ಪವಿತ್ರ ಬೈಬಲ್

ಓಪನ್ ಸಮಕಾಲೀನ ಆವೃತ್ತಿ (OCV)
ಯೆಶಾಯ
1. {#1ಇಸ್ರಾಯೇಲಿನ ಪಾಪ ಮತ್ತು ಸೇವಕನ ವಿಧೇಯತೆ } [PS]ಯೆಹೋವ ದೇವರು ಹೇಳುವುದೇನೆಂದರೆ, [PE][QS]“ನಾನು ಬಿಟ್ಟುಬಿಟ್ಟದ್ದಕ್ಕೆ ನಿನ್ನ ತಾಯಿಯ ತ್ಯಾಗಪತ್ರವು ಎಲ್ಲಿ? [QE][QS2]ನಾನು ನನ್ನ ಸಾಲಗಾರರಲ್ಲಿ ಯಾರಿಗೆ ನಿಮ್ಮನ್ನು ಮಾರಿಬಿಟ್ಟೆನು? [QE][QS]ನಿಮ್ಮ ಪಾಪಗಳ ನಿಮಿತ್ತ ನಿಮ್ಮನ್ನು ನೀವೇ ಮಾರಿಕೊಂಡಿದ್ದೀರಿ. [QE][QS2]ನಿಮ್ಮ ದ್ರೋಹಗಳ ನಿಮಿತ್ತವೇ ನಿಮ್ಮ ತಾಯಿಯನ್ನು ಬಿಟ್ಟಿದ್ದೇನೆ. [QE]
2. [QS]ನಾನು ಬಂದಾಗ ಏಕೆ ಅಲ್ಲಿ ಒಬ್ಬನೂ ಇರಲಿಲ್ಲ? [QE][QS2]ನಾನು ಕರೆದಾಗ ಏಕೆ ಯಾರೂ ಉತ್ತರ ಕೊಡಲಿಲ್ಲ? [QE][QS]ನನ್ನ ಕೈ ವಿಮೋಚಿಸದಂಥಾ ಮೋಟುಗೈಯೋ? [QE][QS2]ಇಲ್ಲವೆ ನನಗೆ ಬಿಡಿಸುವುದಕ್ಕೆ ಶಕ್ತಿಯಿಲ್ಲವೋ? [QE][QS]ಇಗೋ, ನನ್ನ ಗದರಿಕೆಯಿಂದ ನಾನು ಸಮುದ್ರವನ್ನು ಒಣಗಿಸುತ್ತೇನೆ. [QE][QS2]ನಾನು ನದಿಗಳನ್ನು ಮರುಭೂಮಿಯನ್ನಾಗಿ ಮಾಡುತ್ತೇನೆ. [QE][QS]ನೀರಿಲ್ಲದ ಕಾರಣ ಅಲ್ಲಿಯ ಮೀನುಗಳು ಬಾಯಾರಿ, [QE][QS2]ಸತ್ತು ನಾರುವುವು. [QE]
3. [QS]ನಾನು ಆಕಾಶಗಳಿಗೆ ಅಂಧಕಾರವನ್ನು ಹೊದಿಸಿ, [QE][QS2]ಗೋಣಿತಟ್ಟನ್ನು ಅದರ ಹೊದಿಕೆಯನ್ನಾಗಿ ಮಾಡುವೆನು.” [QE][PBR]
4. [QS]ಬಳಲಿ ಹೋದವನನ್ನು ಹೇಗೆ ಮಾತಿನಿಂದ ಆದರಿಸುವೆ ಎಂಬುದನ್ನು [QE][QS2]ನಾನು ತಿಳಿಯುವ ಹಾಗೆ ಸಾರ್ವಭೌಮ ಯೆಹೋವ ದೇವರು ಶಿಕ್ಷಿತರ ನಾಲಿಗೆಯನ್ನು ನನಗೆ ಕೊಟ್ಟಿದ್ದಾರೆ. [QE][QS]ಆತನು ಮುಂಜಾನೆಯಿಂದ ಮುಂಜಾನೆಗೆ ನನ್ನನ್ನು ಎಚ್ಚರಿಸಿ, [QE][QS2]ಸುರಕ್ಷಿತರಂತೆ ನಾನು ಕೇಳುವ ಹಾಗೆ ನನ್ನ ಕಿವಿಯನ್ನು ಆತನು ಎಚ್ಚರಗೊಳಿಸುತ್ತಾರೆ. [QE]
5. [QS]ಸಾರ್ವಭೌಮ ಯೆಹೋವ ದೇವರು ನನ್ನ ಕಿವಿಯನ್ನು ತೆರೆದಿದ್ದಾರೆ, [QE][QS2]ನಾನು ಎದುರು ಬೀಳಲಿಲ್ಲ, [QE][QS2]ವಿಮುಖನಾಗಲೂ ಇಲ್ಲ. [QE]
6. [QS]ನಾನು ಹೊಡೆಯುವವರಿಗೆ ಬೆನ್ನನ್ನೂ, [QE][QS2]ಕೂದಲು ಕೀಳುವವರಿಗೆ ನನ್ನ ಗಡ್ಡವನ್ನೂ ಒಡ್ಡಿದೆನು. [QE][QS]ನನ್ನ ಮುಖವನ್ನು ನಿಂದೆಗೂ, [QE][QS2]ಉಗುಳುವಿಕೆಗೂ ಮರೆಮಾಡಲಿಲ್ಲ. [QE]
7. [QS]ಸಾರ್ವಭೌಮ ಯೆಹೋವ ದೇವರು, ನನಗೆ ಸಹಾಯ ಮಾಡುವನು. [QE][QS2]ಆದಕಾರಣ ನಾನು ಅವಮಾನ ಪಡುವುದಿಲ್ಲ. [QE][QS]ಆದ್ದರಿಂದ ನನ್ನ ಮುಖವನ್ನು ಕಗ್ಗಲ್ಲಿನಂತೆ ಮಾಡಿಕೊಂಡಿದ್ದೇನೆ. [QE][QS2]ನಾನು ನಾಚಿಕೆಪಡಲಾರೆನೆಂದು ನನಗೆ ಗೊತ್ತು. [QE]
8. [QS]ನನಗೆ ನೀತಿ ನಿರ್ಣಯಿಸುವಾತನು ಸಮೀಪದಲ್ಲಿಯೇ ಇದ್ದಾನೆ, [QE][QS2]ನನ್ನೊಂದಿಗೆ ವ್ಯಾಜ್ಯವಾಡುವವರು ಯಾರು? [QE][QS2]ನಾವು ಪರಸ್ಪರ ಎದುರಿಸೋಣ! [QE][QS]ನನ್ನ ಎದುರಾಳಿ ಯಾರು? [QE][QS2]ಅವನು ನನ್ನ ಸಮೀಪಕ್ಕೆ ಬರಲಿ. [QE]
9. [QS]ಇಗೋ, ಸಾರ್ವಭೌಮ ಯೆಹೋವ ದೇವರು ನನಗೆ ಸಹಾಯ ಮಾಡುವರು. [QE][QS2]ನನ್ನನ್ನು ಅಪರಾಧಿ ಎಂದು ನಿರ್ಣಯಿಸುವವನು ಯಾರು? [QE][QS]ಇಗೋ, ಅವರೆಲ್ಲರೂ ಹಳೆಯ ಬಟ್ಟೆಯಂತಾಗುವರು. [QE][QS2]ಬಟ್ಟೆ ತಿನ್ನುವ ನುಸಿಯು ಅವರನ್ನು ತಿಂದುಬಿಡುವುದು. [QE][PBR]
10. [QS]ನಿಮ್ಮೊಳಗೆ ಯೆಹೋವ ದೇವರಿಗೆ ಭಯಪಟ್ಟು, [QE][QS2]ಅವರ ಸೇವಕನ ಮಾತನ್ನು ಕೇಳಿ, [QE][QS]ಬೆಳಕಿಲ್ಲದೇ ಕತ್ತಲೆಯಲ್ಲಿ [QE][QS2]ನಡೆಯುವವನು ಯಾರು? [QE][QS]ಅವನು ಯೆಹೋವ ದೇವರ ಹೆಸರಿನಲ್ಲಿ ನಂಬಿಕೆ ಇಟ್ಟು, [QE][QS2]ತನ್ನ ದೇವರ ಮೇಲೆ ಆತುಕೊಳ್ಳಲಿ. [QE]
11. [QS]ಕಿಡಿಗಳಿಂದ ಆವರಿಸಿಕೊಳ್ಳುವವರೇ, [QE][QS2]ನಿಮ್ಮ ಬೆಂಕಿಯ ಬೆಳಕಿನಲ್ಲಿಯೂ, [QE][QS]ನೀವು ಹತ್ತಿಸಿದ ಕಿಡಿಗಳಲ್ಲಿಯೂ ನಡೆಯಿರಿ. [QE][QS2]ನನ್ನ ಕೈಯಿಂದ ನಿಮಗಾಗುವುದು ಇದೇ. [QE][QS]ನೀವು ಯಾತನೆಯಲ್ಲಿ ಬಿದ್ದುಕೊಂಡಿರುವಿರಿ. [QE]
ಒಟ್ಟು 66 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 50 / 66
ಇಸ್ರಾಯೇಲಿನ ಪಾಪ ಮತ್ತು ಸೇವಕನ ವಿಧೇಯತೆ 1 ಯೆಹೋವ ದೇವರು ಹೇಳುವುದೇನೆಂದರೆ, “ನಾನು ಬಿಟ್ಟುಬಿಟ್ಟದ್ದಕ್ಕೆ ನಿನ್ನ ತಾಯಿಯ ತ್ಯಾಗಪತ್ರವು ಎಲ್ಲಿ? ನಾನು ನನ್ನ ಸಾಲಗಾರರಲ್ಲಿ ಯಾರಿಗೆ ನಿಮ್ಮನ್ನು ಮಾರಿಬಿಟ್ಟೆನು? ನಿಮ್ಮ ಪಾಪಗಳ ನಿಮಿತ್ತ ನಿಮ್ಮನ್ನು ನೀವೇ ಮಾರಿಕೊಂಡಿದ್ದೀರಿ. ನಿಮ್ಮ ದ್ರೋಹಗಳ ನಿಮಿತ್ತವೇ ನಿಮ್ಮ ತಾಯಿಯನ್ನು ಬಿಟ್ಟಿದ್ದೇನೆ. 2 ನಾನು ಬಂದಾಗ ಏಕೆ ಅಲ್ಲಿ ಒಬ್ಬನೂ ಇರಲಿಲ್ಲ? ನಾನು ಕರೆದಾಗ ಏಕೆ ಯಾರೂ ಉತ್ತರ ಕೊಡಲಿಲ್ಲ? ನನ್ನ ಕೈ ವಿಮೋಚಿಸದಂಥಾ ಮೋಟುಗೈಯೋ? ಇಲ್ಲವೆ ನನಗೆ ಬಿಡಿಸುವುದಕ್ಕೆ ಶಕ್ತಿಯಿಲ್ಲವೋ? ಇಗೋ, ನನ್ನ ಗದರಿಕೆಯಿಂದ ನಾನು ಸಮುದ್ರವನ್ನು ಒಣಗಿಸುತ್ತೇನೆ. ನಾನು ನದಿಗಳನ್ನು ಮರುಭೂಮಿಯನ್ನಾಗಿ ಮಾಡುತ್ತೇನೆ. ನೀರಿಲ್ಲದ ಕಾರಣ ಅಲ್ಲಿಯ ಮೀನುಗಳು ಬಾಯಾರಿ, ಸತ್ತು ನಾರುವುವು. 3 ನಾನು ಆಕಾಶಗಳಿಗೆ ಅಂಧಕಾರವನ್ನು ಹೊದಿಸಿ, ಗೋಣಿತಟ್ಟನ್ನು ಅದರ ಹೊದಿಕೆಯನ್ನಾಗಿ ಮಾಡುವೆನು.” 4 ಬಳಲಿ ಹೋದವನನ್ನು ಹೇಗೆ ಮಾತಿನಿಂದ ಆದರಿಸುವೆ ಎಂಬುದನ್ನು ನಾನು ತಿಳಿಯುವ ಹಾಗೆ ಸಾರ್ವಭೌಮ ಯೆಹೋವ ದೇವರು ಶಿಕ್ಷಿತರ ನಾಲಿಗೆಯನ್ನು ನನಗೆ ಕೊಟ್ಟಿದ್ದಾರೆ. ಆತನು ಮುಂಜಾನೆಯಿಂದ ಮುಂಜಾನೆಗೆ ನನ್ನನ್ನು ಎಚ್ಚರಿಸಿ, ಸುರಕ್ಷಿತರಂತೆ ನಾನು ಕೇಳುವ ಹಾಗೆ ನನ್ನ ಕಿವಿಯನ್ನು ಆತನು ಎಚ್ಚರಗೊಳಿಸುತ್ತಾರೆ. 5 ಸಾರ್ವಭೌಮ ಯೆಹೋವ ದೇವರು ನನ್ನ ಕಿವಿಯನ್ನು ತೆರೆದಿದ್ದಾರೆ, ನಾನು ಎದುರು ಬೀಳಲಿಲ್ಲ, ವಿಮುಖನಾಗಲೂ ಇಲ್ಲ. 6 ನಾನು ಹೊಡೆಯುವವರಿಗೆ ಬೆನ್ನನ್ನೂ, ಕೂದಲು ಕೀಳುವವರಿಗೆ ನನ್ನ ಗಡ್ಡವನ್ನೂ ಒಡ್ಡಿದೆನು. ನನ್ನ ಮುಖವನ್ನು ನಿಂದೆಗೂ, ಉಗುಳುವಿಕೆಗೂ ಮರೆಮಾಡಲಿಲ್ಲ. 7 ಸಾರ್ವಭೌಮ ಯೆಹೋವ ದೇವರು, ನನಗೆ ಸಹಾಯ ಮಾಡುವನು. ಆದಕಾರಣ ನಾನು ಅವಮಾನ ಪಡುವುದಿಲ್ಲ. ಆದ್ದರಿಂದ ನನ್ನ ಮುಖವನ್ನು ಕಗ್ಗಲ್ಲಿನಂತೆ ಮಾಡಿಕೊಂಡಿದ್ದೇನೆ. ನಾನು ನಾಚಿಕೆಪಡಲಾರೆನೆಂದು ನನಗೆ ಗೊತ್ತು. 8 ನನಗೆ ನೀತಿ ನಿರ್ಣಯಿಸುವಾತನು ಸಮೀಪದಲ್ಲಿಯೇ ಇದ್ದಾನೆ, ನನ್ನೊಂದಿಗೆ ವ್ಯಾಜ್ಯವಾಡುವವರು ಯಾರು? ನಾವು ಪರಸ್ಪರ ಎದುರಿಸೋಣ! ನನ್ನ ಎದುರಾಳಿ ಯಾರು? ಅವನು ನನ್ನ ಸಮೀಪಕ್ಕೆ ಬರಲಿ. 9 ಇಗೋ, ಸಾರ್ವಭೌಮ ಯೆಹೋವ ದೇವರು ನನಗೆ ಸಹಾಯ ಮಾಡುವರು. ನನ್ನನ್ನು ಅಪರಾಧಿ ಎಂದು ನಿರ್ಣಯಿಸುವವನು ಯಾರು? ಇಗೋ, ಅವರೆಲ್ಲರೂ ಹಳೆಯ ಬಟ್ಟೆಯಂತಾಗುವರು. ಬಟ್ಟೆ ತಿನ್ನುವ ನುಸಿಯು ಅವರನ್ನು ತಿಂದುಬಿಡುವುದು. 10 ನಿಮ್ಮೊಳಗೆ ಯೆಹೋವ ದೇವರಿಗೆ ಭಯಪಟ್ಟು, ಅವರ ಸೇವಕನ ಮಾತನ್ನು ಕೇಳಿ, ಬೆಳಕಿಲ್ಲದೇ ಕತ್ತಲೆಯಲ್ಲಿ ನಡೆಯುವವನು ಯಾರು? ಅವನು ಯೆಹೋವ ದೇವರ ಹೆಸರಿನಲ್ಲಿ ನಂಬಿಕೆ ಇಟ್ಟು, ತನ್ನ ದೇವರ ಮೇಲೆ ಆತುಕೊಳ್ಳಲಿ. 11 ಕಿಡಿಗಳಿಂದ ಆವರಿಸಿಕೊಳ್ಳುವವರೇ, ನಿಮ್ಮ ಬೆಂಕಿಯ ಬೆಳಕಿನಲ್ಲಿಯೂ, ನೀವು ಹತ್ತಿಸಿದ ಕಿಡಿಗಳಲ್ಲಿಯೂ ನಡೆಯಿರಿ. ನನ್ನ ಕೈಯಿಂದ ನಿಮಗಾಗುವುದು ಇದೇ. ನೀವು ಯಾತನೆಯಲ್ಲಿ ಬಿದ್ದುಕೊಂಡಿರುವಿರಿ.
ಒಟ್ಟು 66 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 50 / 66
×

Alert

×

Kannada Letters Keypad References