1. {#1ದೇವರ ಕೋಪದ ಹಾಗು ವಿಮೋಚನೆಯ ದಿನ } [QS]ಎದೋಮಿನಿಂದಲೂ ರಕ್ತಾಂಬರ ಧರಿಸಿಕೊಂಡು [QE][QS2]ಬೊಚ್ರದಿಂದಲೂ ಬರುವ ಇವನ್ಯಾರು? [QE][QS]ಪ್ರಭೆಯುಳ್ಳ ವಸ್ತ್ರವನ್ನು ತೊಟ್ಟುಕೊಂಡವನಾಗಿ, [QE][QS2]ತನ್ನ ಮಹಾ ಪರಾಕ್ರಮದಲ್ಲಿ ಸಂಚಾರ ಮಾಡುವ ಇವನ್ಯಾರು? [QE][PBR] [QS]“ನೀತಿಯನ್ನು ಘೋಷಿಸುವವನೂ, [QE][QS2]ರಕ್ಷಿಸಲು ಬಲಿಷ್ಠನೂ ನಾನೇ.” [QE][PBR]
2. [QS]ನಿನ್ನ ವಸ್ತ್ರಗಳು ಏಕೆ ಕೆಂಪಾದವು? [QE][QS2]ನಿನ್ನ ಬಟ್ಟೆಗಳು ಏಕೆ ದ್ರಾಕ್ಷಿಯನ್ನು ತುಳಿಯುವವನ ಹಾಗಿವೆ? [QE][PBR]
3. [QS]“ದ್ರಾಕ್ಷಿಯನ್ನು ತೊಟ್ಟಿಯಲ್ಲಿ ನಾನೊಬ್ಬನೇ ತುಳಿದಿದ್ದೇನೆ. [QE][QS2]ಜನಾಂಗಗಳಲ್ಲಿ ಒಬ್ಬನಾದರೂ ನನ್ನ ಸಂಗಡ ಇರಲಿಲ್ಲ. [QE][QS]ನನ್ನ ಕೋಪದಲ್ಲಿ ಅವರನ್ನು ತುಳಿದಿದ್ದೇನೆ, [QE][QS2]ನನ್ನ ಉರಿಯಲ್ಲಿ ಅವರನ್ನು ಜಜ್ಜಿದ್ದೇನೆ. [QE][QS]ಆದ್ದರಿಂದ ಅವರ ರಕ್ತವು ನನ್ನ ಬಟ್ಟೆಗಳ ಮೇಲೆ ಸಿಡಿದು, [QE][QS2]ನನ್ನ ವಸ್ತ್ರಕ್ಕೆ ಮೆತ್ತಿಕೊಂಡಿದೆ; [QE]
4. [QS]ಏಕೆಂದರೆ ಮುಯ್ಯಿಗೆ ಮುಯ್ಯಿ ತೀರಿಸುವ ದಿವಸವು ನನ್ನ ಹೃದಯದಲ್ಲಿದೆ. [QE][QS2]ನಾನು ವಿಮೋಚಿಸಿದವರ ವರುಷವು ಬಂತು. [QE]
5. [QS]ನಾನು ನೋಡಲು ಸಹಾಯಕರು ಯಾರೂ ಇರಲಿಲ್ಲ, [QE][QS2]ಉದ್ಧಾರ ಮಾಡುವವನು ಇಲ್ಲದ್ದರಿಂದ ಆಶ್ಚರ್ಯಪಟ್ಟೆನು. [QE][QS]ಆಗ ನನ್ನ ಸ್ವಂತ ಬಾಹುವು ನನಗೆ ರಕ್ಷಣೆಯನ್ನು ಉಂಟುಮಾಡಿತು. [QE][QS2]ನನ್ನ ಕೋಪವೇ ನನಗೆ ಆಧಾರವಾಯಿತು. [QE]
6. [QS]ನನ್ನ ಕೋಪದಲ್ಲಿ ಜನಾಂಗಗಳನ್ನು ತುಳಿದುಬಿಟ್ಟೆನು. [QE][QS2]ನನ್ನ ಉರಿಯಲ್ಲಿ ಅವರನ್ನು ಕುಡಿಯುವಂತೆ ಮಾಡಿದೆನು. [QE][QS2]ಅವರ ರಕ್ತವನ್ನು ಭೂಮಿಗೆ ಸುರಿಸಿದೆನು.” [QE]
7. {#1ಸ್ತುತಿ ಮತ್ತು ಪ್ರಾರ್ಥನೆ } [QS]ಯೆಹೋವ ದೇವರು ನಮಗೆ ಮಾಡಿದ್ದೆಲ್ಲದರ ಪ್ರಕಾರ, [QE][QS2]ಯೆಹೋವ ದೇವರ ಪ್ರೀತಿ ಕೃಪೆಗಳನ್ನೂ, [QE][QS2]ಯೆಹೋವ ದೇವರ ಕಾರ್ಯಗಳನ್ನು ಸ್ತೋತ್ರಗಳನ್ನೂ ಜ್ಞಾಪಕಪಡಿಸುವೆನು. [QE][QS]ಆತನು ತನ್ನ ಅಂತಃಕರುಣೆಯ ಪ್ರಕಾರವೂ, [QE][QS2]ತನ್ನ ಕೃಪೆಯ ಮಹಾ ಒಳ್ಳೆಯತನದ ಪ್ರಕಾರವೂ, [QE][QS2]ಇಸ್ರಾಯೇಲಿನ ಮನೆಯವರಿಗೆ ದೊಡ್ಡ ಉಪಕಾರ ಮಾಡಿದನಲ್ಲಾ. [QE]
8. [QS]ಆತನು ನಿಶ್ಚಯವಾಗಿ, “ಅವರು ನನ್ನ ಜನರೇ, [QE][QS2]ಸುಳ್ಳಾಡದ ಮಕ್ಕಳೇ!” ಎಂದು ಹೇಳಿದನು. [QE][QS2]ಆದ್ದರಿಂದ ಅವರಿಗೆ ರಕ್ಷಕನಾಗಿದ್ದನು. [QE]
9. [QS]ಅವರಿಗೆ ಬಂದ ಎಲ್ಲಾ ಇಕ್ಕಟ್ಟಿನಲ್ಲಿ ಆತನಿಗೆ ಇಕ್ಕಟ್ಟಾಯಿತು. [QE][QS2]ಆತನ ಸಮ್ಮುಖದ ದೂತನು ಅವರನ್ನು ರಕ್ಷಿಸಿದನು. [QE][QS]ತನ್ನ ಪ್ರೀತಿಯಲ್ಲಿಯೂ, ತನ್ನ ಕನಿಕರದಲ್ಲಿಯೂ [QE][QS2]ಆತನೇ ಅವರನ್ನು ವಿಮೋಚಿಸಿದನು. [QE][QS2]ಪೂರ್ವಕಾಲದ ದಿವಸಗಳಲ್ಲೆಲ್ಲಾ ಅವರನ್ನು ಎತ್ತಿಕೊಂಡು ಹೊತ್ತುಕೊಂಡನು. [QE]
10. [QS]ಆದರೆ ಅವರು ತಿರುಗಿಬಿದ್ದು, [QE][QS2]ಆತನ ಪರಿಶುದ್ಧಾತ್ಮನನ್ನು ದುಃಖಪಡಿಸಿದರು. [QE][QS]ಆದ್ದರಿಂದ ಆತನು ಬೇರೆಯಾಗಿ ಅವರಿಗೆ ಶತ್ರುವಾದನು. [QE][QS2]ಆತನೇ ಅವರಿಗೆ ವಿರೋಧವಾಗಿ ಯುದ್ಧಮಾಡಿದನು. [QE][PBR]
11. [QS]ಆಗ ಆತನು ಪೂರ್ವಕಾಲದ ದಿವಸಗಳನ್ನೂ, [QE][QS2]ಮೋಶೆಯನ್ನೂ, ಅವನ ಜನರನ್ನೂ ಜ್ಞಾಪಕಮಾಡಿಕೊಂಡು [QE][QS]“ಅವರನ್ನು ತನ್ನ ಮಂದೆಯ ಕುರುಬನ ಸಂಗಡ [QE][QS2]ಸಮುದ್ರದೊಳಗಿಂದ ಸುರಕ್ಷಿತವಾಗಿ ಮೇಲಕ್ಕೆ ಬರಮಾಡಿದವನು ಎಲ್ಲಿ? [QE][QS]ಅವರ ಮಧ್ಯದಲ್ಲಿ ತನ್ನ [QE][QS2]ಪರಿಶುದ್ಧಾತ್ಮನನ್ನು ಇಟ್ಟವನು ಎಲ್ಲಿ? [QE]
12. [QS]ಮೋಶೆಯ ಬಲಗೈಯ ಮುಖಾಂತರ ತನ್ನ [QE][QS2]ಬಲವಾದ ಮಹಿಮೆಯುಳ್ಳ ತೋಳಿನಿಂದ ಅವರನ್ನು ನಡೆಸಿದವನೂ, [QE][QS]ತನಗೆ ನಿತ್ಯವಾದ ಹೆಸರನ್ನು ಉಂಟುಮಾಡುವ ಹಾಗೆ [QE][QS2]ಅವರ ಮುಂದೆ ಜನರಾಶಿಯನ್ನೂ ಇಬ್ಬಾಗಿಸಿದವನು ಎಲ್ಲಿ? [QE]
13. [QS]ಅಡವಿಯಲ್ಲಿ ಕುದುರೆಯಂತೆ ಅಗಾಧಗಳಲ್ಲಿ [QE][QS2]ಅವರನ್ನು ಎಡವದ ಹಾಗೆ ನಡೆಸಿದವನು ಎಲ್ಲಿ?” [QE]
14. [QS]ಪಶುವು ತಗ್ಗಿಗೆ ಇಳಿಯುವ ಪ್ರಕಾರ, [QE][QS2]ಯೆಹೋವ ದೇವರ ಆತ್ಮರು ಅವರಿಗೆ ವಿಶ್ರಾಂತಿಯನ್ನು ಕೊಟ್ಟರು. [QE][QS]ಈ ಪ್ರಕಾರ ನೀವು ನಿಮಗೆ ಮಹಿಮೆಯುಳ್ಳ ಹೆಸರನ್ನು [QE][QS2]ಉಂಟುಮಾಡುವುದಕ್ಕಾಗಿ, ನಿಮ್ಮ ಜನರನ್ನು ನಡಿಸಿದಿರಿ. [QE][PBR]
15. [QS]ಆಕಾಶದಿಂದ ಕೆಳಗೆ ನೋಡಿರಿ, [QE][QS2]ನಿಮ್ಮ ಪವಿತ್ರವೂ ಮಹಿಮೆಯೂ ಆದ ನಿಮ್ಮ ಸಿಂಹಾಸನದಿಂದ ದೃಷ್ಟಿಸಿ ನೋಡಿರಿ. [QE][QS]ನಿಮ್ಮ ಆಸಕ್ತಿಯೂ, ನಿಮ್ಮ ಪರಾಕ್ರಮವೂ, ನಿಮ್ಮ ಹೃದಯದ ಘೋಷವೂ, [QE][QS2]ನಮ್ಮ ವಿಷಯವಾದ ನಿಮ್ಮ ಕರುಣೆ ಕನಿಕರಗಳೂ ಎಲ್ಲಿ? ಬಿಗಿಹಿಡಿದುಕೊಂಡಿದ್ದೀರೋ? [QE]
16. [QS]ಅಬ್ರಹಾಮನು ನಮ್ಮನ್ನು ತಿಳಿಯದಿದ್ದರೂ, [QE][QS2]ಇಸ್ರಾಯೇಲನು ನಮ್ಮನ್ನು ಗುರುತಿಸದಿದ್ದರೂ [QE][QS]ಯೆಹೋವ ದೇವರಾದ ನೀವೇ ನಮ್ಮ ತಂದೆಯೂ, [QE][QS2]ನಮ್ಮ ವಿಮೋಚಕರೂ ಆಗಿದ್ದೀರಿ. ನಿಮ್ಮ ಹೆಸರು ಸದಾಕಾಲವೂ ಇದೆ [QE]
17. [QS]ಯೆಹೋವ ದೇವರೇ, ಏಕೆ ನಮ್ಮನ್ನು [QE][QS2]ನಿಮ್ಮ ಮಾರ್ಗಗಳಿಂದ ತಪ್ಪಿಹೋಗುವಂತೆ ಅನುಮತಿಸಿದ್ದೀರಿ? [QE][QS]ಏಕೆ ನಮ್ಮ ಹೃದಯವನ್ನು ನಿಮಗೆ ಭಯಪಡದ ಹಾಗೆ ಕಠಿಣ ಮಾಡಿದ್ದೀರಿ? [QE][QS2]ನಿಮ್ಮ ಸೇವಕರಿಗೋಸ್ಕರವೂ, [QE][QS2]ನಿಮ್ಮ ಬಾಧ್ಯರಾಗಿರುವ ಗೋತ್ರಗಳ ನಿಮಿತ್ತ ನೀವು ಹಿಂದಿರುಗಿರಿ. [QE]
18. [QS]ಸ್ವಲ್ಪಕಾಲ ಮಾತ್ರ ನಿಮ್ಮ ಪರಿಶುದ್ಧ ಜನರು ಅದನ್ನು ಸ್ವಾಧೀನಮಾಡಿಕೊಂಡರು. [QE][QS2]ನಮ್ಮ ಶತ್ರುಗಳು ನಿಮ್ಮ ಪವಿತ್ರಾಲಯವನ್ನು ತುಳಿದುಬಿಟ್ಟಿದ್ದಾರೆ. [QE]
19. [QS]ನಾವು ಆದಿಯಿಂದಲೂ ನಿಮ್ಮವರಾಗಿದ್ದೇವೆ. [QE][QS2]ಅವರ ಮೇಲೆ ನೀವು ದೊರೆತನ ಮಾಡಲಿಲ್ಲ. [QE][QS2]ಅವರು ನಿಮ್ಮ ಹೆಸರನ್ನು ಧರಿಸಲೂ ಇಲ್ಲ. [QE][PBR] [PBR]