1. [PS]ಯೆಹೋವ ದೇವರು ಹೀಗೆ ಹೇಳುತ್ತಾರೆ, [PE][QS]“ಇಗೋ, ನಾನು ಬಾಬಿಲೋನಿಗೆ ವಿರೋಧವಾಗಿಯೂ, [QE][QS2]ನನಗೆದುರಾಗಿ ಎದ್ದಿರುವ ಲೇಬ್ ಕಾಮೈ[* ಲೇಬ್ ಕಾಮೈ ರಹಸ್ಯ ಭಾಷೆಯಲ್ಲಿ ಬಾಬಿಲೋನ್. ] ಪ್ರಜೆಗಳ ವಿರೋಧವಾಗಿಯೂ ನಾಶಕಾರಿಯಾದ ಗಾಳಿಬೀಸುವಂತೆ ಮಾಡುವೆನು. [QE]
2. [QS]ವಿದೇಶಿಯರನ್ನು ಬಾಬಿಲೋನಿಗೆ ಕಳುಹಿಸುವೆನು; [QE][QS2]ಅವರು ಅದನ್ನು ತೂರಿ ಅದರ ದೇಶವನ್ನು ಬರಿದು ಮಾಡುವರು; [QE][QS]ಏಕೆಂದರೆ ದುರ್ದಿನದಲ್ಲಿ ಸುತ್ತಲಾಗಿ [QE][QS2]ಅದಕ್ಕೆ ವಿರೋಧವಾಗಿರುವರು. [QE]
3. [QS]ಬಿಲ್ಲು ಬಗ್ಗಿಸುವವನಿಗೆ ವಿರೋಧವಾಗಿಯೂ, [QE][QS2]ಕವಚದಲ್ಲಿ ತನ್ನನ್ನು ಹೆಚ್ಚಿಸಿಕೊಳ್ಳುವವನಿಗೆ ವಿರೋಧವಾಗಿಯೂ [QE][QS2]ಬಿಲ್ಲಿನವನು ತನ್ನ ಬಿಲ್ಲನ್ನು ಬಗ್ಗಿಸಲಿ; [QE][QS]ಅದರ ಯೌವನಸ್ಥರನ್ನು ಕನಿಕರಿಸಬೇಡಿರಿ; [QE][QS2]ಅದರ ಸೈನ್ಯವನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿರಿ. [QE]
4. [QS]ಈ ಪ್ರಕಾರ ಬಾಬಿಲೋನಿಯರ ದೇಶದಲ್ಲಿ ಹತರಾಗಿ ಬೀಳುವರು. [QE][QS2]ಅದರ ಬೀದಿಗಳಲ್ಲಿಯೇ ಕತ್ತಿಗೆ ತುತ್ತಾಗುವರು. [QE]
5. [QS]ಏಕೆಂದರೆ ಅವರ ದೇಶವು ಇಸ್ರಾಯೇಲಿನ [QE][QS2]ಪರಿಶುದ್ಧನಿಗೆ ವಿರೋಧವಾದ ಪಾಪದಿಂದ ತುಂಬಿದ್ದಾಗ್ಯೂ [QE][QS]ಸೇನಾಧೀಶ್ವರ ಯೆಹೋವ ದೇವರು [QE][QS2]ಇಸ್ರಾಯೇಲನ್ನಾಗಲಿ, ಯೆಹೂದವನ್ನಾಗಲಿ ಕೈಬಿಡಲಿಲ್ಲ. [QE][PBR]
6. [QS]“ಬಾಬಿಲೋನಿನೊಳಗಿಂದ ಓಡಿಹೋಗಿರಿ; [QE][QS2]ಒಬ್ಬೊಬ್ಬನು ತನ್ನ ತನ್ನ ಪ್ರಾಣವನ್ನು ತಪ್ಪಿಸಿಕೊಳ್ಳಲಿ; [QE][QS2]ಅದರ ಪಾಪದಲ್ಲಿ ನಾಶವಾಗಬೇಡಿರಿ; [QE][QS]ಏಕೆಂದರೆ ಇದು ಯೆಹೋವ ದೇವರ ಪ್ರತಿದಂಡನೆಯ ಕಾಲವು; [QE][QS2]ಆತನೇ ಅದಕ್ಕೆ ಮುಯ್ಯಿಗೆ ಮುಯ್ಯಿ ಕೊಡುತ್ತಾನೆ. [QE]
7. [QS]ಬಾಬಿಲೋನ್ ಯೆಹೋವ ದೇವರ ಕೈಯಲ್ಲಿ ಭೂಮಿಗೆಲ್ಲಾ [QE][QS2]ಅಮಲೇರಿಸಿದ ಚಿನ್ನದ ಪಾತ್ರೆಯಾಗಿತ್ತು; [QE][QS]ಜನಾಂಗಗಳು ಅದರ ದ್ರಾಕ್ಷಾರಸವನ್ನು ಕುಡಿದವು; [QE][QS2]ಆದ್ದರಿಂದ ಜನಾಂಗಗಳು ಹುಚ್ಚರಾದರು. [QE]
8. [QS]ಇದ್ದಕ್ಕಿದ್ದ ಹಾಗೆ ಬಾಬಿಲೋನ್ ಬಿದ್ದು ಹಾಳಾಗಿದೆ; [QE][QS2]ಅದರ ವಿಷಯ ಗೋಳಾಡಿರಿ; [QE][QS]ಅದರ ನೋವಿಗೆ ತೈಲ ತೆಗೆದುಕೊಳ್ಳಿರಿ; [QE][QS2]ಒಂದು ವೇಳೆ ವಾಸಿಯಾದೀತು. [QE][PBR]
9. [QS]“ ‘ನಾವು ಬಾಬಿಲೋನನ್ನು ವಾಸಿಮಾಡಲು ಪ್ರಯತ್ನಿಸಿದೆವು; [QE][QS2]ಆದರೆ ಅದು ವಾಸಿಯಾಗಲಿಲ್ಲ; [QE][QS]ಅದನ್ನು ಬಿಡು, ನಮ್ಮ ಸ್ವಂತ ದೇಶಗಳಿಗೆ ಹೋಗೋಣ; [QE][QS2]ಅದರ ನ್ಯಾಯ ತೀರ್ವಿಕೆಯು ಆಕಾಶಗಳಿಗೆ ಮುಟ್ಟುತ್ತದೆ; [QE][QS2]ಆಕಾಶಗಳವರೆಗೂ ಏರುತ್ತದೆ.’ [QE][PBR]
10. [QS]“ ‘ಯೆಹೋವ ದೇವರು ನಮ್ಮ ನೀತಿಯನ್ನು ಹೊರಗೆ ತಂದಿದ್ದಾರೆ; [QE][QS2]ಬನ್ನಿ, ನಮ್ಮ ದೇವರಾದ ಯೆಹೋವ ದೇವರ ಕ್ರಿಯೆಯನ್ನು [QE][QS2]ಚೀಯೋನಿನಲ್ಲಿ ಸಾರಿ ಹೇಳೋಣ.’ [QE][PBR]
11. [QS]“ಬಾಣಗಳನ್ನು ಮೆರುಗು ಮಾಡಿರಿ; [QE][QS2]ಡಾಲುಗಳನ್ನು ಎತ್ತಿಕೊಳ್ಳಿರಿ, [QE][QS]ಯೆಹೋವ ದೇವರು ಮೇದ್ಯರ ಅರಸರ ಆತ್ಮವನ್ನು ಎಬ್ಬಿಸಿದ್ದಾರೆ; [QE][QS2]ಆತನ ಆಲೋಚನೆ ಬಾಬಿಲೋನಿಗೆ ವಿರೋಧವಾಗಿ ಅದನ್ನು ನಾಶಮಾಡುವುದಕ್ಕೆ ಇದೆ. [QE][QS]ಏಕೆಂದರೆ ಇದು ಯೆಹೋವ ದೇವರ ಪ್ರತಿದಂಡನೆಯು, [QE][QS2]ಅವರ ದೇವಾಲಯದ ಪ್ರತಿದಂಡನೆಯಾಗಿದೆ. [QE]
12. [QS]ಬಾಬಿಲೋನಿನ ಗೋಡೆಯ ಮೇಲೆ ಧ್ವಜವನ್ನೆತ್ತಿರಿ; [QE][QS2]ಪಹರೆಯನ್ನು ಬಲಪಡಿಸಿರಿ; [QE][QS]ಕಾವಲುಗಾರರನ್ನು ನಿಲ್ಲಿಸಿರಿ; [QE][QS2]ಹೊಂಚಿಕೊಳ್ಳುವವರನ್ನು ಸಿದ್ಧಮಾಡಿರಿ; [QE][QS]ಏಕೆಂದರೆ ಯೆಹೋವ ದೇವರು ಬಾಬಿಲೋನಿನ ನಿವಾಸಿಗಳಿಗೆ ವಿರೋಧವಾಗಿ [QE][QS2]ತಾನು ಹೇಳಿದ್ದನ್ನು ಯೋಚಿಸಿದ್ದನ್ನು ಮಾಡಿದ್ದಾರೆ. [QE]
13. [QS]ಅನೇಕ ನೀರುಗಳ ಬಳಿಯಲ್ಲಿ ವಾಸವಾಗಿರುವವಳೇ, [QE][QS2]ಬಹಳ ದ್ರವ್ಯಗಳುಳ್ಳವಳೇ, [QE][QS]ನಿನ್ನ ಅಂತ್ಯವೂ, [QE][QS2]ನಿನ್ನ ನಾಶನದ ಕಾಲವು ಬಂತು. [QE]
14. [QS]ಸೇನಾಧೀಶ್ವರ ಯೆಹೋವ ದೇವರು ತಮ್ಮ ಮೇಲೆ ಆಣೆಯಿಟ್ಟು: [QE][QS2]ನಿಶ್ಚಯವಾಗಿ ನಾನು ಮಿಡತೆಗಳಷ್ಟು ಅಸಂಖ್ಯ ಜನರಿಂದ ನಿನ್ನನ್ನು ತುಂಬಿಸುತ್ತೇನೆಂದು [QE][QS2]ಅವರು ನಿನಗೆ ವಿರೋಧವಾಗಿ ಆರ್ಭಟವನ್ನು ಎತ್ತುವರು. [QE][PBR]
15. [QS]“ಅವರು ತಮ್ಮ ಶಕ್ತಿಯಿಂದ ಭೂಮಿಯನ್ನು ಸೃಷ್ಟಿಸಿ, [QE][QS2]ತಮ್ಮ ಜ್ಞಾನದಿಂದ ಲೋಕವನ್ನು ಸ್ಥಾಪಿಸಿ, [QE][QS2]ತಮ್ಮ ವಿವೇಕದಿಂದ ಆಕಾಶವನ್ನು ವಿಸ್ತರಿಸಿದ್ದಾರೆ. [QE]
16. [QS]ಅವರ ಗರ್ಜನೆಗೆ ಆಕಾಶದಲ್ಲಿನ ನೀರು ಭೋರ್ಗರೆಯುತ್ತದೆ, [QE][QS2]ಅವರು ಭೂಮಿಯ ಕಟ್ಟಕಡೆಗಳಿಂದ ಮೋಡಗಳನ್ನು ಏಳುವಂತೆ ಮಾಡುತ್ತಾರೆ. [QE][QS]ಮಳೆಗೋಸ್ಕರ ಮಿಂಚನ್ನು ಉಂಟುಮಾಡುತ್ತಾರೆ; [QE][QS2]ತಮ್ಮ ಭಂಡಾರದಿಂದ ಗಾಳಿಯನ್ನು ಬೀಸಮಾಡುತ್ತಾರೆ. [QE][PBR]
17. [QS]“ಪ್ರತಿ ಮನುಷ್ಯನು ತಿಳುವಳಿಕೆ ಇಲ್ಲದವನೂ ಬುದ್ಧಿಹೀನನೂ ಆಗಿದ್ದಾನೆ; [QE][QS2]ತಾನು ಕೆತ್ತಿದ ವಿಗ್ರಹಕ್ಕೋಸ್ಕರ ಪ್ರತಿಯೊಬ್ಬ ಅಕ್ಕಸಾಲಿಗನೂ ನಾಚಿಕೆಪಡುತ್ತಾನೆ; [QE][QS]ಏಕೆಂದರೆ ಅವರ ಎರಕದ ವಿಗ್ರಹಗಳು ಸುಳ್ಳೇ; [QE][QS2]ಅವುಗಳಲ್ಲಿ ಉಸಿರೇ ಇಲ್ಲ. [QE]
18. [QS]ಅವು ವ್ಯರ್ಥ, ಹಾಸ್ಯಾಸ್ಪದದ ಕೆಲಸ; [QE][QS2]ಅವುಗಳ ದಂಡನೆಯ ಕಾಲದಲ್ಲಿ ಅವು ನಾಶವಾಗುವುವು. [QE]
19. [QS]ಯಾಕೋಬ್ಯರ ಪಾಲಾಗಿರುವವರು ಇವುಗಳ ಹಾಗಲ್ಲ; [QE][QS2]ಏಕೆಂದರೆ ಅವರು ಎಲ್ಲವನ್ನು ರೂಪಿಸಿದವರೇ, [QE][QS]ಇಸ್ರಾಯೇಲ್ ಅವರ ಸ್ವಾಸ್ತ್ಯವಾದ ವಂಶ. [QE][QS2]ಅವರ ಹೆಸರು ಸೇನಾಧೀಶ್ವರ ಯೆಹೋವ ದೇವರೇ. [QE][PBR]
20. [QS]“ನೀನು ನನ್ನ ಗದೆಯೂ, [QE][QS2]ನನ್ನ ಯುದ್ಧದ ಆಯುಧಗಳೇ, [QE][QS]ನಿನ್ನಿಂದ ಜನಾಂಗಗಳನ್ನು ಚೂರುಚೂರಾಗಿ ಒಡೆದು ಬಿಡುತ್ತೇನೆ, [QE][QS2]ನಿನ್ನಿಂದ ರಾಜ್ಯಗಳನ್ನು ನಾಶಮಾಡುತ್ತೇನೆ. [QE]
21. [QS]ನಿನ್ನಿಂದ ಕುದುರೆಯನ್ನೂ, ಅದರ ಮೇಲೆ ಹತ್ತಿದವನನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ; [QE][QS2]ನಿನ್ನಿಂದ ರಥವನ್ನೂ, ಅದರಲ್ಲಿ ಸವಾರಿ ಮಾಡುವವನನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ. [QE]
22. [QS]ನಿನ್ನಿಂದ ಗಂಡಸರನ್ನೂ, ಹೆಂಗಸರನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ; [QE][QS2]ನಿನ್ನಿಂದ ಹಿರಿಯರನ್ನೂ, ಕಿರಿಯರನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ; [QE][QS2]ನಿನ್ನಿಂದ ಯುವಕನನ್ನೂ ಯುವತಿಯನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ. [QE]
23. [QS]ನಿನ್ನಿಂದ ಕುರುಬನನ್ನೂ ಅವನ ಮಂದೆಯನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ; [QE][QS2]ನಿನ್ನಿಂದ ಒಕ್ಕಲಿಗನನ್ನೂ ಅವನ ನೊಗದ ಎತ್ತುಗಳನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ; [QE][QS2]ನಿನ್ನಿಂದ ಅಧಿಪತಿಗಳನ್ನೂ ಅಧಿಕಾರಿಗಳನ್ನೂ ಚೂರುಚೂರಾಗಿ ಒಡೆದು ಬಿಡುತ್ತೇನೆ. [QE]
24.
25. [PS]“ಬಾಬಿಲೋನಿನವರು ಮತ್ತು ಕಸ್ದೀಯರು ಚೀಯೋನಿನಲ್ಲಿ ಮಾಡಿದ ಎಲ್ಲಾ ಕೇಡಿಗೆ ಪ್ರತಿಯಾಗಿ ನಾನು ಅವರೆಲ್ಲರಿಗೂ ಚೀಯೋನಿನವರ ಕಣ್ಣೆದುರಿಗೆ ಮುಯ್ಯಿತೀರಿಸುವೆನು” ಎಂದು ಯೆಹೋವ ದೇವರು ಹೇಳುತ್ತಾರೆ. [PE][QS]“ಲೋಕವನ್ನೆಲ್ಲಾ ನಾಶಮಾಡುವ ನಾಶಕ ಪರ್ವತವೇ, [QE][QS2]ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ” [QE][QS2]ಎಂದು ಯೆಹೋವ ದೇವರು ಹೇಳುತ್ತಾರೆ. [QE][QS]“ನಿನ್ನ ಮೇಲೆ ನನ್ನ ಕೈಯನ್ನು ಚಾಚಿ, [QE][QS2]ಬಂಡೆಗಳ ಮೇಲಿನಿಂದ ನಿನ್ನನ್ನು ಹೊರಳಿಸಿ, [QE][QS2]ನಿನ್ನನ್ನು ಸುಟ್ಟ ಬೆಟ್ಟವಾಗಿ ಮಾಡುತ್ತೇನೆ. [QE]
26. [QS]ಒಬ್ಬರೂ ನಿನ್ನಿಂದ ಮೂಲೆಯ ಕಲ್ಲನ್ನಾಗಲಿ, [QE][QS2]ಅಸ್ತಿವಾರದ ಕಲ್ಲನ್ನಾಗಲಿ ತೆಗೆಯರು. [QE][QS2]ನೀನು ಎಂದೆಂದಿಗೂ ಹಾಳಾಗುವೆ,” [QE][QS2]ಎಂದು ಯೆಹೋವ ದೇವರು ಹೇಳುತ್ತಾರೆ. [QE][PBR]
27. [QS]“ದೇಶದಲ್ಲಿ ಧ್ವಜವನ್ನೆತ್ತಿರಿ; [QE][QS2]ಜನಾಂಗಗಳಲ್ಲಿ ತುತೂರಿಯನ್ನೂದಿರಿ; [QE][QS]ಅದಕ್ಕೆ ವಿರೋಧವಾಗಿ ಜನಾಂಗಗಳನ್ನು ಸಿದ್ಧಮಾಡಿರಿ; [QE][QS2]ಅರಾರಾಟ್, ಮಿನ್ನಿ, ಅಷ್ಕೆನಜ್ ರಾಜ್ಯಗಳನ್ನು [QE][QS2]ಅದಕ್ಕೆ ವಿರೋಧವಾಗಿ ಕರೆಯಿರಿ; [QE][QS]ಅದಕ್ಕೆ ವಿರೋಧವಾಗಿ ಸೈನ್ಯಾಧಿಪತಿಯನ್ನು ನೇಮಿಸಿರಿ; [QE][QS2]ಬಿರುಸಾದ ಮಿಡತೆ ದಂಡಿನಂತೆ ಕುದುರೆಗಳನ್ನು ಬರಮಾಡಿರಿ. [QE]
28. [QS]ಅದಕ್ಕೆ ವಿರೋಧವಾಗಿ ಜನಾಂಗಗಳನ್ನೂ, [QE][QS2]ಮೇದ್ಯರ ಅರಸರನ್ನೂ, [QE][QS]ಅದರ ಅಧಿಪತಿಗಳನ್ನೂ, ಅಧಿಕಾರಿಗಳನ್ನೂ, [QE][QS2]ಅವನ ರಾಜ್ಯದ ದೇಶವನ್ನೆಲ್ಲಾ ಸಿದ್ಧಮಾಡಿರಿ. [QE]
29. [QS]ಆಗ ದೇಶವು ನೊಂದು ನಡುಗುವುದು. [QE][QS2]ಏಕೆಂದರೆ ಬಾಬಿಲೋನ್ ದೇಶವು [QE][QS]ನಿರ್ಜನವಾಗಲಿ ಎಂದು ಅದರ ವಿರೋಧವಾಗಿ [QE][QS2]ಯೆಹೋವ ದೇವರ ಉದ್ದೇಶಗಳು ಸ್ಥಿರವಾಗಿವೆ. [QE]
30. [QS]ಬಾಬಿಲೋನಿನ ಪರಾಕ್ರಮಶಾಲಿಗಳು ಯುದ್ಧಮಾಡುವುದನ್ನು ಬಿಟ್ಟಿದ್ದಾರೆ; [QE][QS2]ಅವರ ಭದ್ರಸ್ಥಾನಗಳಲ್ಲಿ ನಿಂತಿದ್ದಾರೆ. [QE][QS]ಅವರ ಪರಾಕ್ರಮತನ ತಪ್ಪಿತು; [QE][QS2]ಅವರು ಬಲಹೀನರಾಗಿದ್ದಾರೆ. [QE][QS]ಆ ದೇಶದ ನಿವಾಸಗಳನ್ನು ಸುಟ್ಟಿದ್ದಾರೆ; [QE][QS2]ಅದರ ಹೆಬ್ಬಾಗಿಲುಗಳು ಮುರಿದುಹೋಗಿವೆ. [QE]
31. [QS]ಒಬ್ಬ ಸುದ್ದಿಗಾರ ಇನ್ನೊಬ್ಬ ಸುದ್ದಿಗಾರನ ಕಡೆ ಓಡುತ್ತಾನೆ. [QE][QS2]ಒಬ್ಬ ದೂತ ಇನ್ನೊಬ್ಬ ದೂತನ ಕಡೆಗೆ ಓಡಿಹೋಗಿ, [QE][QS]ಬಾಬಿಲೋನಿನ ಅರಸನಿಗೆ ಈ ಸಮಾಚಾರವನ್ನು ತಿಳಿಸುತ್ತಾನೆ, [QE][QS2]ನಿನ್ನ ರಾಜಧಾನಿಯನ್ನು ಎಲ್ಲಾ ಕಡೆಯಿಂದ ಆಕ್ರಮಿಸಿದ್ದಾರೆ, [QE]
32. [QS]ಹಾಯ್ಗಡಗಳನ್ನು ಹಿಡಿದಿದ್ದಾರೆ, [QE][QS2]ಜೊಂಡು ಹುಲ್ಲನ್ನು ಸುಟ್ಟುಬಿಟ್ಟಿದ್ದಾರೆ, [QE][QS2]ರಣವೀರರು ಬೆಚ್ಚಿಬಿದ್ದಿದ್ದಾರೆ.” [QE]
33. [PS]ಏಕೆಂದರೆ ಇಸ್ರಾಯೇಲಿನ ದೇವರೂ, ಸರ್ವಶಕ್ತರಾಗಿರುವ ಯೆಹೋವ ದೇವರೂ ಹೇಳುವುದೇನೆಂದರೆ: [PE][QS]“ತುಳಿಯುವ ವೇಳೆಯಲ್ಲಿ ಕಣವು ಹೇಗೋ, [QE][QS2]ಹಾಗೆಯೇ ಬಾಬಿಲೋನಿನ ಮಗಳು ಇದ್ದಾಳೆ. [QE][QS2]ಇನ್ನು ಸ್ವಲ್ಪ ಕಾಲವಾದ ಮೇಲೆ ಅವಳಿಗೆ ಸುಗ್ಗಿಕಾಲ ಬರುವುದು.” [QE][PBR]
34. [QS]“ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ನಮ್ಮನ್ನು ನುಂಗಿಬಿಟ್ಟಿದ್ದಾನೆ. [QE][QS2]ನಮ್ಮನ್ನು ಜಜ್ಜಿದ್ದಾನೆ. [QE][QS2]ನಮ್ಮನ್ನು ಬರೀ ಪಾತ್ರೆಯಾಗಿ ಮಾಡಿದ್ದಾನೆ. [QE][QS]ಘಟಸರ್ಪದ ಹಾಗೆ ನಮ್ಮನ್ನು ನುಂಗಿಬಿಟ್ಟಿದ್ದಾನೆ. [QE][QS2]ನಮ್ಮನ್ನು ರಮ್ಯವಾದವುಗಳಿಂದ ತನ್ನ ಹೊಟ್ಟೆ ತುಂಬಿಸಿದ್ದಾನೆ. [QE][QS2]ನಮ್ಮನ್ನು ಉಗುಳಿಬಿಟ್ಟಿದ್ದಾನೆ. [QE]
35. [QS]ನಮಗೂ, ನಮ್ಮ ಶರೀರಕ್ಕೂ ಮಾಡಿರುವ ಬಲಾತ್ಕಾರವು [QE][QS2]ಬಾಬಿಲೋನಿನ ಮೇಲೆ ಇರಲಿ,” ಎಂದು ಚೀಯೋನ್ ನಿವಾಸಿಗಳು ಹೇಳುತ್ತಾರೆ; [QE][QS]“ಕಸ್ದೀಯರ ನಿವಾಸಿಗಳ ಮೇಲೆ ನನ್ನ ರಕ್ತವು ಇರಲಿ,” [QE][QS2]ಎಂದು ಯೆರೂಸಲೇಮು ಹೇಳುವುದು. [QE]
36. [PS]ಆದ್ದರಿಂದ ಯೆಹೋವ ದೇವರು ಹೀಗೆ ಹೇಳುತ್ತಾರೆ. [PE][QS]“ಇಗೋ, ನಾನು ನಿನ್ನ ನಿಮಿತ್ತ ವ್ಯಾಜ್ಯವಾಡುತ್ತೇನೆ. [QE][QS2]ನಿನಗೋಸ್ಕರ ಪ್ರತಿದಂಡನೆ ಮಾಡುತ್ತೇನೆ. [QE][QS]ಅದರ ಸಮುದ್ರವನ್ನು ಒಣಗಿಸುತ್ತೇನೆ. [QE][QS2]ಅದರ ಬುಗ್ಗೆಯನ್ನು ಬತ್ತಿಹೋಗುವಂತೆ ಮಾಡುತ್ತೇನೆ. [QE]
37. [QS]ಬಾಬಿಲೋನ್ ದಿಬ್ಬಗಳಾಗುವುದು. [QE][QS2]ನಿವಾಸಿಗಳು ಇಲ್ಲದೆ ನರಿಗಳ ವಾಸಸ್ಥಳವಾಗಿ [QE][QS]ಆಶ್ಚರ್ಯಕ್ಕೂ, ನಾಶಕ್ಕೂ, [QE][QS2]ಸಿಳ್ಳಿಡುವಿಕೆಗೂ ಒಳಗಾಗುವುದು. [QE]
38. [QS]ಅವರು ಸಿಂಹಗಳ ಹಾಗೆ ಒಟ್ಟಾಗಿ ಗರ್ಜಿಸುವರು. [QE][QS2]ಸಿಂಹಗಳ ಮರಿಗಳ ಹಾಗೆ ಶಬ್ದಮಾಡುವರು. [QE]
39. [QS]ಅವರು ಉರಿಗೊಂಡಿರುವಾಗ, [QE][QS2]ನಾನು ಅವರಿಗೆ ಔತಣವನ್ನು ಸಿದ್ಧಪಡಿಸಿ, [QE][QS2]ಅವರು ಅದರಿಂದ ಸಂಭ್ರಮಪಟ್ಟು, [QE][QS]ಎಂದಿಗೂ ಎಚ್ಚರಗೊಳ್ಳದೆ, [QE][QS2]ದೀರ್ಘ ನಿದ್ರೆ ಮಾಡುವಂತೆ ತಲೆಗೇರುವತನಕ ಕುಡಿಸುವೆನು,” [QE][QS2]ಎಂದು ಯೆಹೋವ ದೇವರು ಹೇಳುತ್ತಾರೆ. [QE]
40. [QS]“ಕುರಿ, ಟಗರು, ಹೋತಗಳ ಹಾಗೆ [QE][QS2]ಅವರನ್ನು ವಧ್ಯಸ್ಥಾನಕ್ಕೆ ಬರಮಾಡುವೆನು. [QE][QS2]ಇದು ಯೆಹೋವನಾದ ನನ್ನ ನುಡಿ. [QE][PBR]
41. [QS]“ಶೇಷಕ್ ಹೇಗೆ ಶತ್ರುವಶವಾಗಿದೆ, [QE][QS2]ಸಮಸ್ತ ಭೂಮಿಯ ಹೊಗಳಿಕೆಯು ಆಶ್ಚರ್ಯಗೊಂಡಿದೆ; [QE][QS]ಬಾಬಿಲೋನ್ ಜನಾಂಗಗಳೊಳಗೆ [QE][QS2]ಹೇಗೆ ಎಷ್ಟು ನಿರ್ಜನವಾಯಿತು! [QE]
42. [QS]ಸಮುದ್ರವೇ ಬಾಬಿಲೋನಿನ ಮೇಲೆ ನುಗ್ಗಿಬಿಟ್ಟಿದೆ, [QE][QS2]ಲೆಕ್ಕವಿಲ್ಲದೆ ತೆರೆಗಳು ಆ ರಾಜ್ಯವನ್ನು ಮುಚ್ಚಿಬಿಟ್ಟಿವೆ. [QE]
43. [QS]ಕಾಡು, ಕಗ್ಗಾಡು, ಬೆಂಗಾಡು [QE][QS2]ಆಗಿವೆ ಅದರ ನಗರಗಳು. [QE][QS]ಆ ದೇಶದೊಳು ಯಾರೂ ವಾಸಿಸರು, [QE][QS2]ಯಾವ ಮನುಷ್ಯನೂ ಹಾದು ಹೋಗನು. [QE]
44. [QS]ಏಕೆಂದರೆ ನಾನು ಬಾಬಿಲೋನಿನಲ್ಲಿರುವ ಬೇಲ್‌ನನ್ನು ದಂಡಿಸಿ, [QE][QS2]ಅವನು ನುಂಗಿದ್ದನ್ನು ಅವನ ಬಾಯೊಳಗಿಂದ ಹೊರಗೆ ಕಕ್ಕಿಸುವೆನು. [QE][QS]ಇನ್ನು ಮೇಲೆ ಜನಾಂಗಗಳು ಅವನ ಬಳಿಗೆ ಪ್ರವಾಹವಾಗಿ ಬರುವುದಿಲ್ಲ. [QE][QS2]ಹೌದು, ಬಾಬಿಲೋನಿನ ಗೋಡೆ ಬೀಳುವುದು. [QE][PBR]
45. [QS]“ನನ್ನ ಜನರೇ, ಅದರೊಳಗಿಂದ ಹೊರಡಿರಿ. [QE][QS2]ಒಬ್ಬೊಬ್ಬನು ತನ್ನ ತನ್ನ ಪ್ರಾಣವನ್ನು [QE][QS2]ಯೆಹೋವ ದೇವರ ಕೋಪಕ್ಕೆ ತಪ್ಪಿಸಿರಿ. [QE]
46. [QS]ನಿಮ್ಮ ಹೃದಯವು ಕುಂದದ ಹಾಗೆ [QE][QS2]ದೇಶದಲ್ಲಿ ಕಿವಿಗೆ ಬೀಳುವ ಸುದ್ದಿಗೆ ನೀವು ಭಯಪಡದ ಹಾಗೆ, [QE][QS]ಒಂದು ವರ್ಷದಲ್ಲಿ ಒಂದು ಸುದ್ದಿಯೂ [QE][QS2]ಇನ್ನೊಂದು ವರ್ಷದಲ್ಲಿ ಇನ್ನೊಂದು ಸುದ್ದಿಯೂ ಬರುವುದು. [QE][QS]ದೇಶದಲ್ಲಿ ಬಲಾತ್ಕಾರವಿರುವುದು, [QE][QS2]ಆಳುವವನು ಆಳುವವನಿಗೆ ವಿರೋಧವಾಗಿರುವನು. [QE]
47. [QS]ಆದ್ದರಿಂದ ಇಗೋ, ದಿನಗಳು ಬರುವುವು. [QE][QS2]ಆಗ ನಾನು ಬಾಬಿಲೋನಿನ ವಿಗ್ರಹಗಳಿಗೆ ದಂಡಿಸುವೆನು. [QE][QS]ಆದರೆ ದೇಶವೆಲ್ಲಾ ನಾಚಿಕೆಪಡುವುದು. [QE][QS2]ಹತರಾದವರ ದೇಹಗಳು ಅದರ ಮಧ್ಯದಲ್ಲಿ ಅಲ್ಲಿ ಇಲ್ಲಿ ಬಿದ್ದಿವೆ. [QE]
48. [QS]ಆಗ ಭೂಮಿ ಆಕಾಶಗಳೂ, [QE][QS2]ಅಲ್ಲಿನ ಸಮಸ್ತವೂ ಬಾಬಿಲೋನಿನ ನಾಶವನ್ನು ನೋಡಿ [QE][QS]ಜಯಘೋಷ ಮಾಡುವುವು. [QE][QS2]ಹಾಳುಮಾಡುವರು, ಉತ್ತರದಿಂದ ಬಂದು ಹಾಳುಮಾಡುವರು,” [QE][QS2]ಎಂದು ಯೆಹೋವ ದೇವರು ಹೇಳುತ್ತಾರೆ. [QE][PBR]
49. [QS]“ಬಾಬಿಲೋನ್‌ನಿಂದಾಗಿ ಭೂಮಿಯಲ್ಲೆಲ್ಲಾ ಹತರಾದಂತೆಯೇ, [QE][QS2]ಇಸ್ರಾಯೇಲಿನ ಹತ್ಯೆಯಿಂದಾಗಿ ಬಾಬಿಲೋನ್ ಬೀಳಬೇಕು. [QE]
50. [QS]ಖಡ್ಗದಿಂದ ತಪ್ಪಿಸಿಕೊಂಡವರೇ, [QE][QS2]ನಡೆಯಿರಿ, ನಿಲ್ಲಬೇಡಿರಿ. [QE][QS]ದೂರದಲ್ಲಿ ಯೆಹೋವ ದೇವರನ್ನು ಜ್ಞಾಪಕಮಾಡಿಕೊಳ್ಳಿರಿ, [QE][QS2]ಯೆರೂಸಲೇಮು ನಿಮ್ಮ ಮನಸ್ಸಿಗೆ ಬರಲಿ.” [QE][PBR]
51. [QS]“ನಾಚಿಕೆ ಪಡುತ್ತೇವೆ, [QE][QS2]ಏಕೆಂದರೆ ನಿಂದೆಯನ್ನು ಕೇಳಿದ್ದೇವೆ. [QE][QS2]ಅವಮಾನ ನಿಮ್ಮ ಮುಖಗಳನ್ನು ಮುಚ್ಚಿದೆ. [QE][QS]ಏಕೆಂದರೆ ವಿದೇಶಿಗಳು ಯೆಹೋವ ದೇವರ ಆಲಯದ [QE][QS2]ಪರಿಶುದ್ಧ ಸ್ಥಳಗಳಲ್ಲಿ ಪ್ರವೇಶಿಸಿದ್ದಾರೆ.” [QE][PBR]
52. [QS]“ಇಗೋ, ಅಂಥ ದಿನಗಳು ಬರುತ್ತವೆ,” ಎಂದು ಯೆಹೋವ ದೇವರು ಹೇಳುತ್ತಾರೆ, [QE][QS2]“ಅದು ನಾನು ಬಾಬಿಲೋನಿನ ವಿಗ್ರಹಗಳನ್ನು [QE][QS]ದಂಡಿಸುವ ದಿನಗಳು. [QE][QS2]ಆಗ ಆ ದೇಶದೊಳೆಲ್ಲ ಗಾಯಪಟ್ಟವರು ನರಳಾಡುವರು. [QE]
53. [QS]ಬಾಬಿಲೋನ್ ಆಕಾಶಕ್ಕೆ ಏರಿದರೂ, [QE][QS2]ಅದರ ಬಲದ ಉನ್ನತಸ್ಥಾನವನ್ನು ಭದ್ರಮಾಡಿದರೂ, [QE][QS2]ಸೂರೆಮಾಡುವವರು ನನ್ನಿಂದ ಅವಳಿಗೆ ವಿರೋಧವಾಗಿ ಬರುವರು,” [QE][QS2]ಎಂದು ಯೆಹೋವ ದೇವರು ಹೇಳುತ್ತಾರೆ. [QE][PBR]
54. [QS]“ಬಾಬಿಲೋನಿನಿಂದ ಕೂಗುವ ಶಬ್ದವು! [QE][QS2]ಕಸ್ದೀಯರ ದೇಶದಿಂದ ದೊಡ್ಡ ನಾಶದ ಶಬ್ದವೂ ಬರುವುದು. [QE]
55. [QS]ಏಕೆಂದರೆ ಯೆಹೋವ ದೇವರು ಬಾಬಿಲೋನನ್ನು ಸೂರೆಮಾಡಿದ್ದಾರೆ; [QE][QS2]ಅವಳೊಳಗಿಂದ ಮಹಾ ಶಬ್ದವನ್ನು ತೆಗೆದುಹಾಕಿದ್ದಾರೆ; [QE][QS]ಅವಳ ತೆರೆಗಳು ನೀರಿನ ಹಾಗೆ ಘೋಷಿಸುವಾಗ, [QE][QS2]ಅವುಗಳ ಶಬ್ದದ ಧ್ವನಿಯು ಹೊರಟಿತು. [QE]
56. [QS]ಏಕೆಂದರೆ ವಿನಾಶ ಮಾಡುವವನು ಅದರ ಮೇಲೆ ಅಂದರೆ ಬಾಬಿಲೋನಿನ ಮೇಲೆಯೇ ಬಂದಿದ್ದಾನೆ. [QE][QS2]ಅದರ ಪರಾಕ್ರಮಶಾಲಿಗಳು ಸೆರೆಯಾಗಿಬಿಟ್ಟಿದ್ದಾರೆ. [QE][QS2]ಅವಳ ಬಿಲ್ಲುಗಳು ಮುರಿದುಹೋಗಿವೆ. [QE][QS]ಏಕೆಂದರೆ ಪ್ರತಿದಂಡನೆಗಳ ದೇವರಾದ ಯೆಹೋವ ದೇವರು ನಿಶ್ಚಯವಾಗಿ [QE][QS2]ಮುಯ್ಯಿಗೆ ಮುಯ್ಯಿ ತೀರಿಸುವರು. [QE]
57. [QS]ಇದಲ್ಲದೆ ನಾನು ಅವಳ ಪ್ರಧಾನರನ್ನೂ, [QE][QS2]ಅವಳ ಜ್ಞಾನಿಗಳನ್ನೂ, ಅವಳ ಅಧಿಪತಿಗಳನ್ನೂ, [QE][QS]ಅವಳ ಅಧಿಕಾರಿಗಳನ್ನೂ, ಅವಳ ಪರಾಕ್ರಮಶಾಲಿಗಳನ್ನೂ ಮತ್ತರಾಗಿ ಮಾಡುತ್ತೇನೆ. [QE][QS2]ಅವರು ನಿತ್ಯ ನಿದ್ರೆ ಮಾಡುವರು, ಎಚ್ಚರವಾಗುವುದಿಲ್ಲ,” [QE][QS2]ಎಂದು ಸೇನಾಧೀಶ್ವರ ಯೆಹೋವ ದೇವರು ಎಂಬ ಹೆಸರುಳ್ಳ ರಾಜಾಧಿರಾಜರು ಸಾರುತ್ತಾರೆ. [QE]
58. [PS]ಮಾತ್ರವಲ್ಲದೆ ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ: [QE][QS]“ಬಾಬಿಲೋನಿನ ಅಗಲವಾದ ಪೌಳಿಗೋಡೆ ಪೂರ್ಣವಾಗಿ ನೆಲಸಮವಾಗುವುದು. [QE][QS2]ಅವಳ ಎತ್ತರವಾದ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗುವುವು; [QE][QS]ಜನರು ವ್ಯರ್ಥಕ್ಕಾಗಿಯೂ, [QE][QS2]ಪ್ರಜೆಗಳು ಬೆಂಕಿಗಾಗಿಯೂ ಕಷ್ಟಪಟ್ಟು ಆಯಾಸಪಡುವರು.” [QE]
59. [PS]ಪ್ರವಾದಿಯಾದ ಯೆರೆಮೀಯನು ಮಹ್ಸೇಯನ ಮಗನಾದ ನೇರೀಯನ ಮಗ ಸೆರಾಯನಿಗೆ, ಅವನು ಯೆಹೂದದ ಅರಸನಾದ ಚಿದ್ಕೀಯನ ಸಂಗಡ, ಇವನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಬಾಬಿಲೋನಿಗೆ ಹೋದಾಗ ಆಜ್ಞಾಪಿಸಿದ ವಾಕ್ಯವು. ಆ ಸೆರಾಯನು ಅಂಗರಕ್ಷಕ ಸೇನೆಯ ನಾಯಕನಾಗಿದ್ದನು.
60. ಹೀಗೆ ಯೆರೆಮೀಯನು ಬಾಬಿಲೋನಿನ ಮೇಲೆ ಬರುವ ಕೇಡನ್ನೆಲ್ಲಾ ಬಾಬಿಲೋನಿಗೆ ವಿರೋಧವಾಗಿ ಬರೆದಿರುವ ಈ ವಾಕ್ಯಗಳನ್ನೆಲ್ಲಾ ಒಂದು ಗ್ರಂಥದಲ್ಲಿ ಬರೆದನು.
61. ಯೆರೆಮೀಯನು ಸೆರಾಯನಿಗೆ ಹೇಳಿದ್ದೇನೆಂದರೆ, “ನೀನು ಬಾಬಿಲೋನಿಗೆ ಬಂದು
62. ಈ ವಾಕ್ಯಗಳನ್ನೆಲ್ಲಾ ಓದುತ್ತಿರುವಾಗ ಹೇಳತಕ್ಕದ್ದೇನೆಂದರೆ, ‘ಓ ಯೆಹೋವ ದೇವರೇ, ಈ ಸ್ಥಳಕ್ಕೆ ವಿರೋಧವಾಗಿ ಅದರಲ್ಲಿ ಮನುಷ್ಯರಾಗಲಿ, ಮೃಗಗಳಾಗಲಿ, ನಿವಾಸಿಗಳಾಗಲಿ ಎಂದಿಗೂ ಇರದಂತೆ, ಅದು ಸದಾಕಾಲ ಹಾಳಾಗಿಯೇ ಉಳಿಯಲಿ,’ ಎಂದು ನೀವೇ ಮಾತನಾಡ್ದಿದೀರಿ.
63. ನೀನು ಈ ಗ್ರಂಥವನ್ನು ಓದಿ ಮುಗಿಸಿದ ಮೇಲೆ, ಅದಕ್ಕೆ ಕಲ್ಲು ಕಟ್ಟಿ, ಅದನ್ನು ಯೂಫ್ರೇಟೀಸಿನ ಮಧ್ಯದಲ್ಲಿ ಬಿಸಾಡಿ,
64. ಹೀಗೆ ಹೇಳು, ‘ಈ ಪ್ರಕಾರ ಬಾಬಿಲೋನ್ ಮುಳುಗಿ ಹೋಗುವುದು. ನಾನು ಅವಳ ಮೇಲೆ ತರುವ ಕೇಡಿನೊಳಗಿಂದ ಏಳದು. ಅವರು ಬೀಳುವರು.’ ” [QE][PBR] [PBR] [PS]ಇಲ್ಲಿಯ ತನಕ ಯೆರೆಮೀಯನ ವಾಕ್ಯಗಳು. [QE][PBR]