ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಹೋಶೇ
1.
2. [PS]“ನಿನ್ನ ಸಹೋದರರಿಗೆ, ‘ನನ್ನ ಜನರೇ’ ಎಂದೂ ನಿಮ್ಮ ಸಹೋದರಿಯರಿಗೆ, ‘ನನ್ನ ಪ್ರಿಯರೇ’ ಎಂದೂ ಹೇಳಿರಿ. [PE]{#1ಇಸ್ರಾಯೇಲಿನ ದಂಡನೆ ಹಾಗೂ ಪುನಃಸ್ಥಾಪನೆ } [QS]“ನಿಮ್ಮ ತಾಯಿಯ ಸಂಗಡ ವಾದಮಾಡಿರಿ, ಅವಳೊಂದಿಗೆ ವಾದಮಾಡಿರಿ, [QE][QS2]ಏಕೆಂದರೆ ಅವಳು ನನ್ನ ಹೆಂಡತಿಯಲ್ಲ, [QE][QS2]ಮತ್ತು ನಾನು ಅವಳ ಗಂಡನಲ್ಲ. [QE][QS]ಅವಳು ತನ್ನ ವ್ಯಭಿಚಾರದ ನೋಟವನ್ನು [QE][QS2]ಮತ್ತು ತನ್ನ ಸ್ತನಗಳ ಮಧ್ಯದಿಂದ ಅಪನಂಬಿಗಸ್ತಿಕೆಯನ್ನು ತ್ಯಜಿಸಲಿ. [QE]
3. [QS]ಇಲ್ಲದಿದ್ದರೆ ನಾನು ಅವಳ ಬಟ್ಟೆಯನ್ನು ತೆಗೆದು, [QE][QS2]ಅವಳು ಹುಟ್ಟಿದ ದಿವಸದಲ್ಲಿದ್ದ ಹಾಗೆ ಅವಳನ್ನು ಬೆತ್ತಲೆ ಮಾಡುತ್ತೇನೆ. [QE][QS]ಅವಳನ್ನು ಮರುಭೂಮಿಯಂತೆ ಮಾಡಿ, [QE][QS2]ಅವಳನ್ನು ಒಣಗಿದ ಭೂಮಿಯಂತೆ ಇಟ್ಟು, [QE][QS2]ದಾಹದಿಂದ ಅವಳನ್ನು ಕೊಲ್ಲುವೆನು. [QE]
4. [QS]ನಾನು ಅವಳ ಮಕ್ಕಳಿಗೂ ಸಹ ಪ್ರೀತಿ ತೋರಿಸುವುದಿಲ್ಲ. [QE][QS2]ಏಕೆಂದರೆ ಅವರು ವ್ಯಭಿಚಾರದ ಮಕ್ಕಳಾಗಿದ್ದಾರೆ. [QE]
5. [QS]ಅವರ ತಾಯಿ ವಿಶ್ವಾಸದ್ರೋಹಿ [QE][QS2]ಮತ್ತು ಅವಮಾನಕರವಾಗಿ ಅವರನ್ನು ಗರ್ಭಧರಿಸಿದ್ದಾರೆ. [QE][QS]ಅವಳು, ‘ನನಗೆ ನನ್ನ ಅನ್ನಪಾನ, [QE][QS2]ನನ್ನ ಉಣ್ಣೆ ಮತ್ತು ನನ್ನ ನಾರಿನ ಉಡುಗೆ, [QE][QS]ನನ್ನ ತೈಲ, ನನ್ನ ಪಾಯಸಪಾನಕಗಳನ್ನು ಕೊಡುವಂಥ [QE][QS2]ನನ್ನ ಪ್ರೇಮಿಗಳ ಹಿಂದೆ ಹೋಗುವೆನು,’ ಎಂದುಕೊಂಡಿದ್ದಾಳೆ. [QE]
6. [QS]ಆದ್ದರಿಂದ ನಾನು ಅವಳ ಮಾರ್ಗಕ್ಕೆ ಮುಳ್ಳುಗಳ ಬೇಲಿಹಾಕಿ ತಡೆಯುವೆನು. [QE][QS2]ಅವಳು ತನ್ನ ಹಾದಿಗಳನ್ನು ಕಾಣದ ಹಾಗೆ [QE][QS2]ಅವಳ ಮುಂದೆ ಗೋಡೆಯನ್ನು ಕಟ್ಟುವೆನು. [QE]
7. [QS]ಅವಳು ತನ್ನ ಪ್ರೇಮಿಗಳನ್ನು ಹಿಂಬಾಲಿಸಿದರೂ ಅವರನ್ನು ಸಂಧಿಸುವುದಿಲ್ಲ. [QE][QS2]ಹುಡುಕಿದರೂ ಅವರು ಸಿಕ್ಕುವುದಿಲ್ಲ. [QE][QS]ಆಗ ಅವಳು ಹೀಗೆ ಎಂದುಕೊಳ್ಳುವಳು, [QE][QS2]‘ನನ್ನ ಮೊದಲನೆಯ ಗಂಡನ ಬಳಿಗೆ ಹಿಂದಿರುಗಿ ಹೋಗುವೆನು. [QE][QS2]ಏಕೆಂದರೆ ಆಗ ನನ್ನ ಸ್ಥಿತಿ ಪ್ರಸ್ತುತ ಸ್ಥಿತಿಗಿಂತ ಉತ್ತಮವಾಗಿತ್ತು.’ [QE]
8. [QS]ಏಕೆಂದರೆ ಅವರು ಬಾಳನಿಗಾಗಿ ಉಪಯೋಗಿಸಿದ [QE][QS2]ಧಾನ್ಯ, ದ್ರಾಕ್ಷಾರಸ ಹಾಗೂ ಎಣ್ಣೆಯನ್ನು ನಾನೇ ಅವಳಿಗೆ ಕೊಟ್ಟು, [QE][QS]ಬೆಳ್ಳಿಬಂಗಾರವನ್ನು ನಾನೇ ಧಾರಾಳವಾಗಿ ಹೆಚ್ಚಿಸಿದೆನೆಂದು ಅವಳು ತಿಳಿಯಲಿಲ್ಲ. [QE][PBR]
9. [QS]“ಆದ್ದರಿಂದ ನಾನು ತಿರುಗಿಕೊಂಡು, [QE][QS2]ನನ್ನ ಧಾನ್ಯವನ್ನು ಅದರ ಕಾಲದಲ್ಲಿಯೂ, [QE][QS2]ನನ್ನ ದ್ರಾಕ್ಷಾರಸವನ್ನು ಅದರ ಸುಗ್ಗಿಯ ಸಮಯದಲ್ಲಿಯೂ ತೆಗೆದ ಹಾಗೆ, [QE][QS]ಅವಳ ಬೆತ್ತಲೆತನವನ್ನು ಮುಚ್ಚವುದಕ್ಕಿದ್ದ ನನ್ನ ಉಣ್ಣೆಯನ್ನೂ, [QE][QS2]ನನ್ನ ನಾರುಬಟ್ಟೆಯನ್ನೂ ತೆಗೆದುಕೊಳ್ಳುವೆನು. [QE]
10. [QS]ಈಗ ಅವಳ ತುಚ್ಚತನವನ್ನು, [QE][QS2]ಅವಳ ಪ್ರೇಮಿಗಳ ಕಣ್ಣುಗಳ ಮುಂದೆ ಬಯಲು ಪಡಿಸುವೆನು. [QE][QS2]ನನ್ನ ಕೈಯೊಳಗಿಂದ ಅವಳನ್ನು ಯಾರೂ ಬಿಡಿಸರು. [QE]
11. [QS]ನಾನು ಅವಳಿಗೆ ಉಲ್ಲಾಸಕರವಾದ ಅವಳ ಹಬ್ಬ, [QE][QS2]ಅವಳ ಅಮಾವಾಸ್ಯೆ, ಅವಳ ಸಬ್ಬತ್ ದಿನದ ಆಚರಣೆ, [QE][QS2]ಅವಳ ಸಭಾ ಸಮಾರಂಭ ಇವುಗಳನ್ನೆಲ್ಲಾ ನಿಲ್ಲಿಸಿಬಿಡುವೆನು. [QE]
12. [QS]ತನ್ನ ಮಿಂಡರಿಂದಾದ ಪ್ರತಿಫಲ ಇವುಗಳೇ ಎಂದು, [QE][QS2]ಅವಳು ಹೇಳಿದ ಅವಳ ದ್ರಾಕ್ಷಿಬಳ್ಳಿಗಳನ್ನು, [QE][QS2]ಅವಳ ಅಂಜೂರದ ಮರಗಳನ್ನು ನಾನು ಹಾಳು ಮಾಡಿ, [QE][QS]ಅವುಗಳನ್ನು ನಾನು ಕಾಡನ್ನಾಗಿ ಮಾಡುವೆನು. [QE][QS2]ಕಾಡುಮೃಗಗಳು ಅವುಗಳನ್ನು ನುಂಗುವವು. [QE]
13. [QS]ತರುವಾಯ ಅವಳು ನನ್ನನ್ನು ಮರೆತು [QE][QS2]ಕಿವಿಯೋಲೆ ಮೊದಲಾದ ಒಡವೆಗಳಿಂದ ಸಿಂಗರಿಸಿಕೊಂಡು, [QE][QS]ಅವಳ ಪ್ರೇಮಿಗಳ ಹಿಂದೆ ಹೋಗಿ, [QE][QS2]ಬಾಳ್ ದೇವತೆಗಳಿಗೆ ಧೂಪ ಸುಟ್ಟ [QE][QS2]ದಿವಸಗಳಿಗಾಗಿ ನಾನು ಅವಳನ್ನು ದಂಡಿಸುವೆನು,” [QE][QS2]ಎಂದು ಯೆಹೋವ ದೇವರು ಹೇಳುತ್ತಾರೆ. [QE][PBR]
14. [QS]ಆದ್ದರಿಂದ ನಾನು ಅವಳನ್ನು ಮೋಹಿಸಿ, [QE][QS2]ಅವಳನ್ನು ಮರುಭೂಮಿಯೊಳಗೆ ಕರೆದುಕೊಂಡು ಬಂದು, [QE][QS2]ಅವಳ ಸಂಗಡ ಹಿತಕರವಾಗಿ ಮಾತನಾಡುವೆನು. [QE]
15. [QS]ಅವಳ ದ್ರಾಕ್ಷಿತೋಟಗಳನ್ನು ಅಲ್ಲಿರುವಾಗಲೇ ಅವಳಿಗೆ ಹಿಂದಕ್ಕೆ ಕೊಡುವೆನು. [QE][QS2]ಆಕೋರಿನ[* ಆಕೋರಿನ ಅಂದರೆ ತೊಂದರೆ ] ಕಣಿವೆಯನ್ನೇ, ಅವಳ ನಿರೀಕ್ಷೆಗೆ ದ್ವಾರವನ್ನಾಗಿ ಮಾಡುವೆನು. [QE][QS]ಅಲ್ಲಿ ಅವಳು ತಾನು ಯೌವನದ ದಿವಸಗಳಲ್ಲಿಯೂ, [QE][QS2]ಈಜಿಪ್ಟ್ ದೇಶದೊಳಗಿಂದ ಹೊರಟು ಬಂದ [QE][QS2]ದಿವಸಗಳಲ್ಲಿಯೂ ಆದ ಹಾಗೆ ಆಡುವಳು. [QE][PBR]
16. [QS]ಯೆಹೋವ ದೇವರು ಹೀಗೆನ್ನುತ್ತಾರೆ, “ಆ ದಿವಸದಲ್ಲಿ,” [QE][QS2]“ನೀನು ನನ್ನನ್ನು ಇನ್ನು ಮೇಲೆ, ‘ನನ್ನ ಒಡೆಯ’ ಎಂದು ಕರೆಯದೆ, [QE][QS2]‘ನನ್ನ ಪತಿ’ ಎಂದು ಕರೆಯುವೆ. [QE]
17. [QS]ನಾನು ಬಾಳ್ ದೇವತೆಗಳ ಹೆಸರುಗಳನ್ನು ಅವಳ ಬಾಯಿಯಿಂದ ತೆಗೆದುಹಾಕುವೆನು. [QE][QS2]ಇನ್ನು ಮುಂದೆ ಅವರ ಹೆಸರನ್ನು ಕರೆಯಲಾಗುವುದಿಲ್ಲ. [QE]
18. [QS]ಆ ದಿವಸದಲ್ಲಿ, ಅವರಿಗೋಸ್ಕರ ಅಡವಿಯ ಮೃಗಗಳ, [QE][QS2]ಆಕಾಶದ ಪಕ್ಷಿಗಳ ಮತ್ತು [QE][QS2]ಭೂಮಿಯ ಕ್ರಿಮಿಗಳ ಸಂಗಡ ಒಡಂಬಡಿಕೆ ಮಾಡುವೆನು. [QE][QS]ನಾನು ಬಿಲ್ಲನ್ನೂ, ಖಡ್ಗವನ್ನೂ ಯುದ್ಧವನ್ನೂ [QE][QS2]ದೇಶದೊಳಗಿಂದ ಮುರಿದುಹಾಕಿ, [QE][QS2]ಅವರೆಲ್ಲರೂ ಸುರಕ್ಷಿತರಾಗಿ ಮಲಗುವಂತೆ ಮಾಡುವೆನು. [QE]
19. [QS]ನಿನ್ನನ್ನು ನನಗೆ ಸದಾಕಾಲಕ್ಕೆ ನಿಶ್ಚಿತಾರ್ಥ ಮಾಡಿಕೊಳ್ಳುವೆನು. [QE][QS2]ನೀತಿಯಿಂದಲೂ, ನ್ಯಾಯದಿಂದಲೂ, ಪ್ರೀತಿಯಿಂದಲೂ, ಅನುಕಂಪದಿಂದಲೂ, [QE][QS2]ನಿನ್ನನ್ನು ನನಗೆ ನಿಶ್ಚಿತಾರ್ಥ ಮಾಡಿಕೊಳ್ಳುವೆನು. [QE]
20. [QS]ನಾನು ನಿನ್ನನ್ನು ನಂಬಿಗಸ್ತಿಕೆಯಿಂದಲೇ ನಿಶ್ಚಿತಾರ್ಥ ಮಾಡಿಕೊಳ್ಳುವೆನು. [QE][QS2]ಆಗ ನೀನು ಯೆಹೋವ ದೇವರನ್ನು ತಿಳಿದುಕೊಳ್ಳುವೆ. [QE][PBR]
21. [QS]“ಆ ದಿವಸಗಳಲ್ಲಿ, ನಾನು ಕೇಳುವೆನು,” [QE][QS2]ಎಂದು ಯೆಹೋವ ದೇವರು ಹೇಳುತ್ತಾರೆ. [QE][QS]“ನಾನು ಆಕಾಶಗಳನ್ನು ಕೇಳುವೆನು. [QE][QS2]ಅವು ಭೂಮಿಯನ್ನು ಕೇಳುವುವು. [QE]
22. [QS]ಭೂಮಿಯು ಧಾನ್ಯವನ್ನೂ, [QE][QS2]ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ ಕೇಳುವುವು. [QE][QS2]ಅವು ಇಜ್ರೆಯೇಲಿಗೆ ಒಲಿಯುವುವು. [QE]
23. [QS]ನಾನು ದೇಶದಲ್ಲಿ ಆಕೆಯನ್ನು ನನಗಾಗಿ ಬಿತ್ತಿಕೊಳ್ಳುವೆನು. [QE][QS2]‘ನನ್ನ ಪ್ರಿಯರಲ್ಲ’ ಎಂದು ಕರೆದವರಿಗೆ, ನಾನು ನನ್ನ ಪ್ರೀತಿಯನ್ನು ತೋರಿಸುವೆನು. [QE][QS]ನಾನು, ‘ನೀವು ನನ್ನ ಜನರಲ್ಲ’ ಎಂದು ಹೇಳಿದವರನ್ನು, [QE][QS2]‘ನೀವು ನನ್ನ ಜನರು,’ ಎಂದು ಹೇಳುವೆನು. [QE][QS2]ಅವರು, ‘ನೀವು ನಮ್ಮ ದೇವರು’ ” ಎಂದು ಹೇಳುವರು. [QE]
ಒಟ್ಟು 14 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 2 / 14
1 2 3 4 5 6 7 8 9 10 11 12 13 14
1 2 “ನಿನ್ನ ಸಹೋದರರಿಗೆ, ‘ನನ್ನ ಜನರೇ’ ಎಂದೂ ನಿಮ್ಮ ಸಹೋದರಿಯರಿಗೆ, ‘ನನ್ನ ಪ್ರಿಯರೇ’ ಎಂದೂ ಹೇಳಿರಿ. ಇಸ್ರಾಯೇಲಿನ ದಂಡನೆ ಹಾಗೂ ಪುನಃಸ್ಥಾಪನೆ “ನಿಮ್ಮ ತಾಯಿಯ ಸಂಗಡ ವಾದಮಾಡಿರಿ, ಅವಳೊಂದಿಗೆ ವಾದಮಾಡಿರಿ, ಏಕೆಂದರೆ ಅವಳು ನನ್ನ ಹೆಂಡತಿಯಲ್ಲ, ಮತ್ತು ನಾನು ಅವಳ ಗಂಡನಲ್ಲ. ಅವಳು ತನ್ನ ವ್ಯಭಿಚಾರದ ನೋಟವನ್ನು ಮತ್ತು ತನ್ನ ಸ್ತನಗಳ ಮಧ್ಯದಿಂದ ಅಪನಂಬಿಗಸ್ತಿಕೆಯನ್ನು ತ್ಯಜಿಸಲಿ. 3 ಇಲ್ಲದಿದ್ದರೆ ನಾನು ಅವಳ ಬಟ್ಟೆಯನ್ನು ತೆಗೆದು, ಅವಳು ಹುಟ್ಟಿದ ದಿವಸದಲ್ಲಿದ್ದ ಹಾಗೆ ಅವಳನ್ನು ಬೆತ್ತಲೆ ಮಾಡುತ್ತೇನೆ. ಅವಳನ್ನು ಮರುಭೂಮಿಯಂತೆ ಮಾಡಿ, ಅವಳನ್ನು ಒಣಗಿದ ಭೂಮಿಯಂತೆ ಇಟ್ಟು, ದಾಹದಿಂದ ಅವಳನ್ನು ಕೊಲ್ಲುವೆನು. 4 ನಾನು ಅವಳ ಮಕ್ಕಳಿಗೂ ಸಹ ಪ್ರೀತಿ ತೋರಿಸುವುದಿಲ್ಲ. ಏಕೆಂದರೆ ಅವರು ವ್ಯಭಿಚಾರದ ಮಕ್ಕಳಾಗಿದ್ದಾರೆ. 5 ಅವರ ತಾಯಿ ವಿಶ್ವಾಸದ್ರೋಹಿ ಮತ್ತು ಅವಮಾನಕರವಾಗಿ ಅವರನ್ನು ಗರ್ಭಧರಿಸಿದ್ದಾರೆ. ಅವಳು, ‘ನನಗೆ ನನ್ನ ಅನ್ನಪಾನ, ನನ್ನ ಉಣ್ಣೆ ಮತ್ತು ನನ್ನ ನಾರಿನ ಉಡುಗೆ, ನನ್ನ ತೈಲ, ನನ್ನ ಪಾಯಸಪಾನಕಗಳನ್ನು ಕೊಡುವಂಥ ನನ್ನ ಪ್ರೇಮಿಗಳ ಹಿಂದೆ ಹೋಗುವೆನು,’ ಎಂದುಕೊಂಡಿದ್ದಾಳೆ. 6 ಆದ್ದರಿಂದ ನಾನು ಅವಳ ಮಾರ್ಗಕ್ಕೆ ಮುಳ್ಳುಗಳ ಬೇಲಿಹಾಕಿ ತಡೆಯುವೆನು. ಅವಳು ತನ್ನ ಹಾದಿಗಳನ್ನು ಕಾಣದ ಹಾಗೆ ಅವಳ ಮುಂದೆ ಗೋಡೆಯನ್ನು ಕಟ್ಟುವೆನು. 7 ಅವಳು ತನ್ನ ಪ್ರೇಮಿಗಳನ್ನು ಹಿಂಬಾಲಿಸಿದರೂ ಅವರನ್ನು ಸಂಧಿಸುವುದಿಲ್ಲ. ಹುಡುಕಿದರೂ ಅವರು ಸಿಕ್ಕುವುದಿಲ್ಲ. ಆಗ ಅವಳು ಹೀಗೆ ಎಂದುಕೊಳ್ಳುವಳು, ‘ನನ್ನ ಮೊದಲನೆಯ ಗಂಡನ ಬಳಿಗೆ ಹಿಂದಿರುಗಿ ಹೋಗುವೆನು. ಏಕೆಂದರೆ ಆಗ ನನ್ನ ಸ್ಥಿತಿ ಪ್ರಸ್ತುತ ಸ್ಥಿತಿಗಿಂತ ಉತ್ತಮವಾಗಿತ್ತು.’ 8 ಏಕೆಂದರೆ ಅವರು ಬಾಳನಿಗಾಗಿ ಉಪಯೋಗಿಸಿದ ಧಾನ್ಯ, ದ್ರಾಕ್ಷಾರಸ ಹಾಗೂ ಎಣ್ಣೆಯನ್ನು ನಾನೇ ಅವಳಿಗೆ ಕೊಟ್ಟು, ಬೆಳ್ಳಿಬಂಗಾರವನ್ನು ನಾನೇ ಧಾರಾಳವಾಗಿ ಹೆಚ್ಚಿಸಿದೆನೆಂದು ಅವಳು ತಿಳಿಯಲಿಲ್ಲ. 9 “ಆದ್ದರಿಂದ ನಾನು ತಿರುಗಿಕೊಂಡು, ನನ್ನ ಧಾನ್ಯವನ್ನು ಅದರ ಕಾಲದಲ್ಲಿಯೂ, ನನ್ನ ದ್ರಾಕ್ಷಾರಸವನ್ನು ಅದರ ಸುಗ್ಗಿಯ ಸಮಯದಲ್ಲಿಯೂ ತೆಗೆದ ಹಾಗೆ, ಅವಳ ಬೆತ್ತಲೆತನವನ್ನು ಮುಚ್ಚವುದಕ್ಕಿದ್ದ ನನ್ನ ಉಣ್ಣೆಯನ್ನೂ, ನನ್ನ ನಾರುಬಟ್ಟೆಯನ್ನೂ ತೆಗೆದುಕೊಳ್ಳುವೆನು. 10 ಈಗ ಅವಳ ತುಚ್ಚತನವನ್ನು, ಅವಳ ಪ್ರೇಮಿಗಳ ಕಣ್ಣುಗಳ ಮುಂದೆ ಬಯಲು ಪಡಿಸುವೆನು. ನನ್ನ ಕೈಯೊಳಗಿಂದ ಅವಳನ್ನು ಯಾರೂ ಬಿಡಿಸರು. 11 ನಾನು ಅವಳಿಗೆ ಉಲ್ಲಾಸಕರವಾದ ಅವಳ ಹಬ್ಬ, ಅವಳ ಅಮಾವಾಸ್ಯೆ, ಅವಳ ಸಬ್ಬತ್ ದಿನದ ಆಚರಣೆ, ಅವಳ ಸಭಾ ಸಮಾರಂಭ ಇವುಗಳನ್ನೆಲ್ಲಾ ನಿಲ್ಲಿಸಿಬಿಡುವೆನು. 12 ತನ್ನ ಮಿಂಡರಿಂದಾದ ಪ್ರತಿಫಲ ಇವುಗಳೇ ಎಂದು, ಅವಳು ಹೇಳಿದ ಅವಳ ದ್ರಾಕ್ಷಿಬಳ್ಳಿಗಳನ್ನು, ಅವಳ ಅಂಜೂರದ ಮರಗಳನ್ನು ನಾನು ಹಾಳು ಮಾಡಿ, ಅವುಗಳನ್ನು ನಾನು ಕಾಡನ್ನಾಗಿ ಮಾಡುವೆನು. ಕಾಡುಮೃಗಗಳು ಅವುಗಳನ್ನು ನುಂಗುವವು. 13 ತರುವಾಯ ಅವಳು ನನ್ನನ್ನು ಮರೆತು ಕಿವಿಯೋಲೆ ಮೊದಲಾದ ಒಡವೆಗಳಿಂದ ಸಿಂಗರಿಸಿಕೊಂಡು, ಅವಳ ಪ್ರೇಮಿಗಳ ಹಿಂದೆ ಹೋಗಿ, ಬಾಳ್ ದೇವತೆಗಳಿಗೆ ಧೂಪ ಸುಟ್ಟ ದಿವಸಗಳಿಗಾಗಿ ನಾನು ಅವಳನ್ನು ದಂಡಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. 14 ಆದ್ದರಿಂದ ನಾನು ಅವಳನ್ನು ಮೋಹಿಸಿ, ಅವಳನ್ನು ಮರುಭೂಮಿಯೊಳಗೆ ಕರೆದುಕೊಂಡು ಬಂದು, ಅವಳ ಸಂಗಡ ಹಿತಕರವಾಗಿ ಮಾತನಾಡುವೆನು. 15 ಅವಳ ದ್ರಾಕ್ಷಿತೋಟಗಳನ್ನು ಅಲ್ಲಿರುವಾಗಲೇ ಅವಳಿಗೆ ಹಿಂದಕ್ಕೆ ಕೊಡುವೆನು. ಆಕೋರಿನ* ಆಕೋರಿನ ಅಂದರೆ ತೊಂದರೆ ಕಣಿವೆಯನ್ನೇ, ಅವಳ ನಿರೀಕ್ಷೆಗೆ ದ್ವಾರವನ್ನಾಗಿ ಮಾಡುವೆನು. ಅಲ್ಲಿ ಅವಳು ತಾನು ಯೌವನದ ದಿವಸಗಳಲ್ಲಿಯೂ, ಈಜಿಪ್ಟ್ ದೇಶದೊಳಗಿಂದ ಹೊರಟು ಬಂದ ದಿವಸಗಳಲ್ಲಿಯೂ ಆದ ಹಾಗೆ ಆಡುವಳು. 16 ಯೆಹೋವ ದೇವರು ಹೀಗೆನ್ನುತ್ತಾರೆ, “ಆ ದಿವಸದಲ್ಲಿ,” “ನೀನು ನನ್ನನ್ನು ಇನ್ನು ಮೇಲೆ, ‘ನನ್ನ ಒಡೆಯ’ ಎಂದು ಕರೆಯದೆ, ‘ನನ್ನ ಪತಿ’ ಎಂದು ಕರೆಯುವೆ. 17 ನಾನು ಬಾಳ್ ದೇವತೆಗಳ ಹೆಸರುಗಳನ್ನು ಅವಳ ಬಾಯಿಯಿಂದ ತೆಗೆದುಹಾಕುವೆನು. ಇನ್ನು ಮುಂದೆ ಅವರ ಹೆಸರನ್ನು ಕರೆಯಲಾಗುವುದಿಲ್ಲ. 18 ಆ ದಿವಸದಲ್ಲಿ, ಅವರಿಗೋಸ್ಕರ ಅಡವಿಯ ಮೃಗಗಳ, ಆಕಾಶದ ಪಕ್ಷಿಗಳ ಮತ್ತು ಭೂಮಿಯ ಕ್ರಿಮಿಗಳ ಸಂಗಡ ಒಡಂಬಡಿಕೆ ಮಾಡುವೆನು. ನಾನು ಬಿಲ್ಲನ್ನೂ, ಖಡ್ಗವನ್ನೂ ಯುದ್ಧವನ್ನೂ ದೇಶದೊಳಗಿಂದ ಮುರಿದುಹಾಕಿ, ಅವರೆಲ್ಲರೂ ಸುರಕ್ಷಿತರಾಗಿ ಮಲಗುವಂತೆ ಮಾಡುವೆನು. 19 ನಿನ್ನನ್ನು ನನಗೆ ಸದಾಕಾಲಕ್ಕೆ ನಿಶ್ಚಿತಾರ್ಥ ಮಾಡಿಕೊಳ್ಳುವೆನು. ನೀತಿಯಿಂದಲೂ, ನ್ಯಾಯದಿಂದಲೂ, ಪ್ರೀತಿಯಿಂದಲೂ, ಅನುಕಂಪದಿಂದಲೂ, ನಿನ್ನನ್ನು ನನಗೆ ನಿಶ್ಚಿತಾರ್ಥ ಮಾಡಿಕೊಳ್ಳುವೆನು. 20 ನಾನು ನಿನ್ನನ್ನು ನಂಬಿಗಸ್ತಿಕೆಯಿಂದಲೇ ನಿಶ್ಚಿತಾರ್ಥ ಮಾಡಿಕೊಳ್ಳುವೆನು. ಆಗ ನೀನು ಯೆಹೋವ ದೇವರನ್ನು ತಿಳಿದುಕೊಳ್ಳುವೆ. 21 “ಆ ದಿವಸಗಳಲ್ಲಿ, ನಾನು ಕೇಳುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ. “ನಾನು ಆಕಾಶಗಳನ್ನು ಕೇಳುವೆನು. ಅವು ಭೂಮಿಯನ್ನು ಕೇಳುವುವು. 22 ಭೂಮಿಯು ಧಾನ್ಯವನ್ನೂ, ದ್ರಾಕ್ಷಾರಸವನ್ನೂ, ಎಣ್ಣೆಯನ್ನೂ ಕೇಳುವುವು. ಅವು ಇಜ್ರೆಯೇಲಿಗೆ ಒಲಿಯುವುವು. 23 ನಾನು ದೇಶದಲ್ಲಿ ಆಕೆಯನ್ನು ನನಗಾಗಿ ಬಿತ್ತಿಕೊಳ್ಳುವೆನು. ‘ನನ್ನ ಪ್ರಿಯರಲ್ಲ’ ಎಂದು ಕರೆದವರಿಗೆ, ನಾನು ನನ್ನ ಪ್ರೀತಿಯನ್ನು ತೋರಿಸುವೆನು. ನಾನು, ‘ನೀವು ನನ್ನ ಜನರಲ್ಲ’ ಎಂದು ಹೇಳಿದವರನ್ನು, ‘ನೀವು ನನ್ನ ಜನರು,’ ಎಂದು ಹೇಳುವೆನು. ಅವರು, ‘ನೀವು ನಮ್ಮ ದೇವರು’ ” ಎಂದು ಹೇಳುವರು.
ಒಟ್ಟು 14 ಅಧ್ಯಾಯಗಳು, ಆಯ್ಕೆ ಮಾಡಲಾಗಿದೆ ಅಧ್ಯಾಯ 2 / 14
1 2 3 4 5 6 7 8 9 10 11 12 13 14
×

Alert

×

Kannada Letters Keypad References