ಪವಿತ್ರ ಬೈಬಲ್

ಓಪನ್ ಸಮಕಾಲೀನ ಆವೃತ್ತಿ (OCV)
ಯೆಶಾಯ
1. {#1ದಮಸ್ಕಕ್ಕೆ ವಿರೋಧವಾದ ಪ್ರವಾದನೆ } [PS]ದಮಸ್ಕದ ವಿಷಯವಾದ ಪ್ರವಾದನೆ: [PE][QS]ಇಗೋ, ದಮಸ್ಕವು ಇನ್ನು ಪಟ್ಟಣವಾಗಿರದೆ [QE][QS2]ಅದು ಹಾಳು ದಿಬ್ಬವಾಗಿರುವುದು. [QE]
2. [QS]ಅರೋಯೇರ್ ಪ್ರಾಂತದ ಪಟ್ಟಣಗಳು ನಿರ್ಜನವಾಗಿ, [QE][QS2]ಅವು ಯಾರ ಹೆದರಿಕೆಯೂ ಇಲ್ಲದೆ [QE][QS2]ಮಲಗುವ ಮಂದೆಗಳಿಗೆ ಸ್ಥಳವಾಗುವುವು. [QE]
3. [QS]ಎಫ್ರಾಯೀಮಿನಿಂದ ಕೋಟೆಯೂ, [QE][QS2]ದಮಸ್ಕದ ರಾಜ್ಯಾಧಿಕಾರವೂ, [QE][QS]ಅರಾಮ್ಯರಲ್ಲಿ ಉಳಿದವುಗಳೂ ಸಹ ಇಲ್ಲವಾಗಿ ಹೋಗುವುವು. [QE][QS2]ಅವರು ಇಸ್ರಾಯೇಲಿನ ಮಕ್ಕಳ ವೈಭವದಂತೆ ಇರುವರು [QE][QS2]ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. [QE][PBR]
4. [QS]ಆ ದಿವಸದಲ್ಲಿ ಯಾಕೋಬ್ಯರ ವೈಭವ ತಗ್ಗುವುದು. [QE][QS2]ಅವರ ಕೊಬ್ಬು ಕರಗುವುದು. [QE]
5. [QS]ಕೊಯ್ಯುವವನು ಪೈರನ್ನು ಕೂಡಿಸಿ [QE][QS2]ತೆನೆಗಳನ್ನು ತನ್ನ ಕೈಯಿಂದ ಕೊಯ್ಯುವಂತೆಯೂ, [QE][QS]ರೆಫಾಯಿಮಿನ ತಗ್ಗಿನಲ್ಲಿ ತೆನೆಗಳನ್ನು [QE][QS2]ಕೂಡಿಸುವ ಹಾಗೆಯೂ ಇರುವುದು. [QE]
6. [QS]ಆದರೂ ಎಣ್ಣೆಮರವನ್ನು ಅಲ್ಲಾಡಿಸಿದ [QE][QS2]ಬಳಿಕ ಮೇಲಿನ ಕೊಂಬೆಯ ತುಟ್ಟತುದಿಯಲ್ಲಿ ಎರಡು ಮೂರು ಕಾಯಿಗಳಿರುವುವು. [QE][QS]ಅದರ ಫಲವತ್ತಾದ ಆ ಮರದ ರೆಂಬೆಗಳಲ್ಲಿ [QE][QS2]ನಾಲ್ಕೈದು ಕಾಯಿಗಳು ಉಳಿದಿರುವುವು. [QE][QS2]ಅದೇ ರೀತಿಯಾಗಿ, ಇಸ್ರಾಯೇಲರಲ್ಲಿ ಕೆಲವರು ಮಾತ್ರ ಉಳಿದಿರುವರು, [QE][QS2]ಎಂದು ಇಸ್ರಾಯೇಲಿನ ಯೆಹೋವ ದೇವರು ಹೇಳುತ್ತಾರೆ. [QE][PBR]
7. [QS]ಆ ದಿನದಲ್ಲಿ ಜನರು ತಮ್ಮನ್ನು ಉಂಟುಮಾಡಿದವರ ಮೇಲೆ ದೃಷ್ಟಿಯಿಡುವರು [QE][QS2]ಮತ್ತು ಇಸ್ರಾಯೇಲಿನ ಪರಿಶುದ್ಧರ ಕಡೆಗೆ ತಿರುಗಿಕೊಳ್ಳುವರು. [QE]
8. [QS]ಅವರು ತಮ್ಮ ಕೈಕೆಲಸವಾದ [QE][QS2]ಬಲಿಪೀಠಗಳನ್ನು ದೃಷ್ಟಿಸುವರು. [QE][QS]ಬೆರಳುಗಳು ಮಾಡಿದ ಧೂಪಪೀಠಗಳನ್ನು, [QE][QS2]ಅಶೇರ ಸ್ತಂಭಗಳನ್ನು ಗೌರವಿಸುವುದಿಲ್ಲ. [QE]
9.
10. [PS]ಆ ದಿನದಲ್ಲಿ ಅವರು ಇಸ್ರಾಯೇಲರ ನಿಮಿತ್ತವಾಗಿ ಬಲವಾದ ಪಟ್ಟಣಗಳು ದಟ್ಟಡವಿಯ ಹಾಗಿದ್ದು ಹಾಳುಬೀಳುವುದು. ಅಂತು ದೇಶವೆಲ್ಲಾ ಹಾಳಾಗಿರುವದು. [PE][QS]ನೀನು ನಿನ್ನ ರಕ್ಷಣೆಯ ದೇವರನ್ನು ಮರೆತು, [QE][QS2]ನಿನ್ನ ಬಂಡೆಯೂ, ಕೋಟೆಯೂ ಆಗಿರುವವರನ್ನು ಮರೆತು ಬಿಟ್ಟಿದ್ದೀ. [QE][QS]ನೀನು ರಮ್ಯವಾದ ಗಿಡಗಳನ್ನು [QE][QS2]ಮತ್ತು ದೇಶಾಂತರದ ದ್ರಾಕ್ಷಿಯ ಸಸಿಗಳನ್ನು ಹಾಕಿದ್ದರೂ, [QE]
11. [QS]ಬೆಳೆಸಲು ಸಸಿಯನ್ನು ಹಾಕಿದ ದಿನದಲ್ಲಿ ಬೇಲಿಹಾಕಿ [QE][QS2]ಮತ್ತು ಹೊತ್ತಾರೆ ನೀನು ಬಿತ್ತಿದ್ದನ್ನು ಮೊಳೆಯುವಂತೆ ಮಾಡಿದರೂ, [QE][QS]ರೋಗದ ಹಾಗೂ ಗುಣಪಡಿಸಲಾರದ ಬೇನೆಯ ದಿನದಲ್ಲಿ [QE][QS2]ನಿನ್ನ ಸುಗ್ಗಿ ಏನೂ ಇರುವುದಿಲ್ಲ. [QE][PBR]
12. [QS]ಆಹಾ, ಸಮುದ್ರವು ಭೋರ್ಗರೆಯುವಂತೆ [QE][QS2]ಭೋರ್ಗರೆಯುವ ಬಹು ಜನಾಂಗಗಳ ಗದ್ದಲ! [QE][QS]ಮಹಾ ಜಲಪ್ರವಾಹಗಳು ಘೋಷಿಸುವಂತೆ [QE][QS2]ಘೋಷಿಸುವ ಜನಗಳ ಘೋಷ! [QE]
13. [QS]ಪ್ರಚಂಡ ಜಲಪ್ರವಾಹಗಳು ಘೋಷಿಸುವಂತೆ ಜನಾಂಗಗಳು ಘೋಷಿಸುತ್ತವೆ. [QE][QS2]ಆದರೆ ದೇವರು ಅವರನ್ನು ಗದರಿಸುತ್ತಲೇ, [QE][QS]ಅವರು ದೂರಹೋಗಿ ಬೆಟ್ಟಗಳಲ್ಲಿ ಗಾಳಿಗೆ ಸಿಕ್ಕಿದ ಹೊಟ್ಟಿನಂತೆಯೂ, [QE][QS2]ಸುಂಟರಗಾಳಿಯಿಂದ ಸುತ್ತಿ ಆಡುವ ಧೂಳಿನಂತೆಯೂ ಓಡಿಹೋಗುವರು. [QE]
14. [QS]ಸಾಯಂಕಾಲದಲ್ಲಿ ಭಯಭ್ರಾಂತಿ, [QE][QS2]ಉದಯಕ್ಕೆ ಮುಂಚೆ ಅವು ಇಲ್ಲದಂತಾಗುವುದು. [QE][QS]ನಮ್ಮನ್ನು ಸೂರೆ ಮಾಡುವವರಿಗೆ ಇದೇ ಗತಿ. [QE][QS2]ನಮ್ಮನ್ನು ಕೊಳ್ಳೆಹೊಡೆಯುವವರ ಪಾಡು ಇದೇ. [QE]
ಒಟ್ಟು 66 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 17 / 66
ದಮಸ್ಕಕ್ಕೆ ವಿರೋಧವಾದ ಪ್ರವಾದನೆ 1 ದಮಸ್ಕದ ವಿಷಯವಾದ ಪ್ರವಾದನೆ: ಇಗೋ, ದಮಸ್ಕವು ಇನ್ನು ಪಟ್ಟಣವಾಗಿರದೆ ಅದು ಹಾಳು ದಿಬ್ಬವಾಗಿರುವುದು. 2 ಅರೋಯೇರ್ ಪ್ರಾಂತದ ಪಟ್ಟಣಗಳು ನಿರ್ಜನವಾಗಿ, ಅವು ಯಾರ ಹೆದರಿಕೆಯೂ ಇಲ್ಲದೆ ಮಲಗುವ ಮಂದೆಗಳಿಗೆ ಸ್ಥಳವಾಗುವುವು. 3 ಎಫ್ರಾಯೀಮಿನಿಂದ ಕೋಟೆಯೂ, ದಮಸ್ಕದ ರಾಜ್ಯಾಧಿಕಾರವೂ, ಅರಾಮ್ಯರಲ್ಲಿ ಉಳಿದವುಗಳೂ ಸಹ ಇಲ್ಲವಾಗಿ ಹೋಗುವುವು. ಅವರು ಇಸ್ರಾಯೇಲಿನ ಮಕ್ಕಳ ವೈಭವದಂತೆ ಇರುವರು ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. 4 ಆ ದಿವಸದಲ್ಲಿ ಯಾಕೋಬ್ಯರ ವೈಭವ ತಗ್ಗುವುದು. ಅವರ ಕೊಬ್ಬು ಕರಗುವುದು. 5 ಕೊಯ್ಯುವವನು ಪೈರನ್ನು ಕೂಡಿಸಿ ತೆನೆಗಳನ್ನು ತನ್ನ ಕೈಯಿಂದ ಕೊಯ್ಯುವಂತೆಯೂ, ರೆಫಾಯಿಮಿನ ತಗ್ಗಿನಲ್ಲಿ ತೆನೆಗಳನ್ನು ಕೂಡಿಸುವ ಹಾಗೆಯೂ ಇರುವುದು. 6 ಆದರೂ ಎಣ್ಣೆಮರವನ್ನು ಅಲ್ಲಾಡಿಸಿದ ಬಳಿಕ ಮೇಲಿನ ಕೊಂಬೆಯ ತುಟ್ಟತುದಿಯಲ್ಲಿ ಎರಡು ಮೂರು ಕಾಯಿಗಳಿರುವುವು. ಅದರ ಫಲವತ್ತಾದ ಆ ಮರದ ರೆಂಬೆಗಳಲ್ಲಿ ನಾಲ್ಕೈದು ಕಾಯಿಗಳು ಉಳಿದಿರುವುವು. ಅದೇ ರೀತಿಯಾಗಿ, ಇಸ್ರಾಯೇಲರಲ್ಲಿ ಕೆಲವರು ಮಾತ್ರ ಉಳಿದಿರುವರು, ಎಂದು ಇಸ್ರಾಯೇಲಿನ ಯೆಹೋವ ದೇವರು ಹೇಳುತ್ತಾರೆ. 7 ಆ ದಿನದಲ್ಲಿ ಜನರು ತಮ್ಮನ್ನು ಉಂಟುಮಾಡಿದವರ ಮೇಲೆ ದೃಷ್ಟಿಯಿಡುವರು ಮತ್ತು ಇಸ್ರಾಯೇಲಿನ ಪರಿಶುದ್ಧರ ಕಡೆಗೆ ತಿರುಗಿಕೊಳ್ಳುವರು. 8 ಅವರು ತಮ್ಮ ಕೈಕೆಲಸವಾದ ಬಲಿಪೀಠಗಳನ್ನು ದೃಷ್ಟಿಸುವರು. ಬೆರಳುಗಳು ಮಾಡಿದ ಧೂಪಪೀಠಗಳನ್ನು, ಅಶೇರ ಸ್ತಂಭಗಳನ್ನು ಗೌರವಿಸುವುದಿಲ್ಲ. 9 10 ಆ ದಿನದಲ್ಲಿ ಅವರು ಇಸ್ರಾಯೇಲರ ನಿಮಿತ್ತವಾಗಿ ಬಲವಾದ ಪಟ್ಟಣಗಳು ದಟ್ಟಡವಿಯ ಹಾಗಿದ್ದು ಹಾಳುಬೀಳುವುದು. ಅಂತು ದೇಶವೆಲ್ಲಾ ಹಾಳಾಗಿರುವದು. ನೀನು ನಿನ್ನ ರಕ್ಷಣೆಯ ದೇವರನ್ನು ಮರೆತು, ನಿನ್ನ ಬಂಡೆಯೂ, ಕೋಟೆಯೂ ಆಗಿರುವವರನ್ನು ಮರೆತು ಬಿಟ್ಟಿದ್ದೀ. ನೀನು ರಮ್ಯವಾದ ಗಿಡಗಳನ್ನು ಮತ್ತು ದೇಶಾಂತರದ ದ್ರಾಕ್ಷಿಯ ಸಸಿಗಳನ್ನು ಹಾಕಿದ್ದರೂ, 11 ಬೆಳೆಸಲು ಸಸಿಯನ್ನು ಹಾಕಿದ ದಿನದಲ್ಲಿ ಬೇಲಿಹಾಕಿ ಮತ್ತು ಹೊತ್ತಾರೆ ನೀನು ಬಿತ್ತಿದ್ದನ್ನು ಮೊಳೆಯುವಂತೆ ಮಾಡಿದರೂ, ರೋಗದ ಹಾಗೂ ಗುಣಪಡಿಸಲಾರದ ಬೇನೆಯ ದಿನದಲ್ಲಿ ನಿನ್ನ ಸುಗ್ಗಿ ಏನೂ ಇರುವುದಿಲ್ಲ. 12 ಆಹಾ, ಸಮುದ್ರವು ಭೋರ್ಗರೆಯುವಂತೆ ಭೋರ್ಗರೆಯುವ ಬಹು ಜನಾಂಗಗಳ ಗದ್ದಲ! ಮಹಾ ಜಲಪ್ರವಾಹಗಳು ಘೋಷಿಸುವಂತೆ ಘೋಷಿಸುವ ಜನಗಳ ಘೋಷ! 13 ಪ್ರಚಂಡ ಜಲಪ್ರವಾಹಗಳು ಘೋಷಿಸುವಂತೆ ಜನಾಂಗಗಳು ಘೋಷಿಸುತ್ತವೆ. ಆದರೆ ದೇವರು ಅವರನ್ನು ಗದರಿಸುತ್ತಲೇ, ಅವರು ದೂರಹೋಗಿ ಬೆಟ್ಟಗಳಲ್ಲಿ ಗಾಳಿಗೆ ಸಿಕ್ಕಿದ ಹೊಟ್ಟಿನಂತೆಯೂ, ಸುಂಟರಗಾಳಿಯಿಂದ ಸುತ್ತಿ ಆಡುವ ಧೂಳಿನಂತೆಯೂ ಓಡಿಹೋಗುವರು. 14 ಸಾಯಂಕಾಲದಲ್ಲಿ ಭಯಭ್ರಾಂತಿ, ಉದಯಕ್ಕೆ ಮುಂಚೆ ಅವು ಇಲ್ಲದಂತಾಗುವುದು. ನಮ್ಮನ್ನು ಸೂರೆ ಮಾಡುವವರಿಗೆ ಇದೇ ಗತಿ. ನಮ್ಮನ್ನು ಕೊಳ್ಳೆಹೊಡೆಯುವವರ ಪಾಡು ಇದೇ.
ಒಟ್ಟು 66 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 17 / 66
×

Alert

×

Kannada Letters Keypad References