ಪವಿತ್ರ ಬೈಬಲ್

ಓಪನ್ ಸಮಕಾಲೀನ ಆವೃತ್ತಿ (OCV)
ಯೆಶಾಯ
1. {#1ನಿರಾಶೆ ಹಾಗೂ ಸಹಾಯ } [QS]ಹಾಳು ಮಾಡುತ್ತಿರುವವನೇ, ನಿನಗೆ ಕಷ್ಟ! [QE][QS2]ನಿನ್ನನ್ನು ಯಾರೂ ಸೂರೆಮಾಡದಿದ್ದರೂ ನೀನು ಸೂರೆಮಾಡುತ್ತಿರುವೆ; [QE][QS]ನಿನ್ನನ್ನು ಯಾರೂ ವಂಚಿಸದಿದ್ದರೂ [QE][QS2]ನೀನು ವಂಚನೆ ಮಾಡುತ್ತಿರುವೆ. ಇದಕ್ಕೆಲ್ಲ ಅಂತ್ಯವಿದೆ. [QE][QS]ಈಗ ಹಾಳು ಮಾಡುತ್ತಿರುವ ನೀನು, [QE][QS2]ಆಗ ನೀನೇ ಹಾಳಾಗುವೆ. [QE][QS]ಈಗ ವಂಚನೆ ಮಾಡುತ್ತಿರುವ [QE][QS2]ನೀನೇ ವಂಚಿತನಾಗುವೆ. [QE][PBR]
2. [QS]ಯೆಹೋವ ದೇವರೇ, ನಮ್ಮ ಕಡೆಗೆ ಕೃಪೆ ತೋರಿಸಿರಿ. [QE][QS2]ನಿನಗೋಸ್ಕರ ನಾವು ಕಾದಿದ್ದೇವೆ. [QE][QS]ಪ್ರತಿ ಮುಂಜಾನೆ ನಮಗೆ ಭುಜಬಲವಾಗಿಯೂ, [QE][QS2]ಇಕ್ಕಟ್ಟಿನ ಕಾಲದಲ್ಲಿ ನಮ್ಮ ರಕ್ಷಣೆಯಾಗಿಯೂ ಇರು. [QE]
3. [QS]ನಿಮ್ಮ ಸೈನ್ಯದ ಕೋಲಾಹಲದ ಶಬ್ದಕ್ಕೆ ಜನರು ಓಡಿಹೋಗುತ್ತಾರೆ, [QE][QS2]ನೀವು ಏಳುವಾಗ ರಾಜ್ಯಗಳು ಚದರಿ ಹೋಗುತ್ತವೆ. [QE]
4. [QS]ನಿಮ್ಮ ಕೊಳ್ಳೆಯನ್ನು ಇತರರು ಮಿಡತೆಗಳಂತೆ ಕೊಳ್ಳೆಮಾಡುವರು, [QE][QS2]ಮಿಡತೆಗಳು ಓಡಾಡುವ ಹಾಗೆ ಮನುಷ್ಯರು ಅದರ ಮೇಲೆ ಓಡಾಡುವರು. [QE][PBR]
5. [QS]ಯೆಹೋವ ದೇವರು ಉನ್ನತೋನ್ನತನಾಗಿದ್ದಾನೆ. [QE][QS2]ಏಕೆಂದರೆ ಆತನು ಮೇಲಿನ ಲೋಕದಲ್ಲಿ ವಾಸಿಸುತ್ತಾನೆ. [QE][QS2]ಚೀಯೋನನ್ನು ನೀತಿ ಮತ್ತು ನ್ಯಾಯಗಳಿಂದ ತುಂಬಿಸಿದ್ದಾನೆ. [QE]
6. [QS]ಅವರು ನಿಮ್ಮ ಸಮಯಕ್ಕೆ ಖಚಿತವಾದ ಆಧಾರವಾಗುತ್ತಾರೆ. [QE][QS2]ರಕ್ಷಣೆ ಜ್ಞಾನ ತಿಳುವಳಿಕೆಗಳ ನಿಕ್ಷೇಪವಾಗಿಯೂ ಇರುವನು. [QE][QS2]ಯೆಹೋವ ದೇವರ ಭಯವೇ ಅವನ ಬೊಕ್ಕಸವಾಗಿರುವುದು. [QE][PBR]
7. [QS]ಅವರ ಪರಾಕ್ರಮಶಾಲಿಗಳು ಹೊರಗೆ ಕೂಗುತ್ತಾರೆ; [QE][QS2]ಸಮಾಧಾನದ ರಾಯಭಾರಿಗಳು ಘೋರವಾಗಿ ಅಳುತ್ತಿದ್ದಾರೆ. [QE]
8. [QS]ರಾಜ ಮಾರ್ಗಗಳು ಹಾಳಾಗಿವೆ. [QE][QS2]ಹಾದಿಯಲ್ಲಿ ಹೋಗುವವರು ನಿಂತು ಹೋದರು. [QE][QS]ಅವನು ಒಪ್ಪಂದವನ್ನು ಮೀರಿದ್ದಾನೆ. [QE][QS2]ಪಟ್ಟಣಗಳನ್ನು[* ಪಟ್ಟಣಗಳನ್ನು ಕೆಲವು ಪ್ರತಿಗಳಲ್ಲಿ ಸಾಕ್ಷಿಗಳು ] ತಿರಸ್ಕಾರ ಮಾಡಿ, [QE][QS2]ಯಾವ ಮನುಷ್ಯನನ್ನು ಗಣನೆಗೆ ತಾರನು. [QE]
9. [QS]ದೇಶವು ಪ್ರಲಾಪಿಸಿ ಕುಗ್ಗುತ್ತದೆ. [QE][QS2]ಲೆಬನೋನು ನಾಚಿಕೆಪಟ್ಟು ಕಡಿದು ಬೀಳುವುದು. [QE][QS]ಶಾರೋನ್ ಬೆಂಗಾಡಾಗಿದೆ. [QE][QS2]ಬಾಷಾನ್ ಮತ್ತು ಕರ್ಮೆಲ್ ಎಲೆಗಳನ್ನು ಉದುರಿಸಿಬಿಟ್ಟಿವೆ. [QE][PBR]
10. [QS]ಯೆಹೋವ ದೇವರು ಹೀಗೆನ್ನುತ್ತಾರೆ, “ನಾನು ಈಗ ಏಳುವೆನು. [QE][QS2]ಈಗಲೇ ನನ್ನನ್ನು ಉನ್ನತಪಡಿಸಿಕೊಳ್ಳುವೆನು. [QE][QS2]ಈಗ ಉನ್ನತೋನ್ನತನಾಗುವೆನು. [QE]
11. [QS]ನೀವು ಒಣಹುಲ್ಲನ್ನು ಗರ್ಭಧರಿಸಿ, [QE][QS2]ಪೈರಿನ ಮೋಟನ್ನು ಹೆರುವಿರಿ. [QE][QS2]ನಿಮ್ಮ ಶ್ವಾಸವು ನಿಮ್ಮನ್ನೇ ನುಂಗುವ ಜ್ವಾಲೆಯಾಗುವುದು. [QE]
12. [QS]ಜನಾಂಗಗಳು ಸುಟ್ಟ ಸುಣ್ಣದ ಹಾಗಿರುವುವು. [QE][QS2]ಕತ್ತರಿಸಿದ ಮುಳ್ಳುಕೊಂಪೆಗೆ ಬೆಂಕಿ ಹಚ್ಚಿದಂತಾಗುವುದು.” [QE][PBR]
13. [QS]ದೂರದಲ್ಲಿರುವವರೇ, ನಾನು ಮಾಡಿದ್ದನ್ನು ಕೇಳಿರಿ. [QE][QS2]ಸಮೀಪದಲ್ಲಿರುವವರೇ, ನನ್ನ ಪರಾಕ್ರಮವನ್ನು ತಿಳಿದುಕೊಳ್ಳಿರಿ. [QE]
14. [QS]ಚೀಯೋನಿನಲ್ಲಿರುವ ಪಾಪಿಗಳು ಹೆದರುತ್ತಾರೆ. [QE][QS2]ಭಯದಿಂದ ಕಪಟಿಗಳು ಆಶ್ಚರ್ಯಕ್ಕೊಳಗಾಗಿ ಹೀಗೆ ಎಂದುಕೊಳ್ಳುವರು, [QE][QS]“ನಮ್ಮಲ್ಲಿ ಯಾರು ನುಂಗುವ ಅಗ್ನಿಯ ಸಂಗಡ ವಾಸಿಸಬಲ್ಲರು? [QE][QS2]ನಮ್ಮಲ್ಲಿ ಯಾರು ಸದಾ ಉರಿಯುವ ಜ್ವಾಲೆಗಳೊಡನೆ ವಾಸಿಸಬಲ್ಲರು?” [QE]
15. [QS]ನೀತಿಯಲ್ಲಿ ನಡೆದು, ಯಥಾರ್ಥವಾಗಿ ನುಡಿದು, [QE][QS2]ದೋಚಿಕೊಂಡ ಲಾಭ ಬೇಡವೆಂದು [QE][QS]ಲಂಚ ಮುಟ್ಟದಂತೆ ಕೈಚಾಚಿದೆ. [QE][QS2]ಕೊಲೆಯ ಮಾತಿಗೆ ಕಿವಿಗೊಡದೆ, [QE][QS]ಕೆಟ್ಟದ್ದನ್ನು ಕಾಣದಂತೆ ಕಣ್ಣು ಮುಚ್ಚಿಕೊಳ್ಳುವವರೇ [QE][QS2]ಉನ್ನತ ಸ್ಥಳದಲ್ಲಿ ವಾಸಿಸುವರು. [QE]
16. [QS]ಬಂಡೆಗಳ ಕೋಟೆಗಳು [QE][QS2]ಅವನಿಗೆ ಆಶ್ರಯವಾಗಿರುವುವು. [QE][QS]ರೊಟ್ಟಿಯು ಅವನಿಗೆ ಒದಗುವುದು. [QE][QS]ನೀರು ತಪ್ಪುವುದಿಲ್ಲ. [QE][PBR]
17. [QS]ರಾಜನ ಸೌಂದರ್ಯವನ್ನು ನಿನ್ನ ಕಣ್ಣುಗಳು ನೋಡುವುವು. [QE][QS2]ಅತಿವಿಸ್ತಾರವಾದ ದೇಶವನ್ನು ಕಣ್ಣು ತುಂಬಾ ನೋಡುವಿರಿ. [QE]
18. [QS]ಆಗ ನೀವು ಹಿಂದಿನ ಭಯಂಕರವಾದ ವಿಷಯಗಳನ್ನು ಮನಸ್ಸಿಗೆ ತಂದುಕೊಳ್ಳುತ್ತಾ, [QE][QS2]“ಕಪ್ಪವನ್ನು ಲೆಕ್ಕಿಸಿದವನು ಎಲ್ಲಿ? [QE][QS]ತೂಕ ಮಾಡಿದವನು ಎಲ್ಲಿ? [QE][QS2]ಗೋಪುರಗಳನ್ನು ಎಣಿಸಿದವನು ಎಲ್ಲಿ?” ಎಂದುಕೊಳ್ಳುವಿರಿ. [QE]
19. [QS]ನೀನು ತಿಳಿಯಲಾಗದ ಹಾಗೆ ಕಠಿಣ ಭಾಷೆಯೂ, [QE][QS2]ಗ್ರಹಿಸಲಾಗದ ಹಾಗೆ ಅಪರೂಪವಾದ ಮಾತನ್ನು ಆಡಿದ [QE][QS2]ಜನರನ್ನೂ ಇನ್ನು ಮುಂದೆ ನೀನು ನೋಡುವುದಿಲ್ಲ. [QE][PBR]
20. [QS]ನಮ್ಮ ಹಬ್ಬಗಳು ನಡೆಯುವ ಚೀಯೋನ್ ಪಟ್ಟಣವನ್ನು ದೃಷ್ಟಿಸಿರಿ. [QE][QS2]ಯೆರೂಸಲೇಮು ನೆಮ್ಮದಿಯ ನಿವಾಸವಾಗಿಯೂ, [QE][QS2]ಗೂಟಕೀಳದ ಹಗ್ಗಹರಿಯದ ಒಂದೇ ಕಡೆ ಇರುವ [QE][QS]ಗುಡಾರವಾಗಿಯೂ ಇರುವುದನ್ನು [QE][QS2]ನೀವು ಕಣ್ಣಾರೆ ಕಾಣುವಿರಿ. [QE]
21. [QS]ಅಲ್ಲಿ ಯೆಹೋವ ದೇವರು ನಮ್ಮ ಬಲಶಾಲಿಯಾಗಿರುತ್ತಾರೆ. [QE][QS2]ನದಿಸರೋವರಗಳಂತೆ ನಮ್ಮನ್ನು ಸುತ್ತುವರಿಯುವರು. [QE][QS]ಹುಟ್ಟುಗೋಲಿನ ದೋಣಿಯಾಗಲಿ, [QE][QS2]ದೊಡ್ಡದಾದ ಹಡಗಾಗಲಿ ಅದನ್ನು ದಾಟುವುದಿಲ್ಲ. [QE]
22. [QS]ಏಕೆಂದರೆ ಯೆಹೋವ ದೇವರು ನಮ್ಮ ನ್ಯಾಯಾಧಿಪತಿಯಾಗಿದ್ದಾರೆ. [QE][QS2]ಯೆಹೋವ ದೇವರು ನಮಗೆ ಆಜ್ಞೆಕೊಡುವವರು. [QE][QS]ಯೆಹೋವ ದೇವರೇ, ನಮ್ಮ ರಾಜ. [QE][QS2]ಯೆಹೋವ ದೇವರೇ ನಮ್ಮನ್ನು ರಕ್ಷಿಸುವವರು. [QE][PBR]
23. [QS]ನಿನ್ನ ಹಗ್ಗಗಳು ಸಡಲಿ, [QE][QS2]ಸ್ತಂಭದ ಪಾದವನ್ನು ಸ್ಥಿರಪಡಿಸಿಕೊಳ್ಳಲಾರದೆ ಹೋದವು. [QE][QS2]ಪಠವನ್ನು ಮುದುರದಂತೆ ಹಿಡಿದಿರಲಿಕ್ಕೂ ಆಗಲಿಲ್ಲ. [QE][QS]ಆಗ ದೊಡ್ಡ ಸೂರೆಯು ಕೊಳ್ಳೆಯಾಗಿ [QE][QS2]ಹಂಚುವುದಕ್ಕೆ ಆಸ್ಪದವಾಯಿತು. ಕುಂಟರೂ ಸುಲಿಗೆ ಮಾಡಿದರು. [QE]
24. [QS]ಚೀಯೋನಿನ ಯಾವ ನಿವಾಸಿಯೂ, “ನಾನು ಅಸ್ವಸ್ಥನಾಗಿದ್ದೇನೆ,” ಎಂದು ಹೇಳನು. [QE][QS2]ಅದರಲ್ಲಿ ವಾಸವಾಗಿರುವ ಜನರ ಪಾಪವು ಕ್ಷಮಿಸಲಾಗುವುದು. [QE]
ಒಟ್ಟು 66 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 33 / 66
ನಿರಾಶೆ ಹಾಗೂ ಸಹಾಯ 1 ಹಾಳು ಮಾಡುತ್ತಿರುವವನೇ, ನಿನಗೆ ಕಷ್ಟ! ನಿನ್ನನ್ನು ಯಾರೂ ಸೂರೆಮಾಡದಿದ್ದರೂ ನೀನು ಸೂರೆಮಾಡುತ್ತಿರುವೆ; ನಿನ್ನನ್ನು ಯಾರೂ ವಂಚಿಸದಿದ್ದರೂ ನೀನು ವಂಚನೆ ಮಾಡುತ್ತಿರುವೆ. ಇದಕ್ಕೆಲ್ಲ ಅಂತ್ಯವಿದೆ. ಈಗ ಹಾಳು ಮಾಡುತ್ತಿರುವ ನೀನು, ಆಗ ನೀನೇ ಹಾಳಾಗುವೆ. ಈಗ ವಂಚನೆ ಮಾಡುತ್ತಿರುವ ನೀನೇ ವಂಚಿತನಾಗುವೆ. 2 ಯೆಹೋವ ದೇವರೇ, ನಮ್ಮ ಕಡೆಗೆ ಕೃಪೆ ತೋರಿಸಿರಿ. ನಿನಗೋಸ್ಕರ ನಾವು ಕಾದಿದ್ದೇವೆ. ಪ್ರತಿ ಮುಂಜಾನೆ ನಮಗೆ ಭುಜಬಲವಾಗಿಯೂ, ಇಕ್ಕಟ್ಟಿನ ಕಾಲದಲ್ಲಿ ನಮ್ಮ ರಕ್ಷಣೆಯಾಗಿಯೂ ಇರು. 3 ನಿಮ್ಮ ಸೈನ್ಯದ ಕೋಲಾಹಲದ ಶಬ್ದಕ್ಕೆ ಜನರು ಓಡಿಹೋಗುತ್ತಾರೆ, ನೀವು ಏಳುವಾಗ ರಾಜ್ಯಗಳು ಚದರಿ ಹೋಗುತ್ತವೆ. 4 ನಿಮ್ಮ ಕೊಳ್ಳೆಯನ್ನು ಇತರರು ಮಿಡತೆಗಳಂತೆ ಕೊಳ್ಳೆಮಾಡುವರು, ಮಿಡತೆಗಳು ಓಡಾಡುವ ಹಾಗೆ ಮನುಷ್ಯರು ಅದರ ಮೇಲೆ ಓಡಾಡುವರು. 5 ಯೆಹೋವ ದೇವರು ಉನ್ನತೋನ್ನತನಾಗಿದ್ದಾನೆ. ಏಕೆಂದರೆ ಆತನು ಮೇಲಿನ ಲೋಕದಲ್ಲಿ ವಾಸಿಸುತ್ತಾನೆ. ಚೀಯೋನನ್ನು ನೀತಿ ಮತ್ತು ನ್ಯಾಯಗಳಿಂದ ತುಂಬಿಸಿದ್ದಾನೆ. 6 ಅವರು ನಿಮ್ಮ ಸಮಯಕ್ಕೆ ಖಚಿತವಾದ ಆಧಾರವಾಗುತ್ತಾರೆ. ರಕ್ಷಣೆ ಜ್ಞಾನ ತಿಳುವಳಿಕೆಗಳ ನಿಕ್ಷೇಪವಾಗಿಯೂ ಇರುವನು. ಯೆಹೋವ ದೇವರ ಭಯವೇ ಅವನ ಬೊಕ್ಕಸವಾಗಿರುವುದು. 7 ಅವರ ಪರಾಕ್ರಮಶಾಲಿಗಳು ಹೊರಗೆ ಕೂಗುತ್ತಾರೆ; ಸಮಾಧಾನದ ರಾಯಭಾರಿಗಳು ಘೋರವಾಗಿ ಅಳುತ್ತಿದ್ದಾರೆ. 8 ರಾಜ ಮಾರ್ಗಗಳು ಹಾಳಾಗಿವೆ. ಹಾದಿಯಲ್ಲಿ ಹೋಗುವವರು ನಿಂತು ಹೋದರು. ಅವನು ಒಪ್ಪಂದವನ್ನು ಮೀರಿದ್ದಾನೆ. ಪಟ್ಟಣಗಳನ್ನು* ಪಟ್ಟಣಗಳನ್ನು ಕೆಲವು ಪ್ರತಿಗಳಲ್ಲಿ ಸಾಕ್ಷಿಗಳು ತಿರಸ್ಕಾರ ಮಾಡಿ, ಯಾವ ಮನುಷ್ಯನನ್ನು ಗಣನೆಗೆ ತಾರನು. 9 ದೇಶವು ಪ್ರಲಾಪಿಸಿ ಕುಗ್ಗುತ್ತದೆ. ಲೆಬನೋನು ನಾಚಿಕೆಪಟ್ಟು ಕಡಿದು ಬೀಳುವುದು. ಶಾರೋನ್ ಬೆಂಗಾಡಾಗಿದೆ. ಬಾಷಾನ್ ಮತ್ತು ಕರ್ಮೆಲ್ ಎಲೆಗಳನ್ನು ಉದುರಿಸಿಬಿಟ್ಟಿವೆ. 10 ಯೆಹೋವ ದೇವರು ಹೀಗೆನ್ನುತ್ತಾರೆ, “ನಾನು ಈಗ ಏಳುವೆನು. ಈಗಲೇ ನನ್ನನ್ನು ಉನ್ನತಪಡಿಸಿಕೊಳ್ಳುವೆನು. ಈಗ ಉನ್ನತೋನ್ನತನಾಗುವೆನು. 11 ನೀವು ಒಣಹುಲ್ಲನ್ನು ಗರ್ಭಧರಿಸಿ, ಪೈರಿನ ಮೋಟನ್ನು ಹೆರುವಿರಿ. ನಿಮ್ಮ ಶ್ವಾಸವು ನಿಮ್ಮನ್ನೇ ನುಂಗುವ ಜ್ವಾಲೆಯಾಗುವುದು. 12 ಜನಾಂಗಗಳು ಸುಟ್ಟ ಸುಣ್ಣದ ಹಾಗಿರುವುವು. ಕತ್ತರಿಸಿದ ಮುಳ್ಳುಕೊಂಪೆಗೆ ಬೆಂಕಿ ಹಚ್ಚಿದಂತಾಗುವುದು.” 13 ದೂರದಲ್ಲಿರುವವರೇ, ನಾನು ಮಾಡಿದ್ದನ್ನು ಕೇಳಿರಿ. ಸಮೀಪದಲ್ಲಿರುವವರೇ, ನನ್ನ ಪರಾಕ್ರಮವನ್ನು ತಿಳಿದುಕೊಳ್ಳಿರಿ. 14 ಚೀಯೋನಿನಲ್ಲಿರುವ ಪಾಪಿಗಳು ಹೆದರುತ್ತಾರೆ. ಭಯದಿಂದ ಕಪಟಿಗಳು ಆಶ್ಚರ್ಯಕ್ಕೊಳಗಾಗಿ ಹೀಗೆ ಎಂದುಕೊಳ್ಳುವರು, “ನಮ್ಮಲ್ಲಿ ಯಾರು ನುಂಗುವ ಅಗ್ನಿಯ ಸಂಗಡ ವಾಸಿಸಬಲ್ಲರು? ನಮ್ಮಲ್ಲಿ ಯಾರು ಸದಾ ಉರಿಯುವ ಜ್ವಾಲೆಗಳೊಡನೆ ವಾಸಿಸಬಲ್ಲರು?” 15 ನೀತಿಯಲ್ಲಿ ನಡೆದು, ಯಥಾರ್ಥವಾಗಿ ನುಡಿದು, ದೋಚಿಕೊಂಡ ಲಾಭ ಬೇಡವೆಂದು ಲಂಚ ಮುಟ್ಟದಂತೆ ಕೈಚಾಚಿದೆ. ಕೊಲೆಯ ಮಾತಿಗೆ ಕಿವಿಗೊಡದೆ, ಕೆಟ್ಟದ್ದನ್ನು ಕಾಣದಂತೆ ಕಣ್ಣು ಮುಚ್ಚಿಕೊಳ್ಳುವವರೇ ಉನ್ನತ ಸ್ಥಳದಲ್ಲಿ ವಾಸಿಸುವರು. 16 ಬಂಡೆಗಳ ಕೋಟೆಗಳು ಅವನಿಗೆ ಆಶ್ರಯವಾಗಿರುವುವು. ರೊಟ್ಟಿಯು ಅವನಿಗೆ ಒದಗುವುದು. ನೀರು ತಪ್ಪುವುದಿಲ್ಲ. 17 ರಾಜನ ಸೌಂದರ್ಯವನ್ನು ನಿನ್ನ ಕಣ್ಣುಗಳು ನೋಡುವುವು. ಅತಿವಿಸ್ತಾರವಾದ ದೇಶವನ್ನು ಕಣ್ಣು ತುಂಬಾ ನೋಡುವಿರಿ. 18 ಆಗ ನೀವು ಹಿಂದಿನ ಭಯಂಕರವಾದ ವಿಷಯಗಳನ್ನು ಮನಸ್ಸಿಗೆ ತಂದುಕೊಳ್ಳುತ್ತಾ, “ಕಪ್ಪವನ್ನು ಲೆಕ್ಕಿಸಿದವನು ಎಲ್ಲಿ? ತೂಕ ಮಾಡಿದವನು ಎಲ್ಲಿ? ಗೋಪುರಗಳನ್ನು ಎಣಿಸಿದವನು ಎಲ್ಲಿ?” ಎಂದುಕೊಳ್ಳುವಿರಿ. 19 ನೀನು ತಿಳಿಯಲಾಗದ ಹಾಗೆ ಕಠಿಣ ಭಾಷೆಯೂ, ಗ್ರಹಿಸಲಾಗದ ಹಾಗೆ ಅಪರೂಪವಾದ ಮಾತನ್ನು ಆಡಿದ ಜನರನ್ನೂ ಇನ್ನು ಮುಂದೆ ನೀನು ನೋಡುವುದಿಲ್ಲ. 20 ನಮ್ಮ ಹಬ್ಬಗಳು ನಡೆಯುವ ಚೀಯೋನ್ ಪಟ್ಟಣವನ್ನು ದೃಷ್ಟಿಸಿರಿ. ಯೆರೂಸಲೇಮು ನೆಮ್ಮದಿಯ ನಿವಾಸವಾಗಿಯೂ, ಗೂಟಕೀಳದ ಹಗ್ಗಹರಿಯದ ಒಂದೇ ಕಡೆ ಇರುವ ಗುಡಾರವಾಗಿಯೂ ಇರುವುದನ್ನು ನೀವು ಕಣ್ಣಾರೆ ಕಾಣುವಿರಿ. 21 ಅಲ್ಲಿ ಯೆಹೋವ ದೇವರು ನಮ್ಮ ಬಲಶಾಲಿಯಾಗಿರುತ್ತಾರೆ. ನದಿಸರೋವರಗಳಂತೆ ನಮ್ಮನ್ನು ಸುತ್ತುವರಿಯುವರು. ಹುಟ್ಟುಗೋಲಿನ ದೋಣಿಯಾಗಲಿ, ದೊಡ್ಡದಾದ ಹಡಗಾಗಲಿ ಅದನ್ನು ದಾಟುವುದಿಲ್ಲ. 22 ಏಕೆಂದರೆ ಯೆಹೋವ ದೇವರು ನಮ್ಮ ನ್ಯಾಯಾಧಿಪತಿಯಾಗಿದ್ದಾರೆ. ಯೆಹೋವ ದೇವರು ನಮಗೆ ಆಜ್ಞೆಕೊಡುವವರು. ಯೆಹೋವ ದೇವರೇ, ನಮ್ಮ ರಾಜ. ಯೆಹೋವ ದೇವರೇ ನಮ್ಮನ್ನು ರಕ್ಷಿಸುವವರು. 23 ನಿನ್ನ ಹಗ್ಗಗಳು ಸಡಲಿ, ಸ್ತಂಭದ ಪಾದವನ್ನು ಸ್ಥಿರಪಡಿಸಿಕೊಳ್ಳಲಾರದೆ ಹೋದವು. ಪಠವನ್ನು ಮುದುರದಂತೆ ಹಿಡಿದಿರಲಿಕ್ಕೂ ಆಗಲಿಲ್ಲ. ಆಗ ದೊಡ್ಡ ಸೂರೆಯು ಕೊಳ್ಳೆಯಾಗಿ ಹಂಚುವುದಕ್ಕೆ ಆಸ್ಪದವಾಯಿತು. ಕುಂಟರೂ ಸುಲಿಗೆ ಮಾಡಿದರು. 24 ಚೀಯೋನಿನ ಯಾವ ನಿವಾಸಿಯೂ, “ನಾನು ಅಸ್ವಸ್ಥನಾಗಿದ್ದೇನೆ,” ಎಂದು ಹೇಳನು. ಅದರಲ್ಲಿ ವಾಸವಾಗಿರುವ ಜನರ ಪಾಪವು ಕ್ಷಮಿಸಲಾಗುವುದು.
ಒಟ್ಟು 66 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 33 / 66
×

Alert

×

Kannada Letters Keypad References