1. {#1ಇತರರಿಗೂ ಜನರಿಗೆ ರಕ್ಷಣೆ } [PS]ಯೆಹೋವ ದೇವರು ಹೇಳುವುದೇನೆಂದರೆ: [PE][QS]“ನ್ಯಾಯವನ್ನು ಕೈಗೊಳ್ಳಿರಿ, [QE][QS2]ನೀತಿಯಲ್ಲಿ ನಡೆಯಿರಿ. [QE][QS]ಏಕೆಂದರೆ ನನ್ನ ರಕ್ಷಣೆಯು ಬರುವುದಕ್ಕೂ, [QE][QS2]ನನ್ನ ನೀತಿಯು ಪ್ರಕಟವಾಗುವುದಕ್ಕೂ ಸಮೀಪವಾಗಿದೆ. [QE]
2. [QS]ಇದನ್ನು ಮಾಡುವ ಮನುಷ್ಯನೂ, [QE][QS2]ಇದನ್ನು ಹಿಡಿದುಕೊಳ್ಳುವವರ ಪುತ್ರನೂ ಎಂದರೆ [QE][QS]ಸಬ್ಬತ್ ದಿನವನ್ನು ಅಪವಿತ್ರ ಮಾಡದೆ ಕೈಗೊಳ್ಳುವವನೂ [QE][QS2]ಮತ್ತು ಯಾವ ಕೇಡನ್ನು ಮಾಡದ ಹಾಗೆ ತನ್ನ ಕೈಯನ್ನು ಕಾಯುವನೋ ಅವನು ಧನ್ಯನು.” [QE][PBR]
3. [QS]ಯೆಹೋವ ದೇವರನ್ನು ಸೇರಿಕೊಂಡ ವಿದೇಶೀಯನು, [QE][QS2]“ಯೆಹೋವ ದೇವರು ತಮ್ಮ ಜನರಿಂದ ನನ್ನನ್ನು ಖಂಡಿತವಾಗಿ ಬಹಿಷ್ಕರಿಸುವರು,” [QE][QS2]ಎಂದು ಹೇಳದಿರಲಿ. [QE][QS]ಮತ್ತು ನಪುಂಸಕನು, [QE][QS2]“ನಾನು ಕೇವಲ ಒಣಗಿದ ಮರ,” ಎಂದು ಹೇಳದಿರಲಿ. [QE]
4. [PS]ಯೆಹೋವ ದೇವರು ಹೇಳುವುದೇನೆಂದರೆ, [PE][QS]“ನನ್ನ ಸಬ್ಬತ್ ದಿನವನ್ನು ಕೈಗೊಂಡು, [QE][QS2]ನನಗೆ ಮೆಚ್ಚಿಗೆಯಾದದ್ದನ್ನು ಆಯ್ದುಕೊಂಡು, [QE][QS2]ನನ್ನ ಒಡಂಬಡಿಕೆಯನ್ನು ಹಿಡಿದುಕೊಂಡಿರುವ ನಪುಂಸಕರಿಗೆ, [QE]
5. [QS]ನನ್ನ ಆಲಯದಲ್ಲಿಯೂ ಗೋಡೆಗಳ ಬಳಿಗೂ [QE][QS2]ಪುತ್ರ ಪುತ್ರಿಯರಿಗಿಂತ ಉತ್ತಮವಾದ ಸ್ಥಳವನ್ನೂ, [QE][QS2]ಹೆಸರನ್ನೂ ನಾನು ಕೊಡುತ್ತೇನೆ. [QE][QS]ನಾನು ಅವರಿಗೆ ಎಂದಿಗೂ ಅಳಿಯದ [QE][QS2]ಶಾಶ್ವತವಾದ ಹೆಸರನ್ನು ಕೊಡುವೆನು. [QE]
6. [QS]ಯೆಹೋವ ದೇವರಾದ ನನ್ನನ್ನು ಸೇವಿಸುವುದಕ್ಕೂ, [QE][QS2]ನನ್ನ ಹೆಸರನ್ನು ಪ್ರೀತಿಸಿ, [QE][QS]ನನಗೆ ಸೇವಕರಾಗಿರಲು ತಾವಾಗಿ ಯೆಹೋವ ದೇವರೊಂದಿಗೆ ಸೇರಿಕೊಂಡಿರುವ [QE][QS2]ವಿದೇಶಿಯರು ಸಬ್ಬತ್ ದಿನವನ್ನು ಅಪವಿತ್ರ ಮಾಡದೆ, [QE][QS]ಅದನ್ನು ಕೈಗೊಂಡು, [QE][QS2]ನನ್ನ ಒಡಂಬಡಿಕೆಯನ್ನು ಭದ್ರವಾಗಿ ಪಾಲಿಸುವವರನ್ನು [QE]
7. [QS]ನನ್ನ ಪರಿಶುದ್ಧ ಪರ್ವತಕ್ಕೆ ತರುವೆನು; [QE][QS2]ನನ್ನ ಪ್ರಾರ್ಥನೆಯ ಆಲಯದಲ್ಲಿ ಅವರಿಗೆ ಆನಂದವನ್ನು ಉಂಟುಮಾಡುವೆನು. [QE][QS]ನನ್ನ ಬಲಿಪೀಠದ ಮೇಲೆ ಅವರು ಅರ್ಪಿಸುವ ದಹನಬಲಿಗಳು, [QE][QS2]ಯಜ್ಞಗಳು ನನಗೆ ಒಪ್ಪಿಗೆಯಾಗುವುವು, [QE][QS]ಏಕೆಂದರೆ ನನ್ನ ಆಲಯವು ಎಲ್ಲಾ ಜನಾಂಗಗಳಿಗೂ [QE][QS2]ಪ್ರಾರ್ಥನಾಲಯವು ಎಂದು ಎನಿಸಿಕೊಳ್ಳುವುದು.” [QE]
8. [QS]ಇಸ್ರಾಯೇಲಿನ ಸೆರೆಹೋದ ಜನರನ್ನು ಕೂಡಿಸುವಂಥ [QE][QS2]ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: [QE][QS]“ನಾನು ಕೂಡಿಸಿದ ಇಸ್ರಾಯೇಲರೊಂದಿಗೆ [QE][QS2]ಇನ್ನು ಹಲವರನ್ನು ಕೂಡಿಸುವೆನು.” [QE]
9. {#1ಅಧಿಪತಿಗಳ ಅತ್ಯಾಸೆ, ಜನರ ದ್ರೋಹ } [QS]ಅರಣ್ಯದ ಸಕಲ ಮೃಗಗಳೇ, [QE][QS2]ಕಾಡಿನ ಎಲ್ಲಾ ಮೃಗಗಳೇ, ನುಂಗಿಬಿಡುವುದಕ್ಕೆ ಬನ್ನಿರಿ. [QE]
10. [QS]ಇಸ್ರಾಯೇಲಿನ ಕಾವಲುಗಾರರು ಕುರುಡರು. [QE][QS2]ಅವರೆಲ್ಲರೂ ಅರಿವಿಲ್ಲದವರು. [QE][QS]ಅವರೆಲ್ಲರೂ ಮೂಕ ನಾಯಿಗಳು, [QE][QS2]ಅವು ಬೊಗಳಲಾರವು, [QE][QS]ಕನಸು ಕಾಣುತ್ತವೆ, ಬಿದ್ದುಕೊಂಡಿರುತ್ತವೆ. [QE][QS2]ನಿದ್ರೆಯನ್ನು ಪ್ರೀತಿಸುತ್ತವೆ. [QE]
11. [QS]ಹೌದು, ಎಂದಿಗೂ ಸಾಕೆನ್ನದ [QE][QS2]ಹೊಟ್ಟೆಬಾಕ ನಾಯಿಗಳು [QE][QS]ಮತ್ತು ಅವರು ಗ್ರಹಿಕೆ ಇಲ್ಲದ ಕುರುಬರು, [QE][QS2]ಅವರೆಲ್ಲರೂ ತಮ್ಮ ತಮ್ಮ ಸ್ವಂತ ಮಾರ್ಗಕ್ಕೂ, [QE][QS2]ಪ್ರತಿಯೊಬ್ಬನೂ ತನ್ನ ಲಾಭ ಸಿಕ್ಕುವ ಕಡೆಗೂ ತಿರುಗಿಕೊಳ್ಳುವನು. [QE]
12. [QS]“ಬನ್ನಿರಿ, ನಾನು ದ್ರಾಕ್ಷಾರಸವನ್ನು ತರುವೆನು. [QE][QS2]ನಮ್ಮನ್ನು ನಾವೇ ಬೇಕಾದಷ್ಟು ಮದ್ಯದಿಂದ ತುಂಬಿಕೊಳ್ಳುವ! [QE][QS]ನಾಳೆಯು ಈ ದಿವಸದಂತೆಯೇ ಇರುವುದು. [QE][QS2]ಅಥವಾ ಇದಕ್ಕಿಂತಲೂ ಚೆನ್ನಾಗಿರುವುದು,” ಎಂದು ಪ್ರತಿಯೊಬ್ಬನೂ ಹೇಳುತ್ತಾನೆ. [QE][PBR] [PBR]