1. {#1ಇಸ್ರಾಯೇಲರಿಗೆ ದಂಡನೆ } [QS]ಇಸ್ರಾಯೇಲೇ, ಬೇರೆ ಜನಾಂಗಗಳು ಉಲ್ಲಾಸಿಸುವ ಪ್ರಕಾರ [QE][QS2]ಸಂತೋಷ ಪಡಬೇಡ. [QE][QS]ಏಕೆಂದರೆ ನೀನು ನಿನ್ನ ದೇವರನ್ನು ಬಿಟ್ಟು ವ್ಯಭಿಚಾರ ಮಾಡಿದ್ದೀಯೆ. [QE][QS2]ಎಲ್ಲಾ ಧಾನ್ಯದ ಕಣಗಳಲ್ಲಿ [QE][QS2]ವ್ಯಭಿಚಾರದ ಕೂಲಿಯನ್ನು ಪ್ರೀತಿ ಮಾಡಿದ್ದೀಯೆ. [QE]
2. [QS]ಧಾನ್ಯ ಕಣವು ಮತ್ತು ದ್ರಾಕ್ಷಿಯ ತೊಟ್ಟಿಯೂ ಅವರನ್ನು ಪೋಷಿಸುವುದಿಲ್ಲ. [QE][QS2]ಹೊಸ ದ್ರಾಕ್ಷಾರಸವು ಅವಳಲ್ಲಿ ನಿಂತುಹೋಗುವುವು. [QE]
3. [QS]ಅವರು ಯೆಹೋವ ದೇವರ ದೇಶದಲ್ಲಿ ನೆಲೆಸುವುದಿಲ್ಲ. [QE][QS2]ಆದರೆ ಎಫ್ರಾಯೀಮು ಈಜಿಪ್ಟಿಗೆ ಹಿಂದಿರುಗುವುದು. [QE][QS2]ಅವರು ಅಸ್ಸೀರಿಯದಲ್ಲಿ ಅಶುದ್ಧವಾದವುಗಳನ್ನು ತಿನ್ನುವರು. [QE]
4. [QS]ಅವರು ದ್ರಾಕ್ಷಾರಸವನ್ನು ಕಾಣಿಕೆಯಾಗಿ ಯೆಹೋವ ದೇವರಿಗೆ ಅರ್ಪಿಸುವುದಿಲ್ಲ. [QE][QS2]ಅವರ ಬಲಿಗಳು ಆತನಿಗೆ ಮೆಚ್ಚಿಗೆಯಾಗಿರುವುದಿಲ್ಲ. [QE][QS]ಅವರ ಬಲಿಗಳು ಅವರಿಗೆ ದುಃಖಿಸುವವರ ರೊಟ್ಟಿಯ ಹಾಗಿರುವುವು. [QE][QS2]ಅದನ್ನು ತಿನ್ನುವವರೆಲ್ಲರೂ ಅಪವಿತ್ರರಾಗುವರು. [QE][QS]ಏಕೆಂದರೆ ಅದು ಅವರ ಹೊಟ್ಟೆ ತುಂಬುವುದಕ್ಕೆ ಮಾತ್ರ ಸರಿಯೇ ಹೊರತು, [QE][QS2]ಯೆಹೋವ ದೇವರ ಆಲಯಕ್ಕೆ ಸಲ್ಲುವುದಿಲ್ಲ. [QE][PBR]
5. [QS]ಪರಿಶುದ್ಧ ದಿವಸದಲ್ಲಿಯೂ, [QE][QS2]ಯೆಹೋವ ದೇವರ ಹಬ್ಬಗಳ ದಿವಸದಲ್ಲಿಯೂ ನೀನು ಏನು ಮಾಡುತ್ತೀ? [QE]
6. [QS]ಇಗೋ, ನಾಶನದಿಂದ ಅವರು ತಪ್ಪಿಸಿಕೊಂಡರೂ [QE][QS2]ಈಜಿಪ್ಟ್ ಅವರನ್ನು ಕೂಡಿಸುವುದು. [QE][QS2]ಮೋಫ್ ಪಟ್ಟಣವು ಅವರನ್ನು ಹೂಳುವುದು. [QE][QS]ಅವರ ಬೆಳ್ಳಿಯ ಬೊಕ್ಕಸಗಳು ಮುಳ್ಳು ಪೊದೆಗಳ ಪಾಲಾಗುವುವು. [QE][QS2]ಮುಳ್ಳುಗಿಡಗಳು ಅವರ ಗುಡಾರಗಳನ್ನು ಆವರಿಸಿಕೊಂಡಿರುವುದು. [QE]
7. [QS]ದಂಡನೆಯ ದಿವಸಗಳು ಬಂದಿವೆ, [QE][QS2]ಮುಯ್ಯಿ ತೀರಿಸುವ ದಿವಸಗಳೂ ಸಮೀಪವಾಗಿವೆ. [QE][QS2]ಇಸ್ರಾಯೇಲು ಅದನ್ನು ತಿಳಿದುಕೊಳ್ಳಲಿ. [QE][QS]ಏಕೆಂದರೆ ನಿನ್ನ ಪಾಪಗಳು ಬಹಳವಾಗಿರುವುದರಿಂದಲೂ, [QE][QS2]ದ್ವೇಷವು ಹೆಚ್ಚಾಗಿರುವುದರಿಂದಲೂ, [QE][QS]“ಪ್ರವಾದಿ ಮೂರ್ಖನೂ, [QE][QS2]ಪ್ರೇರಿತ ಮನುಷ್ಯನು ಹುಚ್ಚನೂ,” [QE][QS2]ಎಂದು ಇಸ್ರಾಯೇಲು ಹೇಳಿಕೊಳ್ಳುತ್ತದೆ. [QE]
8. [QS]ನನ್ನ ದೇವರೊಂದಿಗೆ ಪ್ರವಾದಿಯು [QE][QS2]ಎಫ್ರಾಯೀಮನ ಮೇಲೆ ಕಾವಲುಗಾರನಾಗಿದ್ದಾನೆ, [QE][QS]ಆದರೂ ಅವನ ಮಾರ್ಗಗಳಲ್ಲೆಲ್ಲ ಬೇಟೆಯ ಬಲೆ ಒಡ್ಡಲಾಗಿದೆ [QE][QS2]ಮತ್ತು ಅವನ ದೇವರ ಮನೆಯಲ್ಲಿ ದ್ವೇಷವಿದೆ. [QE]
9. [QS]ಗಿಬೆಯದ ದಿವಸಗಳಲ್ಲಿ ಆದ ಹಾಗೆ [QE][QS2]ತಮ್ಮನ್ನು ಬಹಳವಾಗಿ ಕೆಡಿಸಿಕೊಂಡಿದ್ದಾರೆ. [QE][QS]ಆದ್ದರಿಂದ ಅವರ ಅಕ್ರಮವನ್ನು ಆತನು ಜ್ಞಾಪಕ ಮಾಡಿಕೊಳ್ಳುವನು. [QE][QS2]ಅವರ ಪಾಪಕ್ಕೆ ತನ್ನ ದಂಡನೆಯನ್ನು ವಿಧಿಸುವನು. [QE][PBR]
10. [QS]“ನಾನು ಮರುಭೂಮಿಯಲ್ಲಿ ದ್ರಾಕ್ಷಾಫಲದ ಹಾಗೆ [QE][QS2]ಇಸ್ರಾಯೇಲನ್ನು ಕಂಡುಕೊಂಡೆನು. [QE][QS]ಅಂಜೂರದ ಗಿಡದಲ್ಲಿ ಮೊದಲು ಮಾಗಿದ ಹಣ್ಣನ್ನು ಕಂಡ ಹಾಗೆ [QE][QS2]ನಿಮ್ಮ ಪಿತೃಗಳನ್ನು ನೋಡಿದೆನು. [QE][QS]ಆದರೆ ಅವರು ಬಾಳ್ ಪೆಯೋರನ ಹತ್ತಿರ ಬಂದು [QE][QS2]ನಾಚಿಕೆಯ ವಿಗ್ರಹಕ್ಕೆ ತಮ್ಮನ್ನು ಪ್ರತ್ಯೇಕಿಸಿಕೊಂಡರು. [QE][QS2]ಅವರು ಪ್ರೀತಿಸಿದ ವಿಗ್ರಹಗಳ ಹಾಗೆ ಅಸಹ್ಯರಾದರು. [QE]
11. [QS]ಎಫ್ರಾಯೀಮ್ ಘನತೆಯು ಪಕ್ಷಿಯಂತೆ ಹಾರಿಹೋಗುವುದು. [QE][QS2]ಜನನವಿಲ್ಲ, ಗರ್ಭಧಾರಣೆ ಇಲ್ಲ, ಪ್ರಸವವಿಲ್ಲ. [QE]
12. [QS]ಅವರು ತಮ್ಮ ಮಕ್ಕಳನ್ನು ಬೆಳೆಸಿದ್ದರೂ, [QE][QS2]ಅವರ ಮಕ್ಕಳಲ್ಲಿ ಯಾರೂ ಉಳಿಯದ ಹಾಗೆ [QE][QS]ನಾನು ಅವರನ್ನು ಮಕ್ಕಳಿಲ್ಲದವರನ್ನಾಗಿ ಮಾಡುವೆನು. [QE][QS2]ನಾನು ಅವರನ್ನು ಬಿಟ್ಟು ಹೋಗುವಾಗ ಅವರಿಗೆ ಕಷ್ಟ! [QE]
13. [QS]ಎಫ್ರಾಯೀಮ್ ಟೈರ್‌ನಂತಹ ಸುಂದರವಾದ ಸ್ಥಳದಲ್ಲಿ [QE][QS2]ನೆಡುವುದನ್ನು ನಾನು ಕಂಡೆನು. [QE][QS2]ಆದರೆ ಎಫ್ರಾಯೀಮ್ ತನ್ನ ಮಕ್ಕಳನ್ನು ಹತ್ಯಗೆ ಈಡಾಗುವಂತೆ ಕಳುಹಿಸುವುದು.” [QE][PBR]
14. [QS]ಯೆಹೋವ ದೇವರೇ, ಅವರಿಗೆ ಕೊಡಿರಿ. [QE][QS2]ಅವರಿಗೆ ನೀವು ಏನು ಕೊಡುತ್ತೀರಿ? [QE][QS]ಗರ್ಭ ಸ್ರಾವ, ಗರ್ಭವನ್ನು ಮತ್ತು [QE][QS2]ಬತ್ತಿದ ಸ್ತನಗಳನ್ನು ಅವರಿಗೆ ಕೊಡಿರಿ. [QE][PBR]
15. [QS]ಅವರ ದುಷ್ಟತನವೆಲ್ಲಾ ಗಿಲ್ಗಾಲಿನಲ್ಲಿದೆ. [QE][QS2]ಅಲ್ಲಿ ಅವರನ್ನು ಹಗೆ ಮಾಡಿದ್ದೇನೆ. [QE][QS]ಅವರ ಪಾಪ ಕೃತ್ಯಗಳ ನಿಮಿತ್ತ ಅವರನ್ನು [QE][QS2]ನನ್ನ ಆಲಯದೊಳಗಿಂದ ಹೊರಡಿಸಿ, [QE][QS]ಅವರನ್ನು ಇನ್ನು ಪ್ರೀತಿಸುವುದೇ ಇಲ್ಲ. [QE][QS2]ಅವರ ಅಧಿಕಾರಿಗಳೆಲ್ಲಾ ತಿರುಗಿ ಬೀಳುವವರೇ. [QE]
16. [QS]ಎಫ್ರಾಯೀಮು ಹೊಡೆತಕ್ಕೆ ಒಳಗಾಗಿದೆ. [QE][QS2]ಅವರ ಬೇರು ಒಣಗಿಹೋಗಿದೆ, [QE][QS2]ಅವರು ಫಲವನ್ನು ಕೊಡುವುದಿಲ್ಲ, [QE][QS]ಅವರು ಹೆತ್ತರೂ ಅವರ ಗರ್ಭದ ಪ್ರಿಯಕರವಾದ [QE][QS2]ಫಲವನ್ನು ಸಹ ನಾನು ಕೊಲ್ಲುವೆನು. [QE][PBR]
17. [QS]ನನ್ನ ದೇವರು ಅವರನ್ನು ತಳ್ಳಿಬಿಡುವರು. [QE][QS2]ಏಕೆಂದರೆ ಅವರು ಆತನಿಗೆ ವಿಧೇಯರಾಗಲಿಲ್ಲ. [QE][QS2]ಅವರು ಜನಾಂಗಗಳಲ್ಲಿ ಅಲೆದಾಡುವವರಾಗಿರುವರು. [QE][PBR]