1.
2. [PS]ಆದರೂ ಸಂಕಟಪಟ್ಟ ದೇಶಕ್ಕೆ ಅಂಧಕಾರವಿನ್ನಿಲ್ಲ. ಹಿಂದಿನ ಕಾಲದಲ್ಲಿ ಜೆಬುಲೂನ್ ನಾಡು ಮತ್ತು ನಫ್ತಾಲಿ ನಾಡುಗಳನ್ನು ಅವರು ಅವಮಾನಕ್ಕೆ ಗುರಿಮಾಡಿ, ಅನಂತರ ಯೊರ್ದನಿನ ಆಚೆಯ ಸೀಮೆ, ಸಮುದ್ರದ ಕಡೆಗಿರುವ ಸೀಮೆ, ಇತರ ಜನರಿರುವ ಗಲಿಲಾಯ ನಾಡು, ಈ ಪ್ರಾಂತವನ್ನೆಲ್ಲಾ ಘನಪಡಿಸಿದ್ದಾರೆ. [PE][QS]ಕತ್ತಲೆಯಲ್ಲಿ ನಡೆಯುವ ಈ ಜನರಿಗೆ [QE][QS2]ಮಹಾ ಬೆಳಕು ಕಾಣಿಸಿತು, [QE][QS]ಮರಣದ ನೆರಳಿನ ದೇಶದಲ್ಲಿ ವಾಸಿಸುವವರ ಮೇಲೆ [QE][QS2]ಬೆಳಕು ಉದಯಿಸಿತು. [QE]
3. [QS]ನೀವು ಜನಾಂಗವನ್ನು ವೃದ್ಧಿಗೊಳಿಸಿದ್ದೀರಿ [QE][QS2]ಮತ್ತು ಸಂತೋಷವನ್ನು ಹೆಚ್ಚಿಸಿದ್ದೀರಿ. [QE][QS]ಸುಗ್ಗಿ ಕಾಲದ ಸಂತೋಷದಂತೆಯೂ, [QE][QS2]ಕೊಳ್ಳೆಯನ್ನು ಹಂಚಿಕೊಳ್ಳುವಾಗ [QE][QS]ಉಲ್ಲಾಸಿಸುವ ಹಾಗೆಯೂ ನಿಮ್ಮ [QE][QS2]ಮುಂದೆ ಸಂತೋಷಿಸುವರು. [QE]
4. [QS]ಏಕೆಂದರೆ ಅವನ ನೊಗವನ್ನೂ, [QE][QS2]ಬೆನ್ನನ್ನು ಹೊಡೆದ ಕೋಲನ್ನೂ, [QE][QS]ಬಿಟ್ಟೀ ಹಿಡಿದವನ ದೊಣ್ಣೆಯನ್ನೂ, [QE][QS2]ಮಿದ್ಯಾನಿನ ದಿನದಲ್ಲಿ ಮುರಿದಂತೆ ಮುರಿದುಬಿಟ್ಟಿದ್ದೀರಿ. [QE]
5. [QS]ಯುದ್ಧವೀರರ ಪ್ರತಿ ಯುದ್ಧವು ಗಲಿಬಿಲಿಯ ಗದ್ದಲದಿಂದ [QE][QS2]ರಕ್ತದಲ್ಲಿ ಹೊರಳಾಡಿಸಿದ ವಸ್ತ್ರಗಳು ಆಗಿರುತ್ತವೆ. [QE][QS]ಆದರೆ ಇವು ಬೆಂಕಿಗೆ ಆಹುತಿಯಾಗುತ್ತವೆ. [QE][QS2]ಅದು ಬೆಂಕಿಗೆ ಇಂಧನವಾಗಿರುತ್ತದೆ. [QE]
6. [QS]ಏಕೆಂದರೆ ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, [QE][QS2]ಆ ಮಗನನ್ನು ನಮಗಾಗಿ ಕೊಡಲಾಗಿದೆ. [QE][QS2]ಆಡಳಿತವು ಅವರ ಬಾಹುವಿನ ಮೇಲಿರುವುದು, [QE][QS]ಅದ್ಭುತವಾದವರು ಸಮಾಲೋಚಕರು, [QE][QS2]ಪರಾಕ್ರಮಿಯಾದ ದೇವರು, ನಿತ್ಯರಾದ ತಂದೆ, [QE][QS2]ಸಮಾಧಾನದ ಪ್ರಭು, ಎಂಬುದು ಅವರ ಹೆಸರಾಗಿರುವುದು. [QE]
7. [QS]ಅವರ ಆಡಳಿತದ ಶ್ರೇಷ್ಠತೆ ಮತ್ತು ಶಾಂತಿಗೆ ಅಂತ್ಯವಿಲ್ಲ. ಅವರ ಮುಖಾಂತರ ದಾವೀದನ [QE][QS2]ಸಿಂಹಾಸನದ ಆಡಳಿತವು ಅಭಿವೃದ್ಧಿಯಾಗುವುದು, [QE][QS]ದಾವೀದನ ರಾಜ್ಯವು ಇಂದಿನಿಂದ ಯಾವಾಗಲೂ [QE][QS2]ನೀತಿನ್ಯಾಯಗಳ ಮೂಲಕ ಸ್ಥಾಪಿತವಾಗಿ ಸ್ಥಿರಗೊಳ್ಳುವುದು, [QE][QS]ಸೇನಾಧೀಶ್ವರ ಯೆಹೋವ ದೇವರ ಅನುಗ್ರಹವು [QE][QS2]ಇದನ್ನು ನೆರವೇರಿಸುವುದು. [QE]
8. {#1ಇಸ್ರಾಯೇಲರ ವಿರುದ್ಧ ದೇವರ ರೌದ್ರ } [QS]ಯೆಹೋವ ದೇವರು ಯಾಕೋಬನಿಗೆ ವಿರೋಧವಾಗಿ ಒಂದು ಮಾತನ್ನು ಹೇಳಿ ಕಳುಹಿಸಿದರು, [QE][QS2]ಅದು ಇಸ್ರಾಯೇಲರಿಗೆ ತಗುಲಿತು. [QE]
9. [QS]ಗರ್ವದಿಂದಲೂ, ಹೆಮ್ಮೆಯಿಂದಲೂ [QE][QS2]ಹೇಳಿಕೊಳ್ಳುವ ಎಲ್ಲಾ ಜನರಿಗೂ [QE][QS]ಎಫ್ರಾಯೀಮ್ಯರಿಗೂ ಸಮಾರ್ಯದ ನಿವಾಸಿಗಳೆಲ್ಲರಿಗೂ [QE][QS2]ಈ ಮಾತು ಗೊತ್ತಾಗುವುದು. ಅದೇನೆಂದರೆ, [QE]
10. [QS]“ಇಟ್ಟಿಗೆಗಳು ಬಿದ್ದು ಹೋದರೂ [QE][QS2]ಕೆತ್ತಿದ ಕಲ್ಲುಗಳಿಂದ ಕಟ್ಟುವೆವು. [QE][QS]ಅತ್ತಿಮರಗಳನ್ನು ಕಡಿದಿದ್ದರೂ [QE][QS2]ಅಲ್ಲಿಯೇ ನಾವು ದೇವದಾರು ವೃಕ್ಷಗಳನ್ನು ನೆಡುವೆವು,” [QE]
11. [QS]ಹೀಗಿರುವುದರಿಂದ ಯೆಹೋವ ದೇವರು ರೆಚೀನನ ವೈರಿಗಳನ್ನು [QE][QS2]ಅವನಿಗೆ ವಿರೋಧವಾಗಿ ಎಬ್ಬಿಸಿ, [QE]
12. [QS]ಅವನ ಶತ್ರುಗಳಾದ ಪೂರ್ವದಿಂದ ಅರಾಮ್ಯರನ್ನು ಮುಂದೆಯೂ, [QE][QS2]ಪಶ್ಚಿಮದಿಂದ ಫಿಲಿಷ್ಟಿಯರನ್ನು ಹಿಂದೆಯೂ ಒಟ್ಟುಗೂಡಿಸುವರು. [QE][PBR] [QS]ಅವರು ಇಸ್ರಾಯೇಲನ್ನು ತೆರೆದ ಬಾಯಿಂದ ನುಂಗಿಬಿಡುವರು. [QE][QS2]ಏಕೆಂದರೆ, ಇಷ್ಟೆಲ್ಲಾ ಆದರೂ ದೇವರ ಕೋಪವು ತೀರದೆ, ಅವರ ಕೈ ಇನ್ನೂ ಚಾಚಿಯೇ ಇದೆ. [QE][PBR]
13. [QS]ಆದರೂ ಜನರು ತಮ್ಮನ್ನು ಶಿಕ್ಷಿಸಿದ ದೇವರ ಕಡೆಗೆ ತಿರುಗದೆಯೂ, [QE][QS2]ಸೇನಾಧೀಶ್ವರ ಯೆಹೋವ ದೇವರನ್ನು ಹುಡುಕದೆಯೂ ಇದ್ದರು. [QE]
14. [QS]ಆದಕಾರಣ ಯೆಹೋವ ದೇವರು ಇಸ್ರಾಯೇಲಿನಿಂದ ತಲೆ [QE][QS]ಬಾಲಗಳನ್ನೂ ಖರ್ಜೂರದ ಕೊಂಬೆಗಳನ್ನೂ ಒಂದೇ ದಿನದಲ್ಲಿ ಕಡಿದುಹಾಕುವರು. [QE]
15. [QS]ಹಿರಿಯನು ಮತ್ತು ಘನವುಳ್ಳವನು ತಲೆಯಾಗಿರುವನು, [QE][QS2]ಸುಳ್ಳು ಬೋಧಿಸುವ ಪ್ರವಾದಿಯು ಬಾಲವಾಗಿರುವನು. [QE]
16. [QS]ಈ ಜನರನ್ನು ನಡೆಸುವವರು ದಾರಿ ತಪ್ಪಿಸುವವರಾಗಿದ್ದಾರೆ, [QE][QS2]ಅವರನ್ನು ಹಿಂಬಾಲಿಸುವವರು ನಾಶವಾಗುವರು. [QE]
17. [QS]ಹೀಗಿರಲು ಕರ್ತದೇವರು ಅವರ ಯೌವನಸ್ಥರಲ್ಲಿ ಆನಂದಿಸುವುದಿಲ್ಲ. [QE][QS2]ಅವರ ಅನಾಥರನ್ನೂ, ವಿಧವೆಯರನ್ನೂ ಕರುಣಿಸುವುದಿಲ್ಲ. [QE][QS]ಏಕೆಂದರೆ, ಪ್ರತಿಯೊಬ್ಬನು ಕಪಟಿಯೂ, [QE][QS2]ಕೇಡು ಮಾಡುವವನೂ ಆಗಿದ್ದಾನೆ. [QE][PBR] [QS]ಎಲ್ಲರ ಬಾಯಿಯೂ ಮೂರ್ಖತನದ ಮಾತುಗಳನ್ನು ಆಡುತ್ತದೆ. [QE][QS2]ಆದ್ದರಿಂದ ಇಷ್ಟೆಲ್ಲಾ ಆದರೂ ದೇವರ ಕೋಪವು ತೀರದೆ, ಅವರ ಕೈ ಇನ್ನೂ ಚಾಚಿಯೇ ಇದೆ. [QE][PBR]
18. [QS]ದುಷ್ಟತ್ವವು ಬೆಂಕಿಯಂತೆ ಉರಿದು ದತ್ತೂರಿ, [QE][QS2]ಮುಳ್ಳುಗಳನ್ನು ನುಂಗಿಬಿಟ್ಟು, [QE][QS]ಅಡವಿಯ ಪೊದೆಗಳನ್ನು ಹತ್ತಿಕೊಳ್ಳಲು, [QE][QS2]ಅದು ಹೊಗೆ ಹೊಗೆಯಾಗಿ ಸುತ್ತಿಕೊಂಡು ಮೇಲಕ್ಕೆ ಏರುತ್ತದೆ. [QE]
19. [QS]ಸೇನಾಧೀಶ್ವರ ಯೆಹೋವ ದೇವರ ಕೋಪದಿಂದ [QE][QS2]ದೇಶವು ಒಣಗಿಹೋಗಿದೆ, [QE][QS]ಜನರು ಉರಿಯುವ ಸೌದೆಯಂತಿದ್ದಾರೆ. [QE][QS2]ಯಾವ ಮನುಷ್ಯನೂ ತನ್ನ ಸಹೋದರನನ್ನು ಉಳಿಸುವುದಿಲ್ಲ. [QE]
20. [QS]ಅವನು ಬಲಗಡೆಯಲ್ಲಿರುವುದನ್ನು ಕಿತ್ತುಕೊಂಡು [QE][QS2]ತಿಂದರೂ ಹಸಿದೇ ಇರುವನು, [QE][QS]ಅವನು ಎಡಗಡೆಯಲ್ಲಿರುವುದನ್ನು ತಿಂದರೂ [QE][QS2]ಅವು ಅವನನ್ನು ತೃಪ್ತಿಪಡಿಸಲಾರವು. [QE][QS]ಒಬ್ಬೊಬ್ಬನೂ ತನ್ನ ನೆರೆಯವನನ್ನು [QE][QS2]ಹಾನಿ ಮಾಡುತ್ತಿದ್ದಾನೆ. [QE]
21. [QS]ಹೀಗೆ ಮನಸ್ಸೆಯು ಎಫ್ರಾಯೀಮನ್ನು ಮತ್ತು ಎಫ್ರಾಯೀಮು ಮನಸ್ಸೆಯನ್ನು ಹಾನಿ ಮಾಡುತ್ತಿವೆ. [QE][QS2]ಅವರು ಒಟ್ಟಾಗಿ ಸೇರಿ ಯೆಹೂದಕ್ಕೆ ವಿರೋಧವಾಗಿರುವರು. [QE][PBR] [QS]ಇಷ್ಟೆಲ್ಲಾ ಆದರೂ ಅವರ ಕೋಪವು ತೀರದೆ, [QE][QS2]ಅವರ ಕೈ ಇನ್ನೂ ಚಾಚಿಯೇ ಇದೆ. [QE][PBR] [PBR]