1. [QS]ಚೀಯೋನೇ, ಎಚ್ಚರವಾಗು, ಎಚ್ಚರವಾಗು, [QE][QS2]ನಿನ್ನ ಬಲವನ್ನು ಧರಿಸಿಕೋ! [QE][QS]ಯೆರೂಸಲೇಮೇ, ಪರಿಶುದ್ಧ ಪಟ್ಟಣವೇ, [QE][QS2]ನಿನ್ನ ವೈಭವದ ಉಡುಪುಗಳನ್ನು ಹಾಕಿಕೋ [QE][QS]ಏಕೆಂದರೆ ಇಂದಿನಿಂದ ಸುನ್ನತಿ ಇಲ್ಲದವರೂ, [QE][QS2]ಅಶುದ್ಧರೂ ನಿನ್ನೊಳಗೆ ಬರುವುದಿಲ್ಲ. [QE]
2. [QS]ಯೆರೂಸಲೇಮೇ ಧೂಳನ್ನು ಝಾಡಿಸಿಕೋ, [QE][QS2]ಎದ್ದು ಆಸನದ ಮೇಲೆ ಕುಳಿತುಕೋ. [QE][QS]ಸೆರೆಯಾದ ಚೀಯೋನ್ ಪುತ್ರಿಯೇ, [QE][QS2]ನಿನ್ನ ಕುತ್ತಿಗೆಯ ಬಂಧನಗಳನ್ನು ಬಿಚ್ಚಿಕೋ. [QE]
3. [PS]ಏಕೆಂದರೆ ಯೆಹೋವ ದೇವರು ಹೇಳುವುದೇನೆಂದರೆ: [PE][QS]“ನಿಮ್ಮನ್ನು ನೀವೇ ನಿಷ್ಪಲವಾಗಿ ಮಾಡಿಕೊಂಡಿರಿ. [QE][QS2]ಹಣವಿಲ್ಲದೆ ನೀವು ವಿಮೋಚನೆ ಹೊಂದುವಿರಿ.” [QE]
4. [PS]ಏಕೆಂದರೆ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: [PE][QS]“ನನ್ನ ಜನರು ಪೂರ್ವದಲ್ಲಿ ಇಳುಕೊಳ್ಳುವುದಕ್ಕೆ ಈಜಿಪ್ಟಿಗೆ ಹೋದರು. [QE][QS2]ಅಸ್ಸೀರಿಯದವರು ಕಾರಣವಿಲ್ಲದೆ ಅವರಿಗೆ ಬಾಧೆಪಡಿಸಿದರು. [QE]
5. [PS]“ಈಗ ನನಗೆ ಇಲ್ಲಿ ಏನಿದೆ?” ಎಂದು ಯೆಹೋವ ದೇವರು ಹೇಳುತ್ತಾರೆ. [PE][QS]“ನನ್ನ ಜನರನ್ನು ವ್ಯರ್ಥವಾಗಿ ಒಯ್ದಿದ್ದಾರೆ. [QE][QS2]ಆಳುವವರು ಅವರನ್ನು ಗೋಳಾಡಿಸುತ್ತಿದ್ದಾರೆ. [QE][QS2]ನನ್ನ ನಾಮವು ಪ್ರತಿದಿನವೂ ಎಡೆಬಿಡದೆ [QE][QS]ದೂಷಣೆಗೆ ಗುರಿಯಾಗಿದೆ! [QE][QS2]ಎಂದು ಯೆಹೋವ ದೇವರು ಹೇಳುತ್ತಾರೆ. [QE]
6. [QS]ಆದ್ದರಿಂದ ನನ್ನ ಜನರು ನನ್ನ ಹೆಸರನ್ನು ತಿಳಿದುಕೊಳ್ಳುವರು. [QE][QS2]ಹೀಗೆ ಆ ದಿನದಲ್ಲಿ ಮಾತನಾಡಿದಾತನು ನಾನೇ, [QE][QS]ಅದು ನಾನೇ ಎಂದು [QE][QS2]ಅವರು ಗ್ರಹಿಸುವರು.” [QE][PBR]
7. [QS]ಒಳ್ಳೆಯ ಶುಭಸಮಾಚಾರವನ್ನು ತರುವವನ, [QE][QS2]ರಕ್ಷಣೆಯನ್ನು ಪ್ರಕಟಿಸುವವನ [QE][QS]ಚೀಯೋನಿಗೆ ನಿನ್ನ ದೇವರು [QE][QS2]ದೊರೆತನ ಮಾಡುತ್ತಾನೆ ಎಂದು ಹೇಳಿ, [QE][QS2]ಒಳ್ಳೆಯ ಶುಭಸಮಾಚಾರವನ್ನು ತಂದು, [QE][QS]ಸಮಾಧಾನವನ್ನು ಪ್ರಕಟಿಸಿ ಹೇಳುವವನ ಪಾದಗಳು [QE][QS2]ಪರ್ವತಗಳ ಮೇಲೆ ಎಷ್ಟೊಂದು ಅಂದವಾಗಿವೆ! [QE]
8. [QS]ನಿನ್ನ ಕಾವಲುಗಾರರು ಧ್ವನಿಯನ್ನೆತ್ತುವರು. [QE][QS2]ಆ ಸ್ವರದೊಂದಿಗೆ ಒಟ್ಟಾಗಿ ಅವರು ಹಾಡುವರು. [QE][QS]ಏಕೆಂದರೆ ಯೆಹೋವ ದೇವರು ಚೀಯೋನನ್ನು ತಿರುಗಿ ತರುವಾಗ, [QE][QS2]ಅವರು ಅದನ್ನು ತಮ್ಮ ಕಣ್ಣಿನಿಂದಲೇ ಕಾಣುವರು. [QE]
9. [QS]ಯೆರೂಸಲೇಮಿನ ಹಾಳಾದ ಸ್ಥಳಗಳೇ, [QE][QS2]ಆನಂದ ಧ್ವನಿಗೈಯಿರಿ, ಒಟ್ಟಾಗಿ ಹಾಡಿರಿ. [QE][QS]ಏಕೆಂದರೆ ಯೆಹೋವ ದೇವರು ತನ್ನ ಪ್ರಜೆಗಳನ್ನು ಸಂತೈಸಿದ್ದಾರೆ. [QE][QS2]ಆತನು ಯೆರೂಸಲೇಮನ್ನು ವಿಮೋಚಿಸಿದ್ದಾರೆ. [QE]
10. [QS]ಯೆಹೋವ ದೇವರು ತಮ್ಮ ಪವಿತ್ರ ಬಾಹುವನ್ನು [QE][QS2]ಸಕಲ ಜನಾಂಗಗಳ ಕಣ್ಣೆದುರಿನಲ್ಲಿ ತೋರಿಸಿಕೊಂಡಿದ್ದಾನೆ [QE][QS]ಮತ್ತು ಭೂಮಿಯ ಅಂತ್ಯದವರೆಗೂ [QE][QS2]ನಮ್ಮ ದೇವರ ರಕ್ಷಣೆಯನ್ನು ಕಾಣುವರು. [QE][PBR]
11. [QS]ಹೊರಡಿರಿ, ಹೊರಡಿರಿ, ಅಲ್ಲಿಂದ ಹೊರಗೆ ಹೋಗಿರಿ, [QE][QS2]ಅಶುದ್ಧವಾದ ಯಾವುದನ್ನೂ ಮುಟ್ಟದಿರಿ. [QE][QS]ಅವಳ ಮಧ್ಯದಿಂದ ಹೊರಗೆ ಹೋಗಿರಿ. [QE][QS2]ಯೆಹೋವ ದೇವರ ದೇವಾಲಯದ ಪಾತ್ರೆಗಳನ್ನು ಹೊರುವವರೇ, ನೀವು ಶುದ್ಧರಾಗಿರಿ. [QE]
12. [QS]ನೀವು ತ್ವರೆಯಾಗಿ ಹೋಗುವುದಿಲ್ಲ, [QE][QS2]ಓಡಿ ಹೋಗುವುದಿಲ್ಲ. [QE][QS]ಏಕೆಂದರೆ ಯೆಹೋವ ದೇವರೇ ನಿಮ್ಮ ಮುಂದೆ ಹೋಗುವರು, [QE][QS2]ಇಸ್ರಾಯೇಲಿನ ದೇವರು ನಿಮ್ಮ ಹಿಂದೆ ಕಾವಲು ಕಾಯುವರು. [QE]
13. {#1ಯೆಹೋವ ದೇವರ ಸೇವಕನ ಶ್ರಮೆ ಮತ್ತು ಮಹಿಮೆ } [QS]ನನ್ನ ಸೇವಕನು ವಿವೇಕಿಯಾಗಿ ಕಾರ್ಯವನ್ನು ಸಾಧಿಸಿ, [QE][QS2]ಅವನು ಉನ್ನತನಾಗಿ ಮೇಲೆಕ್ಕೇರಿ ಮಹೋನ್ನತನಾಗಿರುವನು. [QE]
14. [QS]ಅವನ ಮುಖವು ಮನುಷ್ಯರಿಗಿಂತಲೂ, [QE][QS2]ಅವನ ಆಕಾರವು ನರಪುತ್ರರಿಗಿಂತಲೂ [QE][QS2]ಕುರೂಪವಾಗಿರುವುದನ್ನು ನೋಡಿ ಹೇಗೆ ಆಶ್ಚರ್ಯಪಟ್ಟರೋ, [QE]
15. [QS]ಹಾಗೆಯೇ ಅನೇಕ ಜನಾಂಗಗಳನ್ನು ಆತನು ವಿಸ್ಮಯಗೊಳಿಸುವನು. [QE][QS2]ಅರಸರು ಆತನ ನಿಮಿತ್ತ ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳುವರು. [QE][QS]ಏಕೆಂದರೆ ಅವರಿಗೆ ತಿಳಿಸದಿರುವ ಸಂಗತಿಯನ್ನು ಅವರು ನೋಡುವರು, [QE][QS2]ಕೇಳದೇ ಇರುವುದನ್ನು ಗ್ರಹಿಸಿಕೊಳ್ಳುವರು. [QE][PBR]