1. [QS]ಯೆಹೋವ ದೇವರು ಯಾಕೋಬ್ಯರನ್ನು ಕರುಣಿಸುವರು. [QE][QS2]ಇಸ್ರಾಯೇಲರನ್ನು ಪುನಃ ಆಯ್ದುಕೊಳ್ಳುವರು. [QE][QS2]ಅವರನ್ನು ಅವರ ಸ್ವಂತ ದೇಶದಲ್ಲಿ ಸೇರಿಸುವರು. [QE][QS]ಪರದೇಶದವರು ಅವರೊಂದಿಗೆ ಕೂಡಿಬಂದು, [QE][QS2]ಯಾಕೋಬನ ಮನೆತನಕ್ಕೆ ಸೇರಿಕೊಳ್ಳುವರು. [QE]
2. [QS]ದೇಶಗಳು ಇನ್ನೊಮ್ಮೆ ಅವರನ್ನು ತೆಗೆದುಕೊಂಡು [QE][QS2]ಅವನ ಸ್ಥಳಕ್ಕೆ ಅವರನ್ನು ಬರಮಾಡುವರು. [QE][QS]ಆಗ ಇಸ್ರಾಯೇಲಿನ ಮನೆತನದವರು ಯೆಹೋವ ದೇವರ ದೇಶದಲ್ಲಿ, [QE][QS2]ಆ ಜನಾಂಗದವರನ್ನು ಗಂಡು ಹೆಣ್ಣುಗಳನ್ನಾಗಿ ದಾಸದಾಸಿಯರನ್ನಾಗಿ ಇಟ್ಟುಕೊಳ್ಳುವರು. [QE][QS]ತಮ್ಮನ್ನು ಸೆರೆಹಿಡಿದವರನ್ನು ಸೆರೆಹಿಡಿಯುವರು. [QE][QS2]ತಮ್ಮನ್ನು ದಬ್ಬಾಳಿಕೆಗಾರರ ಮೇಲೆ ಅಧಿಕಾರ ನಡೆಸುವರು. [QE]
3. [PS]ಯೆಹೋವ ದೇವರು ನಿಮ್ಮ ಸಂಕಟದಿಂದಲೂ, ಕಳವಳದಿಂದಲೂ ಕಠಿಣವಾದ ಬಿಟ್ಟಿಯ ಸೇವೆಯಿಂದಲೂ
4. ನಿಮ್ಮನ್ನು ವಿಶ್ರಾಂತಿಗೊಳಿಸುವ ದಿನದಲ್ಲಿ ಬಾಬಿಲೋನಿನ ರಾಜನಿಗೆ ವಿರುದ್ಧವಾದ ಈ ಪದ್ಯವನ್ನು ನೀವು ಹೀಗೆ ಸ್ವರವೆತ್ತಿ ಹಾಡಬೇಕು: [PE][QS]ಹೀಗೆ ದಬ್ಬಾಳಿಕೆಗಾರನು ಕೊನೆಗೊಂಡನು. [QE][QS2]ಅವನ ಕೋಪ ಹೀಗೆ ಮುಗಿಯಿತು. [QE]
5. [QS]ಆಳುತ್ತಿದ್ದ ದುಷ್ಟರ ಕೋಲನ್ನೂ, [QE][QS2]ಅಧಿಪತಿಗಳ ದಂಡವನ್ನೂ ಯೆಹೋವ ದೇವರು ಮುರಿದುಬಿಟ್ಟರು. [QE]
6. [QS]ಆ ಅಧಿಪತಿಗಳು ಕಡುಕೋಪದಿಂದ [QE][QS2]ಎಡೆಬಿಡದೆ ಜನರನ್ನು ದಂಡಿಸಿ, [QE][QS]ನಿಲ್ಲದ ದಬ್ಬಾಳಿಕೆಯಿಂದ [QE][QS2]ರಾಷ್ಟ್ರಗಳನ್ನು ಅಧೀನಪಡಿಸಿಕೊಂಡಿದ್ದರು. [QE]
7. [QS]ಭೂಲೋಕವೆಲ್ಲಾ ಶಾಂತವಾಗಿ ವಿಶ್ರಾಂತಿಗೊಂಡಿದೆ. [QE][QS2]ಅವರು ಉಲ್ಲಾಸದ ಧ್ವನಿಯಿಂದ ಹಾಡುತ್ತಾರೆ. [QE]
8. [QS]ತುರಾಯಿ ಮರಗಳೂ, ಲೆಬನೋನಿನ ದೇವದಾರು ಮರಗಳೂ, [QE][QS2]“ಈಗ ನೀನು ಬಿದ್ದದ್ದರಿಂದ ನಮ್ಮನ್ನು ಕಡಿಯಲು [QE][QS]ಯಾರೂ ಬರುವುದಿಲ್ಲ,” [QE][QS2]ಎಂದು ನಿನ್ನ ವಿಷಯವಾಗಿ ಉಲ್ಲಾಸಗೊಳ್ಳುತ್ತವೆ. [QE][PBR]
9. [QS]ನಿನಗೋಸ್ಕರ ನಿನ್ನ ಬರೋಣವನ್ನು ಎದುರುಗೊಳ್ಳುವುದಕ್ಕೆ [QE][QS2]ಪಾತಾಳವು ಕೆಳಗಿನಿಂದ ತಳಮಳಪಡುತ್ತದೆ. [QE][QS]ಸತ್ತವರನ್ನು ಎಂದರೆ, ಭೂಲೋಕದಲ್ಲಿ ಮುಖಂಡರಾಗಿದ್ದವರೆಲ್ಲರ [QE][QS2]ಆತ್ಮಗಳನ್ನು ಕಲಕಿ ಎಚ್ಚರಿಸಿ, [QE][QS]ಜನಾಂಗಗಳ ಎಲ್ಲಾ ರಾಜರನ್ನು [QE][QS2]ಅವರ ಸಿಂಹಾಸನಗಳಿಂದ ಎಬ್ಬಿಸುತ್ತದೆ. [QE]
10. [QS]ಅವರೆಲ್ಲರು, “ನಮ್ಮ ಹಾಗೆ ನೀನು ಸಹ ಬಲಹೀನನಾಗಿದ್ದೀ. [QE][QS2]ನೀನು ನಮ್ಮ ಸಮಾನನಾಗಿದ್ದೀ,” [QE][QS2]ಎಂದು ಮಾತನಾಡಿ ಹೇಳುವರು. [QE]
11. [QS]ನಿನ್ನ ವೈಭವವೂ, [QE][QS2]ನಿನ್ನ ವೀಣೆಗಳ ಸ್ವರವೂ ಸಮಾಧಿಗೆ ಇಳಿದಿವೆ. [QE][QS]ನಿನಗೆ ಹುಳುಗಳೇ ಹಾಸಿಗೆ, [QE][QS2]ನಿನ್ನ ಹೊದಿಕೆಯು ಕ್ರಿಮಿಗಳೇ. [QE][PBR]
12. [QS]ಮುಂಜಾನೆಯ ನಕ್ಷತ್ರವೇ, ಉದಯ ಪುತ್ರನೇ, [QE][QS2]ಆಕಾಶದಿಂದ ನೀನು ಹೇಗೆ ಬಿದ್ದೆ? [QE][QS]ಜನಾಂಗಗಳನ್ನು ಬಲಹೀನ ಮಾಡಿದ ನೀನು [QE][QS2]ಭೂಮಿಗೆ ಹೇಗೆ ಬಿದ್ದೆ? [QE]
13. [QS]ನೀನು ನಿನ್ನ ಹೃದಯದಲ್ಲಿ ಹೀಗೆ ಎಂದುಕೊಂಡಿಯಲ್ಲಾ, [QE][QS2]“ನಾನು ಆಕಾಶಕ್ಕೆ ಏರಿ, [QE][QS]ದೇವರ ನಕ್ಷತ್ರಗಳ ಮೇಲೆ [QE][QS2]ನನ್ನ ಸಿಂಹಾಸನವನ್ನು ಘನತೆಗೇರಿಸುವೆನು. [QE][QS]ಉತ್ತರ ದಿಕ್ಕಿನ ಕಡೆಗಿರುವ ಜಫೋನ್ ಪರ್ವತದ ಮೇಲೆಯೂ [QE][QS2]ನಾನು ಆಸೀನನಾಗುವೆನು. [QE]
14. [QS]ಉನ್ನತವಾದ ಮೇಘ ಮಂಡಲದ ಮೇಲೆ ಏರಿ, [QE][QS2]ಮಹೋನ್ನತರಿಗೆ ಸಮಾನನಾಗುವೆನು.” [QE]
15. [QS]ಆದರೆ ಪಾತಾಳದ ಕುಣಿಯ ಕಡೆಗೂ, [QE][QS2]ಸಮಾಧಿಗೂ ಇಳಿಯುವೆ. [QE][PBR]
16. [QS]ನಿನ್ನನ್ನು ಕಂಡವರು ದಿಟ್ಟಿಸಿ ನೋಡಿ, [QE][QS2]ನಿನ್ನ ಗತಿಯನ್ನು ಯೋಚಿಸುತ್ತಾ, [QE][QS]“ಭೂಮಿಯನ್ನು ನಡುಗಿಸಿ, ರಾಜ್ಯಗಳನ್ನು ಕದಲಿಸಿ, [QE]
17. [QS]ಲೋಕವನ್ನು ಕಾಡನ್ನಾಗಿ ಮಾಡಿ, [QE][QS2]ನಗರಗಳನ್ನು ಕೆಡವಿ, [QE][QS2]ಸೆರೆಹಿಡಿದವರನ್ನು ಮನೆಗೆ ಬಿಡದೆ ಇದ್ದವನು [QE][QS2]ಇವನೋ?” ಎಂದುಕೊಳ್ಳುವರು. [QE][PBR]
18. [QS]ಜನಾಂಗಗಳ ಅರಸರೆಲ್ಲಾ ವೈಭವದಿಂದ [QE][QS2]ತಮ್ಮ ತಮ್ಮ ಸಮಾಧಿಗಳಲ್ಲಿ ಮಲಗುತ್ತಾರೆ. [QE]
19. [QS]ಆದರೆ ನೀನು ತಿರಸ್ಕರಿಸಿದ ಕೊಂಬೆಯಂತೆಯೂ, [QE][QS2]ಖಡ್ಗ ತಿವಿದು [QE][QS]ಕಲ್ಲುಗುಂಡಿಗೆ ಪಾಲಾದ [QE][QS2]ಹೆಣಗಳ ಹೊದಿಕೆಯಂತೆಯೂ, [QE][QS2]ಪರರ ತುಳಿತಕ್ಕೆ ಈಡಾಗಿ, [QE][QS]ಸಮಾಧಿಯೊಳಗಿಂದ ಹೊರಗೆ ಬಿಸಾಡಿರುವ ಶವದ ಹಾಗಿದ್ದೀ. [QE]
2. [QS2]ನೀನು ಆ ರಾಜರಂತೆ ಸಮಾಧಿಗೆ ಸೇರದಿರುವಿ. [QE][QS]ಏಕೆಂದರೆ ನಿನ್ನ ದೇಶವನ್ನು ನೀನು ನಾಶಮಾಡಿ, [QE][QS2]ನಿನ್ನ ಜನರನ್ನು ಕೊಂದುಹಾಕಿದಿ. [QE][PBR] [PBR] [QS]ದುಷ್ಟರ ಸಂತಾನವು [QE][QS2]ನಿರಂತರವೂ ನಿರ್ನಾಮವಾಗಲಿ. [QE]
21. [QS]ಅವರು ಏಳದೆ ಇಲ್ಲವೆ ದೇಶವನ್ನು ವಶಪಡಿಸಿಕೊಳ್ಳದೆ [QE][QS2]ಇಲ್ಲವೆ ಲೋಕವನ್ನು ಪಟ್ಟಣಗಳಿಂದ ತುಂಬಿಸದಂತೆ, [QE][QS]ಅವರ ತಂದೆಗಳ ಅಪರಾಧದ ನಿಮಿತ್ತ, [QE][QS2]ಅವನ ಮಕ್ಕಳ ಕೊಲೆಗೆ ಸಿದ್ಧಮಾಡಿರಿ. [QE][PBR]
22. [QS]“ಅವರಿಗೆ ವಿರುದ್ಧವಾಗಿ ಏಳುತ್ತೇನೆ,” [QE][QS2]ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. [QE][QS]“ಬಾಬಿಲೋನಿನಿಂದ ಆಕೆಯ ಹೆಸರನ್ನೂ, ಉಳಿದ ಜನರನ್ನೂ, [QE][QS2]ಆಕೆಯ ಮಕ್ಕಳನ್ನೂ ಅದರ ಸಂತತಿಯವರನ್ನೂ ನಿರ್ಮೂಲ ಮಾಡುವೆನು,” [QE][QS2]ಎಂದು ಯೆಹೋವ ದೇವರು ಹೇಳುತ್ತಾರೆ. [QE]
23. [QS]“ಅದನ್ನು ಮುಳ್ಳುಹಂದಿಗಳ ನಿವಾಸವಾಗಿಯೂ, [QE][QS2]ಕೊಳಚೆ ಪ್ರದೇಶವನ್ನಾಗಿಯೂ ಪರಿವರ್ತಿಸುವೆನು. [QE][QS]ನಾಶನದ ಕಸಬರಿಗೆಯಿಂದ ಅದನ್ನು ಗುಡಿಸುವೆನು,” [QE][QS2]ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. [QE]
24. [PS]ಸೇನಾಧೀಶ್ವರ ಯೆಹೋವ ದೇವರು ಆಣೆ ಇಟ್ಟು ಹೇಳುವುದೇನೆಂದರೆ, [PE][QS]“ನಾನು ಯೋಚಿಸಿದ ರೀತಿಯಲ್ಲಿ ಖಂಡಿತವಾಗಿ ಆಗುವುದು. [QE][QS2]ನಾನು ಉದ್ದೇಶಿಸಿದ ರೀತಿಯಲ್ಲಿಯೇ ನೆರವೇರುವುದು. [QE]
25. [QS]ಅಸ್ಸೀರಿಯವನ್ನು ನನ್ನ ದೇಶದಲ್ಲಿ ಮುರಿದುಬಿಡುವೆನು. [QE][QS2]ನನ್ನ ಪರ್ವತಗಳ ಮೇಲೆ ಅವರನ್ನು ತುಳಿದುಬಿಡುವೆನು. [QE][QS]ಅವನ ನೊಗವು ನನ್ನ ಜನರ ಮೇಲಿಂದ ತೊಲಗಿ, [QE][QS2]ಅವರ ಭಾರವು ಅವರ ಭುಜಗಳ ಮೇಲಿನಿಂದ ತೊಲಗುವುದು.” [QE][PBR]
26. [QS]ಇದೇ ಸಮಸ್ತ ಭೂಮಿಯ ವಿಷಯ ಆಲೋಚಿಸಿದ ಉದ್ದೇಶ. [QE][QS2]ಇದೇ ಜನಾಂಗಗಳ ಮೇಲೆಲ್ಲಾ ಚಾಚಿದ ನನ್ನ ಕೈ. [QE]
27. [QS]ಏಕೆಂದರೆ ಸೇನಾಧೀಶ್ವರ ಯೆಹೋವ ದೇವರು ಉದ್ದೇಶಿಸಿದ್ದಾರೆ. [QE][QS2]ಅದನ್ನು ಯಾರು ವ್ಯರ್ಥಪಡಿಸುವರು? [QE][QS2]ಅವರು ಎತ್ತಿದ ಕೈಯನ್ನು, ಹಿಂದಕ್ಕೆ ತಳ್ಳುವವರು ಯಾರು? ಎಂಬುದೇ. [QE]
28. {#1ಫಿಲಿಷ್ಟಿಯರಿಗೆ ವಿರೋಧವಾದ ಪ್ರವಾದನೆ }
29. [PS]ಅರಸನಾದ ಆಹಾಜನು ಸತ್ತ ವರುಷದಲ್ಲಿ ಈ ದೈವೋಕ್ತಿ ಬಂದಿತು: [PE][QS]ಸಮಸ್ತ ಫಿಲಿಷ್ಟಿಯರೇ, [QE][QS2]ನಿಮ್ಮನ್ನು ಹೊಡೆದ ಕೋಲು ಮುರಿದು ಹೋಯಿತೆಂದು ನೀವು ಉಲ್ಲಾಸಿಸಬೇಡಿರಿ. [QE][QS]ಏಕೆಂದರೆ ಹಾವಿನ ಸಂತಾನದಿಂದ ವಿಷಸರ್ಪವು ಉಂಟಾಗುವುದು. [QE][QS2]ಅದರ ಫಲವು ಹಾರುವ ವಿಷಸರ್ಪವೇ. [QE]
30. [QS]ಬಡವರಲ್ಲಿ ಬಡವರಾದವರು ಆಹಾರ ಕಂಡುಕೊಳ್ಳುವರು. [QE][QS2]ಕೊರತೆಯಲ್ಲಿರುವವರು ಸುರಕ್ಷಿತವಾಗಿ ನಿದ್ರಿಸುವರು. [QE][QS]ಆದರೆ ನಿನ್ನ ಸಂತಾನದವರೋ ಕ್ಷಾಮದಿಂದ ಹತರಾಗುವರು. [QE][QS2]ನಿನ್ನಲ್ಲಿ ಉಳಿದವರನ್ನು ಅದು ಹತಮಾಡುವುದು. [QE][PBR]
31. [QS]ದ್ವಾರವೇ, ಗೋಳಾಡು! ಪಟ್ಟಣವೇ, ಕೂಗು! [QE][QS2]ಫಿಲಿಷ್ಟಿಯರೇ ಕರಗಿ ಹೋಗಿರಿ. [QE][QS]ಹೊಗೆಯು ಉತ್ತರದಿಂದ ಬರುತ್ತದೆ. [QE][QS2]ಅದರಲ್ಲಿ ಅತ್ತಿತ್ತ ನಡೆಯುವವರು ಯಾರೂ ಇಲ್ಲ. [QE]
32. [QS]ಜನಾಂಗಗಳ ದೂತರಿಗೆ [QE][QS2]ಯಾವ ಉತ್ತರವನ್ನು ಕೊಡಬೇಕು? [QE][QS]“ಯೆಹೋವ ದೇವರು ಚೀಯೋನನ್ನು ಸ್ಥಾಪಿಸಿದ್ದಾರೆ. [QE][QS2]ಬಾಧೆಪಟ್ಟ ಅವರ ಜನರು [QE][QS2]ಅದನ್ನು ಆಶ್ರಯಿಸಿಕೊಳ್ಳುವರು.” [QE]