1. {#1ವಿಮೋಚನೆಯ ಸಂತೋಷ } [QS]ಅರಣ್ಯವೂ, ಮರುಭೂಮಿಯೂ ಆನಂದಿಸುವುದು: [QE][QS2]ಒಣ ನೆಲವು ಹರ್ಷಿಸಿ, ತಾವರೆಯಂತೆ ಕಳಕಳಿಸುವುದು. [QE]
2. [QS]ಅದು ಸಮೃದ್ಧಿಯಾಗಿ ಅರಳಿ, [QE][QS2]ಆನಂದ ಧ್ವನಿ ಎತ್ತಿ ಉಲ್ಲಾಸಿಸುವುದು. [QE][QS]ಲೆಬನೋನಿನ ಘನತೆಯು ಮತ್ತು ಕರ್ಮೆಲ್, [QE][QS2]ಶಾರೋನಿನ ಗೌರವವು ಅದಕ್ಕೆ ಕೊಡಲಾಗುವುದು. [QE][QS]ಅವರು ಯೆಹೋವ ದೇವರ ಮಹಿಮೆಯನ್ನು [QE][QS2]ಮತ್ತು ನಮ್ಮ ದೇವರ ಘನತೆಯನ್ನು ಕಾಣುವರು. [QE][PBR]
3. [QS]ನೀವು ಬಲಹೀನವಾದ ಕೈಗಳನ್ನು ಬಲಪಡಿಸಿರಿ. [QE][QS2]ನಡುಗುವ ಮೊಣಕಾಲುಗಳನ್ನು ದೃಢಪಡಿಸಿರಿ. [QE]
4. [QS]ಭಯಭ್ರಾಂತ ಹೃದಯವುಳ್ಳವರಿಗೆ [QE][QS2]ಬಲಗೊಳ್ಳಿರಿ, ಹೆದರಬೇಡಿರಿ. [QE][QS]ಇಗೋ, ನಿಮ್ಮ ದೇವರು ಮುಯ್ಯಿ ತೀರಿಸುವುದಕ್ಕೂ, [QE][QS2]ದೇವರು ಪ್ರತಿಫಲವನ್ನು ಕೊಡುವುದಕ್ಕೂ [QE][QS]ತಾವೇ ಬಂದು ನಿಮ್ಮನ್ನು ರಕ್ಷಿಸುವರು, [QE][QS2]ಎಂದು ಅವರಿಗೆ ಹೇಳಿರಿ. [QE][PBR]
5. [QS]ಆಗ, ಕುರುಡರ ಕಣ್ಣು ಕಾಣುವುದು. [QE][QS2]ಕಿವುಡರ ಕಿವಿಗಳು ಕೇಳಿಸುವುವು. [QE]
6. [QS]ಆಗ ಕುಂಟನು ಜಿಂಕೆಯಂತೆ ಹಾರುವನು, [QE][QS2]ಮೂಕನ ನಾಲಿಗೆಯೂ ಹರ್ಷದಿಂದ ಹಾಡುವುದು. [QE][QS]ಏಕೆಂದರೆ ಮರುಭೂಮಿಯಲ್ಲಿ ನೀರೂ, [QE][QS2]ಮರುಭೂಮಿಯಲ್ಲಿ ಒರತೆಗಳೂ ಒಡೆಯುವುವು. [QE]
7. [QS]ಒಣ ನೆಲವು ಸರೋವರವಾಗುವುದು, [QE][QS2]ಬೆಂಗಾಡು ಪ್ರದೇಶವು ನೀರಿನ ಬುಗ್ಗೆಯಾಗುವುದು. [QE][QS]ನರಿಗಳು ವಾಸಿಸುವ ಪ್ರತಿಯೊಂದು ಮಲಗುವ ಸ್ಥಳದಲ್ಲಿ ಹುಲ್ಲು, [QE][QS2]ಜೊಂಡು, ಆಪು ಹುಲ್ಲುಗಳಿಂದ ತುಂಬಿರುವುದು. [QE][PBR]
8. [QS]ಅಲ್ಲಿ ರಾಜಮಾರ್ಗ ಇರುವುದು. [QE][QS2]ಅದು ಪರಿಶುದ್ಧ ಮಾರ್ಗ ಎನಿಸಿಕೊಳ್ಳುವುದು. [QE][QS2]ಯಾವ ಅಶುದ್ಧನು ಅದರ ಮೇಲೆ ಹಾದು ಹೋಗನು. [QE][QS]ಆದರೆ ಅದು ದೇವಜನರಿಗಾಗಿ ಇರುವುದು. [QE][QS2]ಅಲ್ಲಿ ಹೋಗುವ ಮೂಢನೂ ದಾರಿ ತಪ್ಪನು. [QE]
9. [QS]ಸಿಂಹವು ಅಲ್ಲಿ ಇರದು, [QE][QS2]ಇಲ್ಲವೆ ಕ್ರೂರವಾದ ಮೃಗಗಳು ಅದರ ಮೇಲೆ ಹೋಗವು. [QE][QS2]ಅದು ಅಲ್ಲಿ ಕಾಣುವುದೇ ಇಲ್ಲ. [QE][QS]ಆದರೆ ಬಿಡುಗಡೆಯಾದವರೇ ಅಲ್ಲಿ ನಡೆಯುವರು. [QE]
2. [QS2]ಯೆಹೋವ ದೇವರು ವಿಮೋಚಿಸಿದವರು ಹಿಂದಿರುಗಿಕೊಂಡು [QE][QS2]ಶಾಶ್ವತ ಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು, [QE][QS2]ಉತ್ಸಾಹ ಧ್ವನಿಯೊಡನೆ ಚೀಯೋನಿಗೆ ಸೇರುವರು. [QE][QS]ಅವರು ಹರ್ಷಾನಂದಗಳನ್ನು ಅನುಭವಿಸುವರು. [QE][QS2]ದುಃಖವೂ, ನಿಟ್ಟುಸಿರೂ ಓಡಿಹೋಗುವುವು. [QE]