1. {#1ದ್ರಾಕ್ಷಿತೋಟದ ಹಾಡು } [QS]ನನ್ನ ಪ್ರಿಯನ ದ್ರಾಕ್ಷಿತೋಟದ [QE][QS2]ವಿಷಯವಾದ ಹಾಡನ್ನು [QE][QS]ನನ್ನ ಪ್ರಾಣ ಪ್ರಿಯನಿಗೆ ನಾನು ಹಾಡುವೆನು. [QE][QS2]ಫಲವತ್ತಾದ ಗುಡ್ಡದ ಬಳಿಯಲ್ಲಿ ನನ್ನ ಅತಿ ಪ್ರಿಯನಿಗೆ ದ್ರಾಕ್ಷಿ ತೋಟವಿದೆ. [QE]
2. [QS]ಅವನು ಅದಕ್ಕೆ ಬೇಲಿಹಾಕಿ, ಅದರೊಳಗಿಂದ ಕಲ್ಲುಗಳನ್ನು ಆರಿಸಿ ತೆಗೆದುಹಾಕಿ, [QE][QS2]ಒಳ್ಳೆಯ ದ್ರಾಕ್ಷಿ ಸಸಿಯನ್ನು ನೆಟ್ಟು, [QE][QS]ಅದರ ಮಧ್ಯದಲ್ಲಿ ಒಂದು ಬುರುಜನ್ನು ಕಟ್ಟಿ, [QE][QS2]ದ್ರಾಕ್ಷಿ ತೊಟ್ಟಿಯನ್ನು ಕೊರೆಯಿಸಿ, [QE][QS]ತೋಟವು ಒಳ್ಳೆಯ ದ್ರಾಕ್ಷಿಹಣ್ಣನ್ನು ಕೊಡುವುದೆಂದು ಎದುರುನೋಡುತ್ತಿರಲು, [QE][QS2]ಅದು ಹುಳಿ ಹಣ್ಣನ್ನು ಬಿಟ್ಟಿತು. [QE][PBR]
3. [QS]“ಯೆರೂಸಲೇಮಿನ ನಿವಾಸಿಗಳೇ, ಯೆಹೂದದ ಮನುಷ್ಯರೇ, [QE][QS2]ನನಗೂ ನನ್ನ ದ್ರಾಕ್ಷಿ ತೋಟಕ್ಕೂ ನ್ಯಾಯತೀರಿಸಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. [QE]
4. [QS]ನನ್ನ ದ್ರಾಕ್ಷಿತೋಟದಲ್ಲಿ ನಾನು ಮಾಡಿದ್ದಕ್ಕಿಂತ ಇನ್ನೂ ಹೆಚ್ಚಾಗಿ [QE][QS2]ಅದಕ್ಕೆ ಏನು ಮಾಡಬೇಕಾಗಿತ್ತು? [QE][QS]ಅದು ಒಳ್ಳೆಯ ದ್ರಾಕ್ಷಿ ಫಲವನ್ನು ಫಲಿಸುವುದೆಂದು ನಾನು ನಿರೀಕ್ಷಿಸುತ್ತಿರಲು, [QE][QS2]ಅದು ಹುಳಿ ಹಣ್ಣನ್ನು ಕೊಟ್ಟಿದ್ದು ಏಕೆ? [QE]
5. [QS]ನನ್ನ ದ್ರಾಕ್ಷಿ ತೋಟಕ್ಕೆ [QE][QS2]ನಾನು ಮಾಡುವುದು ಏನೆಂದು ನಾನು ನಿಮಗೆ ತಿಳಿಸುತ್ತೇನೆ. [QE][QS]ನಾನು ಅದರ ಬೇಲಿಯನ್ನು ತೆಗೆದುಹಾಕುವೆನು. [QE][QS2]ಆಗ ದನಕರುಗಳು ಅದನ್ನು ಮೇಯ್ದುಬಿಡುವುದು. [QE][QS]ಅದರ ಗೋಡೆಯನ್ನು ಕೆಡವಿಬಿಡುವೆನು, [QE][QS2]ಆಗ ಅದು ತುಳಿದಾಟಕ್ಕೆ ಈಡಾಗುವುದು. [QE]
6. [QS]ಅದನ್ನು ನಾನು ಹಾಳಾಗಲು ಬಿಡುವೆನು. [QE][QS2]ಅದರ ಕುಡಿ ಯಾರೂ ಕತ್ತರಿಸುವುದಿಲ್ಲ, ಅಗೆಯುವುದೂ ಇಲ್ಲ, [QE][QS2]ಅದರಲ್ಲಿ ಮುಳ್ಳು ಕಳೆ ಬೆಳೆಯುವುದು. [QE][QS]ಅದರ ಮೇಲೆ ಮಳೆ ಸುರಿಸಬಾರದೆಂದು [QE][QS2]ಮೋಡಗಳಿಗೆ ಆಜ್ಞಾಪಿಸುವೆನು.” [QE][PBR]
7. [QS]ಸೇನಾಧೀಶ್ವರ ಯೆಹೋವ ದೇವರ ದ್ರಾಕ್ಷಿತೋಟವು [QE][QS2]ಇಸ್ರಾಯೇಲಿನ ಮನೆತನವು. [QE][QS]ಯೆಹೂದದ ಜನವೋ [QE][QS2]ದೇವರ ಇಷ್ಟದ ಗಿಡವು. [QE][QS]ಅವರು ನ್ಯಾಯವನ್ನು ನಿರೀಕ್ಷಿಸಲು, ಹಿಂಸೆಯೂ, [QE][QS2]ನೀತಿಯನ್ನು ನಿರೀಕ್ಷಿಸಲು ಗೋಳಾಟವು ಸಿಕ್ಕಿತು. [QE]
8. {#1ಶಾಪಗಳೂ, ತೀರ್ಪುಗಳೂ } [QS]ಅಯ್ಯೋ, ಭೂಮಿಯ ಮಧ್ಯದಲ್ಲಿ [QE][QS2]ಒಂಟಿಯಾಗಿ ವಾಸಿಸುವಂತೆ [QE][QS]ಮನೆಗೆ ಮನೆ ಕೂಡಿಸಿ, [QE][QS2]ಹೊಲಕ್ಕೆ ಹೊಲ ಸೇರಿಸುವ ನಿಮಗೆ ಕಷ್ಟ! [QE]
9. [PS]ಸೇನಾಧೀಶ್ವರ ಯೆಹೋವ ದೇವರು ನನ್ನ ಕಿವಿಗಳಲ್ಲಿ ಹೇಳುವುದೇನೆಂದರೆ: [PE][QS]“ನಿಜವಾಗಿಯೂ ದೊಡ್ಡ ಮನೆಗಳು ಬರಿದಾಗುವುವು [QE][QS2]ಸುಂದರ ಭವನಗಳು ನಿವಾಸಿಗಳಿಲ್ಲದೆ ಹಾಳಾಗುವುವು. [QE]
10. [QS]ಹತ್ತು ಎಕರೆ ದ್ರಾಕ್ಷಿತೋಟ ಕೇವಲ ಇಪ್ಪತ್ತೆರಡು ಲೀಟರ್[* ಹೀಬ್ರೂ ಭಾಷೆಯಲ್ಲಿ ಒಂದು ಬತ್, ಅಂದರೆ ಸುಮಾರು 22 ಲೀಟರ್ ] ದ್ರಾಕ್ಷಾರಸವನ್ನು ಕೊಡುವುದು. [QE][QS2]ಸುಮಾರು ನೂರಾ ಅರವತ್ತು ಕಿಲೋಗ್ರಾಂ [† ಹೀಬ್ರೂ ಭಾಷೆಯಲ್ಲಿ ಒಂದು ಹೋಮೆರ್, ಅಂದರೆ ಸುಮಾರು 160 ಕಿಲೋಗ್ರಾಂ ] ಬೀಜಬಿತ್ತಿದರೆ, ಕೇವಲ ಹದಿನಾರು ಕಿಲೋಗ್ರಾಂ [‡ ಹೀಬ್ರೂ ಭಾಷೆಯಲ್ಲಿ ಒಂದು ಎಫಾ, ಅಂದರೆ ಸುಮಾರು 16 ಕಿಲೋಗ್ರಾಂ ] ಧಾನ್ಯ ಮಾತ್ರ ಸಿಗುವುದು.” [QE][PBR]
11. [QS]ಮದ್ಯಪಾನವನ್ನು ಅತಿಯಾಗಿ ಕುಡಿಯಲು [QE][QS2]ಬೆಳಗಿನ ಜಾವದಲ್ಲಿ ಎದ್ದು [QE][QS]ರಾತ್ರಿವರೆಗೂ ದ್ರಾಕ್ಷಾರಸದಿಂದ ಅಮಲೇರಿದವರಾಗಿ [QE][QS2]ಕಾಲಕಳೆಯುವವರಿಗೆ ಕಷ್ಟ! [QE]
12. [QS]ಅವರ ಹಬ್ಬಗಳಲ್ಲಿ ಕಿನ್ನರಿ, ವೀಣೆ, [QE][QS2]ದಮ್ಮಡಿ, ಕೊಳಲು ಮತ್ತು ಮದ್ಯಪಾನ ಇರುವುವು. [QE][QS]ಆದರೆ ಯೆಹೋವ ದೇವರ ಕೆಲಸವನ್ನು ಅವರು ಲಕ್ಷಿಸರು ಇಲ್ಲವೆ [QE][QS2]ಅವರ ಕೈಗೆಲಸವನ್ನು ಲಕ್ಷಿಸುವುದಿಲ್ಲ. [QE]
13. [QS]ಆದಕಾರಣ ನನ್ನ ಜನರು ಜ್ಞಾನಹೀನರಾಗಿ [QE][QS2]ಸೆರೆಗೆ ಹೋದರು; [QE][QS]ಅವರ ಘನವಂತರು ಹಸಿವಿನಿಂದ ಸಾಯುವರು, [QE][QS2]ಹಾಗೆ ಜನಸಮೂಹವು ಬಾಯಾರಿಕೆಯಿಂದ ಒಣಗುವುದು. [QE]
14. [QS]ಹೀಗಿರುವುದರಿಂದ ಪಾತಾಳವು ತನಗೆ ತಾನೇ ದೊಡ್ಡದಾಗಿ ಮಿತಿಯಿಲ್ಲದಷ್ಟು [QE][QS2]ತನ್ನ ಬಾಯಿಯನ್ನು ತೆರೆಯಲು [QE][QS]ಅವರ ವೈಭವ, ಸಮೂಹ, ಕೋಲಾಹಲ, ಉಲ್ಲಾಸಪಡುವುದು [QE][QS2]ಇವೆಲ್ಲವೂ ಅದರಲ್ಲಿ ಬೀಳುವುವು. [QE]
15. [QS]ನರಮಾನವರು ತಗ್ಗಿಹೋಗುವರು. [QE][QS2]ಅಹಂಭಾವದ ಕಣ್ಣುಗಳು ಕಂಗೆಡುವುವು. [QE]
16. [QS]ಆದರೆ ಸೇನಾಧೀಶ್ವರ ಯೆಹೋವ ದೇವರು ನ್ಯಾಯತೀರ್ಪಿನಲ್ಲಿ ಉನ್ನತವಾಗಿರುವರು. [QE][QS2]ಪರಿಶುದ್ಧ ದೇವರು ತಮ್ಮ ನ್ಯಾಯದಲ್ಲಿ ಪರಿಶುದ್ಧರೆಂದು ಕಾಣಿಸಿಕೊಳ್ಳುವರು. [QE]
17. [QS]ಪಟ್ಟಣ ಪ್ರದೇಶಗಳು ಹಾಳಾಗಿ ಮೇಕೆಮರಿಗಳಿಗೆ ಹುಲ್ಲುಗಾವಲುಗಳಾಗುವುವು. [QE][QS2]ಕುರಿಮರಿಗಳು ಅಲ್ಲಿ ಮೇಯುವುವು. [QE][PBR]
18. [QS]ಅಯ್ಯೋ, ವ್ಯರ್ಥವಾದ ಹಗ್ಗಗಳಿಂದ ಅಪರಾಧವನ್ನೂ, [QE][QS2]ಬಂಡಿಹಗ್ಗದಿಂದಲೋ ಎಂಬಂತೆ ಪಾಪವನ್ನೂ ಎಳೆದು, [QE]
19. [QS]ನಾವು ಅವರ ಕೆಲಸವನ್ನು ನೋಡುವಂತೆ, [QE][QS2]“ದೇವರು ತ್ವರೆಯಾಗಿ [QE][QS2]ಅದನ್ನು ಬೇಗನೆ ಮಾಡಲಿ. [QE][QS]ನಾವು ಇಸ್ರಾಯೇಲಿನ ಪರಿಶುದ್ಧರ [QE][QS2]ಆಲೋಚನೆಯನ್ನು ತಿಳಿದುಕೊಳ್ಳುವ ಹಾಗೆ [QE][QS2]ಅದು ಸಮೀಪಿಸಿ ಬರಲಿ ಎಂದು ಹೇಳುವವರಿಗೆ ಕಷ್ಟ!” [QE][PBR]
20. [QS]ಕೇಡಿಗೆ ಮೇಲೆಂದೂ, ಮೇಲಿಗೆ ಕೇಡೆಂದೂ ಕರೆದು, [QE][QS2]ಕತ್ತಲೆಯನ್ನು ಬೆಳಕೆಂದೂ, [QE][QS]ಬೆಳಕನ್ನು ಕತ್ತಲೆಯೆಂದೂ; [QE][QS2]ಕಹಿಯನ್ನು ಸಿಹಿ ಎಂದೂ, [QE][QS2]ಸಿಹಿಯನ್ನು ಕಹಿ ಎಂದೂ ಎಣಿಸುವವರಿಗೆ ಕಷ್ಟ! [QE][PBR]
21. [QS]ತಮ್ಮ ಸ್ವಂತ ಕಣ್ಣುಗಳಲ್ಲಿ ಜ್ಞಾನಿಗಳು [QE][QS2]ತಮ್ಮ ಸ್ವಂತ ದೃಷ್ಟಿಯಲ್ಲಿ ವಿವೇಕಿಗಳು ಆಗಿರುವವರಿಗೆ ಕಷ್ಟ! [QE][PBR]
22. [QS]ಅಯ್ಯೋ, ದ್ರಾಕ್ಷಾರಸ ಕುಡಿಯುವುದರಲ್ಲಿ ಶೂರರೂ, [QE][QS2]ಮದ್ಯ ಸಾಹಸಿಗಳೂ, [QE]
23. [QS]ಲಂಚಕ್ಕೋಸ್ಕರ ದುಷ್ಟನನ್ನು ನೀತಿವಂತನೆಂದು ನಿರ್ಣಯಿಸಿ, [QE][QS2]ನೀತಿಯನ್ನು ನೀತಿವಂತನಿಂದ ತೆಗೆದು ಹಾಕುವವರಿಗೂ ಕಷ್ಟ! [QE]
24. [QS]ಏಕೆಂದರೆ ಅವರು ಸೇನಾಧೀಶ್ವರ ಯೆಹೋವ ದೇವರ ನಿಯಮವನ್ನು ನಿರಾಕರಿಸಿದ್ದರಿಂದಲೂ, [QE][QS2]ಇಸ್ರಾಯೇಲಿನ ಪರಿಶುದ್ಧರ ವಾಕ್ಯವನ್ನು ಅಸಡ್ಡೆ ಮಾಡಿದ್ದರಿಂದಲೂ [QE][QS]ಬೆಂಕಿಯು ಕೊಳ್ಳಿಯನ್ನು ನುಂಗಿ ಬಿಡುವ ಹಾಗೆಯೂ, [QE][QS2]ಜ್ವಾಲೆಯು ಒಣಹುಲ್ಲನ್ನು ಸುಟ್ಟುಬಿಡುವಂತೆಯೂ, [QE][QS]ಅದರ ಬೇರು ಕೊಳೆಯುವಂತೆಯೂ, [QE][QS2]ಚಿಗುರು ಅದರ ಧೂಳಿನಂತೆಯೂ ಏರಿ ಹೋಗುವುವು. [QE]
25. [QS]ಆದಕಾರಣ ಯೆಹೋವ ದೇವರು ಕೋಪಗೊಂಡು ಜನರಿಗೆ ವಿರೋಧವಾಗಿ ಉರಿಗೊಂಡು [QE][QS2]ಅವರ ಮೇಲೆ ತಮ್ಮ ಕೈಚಾಚಿ, ಅವರನ್ನು ಹೊಡೆದಿದ್ದಾರೆ, [QE][QS]ಬೆಟ್ಟಗುಡ್ಡಗಳು ಕಂಪಿಸಿದವು. [QE][QS2]ಅವರ ಹೆಣಗಳು ಹರಿದು ಬೀದಿಗಳ ಮಧ್ಯದಲ್ಲಿ ಬಿದ್ದಿರುವುವು. [QE][PBR] [QS]ಇಷ್ಟೆಲ್ಲಾ ಆದರೂ ದೇವರ ಕೋಪವು ತೀರದೆ, [QE][QS2]ಅವರ ಕೈ ಇನ್ನೂ ಚಾಚಿಯೇ ಇರುವುದು. [QE][PBR]
26. [QS]ಅವರು ದೂರದ ಜನಾಂಗದವರಿಗೆ [QE][QS2]ಗುರುತಿಗಾಗಿ ಧ್ವಜವನ್ನೆತ್ತಿ, [QE][QS]ಭೂಮಿಯ ಕಟ್ಟಕಡೆಯಿಂದ ಅವರಿಗೆ ಸೀಟಿ ಹಾಕುವರು. [QE][QS2]ಇಗೋ, ಅವರು ತ್ವರೆಯಾಗಿ ಫಕ್ಕನೆ ಬರುವರು, [QE]
27. [QS]ಅವರಲ್ಲಿ ಯಾರೂ ದಣಿದು ಮುಗ್ಗರಿಸರು, [QE][QS2]ಅವರು ತೂಕಡಿಸುವುದಿಲ್ಲ, ನಿದ್ರಿಸುವುದಿಲ್ಲ, [QE][QS]ಅವರ ನಡುಕಟ್ಟು ಬಿಚ್ಚಿಕೊಳ್ಳುವುದಿಲ್ಲ. [QE][QS2]ಕೆರದ ಬಾರು ಹರಿಯುವುದಿಲ್ಲ. [QE]
28. [QS]ಅವರ ಬಾಣಗಳು ಹದವಾಗಿವೆ. [QE][QS2]ಅವರ ಬಿಲ್ಲುಗಳು ಬಿಗಿದಿವೆ, [QE][QS]ಅವರ ಕುದುರೆಗಳ ಗೊರಸುಗಳು ಕಲ್ಲಿನಂತೆಯೂ, [QE][QS2]ಅವರ ರಥಗಳ ಚಕ್ರಗಳು ಬಿರುಗಾಳಿಯಂತೆಯೂ ರಭಸವಾಗಿವೆ. [QE]
29. [QS]ಅವರ ಗರ್ಜನೆಯು ಸಿಂಹ ಆರ್ಭಟಿಸಿದಂತಿದೆ. [QE][QS2]ಪ್ರಾಯದ ಸಿಂಹ ಆರ್ಭಟಿಸಿದಂತಿದೆ. [QE][QS]ಹೌದು, ಗರ್ಜಿಸುತ್ತಾ ಬೇಟೆಹಿಡಿದು ಭದ್ರವಾಗಿ ಹೊತ್ತುಕೊಂಡು ಹೋಗುತ್ತಾರೆ, [QE][QS2]ಅದನ್ನು ಬಿಡಿಸುವವನು ಒಬ್ಬನೂ ಇಲ್ಲ. [QE]
30. [QS]ಆ ದಿನದಲ್ಲಿ ಅವರು ಸಮುದ್ರವು ಭೋರ್ಗರೆಯುವಂತೆ [QE][QS2]ಅದರ ಮೇಲೆ ಗರ್ಜಿಸುವರು. [QE][QS]ಭೂಮಿಯನ್ನು ದೃಷ್ಟಿಸಿದರೆ ಅಂಧಕಾರವನ್ನೂ, [QE][QS2]ದುಃಖವನ್ನೂ ನೋಡುವೆ. [QE][QS2]ಸೂರ್ಯ ಕೂಡ ಮೋಡಗಳಿಂದ ಕಪ್ಪಾಗುವುದು. [QE]