1. {#1ಬಾಬಿಲೋನಿನ ವಿರುದ್ಧವಾದ ಪ್ರವಾದನೆ } [PS]ಸಮುದ್ರತೀರದ ಮರುಭೂಮಿಯ ವಿಷಯವಾದ ಪ್ರವಾದನೆ: [PE][QS]ದಕ್ಷಿಣ ಸೀಮೆಯಲ್ಲಿ ಬೀಸುವ ಬಿರುಗಾಳಿ ದಾಟಿ ಹೋಗುವಂತೆ [QE][QS2]ಆಕ್ರಮಣಕಾರರು ಮರುಭೂಮಿ ಕಡೆಯಿಂದ ಭಯಂಕರವಾದ [QE][QS2]ದೇಶದಿಂದ ಬರುತ್ತಾರೆ. [QE][PBR]
2. [QS]ಘೋರ ದರ್ಶನವು ನನಗೆ ತಿಳಿಯಬಂದಿದೆ: [QE][QS2]ಬಾಧಕನು ಬಾಧಿಸುತ್ತಿದ್ದಾನೆ. ಸೂರೆಗಾರನು ಸೂರೆಮಾಡುತ್ತಿದ್ದಾನೆ. [QE][QS]ಏಲಾಮೇ, ಏಳು! ಮೇದ್ಯವೇ ಮುತ್ತಿಗೆ ಹಾಕು, [QE][QS2]ಅದರ ನಿಟ್ಟುಸಿರನ್ನೆಲ್ಲಾ ನಿಲ್ಲಿಸಿಬಿಟ್ಟಿದ್ದೇನೆ. [QE][PBR]
3. [QS]ಆದ್ದರಿಂದ ನನ್ನ ಸೊಂಟಗಳು ನೋವಿನಿಂದ ತುಂಬಿವೆ. [QE][QS2]ಹೆರುವವಳ ವೇದನೆಗಳಂತಿರುವ ವೇದನೆಗಳು ನನ್ನನ್ನು ಹಿಡಿದಿವೆ. [QE][QS]ಕಿವಿ ಕಿವುಡಾಗುವಷ್ಟು ಸಂಕಟಪಡುತ್ತೇನೆ. [QE][QS2]ಕಣ್ಣು ಕುರುಡಾಗುವಷ್ಟು ಭ್ರಾಂತನಾಗಿದ್ದೇನೆ. [QE]
4. [QS]ನನ್ನ ಹೃದಯವು ಬಡಿದುಕೊಳ್ಳುತ್ತಿದೆ, ಗಾಬರಿಗೊಂಡಿದೆ. [QE][QS2]ನಡುಗುವಿಕೆಯು ನನ್ನನ್ನು ಕಳವಳಗೊಳಿಸಿದೆ, [QE][QS]ನಾ ಬಯಸಿದ ಸಂಜೆಯೇ [QE][QS2]ನನಗೆ ಭಯಭ್ರಾಂತಿಯಾಗಿ ಮಾಡಿದ್ದಾನೆ. [QE][PBR]
5. [QS]ಔತಣ ಸಿದ್ಧವಾಗಿದೆ. [QE][QS2]ಬುರುಜಿನ ಮೇಲೆ ಕಾವಲಿರು. [QE][QS2]ಉಣ್ಣು, ಕುಡಿ, ಪ್ರಭುಗಳೇ, [QE][QS]ಏಳಿರಿ, ಗುರಾಣಿಗೆ ಎಣ್ಣೆಯನ್ನು ಹಚ್ಚಿರಿ. [QE]
6. [PS]ಕರ್ತರು ನನಗೆ ಹೇಳಿದ್ದೇನೆಂದರೆ, [PE][QS]“ಹೋಗು, ಕಾವಲುಗಾರರನ್ನು ನೇಮಿಸು. [QE][QS2]ಅವನು ಕಂಡದ್ದನ್ನು ತಿಳಿಸಲಿ. [QE]
7. [QS]ಅವನು ಜೋಡಿ ಜೋಡಿಯಾಗಿ ಬರುವ [QE][QS2]ರಥ ಸವಾರರ ಸಾಲನ್ನು [QE][QS]ಕತ್ತೆಗಳ, ಒಂಟೆಗಳ, [QE][QS2]ರಥ ಸಾಲುಗಳನ್ನು ನೋಡಿದರೆ, [QE][QS]ಬಹು ಗಮನದಿಂದ [QE][QS2]ಕಿವಿಗೊಟ್ಟು ಗಮನಿಸಲಿ.” [QE]
8. [PS]ಬಳಿಕ ಅವನು ಸಿಂಹದಂತೆ ಕೂಗಿ ಹೀಗೆ ಹೇಳಿದನು, [PE][QS]“ನನ್ನ ಒಡೆಯನೇ, ನಾನು ಹಗಲೆಲ್ಲಾ ಕಾವಲಿನ ಬುರುಜಿನ ಮೇಲೆ ನಿಂತಿದ್ದೇನೆ. [QE][QS2]ರಾತ್ರಿಯೆಲ್ಲಾ ಕಾವಲಿನ ಕೆಲಸ ನನಗೆ ಬಿದ್ದಿದೆ. [QE]
9. [QS]ಇಗೋ, ಎರಡು ಕುದುರೆಗಳನ್ನು ಹೊಂದಿರುವ ರಥದಲ್ಲಿ [QE][QS2]ಒಬ್ಬ ವ್ಯಕ್ತಿ ಸವಾರಿ ಮಾಡಿ ಬರುತ್ತಿದ್ದಾನೆ [QE][QS2]ಬಾಬಿಲೋನ್ ಬಿದ್ದುಹೋಯಿತು, ಬಾಬಿಲೋನ್ ಬಿದ್ದುಹೋಯಿತು! [QE][QS]ಅದರ ಕೆತ್ತಿದ ದೇವತೆಗಳ ವಿಗ್ರಹಗಳೆಲ್ಲ [QE][QS2]ಮುರಿದು ನೆಲಸಮವಾಗಿವೆ.” [QE][PBR]
10. [QS]ಕಣದಲ್ಲಿ ತುಳಿತಕ್ಕೆ ಈಡಾದ ನನ್ನ ಜನರೇ [QE][QS2]ಇಸ್ರಾಯೇಲಿನ ದೇವರಾಗಿರುವ [QE][QS]ಸೇನಾಧೀಶ್ವರ ಯೆಹೋವ ದೇವರಿಂದ ನಾನು ಕೇಳಿದ್ದನ್ನು [QE][QS2]ನಿಮಗೆ ತಿಳಿಸಿದ್ದೇನೆ. [QE]
11. {#1ಎದೋಮಿಗೆ ವಿರೋಧವಾದ ಪ್ರವಾದನೆ } [PS]ದೂಮ[* ದೂಮ ಅಂದರೆ ಮೌನ ] ವಿಷಯವಾದ ಪ್ರವಾದನೆ: [PE][QS]ಸೇಯೀರಿನಿಂದ ನನ್ನನ್ನು ಯಾರೋ ಹೀಗೆ ಕರೆಯುತ್ತಿದ್ದಾರೆ, [QE][QS2]“ಕಾವಲುಗಾರನೇ, ಈಗ ರಾತ್ರಿ ಎಷ್ಟು ಕಳೆಯಿತು? [QE][QS2]ಕಾವಲುಗಾರನೇ, ರಾತ್ರಿ ಎಷ್ಟು ಕಳೆಯಿತು?” [QE]
12. [QS]ಕಾವಲುಗಾರನು ಹೀಗೆ ಉತ್ತರಿಸಿದನು, [QE][QS2]“ಉದಯವು ಬರುತ್ತದೆ, ರಾತ್ರಿಯೂ ಬರುತ್ತದೆ. [QE][QS]ವಿಚಾರಿಸಬೇಕಾದರೆ ವಿಚಾರಿಸಿರಿ, [QE][QS2]ತಿರುಗಿ ಬನ್ನಿರಿ.” [QE]
13. {#1ಅರೇಬಿಯದ ವಿರೋಧವಾದ ಪ್ರವಾದನೆ } [PS]ಅರೇಬಿಯದ ವಿಷಯವಾದ ಪ್ರವಾದನೆ: [PE][QS]ಓ ದೇದಾನ್ಯರ ವ್ಯಾಪಾರಿಗಳ ಗುಂಪಿನವರೇ [QE][QS2]ಅರೇಬಿಯದ ಕಾಡಿನಲ್ಲಿ ಇಳಿದುಕೊಳ್ಳಿರಿ. [QE]
2. [QS2]ತೇಮಾ ದೇಶದ ನಿವಾಸಿಗಳೇ, [QE][QS]ಬಾಯಾರಿದವರಿಗೆ ನೀರನ್ನು ತರುತ್ತಾರೆ. [QE][QS2]ಓಡಿ ಹೋಗುವವರನ್ನು ತಮ್ಮ ರೊಟ್ಟಿಯಿಂದ ನಿವಾರಿಸುತ್ತಾರೆ. [QE]
15. [QS]ಏಕೆಂದರೆ ಹಿರಿದ ಖಡ್ಗ, [QE][QS2]ಬಾಗಿದ ಬಿಲ್ಲು, ಕಠಿಣ ಯುದ್ಧ [QE][QS]ಇವುಗಳಿಂದ ತಪ್ಪಿಸಿಕೊಂಡು [QE][QS2]ಓಡಿ ಬಂದಿದ್ದಾರಷ್ಟೆ. [QE]
16. [PS]ಏಕೆಂದರೆ ಕರ್ತರು ನನಗೆ ಹೀಗೆ ಹೇಳುತ್ತಾರೆ: “ಕೂಲಿಯವನ ವರುಷಗಳಂತೆ ಒಂದು ವರುಷದೊಳಗೆ ಕೇದಾರಿನ ವೈಭವವು ತೀರಿಹೋಗುವುದು.
17. ಬಿಲ್ಲುಗಾರರಲ್ಲಿ ಕೆಲವರೂ, ಕೇದಾರಿನ ಬಲಿಷ್ಠರಲ್ಲಿ ಕೆಲವರು ಮಾತ್ರ ಉಳಿಯುವರು,” ಎಂದು ಇಸ್ರಾಯೇಲಿನ ದೇವರಾದ ಯೆಹೋವ ದೇವರು ನುಡಿದಿದ್ದಾರೆ. [PE]