1. {#1ಒಬ್ಬನೂ ನೀತಿವಂತನು ಇಲ್ಲ } [QS]“ಯೆರೂಸಲೇಮಿನ ಬೀದಿಗಳಲ್ಲಿ ಅತ್ತಿತ್ತ ಓಡಾಡಿ, [QE][QS2]ನ್ಯಾಯವನ್ನು ಮಾಡುವವನೂ, [QE][QS2]ಸತ್ಯವನ್ನು ಹುಡುಕುವವನೂ [QE][QS]ನಿಮಗೆ ಒಬ್ಬನಾದರೂ ಸಿಕ್ಕುವನೋ? [QE][QS2]ಅವಳ ವಿಶಾಲ ಸ್ಥಳಗಳಲ್ಲಿ ನೋಡಿ, [QE][QS]ತಿಳಿದು ಹುಡುಕಿರಿ; [QE][QS2]ಸಿಕ್ಕಿದರೆ ಅವಳಿಗೆ ಮನ್ನಿಸುವೆನು. [QE]
2. [QS]ಅವರು, ‘ಯೆಹೋವ ದೇವರು ಜೀವದಾಣೆ,’ ಎಂದು ಪ್ರಮಾಣ ಮಾಡಿದರೂ [QE][QS2]ಆ ಪ್ರಮಾಣ ಸುಳ್ಳಾಗಿಯೇ ಇರುತ್ತದೆ.” [QE][PBR]
3. [QS]ಓ ಯೆಹೋವ ದೇವರೇ, ನಿಮ್ಮ ಕಣ್ಣುಗಳು ಸತ್ಯದ ಮೇಲೆ ಇವೆಯಲ್ಲವೋ? [QE][QS2]ಅವರನ್ನು ಹೊಡೆದಿರಿ, ಆದರೆ ಅವರಿಗೆ ದುಃಖವಾಗಲಿಲ್ಲ; [QE][QS2]ಅವರನ್ನು ತುಳಿದಿರಿ, ಆದರೆ ತಿದ್ದುಕೊಳ್ಳಲು ಒಪ್ಪಲಿಲ್ಲ. [QE][QS]ತಮ್ಮ ಮುಖಗಳನ್ನು ಬಂಡೆಗಿಂತ ಕಠಿಣ ಮಾಡಿಕೊಂಡಿದ್ದಾರೆ. [QE][QS2]ಅವರು ಪಶ್ಚಾತ್ತಾಪಕ್ಕೆ ನಿರಾಕರಿಸಿದ್ದಾರೆ. [QE]
4. [QS]ಆದ್ದರಿಂದ ನಾನು, “ನಿಶ್ಚಯವಾಗಿ ಇವರು ಬಡವರು ಮತ್ತು ಬುದ್ಧಿಹೀನರು. [QE][QS2]ಏಕೆಂದರೆ, ಯೆಹೋವ ದೇವರ ಮಾರ್ಗವನ್ನೂ ತಮ್ಮ ದೇವರ ನ್ಯಾಯವಿಧಿಗಳನ್ನೂ ಅರಿಯರು. [QE]
5. [QS]ನಾನು ನಾಯಕರ ಬಳಿಗೆ ಹೋಗಿ, [QE][QS2]ಅವರ ಸಂಗಡ ಮಾತನಾಡುವೆನು. [QE][QS]ಏಕೆಂದರೆ, ಅವರು ಯೆಹೋವ ದೇವರ ಮಾರ್ಗವನ್ನೂ [QE][QS2]ತಮ್ಮ ದೇವರ ನ್ಯಾಯವಿಧಿಗಳನ್ನೂ ತಿಳಿದಿದ್ದಾರೆ,” [QE][QS]ಆದರೆ ಇವರು ಕೂಡ ಒಮ್ಮತವಾಗಿ ನೊಗವನ್ನು ಮುರಿದು, [QE][QS2]ಬಂಧನಗಳನ್ನು ಹರಿದುಬಿಟ್ಟಿದ್ದಾರೆ. [QE]
6. [QS]ಹೀಗಿರುವುದರಿಂದ ಅಡವಿಯ ಸಿಂಹವು ಅವರನ್ನು ದಾಳಿಮಾಡುವುದು. [QE][QS2]ಕಾಡಿನ ತೋಳವು ಅವರನ್ನು ಸೂರೆಮಾಡುವುದು. [QE][QS]ಚಿರತೆ ಅವರ ಪಟ್ಟಣಗಳ ಮೇಲೆ ಕಾವಲಾಗಿರುವುದು. [QE][QS2]ಅಲ್ಲಿಂದ ಹೊರಗೆ ಬರುವವರೆಲ್ಲರೂ ಸೀಳಲಾಗುವರು. [QE][QS]ಏಕೆಂದರೆ, ಅವರ ದ್ರೋಹಗಳು ಬಹಳವಾಗಿವೆ. [QE][QS2]ಅವರ ಹಿಂಜಾರುವಿಕೆಯು ಹೆಚ್ಚಾಗಿವೆ. [QE][PBR]
7. [QS]ಇದಕ್ಕಾಗಿ ನಾನು ನಿನ್ನನ್ನು ಹೇಗೆ ಮನ್ನಿಸಲಿ? [QE][QS2]ನಿನ್ನ ಮಕ್ಕಳು ನನ್ನನ್ನು ಬಿಟ್ಟು [QE][QS2]ದೇವರಲ್ಲದವುಗಳ ಮೇಲೆ ಆಣೆ ಇಟ್ಟುಕೊಂಡಿದ್ದಾರೆ. [QE][QS]ನಾನು ಅವರನ್ನು ತೃಪ್ತಿಪಡಿಸಿದ ಮೇಲೆ, [QE][QS2]ಅವರು ವ್ಯಭಿಚಾರ ಮಾಡಿದ್ದಾರೆ. [QE][QS2]ವೇಶ್ಯೆಯರ ಮನೆಗಳಲ್ಲಿ ಗುಂಪಾಗಿ ಸೇರಿದ್ದಾರೆ. [QE]
8. [QS]ಅವರು ಕುದುರೆಗಳಂತೆ, ಬಲಶಾಲಿ ಮತ್ತು ಕಾಮವನ್ನು ಹೊಂದಿದವರಾಗಿದ್ದಾರೆ. [QE][QS2]ತಮ್ಮ ತಮ್ಮ ನೆರೆಯವರ ಹೆಂಡತಿಯರನ್ನು ಕಂಡು ಹೇಕರಿಸುತ್ತಾರೆ. [QE]
9. [QS]ಇವುಗಳ ನಿಮಿತ್ತ ನಾನು ಶಿಕ್ಷಿಸಬಾರದೇ? [QE][QS2]ಇಂಥಾ ಜನಾಂಗಕ್ಕೆ ನನ್ನ ಪ್ರಾಣವು [QE][QS]ಮುಯ್ಯಿಗೆ ಮುಯ್ಯಿ ತೀರಿಸುವುದಿಲ್ಲವೋ? [QE][QS2]ಎಂದು ಯೆಹೋವ ದೇವರು ಹೇಳುತ್ತಾರೆ. [QE][PBR]
10. [QS]ಅವಳ ದ್ರಾಕ್ಷಿತೋಟಗಳ ಮೂಲಕ ಹೋಗಿ ಅವುಗಳನ್ನು ಹಾಳುಮಾಡಿರಿ. [QE][QS2]ಆದರೆ ಸಂಪೂರ್ಣವಾಗಿ ನಾಶಮಾಡಬೇಡಿರಿ. [QE][QS]ಅದರ ರೆಂಬೆಗಳನ್ನು ತೆಗೆದುಹಾಕಿರಿ [QE][QS2]ಏಕೆಂದರೆ ಅವು ಯೆಹೋವ ದೇವರಿಗೆ ಸೇರಿದವುಗಳಲ್ಲ. [QE]
11. [QS]ಇಸ್ರಾಯೇಲನ ಮನೆತನದವರೂ, [QE][QS2]ಯೆಹೂದನ ಮನೆತನದವರೂ ನನಗೆ ಬಹಳ ವಂಚನೆ ಮಾಡಿದ್ದಾರೆ, [QE][QS2]ಎಂದು ಯೆಹೋವ ದೇವರು ಹೇಳುತ್ತಾರೆ. [QE][PBR]
12. [QS]ಆ ಜನರು ಯೆಹೋವ ದೇವರನ್ನು ಅಲ್ಲಗಳೆದಿದ್ದಾರೆ. [QE][QS2]“ಆತ ಏನು ಮಾಡಿಯಾನು? [QE][QS]ನಮಗೆ ಕೇಡು ಬರುವುದೂ ಇಲ್ಲ, [QE][QS2]ಖಡ್ಗವಾಗಲಿ, ಕ್ಷಾಮವಾಗಲಿ ನಮ್ಮ ಕಣ್ಣಿಗೆ ಬೀಳುವುದೂ ಇಲ್ಲ, [QE]
13. [QS]ಪ್ರವಾದಿಗಳು ಆಡುವುದೆಲ್ಲಾ ಬರೀ ಗಾಳಿ ಮಾತುಗಳು, [QE][QS2]ದೈವೋಕ್ತಿ ಎಂಬುದು ಅವುಗಳಲ್ಲಿ ಇಲ್ಲ, [QE][QS2]ಅವರು ಹೇಳುವುದೆಲ್ಲಾ ಅವರಿಗೇ ತಗಲಲಿ,” ಎಂದುಕೊಂಡಿದ್ದಾರೆ. [QE]
14. [PS]ಆದ್ದರಿಂದ ಸೇನಾಧೀಶ್ವರ ಯೆಹೋವ ದೇವರು ಯೆರೆಮೀಯನಿಗೆ ಹೀಗೆನ್ನುತ್ತಾರೆ: [PE][QS]“ಇಗೋ, ಅವರು ಹೀಗೆ ಮಾತಾಡಿದ್ದರಿಂದ [QE][QS2]ನಿನ್ನ ಬಾಯಲ್ಲಿನ ನನ್ನ ಮಾತುಗಳನ್ನು ಬೆಂಕಿಯನ್ನಾಗಿಸುವೆನು, [QE][QS2]ಆ ಜನರನ್ನು ಅದಕ್ಕೆ ಸೌದೆಯನ್ನಾಗಿಸುವೆನು. ಆ ಬೆಂಕಿ ಅವರನ್ನು ಸುಟ್ಟುಹಾಕುವುದು.” [QE]
15. [QS]ಯೆಹೋವ ದೇವರು ಹೀಗೆ ಹೇಳುತ್ತಾರೆ, “ಓ ಇಸ್ರಾಯೇಲ ಮನೆತನವೇ, [QE][QS2]ನಾನು ದೂರದಿಂದ ನಿಮ್ಮ ಮೇಲೆ ಒಂದು ಜನಾಂಗವನ್ನು ತರಿಸುತ್ತೇನೆ. [QE][QS]ಅದು ಬಲವಾದ ಜನಾಂಗವು. ಪೂರ್ವಕಾಲದ ಜನಾಂಗವು, [QE][QS2]ಆ ಜನಾಂಗದ ಭಾಷೆಯನ್ನು ನೀನರಿಯೆ; [QE][QS2]ಇಲ್ಲವೆ ಅವರು ಹೇಳುವಂಥದ್ದು ನಿನಗೆ ತಿಳಿಯದು. [QE]
16. [QS]ಅವರ ಬತ್ತಳಿಕೆ ತೆರೆದ ಸಮಾಧಿಯ ಹಾಗಿದೆ. [QE][QS2]ಅವರೆಲ್ಲರೂ ಪರಾಕ್ರಮಶಾಲಿಗಳೇ. [QE]
17. [QS]ನಿನ್ನ ಪುತ್ರರು, ನಿನ್ನ ಪುತ್ರಿಯರು ನಿನ್ನ ಪೈರನ್ನೂ, [QE][QS2]ನಿನ್ನ ರೊಟ್ಟಿಯನ್ನೂ ನುಂಗಿಬಿಡುವರು. [QE][QS]ನಿನ್ನ ಕುರಿಗಳನ್ನೂ, ನಿನ್ನ ದನಗಳನ್ನೂ ನುಂಗಿಬಿಡುವರು. [QE][QS2]ನಿನ್ನ ದ್ರಾಕ್ಷಿ ಲತೆಗಳನ್ನೂ, [QE][QS]ಅಂಜೂರದ ಗಿಡಗಳನ್ನೂ ನುಂಗಿಬಿಡುವರು. [QE][QS2]ನೀನು ನಂಬಿಕೊಂಡಿದ್ದ ಕೋಟೆಯುಳ್ಳ ಪಟ್ಟಣಗಳನ್ನು ಖಡ್ಗದಿಂದ ಹಾಳುಮಾಡುವರು. [QE]
18. [PS]“ಆದರೂ ಆ ದಿವಸಗಳಲ್ಲಿಯೂ ನಾನು ನಿಮ್ಮನ್ನು ಸಂಪೂರ್ಣವಾಗಿ ಅಳಿಸಿಬಿಡುವುದಿಲ್ಲ,” ಎಂದು ಯೆಹೋವ ದೇವರು ಅನ್ನುತ್ತಾರೆ.
19. “ ‘ನಮ್ಮ ದೇವರಾದ ಯೆಹೋವ ದೇವರು ನಮಗೆ ಯಾತಕ್ಕೆ ಇವುಗಳನ್ನೆಲ್ಲಾ ಮಾಡುತ್ತಾರೆ,’ ಎಂದು ನೀವು ಕೇಳುವಾಗ, ನೀನು ಅವರಿಗೆ ಹೀಗೆ ಹೇಳಬೇಕು: ‘ನೀವು ನನ್ನನ್ನು ಬಿಟ್ಟು, ನಿಮ್ಮ ದೇಶದಲ್ಲಿ ಬೇರೆ ದೇವರುಗಳನ್ನು ಸೇವಿಸಿದ ಹಾಗೆ, ನಿಮ್ಮದಲ್ಲದ ದೇಶದಲ್ಲಿ ಅನ್ಯರನ್ನು ಸೇವಿಸುವಿರಿ.’ [PE]
20. [QS]“ಯಾಕೋಬ ವಂಶಜರಲ್ಲಿ ಇದನ್ನು ತಿಳಿಸಿರಿ. [QE][QS2]ಯೆಹೂದದಲ್ಲಿ ಪ್ರಕಟಿಸಿರಿ. [QE]
21. [QS]ಏನೆಂದರೆ, ಓ ಮೂಢ ಬುದ್ಧಿಹೀನ ಜನರೇ, [QE][QS2]ಕಣ್ಣುಗಳಿದ್ದು ಕಾಣದವರೇ, [QE][QS2]ಕಿವಿಗಳಿದ್ದು ಕೇಳದವರೇ, ಇದನ್ನು ಕೇಳಿರಿ. [QE]
22. [QS]ನೀವು ನನಗೆ ಭಯಪಡುವುದಿಲ್ಲವೋ?” [QE][QS2]ಎಂದು ಯೆಹೋವ ದೇವರು ಹೇಳುತ್ತಾರೆ. [QE][QS]“ನನ್ನ ಸಮ್ಮುಖದಲ್ಲಿ ನಡುಗುವುದಿಲ್ಲವೋ? [QE][QS2]ನಾನು ಮರಳನ್ನು ನಿತ್ಯ ನೇಮವಾಗಿ ಸಮುದ್ರಕ್ಕೆ, [QE][QS]ಅದು ದಾಟಕೂಡದ ಹಾಗೆ ಮೇರೆಯಾಗಿಟ್ಟಿದ್ದೇನೆ. [QE][QS2]ಅದರ ತೆರೆಗಳು ಎದ್ದರೂ ದಡ ಮೀರಲಾರವು; ಘೋಷಿಸಿದರೂ ಅದನ್ನು ದಾಟಲಾರವು. [QE]
23. [QS]ಆದರೆ ಈ ಜನರಿಗೆ ತಿರುಗಿ ಬೀಳುವಂಥ, ಪ್ರತಿಭಟಿಸುವಂಥ ಹೃದಯ ಉಂಟು. [QE][QS2]ಅವರು ತಿರುಗಿಬಿದ್ದು ಹೋಗಿಬಿಟ್ಟಿದ್ದಾರೆ. [QE]
24. [QS]ತಮ್ಮ ಹೃದಯದಲ್ಲಿ, [QE][QS2]‘ಮುಂಗಾರು ಹಿಂಗಾರು ಮಳೆಯನ್ನು ಅದರದರ ಕಾಲದಲ್ಲಿ ನಮಗೆ ಕೊಡುವಂಥ [QE][QS]ಸುಗ್ಗಿಗೆ ನೇಮಕವಾದ ವಾರಗಳನ್ನು ನಮಗೆ ಪ್ರತ್ಯೇಕಿಸುವಂಥ [QE][QS2]ನಮ್ಮ ದೇವರಾದ ಯೆಹೋವ ದೇವರಿಗೆ ಭಯಪಡೋಣ,’ ಎಂದುಕೊಳ್ಳುವುದಿಲ್ಲ. [QE]
25. [QS]ನಿಮ್ಮ ಅಕ್ರಮಗಳು ಇವುಗಳನ್ನು ತಪ್ಪಿಸಿ ಇವೆ; [QE][QS2]ನಿಮ್ಮ ಪಾಪಗಳು ಒಳ್ಳೆಯವುಗಳನ್ನು ನಿಮ್ಮಿಂದ ಹಿಂದೆಗೆದಿವೆ. [QE][PBR]
26. [QS]“ಏಕೆಂದರೆ ನನ್ನ ಜನರಲ್ಲಿ ದುಷ್ಟರು ಸಿಕ್ಕಿದ್ದಾರೆ. [QE][QS2]ಬೇಟೆಗಾರನ ಹಾಗೆ ಹೊಂಚುಹಾಕುತ್ತಾರೆ; [QE][QS]ಪಕ್ಷಿಗಳನ್ನು ಬಲೆಗೆ ಬೀಳಿಸುವ ಮನುಷ್ಯರಂತೆ ಕಾಯುತ್ತಿದ್ದಾರೆ [QE][QS2]ಮತ್ತು ಜನರನ್ನು ಹಿಡಿಯಲು ಬಲೆ ಹಾಕುತ್ತಾರೆ. [QE]
27. [QS]ಪಂಜರವು ಪಕ್ಷಿಗಳಿಂದ ತುಂಬಿರುವ ಪ್ರಕಾರ, [QE][QS2]ಅವರ ಮನೆಗಳು ಮೋಸದಿಂದ ತುಂಬಿವೆ. [QE][QS]ಆದ್ದರಿಂದ ಅವರು ಶಕ್ತಿವಂತರೂ, ಐಶ್ವರ್ಯವಂತರೂ ಆಗಿದ್ದಾರೆ. [QE]
2. [QS2]ಅವರು ಕೊಬ್ಬಿದ್ದಾರೆ ಮತ್ತು ನಯವಾಗಿ ಬೆಳೆದಿದ್ದಾರೆ. [QE][QS]ಅವರ ಕೆಟ್ಟ ಕೆಲಸಗಳಿಗೆ ಮಿತಿಯಿಲ್ಲ; [QE][QS2]ದಿಕ್ಕಿಲ್ಲದವನ ವ್ಯಾಜ್ಯವನ್ನು ವಿಚಾರಿಸುವುದಿಲ್ಲ; [QE][QS]ಆದರೂ ಅವರು ಸಫಲವಾಗುತ್ತಾರೆ, [QE][QS2]ಬಡವರ ನ್ಯಾಯವನ್ನು ತೀರಿಸರು. [QE]
29. [QS]ಇವುಗಳ ನಿಮಿತ್ತ ನಾನು ದಂಡಿಸಬಾರದೋ?” [QE][QS2]ಎಂದು ಯೆಹೋವ ದೇವರು ಹೇಳುತ್ತಾರೆ. [QE][QS]“ಇಂಥಾ ಜನಾಂಗಕ್ಕೆ [QE][QS2]ನನ್ನ ಪ್ರಾಣವು ಮುಯ್ಯಿಗೆ ಮುಯ್ಯಿ ತೀರಿಸುವುದಿಲ್ಲವೋ? [QE][PBR]
30. [QS]“ಭಯಂಕರವಾದ ಮತ್ತು ಆಶ್ಚರ್ಯವಾದ [QE][QS2]ಕಾರ್ಯವು ದೇಶದಲ್ಲಿ ನಡೆಯುತ್ತದೆ. [QE]
31. [QS]ಏನೆಂದರೆ, ಪ್ರವಾದಿಗಳು ಸುಳ್ಳಾಗಿ ಪ್ರವಾದಿಸುತ್ತಾರೆ. [QE][QS2]ಯಾಜಕರು ತಮ್ಮ ಅಧಿಕಾರದಿಂದ ದೊರೆತನ ಮಾಡುತ್ತಾರೆ. [QE][QS]ನನ್ನ ಜನರು ಅದನ್ನು ಪ್ರೀತಿ ಮಾಡುತ್ತಾರೆ. [QE][QS2]ಆದರೆ ಅಂತ್ಯದಲ್ಲಿ ನೀವು ಏನು ಮಾಡುವಿರಿ? [QE]