1. {#1ಯೆಹೋವ ದೇವರ ಸೇವಕ } [QS]ದ್ವೀಪಗಳೇ, ನನ್ನ ಮಾತನ್ನು ಕೇಳಿರಿ. [QE][QS2]ದೂರದ ರಾಷ್ಟ್ರಗಳೇ, ಕಿವಿಗೊಡಿರಿ! [QE][QS]ನನ್ನ ಜನನದ ಮುಂಚೆಯೇ ಯೆಹೋವ ದೇವರು ನನ್ನನ್ನು ಕರೆದರು. [QE][QS2]ತಾಯಿಯ ಉದರದಲ್ಲಿದ್ದಾಗಲೇ ನನಗೆ ಹೆಸರಿಟ್ಟರು. [QE]
2. [QS]ಆತನು ನನ್ನ ಬಾಯನ್ನು ಹರಿತವಾದ ಖಡ್ಗವನ್ನಾಗಿ ಮಾಡಿ, [QE][QS2]ತನ್ನ ಕೈ ನೆರಳಿನಲ್ಲಿ ನನ್ನನ್ನು ಮರೆಯಾಗಿಟ್ಟಿದ್ದಾನೆ. [QE][QS]ನನ್ನನ್ನು ಆತನು ನುಣುಪಾದ ಬಾಣವನ್ನಾಗಿ ರೂಪಿಸಿ, [QE][QS2]ತನ್ನ ಬತ್ತಳಿಕೆಯಲ್ಲಿ ಮುಚ್ಚಿಟ್ಟಿದ್ದಾನೆ. [QE]
3. [QS]ಆತನು ನನಗೆ, “ನೀನು ನನ್ನ ಸೇವಕನು. [QE][QS2]ನಾನು ಮಹಿಮೆ ಹೊಂದಬೇಕಾದ ಇಸ್ರಾಯೇಲೂ ಆಗಿದ್ದೀ!” ಎಂದು ಹೇಳಿದನು. [QE]
4. [QS]ಅದಕ್ಕೆ ನಾನು, “ನಾನು ಪಡುವ ಪ್ರಯಾಸವು ವ್ಯರ್ಥ. [QE][QS2]ನನ್ನ ಶಕ್ತಿಯೆಲ್ಲ ಶೂನ್ಯವಾಯಿತು, ನನ್ನ ಸಾಮರ್ಥ್ಯವೆಲ್ಲ ವ್ಯರ್ಥವಾಯಿತು,” [QE][QS2]ಎಂದು ಹೇಳಿದೆನು. [QE][QS]ಆದರೂ ನಿಶ್ಚಯವಾಗಿ ನನ್ನ ನ್ಯಾಯವು ಯೆಹೋವ ದೇವರ ಬಳಿಯಲ್ಲಿಯೂ, [QE][QS2]ನನ್ನ ಪ್ರತಿಫಲವು ನನ್ನ ದೇವರಲ್ಲಿಯೂ ಉಂಟು. [QE][PBR]
5. [QS]ಈಗ ಯೆಹೋವ ದೇವರು ಹೀಗೆ ಹೇಳುತ್ತಾರೆ, ಯಾಕೋಬ್ಯರನ್ನು ತನ್ನ ಬಳಿಗೆ ಕರೆತರುವಂತೆಯೂ, [QE][QS2]ಇಸ್ರಾಯೇಲರನ್ನು ತನ್ನೊಂದಿಗೆ ಸೇರಿಸಿಕೊಳ್ಳುವಂತೆಯೂ [QE][QS]ದೇವರು ಗರ್ಭದಲ್ಲಿಯೇ ನನ್ನನ್ನು [QE][QS2]ತನ್ನ ಸೇವಕನನ್ನಾಗಿ ರೂಪಿಸಿದನು. [QE][QS]ಆದರೂ ನಾನು ಯೆಹೋವ ದೇವರ ದೃಷ್ಟಿಯಲ್ಲಿ ಮಾನ್ಯನಾಗಿರುವೆನು. [QE][QS2]ನನ್ನ ದೇವರೇ ನನಗೆ ಬಲವು. [QE]
6. [QS]ಆತನೇ ಈಗ ಹೀಗೆನ್ನುತ್ತಾನೆ, [QE][QS]“ನೀನು ನನ್ನ ಸೇವಕನಾಗಿ ಮಾಡಬೇಕಾದವುಗಳಲ್ಲಿ [QE][QS2]ಯಾಕೋಬಿನ ಕುಲಗಳನ್ನು ಉನ್ನತಪಡಿಸುವುದೂ, [QE][QS2]ಇಸ್ರಾಯೇಲಿನಲ್ಲಿ ರಕ್ಷಿತರಾದವರನ್ನು ತಿರುಗಿ ಬರಮಾಡುವುದೂ ಅಲ್ಪ ಕಾರ್ಯವಲ್ಲವೇ, [QE][QS]ನನ್ನ ರಕ್ಷಣೆಯು ಭೂಲೋಕದ ಕಟ್ಟಕಡೆಯವರೆಗೆ ವ್ಯಾಪಿಸುವಂತೆ [QE][QS2]ನಿನ್ನನ್ನು ಸರ್ವಜನಾಂಗಗಳಿಗೂ ಬೆಳಕನ್ನಾಗಿ ಮಾಡುವೆನು.” [QE][PBR]
7. [QS]ಮನಃಪೂರ್ವಕವಾಗಿ ತಿರಸ್ಕೃತನಾದವನೂ [QE][QS2]ಜನಾಂಗಕ್ಕೆ ಅಸಹ್ಯನೂ, ಅಧಿಕಾರಿಗಳ ಸೇವಕನಿಗೆ [QE][QS]ಇಸ್ರಾಯೇಲಿನ ವಿಮೋಚಕನೂ [QE][QS2]ಮತ್ತು ಅವನ ಪರಿಶುದ್ಧನಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: [QE][QS]“ಯೆಹೋವ ದೇವರ ನಂಬಿಗಸ್ತಿಕೆಯನ್ನೂ, [QE][QS2]ನೀನು ಆಯ್ದುಕೊಂಡ ಇಸ್ರಾಯೇಲಿನ [QE][QS]ಪರಿಶುದ್ಧನನ್ನೂ ಕಂಡು ಅರಸರು ಎದ್ದು ನಿಲ್ಲುತ್ತಾರೆ, [QE][QS2]ಅಧಿಪತಿಗಳು ಸಹ ಆರಾಧಿಸುವರು.” [QE]
8. {#1ಇಸ್ರಾಯೇಲಿನ ಪುನಃಸ್ಥಾಪನೆ } [PS]ಯೆಹೋವ ದೇವರು ಹೇಳುವುದೇನೆಂದರೆ: [PE][QS]“ಪ್ರಸನ್ನತೆಯ ಕಾಲದಲ್ಲಿ ನಿನಗೆ ಸದುತ್ತರವನ್ನು ದಯಪಾಲಿಸಿದ್ದೇನೆ. [QE][QS2]ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯ ಮಾಡಿದ್ದೇನೆ. [QE][QS]ನಾನು ನಿನ್ನನ್ನು ಕಾಪಾಡಿ, ಭೂಮಿಯನ್ನು ಸ್ಥಾಪಿಸುವುದಕ್ಕೂ, [QE][QS2]ಹಾಳಾಗಿರುವ ಸ್ಥಳಗಳನ್ನು [QE][QS]ಸೊತ್ತಾಗಿ ಹೊಂದುವುದಕ್ಕೂ, [QE][QS2]ಜನರ ಒಡಂಬಡಿಕೆಯನ್ನಾಗಿಯೂ ನೇಮಿಸಿದ್ದೇನೆ. [QE]
9. [QS]ನೀನು ಬಂಧಿತರಿಗೆ, ‘ಹೊರಗೆ ಬನ್ನಿರಿ,’ [QE][QS2]ಕತ್ತಲೆಯಲ್ಲಿರುವವರಿಗೆ, ‘ಬೆಳಕಿಗೆ ಬನ್ನಿರಿ,’ ಎಂದು ಹೇಳಬಹುದು. [QE][PBR] [QS]“ಅವರು ದಾರಿಗಳಲ್ಲಿ ಮೇಯಿಸುವರು. [QE][QS2]ಅವರ ಎಲ್ಲಾ ಎತ್ತರವಾದ ಪ್ರದೇಶಗಳೂ ಕೂಡ ಅವರಿಗೆ ಹುಲ್ಲುಗಾವಲಾಗಿರುವುವು. [QE]
10. [QS]ಅವರಿಗೆ ಹಸಿವೆಯಾಗಲಿ, ಬಾಯಾರಿಕೆಯಾಗಲಿ ಇರದು. [QE][QS2]ಝಳವೂ, ಬಿಸಿಲೂ ಬಡಿಯದು. [QE][QS]ಏಕೆಂದರೆ ಅವರನ್ನು ಕರುಣಿಸುವ ದೇವರು ಅವರನ್ನು ನಡೆಸುತ್ತಾ, [QE][QS2]ನೀರುಕ್ಕುವ ಒರತೆಗಳ ಬಳಿಗೆ ತರುವರು. [QE]
11. [QS]ನನ್ನ ಬೆಟ್ಟಗಳನ್ನೆಲ್ಲಾ ಸಮ ದಾರಿಯನ್ನಾಗಿ ಮಾಡಿ, [QE][QS2]ನನ್ನ ರಾಜಮಾರ್ಗಗಳನ್ನು ಎತ್ತರಿಸುವೆನು. [QE]
12. [QS]ಇವರು ದೂರದಿಂದ ಬರುತ್ತಾರೆ. [QE][QS2]ಇವರು ಉತ್ತರದಿಂದ ಮತ್ತು ಪಶ್ಚಿಮದಿಂದ [QE][QS2]ಇವರು ಸೀನಿಮ್ ದೇಶದಿಂದ ಬರುತ್ತಿದ್ದಾರೆ.” [QE][PBR]
13. [QS]ಆಕಾಶವೇ, ಹರ್ಷಧ್ವನಿ ಮಾಡು; [QE][QS2]ಭೂಮಿಯೇ, ಉಲ್ಲಾಸಪಡು! [QE][QS2]ಪರ್ವತಗಳೇ, ಹರ್ಷಧ್ವನಿಗೈಯಿರಿ! [QE][QS]ಏಕೆಂದರೆ ಯೆಹೋವ ದೇವರು ತನ್ನ ಜನರನ್ನು ಆಧರಿಸಿ, [QE][QS2]ಶ್ರಮೆಪಟ್ಟ ತನ್ನವರನ್ನು ಕರುಣಿಸುವನು. [QE][PBR]
14. [QS]ಆದರೆ ಚೀಯೋನ್ ಎಂಬಾಕೆಯು, “ಯೆಹೋವ ದೇವರು ನನ್ನನ್ನು ತಳ್ಳಿಬಿಟ್ಟಿದ್ದಾನೆ. [QE][QS2]ನನ್ನ ಯೆಹೋವ ದೇವರು ನನ್ನನ್ನು ಮರೆತುಬಿಟ್ಟಿದ್ದಾನಲ್ಲಾ!” ಎಂದುಕೊಂಡಳು. [QE][PBR]
15. [QS]“ತನ್ನ ಗರ್ಭದ ಮಗನ ಮೇಲೆ ಕರುಣಿಸದೆ ಒಬ್ಬ ಸ್ತ್ರೀ [QE][QS2]ತನ್ನ ಎದೆಹಾಲನ್ನು ಕುಡಿಯುವ ಕೂಸನ್ನು ಮರೆತಾಳೇ? [QE][QS]ಹೌದು, ಅವಳು ಮರೆಯಬಹುದು, [QE][QS2]ಆದರೂ ನಾನು ನಿನ್ನನ್ನು ಮರೆಯುವುದಿಲ್ಲ. [QE]
16. [QS]ಇಗೋ, ನಾನು ನನ್ನ ಅಂಗೈಗಳಲ್ಲಿ ನಿನ್ನನ್ನು ಚಿತ್ರಿಸಿಕೊಂಡಿದ್ದೇನೆ. [QE][QS2]ನಿನ್ನ ಗೋಡೆಗಳು ಸದಾ ನನ್ನ ಕಣ್ಣೆದುರಿನಲ್ಲಿವೆ. [QE]
17. [QS]ನಿನ್ನ ಮಕ್ಕಳು ತ್ವರೆಪಟ್ಟು ಬರುತ್ತಿದ್ದಾರೆ. [QE][QS2]ನಿನ್ನನ್ನು ಕೆಡವಿ ಹಾಳುಮಾಡಿದವರು ನಿನ್ನೊಳಗಿಂದ ಹೊರಟು ಹೋಗುವರು. [QE]
18. [QS]ನಿನ್ನ ಕಣ್ಣುಗಳನ್ನು ಎತ್ತಿ ಸುತ್ತಲೂ ನೋಡು. [QE][QS2]ಇವರೆಲ್ಲರೂ ಕೂಡಿಕೊಂಡು ನಿನ್ನ ಬಳಿಗೆ ಬರುತ್ತಿದ್ದಾರೆ. [QE][QS]ಯೆಹೋವ ದೇವರು ಹೇಳುವುದೇನೆಂದರೆ,” ನನ್ನ ಜೀವದಾಣೆ, [QE][QS2]ನಿಶ್ಚಯವಾಗಿ ನೀನು ಅವರನ್ನೆಲ್ಲಾ ಆಭರಣಗಳಂತೆ ಧರಿಸಿಕೊಳ್ಳುವೆ [QE][QS2]ಮತ್ತು ನೀನು ಅವರನ್ನು ಮದಲಗಿತ್ತಿಯಂತೆ ಕಟ್ಟಿಕೊಳ್ಳುವೆ. [QE][PBR] [PBR]
19. [QS]“ಏಕೆಂದರೆ ನಿನ್ನ ಹಾಳಾದ ಸ್ಥಳಗಳೂ ನಿನ್ನ ಏಕಾಂತ ಸ್ಥಳಗಳೂ [QE][QS2]ಕೆಡವಿಬಿದ್ದ ನಿನ್ನ ದೇಶವೂ [QE][QS]ಈಗ ನಿವಾಸಿಗಳಿಗೆ ಇಕ್ಕಟ್ಟಾಗುವುವು. [QE][QS2]ನಿನ್ನನ್ನು ನುಂಗಿದವರು ದೂರವಾಗುವರು. [QE]
20. [QS]ನಿಮ್ಮ ದುಃಖದ ಸಮಯದಲ್ಲಿ ಜನಿಸಿದ ಮಕ್ಕಳು [QE][QS2]‘ಸ್ಥಳವು ನನಗೆ ಇಕ್ಕಟ್ಟಾಯಿತು. [QE][QS]ನಾನು ವಾಸಿಸುವುದಕ್ಕೆ ಸ್ಥಳಕೊಡು,’ [QE][QS2]ಎಂದು ಇನ್ನೂ ನಿಮ್ಮ ವಿಚಾರಣೆಯಲ್ಲಿ ಹೇಳುತ್ತಾರೆ. [QE]
21. [QS]‘ನನಗೋಸ್ಕರ ಇವರನ್ನು [QE][QS2]ಯಾರು ನನ್ನಲ್ಲಿ ಪಡೆದರು? [QE][QS]ನಾನು ದುಃಖಿತ ಮತ್ತು ಬಂಜೆಯಾಗಿದ್ದೆ; [QE][QS2]ನನ್ನನ್ನು ಗಡಿಪಾರು ಮಾಡಿ ತಿರಸ್ಕರಿಸಲಾಯಿತು. [QE][QS2]ಇವುಗಳನ್ನು ತಂದವರು ಯಾರು? [QE][QS]ನಾನು ಒಬ್ಬಂಟಿಯಾಗಿ ಉಳಿದಿದ್ದೇನೆ, [QE][QS2]ಇವರನ್ನು ಸಾಕಿದವರು ಯಾರು? ಅವರೆಲ್ಲಿದ್ದರು?’ ” [QE][QS2]ಎಂದುಕೊಳ್ಳುವೆ. [QE]
22. [PS]ಸಾರ್ವಭೌಮ ಯೆಹೋವ ದೇವರು, ಇಂತೆನ್ನುತ್ತಾರೆ, [PE][QS]“ಇಗೋ, ನಾನು ರಾಷ್ಟ್ರಗಳ ಕಡೆಗೆ ಕೈಯೆತ್ತಿ [QE][QS2]ಜನರಿಗೆ ನನ್ನ ಧ್ವಜವನ್ನು ಎತ್ತುವೆನು. [QE][QS]ಅವರು ನಿನ್ನ ಪುತ್ರರನ್ನು ಕೈಹಿಡಿದು ತರುವರು. [QE][QS2]ನಿನ್ನ ಪುತ್ರಿಯರನ್ನು ಹೆಗಲ ಮೇಲೆ ತರುವರು. [QE]
23. [QS]ಅರಸರು ನಿನಗೆ ಸಾಕು ತಂದೆಗಳು. [QE][QS2]ಅವರ ರಾಣಿಯರು ನಿನಗೆ ದಾದಿಗಳಾಗುವರು. [QE][QS]ಅವರು ಭೂಮಿಯ ಕಡೆಗೆ ತಮ್ಮ ಮುಖವನ್ನು ಬಾಗಿಸಿ, [QE][QS2]ಅಡ್ಡಬಿದ್ದು, ನಿನ್ನ ಪಾದದ ಧೂಳನ್ನು ನೆಕ್ಕುವರು. [QE][QS]ಆಗ ನಾನೇ ಯೆಹೋವ ಎಂದು ನೀನು ತಿಳಿದುಕೊಳ್ಳುವೆ. [QE][QS2]ಏಕೆಂದರೆ ನನ್ನನ್ನು ನಿರೀಕ್ಷಿಸಿಕೊಂಡಿರುವವರು ನಾಚಿಕೆಗೆ ಈಡಾಗರು.” [QE][PBR]
24. [QS]ಶೂರನ ಕೈಯೊಳಗಿಂದ ಕೊಳ್ಳೆಯನ್ನು ತೆಗೆದುಕೊಳ್ಳಬಹುದೋ? [QE][QS2]ಭಯಂಕರನಿಂದ ಸೆರೆಯವರನ್ನು ಬಿಡಿಸಬಹುದೋ? [QE]
25. [PS]ಆದರೆ ಯೆಹೋವ ದೇವರು ಹೀಗೆನ್ನುತ್ತಾರೆ: [PE][QS]“ಶೂರನ ಸೆರೆಯವರು ಅಪಹರಿಸಲಾಗುವರು. [QE][QS2]ಭೀಕರನ ಕೊಳ್ಳೆ ಕಸಿದುಕೊಳ್ಳಲಾಗುವುದು. [QE][QS]ಏಕೆಂದರೆ ನಿನ್ನೊಡನೆ ಹೋರಾಡುವವನ ಸಂಗಡ ನಾನೇ ಹೋರಾಡಿ, [QE][QS2]ನಿನ್ನ ಮಕ್ಕಳನ್ನು ನಾನು ರಕ್ಷಿಸುವೆನು. [QE]
26. [QS]ನಿನ್ನ ಹಿಂಸಕರು ಸ್ವಮಾಂಸವನ್ನೇ ಭುಜಿಸುವಂತೆ ಅನುಮತಿಸುವೆನು. [QE][QS2]ದ್ರಾಕ್ಷಾರಸವನ್ನು ಕುಡಿಯುವಂತೆ ಅವರು ಸ್ವರಕ್ತವನ್ನೇ ಕುಡಿದು ಅಮಲೇರುವರು. [QE][QS]ಆಗ ಯೆಹೋವನಾದ ನಾನೇ ನಿನ್ನ ರಕ್ಷಕನೂ, [QE][QS2]ನಿನ್ನ ವಿಮೋಚಕನೂ, ಯಾಕೋಬ್ಯರ ಶೂರನೂ ಎಂದು [QE][QS2]ನರಮಾನವರೆಲ್ಲರಿಗೂ ಗೊತ್ತಾಗುವುದು.” [QE]