದಯದಲ್ಲಿ ಸುನ್ನತಿ ಇಲ್ಲದವರಾಗಿದ್ದಾರೆ,” ಎಂದು ಯೆಹೋವ ದೇವರು ಅನ್ನುತ್ತಾರೆ. [PE]