1. {#1ಯೆಹೋವ ದೇವರು ಭೂಮಿಯನ್ನು ಹಾಳುಮಾಡುವರು } [QS]ಇಗೋ, ಯೆಹೋವ ದೇವರು ಭೂಮಿಯನ್ನು ಬರಿದುಮಾಡಿ, [QE][QS2]ನಿರ್ಜನ ಪ್ರದೇಶವನ್ನಾಗಿ ಮಾಡಿ, [QE][QS]ತಲೆಕೆಳಗಾಗಿ ತಿರುಗಿಸಿ, [QE][QS2]ಅದರ ನಿವಾಸಿಗಳನ್ನು ಚದರಿಸಿಬಿಡುವವರಾಗಿದ್ದಾರೆ. [QE]
2. [QS]ಜನಗಳಿಗೆ ಹೇಗೋ ಹಾಗೆಯೇ ಯಾಜಕರಿಗೆ; [QE][QS2]ದಾಸನಿಗೆ ಹೇಗೋ ಹಾಗೆಯೇ ಯಜಮಾನನಿಗೆ; [QE][QS2]ದಾಸಿಗೆ ಹೇಗೋ ಹಾಗೆಯೇ ಅವಳ ಯಜಮಾನಿಗೆ; [QE][QS2]ಕೊಳ್ಳುವವನಿಗೆ ಹೇಗೋ ಹಾಗೆಯೇ ಮಾರುವವನಿಗೆ; [QE][QS2]ಸಾಲಕೊಡುವವನಿಗೆ ಹೇಗೋ ಹಾಗೆಯೇ ಸಾಲ ಪಡೆಯುವವನಿಗೆ; [QE][QS2]ಬಡ್ಡಿ ತೆಗೆಯುವವನಿಗೆ ಹೇಗೋ ಹಾಗೆಯೇ ಬಡ್ಡಿ ತರುವವನಿಗೆ ಆಗುವುದು. [QE]
3. [QS]ಭೂಮಿಯು ಬಟ್ಟಬರಿದಾಗುವುದು, [QE][QS2]ಸಂಪೂರ್ಣ ಸುಲಿಗೆಯಾಗುವುದು. [QE][QS2]ಯೆಹೋವ ದೇವರು ತಾವೇ ಈ ಮಾತನ್ನು ಹೇಳಿದ್ದಾರೆ. [QE][PBR]
4. [QS]ಭೂಮಿಯು ಪ್ರಲಾಪಿಸುತ್ತಾ ಬಾಡಿಹೋಗುವುದು. [QE][QS2]ಲೋಕವು ಸೊರಗಿ ಬಾಡಿಹೋಗುವುದು. [QE][QS2]ಆಕಾಶವು ಭೂಮಿಯೊಂದಿಗೆ ಕುಗ್ಗಿಹೋಗುವುದು. [QE]
5. [QS]ಭೂನಿವಾಸಿಗಳು ದೈವಾಜ್ಞೆಗಳನ್ನು ಮೀರಿ, [QE][QS2]ದೈವನಿಯಮಗಳನ್ನು ಬದಲಾಯಿಸಿ, [QE][QS]ನಿತ್ಯವಾದ ಒಡಂಬಡಿಕೆಯನ್ನು ಭಂಗಪಡಿಸಿದ್ದರಿಂದ [QE][QS2]ಭೂಮಿಯು ಸಹ ಅದರ ನಿವಾಸಿಗಳ ಹೆಜ್ಜೆಯಿಂದ ಅಪವಿತ್ರವಾಗುವುದು. [QE]
6. [QS]ಆದಕಾರಣ ಶಾಪವು ಲೋಕವನ್ನು ನುಂಗಿಬಿಟ್ಟಿದೆ. [QE][QS2]ಅದರಲ್ಲಿ ವಾಸವಾಗಿರುವವರು ದಂಡನೆಗೆ ಒಳಗಾಗಿದ್ದಾರೆ. [QE][QS]ಆದ್ದರಿಂದ ಭೂನಿವಾಸಿಗಳು ಸುಟ್ಟು ಹೋಗಿ, [QE][QS2]ಕೆಲವರು ಮಾತ್ರ ಉಳಿದಿದ್ದಾರೆ. [QE]
7. [QS]ದ್ರಾಕ್ಷಾರಸವು ಬತ್ತಿಹೋಗುವುದು, ದ್ರಾಕ್ಷಿಯು ಬಾಡುವುದು. [QE][QS2]ಹರ್ಷ ಹೃದಯರೆಲ್ಲಾ ನಿಟ್ಟುಸಿರುಬಿಡುತ್ತಾರೆ. [QE]
8. [QS]ದಮ್ಮಡಿಗಳ ಉತ್ಸಾಹವು ಮುಗಿದಿದೆ. [QE][QS2]ಉಲ್ಲಾಸದ ಅವರ ಶಬ್ದವು ಕೊನೆಗೊಂಡಿತು. [QE][QS2]ಕಿನ್ನರಿಯ ಆನಂದ ಸ್ವರವು ತೀರಿತು. [QE]
9. [QS]ಇನ್ನು ಗಾನದೊಡನೆ ದ್ರಾಕ್ಷಾರಸವನ್ನು ಕುಡಿಯರು, [QE][QS2]ಕುಡಿಯುವವರಿಗೆ ಮದ್ಯಪಾನವು ಕಹಿಯಾಗುವುದು. [QE]
10. [QS]ಹಾಳುಪಟ್ಟಣವು ಬಿದ್ದುಹೋಗಿದೆ. [QE][QS2]ಯಾರು ಒಳಗೆ ಬಾರದಂತೆ ಪ್ರತಿಯೊಂದು ಮನೆಯು ಮುಚ್ಚಿದೆ. [QE]
11. [QS]ದ್ರಾಕ್ಷಾರಸದ ಕೊರತೆಯಿಂದ ಬೀದಿಗಳಲ್ಲಿ ಅರಚುತ್ತಾರೆ. [QE][QS2]ಉಲ್ಲಾಸವೆಲ್ಲ ಅಸ್ತಮಿಸಿದೆ. [QE][QS2]ಭೂಮಿಯ ಮೇಲಿನ ಸಂತೋಷವು ತೊಲಗಿಹೋಗಿದೆ. [QE]
12. [QS]ಪಟ್ಟಣದಲ್ಲಿ ಹಾಳೇ ಉಳಿದಿವೆ. [QE][QS2]ನಾಶನವು ಹೆಬ್ಬಾಗಿಲಿಗೆ ಬಡಿದಿದೆ. [QE]
13. [QS]ಓಲಿವ್ ಮರವನ್ನು ಬಡಿದ ಮೇಲೆಯೂ, [QE][QS2]ದ್ರಾಕ್ಷಿ ಸುಗ್ಗಿಯು ತೀರಿದ ನಂತರವು [QE][QS]ನಿಲ್ಲುವ ಉಳಿದ ಕಾಯಿಗಳ [QE][QS2]ಹಾಗೆ ದೇಶದಲ್ಲಿರುವುದು. [QE][PBR]
14. [QS]ಅವರು ತಮ್ಮ ಸ್ವರವನ್ನೆತ್ತಿ ಯೆಹೋವ ದೇವರ ಮಹಿಮೆಯನ್ನು ಕುರಿತು ಹಾಡುವರು. [QE][QS2]ಪಶ್ಚಿಮ ದಿಕ್ಕಿನ ಕಡೆಯಿಂದ ಆರ್ಭಟಿಸುವರು. [QE]
15. [QS]ಆದ್ದರಿಂದ ಪೂರ್ವದಿಕ್ಕಿನವರೇ, ಯೆಹೋವ ದೇವರನ್ನು ಮಹಿಮೆಪಡಿಸಿರಿ; [QE][QS2]ಸಮುದ್ರದ ದ್ವೀಪಗಳಲ್ಲಿ ಇಸ್ರಾಯೇಲರ ದೇವರಾದ [QE][QS2]ಯೆಹೋವ ದೇವರ ಹೆಸರನ್ನು ನೀವು ಘನಪಡಿಸಿರಿ, ಎಂದು ಕೂಗುವರು. [QE]
16. [QS]ಭೂಮಂಡಲದ ಕಟ್ಟಕಡೆಯಿಂದ “ನೀತಿವಂತರಿಗೆ ಮಹಿಮೆಯಾಗಲಿ” [QE][QS2]ಎಂಬ ಗೀತೆಗಳು ನಮಗೆ ಕೇಳಿಬರುತ್ತಿವೆ. [QE][PBR] [QS]ಆದರೆ, “ನಾನಾದರೋ ಕ್ಷಯಿಸೇ ಕ್ಷಯಿಸುತ್ತೇನೆ. [QE][QS2]ನನಗೆ ಕಷ್ಟ! [QE][QS]ಬಾಧಕರು ಬಾಧಿಸುವುದರಲ್ಲಿಯೇ ನಿರತರಾಗಿದ್ದಾರೆ. [QE][QS2]ಹೌದು, ಬಾಧಕರು ಬಹಳವಾಗಿ ಬಾಧಿಸುವುದರಲ್ಲಿ ನಿರತರಾಗಿದ್ದಾರೆ.” [QE]
17. [QS]ಭೂಮಿಯ ನಿವಾಸಿಗಳೇ, [QE][QS2]ಭಯವೂ, ಕುಳಿಯೂ, ಬಲೆಯೂ ನಿಮಗೆ ಕಾದಿವೆ. [QE]
18. [QS]ಆಗ ಭಯದ ಶಬ್ದಕ್ಕೆ ಓಡಿಹೋಗುವವನು [QE][QS2]ಗುಂಡಿಯೊಳಗೆ ಬೀಳುವನು. [QE][QS]ಗುಂಡಿಯೊಳಗಿಂದ ಏರಿಬರುವವನು [QE][QS2]ಬಲೆಗೆ ಸಿಕ್ಕಿಬೀಳುವನು. [QE][PBR] [QS]ಆಕಾಶದ ದ್ವಾರಗಳು ತೆರೆದಿವೆ. [QE][QS2]ಭೂಮಿಯ ಅಸ್ತಿವಾರಗಳು ಕಂಪಿಸುತ್ತಿವೆ. [QE]
19. [QS]ಭೂಮಿಯು ಬಿರುಕುಬಿಟ್ಟಿದೆ, [QE][QS2]ಬಿರಿದು ಬಿರಿದಿದೆ, [QE][QS2]ಭೂಮಿಯು ಕದಲಿಹೋಗಿದೆ. [QE]
20. [QS]ಭೂಮಿಯು ಕುಡುಕನ ಹಾಗೆ ಓಲಾಡುತ್ತದೆ, [QE][QS2]ಗಾಳಿಗೆ ಸಿಕ್ಕಿದ ಗುಡಿಸಲಿನ ಹಾಗೆ ತೂಗಾಡುತ್ತದೆ, [QE][QS]ಅದರ ಅಪರಾಧವು ಅದರ ಮೇಲೆ ಭಾರವಾಗಿರುತ್ತದೆ, [QE][QS2]ಅದು ಬಿದ್ದು ಹೋಗುತ್ತದೆ, ತಿರುಗಿ ಏಳುವುದೇ ಇಲ್ಲ. [QE][PBR]
21. [QS]ಆ ದಿವಸದಲ್ಲಿ ಯೆಹೋವ ದೇವರು ಆಕಾಶದಲ್ಲಿರುವ [QE][QS2]ಆಕಾಶದವರ ಸೈನ್ಯವನ್ನೂ, [QE][QS2]ಭೂಮಿಯ ಮೇಲಿರುವ ಭೂರಾಜರನ್ನೂ ದಂಡಿಸುವರು. [QE]
22. [QS]ನೆಲಮಾಳಿಗೆಯೊಳಗೆ ಒಟ್ಟುಗೂಡಿದ [QE][QS2]ಸೆರೆಯವರ ಹಾಗೆ [QE][QS]ಅವರು ಒಟ್ಟುಗೂಡಿ ಸೆರೆಮನೆಯಲ್ಲಿ [QE][QS2]ಬಹಳ ದಿನಗಳಿದ್ದ ತರುವಾಯ ದಂಡನೆಗೆ ಗುರಿಯಾಗುವರು. [QE]
23. [QS]ಆಮೇಲೆ ಸೇನಾಧೀಶ್ವರ ಯೆಹೋವ ದೇವರು ಚೀಯೋನ್ ಪರ್ವತದಲ್ಲಿಯೂ, [QE][QS2]ಯೆರೂಸಲೇಮಿನಲ್ಲಿಯೂ ಹಿರಿಯರ ಮುಂದೆ [QE][QS]ಮಹಿಮೆಯಿಂದ ಆಳುವಾಗ, [QE][QS2]ಚಂದ್ರನಿಗೆ ಅವಮಾನವಾಗುವುದು, [QE][QS2]ಸೂರ್ಯನು ನಾಚಿಕೆ ಪಡುವನು. [QE]