1. {#1ಇಸ್ರಾಯೇಲ್ ಸುಂಟರಗಾಳಿಯನ್ನು ಕೊಯ್ಲು ಮಾಡುವುದು } [QS]“ನಿನ್ನ ಬಾಯಿಗೆ ತುತೂರಿಯನ್ನು ಇಟ್ಟುಕೋ. [QE][QS2]ಅವರು ನನ್ನ ಒಡಂಬಡಿಕೆಯನ್ನು ಮೀರಿ, [QE][QS]ನನ್ನ ನ್ಯಾಯ ಪ್ರಮಾಣಕ್ಕೆ ವಿರುದ್ಧವಾಗಿ ಅಪರಾಧ ಮಾಡಿದ್ದರಿಂದ [QE][QS2]ಶತ್ರುಗಳು ಹದ್ದಿನ ಹಾಗೆ ಯೆಹೋವ ದೇವರ ಆಲಯದ ಮೇಲೆ ಬರುವರು. [QE]
2. [QS]ಇಸ್ರಾಯೇಲಿನವರು, ‘ನನ್ನ ದೇವರೇ, ನಾವು ನಿಮ್ಮನ್ನು ತಿಳಿದಿದ್ದೇವೆ,’ [QE][QS2]ಎಂದು ನನಗೆ ಕೂಗುತ್ತಿದ್ದಾರೆ. [QE]
3. [QS]ಆದರೆ ಇಸ್ರಾಯೇಲು ಒಳ್ಳೆಯ ಸಂಗತಿಯನ್ನು ತಳ್ಳಿಬಿಟ್ಟಿದೆ. [QE][QS2]ಒಬ್ಬ ಶತ್ರುವು ಅವನನ್ನು ಹಿಂದಟ್ಟುವನು. [QE]
4. [QS]ಅವರು ಅರಸರನ್ನು ನೇಮಿಸಿದ್ದಾರೆ. [QE][QS2]ಆದರೆ ನನ್ನಿಂದಲ್ಲ. ಅವರು ನನ್ನ ಅನುಮತಿಯಿಲ್ಲದೆ [QE][QS]ರಾಜಕುಮಾರರನ್ನು ಆಯ್ಕೆ ಮಾಡಿದ್ದಾರೆ. [QE][QS2]ಅವರು ತಾವು ನಾಶವಾಗುವಂತೆ [QE][QS]ತಮ್ಮ ಬೆಳ್ಳಿಯಿಂದಲೂ, ತಮ್ಮ ಬಂಗಾರದಿಂದಲೂ [QE][QS2]ತಮಗೆ ವಿಗ್ರಹಗಳನ್ನು ಮಾಡಿಕೊಂಡಿದ್ದಾರೆ. [QE]
5. [QS]ಸಮಾರ್ಯವೇ, ನಿನ್ನ ಬಸವ ವಿಗ್ರಹವನ್ನು ಬಿಸಾಡಿಬಿಡು. [QE][QS2]ನನ್ನ ಕೋಪವು ಅವರ ಮೇಲೆ ಉರಿಯುತ್ತದೆ. [QE][QS]ಅವರು ಎಷ್ಟು ಕಾಲ ಶುದ್ಧತೆಗೆ ಅಸಮರ್ಥರಾಗಿರುತ್ತಾರೆ? [QE]
2. [QS2]ಅವರು ಇಸ್ರಾಯೇಲಿನಿಂದ ಬಂದವರು. [QE][QS]ಕಮ್ಮಾರನು ಈ ಬಸವ ವಿಗ್ರಹವನ್ನು ಮಾಡಿದನು. [QE][QS2]ಅದು ದೇವರಲ್ಲ, [QE][QS]ಆದರೆ ಸಮಾರ್ಯದ [QE][QS2]ಬಸವನನ್ನು ಚೂರುಚೂರಾಗುವುದು. [QE][PBR]
7. [QS]“ಅವರು ಗಾಳಿಯನ್ನು ಬಿತ್ತಿದ್ದಾರೆ. [QE][QS2]ಬಿರುಗಾಳಿಯನ್ನು ಕೊಯ್ಯುತ್ತಾರೆ. [QE][QS]ಇಸ್ರಾಯೇಲರ ಪೈರು ತೆನೆಗೆ ಬಾರದು. [QE][QS2]ಮೊಳಕೆಯು ಆಹಾರವನ್ನು ಕೊಡುವುದಿಲ್ಲ. [QE][QS]ಒಂದು ವೇಳೆ ಅದು ಕೊಟ್ಟರೂ [QE][QS2]ವಿದೇಶಿಯರು ಅದನ್ನು ನುಂಗುತ್ತಾರೆ. [QE]
8. [QS]ಇಸ್ರಾಯೇಲನ್ನು ಕಬಳಿಸಲಾಗಿದೆ. [QE][QS2]ಅವರು ಜನಾಂಗಗಳಲ್ಲಿ [QE][QS2]ಬೇಡವಾದ ಪಾತ್ರೆಯ ಹಾಗೆ ಇದ್ದಾರೆ. [QE]
9. [QS]ಅವರು ಒಂಟಿಯಾದ ಕಾಡುಕತ್ತೆಯ ಹಾಗೆ [QE][QS2]ಅಸ್ಸೀರಿಯಗೆ ಹೋಗಿದ್ದಾರೆ. [QE][QS2]ಎಫ್ರಾಯೀಮು ಪ್ರೇಮಿಗಳಿಗೆ ತನ್ನನ್ನು ಮಾರಿಕೊಂಡಿದೆ. [QE]
10. [QS]ಎಫ್ರಾಯೀಮು ಜನಾಂಗಗಳಿಗೆ ತಮ್ಮನ್ನು ಮಾರಿಕೊಂಡಿದ್ದರೂ [QE][QS2]ಅವರನ್ನು ನಾನು ಈಗ ಒಟ್ಟುಗೂಡಿಸುವೆನು. [QE][QS]ಅವರು ಪ್ರಬಲ ಅರಸನ ಹಿಂಸೆಯಿಂದಾಗಿ ಕಷ್ಟಪಡುವರು. [QE][PBR]
11. [QS]“ಎಫ್ರಾಯೀಮು ಪಾಪ ಪರಿಹಾರಕ್ಕಾಗಿ ಅನೇಕ ಬಲಿಪೀಠಗಳನ್ನು ಕಟ್ಟಿದ್ದರೂ, [QE][QS2]ಈ ಬಲಿಪೀಠಗಳೇ ಅವರ ಪಾಪಕ್ಕೆ ಕಾರಣವಾಗಿವೆ. [QE]
12. [QS]ನಾನು ನನ್ನ ನಿಯಮದ ಅನೇಕ ಸಂಗತಿಗಳನ್ನು ಅವನಿಗೆ ಬರೆದಿದ್ದೇನೆ. [QE][QS2]ಆದರೆ ಅವನು ಅವುಗಳನ್ನು ಅನ್ಯವಾದವುಗಳೆಂದು ಪರಿಗಣಿಸಿದನು. [QE]
13. [QS]ಅವರು ಯಜ್ಞದ ಮಾಂಸವನ್ನು ಬಲಿಯಾಗಿ ಅರ್ಪಿಸಿ, [QE][QS2]ನನ್ನ ಕಾಣಿಕೆಗಳಿಂದ ಬಲಿಗಳನ್ನು ತಿನ್ನುತ್ತಾರೆ. [QE][QS2]ಆದರೆ ಯೆಹೋವ ದೇವರು ಅವುಗಳಿಗೆ ಮೆಚ್ಚುವುದಿಲ್ಲ. [QE][QS]ಈಗ ಅವರ ಅಕ್ರಮಗಳನ್ನು ಜ್ಞಾಪಕಮಾಡಿಕೊಂಡು, [QE][QS2]ಅವರ ಪಾಪಗಳನ್ನು ಶಿಕ್ಷಿಸಿದರು. [QE][QS2]ಅವರು ಈಜಿಪ್ಟಿಗೆ ಹಿಂದಿರುಗುವರು. [QE]
14. [QS]ಇಸ್ರಾಯೇಲರು ತಮ್ಮ ಸೃಷ್ಟಿಕರ್ತನನ್ನು ಮರೆತುಬಿಟ್ಟು, [QE][QS2]ಅರಮನೆಗಳನ್ನು ಕಟ್ಟುತ್ತಾರೆ. [QE][QS2]ಯೆಹೂದವು ಸಹ ಕೋಟೆಯುಳ್ಳ ಪಟ್ಟಣಗಳನ್ನು ಹೆಚ್ಚುಮಾಡಿಕೊಂಡಿದೆ. [QE][QS]ಆದರೆ ನಾನು ಅದರ ಪಟ್ಟಣಗಳ ಮೇಲೆ ಬೆಂಕಿಯನ್ನು ಕಳುಹಿಸುವೆನು. [QE][QS2]ಅದು ಅವರ ಕೋಟೆಗಳನ್ನು ನುಂಗಿಬಿಡುವುದು.” [QE]