1. {#1ದೇವರು ಮತ್ತು ದೇವತೆಗಳು } [PS]ಇಸ್ರಾಯೇಲಿನ ವಂಶದವರೇ, ಯೆಹೋವ ದೇವರು ನಿಮಗೆ ಹೇಳುವ ವಾಕ್ಯವನ್ನು ಕೇಳಿರಿ.
2. ಯೆಹೋವ ದೇವರು ಹೀಗೆ ಹೇಳುತ್ತಾರೆ: [PE][QS]ಬೇರೆ ಜನಾಂಗಗಳ ಆಚರಣೆಗಳನ್ನು ಅನುಸರಿಸಬೇಡಿರಿ. [QE][QS2]ಅವರು ಆಕಾಶದ ಗುರುತುಗಳಿಗೆ ಹೆದರುತ್ತಾರೆ. [QE][QS2]ನೀವು ಅವುಗಳಿಗೆ ಹೆದರಬೇಡಿರಿ. [QE]
3. [QS]ಜನಾಂಗಗಳ ಪದ್ಧತಿಗಳು ವ್ಯರ್ಥವಾಗಿವೆ. [QE][QS2]ಹೇಗೆಂದರೆ, ಅಡವಿಯಲ್ಲಿ ಒಬ್ಬನು ಮರವನ್ನು ಕಡಿಯುತ್ತಾನೆ. [QE][QS2]ಅದು ಕೊಡಲಿಯಿಂದ ಕಡಿದ ಬಡಿಗೆಯವನ ಕೈಕೆಲಸವೇ. [QE]
4. [QS]ಬೆಳ್ಳಿಯಿಂದಲೂ ಬಂಗಾರದಿಂದಲೂ ಅದನ್ನು ಅಲಂಕರಿಸುತ್ತಾರೆ. [QE][QS2]ಮೊಳೆಗಳಿಂದಲೂ ಸುತ್ತಿಗೆಗಳಿಂದಲೂ ಚಲಿಸದ ಹಾಗೆ [QE][QS2]ಅದನ್ನು ಬಿಗಿಸುತ್ತಾರೆ. [QE]
5. [QS]ಇಂಥಾ ಬೊಂಬೆಗಳು ಸೌತೆಕಾಯಿ ತೋಟದ ಬೆದರುಗಂಬದಂತಿವೆ, [QE][QS2]ಅವರ ವಿಗ್ರಹಗಳು ಮಾತನಾಡುವುದಿಲ್ಲ. [QE][QS]ಅವುಗಳನ್ನು ಹೊತ್ತುಕೊಳ್ಳತಕ್ಕದ್ದು, [QE][QS2]ಏಕೆಂದರೆ ಅವು ನಡೆಯಲಾರವು. [QE][QS]ಅವುಗಳಿಗೆ ಭಯಪಡಬೇಡಿರಿ. [QE][QS2]ಏಕೆಂದರೆ, ಅವು ಕೆಟ್ಟದ್ದನ್ನು ಮಾಡಲಾರವು. [QE][QS2]ಒಳ್ಳೆಯದನ್ನು ಮಾಡುವುದೂ ಸಹ ಅವುಗಳಲ್ಲಿ ಇಲ್ಲ. [QE][PBR]
6. [QS]ಓ ಯೆಹೋವ ದೇವರೇ, ನಿಮ್ಮ ಹಾಗೆ ಯಾರೂ ಇಲ್ಲ. [QE][QS2]ನೀವು ಮಹೋತ್ತಮರು, [QE][QS2]ನಿಮ್ಮ ಹೆಸರು ಪರಾಕ್ರಮದಲ್ಲಿ ಮಹತ್ತರವಾದದ್ದು. [QE]
7. [QS]ಓ ಜನಾಂಗಗಳ ಅರಸರಾದವರೇ, [QE][QS2]ನಿಮಗೆ ಭಯಪಡದವನ್ಯಾರು? [QE][QS2]ಏಕೆಂದರೆ, ನಿಮಗೆ ಅದು ಸಲ್ಲತಕ್ಕದ್ದು. [QE][QS]ಏಕೆಂದರೆ, ಜನಾಂಗಗಳ ಎಲ್ಲಾ ಜ್ಞಾನಿಗಳಲ್ಲಿಯೂ, [QE][QS2]ಅವುಗಳ ಎಲ್ಲಾ ರಾಜ್ಯಗಳಲ್ಲಿಯೂ [QE][QS2]ನಿಮ್ಮ ಹಾಗೆ ಯಾರೂ ಇಲ್ಲ. [QE][PBR]
8. [QS]ಆದರೆ ಅವರು ಮಂದರೂ ಮೂರ್ಖರೂ ಆಗಿದ್ದಾರೆ. [QE][QS2]ಅವರಿಗೆ ವ್ಯರ್ಥವಾದ ಮರ, ಬೊಂಬೆಗಳಿಂದ ಬೋಧನೆಯಾಗಿವೆ. [QE]
9. [QS]ಬೆಳ್ಳಿಯ ತಗಡುಗಳನ್ನು ತಾರ್ಷೀಷಿನಿಂದಲೂ, [QE][QS2]ಬಂಗಾರವನ್ನು ಊಫಜಿನಿಂದ ತರುತ್ತಾರೆ. [QE][QS]ಅದು ಕೆತ್ತನೆಯವನ ಕೆಲಸವು ಮತ್ತು ಎರಕ ಹೊಯ್ಯುವವನ ಕೈಯಿಂದ ಉಂಟಾದವುಗಳೂ ಆಗಿವೆ. [QE][QS2]ನೀಲಿಯೂ ಧೂಮ್ರ ವರ್ಣವೂ ಅವುಗಳ ವಸ್ತ್ರವಾಗಿದೆ. [QE][QS2]ಅವುಗಳೆಲ್ಲಾ ಕೌಶಲ್ಯಗಾರರ ಕೈಕೆಲಸವೇ. [QE]
10. [QS]ಆದರೆ ಯೆಹೋವ ದೇವರು ನಿಜವಾದ ದೇವರಾಗಿದ್ದಾರೆ. [QE][QS2]ಅವರು ಜೀವಸ್ವರೂಪರಾದ ದೇವರೂ, ನಿತ್ಯನಾದ ಅರಸರೂ ಆಗಿದ್ದಾರೆ. [QE][QS]ಅವರ ರೌದ್ರದಿಂದ ಭೂಮಿ ಕಂಪಿಸುವುದು. [QE][QS2]ಅವರ ಉಗ್ರತೆಯನ್ನು ಜನಾಂಗಗಳು ತಾಳಲಾರವು. [QE]
11.
12. [PS]“ನೀವು ಅವರಿಗೆ ಹೀಗೆ ಹೇಳಬೇಕು: ‘ಆಕಾಶಗಳನ್ನೂ ಭೂಮಿಯನ್ನೂ ಉಂಟು ಮಾಡದ ದೇವರುಗಳು, ಭೂಮಿಯ ಮೇಲಿನಿಂದಲೂ ಈ ಆಕಾಶದ ಕೆಳಗಿನಿಂದಲೂ ನಾಶವಾಗುವುವು.’ ” [PE][QS]ಆದರೆ ದೇವರು ತಮ್ಮ ಶಕ್ತಿಯಿಂದ ಭೂಮಿಯನ್ನು ಸೃಷ್ಟಿಸಿ, [QE][QS2]ತಮ್ಮ ಜ್ಞಾನದಿಂದ ಲೋಕವನ್ನು ಸ್ಥಾಪಿಸಿ, [QE][QS2]ತಮ್ಮ ವಿವೇಕದಿಂದ ಆಕಾಶವನ್ನು ವಿಸ್ತರಿಸಿದ್ದಾರೆ. [QE]
13. [QS]ಅವರ ಗರ್ಜನೆಗೆ ಆಕಾಶದಲ್ಲಿನ ನೀರು ಭೋರ್ಗರೆಯುತ್ತದೆ, [QE][QS2]ಅವರು ಭೂಮಿಯ ಕಟ್ಟಕಡೆಗಳಿಂದ ಮೋಡಗಳನ್ನು ಏಳುವಂತೆ ಮಾಡುತ್ತಾರೆ. [QE][QS]ಮಳೆಗೋಸ್ಕರ ಮಿಂಚನ್ನು ಉಂಟುಮಾಡುತ್ತಾರೆ. [QE][QS2]ತಮ್ಮ ಭಂಡಾರದಿಂದ ಗಾಳಿಯನ್ನು ಬೀಸಮಾಡುತ್ತಾರೆ. [QE][PBR]
14. [QS]ಪ್ರತಿ ಮನುಷ್ಯನು ತಿಳುವಳಿಕೆ ಇಲ್ಲದವನೂ ಬುದ್ಧಿಹೀನನೂ ಆಗಿದ್ದಾನೆ. [QE][QS2]ತಾನು ಕೆತ್ತಿದ ವಿಗ್ರಹಕ್ಕೋಸ್ಕರ ಪ್ರತಿಯೊಬ್ಬ ಅಕ್ಕಸಾಲಿಗನೂ ನಾಚಿಕೆಪಡುತ್ತಾನೆ. [QE][QS]ಏಕೆಂದರೆ ಅವರ ಎರಕದ ವಿಗ್ರಹಗಳು ಸುಳ್ಳೇ, [QE][QS2]ಅವುಗಳಲ್ಲಿ ಉಸಿರೇ ಇಲ್ಲ. [QE]
15. [QS]ಅವು ವ್ಯರ್ಥ, ಹಾಸ್ಯಾಸ್ಪದದ ಕೆಲಸ. [QE][QS2]ಅವುಗಳ ದಂಡನೆಯ ಕಾಲದಲ್ಲಿ ಅವು ನಾಶವಾಗುವುವು. [QE]
16. [QS]ಯಾಕೋಬ್ಯರ ಪಾಲಾಗಿರುವವರು ಇವುಗಳ ಹಾಗಲ್ಲ. [QE][QS2]ಏಕೆಂದರೆ ಅವರು ಎಲ್ಲವನ್ನು ರೂಪಿಸಿದವರೇ, [QE][QS]ಇಸ್ರಾಯೇಲ್ ಅವರ ಸ್ವಾಸ್ತ್ಯವಾದ ವಂಶ. [QE][QS2]ಅವರ ಹೆಸರು ಸೇನಾಧೀಶ್ವರ ಯೆಹೋವ ದೇವರೇ. [QE]
17. {#1ಸಮೀಪಿಸುವ ಶತ್ರು ಬಾಧೆ } [QS]ಮುತ್ತಿಗೆಗೆ ಒಳಗಾದವರೇ, ನಿಮ್ಮ ದೇಶ ಬಿಡಲು [QE][QS2]ನಿಮ್ಮ ಸೊತ್ತುಗಳನ್ನು ಕೂಡಿಸಿರಿ. [QE]
18. [QS]ಏಕೆಂದರೆ, ಯೆಹೋವ ದೇವರು ಹೀಗೆ ಹೇಳುತ್ತಾರೆ: [QE][QS2]“ಇಗೋ, ನಾನು ಈ ಒಂದೇ ಸಾರಿ [QE][QS2]ದೇಶದ ನಿವಾಸಿಗಳನ್ನು ಕವಣೆಯಿಂದ ಎಸೆದುಬಿಡುತ್ತೇನೆ. [QE][QS]ಅವರಿಗೆ ತಗಲುವ ಹಾಗೆ [QE][QS2]ಅವರನ್ನು ಸಂಕಟಪಡಿಸುತ್ತೇನೆ.” [QE][PBR]
19. [QS]ನನ್ನ ನೋವಿನ ನಿಮಿತ್ತ ನನಗೆ ಅಯ್ಯೋ, [QE][QS2]ನನ್ನ ಗಾಯವು ವಾಸಿಪಡಿಸಲಾಗದು. [QE][QS]ಆದರೆ ನಾನು ನಿಶ್ಚಯವಾಗಿ, [QE][QS2]“ಇದು ನನ್ನ ರೋಗ, ಇದನ್ನು ನಾನು ಸಹಿಸಲೇಬೇಕಾಗಿದೆ,” ಎಂದೆನು. [QE]
20. [QS]ನನ್ನ ಗುಡಾರವು ಸೂರೆಯಾಯಿತು; [QE][QS2]ನನ್ನ ಹಗ್ಗಗಳೆಲ್ಲಾ ಹರಿದಿವೆ. [QE][QS]ನನ್ನ ಮಕ್ಕಳು ನನ್ನನ್ನು ಬಿಟ್ಟು ಹೋಗಿದ್ದಾರೆ; ಅವರು ಇಲ್ಲ. [QE][QS2]ಇನ್ನು ಮೇಲೆ ನನ್ನ ಡೇರೆಯನ್ನು ಹರಡುವುದಕ್ಕೂ, [QE][QS2]ನನ್ನ ಪರದೆಗಳನ್ನು ನಿಲ್ಲಿಸುವುದಕ್ಕೂ ಒಬ್ಬನೂ ಇಲ್ಲ. [QE]
21. [QS]ಏಕೆಂದರೆ, ಕುರುಬರು ಪಶುಗಳಂತಾದರು. [QE][QS2]ಅವರು ಯೆಹೋವ ದೇವರನ್ನು ಹುಡುಕಲಿಲ್ಲ. [QE][QS]ಆದ್ದರಿಂದ ಅವರು ಸಫಲವಾಗುವುದಿಲ್ಲ. [QE][QS2]ಅವರ ಮಂದೆಗಳೆಲ್ಲಾ ಚದರಿಸಲಾಗುವುವು. [QE]
22. [QS]ಇಗೋ, ಯೆಹೂದದ ಪಟ್ಟಣಗಳನ್ನು ಹಾಳು ಮಾಡುವುದಕ್ಕೂ, [QE][QS2]ನರಿಗಳ ಹಕ್ಕೆಯನ್ನಾಗಿ ಮಾಡುವುದಕ್ಕೂ, [QE][QS]ಸುದ್ದಿಯ ಶಬ್ದವೂ, [QE][QS2]ಉತ್ತರ ದೇಶದಿಂದ ಮಹಾ ಗಲಭೆಯೂ ಬರುತ್ತದೆ. [QE]
23. {#1ಯೆರೆಮೀಯನ ಪ್ರಾರ್ಥನೆ } [QS]ಓ ಯೆಹೋವ ದೇವರೇ, ಮನುಷ್ಯನ ಮಾರ್ಗವು ತನ್ನಲ್ಲಿಲ್ಲವೆಂದೂ, [QE][QS2]ತನ್ನ ಹೆಜ್ಜೆ ನೆಟ್ಟಗೆ ಮಾಡುವುದು ನಡೆಯುವ ಮನುಷ್ಯನದ್ದಲ್ಲವೆಂದೂ ಬಲ್ಲೆನು. [QE]
24. [QS]ಓ ಯೆಹೋವ ದೇವರೇ, ನನ್ನನ್ನು ಶಿಸ್ತುಪಡಿಸಿರಿ. ಆದರೆ ಮಿತಿಮೀರಿ ದಂಡಿಸಬೇಡಿರಿ, [QE][QS2]ನಿಮ್ಮ ಕೋಪದಲ್ಲಿ ಅಲ್ಲ. [QE][QS2]ಇಲ್ಲವಾದರೆ ನಾನು ಇಲ್ಲದೆಹೋಗುವೆನು. [QE]
25. [QS]ನಿಮ್ಮನ್ನು ತಿಳಿಯದವರ ಮೇಲೆಯೂ, [QE][QS2]ನಿಮ್ಮ ಹೆಸರನ್ನು ಅರಿಯದ ದೇಶಗಳ ಮೇಲೆಯೂ, [QE][QS2]ನಿಮ್ಮ ಕೋಪವನ್ನು ಸುರಿದುಬಿಡಿರಿ. [QE][QS]ಏಕೆಂದರೆ, ಅವರು ಯಾಕೋಬ್ಯರನ್ನು ನುಂಗಿಬಿಟ್ಟಿದ್ದಾರೆ. [QE][QS2]ಹೌದು, ಅವರನ್ನು ನುಂಗಿದ್ದಲ್ಲದೆ, [QE][QS2]ಅವರ ಸ್ವದೇಶವನ್ನು ಸಹ ನಾಶಮಾಡಿದ್ದಾರೆ. [QE]