ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಯೆಶಾಯ
1. {#1ಮೋವಾಬಿಗೆ ವಿರುದ್ಧವಾದ ಪ್ರವಾದನೆ } [PS]ಮೋವಾಬಿನ ವಿಷಯವಾದ ಪ್ರವಾದನೆ: [PE][QS]ಆ ರಾತ್ರಿಯಲ್ಲಿ ಮೋವಾಬಿನ [QE][QS2]ಆರ್ ಪಟ್ಟಣವು ಹಾಳಾಗಿ ನಿಶ್ಶಬ್ದವಾಯಿತು. [QE][QS]ಹೌದು, ಆ ರಾತ್ರಿಯಲ್ಲಿ ಮೋವಾಬಿನ ಕೀರ್ ಪಟ್ಟಣವು [QE][QS2]ಹಾಳಾಗಿ ನಿಶ್ಶಬ್ದವಾಯಿತು. [QE]
2. [QS]ದೀಬೋನ್ ಊರಿನವರು ಅಳುವುದಕ್ಕಾಗಿ ಎತ್ತರವಾದ ಪೂಜಾಸ್ಥಳಕ್ಕೆ ಹೋಗಿದ್ದಾರೆ; [QE][QS2]ನೆಬೋ ಹಾಗೂ ಮೇದೆಬ ಪಟ್ಟಣದವರಿಗಾಗಿ ಮೋವಾಬ್ಯರು ಗೋಳಾಡುತ್ತಾರೆ. [QE][QS]ಪ್ರತಿಯೊಬ್ಬರ ತಲೆಯು ಬೋಳು, [QE][QS2]ಪ್ರತಿಯೊಬ್ಬರ ಗಡ್ಡವೂ ವಿಕಾರವಾಗಿ ಕತ್ತರಿಸಿದೆ. [QE]
3. [QS]ಅವರು ತಮ್ಮ ಬೀದಿಗಳಲ್ಲಿ ಗೋಣಿತಟ್ಟನ್ನು ತಾವೇ ಸುತ್ತಿಕೊಳ್ಳುವರು. [QE][QS2]ಪ್ರತಿಯೊಬ್ಬನು ತನ್ನ ಮನೆಯ ಮೇಲೆಯೂ, [QE][QS]ಬೀದಿಗಳಲ್ಲಿಯೂ ಅರಚುತ್ತಾ [QE][QS2]ಬಹುಶೋಕದಿಂದ ಗೋಳಾಡುವನು. [QE]
4. [QS]ಹೆಷ್ಬೋನ್ ಮತ್ತು ಎಲೆಯಾಲೆ ಕೂಗುತ್ತವೆ, [QE][QS2]ಅವರ ಸ್ವರವು ಯಹಚ ಊರಿನವರೆಗೂ ಕೇಳಿಸುತ್ತದೆ. [QE][QS]ಆದಕಾರಣ ಮೋವಾಬಿನ ಯುದ್ಧಭಟರು ಕಿರಿಚಿಕೊಳ್ಳುವರು. [QE][QS2]ಅವರ ಹೃದಯಗಳು ತತ್ತರಿಸುತ್ತವೆ. [QE][PBR]
5. [QS]ನನ್ನ ಹೃದಯವು ಮೋವಾಬಿನ ನಿಮಿತ್ತ ಕೂಗುತ್ತದೆ. [QE][QS2]ಅಲ್ಲಿಂದ ಪಲಾಯನವಾದವರು ಚೋಗರ್ ಕಡೆಗೂ [QE][QS2]ಎಗ್ಲತ್ ಶೆಲಿಶೀಯ ಕಡೆಗೂ ಓಡಿಹೋಗುವರು. [QE][QS]ಲೂಹೀತ್ ದಿಣ್ಣೆಯನ್ನು [QE][QS2]ಅಳುತ್ತಾ ಹತ್ತುವರು. [QE][QS]ಏಕೆಂದರೆ ಹೊರೊನಯಿಮ್ ಊರಿನ ದಾರಿಯಲ್ಲಿ ನಡೆಯುತ್ತಾ [QE][QS2]ನಾಶವಾದೆವಲ್ಲಾ ಎಂದು ದನಿಗೈಯುವರು. [QE]
6. [QS]ನಿಮ್ರೀಮ್ ಹೊಳೆಯು ಬತ್ತಿಹೋಯಿತು, [QE][QS2]ಹಸಿಹುಲ್ಲು ಬಾಡಿತು, [QE][QS]ಮೇವು ತೀರಿತು [QE][QS2]ಅಲ್ಲಿ ಹಸಿರಾದದ್ದು ಇಲ್ಲ. [QE]
7. [QS]ಆದಕಾರಣ ತಾವು ಸಂಪಾದಿಸಿದ ಆಸ್ತಿಯನ್ನೂ, [QE][QS2]ಕೂಡಿಸಿಟ್ಟ ಸೊತ್ತನ್ನೂ ನೀರವಂಜಿಯ ಹೊಳೆಯ ಆಚೆಗೆ ಹೊತ್ತುಕೊಂಡು ಹೋಗುತ್ತಾರೆ. [QE]
8. [QS]ಅವರ ಕೂಗಾಟವು ಮೋವಾಬಿನ ಎಲೆಗಳ ತನಕ ಹಬ್ಬಿದೆ. [QE][QS2]ಅದರ ಕಿರಿಚಾಟ ಎಗ್ಲಯಿಮ್ ಹಾಗೂ [QE][QS2]ಬೆಯೆರ್ ಏಲೀಮ್ ಊರುಗಳ ತನಕ ವ್ಯಾಪಿಸಿದೆ. [QE]
9. [QS]ದೀಮೋನ್ ನದಿಯ ನೀರೆಲ್ಲಾ ರಕ್ತವಾಯಿತು. [QE][QS2]ದೀಮೋನಿನ ಮೇಲೆ ಹೆಚ್ಚಾದ ಹಾನಿಯನ್ನು ತರುವೆನು. [QE][QS]ಮೋವಾಬ್ಯರಲ್ಲಿ ತಪ್ಪಿಸಿಕೊಂಡವರ ಮೇಲೆಯೂ, [QE][QS2]ದೇಶದಲ್ಲಿ ಉಳಿದವರ ಮೇಲೆಯೂ ಸಿಂಹವನ್ನು ಬರಮಾಡುವೆನು. [QE][PBR] [PBR]
ಒಟ್ಟು 66 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 15 / 66
ಮೋವಾಬಿಗೆ ವಿರುದ್ಧವಾದ ಪ್ರವಾದನೆ 1 ಮೋವಾಬಿನ ವಿಷಯವಾದ ಪ್ರವಾದನೆ: ಆ ರಾತ್ರಿಯಲ್ಲಿ ಮೋವಾಬಿನ ಆರ್ ಪಟ್ಟಣವು ಹಾಳಾಗಿ ನಿಶ್ಶಬ್ದವಾಯಿತು. ಹೌದು, ಆ ರಾತ್ರಿಯಲ್ಲಿ ಮೋವಾಬಿನ ಕೀರ್ ಪಟ್ಟಣವು ಹಾಳಾಗಿ ನಿಶ್ಶಬ್ದವಾಯಿತು. 2 ದೀಬೋನ್ ಊರಿನವರು ಅಳುವುದಕ್ಕಾಗಿ ಎತ್ತರವಾದ ಪೂಜಾಸ್ಥಳಕ್ಕೆ ಹೋಗಿದ್ದಾರೆ; ನೆಬೋ ಹಾಗೂ ಮೇದೆಬ ಪಟ್ಟಣದವರಿಗಾಗಿ ಮೋವಾಬ್ಯರು ಗೋಳಾಡುತ್ತಾರೆ. ಪ್ರತಿಯೊಬ್ಬರ ತಲೆಯು ಬೋಳು, ಪ್ರತಿಯೊಬ್ಬರ ಗಡ್ಡವೂ ವಿಕಾರವಾಗಿ ಕತ್ತರಿಸಿದೆ. 3 ಅವರು ತಮ್ಮ ಬೀದಿಗಳಲ್ಲಿ ಗೋಣಿತಟ್ಟನ್ನು ತಾವೇ ಸುತ್ತಿಕೊಳ್ಳುವರು. ಪ್ರತಿಯೊಬ್ಬನು ತನ್ನ ಮನೆಯ ಮೇಲೆಯೂ, ಬೀದಿಗಳಲ್ಲಿಯೂ ಅರಚುತ್ತಾ ಬಹುಶೋಕದಿಂದ ಗೋಳಾಡುವನು. 4 ಹೆಷ್ಬೋನ್ ಮತ್ತು ಎಲೆಯಾಲೆ ಕೂಗುತ್ತವೆ, ಅವರ ಸ್ವರವು ಯಹಚ ಊರಿನವರೆಗೂ ಕೇಳಿಸುತ್ತದೆ. ಆದಕಾರಣ ಮೋವಾಬಿನ ಯುದ್ಧಭಟರು ಕಿರಿಚಿಕೊಳ್ಳುವರು. ಅವರ ಹೃದಯಗಳು ತತ್ತರಿಸುತ್ತವೆ. 5 ನನ್ನ ಹೃದಯವು ಮೋವಾಬಿನ ನಿಮಿತ್ತ ಕೂಗುತ್ತದೆ. ಅಲ್ಲಿಂದ ಪಲಾಯನವಾದವರು ಚೋಗರ್ ಕಡೆಗೂ ಎಗ್ಲತ್ ಶೆಲಿಶೀಯ ಕಡೆಗೂ ಓಡಿಹೋಗುವರು. ಲೂಹೀತ್ ದಿಣ್ಣೆಯನ್ನು ಅಳುತ್ತಾ ಹತ್ತುವರು. ಏಕೆಂದರೆ ಹೊರೊನಯಿಮ್ ಊರಿನ ದಾರಿಯಲ್ಲಿ ನಡೆಯುತ್ತಾ ನಾಶವಾದೆವಲ್ಲಾ ಎಂದು ದನಿಗೈಯುವರು. 6 ನಿಮ್ರೀಮ್ ಹೊಳೆಯು ಬತ್ತಿಹೋಯಿತು, ಹಸಿಹುಲ್ಲು ಬಾಡಿತು, ಮೇವು ತೀರಿತು ಅಲ್ಲಿ ಹಸಿರಾದದ್ದು ಇಲ್ಲ. 7 ಆದಕಾರಣ ತಾವು ಸಂಪಾದಿಸಿದ ಆಸ್ತಿಯನ್ನೂ, ಕೂಡಿಸಿಟ್ಟ ಸೊತ್ತನ್ನೂ ನೀರವಂಜಿಯ ಹೊಳೆಯ ಆಚೆಗೆ ಹೊತ್ತುಕೊಂಡು ಹೋಗುತ್ತಾರೆ. 8 ಅವರ ಕೂಗಾಟವು ಮೋವಾಬಿನ ಎಲೆಗಳ ತನಕ ಹಬ್ಬಿದೆ. ಅದರ ಕಿರಿಚಾಟ ಎಗ್ಲಯಿಮ್ ಹಾಗೂ ಬೆಯೆರ್ ಏಲೀಮ್ ಊರುಗಳ ತನಕ ವ್ಯಾಪಿಸಿದೆ. 9 ದೀಮೋನ್ ನದಿಯ ನೀರೆಲ್ಲಾ ರಕ್ತವಾಯಿತು. ದೀಮೋನಿನ ಮೇಲೆ ಹೆಚ್ಚಾದ ಹಾನಿಯನ್ನು ತರುವೆನು. ಮೋವಾಬ್ಯರಲ್ಲಿ ತಪ್ಪಿಸಿಕೊಂಡವರ ಮೇಲೆಯೂ, ದೇಶದಲ್ಲಿ ಉಳಿದವರ ಮೇಲೆಯೂ ಸಿಂಹವನ್ನು ಬರಮಾಡುವೆನು.
ಒಟ್ಟು 66 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 15 / 66
×

Alert

×

Kannada Letters Keypad References