1. [QS]ನೀತಿವಂತನು ನಾಶವಾಗುವನು [QE][QS2]ಆದರೆ ಯಾರೂ ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. [QE][QS]ಭಕ್ತಿಯುಳ್ಳ ಮನುಷ್ಯರು ಕಣ್ಮರೆಯಾಗುವರು. [QE][QS2]ನೀತಿವಂತನು ಮುಂದೆ ಬರುವ [QE][QS]ಕೇಡಿನಿಂದ ಪಾರಾದರು ಎಂಬುದನ್ನು [QE][QS2]ಯಾರೂ ಯೋಚಿಸರು. [QE]
2. [QS]ಅವರು ಸಮಾಧಾನಕ್ಕೆ ಪ್ರವೇಶಿಸುತ್ತಾರೆ. [QE][QS2]ಅವರಲ್ಲಿ ನೆಟ್ಟಗೆ ನಡೆಯುವ ಪ್ರತಿಯೊಬ್ಬರೂ ತಮ್ಮ [QE][QS2]ಮರಣದ ಹಾಸಿಗೆಗಳಲ್ಲಿ ವಿಶ್ರಮಿಸಿಕೊಳ್ಳುತ್ತಾರೆ. [QE][PBR]
3. [QS]“ಆದರೆ ನೀವು ಮಾಟಗಾತಿಯ ಮಕ್ಕಳೇ, [QE][QS2]ವೇಶ್ಯೆ ಮತ್ತು ವ್ಯಭಿಚಾರಿಗಳ ಸಂತಾನದವರೇ, ಇಲ್ಲಿಗೆ ಬನ್ನಿರಿ. [QE]
4. [QS]ಯಾರನ್ನು ಹಾಸ್ಯಮಾಡುತ್ತೀರಿ? [QE][QS2]ಯಾರ ವಿಷಯವಾಗಿ ನೀವು ಬಾಯಿ ಅಗಲಿಸಿ, [QE][QS2]ನಾಲಿಗೆಯನ್ನು ಚಾಚುತ್ತೀರಿ? [QE]
5. [QS]ಹಸಿರಾದ ಏಲಾ ಮರಗಳ ಕೆಳಗೆ [QE][QS2]ವಿಗ್ರಹಗಳಿಂದ ಮದವೇರಿಸಿಕೊಂಡು, [QE][QS]ಹಳ್ಳಗಳಲ್ಲಿ ಬಂಡೆಗಳ ಬಿರುಕುಗಳಲ್ಲಿ ಮಕ್ಕಳನ್ನು ಕೊಂದುಹಾಕುವ ನೀವು [QE][QS2]ದ್ರೋಹದ ಮಕ್ಕಳೂ, ಸುಳ್ಳಿನ ಸಂತತಿಯೂ ಅಲ್ಲವೋ? [QE]
6. [QS]ಹಳ್ಳದ ನುಣುಪಾದ ಕಲ್ಲುಗಳು ನಿಮ್ಮ ಪಾಲು. [QE][QS2]ಅವುಗಳೇ ಹೌದು, ಅವೇ ನಿನ್ನ ಪಾಲು. [QE][QS]ಅವುಗಳಿಗೆ ನೀನು ಪಾನದ್ರವ್ಯವನ್ನು [QE][QS2]ಮತ್ತು ಧಾನ್ಯ ಸಮರ್ಪಣೆಯನ್ನು ಅರ್ಪಿಸಿದ್ದೀಯೆ. [QE][QS2]ನಾನು ಇದನ್ನೆಲ್ಲಾ ಕಂಡು ನನ್ನ ಕೋಪವನ್ನು ಅಡಗಿಸಿಕೊಳ್ಳಲು ಆಗುವುದೇ? [QE]
7. [QS]ಮಹೋನ್ನತ ಪರ್ವತದಲ್ಲಿ ನೀನು ಹಾಸಿಗೆಯನ್ನು ಹಾಕಿಕೊಂಡಿದ್ದೀಯೆ, [QE][QS2]ಬಲಿಯನ್ನರ್ಪಿಸಲು ಆ ಬೆಟ್ಟವನ್ನೇರಿದ್ದೀ. [QE]
8. [QS]ಕದಗಳ ಮತ್ತು ನಿಲುವಿನ ಹಿಂಭಾಗದಲ್ಲಿ [QE][QS2]ನಿನ್ನ ಜ್ಞಾಪಕದ ಚಿಹ್ನೆಯನ್ನು ಇಟ್ಟಿದ್ದೀಯೆ. [QE][QS]ಏಕೆಂದರೆ ನನ್ನನ್ನು ಬಿಟ್ಟು ಬೇರೊಬ್ಬನಿಗೆ [QE][QS2]ನಿನ್ನನ್ನು ತೋರ್ಪಡಿಸಿಕೊಂಡಿದ್ದೀ. [QE][QS]ಏರಿಹೋಗಿ ನಿನ್ನ ಮಂಚವನ್ನು ಅಗಲಮಾಡಿಕೊಂಡು ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೀ. [QE][QS2]ಅವರ ಮಂಚವನ್ನು ಕಂಡಲ್ಲಿ ಅದನ್ನು ಪ್ರೀತಿ ಮಾಡಿದ್ದೀಯೆ. [QE]
9. [QS]ಬಹು ಸುಗಂಧದ್ರವ್ಯಗಳನ್ನು ಕೂಡಿಸಿ, [QE][QS2]ತೈಲದೊಂದಿಗೆ ರಾಜನ ಬಳಿಗೆ ಹೋಗಿದ್ದೀ. [QE][QS]ದೂರಕ್ಕೆ ನಿನ್ನ ರಾಯಭಾರಿಗಳನ್ನು ಕಳುಹಿಸಿದ್ದೀ. [QE][QS2]ಪಾತಾಳದಷ್ಟು ನೀಚಸ್ಥಿತಿಗೆ ಇಳಿದಿದ್ದೀಯೆ. [QE]
10. [QS]ನಿನ್ನ ಮಾರ್ಗದಲ್ಲಿ ಬಹಳವಾಗಿ ದಣಿದಿದ್ದರೂ, [QE][QS2]‘ಏನೂ ಪ್ರಯೋಜನವಿಲ್ಲ,’ ಎಂದುಕೊಳ್ಳಲಿಲ್ಲ. [QE][QS]ನೀನು ಹೊಸ ಬಲವನ್ನು ತಂದುಕೊಂಡು, [QE][QS2]ಬೇಸರಗೊಳ್ಳದೆ ಮುಂದುವರೆದಿರುವೆ. [QE][PBR]
11. [QS]“ನೀನು ಯಾರಿಗೆ ಹೆದರಿ, ಬೆದರಿ, [QE][QS2]ನನ್ನನ್ನು ಮರೆತು, ನನಗೆ ಸುಳ್ಳಾಡಿ [QE][QS]ಮೋಸ ಮಾಡಿರುವೆ. [QE][QS2]ಇಂಥ ದ್ರೋಹಕ್ಕೂ ನೀನು ಹಿಂಜರಿಯಲಿಲ್ಲವಲ್ಲಾ! [QE][QS]ಬಹುಕಾಲದಿಂದ ನಾನು ಸುಮ್ಮನೆ ಇದ್ದುದರಿಂದಲೇ, [QE][QS2]ನೀನು ನನ್ನನ್ನು ಗೌರವಿಸದೆ ಇರುವುದಕ್ಕೆ ಕಾರಣವಲ್ಲವೆ? [QE]
12. [QS]ನಾನೇ ನಿನ್ನ ನೀತಿಯನ್ನೂ, ನಿನ್ನ ಕ್ರಿಯೆಗಳನ್ನೂ ತಿಳಿಯ ಮಾಡುವೆನು. [QE][QS2]ಏಕೆಂದರೆ ಅವು ನಿನಗೆ ಪ್ರಯೋಜನವಾಗುವುದಿಲ್ಲ. [QE]
13. [QS]ನೀನು ಸಹಾಯಕ್ಕಾಗಿ ಕೂಗುವಾಗ [QE][QS2]ನಿನ್ನ ವಿಗ್ರಹಗಳು ನಿನ್ನನ್ನು ರಕ್ಷಿಸಲಿ. [QE][QS]ಇವುಗಳನ್ನೆಲ್ಲಾ ಗಾಳಿಯು ಬಡಿದುಕೊಂಡು ಹೋಗುವುದು. [QE][QS2]ವ್ಯರ್ಥವಾದದ್ದು ಅವುಗಳನ್ನು ತೆಗೆದುಕೊಂಡು ಹೋಗುವುದು. [QE][QS]ಆದರೆ ನನ್ನಲ್ಲಿ ಆಶ್ರಯಿಸುವವನು, [QE][QS2]ದೇಶವನ್ನು ವಶಮಾಡಿಕೊಂಡು, [QE][QS2]ನನ್ನ ಪರಿಶುದ್ಧ ಪರ್ವತವನ್ನು ಬಾಧ್ಯವಾಗಿ ಹೊಂದುವನು.” [QE]
14. {#1ಮಾನಸಾಂತರಪಟ್ಟವರಿಗೆ ಆದರಣೆ } [PS]ನಂತರ ಹೀಗೆ ಹೇಳಲಾಗುವುದು: [PE][QS]ಮಣ್ಣು ಹಾಕಿರಿ, ಹಾಕಿರಿ, ಮಾರ್ಗವನ್ನು ಸರಿಮಾಡಿರಿ, [QE][QS2]ನನ್ನ ಜನರ ದಾರಿಯೊಳಗಿಂದ ಆತಂಕವನ್ನು ಎತ್ತಿ ಹಾಕಿರಿ, [QE]
15. [QS]ಏಕೆಂದರೆ ಉನ್ನತನೂ, ಮಹೋನ್ನತನೂ, [QE][QS2]ನಿತ್ಯವಾಗಿ ವಾಸಿಸುವವನೂ, ಪರಿಶುದ್ಧನು ಎಂಬ ಹೆಸರುಳ್ಳಾತನೂ ಹೇಳುವುದೇನೆಂದರೆ: [QE][QS]“ಉನ್ನತವಾದ ಪರಿಶುದ್ಧ ಸ್ಥಳದಲ್ಲಿ ವಾಸಿಸುವ ನಾನಾದರೂ, [QE][QS2]ಪಶ್ಚಾತ್ತಾಪ ಪಡುವ ದೀನಮನದೊಂದಿಗೆ ನಾನಿದ್ದೇನೆ. [QE][QS]ದೀನನ ಆತ್ಮವನ್ನು ಹಾಗು ಪಶ್ಚಾತ್ತಾಪ ಪಡುವ [QE][QS2]ಮನಸ್ಸನ್ನು ಉಜ್ಜೀವಗೊಳಿಸುವವನಾಗಿದ್ದೇನೆ. [QE]
16. [QS]ನಾನು ಎಂದೆಂದಿಗೂ ವ್ಯಾಜ್ಯವಾಡುವುದಿಲ್ಲ. [QE][QS2]ಯಾವಾಗಲೂ ಕೋಪಿಸಿಕೊಳ್ಳೆನು. [QE][QS]ಏಕೆಂದರೆ ಆತ್ಮವೂ, ನಾನು ಉಂಟುಮಾಡಿದ ಜೀವವೂ [QE][QS2]ನನ್ನಿಂದ ಕುಂದಿ ಹೋದಾವು. [QE]
17. [QS]ಅವನ ದುರಾಶೆಯ ಅನ್ಯಾಯಕ್ಕೆ ನಾನು ಕೋಪಗೊಂಡು, [QE][QS2]ಅವನನ್ನು ಹೊಡೆದೆನು. ನನ್ನ ಮುಖವನ್ನು ಮುಚ್ಚಿಕೊಂಡು ರೋಷಭರಿತನಾದೆನು. [QE][QS2]ಅವನು ಮೊಂಡುತನದಿಂದ ತನ್ನ ಮನಸ್ಸಿಗೆ ಬಂದ ಹಾಗೆಯೇ ನಡೆಯುತ್ತಾ ಬಂದಿದ್ದಾನೆ. [QE]
18. [QS]ನಾನು ಅವನ ಮಾರ್ಗವನ್ನು ನೋಡಿದ್ದೇನೆ. ಅವನನ್ನು ಸ್ವಸ್ಥಮಾಡಿ, [QE][QS2]ಅವನನ್ನು ನಡೆಸುತ್ತೇನೆ. ಅವನಿಗೂ, ಅವನ ದುಃಖಿತರಿಗೂ ಆದರಣೆಗಳನ್ನು ಪುನಃಸ್ಥಾಪಿಸುವೆನು. [QE]
2. [QS2]ನಾನು ತುಟಿಗಳಿಗೆ ಸ್ತೋತ್ರವನ್ನು ಉಂಟುಮಾಡುವೆನು; [QE][QS]ದೂರವಾದವನಿಗೂ ಸಮೀಪವಾದವನಿಗೂ ಸಮಾಧಾನವಿರಲಿ, ಸಮಾಧಾನವಿರಲಿ. [QE][QS2]ನಾನು ಅವರನ್ನು ಸ್ವಸ್ಥ ಮಾಡುವೆನು,” [QE][QS2]ಎಂದು ಯೆಹೋವ ದೇವರು ಹೇಳುತ್ತಾರೆ. [QE]
20. [QS]ಆದರೆ ದುಷ್ಟರು ಸುಮ್ಮನಿರಲಾರದಂಥ, [QE][QS2]ಅದರ ನೀರುಗಳು ಕೆಸರನ್ನೂ, [QE][QS2]ಮೈಲಿಗೆಯನ್ನೂ ಕಾರುವಂಥ ಅಲ್ಲಕಲ್ಲೋಲವಾಗಿರುವ ಸಮುದ್ರದ ಹಾಗಿದ್ದಾರೆ. [QE]
21. [QS]“ದುಷ್ಟರಿಗೆ ಸಮಾಧಾನವೇ ಇಲ್ಲ,” [QE][QS2]ಎಂದು ನನ್ನ ದೇವರು ಹೇಳುತ್ತಾರೆ. [QE]